ಕರ್ನಾಟಕದ ಸಾರಿಗೆ | 9ನೇ ತರಗತಿ ಭೂಗೋಳ ವಿಜ್ಞಾನ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |

ಅಧ್ಯಾಯ 7. ಕರ್ನಾಟಕದ ಸಾರಿಗೆ

I ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

1. ಪ್ರತಿಯೊಂದು ಹಳ್ಳಿ-ಪಟ್ಟಣಗಳನ್ನು _____ ಸಾರಿಗೆ ಸಂಪರ್ಕಿಸುತ್ತದೆ.

ಉತ್ತರ: ರಸ್ತೆ

2. ಕರ್ನಾಟಕದಲ್ಲಿ ಒಟ್ಟು _____ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತವೆ.

ಉತ್ತರ: 14

3. ಬೆಂಗಳೂರಿನಲ್ಲಿರುವ ನಗರ ರೈಲನ್ನು _____ ಎನ್ನುತ್ತಾರೆ.

ಉತ್ತರ: ನಮ್ಮ ಮೆಟ್ರೋ

4. ಕರ್ನಾಟಕದ ಹೆಬ್ಬಾಗಿಲು ಎಂದು _____ ಬಂದರನ್ನು ಕರೆಯಲಾಗಿದೆ.

ಉತ್ತರ: ನವಮಂಗಳೂರು

5. ಕರ್ನಾಟಕದ ಕರಾವಳಯ ರೈಲುಮಾರ್ಗವನ್ನು _____ ಎಂದು ಕರೆಯುತ್ತಾರೆ.

ಉತ್ತರ: ಕೊಂಕಣ ರೈಲ್ವೆ

II ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರ ಬರೆಯಿರಿ.

1. ರಸ್ತೆ ಸಾರಿಗೆಯ ಮಹತ್ವವನ್ನು ತಿಳಿಸಿ.

ಉತ್ತರ: ಕರ್ನಾಟಕದ ಜನರು ಹೆಚ್ಚಾಗಿ ಹಳ್ಳಿಗಾಡಿನಲ್ಲೇ ವಾಸ ಮಾಡುವುದರಿಂದ ಪ್ರತಿಯೊಂದು ಹಳ್ಳಿ-ಪಟ್ಟಣ ಹಾಗೂ ಇತರ ಜನವಸತಿಗಳನ್ನು ಸಂಪರ್ಕಿಸುವದರಲ್ಲಿ ರಸ್ತೆ ಸಾರಿಗೆಯ ಪಾತ್ರ ಮಹತ್ವವುಳ್ಳದಾಗಿದೆ.

ರಸ್ತೆಗಳು ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದು.

ಇದರಿಂದ ಪ್ರಯಾಣಿಕರು ಮತ್ತು ಸರಕುಗಳನ್ನು ರಾಜ್ಯದ ಮೂಲೆ ಮೂಲೆಗೂ ಸಾಗಿಸಬಹುದು.

ರಸ್ತೆಗಳ ಅಭಿವೃದ್ಧಿಯು ರಾಜ್ಯದ ಕೃಷಿ, ಕೈಗಾರಿಕೆ, ಗಣಿಗಾರಿಕೆ ಮತ್ತು ವಾಣಿಜ್ಯೋದ್ಯಮಗಳ ಪ್ರಗತಿಯನ್ನು ನಿರ್ಧರಿಸುತ್ತದೆ.

ರೀತಿ ರಸ್ತೆ ಸಾರಿಗೆ ಮಹತ್ವವನ್ನು ಹೊಂದಿದೆ.

2. ಕರ್ನಾಟಕದ ರಸ್ತೆಗಳ ವಿಧಗಳನ್ನು ಬರೆಯಿರಿ.

ಉತ್ತರ: ಕರ್ನಾಟಕದ ರಸ್ತೆಗಳ ವಿಧಗಳು:

ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ.

1) ರಾಷ್ಟ್ರೀಯ ಹೆದ್ದಾರಿಗಳು

2) ರಾಜ್ಯ ಹೆದ್ದಾರಿಗಳು

3) ಜಿಲ್ಲಾ ರಸ್ತೆಗಳು ಹಾಗೂ

4) ಗ್ರಾಮೀಣ ರಸ್ತೆಗಳು

3. ಕರ್ನಾಟಕದ ಪ್ರಮುಖ ರೈಲುಮಾರ್ಗಗಳನ್ನು ಹೆಸರಿಸಿ.

ಉತ್ತರ: ಬೆಂಗಳೂರು, ಬಳ್ಳಾರಿ, ಬೆಳಗಾವಿ, ಹಾಸನ, ಉತ್ತರ ಕನ್ನಡ, ಚಿತ್ರದುರ್ಗ, ಉಡುಪಿ, ರಾಮನಗರ, ದಕ್ಷಿಣ ಕನ್ನಡ ಜಿಲ್ಲೆಗಳು ಸರಾಸರಿ 150-200 ಕಿ.ಮೀ. ಉದ್ದದ ರೈಲು ಮಾರ್ಗಗಳನ್ನು ಹೊಂದಿರುತ್ತವೆ.

ಕೊಂಕಣ ರೈಲ್ವೆ: ಇದು ಪಶ್ಚಿಮ ಕರಾವಳಿಯ ಮಹತ್ವಪೂರ್ಣವಾದ ರೈಲು ಮಾರ್ಗ.

ಮೇಟ್ರೋ ರೈಲು : ಬೆಂಗಳೂರು ಬೃಹತ್ ನಗರವಾಗಿ ಬೆಳೆದಿದ್ದು, ಟ್ರಾಫಿಕ್ ಸಮಸ್ಯೆ ಅತಿಯಾಗಿದೆ. ಅದನ್ನು ನಿವಾರಿಸಲುನಮ್ಮ ಮೆಟ್ರೋನಗರ ರೈಲು ಯೋಜನೆಯನ್ನು ಜಾರಿಗೆ ತರಲಾಗಿದೆ.

4. ವಾಯು ಸಾರಿಗೆಯ ಅನುಕೂಲಗಳೇನು?

ಉತ್ತರ: ವಾಯು ಸಾರಿಗೆ ಅತಿ ವೇಗ ಚಾಲಿತ ಸಾರಿಗೆ ಮಾಧ್ಯಮ.

ಇದು ಪ್ರಯಾಣಿಕರು, ಅಂಚೆ ಮತ್ತು ಬೆಲೆ ಬಾಳುವ ಹಗುರವಾದ ವಸ್ತುಗಳನ್ನು ದೂರದ ಸ್ಥಳಗಳಿಗೆ ಬೇಗ ಸಾಗಿಸುವುದಕ್ಕೆ ಬಹಳ ಉಪಯುಕ್ತವಾದುದು.

ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗ ಹಾಗೂ ಯುದ್ಧಗಳಂತಹ ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವುದಕ್ಕೂ ನೆರವಾಗುವುದು.

ಹೀಗೆ ವಾಯು ಸಾರಿಗೆಯು ಅನುಕೂಲವಾಗಿದೆ.

5. ಕರ್ನಾಟಕದಲ್ಲಿರುವ ಬಂದರುಗಳನ್ನು ಹೆಸರಿಸಿ.

ಉತ್ತರ: ಕರ್ನಾಟಕದಲ್ಲಿರುವ ಬಂದರುಗಳು :

ನವ ಮಂಗಳೂರು,

ಹಳೆಯ ಮಂಗಳೂರು,

ಮಲ್ಪೆ,

ಹಂಗಾರಕಟ್ಟೆ,

ಕುಂದಾಪುರ,

ಪಡುಬಿದ್ರಿ,

ಭಟ್ಕಳ,

ಹೊನ್ನಾವರ,

ಬೇಲೆಕೇರಿ,

ತದ್ರಿ ಮತ್ತು

ಕಾರವಾರ ಬಂದರುಗಳು.

III. ಹೊಂದಿಸಿ ಬರೆಯಿರಿ.

                                                 

1) ಸುವರ್ಣ ಚತುಷ್ಕೋನ        ) ಬಂದರು

2) ಬ್ರಾಡ್ ಗೇಜ್                    ಬಿ) ಬೆಂಗಳೂರು

3) ಹೆಚ್..ಎಲ್.                  ಸಿ) NH – 4

4) ಬೇಲಿಕೇರಿ                       ಡಿ) ವಿಮಾನ ನಿಲ್ದಾಣ

5) ನಮ್ಮ ಮೆಟ್ರೋ                ) ರೈಲು ಮಾರ್ಗ

                                      ಎಫ್) ಜಲಮಾರ್ಗ

ಉತ್ತರ:

                                              

1) ಸುವರ್ಣ ಚತುಷ್ಕೋನ        ಸಿ) NH – 4

2) ಬ್ರಾಡ್ ಗೇಜ್                    ) ರೈಲು ಮಾರ್ಗ

3) ಹೆಚ್..ಎಲ್.                   ಡಿ) ವಿಮಾನ ನಿಲ್ದಾಣ

4) ಬೇಲಿಕೇರಿ                        ) ಬಂದರು

5) ನಮ್ಮ ಮೆಟ್ರೋ                 ಬಿ) ಬೆಂಗಳೂರು

9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon