ವಿಜಯನಗರ ಮತ್ತು ಬಹಮನಿ ರಾಜ್ಯ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಇತಿಹಾಸ ಪ್ರಶ್ನೊತ್ತರಗಳು |

ಅಧ್ಯಾಯ 4. ವಿಜಯನಗರ ಮತ್ತು ಬಹಮನಿ ರಾಜ್ಯ

I ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1. ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯಾದ ವರ್ಷ_____

ಉತ್ತರ: ಸಾ.. 1336

2. ಮಧುರಾ ವಿಜಯ ಬರೆದ ಕವಯತ್ರಿ _____

ಉತ್ತರ: ಗಂಗಾದೇವಿ

3. ಪ್ರೌಢದೇವರಾಯನ ಮಂತ್ರಿ ____

ಉತ್ತರ: ಲಕ್ಕಣ ದಂಡೇಶ

4. ಅಮುಕ್ತ ಮಾಲ್ಯದ ಕೃತಿಯನ್ನು ತೆಲುಗಿನಲ್ಲಿ ರಚಿಸಿದ ದೊರೆ _____

ಉತ್ತರ: ಕೃಷ್ಣ ದೇವರಾಯ

5. ಬೀದರಿನಲ್ಲಿ ಮದರಸವನ್ನು ಕಟ್ಟಿಸಿದವನು _____

ಉತ್ತರ: ಮಹಮ್ಮದ್ಗವಾನ

6. ಕಿತಾಬ್ ನವರಸ ಗ್ರಂಥವನ್ನು ಬರೆದವನು ____

ಉತ್ತರ: ಎರಡನೇ ಇಬ್ರಾಹಿಂ ಆದಿಲ್ಷಾ


II ಕೆಳಗಿನ ಪ್ರಶ್ನೆಗಳಿಗೆ ಸಹಪಾಠಿಗಳೊಂದಿಗೆ ಚರ್ಚಿಸಿ ಉತ್ತರಿಸಿ.

1. ವಿಜಯನಗರ ಸಾಮ್ರಾಜ್ಯವನ್ನು ಆಳಿದ ನಾಲ್ಕು ರಾಜ ಮನೇತನಗಳನ್ನು ಹೆಸರಿಸಿ.

ಉತ್ತರ: ವಿಜಯನಗರ ಸಾಮ್ರಾಜ್ಯವನ್ನಾಳಿದ 4 ರಾಜಮನೆತನಗಳು:-

*ಸಂಗಮ

*ಸಾಳುವ

*ತುಳುವ ಮತ್ತು

*ಅರವೀಡು


2. ಎರಡನೆಯ ದೇವರಾಯನ ಸಾಧನೆಗಳೇನು?

ಉತ್ತರ: ಎರಡನೇ ದೇವರಾಯನ ಸಾಧನೆಗಳು:-

*ಈತ ʻಗಜ ಬೇಂಟೆಕಾರʼಎಂಬ ಬಿರುದು ಸಹ ಧರಿಸಿದ್ದ

*ಇವನು ಒರಿಸ್ಸಾದ ಗಜಪತಿ ಕಪಿಲೇಂದ್ರನನ್ನು ಸೋಲಿಸಿ ಕೋಂಡವೀಡನ್ನು ಗೆದ್ದುಕೊಂಡನು.

*ಗಡಿ ಪ್ರದೇಶದ ನಾಯಕರುಗಳನ್ನು ಅಡಗಿಸಿ ಈಶಾನ್ಯ ಗಡಿಯನ್ನು ಕೃಷ್ಣಾನದಿಯವರೆಗೂ ವಿಸ್ತರಿಸಿದ.

*ನಂತರ ಕೇರಳವನ್ನು ಗೆದ್ದು, ಕೇರಳ, ಶ್ರೀಲಂಕಾದಿಂದ ಕಪ್ಪ ಕಾಣಿಕೆಗಳನ್ನು ಸ್ವೀಕರಿಸಿದನು.

*ಇದರಿಂದದಕ್ಷೀಣಾಪಥದ ಚಕ್ರವರ್ತಿಎನಿಸಿದ.

* ವಿಜಯಗಳಿಂದ ವಿಜಯನಗರ ಸಾಮ್ರಾಜ್ಯ ಸಿಂಹಳದ ಗಡಿಗಳಿಂದ ಗುಲ್ಬರ್ಗದವರೆಗೆ ಮತ್ತು ತೆಲಂಗಾಣ, ಮಲಬಾರ್ಗಳಿಗೆ ವಿಸ್ತರಿಸಿಕೊಂಡಿತು.

* ನ್ಯೂನಿಜ್ ಪ್ರಕಾರ ಪ್ರೌಢದೇವರಾಯನಿಗೆ ಸಿಲೋನ್‌, ಪುಲಿಕಾಟ್‌, ಪೆಗು, ತೆನಾಸ್ಸೆರಿ ಮತ್ತು ಮಲಯದ ರಾಜರು ಕಪ್ಪಕಾಣಿಕೆಗಳನ್ನು ನೀಡುತ್ತಿದ್ದರು.

*ಬಹಮನಿ ಅಹಮದ್ಷಾನನ್ನು ಬಿಜಾಪುರದವರೆಗೆ ಹಿಮ್ಮೆಟ್ಟಿಸಿ ಮುದಗಲ್ಮತ್ತು ಬಂಕಾಪುರಗಳನ್ನು ವಶಪಡಿಸಿಕೊಂಡನು.


3. ಕೃಷ್ಣದೇವರಾಯನು ಅಧಿಕಾರಕ್ಕೆ ಬಂದಾಗ ಎದುರಿಸಿದ ಸಮಸ್ಯೆಗಳನ್ನು ತಿಳಿಸಿ.

ಉತ್ತರ: ಕೃಷ್ಣದೇವರಾಯ ಪಟ್ಟಕ್ಕೆ ಬಂದಾಗ ರಾಜ್ಯದ ಒಳ ಹಾಗೂ ಹೊರಗೆ ಜಟಿಲವಾದ ಸಮಸ್ಯೆಗಳಿದ್ದವು.

*ಹೊಸ ಜಲಮಾರ್ಗಗಳ ಮೂಲಕ ಆಗಮಿಸಿದ ಐರೋಪ್ಯರು ಇಲ್ಲಿ ನೆಲೆಗಳನ್ನು ಸ್ಥಾಪಿಸಲು ಆರಂಭಿಸಿದರು.

*ಬಹಮನಿ ರಾಜ್ಯ ಐದು ಷಾಹಿ ರಾಜ್ಯಗಳು ಸುಲ್ತಾನರಾಗಿ ಹೊಸ ರೂಪ ಪಡೆದುಕೊಂಡು ಕೃಷ್ಣದೇವರಾಯನ ವಿರುದ್ಧ ಕದನಕ್ಕಿಳಿದರು.

*ಜೊತೆಗೆ ಉಮ್ಮತ್ತೂರು ಹಾಗೂ ಒರಿಸ್ಸಾದ ಅರಸರು ವಿಜಯನಗರದ ಮೇಲೆ ಹಗೆತನವನ್ನು ಸಾಧಿಸುತ್ತಲೇ ಇದ್ದರು.


4. ಅರ್ಥವ್ಯವಸ್ಥೆ ಮತ್ತು ಸಮಾಜಕ್ಕೆ ವಿಜಯನಗರದ ಕೊಡುಗೆಗಳೇನು?

ಉತ್ತರ: ಅರ್ಥವ್ಯವಸ್ಥೆ:

*ವಿಜಯನಗರವು ಆರ್ಥಿಕವಾಗಿ ಸಮೃದ್ಧವಾಗಿತ್ತು.

*ಭೂ ಕಂದಾಯ ರಾಜ್ಯದ ಆದಾಯದ ಪ್ರಮುಖ ಮೂಲವಾಗಿತ್ತು.

*ಕೃಷಿಕರು ಸಾಮಾನ್ಯವಾಗಿ ತಮ್ಮ ಉತ್ಪಾದನೆಯ ನಾಲ್ಕನೆಯ ಒಂದು ಭಾಗವನ್ನು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಕೊಡುತ್ತಿದ್ದರು.

*ವೃತ್ತಿ ತೆರಿಗೆ, ಮನೆ ಕಂದಾಯ, ದಾರಿ ಸುಂಕ, ಸಂತೆ ಸುಂಕ, ವಾಣಿಜ್ಯ ತೆರಿಗೆ, ಆಮದು ಮತ್ತು ರಫ್ತು ತೆರಿಗೆಗಳು, ಸಾಮಂತರಿಂದ ಬರುವ ಕಪ್ಪಕಾಣಿಕೆಗಳು ರಾಜ್ಯದ ಇತರ ಆದಾಯದ ಮೂಲಗಳಾಗಿದ್ದವು.

*ಕೃಷಿ ಅರ್ಥವ್ಯವಸ್ಥೆಯ ಬೆನ್ನೆಲುಬಾಗಿತ್ತು.

*ಇವರು ವರ್ಷದಲ್ಲಿ ಮುಂಗಾರು ಮತ್ತು ಹಿಂಗಾರು ಬೆಳೆಗಳನ್ನು ಬೆಳೆಯುತ್ತಿದ್ದರು.

*ಜೋಳ, ರಾಗಿ ಭತ್ತ, ಸಜ್ಜೆ, ಗೋಧಿ, ಅವರೆ, ಹೆಸರು, ಉದ್ದು, ತೊಗರಿ, ಎಳ್ಳು, ಶೇಂಗಾ, ಹತ್ತಿ, ಕಬ್ಬು ತೆಂಗು ಮುಖ್ಯ ಬೆಳೆಗಳಾಗಿದ್ದವು.

*ವಿಜಯನಗರದ ಅರಸರು ಬಾವಿ, ಕೆರೆ-ಕಾಲುವೆಗಳನ್ನು ಕಟ್ಟಿಸುವುದರ ಮೂಲಕ ಕೃಷಿ ನೀರಾವರಿಯನ್ನು ಉತ್ತೇಜಿಸಿದರು.

*ಇವರ ಕಾಲದಲ್ಲಿ ಗೇಣಿ, ಗುತ್ತಿಗೆ, ಸಿದ್ದಾಯ, ವಾರ ಮತ್ತು ಕಡಿ ಎಂಬ ಐದು ಬಗೆಯ ಹಿಡುವಳಿ ಪದ್ಧತಿಗಳಿದ್ದವು.

ಸಾಮಾಜಿಕ ವ್ಯವಸ್ಥೆ:-

*ಸಮಾಜವು ಚಾತುರ್ವರ್ಣ ವ್ಯವಸ್ಥೆಯ ಮೇಲೆ ರೂಪುಗೊಂಡಿತ್ತು.

*ಅನೇಕ ವೃತ್ತಿ ಆಧಾರಿತ ಜಾತಿ ವ್ಯವಸ್ಥೆ ಜಾರಿಯಲ್ಲಿತ್ತು.

*ಕುಶಲ ಕಲೆಗಾರರು, ಕಮ್ಮಾರರು, ಅಕ್ಕಸಾಲಿಗರು, ಕಂಚುಗಾರರು, ಬಡಗಿಗಳು, ನೇಕಾರರು, ಸಮಗಾರರು (ಚಮ್ಮಾರರು) ಅಧಿಕ ಸಂಖ್ಯೆಯಲ್ಲಿದ್ದರು.

*ಬಾಲ್ಯವಿವಾಹ, ಸಹಗಮನ ಮತ್ತು ದೇವದಾಸಿ ಪದ್ಧತಿಗಳು ರೂಢಿಯಲ್ಲಿದ್ದವು.

*ಏಕಪತ್ನಿತ್ವ ರೂಢಿಯಲ್ಲಿದ್ದರೂ, ದೊರೆಗಳು ಮತ್ತು ಶ್ರೀಮಂತರು ಬಹುಪತ್ನಿಯರನ್ನು ಹೊಂದಿರುತ್ತಿದ್ದರು.

*ವಿಜಯನಗರದಲ್ಲಿ ಸ್ತ್ರೀ ಜಟ್ಟಿಗಳು (ಕುಸ್ತಿಪಟುಗಳು), ಅರಮನೆ ಕಾವಲುಕಾರ್ತಿಯರು ಇದ್ದರು.

*ಹೋಳಿ, ದೀಪಾವಳಿ ಮತ್ತು ದಸರಾ ಹಬ್ಬಗಳನ್ನು ಸಾರ್ವಜನಿಕಾವಾಗಿ ಆಚರಿಸಲಾಗುತ್ತಿತ್ತು.

*ದಸರಾ ಹಬ್ಬವು ಹಂಪಿಯಲ್ಲಿ ರಾಜಾಶ್ರಯದಲ್ಲಿ ವೈಭವದಿಂದ ನಡೆಯುತ್ತಿತ್ತು.


5. ವಿಜಯನಗರ ಕಾಲದ ಕಲೆ ಮತ್ತು ವಾಸ್ತುಶಿಲ್ಪವನ್ನು ಕುರಿತು ಬರೆಯಿರಿ.

ಉತ್ತರ: ಇವರು ಕಾಲದಲ್ಲಿ ದೇವಾಲಯ, ಅರಮನೆ, ಕೋಟೆ, ಗೋಪುರ, ಮಹಾಮಂಟಪ, ಸಾರ್ವಜನಿಕ ಕಟ್ಟಡಗಳು, ಕೆರೆ ಕಟ್ಟೆ, ಕಾಲುವೆ, ಆಣೆಕಟ್ಟೆ ಮುಂತಾದವು ನಿರ್ಮಾಣವಾಗಿವೆ.

*ವಿಜಯನಗರದ ಅರಸರು, ಚಾಲುಕ್ಯ ಚೋಳ ಮತ್ತು ಹೊಯ್ಸಳ ವಾಸ್ತುಶೈಲಿಯ ಮಾದರಿಗಳನ್ನು ಮುಂದುವರೆಸಿದರು.

*ಇವರ ಶೈಲಿಯ ಪ್ರಧಾನ ಲಕ್ಷಣವೆಂದರೆ ಹಲವಾರು ಕಂಬಗಳ ಸಾಲುಗಳಿಂದ ಕೂಡಿದ ವಿಶಾಲ ಸಭಾ ಮಂಟಪ ಅಥವಾ ಕಲ್ಯಾಣ ಮಂಟಪಗಳು.

*ದೇವಾಲಯಗಳು ಎತ್ತರವಾದ ಗೋಪುರಗಳನ್ನು, (ರಾಯ ಗೋಪುರ) ಹೊಂದಿದ್ದು ಪತ್ರಾಕೃತಿಯ ಕಮಾನುಗಳನ್ನು ಮತ್ತು ಮಂಟಪಗಳನ್ನು ಹೊಂದಿವೆ.

*ಇವರ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯಗಳನ್ನು ಹಂಪೆ ಶೃಂಗೇರಿ, ತಿರುಪತಿ, ಕಂಚಿ, ಲೇಪಾಕ್ಷಿ, ಕಾರ್ಕಳ, ಮೂಡಬಿದ್ರಿ, ಭಟ್ಕಳ, ಚಿದಂಬರಂ, ಕಾಲಹಸ್ತಿ, ನಂದಿ ಶ್ರೀಶೈಲ, ಕೋಲಾರ ಮುಂತಾದ ಕಡೆಗಳಲ್ಲಿ ಕಾಣಬಹುದು.

*ವಿಜಯನಗರದಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯವೆಂದರೆ ಹಂಪಿಯ ವಿರೂಪಾಕ್ಷ ದೇವಾಲಯ.

*ವಿಶಾಲವಾದ ಪ್ರಾಂಗಣವನ್ನು ಹೊಂದಿರುವ ಇದು ಸೊಗಸಾದ ಕೆತ್ತನೆಯ ಕಂಬಗಳು, ಅಲಂಕೃತ ಚಾವಣಿಗಳನ್ನು ಹೊಂದಿದೆ.

*ಹಂಪಿಯಲ್ಲಿರುವ ವಿಜಯ ವಿಠಲ ದೇವಾಲಯವು ಶೃಂಗಾರಮಯ ಕಲಾತ್ಮಕ ಕೆಲಸಕ್ಕೆ ಹೆಸರಾಗಿದೆ.

*ಸಪ್ತಸ್ವರಗಳನ್ನು ಧ್ವನಿಸುವ ಕಂಬಗಳು, ವಿಶಾಲವಾದ ಕಲ್ಯಾಣಮಂಟಪಗಳು, ಕಲ್ಲಿನಲ್ಲಿ ಕೆತ್ತಿದ ರಥ ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿದೆ.

*ಕಮಲ್ಮಹಲ್‌, ಗಜಶಾಲೆ, ರಾಣಿ ಸ್ನಾನಗೃಹ ಇಂಡೋ-ಮುಸ್ಲಿಂ ಶೈಲಿಯ ಉತ್ತಮ ಕಟ್ಟಡಗಳಾಗಿವೆ.

*ಲಕ್ಷ್ಮೀನರಸಿಂಹ, ಕಡಲೆಕಾಳು ಗಣೇಶ, ಸಾಸಿವೆಕಾಳು ಗಣೇಶ, ಉದ್ಯಾನ ವೀರಭದ್ರನ ಶಿಲ್ಪಗಳು ಆಕರ್ಷಕವಾಗಿವೆ.


6. ಮಹಮ್ಮದ್ಗವಾನನು ಬಹಮನಿ ರಾಜ್ಯದಲ್ಲಿ ಉತ್ತಮ ಪ್ರಧಾನಮಂತ್ರಿ ಹೇಗೆ ಎಂದು ಪರಿಗಣಿಸುವಿರಿ.?

ಉತ್ತರ: ಮಹಮ್ಮದ್ಗವಾನನು ನಿಷ್ಠೆ, ನಿಸ್ವಾರ್ಥತೆಯಿಂದ ಆಳ್ವಿಕೆ ನಡೆಸಿದನು.

*ಪ್ರಧಾನ ಮಂತ್ರಿಯಾಗಿ ಬಹಮನಿ ರಾಜ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದನು.

*ಬಹಮನಿ ಸುಲ್ತಾನರಾದ ಹುಮಾಯೂನ್‌, ನಿಜಾಂಷಾ ಹಾಗೂ ಮೂರನೇ ಮಹಮ್ಮದ್ಷಾನ ಆಳ್ವಿಕೆಯ ಕಾಲದಲ್ಲಿ ಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದನು.

*ಇವನು ತನ್ನು ದಿಗ್ವಿಜಯಗಳು ಹಾಗೂ ಅಚ್ಚುಕಟ್ಟಾದ ಆಡಳಿತ ಕ್ರಮದಿಂದ ಬಹಮನಿ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದನು.

*ಗವಾನನು ಕೊಂಕಣ, ಗೋವ ಮತ್ತು ಬೆಳಗಾವಿಯನ್ನು ವಶಪಡಿಸಿಕೊಂಡನು.

*ಓರಿಸ್ಸಾದ ಮೇಲೆ ದಾಳಿ ಮಾಡಿ, ಅಲ್ಲಿಂದ ಕೊಂಡವೀಡು ಪ್ರದೇಶವನ್ನು ವಶಪಡಸಿಕೊಂಡನು.

*ಕಂಚಿಯ ಮೇಲೆ ದಾಳಿ ಮಾಡಿ ಅಪಾರ ಸಂಪತ್ತನ್ನು ಲೂಟಿ ಮಾಡಿದನು.


7. ಬಹಮನಿ ಸುಲ್ತಾನರ ಆಡಳಿತ, ಕಂದಾಯ ವ್ಯವಸ್ಥೆಯನ್ನು ತಿಳಿಸಿ.

ಉತ್ತರ: ಆಡಳಿತ ವ್ಯವಸ್ಥೆ:-

*ಆಡಳಿತದಲ್ಲಿ ಕೇಂದ್ರ, ಪ್ರಾಂತೀಯ ಹಾಗೂ ಗ್ರಾಮ ಆಡಳಿತವೆಂಬ ಮೂರು ಭಾಗಗಳಿದ್ದವು.

*ಇವುಗಳಲ್ಲಿ ಕಂದಾಯ ನ್ಯಾಯ ಮತ್ತು ಸೈನ್ಯ ಆಡಳಿತಗಳಿದ್ದವು.

*ಕೇಂದ್ರ ಸರ್ಕಾರದಲ್ಲಿ ಸುಲ್ತಾನನೇ ಆಡಳಿತದ ಮುಖ್ಯಸ್ಥನಾಗಿರುತ್ತಿದ್ದ.

*ಮಂತ್ರಿಮಂಡಲಕ್ಕೆ ʻಮಜ್ಲಿಸ್‌--ಇಲ್ವಿತ್ಎಂದರು ಕರೆಯುತ್ತಿದ್ದರು.

*ಉನ್ನತ ಅಧಿಕಾರಿಗಳು, ದಂಡನಾಯಕರು, ಉಲ್ಲೇಮರು, ಅಮೀರರು ಸುಲ್ತಾನನ ಆಪ್ತರು ಮತ್ತು ಸಂಬಂಧಿಗಳು ಆಗಿದ್ದರು.

*ಗವಾನನು ರಾಜ್ಯದಲ್ಲಿ ಹಿಂದೆ ಇದ್ದ ನಾಲ್ಕು ತರಫ್‌ (ಪ್ರಾಂತ)ಗಳನ್ನು ಎಂಟು ಘಟಕಗಳಾಗಿ ವಿಂಗಡಿಸಿದನು.

*ಹಾಗೆಯೆ ಪ್ರಾಂತಗಳನ್ನು 15 ಸರ್ಕಾರಗಳಾಗಿ ವಿಂಗಡಿಸಲಾಗಿತ್ತು.

*ಸುಭೇದಾರ ಎಂಬ ಅಧಿಕಾರಿಯು ಸರ್ಕಾರದಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿದ್ದನು.

*ಸರ್ಕಾರಗಳನ್ನು ಪರಗಣಗಳಾಗಿ ವಿಂಗಡಿಸಲಾಗಿತ್ತು.

ಕೊತ್ವಾಲ್‌, ದೇಶಮುಖ ಮತ್ತು ದೇಸಾಯಿ ಎಂಬ ಅಧಿಕಾರಿಗಳು ಪರಗಣದ ಅಧಿಕಾರಿಗಳಾಗಿದ್ದರು.

*ಆಡಳಿತದ ಕೊನೆಯ ಘಟಕವಾದ ಗ್ರಾಮಗಳಲ್ಲಿ ಪಟೇಲ, ಕುಲಕರ್ಣಿ ಮತ್ತು ಕಾವಲುಗಾರ ಎಂಬ ಅಧಿಕಾರಿಗಳಿದ್ದರು.

*ಗ್ರಾಮಾಡಳಿತ ಘಟಕಗಳು ಸ್ವಾಯತ್ತ ಸಂಸ್ಥೆಯಾಗಿದ್ದವು.

ಕಂದಾಯ ವ್ಯವಸ್ಥೆ:-

*ಅಮೀರ್‌--ಜುಮ್ಲಾರು ಕಂದಾಯದ ಮುಖ್ಯಸ್ಥರಾಗಿದ್ದರು.

* ಭೂಕಂದಾಯವು ರಾಜ್ಯಾದಾಯದ ಮೂಲವಾಗಿತ್ತು. ಉತ್ಪತ್ತಿಯ 1/3 ರಿಂದ 1/2ನೇ ಭಾಗದಷ್ಟನ್ನು ಭೂಕಂದಾಯ ರೂಪದಲ್ಲಿ ವಸೂಲಿ ಮಾಡಲಾಗುತ್ತಿತ್ತು.

*ಮನೆ, ಗಣಿ, ಹೊಗೆಸೊಪ್ಪು, ಹುಲ್ಲುಗಾವಲು, ವ್ಯಾಪಾರ, ವೃತ್ತಿ ಸೇರಿದಂತೆ 50 ಬಗೆಯ ತೆರಿಗೆಗಳಿದ್ದವು.

*ತೆರಿಗೆಯಿಂದ ಬಂದ ಹಣವನ್ನು ಅರಮನೆ, ಯುದ್ಧ, ಅಂಗರಕ್ಷಕರು, ಕೋಟೆ ಮತ್ತು ಇತರ ಕಟ್ಟಡಗಳ ನಿರ್ಮಾಣಕ್ಕೆ ಬಳಸುತ್ತಿದ್ದರು.


8. ಬಹಮನಿ ಸುಲ್ತಾನರ ಕಾಲದ ಶಿಕ್ಷಣ, ಕಲೆ ಮತ್ತು ವಾಸ್ತುಶಿಲ್ಪವನ್ನು ವಿವರಿಸಿ.

ಉತ್ತರ: ಶಿಕ್ಷಣ:-

ಇವರ ಶೈಕ್ಷಣಿಕ ನೀತಿಯು ಇಸ್ಲಾಂ ಸಂಸ್ಕೃತಿಯನ್ನು ಬೆಳೆಸುವುದಾಗಿತ್ತು.

*ಮಕ್ತಬ ಎಂಬ ಶಾಲೆಗಳಿದ್ದವು.

*ಇವು ಮಸೀದಿಗಳ ನಿಯಂತ್ರಣದಲ್ಲಿದ್ದವು.

*ಮಕ್ತಬಗಳಲ್ಲಿ ಅಕ್ಷರ ಜ್ಞಾನ, ಮತ, ಕಾನೂನು, ಕಾವ್ಯ, ಅಲಂಕಾರಶಾಸ್ತ್ರಗಳನ್ನು ಬೋಧಿಸುತ್ತಿದ್ದರು.

*ಮದರಾಸಗಳು ಉನ್ನತ ಶಿಕ್ಷಣದ ಕೇಂದ್ರಗಳಾಗಿದ್ದವು.

*ಸ್ವತ: ವಿದ್ವಾಂಸನಾಗಿದ್ದ ಮಹಮ್ಮದ್ಗವಾನ್ಬೀದರನಲ್ಲಿ ಇಸ್ಲಾಂ ಮತ ಮತ್ತು ಕಾನೂನಿನ ಶಿಕ್ಷಣವನ್ನು ಪ್ರೋತ್ಸಾಹಿಸಲು ಮದರಸ (ಮಹಾವಿದ್ಯಾಲಯ)ವನ್ನು ಸ್ಥಾಪಿಸಿದನು.

ಕಲೆ ಮತ್ತು ವಸ್ತುಶಿಲ್ಪ:-

*ಸುಲ್ತಾನರು ಇಂಡೋ ಸಾರ್ಸನಿಕ್ಶೈಲಿಯ ವಾಸ್ತುಶಿಲ್ಪ ಬೆಳೆಸಿದರು.

* ಒಂದನೆಯ ಅಲಿ ಆದಿಲ್ಶಹನು ನಿರ್ಮಾಣ ಮಾಡಿದ ಜಾಮಿಯ ಮಸೀದಿಯು ಕಾಲದ ಒಂದು ಮುಖ್ಯ ಸ್ಮಾರಕವಾಗಿದೆ.

* ಇಬ್ರಾಹಿಂ ರೋಜಾ, ಗೋಲಗುಂಬಜ್‌, ಗಗನ್ಮಹಲ್‌, ಅಸಾರ್ಮಹಲ್ಗಳು ಇವರ ಪ್ರಮುಖ ಸ್ಮಾರಕಗಳಾಗಿವೆ.


 9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon