ಮಧ್ಯಯುಗದ ಯುರೋಪ | 9ನೇ ತರಗತಿ ಸಮಾಜ ವಿಜ್ಞಾನ | 9ನೇ ತರಗತಿ ಇತಿಹಾಸ ಪ್ರಶ್ನೋತ್ತರಗಳು |

ಅಧ್ಯಾಯ 7. ಮಧ್ಯಯುಗದ ಯುರೋಪ

I. ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿಮಾಡಿ.

1. ಯುರೋಪ್ ಸಾಂಸ್ಕೃತಿಕ ಬರಡುತನವನ್ನು ______ ಯುಗ ಎಂದು ಕರೆಯುತ್ತಾರೆ.

ಉತ್ತರ : ಅಂಧಕಾರ (Dark Ages)

2. ಭೂಮಿಯ ಒಡೆತನವನ್ನು ಹೊಂದಿದ್ದವನನ್ನು ______ ಎಂದು ಕರೆಯುತ್ತಿದ್ದರು.

ಉತ್ತರ : ಧಣಿ (Nobel)

3. ಹಿಡುವಳಿದಾರನು ಹೊಂದಿದ್ದ ಭೂಮಿಯನ್ನು ______ ಎನ್ನುತ್ತಿದ್ದರು.

ಉತ್ತರ : ಉಂಬಳಿ

4. ಭೂಮಿಯನ್ನು ಹಿಡುವಳಿಗಾಗಿ ಪಡೆದ ಅಶಕ್ತ ವ್ಯಕ್ತಿಯನ್ನು  ______ ಎಂದು ಕರೆಯುತ್ತಿದ್ದರು.

ಉತ್ತರ : ಹಿಡುವಳಿದಾರ (Vassal)


II ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1. ಊಳಿಗಮಾನ್ಯ ವ್ಯವಸ್ಥೆ ಎಂದರೇನು ?

ಉತ್ತರ : ಊಳಿಗಮಾನ್ಯ ವ್ಯವಸ್ಥೆಯು ರಾಜಕೀಯ ಹಾಗೂ ಆರ್ಥಿಕ ತಳಹದಿಯಲ್ಲಿ ರೂಪಿತವಾದ ಭೂಮಿಯ ಒಡೆತನದ ವ್ಯವಸ್ಥೆಯಾಗಿತ್ತು.

ಊಳಿಗಮಾನ್ಯ ಪದ್ದತಿಯು ಬಲಿಷ್ಠ ಹಾಗೂ ಅಶಕ್ತರ ನಡುವೆ ಇದ್ದಂತಹ ಒಪ್ಪಂದ ಎನ್ನಬಹುದು.

ಊಳಿಗಮಾನ್ಯ ವ್ಯವಸ್ಥೆಯು ಪರಸ್ಪರ ಕೊಟ್ಟು ತೆಗೆದುಕೊಳ್ಳುವ ವ್ಯವಸ್ಥೆಯಾಗಿತ್ತು.


2. ಊಳಿಗಮಾನ್ಯ ವ್ಯವಸ್ಥೆಯ ಗುಣ, ದೋಷಗಳ ಪಟ್ಟಿ ಮಾಡಿ.

ಉತ್ತರ : ಗುಣಗಳು :

ಭೂಮಾಲೀಕರು ಮಿಲಿಟರಿ ಸೇವೆಯ ವಿಚಾರದಲ್ಲಿ ಹಿಡುವಳಿದಾರರ ಮೇಲೆ ಅವಲಂಬಿತರಾಗಿದ್ದರು.

ಇದರಿಂದ ಆಳುವ ವರ್ಗ ಮನಬಂದಂತೆ ಅಧಿಕಾರ ನಡೆಸುವುದಕ್ಕೆ ತೆರೆ ಬಿದ್ದಿತು.

ಆರ್ಥಿಕ ವ್ಯವಸ್ಥೆಯಲ್ಲೂ ಗಮನಾರ್ಹವಾದ ಪ್ರಗತಿಪರ ಬದಲಾವಣೆಗಳು ಕಂಡುಬಂದವು.

ಬಾರ್ಬೇರಿಯನ್ನರ ಅಟ್ಟಹಾಸಗಳನ್ನು ಮಟ್ಟಹಾಕಿತು.

ಪ್ರಮುಖವಾಗಿ ಮನುಷ್ಯನು ತನ್ನ ಹಕ್ಕುಭಾಧ್ಯತೆಗಳ ಹಾಗೂ ಕರ್ತವ್ಯಗಳನ್ನು ವ್ಯವಸ್ಥೆಯಿಂದ ಮನಗಂಡನು.

ಇಂಗ್ಲೇಂಡ್, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಸಾಹಿತ್ಯದ ಬೆಳವಣಿಗೆಗೆ ವ್ಯವಸ್ಥೆ ಪ್ರೋತ್ಸಾಹ ನೀಡಿತು.

ವಿಶೇಷವಾದ ಕೊಡುಗೆಯೆಂದರೆ ನಿಯಮಾವಳಿಗಳ ರಚನೆ, ನಿಯಮಾವಳಿಗಳ ಮೊಲಕ ನೋಬಲರು ತರಬೇತಿ ಪಡೆದರು.

ನೋಬಲರು, ಮಹಿಳೆಯರ, ಅಶಕ್ತರ ಮತ್ತು ಕ್ರೈಸ್ತಮತದ ರಕ್ಷಕರಾದರು.

ದೋಷಗಳು :

ವ್ಯವಸ್ಥೆಯ ಪರಿಣಾಮದಿಂದ ಉನ್ನತ ಪ್ರಭುವರ್ಗಗಳು ಹುಟ್ಟಿದವು.

ಪ್ರಭುವರ್ಗ ಹಿಡುವಳಿದಾರರು ಹಾಗೂ ನೋಬಲರ ನಡುವೆ ವಾದ-ವಿವಾದಗಳು ಆರಂಭವಾದವು.

ಬಿಕ್ಕಟ್ಟಿನಿಂದ ಉಳಿಗಮಾನ್ಯ ಒಪ್ಪಂದಗಳು ಮುರಿದು ಬಿದ್ದವು.

ಕೆಲವೊಮ್ಮೆ ಧಣಿಗಳು ಆಳುವ ದೊರೆಗಳಿಗೇ ಪೈಪೋಟಿ ನೀಡಲು ಪ್ರಾರಂಭಿಸಿದರು.

ಹಲವರು ರಾಷ್ಟ್ರದ್ರೋಹಿಗಳಾಗುವುದರ ಮೂಲಕ ತಮ್ಮ ಪ್ರಾಂತ್ಯದ ಒಗ್ಗಟ್ಟಿಗೇ ಮುಳುವಾದರು.

ನ್ಯಾಯದ ವ್ಯವಸ್ಥೆಯೂ ಸಮಾನತೆ ಇರದೆ ದೋಷಯುಕ್ತವಾಗಿತ್ತು.

ಇವೆಲ್ಲಕ್ಕೂ ಮಿಗಿಲಾಗಿ ಚರ್ಚ ಮತ್ತು ರಾಜ್ಯಗಳ ನಡುವೆ ಕಲಹಗಳು ಏರ್ಪಟ್ಟವು.


3. ಊಳಿಗಮಾನ್ಯ ವ್ಯವಸ್ಥೆ ಪರಿಣಾಮಗಳನ್ನು ವಿವರಿಸಿ.

ಉತ್ತರ : ಊಳಿಗಮಾನ್ಯ ವ್ಯವಸ್ಥೆಯ ಪರಿಣಾಮಗಳು:

ಸ್ವತಂತ್ರವಾಗಿದ್ದ ರೈತರು ಉಳಲು ಅಲ್ಪ ಭೂಮಿಯನ್ನು ಹೊಂದಿದ್ದರು ಮತ್ತು ವಸ್ತು ರೂಪದಲ್ಲಿ ಬಾಡಿಗೆಯನ್ನು ಕೊಡುತ್ತಿದ್ದರು.

ಉಳಿದವರು ತಮ್ಮ ಜೀವನವನ್ನು ನಡೆಸಲು ಸಣ್ಣ ಪ್ರಮಾಣದ ಭೂಮಿಯಲ್ಲಿ ಕೆಲಸ ಮಾಡುತ್ತಲೇ ಜಮೀನ್ದಾರನ ಭೂಮಿಯಲ್ಲಿ ಬಿಟ್ಟಿ ಚಾಕರಿ ಮಾಡಬೇಕಿತ್ತು.

ಪ್ರಭುತ್ವದ ಭಾಗವಾಗಿದ್ದ ಶಸ್ತ್ರಸಜ್ಜಿತ ಜನರು ಆಳುವ ವರ್ಗಗಳಿಂದ ಬರುತ್ತಿದ್ದರು.

ಸೈನ್ಯ ಶಕ್ತಿಯಲ್ಲಿ ಅವರಿಗೆ ಏಕಸ್ವಾಮ್ಯವಿರುತ್ತಿತ್ತು.

ರಾಜಕೀಯ ಮತ್ತು ಆರ್ಥಿಕ ಶಕ್ತಿ ಒಂದೇ ವರ್ಗದ ಕೈಯಲ್ಲೇ ಇತ್ತು.

ಹಳ್ಳಿಗಳಲ್ಲಿ ನ್ಯಾಯ ಬಹುತೇಕ ಲಾರ್ಡ್ಸ್ ಗಳ ಜಹಗೀರು (ಮೆನೋರಿಯಲ್) ಕೊರ್ಟ್ ಗಳಲ್ಲಿತ್ತು.

ಇವುಗಳು ಉಳಿಗಮಾನ್ಯ ವ್ಯವಸ್ಥೆಯ ಪರಿಣಾಮಗಳು.


4. ಊಳಿಗಮಾನ್ಯ ವ್ಯವಸ್ಥೆಯ ಪತನಕ್ಕೆ ಕಾರಣಗಳನ್ನು ಬರೆಯಿರಿ.

ಉತ್ತರ : ಊಳಿಗಮಾನ್ಯ ವ್ಯವಸ್ಥೆಯ ಪತನಕ್ಕೆ ಕಾರಣಗಳು :

14ನೆಯ ಶತಮಾನದ ಮಧ್ಯಭಾಗದಲ್ಲಿ ಯೂರೋಪಿನಾದ್ಯಂತ ಸಂಭವಿಸಿದ ವ್ಯಾಧಿಯಿಂದ ಸುಮಾರು 3.5 ಕೋಟಿ ಅಥವಾ ಒಟ್ಟು ಜನಸಂಖ್ಯೆಯ ಮೂರನೇಯ ಒಂದು ಭಾಗದಷ್ಟು ಜನರು ಸಾವಿನ ಕೂಪಕ್ಕೆ ತಳ್ಳಲ್ಪಟ್ಟರು.

ಇದನ್ನು ಚರಿತ್ರೆಯಲ್ಲಿಬ್ಲಾಕ್ ಡೆತ್ಎಂದು ಕರೆಯಲಾಗಿದೆ.

ನಂತರ ಪ್ಲೇಗ್ ರೋಗವು ಪದೇ ಪದೇ ಸಂಭವಿಸಿ ಪರಿಸ್ಥಿತಿಯನ್ನು ತೀವ್ರವಾಗಿ ಬಿಗಡಾಯಿಸಿತು.

ಇದರಿಂದ ಗೇಣಿಗಳು ಕಡಿಮೆಯಾದವು. ಆದಾಯ ಕುಸಿಯಿತು.

ಆಹಾರಕ್ಕೆ ಬೇಡಿಕೆ ಕಡಿಮೆಯಾಗಿ ಕೃಷಿ ಆದಾಯ ಕುಸಿಯಿತು.

ಬ್ಲಾಕ್ ಡೆತ್ ನಂತರ ಶ್ರಮಿಕರ ಕೊರತೆಯಿಂದಾಗಿ ರೈತರು ಪ್ರಬಲರಾದರು.

ಇದಕ್ಕೆ ಪ್ರತಿಯಾಗಿ ಜಮೀನ್ದಾರರು ಸಾಂಪ್ರದಾಯಿಕ ಕರ್ತವ್ಯಗಳನ್ನು ಇನ್ನಷ್ಟು ಕಠಿಣಗೊಳಿಸಿ ರೈತರ ಮೇಲೆ ಹೇರಲು ಪ್ರಯತ್ನಿಸಿದರು.

ಇದರಿಂದ ಸಾಮಾಜಿಕ ಸ್ಪೋಟಕ ಪರಿಸ್ಥಿತಿ ನಿರ್ಮಾಣವಾಯಿತು.

ಯೂರೋಪಿನಾದ್ಯಂತ ದಂಗೆಗಳು ವ್ಯಾಪಕವಾಗಿ ಬೆಳೆದವು.

ಊಳಿಗಮಾನ್ಯ ವ್ಯವಸ್ಥೆಯ ಪತನವು ಬಂಡವಾಳಶಾಹಿ ವ್ಯವಸ್ಥೆಯ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿತು.


 9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2025 | How to Check Karnataka SSLC Exam-1 Result 2025

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon