ಭಕ್ತಿಪಂಥ | 9ನೇ ತರಗತಿ ಸಮಾಜ ವಿಜ್ಞಾನ | 9ನೇ ತರಗತಿ ಇತಿಹಾಸ ಪ್ರಶ್ನೋತ್ತರಗಳು |

ಅಧ್ಯಾಯ 6. ಭಕ್ತಿಪಂಥ

I. ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿಮಾಡಿ.

1. ಭಕ್ತಿ ಎಂದರೆ ದೇವರಲ್ಲಿ ಶುದ್ಧ ______

ಉತ್ತರ : ನಂಬಿಕೆಯನ್ನಿಡುವುದು

2. ರಮಾನಂದರ ಶಿಷ್ಯರಲ್ಲಿ ಪ್ರಸಿದ್ದರಾದವರು ___

ಉತ್ತರ : ಕಬೀರ್

3. ಕಬೀರರ ಅನುಯಾಯಿಗಳನ್ನು _____ ಎಂದು ಕರೆಯುತ್ತಾರೆ.

ಉತ್ತರ : ಕಬೀರ ಪಂಥಿ

4. ಚೈತನ್ಯ ಆಧ್ಯಾತ್ಮಿಕ ಚಿಂತನೆಯ ಸಂಗ್ರ___

ಉತ್ತರ : ಚೈತನ್ಯ ಚರಿತಾಮೃತ


II. ಕೆಳಕಂಡ ಪ್ರಶ್ನೆಗಳಿಗೆ ಮಿತ್ರರೊಂದಿಗೆ ಚರ್ಚಿಸಿ ಉತ್ತರಿಸಿರಿ.

1. ಕಬೀರರ ಬೋಧನೆ ಯಾವುವು ?

ಉತ್ತರ : ರಮಾನಂದರ ಶಿಷ್ಯರಾಗಿದ್ದ ಕಬೀರರು ತಮ್ಮದೆ ಆದ ಹೊಸ ತತ್ವಗಳನ್ನು ಬೋಧಿಸಿದರು.

ಜಾತಿ ವ್ಯವಸ್ಥೆ ಮತ್ತು ಬಹುಮೂರ್ತಿಗಳ ಪೂಜೆಯನ್ನು ಖಂಡಿಸಿದ ಅವರು ದೇವರು ಒಬ್ಬನೇ, ಹಿಂದೂ ಮತ್ತು ಮುಸಲ್ಮಾನರಿಗೆ ಒಬ್ಬ ದೇವರೇ ಹೊರತು ಬೇರೆ ಬೇರೆ ಇಲ್ಲವೆಂದು ಸಾರಿದರು.

ಎರಡು ಮತೀಯರಲ್ಲಿಯೂ ಸೌಹಾರ್ದ ಮತ್ತು ಸಹಿಷ್ಣುತೆಯನ್ನು ಬೆಳೆಸಲು ಯತ್ನಿಸಿದರು.

ತಮ್ಮ ಗುರುವಿನಂತೆಯೆ ಇವರೂ ಸಹ ಜನರ ಆಡು ಭಾಷೆಯಾದ ಹಿಂದಿಯಲ್ಲಿಯೆ ಮಾತನಾಡಿ, ಬರೆದು ಹೆಚ್ಚು ಜನರನ್ನು ತಲುಪಿದರು.


2. ಸಿಖ್ಖರು ಯಾರು ? ಅವರ ಗ್ರಂಥವಾವುದು?

ಉತ್ತರ : ಗುರುನಾನಕರ ಶಿಷ್ಯರನ್ನುಸಿಖ್ಖರುಎಂದು ಕರೆಯಲಾಗಿದೆ.

ಇವರ ಬೋಧನೆಗಳನ್ನುಗುರು ಗ್ರಂಥ ಸಾಹಿಬ್ನಲ್ಲಿ ಸಂಗ್ರಹಿಸಲಾಗಿದ್ದು ಇದು ಸಿಖ್ಖರ ಪವಿತ್ರ ಗ್ರಂಥವಾಗಿದೆ.

ಇದನ್ನು ಸಿಖ್ಖರ ಆದಿ ಗ್ರಂಥ ಎಂದೂ ಕರೆಯುತ್ತಾರೆ.

ಇದನ್ನು ಗುರುದ್ವಾರದಲ್ಲಿಟ್ಟು ಪೂಜಿಸುತ್ತಾರೆ.


3. ಪುರಂದರು ಭಕ್ತಿಯನ್ನು ಕುರಿತು ಪ್ರಸ್ತಾಪಿಸಿರುವ ಅಂಶವನ್ನು ವಿವರಿಸಿ.

ಉತ್ತರ : ಪುರಂದರ ದಾಸರು ತಮ್ಮ ಸಂಕೀರ್ತನಗಳಲ್ಲಿ ಮುಖ್ಯವಾಗಿ ವೈಷ್ಣವ ಭಕ್ತಿ ಪಾರಮ್ಯ-ಪ್ರಪಕ್ತಿಯ ಜೊತೆಗೆ ಸಾಮಾಜಿಕ, ಕಳಕಳಿ, ಡಾಂಭಿಕ ಭಕ್ತಿಯ ವಿಡಂಬನೆ, ಜೀವನ ತತ್ವಗಳ ಕುರಿತಾಗಿ ಅಭಿವ್ಯಕ್ತಿಪಡಿಸಿರುವುದನ್ನು ಕಾಣಬಹುದು.

ಅವರು ಜಾತಿ ಮತಗಳನ್ನು ಖಂಡಿಸಿದರು.

ಯಾಗ ಯಜ್ಞಗಳನ್ನು ತಿರಸ್ಕರಿಸಿ, ಮೂಢ ನಂಬಿಕೆಗಳನ್ನು ಅಲ್ಲಗಳೆದರು.

ತೋರಿಕೆಯ ಭಕ್ತಿಯನ್ನು ತಿರಸ್ಕರಿಸಿದ ಅವರು ಆಂತರಿಕ ಹುಡುಕಾಟಕ್ಕೆ, ಆತ್ಮಶೋದನೆಗೆ ಪ್ರಾಮುಖ್ಯತೆಯನ್ನು ಕೊಟ್ಟರು.

ಅಂತರಂಗ ಶುದ್ಧಿಯಾಗದೆ ಬಹಿರಂಗ ಶುದ್ಧಿ ವ್ಯರ್ಥವೆಂದು ತಿಳಿಸಿದರು.

ಮನವ ತೊಳೆಯದೆ ಮಲವ ತೊಳೆಯುವುದರಿಂದೇನು ಪ್ರಯೋಜನವೆಂದು ಪ್ರಶ್ನಿಸಿದರು.

ನೀರಿನಲ್ಲಿ ಕುಳಿತು ಧ್ಯಾನ ಮಾಡುವ ಡಾಂಭಿಕರನ್ನು ಬಕಪಕ್ಷಿಗಳಿಗೆ ಹೋಲಿಸಿದರು.

ಮನದಲ್ಲಿ ದೃಢಭಕ್ತಿಯಿಲ್ಲದೆ ತನುವ ನೀರೋಳಗದ್ದುವುದು ವ್ಯರ್ಥವೆಂದು ಸ್ಪಷ್ಟಪಡಿಸಿದರು.


4. ಭಕ್ತಿ ಚಳುವಳಿಯಿಂದಾದ ಪರಿಣಾಮಗಳಾವುವು?

ಉತ್ತರ : ಭಕ್ತಿ ಚಳುವಳಿಯ ಪರಿಣಾಮಗಳು :

ಹಿಂದೂಗಳು ಮತ್ತು ಮುಸ್ಲಿಂ ಸಮುದಾಯಗಳಲ್ಲಿದ್ದ ಮೌಡ್ಯಾಚರಣೆಗಳ ಅರ್ಥಹೀನತೆಯನ್ನು ಸಾರುವುದು

ಹಿಂದೂ ಮತ್ತು ಮುಸಲ್ಮಾನರಲ್ಲಿ ಮಧುರ ಬಾಂಧವ್ಯವನ್ನು ಉಂಟು ಮಾಡುವುದು ಭಕ್ತಿ ಪಂಥದ ಎರಡು ಮುಖ್ಯ ಉದ್ದೇಶಗಳಾಗಿದ್ದವು.

ಹಿಂದೂ ಸಮಾಜದಲ್ಲಿನ ಅನೇಕ ನ್ಯುನತೆಗಳನ್ನು ಸುಧಾರಕರು ನಿವಾರಿಸಿದರು.

ಭಾರತದ ಪ್ರಾದೇಶಿಕ ಭಾಷೆಗಳು ವಿಕಾಸಗೊಂಡವು.

ಅವರು ದೇಶಿ ಭಾಷೆಗಳಲ್ಲಿ ಬರೆದು ಅವುಗಳ ಬೆಳವಣಿಗೆಗೆ ಸಹಾಯ ಮಾಡಿದರು.

ಚಳವಳಿಯು ಭಾರತೀಯ ಸಂಸ್ಕೃತಿಯ ವಿಕಾಸಕ್ಕೆ ಕಾರಣವಾಗಿ ಬಹುಸಂಸ್ಕೃತಿಗಳ ಸಂಗಮ ಎಂಬ ಹೆಗ್ಗಳಿಕೆಯನ್ನು ಭಾರತಕ್ಕೆ ತಂದುಕೊಟ್ಟಿದೆ.


 9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon