ಕರ್ನಾಟಕದ ಖನಿಜ ಸಂಪನ್ಮೂಲಗಳು | 9ನೇ ತರಗತಿ ಭೂಗೋಳ ವಿಜ್ಞಾನ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |

ಅಧ್ಯಾಯ 6. ಕರ್ನಾಟಕದ ಖನಿಜ ಸಂಪನ್ಮೂಲಗಳು

I ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

1. ಕುದುರೆಮುಖದಲ್ಲಿ _____ ಅದಿರು ದೊರೆಯುತ್ತದೆ.

ಉತ್ತರ: ಕಬ್ಬಿಣದ

2. ಉತ್ತಮದರ್ಜೆಯ ಕಬ್ಬಿಣದ ಅದಿರು ________

ಉತ್ತರ: ಮ್ಯಾಗ್ನಟೈಟ್

3. ಬಳ್ಳಾರಿ ಜಿಲ್ಲೆಯ ಸಂಡೂರು  ______ ಗಣಿಗಳನ್ನು ಹೊಂದಿದೆ.

ಉತ್ತರ: ಮ್ಯಾಂಗನೀಸ್

4. ಬಾಕ್ಸೈಟ್ ಅದಿರಿನಿಂದ  ______ ಲೋಹವನ್ನು ಉತ್ಪಾದಿಸುತ್ತಾರೆ.

ಉತ್ತರ: ಅಲ್ಯೂಮಿನಿಯಂ

5. ಅತ್ಯಂತ ಆಳವಾದ ಚಿನ್ನದ ಗಣಿ  ______

ಉತ್ತರ: ಚಾಂಪಿಯನ್ ರೀಪ್

II ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರ ಬರೆಯಿರಿ.

1. ಕರ್ನಾಟಕವನ್ನುಚಿನ್ನದ ನಾಡುಎಂದು ಏಕೆ ಕರೆಯುತ್ತಾರೆ?

ಉತ್ತರ: ಕರ್ನಾಟಕವು ಚಿನ್ನದ ಗಣಿಗಾರಿಕೆಯಲ್ಲಿ ಭಾರತದಲ್ಲಿ ಪ್ರಥಮ ಸ್ಥಾನ ಪಡೆದಿದೆ.

ಉತ್ಪಾದನೆಯ ಹೆಚ್ಚು ಚಿನ್ನವನ್ನು ಕರ್ನಾಟಕದ ಗಣಿಗಳಿಂದಲೇ ಪಡೆಯಲಾಗುತ್ತಿದೆ.

ಆದ್ದರಿಂದ ಕರ್ನಾಟಕವನ್ನುಚಿನ್ನದ ನಾಡುಎಂದು ಕರೆಯುತ್ತಾರೆ.

2. ಕರ್ನಾಟಕದಲ್ಲಿ ಸಿಗುವ ಪ್ರಮುಖ ಖನಿಜಗಳಾವುವು?

ಉತ್ತರ: ಕರ್ನಾಟಕದಲ್ಲಿ ಸಿಗುವ ಪ್ರಮುಖ ಖನಿಜಗಳು :

ಕಬ್ಬಿಣದ ಅದಿರು,

ಚಿನ್ನ,

ಮ್ಯಾಂಗನೀಸ್,

ಸುಣ್ಣಕಲ್ಲು,

ತಾಮ್ರ,

ಬಾಕ್ಸೈಟ್,

ಕ್ರೋಮೈಟ್,

ಕಲ್ನಾರು,

ಅಬ್ರಕ ಮತ್ತು

ಗ್ರಾನೈಟ್. ಮುಂತಾದವು.

3. ಮಿಶ್ರಲೋಹವಾಗಿ ಬಳಸುವ ಅದಿರು ಯಾವುದು?

ಉತ್ತರ: ಮಿಶ್ರಲೋಹವಾಗಿ ಬಳಸುವ ಅದಿರು ಮ್ಯಾಂಗನೀಸ್

4. ನಮ್ಮ ರಾಜ್ಯದಲ್ಲಿ ಕಬ್ಬಿಣದ ಅದಿರು ದೊರೆಯುವ ಪ್ರದೇಶಗಳನ್ನು ತಿಳಿಸಿ.

ಉತ್ತರ: ಕರ್ನಾಟಕದ ಕಬ್ಬಿಣದ ಅದಿರಿನ ಹಂಚಿಕೆ ಅಧಿಕವಾಗಿ ಬಳ್ಳಾರಿ, ಚಿಕ್ಕಮಗಳೂರು, ಬಾಗಲಕೋಟೆ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಗದಗ ಜಿಲ್ಲೆಗಳಲ್ಲಿ ಕಂಡುಬರುತ್ತದೆ.

ಬಳ್ಳಾರಿ ಜಿಲ್ಲೆಯು ಅಪಾರವಾದ ನಿಕ್ಷೇಪವನ್ನು ಹೊಂದಿದ್ದು.

ಪ್ರಥಮ ಸ್ಥಾನದಲ್ಲಿದೆ.

ಅದು ಹೊಸಪೇಟೆ ಮತ್ತು ಸಂಡೂರು ಪ್ರದೇಶಗಳಲ್ಲಿ ಕಂಡುಬರುತ್ತದೆ.

ದೋಣಿಮಲೈ, ವಿಭೂತಿಗುಡ್ಡ, ಬೆಳಗಾಳ, ಕುಮಾರಸ್ವಾಮಿ ಬೆಟ್ಟಗಳು, ತಿಮ್ಮಪ್ಪನ ಗುಡಿ, ದೇವಾದ್ರಿ ಶ್ರೇಣಿ, ರಾಮದುರ್ಗ ಬೆಟ್ಟಗಳಲ್ಲಿ ಕಬ್ಬಿಣದ ಅದಿರನ್ನು ಉತ್ಪಾದಿಸಲಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ.

ಬಾಬಾಬುಡನ್ ಗಿರಿ, ಕೆಮ್ಮಣ್ಣುಗುಂಡಿ, ಕುದುರೆಮುಖ, ಗಂಗಾಮೂಲ, ಕಲ್ಹತ್ತಗಿರಿ, ಜೇನುಸುರಿ ಗುಡ್ಡಗಳಲ್ಲಿ ಕಬ್ಬಿಣದ ಅದಿರು ದೊರೆಯುತ್ತದೆ.

5. ಬಾಕ್ಸೈಟ್ ಉತ್ಪಾದಿಸುವ ಪ್ರಮುಖ ಜಿಲ್ಲೆ ಯಾವುದು?

ಉತ್ತರ: ಬಾಕ್ಸೈಟ್ ಉತ್ಪಾದಿಸುವ ಪ್ರಮುಖ ಜಿಲ್ಲೆ ಬೆಳಗಾವಿ.

6. ಕರ್ನಾಟಕದ ಪ್ರಮುಖ ಚಿನ್ನದ ಗಣಿಗಳನ್ನು ತಿಳಿಸಿ.

ಉತ್ತರ: ಕರ್ನಾಟಕದ ಪ್ರಮುಖ ಚಿನ್ನದ ಗಣಿಗಳು:

ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ನಾಲ್ಕು ಪ್ರಮುಖ ಗಣಿಗಳಿವೆ: -

ನಂದಿದುರ್ಗ,

ಉರಿಗಾಂ,

ಚಾಂಪಿಯನ್ ರೀಫ್ ಮತ್ತು

ಮೈಸೂರು ಗಣಿ.

ರಾಯಚೂರು ಜಿಲ್ಲೆ : ಹಟ್ಟಿ

ತುಮಕೂರು ಜಿಲ್ಲೆ : ಬೆಳ್ಳಾರ, ಶಿರಾ ಸಮೀಪವಿರು ಅಜ್ಜನಹಳ್ಳಿ.

ಇತರ ಚಿನ್ನದ ನೀಕ್ಷೇಪವಿರುವ ಸ್ಥಳಗಳು :

ಗದಗ ಜಿಲ್ಲೆಯ ಮುಳಗುಂದ, ಕಪ್ಪತ್ತಗುಡ್ಡ.

ಹಾಸನ ಜಿಲ್ಲೆಯ ಕೆಂಪಿನಕೋಟೆ ಮೊದಲಾದವುಗಳು.

III ಹೊಂದಿಸಿ ಬರೆಯಿರಿ.

                               

1) ಸೂಪ          ) ಮ್ಯಾಂಗನೀಸ್

2) ಹಟ್ಟಿ            ಬಿ) ಬಾಕ್ಸೈಟ್

3) ಕುಂಸಿ         ಸಿ) ಸುಣ್ಣಕಲ್ಲು

4) ಖಾನಾಪುರ  ಡಿ) ಕಬ್ಬಿಣದ ಅದಿರು

                      ) ಚಿನ್ನದ ಗಣಿ

III ಹೊಂದಿಸಿ ಬರೆಯಿರಿಉತ್ತರ:

                            

1) ಸೂಪ          ) ಮ್ಯಾಂಗನೀಸ್

2) ಹಟ್ಟಿ            ) ಚಿನ್ನದ ಗಣಿ

3) ಕುಂಸಿ         ಡಿ) ಕಬ್ಬಿಣದ ಅದಿರು

4) ಖಾನಾಪುರ  ಬಿ) ಬಾಕ್ಸೈಟ್                                   

9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon