ರಾಜ್ಯ ಸರ್ಕಾರ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ರಾಜ್ಯಶಾಸ್ತ್ರ ಪ್ರಶ್ನೋತ್ತರಗಳು |

ಅಧ್ಯಾಯ-3. ರಾಜ್ಯ ಸರ್ಕಾರ

I ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

1. ಭಾರತವು _____ ರಾಜ್ಯಗಳನ್ನು ಮತ್ತು ____ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.

ಉತ್ತರ: 29 ರಾಜ್ಯಗಳು 6+1 ಕೇಂದ್ರಾಡಳಿತ  ( ಪ್ರಸ್ತುತ : 28+9)

2. ರಾಜ್ಯ ವಿಧಾನಸಭೆಗೆ ಒಬ್ಬ ಆಂಗ್ಲೋ-ಇಂಡಿಯನ್ನರನ್ನು _____ ರವರು ನಾಮಕರಣ ಮಾಡುತ್ತಾರೆ.

ಉತ್ತರ: ರಾಜ್ಯಪಾಲರು

3. ಕರ್ನಾಟಕ ರಾಜ್ಯ ವಿಧಾನಪರಿಷತ್‌ ____ ಸದಸ್ಯರನ್ನು ಒಳಗೊಂಡಿದೆ.

ಉತ್ತರ: 75

4. ರಾಜ್ಯ ಮಂತ್ರಿಮಂಡಲವು ____ ಮತ್ತು ____ ವನ್ನು ಒಳಗೊಂಡ ನೈಜ ಕಾರ್ಯಾಂಗವಾಗಿದೆ.

ಉತ್ತರ: ರಾಜ್ಯಪಾಲರು , ಮುಖ್ಯಂತ್ರಿ

5. ರಾಜ್ಯಪಾಲರನ್ನು ____ ರವರು ನೇಮಿಸುತ್ತಾರೆ.

ಉತ್ತರ: ರಾಷ್ಟ್ರಪತಿ

4. ರಾಜ್ಯದ ಅಡ್ವೋಕೇಟ್ಜನರಲ್ರವನ್ನು ____ ರವರು ನೇಮಿಸುತ್ತಾರೆ.

ಉತ್ತರ: ರಾಜ್ಯಪಾಲರು


II ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರ ಬರೆಯಿರಿ

1. ರಾಜ್ಯ ವಿಧಾನಸಭೆ ರಚನೆಯನ್ನು ತಿಳಿಸಿ.

ಉತ್ತರ: ವಿಧಾನಸಭೆಯ ಸದಸ್ಯರ ಸಂಖ್ಯೆಯು ರಾಜ್ಯದ ಜನಸಂಖ್ಯೆಯನ್ನು ಆಧರಿಸಿರುತ್ತದೆ.

* ಯಾವುದೇ ರಾಜ್ಯದ ವಿಧಾನಸಭಾ ಸದಸ್ಯರ ಸಂಖ್ಯೆ 500 ಕ್ಕಿಂತ ಹೆಚ್ಚಾಗಿರಬಾರದು, 60ಕ್ಕಿಂತ ಕಡಿಮೆ ಇರಬಾರದು.

* ರಾಜ್ಯಪಾಲರು ವಿಧಾನಸಭೆಯಲ್ಲಿ ಆಂಗ್ಲೋ ಭಾರತೀಯರ ಸರಿಯಾದ ಪ್ರಾತಿನಿಧ್ಯವಿಲ್ಲವೆಂದು ನಿರ್ಧರಿಸಿದರೆ ಒಬ್ಬ ಆಂಗ್ಲೋ ಭಾರತೀಯನನ್ನು ನೇಮಕ ಮಾಡುವ ಅಧಿಕಾರ ಹೊಂದಿರುತ್ತಾರೆ.

* ಆದರೂ ಚಿಕ್ಕ ರಾಜ್ಯಗಳಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಇದೆ.

* ಉದಾ: ಮಿಜೋರಾಂ, ಗೋವಾದಲ್ಲಿ ತಲಾ 40 ಸದಸ್ಯರಿದ್ದಾರೆ.

* ಕರ್ನಾಟಕ ವಿಧಾನಸಭೆಯು 225 ಸದಸ್ಯರನ್ನು ಹೊಂದಿದೆ.

* 224 ಸದಸ್ಯರು ಚುನಾವಣೆಯ ಮೂಲಕ ಚುನಾಯಿಸಲ್ಪಟ್ಟರೆ

* ಉಳಿದ ಒಬ್ಬರು ಆಂಗ್ಲೋ-ಇಂಡಿಯನ್ನರನ್ನು ರಾಜ್ಯಪಾಲರು ನಾಮಕರಣ ಮಾಡುತ್ತಾರೆ.

*ಇವುಗಳು ರಾಜ್ಯ ವಿಧಾನಸಭೆಯ ರಚೆನೆಯ ಅಂಶಗಳಾಗಿವೆ.


2. ರಾಜ್ಯ ವಿಧಾನ ಪರಿಷತ್ಸದಸ್ಯರು ಯಾವ ಯಾವ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಾರೆ?

ಉತ್ತರ: ಕರ್ನಾಟಕ ವಿಧಾನ ಪರಿಷತ್ಸದಸ್ಯರ ಸಂಖ್ಯೆ 75

* ಸದಸ್ಯರು 5 ಕ್ಷೇತ್ರಗಳನ್ನು ಪ್ರತಿನಿಧಿಸುತ್ತಾರೆ.

1.ವಿಧಾನಸಭಾ ಸದಸ್ಯರಿಂದ

2.ಸ್ಥಳೀಯ ಸಂಸ್ಥೆಗಳಿಂದ,

3.ಪದವೀಧರ ಕ್ಷೇತ್ರದಿಂದ

4.ಶಿಕ್ಷಕರ ಕ್ಷೇತ್ರದಿಂದ ಚುನಾಯಿಲ್ಪಡುವರು.

5.ಕಲೆ, ಸಾಹಿತ್ಯ, ಶಿಕ್ಷಣ, ಸಮಾಜ ಸೇವೆ, ವಿಜ್ಞಾನ ಮತ್ತು ಸಹಕಾರ ಚಳವಳಿ ಕ್ಷೇತ್ರಗಳಲ್ಲಿ ಸೇವೆಯನ್ನು ಪರಿಗಣಿಸಿ ರಾಜ್ಯಪಾಲರು ನಾಮಕರಣ ಮಾಡುತ್ತಾರೆ.


3. ರಾಜ್ಯಪಾಲರ ಅರ್ಹತೆ, ಅಧಿಕಾರ ಅವಧಿಯನ್ನು ವಿವರಿಸಿ.

ಉತ್ತರ: ರಾಜ್ಯಪಾಲರ ಅರ್ಹತೆ:

1. ಭಾರತದ ಪ್ರಜೆಯಾಗಿರಬೇಕು

2. 35 ವರ್ಷಕ್ಕಿಂತ ಮೇಲ್ಪಟ್ಟಿರಬೇಕು

3. ಯಾವುದೇ ಲಾಭದಾಯಕ ಹುದ್ದಯನ್ನು ಹೊಂದಿರಬಾರದು.

4. ಸಂಸತ್ಅಥವಾ ರಾಜ್ಯ ಶಾಸಕಾಂಗದ ಸದಸ್ಯರಾಗಿರಬಾರದು.

ಸದಸ್ಯತ್ವ ಹೊಂದಿದ್ದರೆ ರಾಜ್ಯಪಾಲರಾಗಿ ನೇಮಕವಾದ ನಂತರ ಸದಸ್ಯತ್ವ ತ್ಯಜಿಸಬೇಕು.

ಅಧಿಕಾರ ಅವಧಿ:

* ರಾಜ್ಯಪಾಲರ ಅಧಿಕಾರ ಅವಧಿ 5 ವರ್ಷ.

* ಆದರೆ ಮುಂದಿನ ರಾಜ್ಯಪಾಲರು ನೇಮಕವಾಗುವವರೆಗೆ ಸಾಮಾನ್ಯವಾಗಿ ಅಧಿಕಾರದಲ್ಲಿ ಮುಂದುವರೆಯುತ್ತಾರೆ.

* ಕೇಂದ್ರ ಮಂತ್ರಿಮಂಡಲದ ಸಲಹೆ ಮೇರೆಗೆ ರಾಷ್ಟ್ರಪತಿಗಳು ರಾಜ್ಯಪಾಲರನ್ನು ಅವಧಿಗೆ ಮುಂಚಿತವಾಗಿಯೇ ವಾಪಸ್ಕರೆಸಿಕೊಳ್ಳಬಹುದು.


4. ಮುಖ್ಯಮಂತ್ರಿಯವರ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ.

ಉತ್ತರ: ಮುಖ್ಯಮಂತ್ರಿಯು ರಾಜ್ಯ ಸರ್ಕಾರದ ಮುಖ್ಯಸ್ಥರಾಗಿದ್ದಾರೆ.

* ರಾಜ್ಯ ಸರ್ಕಾರದ ಯಶಸ್ಸು ಅಥವಾ ಅವನತಿ ಇವರ ವರ್ಚಸ್ಸನ್ನು ಆಧರಿಸಿದೆ.

* ಇವರು ಮಂತ್ರಿಮಂಡಲದ ಶಾಸಕಾಂಗದ ಮತ್ತು ಬಹುಮತ ಪಡೆದ ಪಕ್ಷದ ನಾಯಕರಾಗಿರುತ್ತಾರೆ.

* ಮುಖ್ಯಮಂತ್ರಿಯಾಗುವವರು ರಾಜ್ಯ ಶಾಸಕಾಂಗದ ಯಾವುದಾದರೂ ಒಂದು ಸದನದ ಸದಸ್ಯತ್ವ ಹೊಂದಿರಬೇಕು.

* ಸದನದ ಸದಸ್ಯರಲ್ಲದವರೂ ಮುಖ್ಯಮಂತ್ರಿಗಳಾಗಬಹುದು.

* ಆದರೆ 6 ತಿಂಗಳ ಒಳಗಾಗಿ ಯಾವುದಾದರೂ ಒಂದು ಸದನದ ಸದಸ್ಯತ್ವ ಪಡೆಯಬೇಕು.

ಮುಖ್ಯಮಂತ್ರಿಯ ಅಧಿಕಾರ ಕಾರ್ಯಗಳು:

1.ಸಚಿವರುಗಳ ಪಟ್ಟಿ ಸಿದ್ದಪಡಿಸಿ ರಾಜ್ಯಪಾಲರಿಗೆ ಶಿಫಾರಸ್ಸು ನೀಡುತ್ತಾರೆ.

2.ಸಚಿವರುಗಳಿಗೆ ಖಾತೆಗಳನ್ನು ಹಂಚುವುದು ಮತ್ತು ಬದಲಾಯಿಸುವಂತೆ ಶಿಫಾರಸ್ಸು ಮಾಡುತ್ತಾರೆ.

3.ಸರ್ಕಾರಕ್ಕೆ ನಿಷ್ಠೆ ಹೊಂದಿರದ ಮಂತ್ರಿಮಂಡಲದ ವಿರುದ್ಧ ವರ್ತಿಸುವ , ಕ್ರಿಮಿನಲ್ಅಪರಾಧ ಹೊಂದಿದವರನ್ನು ಸಂಪುಟದಿಂದ ವಜಾ ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡುತ್ತಾರೆ.

4.ಸರ್ಕಾರದ ಮುಖ್ಯಸ್ಥರಾಗಿದ್ದು, ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

5.ಸಚಿವ ಸಂಪುಟದ ಅಧ್ಯಕ್ಷತೆ ವಹಿಸಿ, ಸಭೆ ಕರೆಯುವ, ಮುಂದೂಡುವ ಅಧಿಕಾರ ಹೊಂದಿದ್ದಾರೆ.

6.ವಿವಿಧ ಇಲಾಖೆಗಳ ಕಾರ್ಯದಕ್ಷತೆ ಪರಿಶೀಲಿಸಿ ಅವುಗಳ ನಡುವೆ ಹೊಂದಾಣಿಕೆ ಮೂಡಿಸುವ ಕಾರ್ಯ ಮಾಡುತ್ತಾರೆ.

7.ಅವಧಿಗೆ ಮುಂಚೆ ವಿಧಾನಸಭೆಯನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡುತ್ತಾರೆ.

8.ರಾಜ್ಯಪಾಲರು ಮತ್ತು ಸಚಿವ ಸಂಪುಟದ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸತ್ತಾರೆ.

9.ರಾಜ್ಯಪಾಲರಿಗೆ ಸಲಹೆಗಾರನಂತಿದ್ದು ವಿವಿಧ ಹುದ್ದೆಗಳ ನೇಮಕಾತಿಗೆ ತಮ್ಮ ಶಿಫಾರಸ್ಸನ್ನು ಮಾಡುತ್ತಾರೆ.

 9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon