ನ್ಯಾಯಾಂಗ ವ್ಯವಸ್ಥೆ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ರಾಜ್ಯಶಾಸ್ತ್ರ ಪ್ರಶ್ನೋತ್ತರಗಳು |

ಅಧ್ಯಾಯ- 4. ನ್ಯಾಯಾಂಗ ವ್ಯವಸ್ಥೆ

I ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1. ಸರ್ವೊಚ್ಚ ನ್ಯಾಯಾಲಯ _____ ರಂದು ಅಸ್ತಿತ್ವಕ್ಕೆ ಬಂದಿತು.

ಉತ್ತರ: ಜನೆವರಿ 28. 1950

2. ನ್ಯಾಯಾಧೀಶರ ನಿವೃತ್ತಿ ವಯಸ್ಸು_____

ಉತ್ತರ: 65 ವರ್ಷ

3. ನ್ಯಾಯಾಧೀಶರನ್ನು  _____ ನೇಮಕ ಮಾಡುತ್ತಾರೆ.

ಉತ್ತರ: ರಾಷ್ಟ್ರಪತಿಯವರು

4. ಕಂದಾಯ ಮಂಡಳಿ ಮುಖ್ಯಸ್ಥರು _____

ಉತ್ತರ: ಕಂದಾಯ ಮುಖ್ಯಸ್ಥರು

5. ಜನತಾ ನ್ಯಾಯಾಲಯಗಳು _____ ರಲ್ಲಿ ಅಸ್ತಿತ್ವಕ್ಕೆ ಬಂದವು

ಉತ್ತರ: 1985


II ಕೆಳಗಿನ ಪ್ರಶ್ನೆಗಳಿಗೆ ಗುಂಪಿನಲ್ಲಿ ಚರ್ಚಿಸಿ ಉತ್ತರ ಬರೆಯಿರಿ.

1. ಸರ್ವೋಚ್ಚ ನ್ಯಾಯಾಲಯದ ಅಧಿಕಾರ ಕಾರ್ಯಗಳ ಕುರಿತು ವಿವರಿಸಿ.

ಉತ್ತರ: ಸರ್ವೋಚ್ಚ ನ್ಯಾಯಾಲಯದ ಅಧಿಕಾರ ಕಾರ್ಯಗಳು:

1. ಮೂಲ ಅಧಿಕಾರ ವ್ಯಾಪ್ತಿ:

ಸರ್ವೋಚ್ಚ ನ್ಯಾಯಾಲಯದಲ್ಲಿ ನೇರವಾಗಿ ಮೊಕದ್ದಮೆ ಹೂಡುವುದೇ ಮೂಲ ಅಧಿಕಾರ ವ್ಯಾಪ್ತಿ.

ಕೇಂದ್ರ-ರಾಜ್ಯಗಳ ನಡುವೆ, ರಾಜ್ಯ-ರಾಜ್ಯಗಳ ನಡುವೆ ಉಂಟಾಗುವ ವಿವಾದಗಳನ್ನು ಬಗೆಹರಿಸುವ ಅಧಿಕಾರ ಸರ್ವೋಚ್ಚ ನ್ಯಾಯಾಲಯಕ್ಕಿದೆ.

ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು, ಸಂವಿಧಾನಕ್ಕೆ ಅರ್ಥ ವಿವರಣೆ ನೀಡುವ ಅಧಿಕಾರ, ಆಜ್ಞೆ (ರಿಟ್)ಗಳನ್ನು ನೀಡುವುದು.

2. ಮೇಲ್ಮನವಿ ಅಧಿಕಾರ ವ್ಯಾಪ್ತಿ:

ಕೆಳ ನ್ಯಾಯಾಲಯಗಳು ನೀಡುವ ತೀರ್ಪುಗಳ ವಿರುದ್ಧ ಕಕ್ಷಿದಾರರು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.

ಇಂತಹ ಮೇಲ್ಮನವಿ ಸ್ವೀಕರಿಸಿ ವಿಚಾರಣೆ ನಡೆಸುವ ಅಧಿಕಾರ ನ್ಯಾಯಾಲಯಕ್ಕಿದೆ.

ಮೇಲ್ಮನವಿ ಸಲ್ಲಿಸುವಂತೆ ವಿಶೇಷ ಅನುಮತಿ ನೀಡುವ ಅಧಿಕಾರವು ನ್ಯಾಯಾಲಯಕ್ಕೆ ಇದೆ.

3. ಸಲಹಾ ಅಧಿಕಾರ ವ್ಯಾಪ್ತಿ:

ಸಾರ್ವಜನಿಕವಾಗಿ ಪ್ರಮುಖವಾಗಿರುವ ವಿಷಯದ ಬಗ್ಗೆ ರಾಷ್ಟ್ರಪತಿಗಳು ಸಲಹೆ ಕೇಳಿದಾಗ ಸರ್ವೋಚ್ಚ ನ್ಯಾಯಾಲಯ ಸಲಹೆ ನೀಡುವ ಅಧಿಕಾರವಿದೆ.

ಸಂವಿಧಾನ ಜಾರಿಗೆ ಬರುವುದಕ್ಕಿಂತ ಮುಂಚೆ ಸರ್ಕಾರ ಮಾಡಿಕೊಂಡಿರುವ ಒಪ್ಪಂದ, ಕರಾರು ಮುಂತಾದ ವಿಷಯಗಳ ಬಗ್ಗೆ ವಿವಾದ ಉಂಟಾದರೆ ರಾಷ್ಟ್ರಪತಿಗಳು ನ್ಯಾಯಾಲಯದ ಸಲಹೆ ಕೇಳಬಹುದು.

4. ಇತರ ಅಧಿಕಾರಗಳು :

ಮೇಲ್ಕಂಡ ಅಧಿಕಾರ ಕಾರ್ಯಗಳ ಜೊತೆಗೆ ಸರ್ವೋಚ್ಚ ನ್ಯಾಯಾಲಯವು ದಾಖಲೆಗಳ ನ್ಯಾಯಾಲಯವಾಗಿಕೇಂದ್ರ ಮತ್ತು ರಾಜ್ಯಗಳಿಗೆ ಮುಖ್ಯ ಸಲಹೆಗಾರನಾಗಿವಿಶೇಷ ರಿಟ್ ಅರ್ಜಿಗಳನ್ನು ಹೊರಡಿಸುವ ಅಧಿಕಾರ ಪಡೆದಿದೆ.

2. ಉಚ್ಚ ನ್ಯಾಯಾಲಯದ ಅಧಿಕಾರ ಮತ್ತು ಕಾರ್ಯಗಳ ಕುರಿತು ಬರೆಯಿರಿ.

ಉತ್ತರ: ಉಚ್ಚ ನ್ಯಾಯಾಲಯದ ಅಧಿಕಾರ & ಕಾರ್ಯಗಳು :

ನ್ಯಾಯಾಲಯದ ಅಧಿಕಾರ ವ್ಯಾಪ್ತಿಯು ರಾಜ್ಯಾದ್ಯಂತ ವಿಸ್ತರಿಸಿದೆ.

1) ನಾಗರಿಕ (Civil) ಮತ್ತು ಅಪರಾಧ (Criminal) ವಿವಾದಗಳು, ನೌಕಾಯಾನ, ವೈವಾಹಿಕ ಸಂಬಂಧಗಳು, ನ್ಯಾಯಾಂಗ ನಿಂದನೆ ಮುಂತಾದ ವಿವಾದಗಳನ್ನು ಇತ್ಯರ್ಥಪಡಿಸುವ ಮೂಲ ಅಧಿಕಾರ ಕಾರ್ಯ

2) ಅಧೀನ ನ್ಯಾಯಾಲಯಗಳು ನೀಡಿದ ತೀರ್ಪಿನ ವಿರುದ್ಧ ಶ್ರೇಷ್ಠ ನ್ಯಾಯಾಲಯ ಮೇಲ್ಮನವಿ ಸ್ವೀಕರಿಸಿ ಇತ್ಯರ್ಥಪಡಿಸುವ ಮನವಿ ಅಧಿಕಾರ ಕಾರ್ಯ.

3) ಶ್ರೇಷ್ಠ ನ್ಯಾಯಾಲಯದ ವ್ಯಾಪ್ತಿಯಲ್ಲಿ ಬರುವ ಅಧೀನ ನ್ಯಾಯಾಲಯಗಳಲ್ಲಿನ ಮೊಕದ್ದಮೆಗಳನ್ನು ತನ್ನಲ್ಲಿಗೆ ವರ್ಗಾಯಿಸುವಂತೆ, ಕೆಲವು ನಿಯಮಗಳನ್ನು ಅಧೀನ ನ್ಯಾಯಾಲಯಗಳು ಪಾಲಿಸುವಂತೆ ಮತ್ತು ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿಕೊಳ್ಳುವಂತೆ ನಿರ್ದೇಶನ ನೀಡಿ ಅವುಗಳ ಮೇಲ್ವಿಚಾರಣೆ ಮಾಡುವ ಅಧಿಕಾರ ಕಾರ್ಯ ಹೊಂದಿದೆ.

ಇವುಗಳಲ್ಲದೆ ಸಿಬ್ಬಂದಿ ನೇಮಕ ಮತ್ತು ನಿಯಂತ್ರಣ, ಮೂಲಭೂತ ಹಕ್ಕುಗಳ ರಕ್ಷಣೆ, ವಿವಿಧ ರಿಟ್ ಅರ್ಜಿಗಳನ್ನು ಸ್ವೀಕರಿಸಿ ನ್ಯಾಯ ಒದಗಿಸುವ ಕಾರ್ಯ ನಿರ್ವಹಿಸುತ್ತದೆ.

3. ನಾಗರಿಕ ನ್ಯಾಯಾಲಯದ ಅಡಿಯಲ್ಲಿ ಇರುವ ಅಧೀನ ನ್ಯಾಯಾಲಯಗಳಾವುವು?

ಉತ್ತರ: ನಾಗರಿಕ ನ್ಯಾಯಾಲಯದ ಅಡಿಯಲ್ಲಿ ಇರುವ ಅಧೀನ ನ್ಯಾಯಾಲಯಗಳು:

1) ಅಧೀನ ನ್ಯಾಯಾಧೀಶರ ನ್ಯಾಯಾಲಯ (Court of Subordinate Judges)

2) ಹೆಚ್ಚುವರಿ ನ್ಯಾಯಾಲಯ (Court of Muncif)

3) ಹೆಚ್ಚುವರಿ ಮುನ್ಸೀಫ್ ನ್ಯಾಯಾಲಯ (Court of Additional Muncif)


4. ಅಪರಾಧ ನ್ಯಾಯಾಲಯಗಳ ಕುರಿತು ಬರೆಯಿರಿ

ಉತ್ತರ: ಅಪರಾಧ ನ್ಯಾಯಲಯ/ದಂಡಾಧಿಕಾರ ನ್ಯಾಯಾಲಯ/Criminal Court

* ಅಪರಾಧ ನ್ಯಾಯಾಲಯವು ಏಪ್ರೀಲ್ 1, 1974 ರಂದು ಅಸ್ತಿತ್ವಕ್ಕೆ ಬಂದಿತು.

* ಇದನ್ನು ಜಿಲ್ಲಾ ದಂಡಾಧಿಕಾರಿ ನ್ಯಾಯಲಯ ಎಂದು ಕರೆಯಲಾಗುತ್ತದೆ.

* ಇವು ರಾಜ್ಯ ಶ್ರೇಷ್ಠ ನ್ಯಾಯಾಲಯದ ನಿಯಂತ್ರಣದಲ್ಲಿರುತ್ತವೆ.

* ಅಪರಾಧ ನ್ಯಾಯಾಲಯಗಳಲ್ಲಿ ಜಿಲ್ಲಾ ಮಟ್ಟದ ಉನ್ನತ ನ್ಯಾಯಾಲಯವೆಂದರೆ ಸೆಷನ್ಸ್ ನ್ಯಾಯಾಲಯ.

* ಜಿಲ್ಲಾ ನ್ಯಾಯಾಧೀಶರೆ ಇದರ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಾರೆ.

* ಕೊಲೆ, ದರೋಡೆ, ಡಕಾಯಿತಿ ಮುಂತಾದ ಅಪರಾಧಗಳಿಗೆ ಸಂಬಂಧಿಸಿದ ಮೊಕದ್ದಮೆಗಳ ವಿಚಾರಣೆ ನಡೆಸುತ್ತದೆ.

* ನ್ಯಾಯಾಲಯವು ಮರಣ ದಂಡನೆಯನ್ನೊಳಗೊಂಡು ಜೀವಾವಧಿ ಶಿಕ್ಷೆ ನೀಡುವ ಅಧಿಕಾರ ಪಡೆದಿದೆ.

* ಆದರೆ ತಾನು ನೀಡುವ ಮರಣ ದಂಡನೆಯಂತಹ ಶಿಕ್ಷೆಗೆ ಶ್ರೇಷ್ಠ ನ್ಯಾಯಾಲಯ ದೃಢೀಕರಿಸಬೇಕಾಗುತ್ತದೆ.

* ನ್ಯಾಯಾಲಯದ ತೀರ್ಪಿನ ವಿರುದ್ಧ ಶ್ರೇಷ್ಠ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು.

* ನ್ಯಾಯಾಲಯದ ಅಡಿಯಲ್ಲಿ ಇತರ ಅಪರಾಧ ನ್ಯಾಯಾಲಯಗಳಿವೆ.


5. ಕಂದಾಯ ನ್ಯಾಯಾಲಯಗಳ ಕುರಿತು ಟಿಪ್ಪಣಿ ಬರೆಯಿರಿ

ಉತ್ತರ: ಪ್ರತಿಯೊಂದು ಜಿಲ್ಲೆಯು ಕಂದಾಯ ನ್ಯಾಯಾಲಯಗಳನ್ನು ಹೊಂದಿರುತ್ತದೆ.

ಇವು ಕಂದಾಯಕ್ಕೆ ಸಂಬಂಧಿಸಿದ ಮೊಕದ್ದಮೆಗಳ ವಿಚಾರಣೆ, ಭೂ ದಾಖಲೆಗಳು, ಭೂ ಕಂದಾಯ ಮುಂತಾದವುಗಳ ವಿಚಾರಣೆ ನಡೆಸುತ್ತವೆ.

ಕಂದಾಯ ನ್ಯಾಯಲಯಗಳು ಕೆಳಕಂಡ ನ್ಯಾಯಲಯಗಳನ್ನು ಒಳಗೊಂಡಿದೆ:

ತಹಸೀಲ್ದಾರ್ ನ್ಯಾಯಾಲಯ:

ಕಂದಾಯ ನ್ಯಾಯಲಯಗಳಲ್ಲಿ ಅತಿ ಕೆಳಗಿನ ನ್ಯಾಯಾಲಯ

ತಹಶೀಲ್ದಾರ್ ನ್ಯಾಯಾಧೀಶರಾಗಿರುತ್ತಾರೆ.

ನ್ಯಾಯಾಲಯವನ್ನು ತಾಲ್ಲೂಕು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಎಂಬುದಾಗಿಯೂ ಕರೆಯುತ್ತಾರೆ.

ಜಿಲ್ಲಾ ಉಪವಿಭಾಗಾಧಿಕಾರಿಗಳ ನ್ಯಾಯಾಲಯ:

ತಹಸೀಲ್ದಾರ್ ನ್ಯಾಯಾಲಯಗಳ ನಿರ್ಣಯಗಳು ಮತ್ತು ತೀರ್ಪುಗಳ ವಿರುದ್ಧ ಸಲ್ಲಿಸಿದ ಮೇಲ್ಮನವಿಯನ್ನು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯವು ಸ್ವೀಕರಿಸಿ ವಿಚಾರಣೆ ನಡೆಸುತ್ತದೆ.

ಸಹಾಯಕ ಆಯುಕ್ತರು (Assistant Commissioner) ನ್ಯಾಯಾಲಯದ ನ್ಯಾಯಾಧೀಶರಾಗಿರುತ್ತಾರೆ.

ಜಿಲ್ಲಾ ಕಂದಾಯ ನ್ಯಾಯಾಲಯ / ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ :

ನ್ಯಾಯಾಲಯವು ಜಿಲ್ಲಾ ಕೇಂದ್ರದಲ್ಲಿದ್ದು ತಹಸೀಲ್ದಾರ ಮತ್ತು ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳು ನೀಡಲಾದ ತೀರ್ಪುಗಳ ವಿರುದ್ಧ ಸಲ್ಲಿಸುವ ಮೇಲ್ಮನವಿಯನ್ನು ಸ್ವೀಕರಿಸಿ ವಿಚಾರಣೆ ನಡೆಸುತ್ತದೆ.

ಜಿಲ್ಲಾಧಿಕಾರಿಗಳು (Deputy Commissioner) ನ್ಯಾಯಾಲಯದ ನ್ಯಾಯಾಧೀಶರಾಗಿರುತ್ತಾರೆ.

ಆಯುಕ್ತರ ನ್ಯಾಯಾಲಯ :

ಆಯುಕ್ತರ ನ್ಯಾಯಾಲಯವು ಕೊಡುವ ತೀರ್ಪಿನ ವಿರುದ್ಧ ಮೇಲ್ಮನವಿ ಸ್ವೀಕರಿಸಿ ವಿಚಾರ ನ್ಯಾಯಾಧೀಶರು ರಾಜ್ಯ ಮಟ್ಟದ ವಿಭಾಗಾಧಿಕಾರಿಗಳಾಗಿರುತ್ತಾರೆ.

ಕಂದಾಯ ಮಂಡಳಿ :

ಇದು ಕಂದಾಯ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಅತ್ಯುನ್ನತ ನ್ಯಾಯಾಲಯವಾಗಿದೆ.

ನ್ಯಾಯಾಲಯವು ಅಧೀನ ಕಂದಾಯ ನ್ಯಾಯಾಲಯಗಳು ನೀಡಿದ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಸ್ವೀಕರಿಸಿ ವಿಚಾರಣೆ ಮಾಡುವ ಅಧಿಕಾರವಿದೆ.

ಕಂದಾಯ ಕಾರ್ಯದರ್ಶಿಗಳು ಇದರ ಮುಖ್ಯಸ್ಥರಾಗಿದ್ದು, ಶ್ರೇಷ್ಠ ನ್ಯಾಯಾಲಯದ ಮೇಲ್ವಿಚಾರಣೆಯಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.

6. ಜನತಾ ನ್ಯಾಯಾಲಯ (ಲೋಕ್ ಅದಾಲತ್) ಸ್ಥಾಪಿಸುವ ಉದ್ದೇಶಗಳೇನು ?

ಉತ್ತರ: ಭಾರತದಲ್ಲಿ ನ್ಯಾಯ ವಿತರಣೆಯು ವಿಳಂಬವೂ ಹಾಗೂ ವೆಚ್ಚದಾಯಕವೂ (ದುಬಾರಿ) ಆಗಿದೆ.

ಇದನ್ನು ಗಮನದಲ್ಲಿಟ್ಟುಕೊಂಡು ಮೊಕದ್ದಮೆಗಳನ್ನು ಶೀಘ್ರಗತಿಯಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ಇತ್ಯಾರ್ಥಪಡಿಸಲು ಜನತಾ ನ್ಯಾಯಾಲಯಗಳು 1985 ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದವು.

ಒಂದು ನಿರ್ದಿಷ್ಟ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ವ್ಯಕ್ತಿಗಳ ನಡುವಿನ ವಿವಾದಗಳನ್ನು ರಾಜಿ ಸಂಧಾನ ಮಾಡಿಸುವುದು ಅಥವಾ ಇತ್ಯರ್ಥ ಪಡಿಸುವ ಉದ್ದೇಶವನ್ನು ಹೊಂದಿದೆ.

ಇದು ಪ್ರಮುಖ ಮೂರು ಗುಣಗಳನ್ನು ಹೊಂದಿದೆ:

1) ರಾಜೀ ಸಂಧಾನಕ್ಕೆ ಹೆಚ್ಚು ಉತ್ಸುಕವಾಗಿದೆ.

2) ಇದು ಶೀಘ್ರ ಹಾಗೂ ಮಿತವ್ಯಯದ್ದಾಗಿರುತ್ತದೆ.

3) ಇತರೆ ನ್ಯಾಯಾಲಯಗಳ ಕಾರ್ಯದ ಹೊರೆ ಕಡಿಮೆ ಮಾಡುತ್ತದೆ.

 9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon