ಮಧ್ಯಕಾಲೀನ ಭಾರತ ಮತ್ತು ರಾಜಕೀಯ ಸಂಕ್ರಮಣ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಪ್ರಶ್ನೋತ್ತರಗಳು |

2. ಮಧ್ಯಕಾಲೀನ ಭಾರತ ಮತ್ತು ರಾಜಕೀಯ ಸಂಕ್ರಮಣ

I ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1. ಗುರ್ಜರ-ಪ್ರತಿಹಾರ ರಜಪೂತ ಮನೆತನ ಸ್ಥಾಪಕ _____

ಉತ್ತರ: ನಾಗಭಟ್ಟ

2. ಪೃಥ್ವಿರಾಜ ಚೌವ್ಹಾಣನು ಮೊದಲನೆಯ ತರೈನ್ಕಾಳಗದಲ್ಲಿ _____ ನನ್ನು ಸೋಲಿಸಿದನು.

ಉತ್ತರ: ಘೋರಿ ಮಹಮ್ಮದ್

3. ಮೊಹಮ್ಮದ್ಘೋರಿಯ ಪ್ರಮುಖ ದಂಡನಾಯಕ ____

ಉತ್ತರ: ಕುತ್ಬುದ್ದೀನ್ಐಬಕ್

4. ದೆಹಲಿ ಸುಲ್ತಾನರಲ್ಲಿ ಆಳ್ವಿಕೆ ಮಾಡಿದ ಪ್ರಥಮ ಮಹಿಳೆ _____

ಉತ್ತರ: ರಜಿಯಾ ಸುಲ್ತಾನಾ

5. ಖಿಲ್ಜಿ ವಂಶದ ಪ್ರಸಿದ್ಧ ಸುಲ್ತಾನ _____

ಉತ್ತರ: ಅಲಾವುದ್ದೀನ್ಖಿಲ್ಜಿ

6. ತುಘಲಕ್ಕಾಲದಲ್ಲಿ ರಾಜಧಾನಿಯನ್ನು ದೆಹಲಿಯಿಂದ ____ ಗೆ ವರ್ಗಾಯಿಸಲಾಯಿತು.

ಉತ್ತರ: ದೇವಗಿರಿ


II ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1. ರಜಪೂತ ಅರಸರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ವಿವರಿಸಿ.

ಉತ್ತರ: ರಜಪೂತ ಅರಸರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳೆಂದರೆ:

* ರಜಪೂತ ಅರಸರು ಸ್ವತ: ವಿದ್ವಾಂಸರಾಗಿದ್ದಾರೆ.

* ಭೋಜ, ಮುಂಜ, ಮೊದಲಾದ ಅರಸರೇ ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.

* ಮುಂಜ ರಾಜನು ಪದ್ಮಗುಪ್ತ, ಹಲಾಯುಧ ಎಂಬ ಕವಿಗಳಿಗೆ ಆಶ್ರಯ ನೀಡಿದ್ದನು.

* ಭೋಜ ರಾಜನ ಕಾಲದಲ್ಲಿ ಶಾಂತಿಸೇನ, ಪ್ರಭಾಚಂದ್ರ ಸೂರಿ, ಘನಪಾಲ ಎಂಬ ಜೈನ ಪಂಡಿತರು ಆಶ್ರಯ ಪಡೆದಿದ್ದರು.

* ಜಯದೇವನ ʻಗೀತಗೋವಿಂದʼ

* ಭಾರವಿಯ ʻಕಿರಾತಾರ್ಜುನೀಯʼ

* ಭರ್ತೃಹರಿಯ ʻರಾವಣ ವಧಾʼ.

* ಮಹೇಂದ್ರಪಾಲನ ʻಕಾವ್ಯ ಮೀಮಾಂಸೆʼ ಕಾವ್ಯಗಳು ಇವರ ಕಾಲದಲ್ಲಿ ರಚನೆಯಾದವು.

* ನಾಟಕಗಳಾದ ರಾಜಶೇಖರ ರಚಿಸಿದ ʻಬಾಲ ರಾಮಾಯಣʼ ಮತ್ತು ʻಕರ್ಪೂರ ಮಂಜರಿʼ

* ಭವಭೂತಿ ರಚಿಸಿದ ʻಮಹಾವೀರಚರಿತʼ ಹಾಗೂ ʻಉತ್ತರರಾಮಚರಿತʼ

* ಐತಿಹಾಸಿಕ ಕೃತಿಗಳಾದ ಕಲ್ಲಣನ ʻರಾಜತರಂಗಿಣಿʼ

* ಜಯನಿಕನ ʻಪೃಥ್ವಿರಾಜ ವಿಜಯʼ

* ಹೇಮಚಂದ್ರನ ʻಕುಮಾರಪಾಲಚರಿತʼ

* ರಜಪೂತ ಅರಸರ ಜೀವನ ಕೃತಿಗಳಾದ ʻಪೃಥ್ವಿರಾಜ ರಾಸೋʼವನ್ನು ಚಂದ್ಬರದಾಯಿ ರಚಿಸಿದನು

* ʻಭೋಜ ಪ್ರಬಂಧʼ ವನ್ನು ಬಲ್ಲಾಳ ಎಂಬುವರು ರಚಿಸಿದರು.

* ಕಾಲದಲ್ಲಿ ಗುಜರಾತಿ, ರಾಜಸ್ತಾನಿ, ಹಿಂದಿ ಭಾಷೆಗಳು ಅಭಿವೃದ್ಧಿಯಾದವು.

* ರಜಪೂತರು ವಿದ್ಯಾಕೇಂದ್ರಗಳಾದ ನಳಂದಾ, ಕಾಶಿ, ವಿಕ್ರಮಶಿಲ, ಉಜ್ವಯಿನಿಗಳಿಗೆ ಪ್ರೋತ್ಸಾಹ ನೀಡಿದರು.


2. ಇಲ್ತಮಶ್ ಆಡಳಿತ ಪದ್ಧತಿಯನ್ನು ಸ್ಥೂಲವಾಗಿ ವಿವರಿಸಿ?

ಉತ್ತರ: ಇಲ್ತಮಶ್ರಾಜ್ಯವನ್ನು ಅನೇಕ ಇಕ್ತಾಗಳನ್ನಾಗಿ ವಿಂಗಡಿಸಿ.

q  ಆಡಳಿತ ನಿರ್ವಹಣೆಗಾಗಿ ಇಕ್ತಾದಾರನ್ನು ನೇಮಿಸಿದನು.

q  ಆಡಳಿತದಲ್ಲಿ ಸಲಹೆ ಸೂಚನೆ ನೀಡಲು ʻನಲವತ್ತು ಸರದಾರರ ಕೂಟʼ ನೇಮಕ ಮಾಡಿದನು.

q  ಪ್ರಧಾನ ಮಂತ್ರಿ, ನ್ಯಾಯಾಧೀಶರು ಸುಲ್ತಾನನಿಗೆ ಸಲಹೆ ನೀಡುತ್ತಿದ್ದರು.

q ಇಲ್ತಮಶ್ನು ಬಂಗಾರ ಮತ್ತು ಬೆಳ್ಳಿಯ ನಾಣ್ಯಗಳನ್ನು ಚಲಾವಣೆಗೆ ತಂದನು.

q  ಇವನು ಕುತ್ಬುದ್ದೀನನ ಕಾಲದಲ್ಲಿ ನಿರ್ಮಿಸಲು ಪ್ರಾರಂಭವಾಗಿದ್ದ ದೆಹಲಿಯ ಕುತುಬ್ಮಿನಾರನ್ನು ಪೂರ್ಣಗೊಳಿಸಿದನು.


3. ಅಲ್ಲಾವುದ್ಧೀನ್ಖಿಲ್ಜಿಯ ಆಡಳಿತಾತ್ಮಕ ಸುಧಾರಣೆಗಳಾವುವು?

ಉತ್ತರ: ಅಲ್ಲಾವುದ್ದೀನ್ಖಿಲ್ಜಿಯು ಆಡಳಿತದಲ್ಲಿ ಹಲವು ಸುಧಾರಣೆಗಳನ್ನು ಕೈಗೊಂಡನು ಅವುಗಳೆಂದರೆ:-

q  ಧಾರ್ಮಿಕ ದತ್ತಿ ಇನಾಮ್ಭೂಮಿ ಮತ್ತು ಸಹಾಯಧನಗಳನ್ನು ರದ್ದುಗೊಳಿಸಿದನು.

q  ದಕ್ಷ ಗೂಢಾಚರ ವ್ಯವಸ್ಥೆ ರಚಿಸಿದನು.

q  ಮದ್ಯಪಾನ, ಮಾದಕ ವಸ್ತುಗಳ ಮಾರಾಟ, ಪಗಡೆಯಾಟಗಳನ್ನು ನಿಷೇಧಿಸಿದನು.

q ಸರದಾರರ ಕೂಟ, ಸಾರ್ವಜನಿಕರೊಂದಿಗಿನ ಸ್ನೇಹ ಸಮಾರಂಭ ಹಾಗೂ ಗಣ್ಯವರ್ಗಗಳ ನಡುವೆ ವೈವಾಹಿಕ ಸಂಬಂಧಗಳನ್ನು ನಿರ್ಬಂಧಿಸಿದನು.

q  ಇವನ ಕಾಲದಲ್ಲಿ ಸಣ್ಣ ಸಣ್ಣ ಹಿಡುವಳಿಯ ಭೂಮಿಗಳಲ್ಲಿ ವ್ಯವಸಾಯ ಮಾಡುತಿದ್ದ ಕೆಳವರ್ಗದ ರೈತರಿಂದ ಹಿಡಿದು ದೊಡ್ಡ ದೊಡ್ಡ ಭೂ ಮಾಲೀಕರೂ ಸಹ ತೆರಿಗೆ ಪಾವತಿಸಲೇಬೇಕಾಗಿತ್ತು.

q  ರೈತರಿಂದ ನಿಗದಿತ ಪ್ರಮಾಣದ ತೆರಿಗೆಯನ್ನು ಸಂಗ್ರಹಿಸಲು ಕಂದಾಯ ಅಧಿಕಾರಿಗಳನ್ನು ನೇಮಕ ಮಾಡಿದನು.


4. ಮೊಹಮ್ಮದ್-ಬಿನ್ತುಘಲಕ್ನು ಜಾರಿಗೊಳಿಸಿದ ಆಡಳಿತ ಸುಧಾರಣೆಗಳಾವುವು?

ಉತ್ತರ: ಕಂದಾಯ ಸುಧಾರಣೆ:

q  ಸಾಮ್ರಾಜ್ಯದ ಭೂಕಂದಾಯಕ್ಕೆ ಸಂಬಂಧಿಸಿದಂತೆ ಭೂಮಿಯ ಎಲ್ಲ ವಿವರಗಳನ್ನು ಒಳಗೊಂಡ ಅಧಿಕೃತ ದಾಖಲೆಗಳಿರುವ ಪುಸ್ತಕವನ್ನು ಜಾರಿಗೊಳಿಸಿದನು.

q  ಕೃಷಿ ಇಲಾಖೆಯನ್ನು ಸ್ಥಾಪಿಸಿದನು.

q  ಕೃಷಿಗೆ ಒಳಪಡದ ಭೂಮಿಗಳಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ರೈತರಿಗೆ ಪ್ರೋತ್ಸಾಹಿಸಿ ಹಲವು ತೆರಿಗೆ ವಿನಾಯಿತಿಯನ್ನು ನೀಡಿದನು.

q ರೈತರಿಗೆ ಆರ್ಥಿಕ ನೆರವು ನೀಡಲು ತಕಾವಿ ಸಾಲ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದನು.

q  ಆದರೂ ದೋ-ಅಬ್ಪ್ರದೆಶದ ರೈತರು ಇವನ ಕಾಲದಲ್ಲಿ ಹೆಚ್ಚು ಭೂ ಕಂದಾಯವನ್ನು ಕಟ್ಟಬೇಕಾಯಿತು.

ರಾಜಧಾನೀಯ ವರ್ಗಾವಣೆ:

q  ಮಹಮ್ಮದ್ಬಿನ್ತುಘಲಕ್ತನ್ನ ರಾಜಧಾನಿಯನ್ನು ದೆಹಲಿಯಿಂದ ಮಧ್ಯ ಭಾಗದಲ್ಲಿದ್ದ ದೇವಗಿರಿಗೆ ವರ್ಗಾಯಿಸಿದನು.

q ಇದರ ಮುಖ್ಯ ಉದ್ದೇಶ ವಿಶಾಲವಾದ ಸಾಮ್ರಾಜ್ಯಕ್ಕೆ ರಾಜಧಾನಿ ಕೇಂದ್ರಭಾಗದಲ್ಲಿರಬೇಕು. ಹಾಗೂ

q  ಪರಕೀಯ ದಾಳಿಗಳಿಂದ ರಕ್ಷಿಸಲು ಅನುಕೂಲವಾಗಿರಬೇಕೆಂಬುದಾಗಿತ್ತು.

q  ಯೋಜನೆ ಉತ್ತಮವಾಗಿದ್ದರೂ ಸ್ಥಳಾಂತರಕ್ಕೆ ಸೂಕ್ತ ಏರ್ಪಾಡುಗಳನ್ನು ಕೈಗೊಂಡಿರಲಿಲ್ಲ.

q  ಅಸಂಖ್ಯಾತ ಜನರು ಸಂಕಷ್ಟಕ್ಕೀಡಾದರು.

ಸಾಂಕೇತಿಕ ನಾಣ್ಯ ಪ್ರಯೋಗ:

q  ನಾಣ್ಯಗಳ ಮೌಲ್ಯಗಳನ್ನು ತನ್ನ ಕಾಲದ ಬಂಗಾರ ಮತ್ತು ಬೆಳ್ಳಿಯ ಮೌಲ್ಯಕ್ಕೆ ಸರಿಹೊಂದುವಂತೆ ಮಾಡಿದನು.

q  ʻದಿನಾರʼ ಎಂಬ ಬಂಗಾರದ ಹಾಗೂ ʻಅದಲಿʼ ಎಂಬ ಬೆಳ್ಳಿ ನಾಣ್ಯಗಳನ್ನು ಚಲಾವಣೆಗೆ ತಂದನು.

q  ಅವುಗಳನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಿದ್ದನು.

q  ಕೆಲವು ವರ್ಷಗಳ ನಂತರ ತಾಮ್ರ ಮತ್ತು ಹಿತ್ತಾಳೆಯ ಸಂಕೇತಿಕ ನಾಣ್ಯಗಳ ಚಲಾವಣೆಗೆ ತಂದನು.


5. ದೆಹಲಿ ಸುಲ್ತಾನರು ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಾವುವು? ಉದಾಹರಿಸಿ.

ಉತ್ತರ: ದೆಹಲಿ ಸುಲ್ತಾನರು ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು:-

q  ದೆಹಲಿ ಸುಲ್ತಾನರು ಭಾರತದಲ್ಲಿ ʻಇಂಡೋ-ಇಸ್ಲಾಮಿಕ್‌ʼ ಎಂಬ ಹೊಸ ಶೈಲಿಯ ವಾಸ್ತುಶಿಲ್ಪವನ್ನು ಪರಿಚಯಿಸಿದರು.

q  ಕಮಾನುಗಳು, ಗುಮ್ಮಟಗಳು ಹಾಗೂ ಮಿನಾರ್ಗಳು ಶೈಲಿಯ ಮುಖ್ಯ ಲಕ್ಷಣಗಳು.

q ದೆಹಲಿ ಸುಲ್ತಾನರು ಕೋಟೆ, ಮಸೀದಿ, ಅರಮನೆ, ಸಾರ್ವಜನಿಕ ಕಟ್ಟಡ ಮದರಸಾ, ಧರ್ಮ ಶಾಲೆಗಳನ್ನು ನಿರ್ಮಿಸಿದರು.

q  ಇಂಡೋ-ಇಸ್ಲಾಮಿಕ್ಶೈಲಿಗೆ ಉದಾಹರಣೆ: ದೆಹಲಿಯ ಕುವತ್‌-ಉಲ್‌-ಇಸ್ಲಾಂ ಮಸೀದಿ,

q  ಕುತುಬ್ಮೀನಾರ್‌,

q  ಅಲೈ ದರವಾಜಾ,

q  ಜಮೈತ್ಖಾನಾ ಮಸಿದಿಗಳು.

 9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon