ಭಾರತದ ಚುನಾವಣಾ ವ್ಯವಸ್ಥೆ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ರಾಜ್ಯಶಾಸ್ತ್ರ ಪ್ರಶ್ನೋತ್ತರಗಳು |

ಅಧ್ಯಾಯ 5. ಭಾರತದ ಚುನಾವಣಾ ವ್ಯವಸ್ಥೆ

I ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1. ಮತದಾರರ ಪಟ್ಟಿಯು  _____ ವರ್ಷಗಳಿಗೊಮ್ಮೆ ಪರಿಷ್ಕ್ರತಗೊಳ್ಳುತ್ತದೆ.

ಉತ್ತರ: ಒಂದು

2. ಪ್ರಚಾರ ಕಾರ್ಯವು ಮತದಾನದ ದಿನಕ್ಕಿಂತ _____ ಗಂಟೆಗಳ ಮುಂಚಿತವಾಗಿ ಮುಕ್ತಾಯವಾಗುತ್ತದೆ.

ಉತ್ತರ: 48

3. ರಾಜಕೀಯ ಪಕ್ಷಗಳಿಗೆ _____ ಮಾನ್ಯತೆ ನೀಡುತ್ತವೆ.

ಉತ್ತರ: ಚುನಾವಣಾ ಆಯೋಗ

4. ಪತ್ರಿಕಾ ಸ್ವಾತಂತ್ರ್ಯ ರಕ್ಷಣೆಗಾಗಿ ಇರುವ ಸಂಸ್ಥೆ _____

ಉತ್ತರ: ಭಾರತೀಯ ಪತ್ರಿಕಾ ಪರಿಷತ

5. ಮಾಹಿತಿ ಹಕ್ಕು ಕಾಯ್ದೆಯನ್ನು  _____ ರಲ್ಲಿ ಜಾರಿಗೊಳಿಸಲಾಗಿದೆ.

ಉತ್ತರ: 2005


II ಕೆಳಗಿನ ಪ್ರಶ್ನೆಗಳಿಗೆ ಗುಂಪಿನಲ್ಲಿ ಚರ್ಚಿಸಿ ಉತ್ತರ ಬರೆಯಿರಿ.

1. ಮತದಾರರ ಪಟ್ಟಿಯ ಕುರಿತು ಟಿಪ್ಪಣಿ ಬರೆಯಿರಿ

ಉತ್ತರ: ಮತದಾನ ಮಾಡುವವರ ಹೆಸರು ಹಾಗೂ ಕೆಲವು ವಿವರಗಳನ್ನು ಒಳಗೊಂಡಿರುವ ಪಟ್ಟಿಯನ್ನು ಮತದಾರರ ಪಟ್ಟಿ ಎಂದು ಕರೆಯುತ್ತಾರೆ.

ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗವು ಚುನಾವಣೆಗಿಂತ ಮುಂಚಿತವಾಗಿಯೇ ಸಿದ್ದಪಡಿಸಿಕೊಳ್ಳುತ್ತದೆ.

ಮತದಾರರ ಪಟ್ಟಿಯು ಪ್ರತಿ ವರ್ಷ ಪರಿಷ್ಕ್ರತಗೊಳ್ಳುತ್ತದೆ.

ಹೀಗೆ ಪರಿಷ್ಕ್ರತಗೊಳ್ಳುವ ಸಂದರ್ಭದಲ್ಲಿ ಯಾರಿಗೆ ಹದಿನೆಂಟು (18) ವರ್ಷಗಳು ತುಂಬಿರುತ್ತವೋ ಅವರ ಹೆಸರುಗಳನ್ನು ಪಟ್ಟಿಗೆ ಹೊಸದಾಗಿ ಸೇರ್ಪಡೆ ಮಾಡಿಕೊಂಡು, ಯಾರು ಮರಣ ಹೊಂದಿರುತ್ತಾರೋ ಅಂತಹವರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ.

ಮತದಾರರ ಪಟ್ಟಿಯು ಚುನಾವಣಾ ಅಧಿಕಾರಿಗಳು ಮತದಾರರನ್ನು ಮತದಾನದ ವೇಳೆ ಗುರುತಿಸಲು ಸಹಾಯಕವಾಗುತ್ತದೆ.

ಮತದಾರನ ಛಾಯಾ ಪ್ರತಿಯ ಗುರುತಿನ ಚೀಟಿಗಳು (EPIC) ಅರ್ಹ ಮತದಾರನಿಗೆ ಚುನಾವಣಾ ಆಯೋಗದಿಂದ ನೀಡಲ್ಪಟ್ಟಿದ್ದು, ಇದು ಅನ್ಯ ವ್ಯಕ್ತಿಯ ಮತದಾನ ತಡಯುವ ಕ್ರಮವಾಗಿದೆ.

ಗುರುತಿನ ಚೀಟಿ ಮತದಾರನ ಗುರ್ತಿಸುವಿಕೆಗೆ ಪುರಾವೆಯಾಗಿ ಬಳಸಲ್ಪಡುತ್ತದೆ.

2. ‘ರಾಜಕೀಯ ಪಕ್ಷಗಳು ಪ್ರತಿನಿಧಿಗಳು ಸರ್ಕಾರ ಮತ್ತು ಜನ ಸಮುದಾಯದ ನಡುವಿನ ಕೊಂಡಿಯಿದ್ದಂತೆಸಮರ್ಥಿಸಿರಿ.

ಉತ್ತರ: ಪ್ರಜಾಪ್ರಭುತ್ವ ಮಾದರಿ ಸರ್ಕಾರಗಳಲ್ಲಿ ರಾಜಕೀಯ ಪಕ್ಷಗಳು ಅವಶ್ಯಕ ಮತ್ತು ಅನಿವಾರ್ಯ.

ರಾಜಕೀಯ ಪಕ್ಷಗಳು ಪ್ರತಿನಿಧಿಗಳು, ಸರ್ಕಾರ ಮತ್ತು ಜನ ಸಮುದಾಯದ ನಡುವಿನ ಕೊಂಡಿಯಿದ್ದಂತೆ.

ರಾಜಕೀಯ ಪಕ್ಷಗಳು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗಾಗಿ ನಿಯಮಗಳನ್ನು ಹಾಗೂ ಕಾನೂನುಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ರಾಜಕೀಯ ಪಕ್ಷಗಳು ಕೆಲವೊಮ್ಮೆ ರಾಜಕೀಯ ಪ್ರವೇಶ ಬಯಸುವವರಿಗೆ ತರಬೇತಿ ಕೇಂದ್ರಗಳಾಗುತ್ತವೆ.

ರಾಷ್ಟ್ರಮಟ್ಟದಲ್ಲಿ ಕೇಂದ್ರ ಸಂಸತ್ತಿನ ಕೆಳಮನೆ ಅಥವಾ ಲೋಕಸಭೆ, ರಾಜ್ಯಮಟ್ಟದಲ್ಲಿ ಕೆಳಮನೆ ಅಥವಾ ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷವು ಸರ್ಕಾರ ರಚಿಸುತ್ತವೆ.

ಯಾವ ಪಕ್ಷ ಸರ್ಕಾರ ರಚಿಸಿಕೊಳ್ಳುತ್ತದೆಯೋ ಪಕ್ಷವನ್ನುಆಡಳಿತ ಪಕ್ಷಎನ್ನುತ್ತಾರೆ.

ಎರಡನೇ ಸ್ಥಾನದಲ್ಲಿ ಬಹುಮತ ಪಡೆದ ಪಕ್ಷವುವಿರೋಧ ಪಕ್ಷಎಂದು ಕರೆಸಿಕೊಂಡು ಆಡಳಿತ ಪಕ್ಷದ ಚಟುವಟಿಕೆಗಳ ವಿಮರ್ಶೆಮಾಡುವ ಅಧಿಕಾರ ಹೊಂದಿರುತ್ತದೆ.

ಉಳಿದ ಸಣ್ಣ ಸಣ್ಣ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸಮಯ ಬಂದಾಗ ತಮ್ಮ ಸ್ವ ಇಚ್ಚೆಯಿಂದ ಆಡಳಿತ ಅಥವಾ ವಿರೋಧ ಪಕ್ಷವನ್ನು ಬೆಂಬಲಿಸುವ ಅಧಿಕಾರ ಹೊಂದಿದೆ.

3. ಸಮ್ಮಿಶ್ರ ಸರ್ಕಾರವನ್ನು ಕುರಿತು ಬರೆಯಿರಿ.

ಉತ್ತರ: ಇತ್ತೀಚಿನ ದಿನಗಳಲ್ಲಿ ಹಲವಾರು ಪಕ್ಷಗಳು ಅಧಿಕಾರಕ್ಕಾಗಿ ಚುನಾವಣೆಗಳಲ್ಲಿ ಭಾಗವಹಿಸುತ್ತಿವೆ.

ಯಾವುದಾದರೊಂದು ಪಕ್ಷವು ಸ್ಪಷ್ಟ ಬಹುಮತ ಪಡೆದರೆ ಅಂತಹ ಪಕ್ಷ ಸರ್ಕಾರ ರಚಿಸಿ ಆಡಳಿತ ನಡೆಸಿಕೊಂಡು ಹೋಗುತ್ತದೆ.

ಎಷ್ಟೋ ಸಂದರ್ಭದಲ್ಲಿ ಯಾವ ಪಕ್ಷಕ್ಕೂ ಸರ್ಕಾರ ರಚನೆಗೆ ಬೇಕಿರುವ ಸ್ಪಷ್ಟ ಬಹುಮತ ಬರುವುದಿಲ್ಲ.

ಅಂತಹ ಸಂದರ್ಬವನ್ನುಅತಂತ್ರ ಲೋಕಸಭೆ ಅಥವಾ ಅತಂತ್ರ ವಿಧಾನಸಭೆ”(Hung Parliament or Assembly) ಎನ್ನಲಾಗುತ್ತದೆ.

ಇಂತಹ ಸಂದರ್ಭಗಳಲ್ಲಿ ಕೆಲವು ಪಕ್ಷಗಳು ಸಂಯೋಜನೆಗೊಂಡು ಅವಶ್ಯವಿರುವ ಸದಸ್ಯ ಬಲವನ್ನು ಸಾಬೀತುಪಡಿಸಿ ಸರ್ಕಾರ ರಚಿಸಿಕೊಳ್ಳುತ್ತವೆ.

ಪ್ರಕಾರದ ಮೈತ್ರಿಗೆಮತದಾನೋತ್ತರ ಮೈತ್ರಿ’ (Post-Poll alliance) ಎನ್ನುತ್ತಾರೆ.

ಕೆಲವೊಮ್ಮೆ ಚುನಾವಣೆಗೆ ಮುಂಚಿತವಾಗಿಯೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ಪಕ್ಷಗಳು ಕೊಡಿಕೊಂಡು ಸ್ಥಾನ ಹಂಚಿಕೆಯನ್ನು ಮಾಡಿಕೊಂಡು ಚುನಾವಣೆಗೆ ಜಂಟಿಯಾಗಿ ಸ್ಪರ್ದಿಸುತ್ತವೆ.

ಪ್ರಕಾರದ ಮೈತ್ರಿಯನ್ನುಮತದಾನ ಪೂರ್ವ ಮೈತ್ರಿ’ (Pre-Poll alliance) ಎಂದು ಕರೆಯುತ್ತಾರೆ.

ಎರಡೂ ಪ್ರಕಾರದ ಮೈತ್ರಿಗಳು ಯಾವಾಗ ಅತಂತ್ರ ಸ್ಥಿತಿ ಉಂಟಾಗುತ್ತದೆಯೋ ಸಂದರ್ಭದಲ್ಲಿ ಸರ್ಕಾರ ರಚಿಸಿಕೊಳ್ಳಲು ಸಹಕಾರಿಯಾಗುತ್ತವೆ.

ಪ್ರಕಾರವಾಗಿ ಎರಡಕ್ಕಿಂತ ಹೆಚ್ಚು ಪಕ್ಷಗಳ ಸಹಕಾರದಿಂದ ರಚಿತಗೊಂಡ ಸರ್ಕಾರವನ್ನುಸಮ್ಮಿಶ್ರ ಸರ್ಕಾರಎಂದು ಕರೆಯುತ್ತಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಮೈತ್ರಿ ಹೊಂದಿದ ಪಕ್ಷಗಳು ಮಂತ್ರಿಮಂಡಲದಲ್ಲಿ ತಮ್ಮ ತಮ್ಮ ಪಾಲುಗಳನ್ನು ಹಂಚಿಕೊಳ್ಳುತ್ತಾರೆ.

ಕೆಲವೊಮ್ಮೆ ಮೈತ್ರಿಕೂಟದ ಪಕ್ಷವು ಅಧಿಕಾರದಲ್ಲಿ ಪಾಲು ಪಡೆಯದೆ ಪ್ರಮುಖ ಪಕ್ಷವೊಂದನ್ನು ಬೆಂಬಲಿಸಿದಾಗ ಅಂತಹ ಸಂದರ್ಭವನ್ನುಬಾಹ್ಯ ಬೆಂಬಲಎಂದು ಕರೆಯುತ್ತಾರೆ.

4. ‘ಮಾಹಿತಿ ಹಕ್ಕು ಸರ್ಕಾರವನ್ನು ಪ್ರಜೆಗಳಿಗೆ ಜವಾಬ್ದಾರಿಯುತವಾಗುವಂತೆ ಮಾಡುವುದುಚರ್ಚಿಸಿ.

ಉತ್ತರ: ಕೇಂದ್ರ ಮಾಹಿತಿ ಹಕ್ಕು ಅಧಿನಿಯಮವು 12-10-2005 ರಂದು ಜಾರಿಗೆ ಬಂದಿತು.

ಆದರೂ ಅದಕ್ಕೂ ಮುಂಚೆ 9 ರಾಜ್ಯಗಳು ರಾಜ್ಯ ಅಧಿನಿಯಮಗಳನ್ನು ಅಂಗಿಕರಿಸಿದ್ದವು.

ರಾಜ್ಯಗಳೆಂದರೆ ಜಮ್ಮು & ಕಾಶ್ಮಿರ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಅಸ್ಸಾಂ ಮತ್ತು ಗೋವಾ.

ಮಾಹಿತಿ ಹಕ್ಕು ಅಧಿನೀಯಮ ನಮಗೆ ಯಾವುಧೇ ಹೊಸ ಹಕ್ಕನ್ನು ನೀಡುವುದಿಲ್ಲ.

ಇದು ಮಾಹಿತಿ ಕೋರಿ ಹೇಗೆ ಅರ್ಜಿ ಸಲ್ಲಿಸಬೇಕು, ಎಲ್ಲಿ ಅರ್ಜಿ ಸಲ್ಲಿಸಬೇಕು ಎಷ್ಟು ಶುಲ್ಕ ಪಾವತಿಸಬೇಕು ಎಂಬ ಪ್ರಕ್ರಿಯೆಯನ್ನಷ್ಟೆ ನಿರೂಪಿಸುತ್ತದೆ.

ಕಾರಣಕ್ಕಾಗಿ ನಮಗೆ ಮಾಹಿತಿ ಹಕ್ಕು ಅಧಿನಿಯಮ ಬೇಕು.

ಸರ್ಕಾರಕ್ಕೆ ಯಾವುದೇ ಪ್ರಶ್ನೆಗಳನ್ನು ಕೇಳುಬಹುದು ಅಥವಾ ಸರ್ಕಾರದ ಯಾವುದೇ ಮಾಹಿತಿಯನ್ನು ಪಡೆಯಬಹುದು.

ಯಾವುದೇ ಸರ್ಕಾರಿ ದಾಖಲೆಗಳ ಪ್ರಕ್ರಿಯೆಯನ್ನು ಪಡೆಯುವುದು.

ಯಾವುದೇ ಸರ್ಕಾರಿ ದಾಖಲೆಗಳ ತಪಾಸಣೆ.

ಯಾವುದೇ ಸರ್ಕಾರಿ ಕಾಮಗಾರಿಗಳು ತಪಾಸಣೆ.

ಯಾವುದೇ ಸರ್ಕಾರಿ ಕಾಮಗಾರಿಗಳ ಮಾದರಿಯನ್ನು ಪಡೆಯುವುದು.

ಎಲ್ಲಾ ಅಂಶಗಳಿಂದಾಗಿ ಮಾಹಿತಿ ಹಕ್ಕು ಸರ್ಕಾರವನ್ನು ಪ್ರಜೆಗಳಿಗೆ ಜವಾಬ್ದಾರಿಯುತವಾಗುವಂತೆ ಮಾಡುವುದು.

9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon