ದೇಶದ ರಕ್ಷಣೆ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ರಾಜ್ಯಶಾಸ್ತ್ರ ಪ್ರಶ್ನೋತ್ತರಗಳು |

ಅಧ್ಯಾಯ 6. ದೇಶದ ರಕ್ಷಣೆ

I ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

1. ನಮ್ಮ ರಕ್ಷಣಾ ನೀತಿಯ ಮುಖ್ಯ ಗುರಿ  _____ ಕಾಪಾಡುವುದಾಗಿದೆ.

ಉತ್ತರ: ದೇಶದ ಸಾರ್ವಭೌಮ್ಯತೆಯನ್ನು

2. ನಮ್ಮ ಮೂರು ಸೇನಾಪಡೆಗಳ ಸರ್ವೋಚ್ಚ ಪ್ರಧಾನ ದಂಡನಾಯಕರು _____

ಉತ್ತರ: ರಾಷ್ಟ್ರಪತಿ

3. ಭೂ ಸೇನಾ ಮುಖ್ಯಸ್ಥರನ್ನು ____ ಎಂದು ಕರೆಯಲಾಗುತ್ತದೆ.

ಉತ್ತರ: ಮಹಾದಂಡನಾಯಕರು

4. ರಕ್ಷಣಾ ಸಚಿವಾಲಯದ ಪ್ರಧಾನ ಕಛೇರಿ_____

ಉತ್ತರ: ದೆಹಲಿ

5. ಹಿಂದೂಸ್ಥಾನದ ಹಡಗು ಕಾರ್ಖಾನೆ ____ ನಲ್ಲಿದೆ.

ಉತ್ತರ: ವಿಶಾಖಪಟ್ಟಣ

6. ಗಡಿ ಭದ್ರತಾ ಪಡೆಯ ತರಬೇತಿ ಕೇಂದ್ರ _____ ದಲ್ಲಿದೆ.

ಉತ್ತರ: ಯಲಹಂಕಾ

7. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ____ ರಲ್ಲಿ ಸ್ಥಾಪನೆಯಾಯಿತು.

ಉತ್ತರ: 1920

II ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರ ಬರೆಯಿರಿ.

1. ಕಾರವಾರದ ಬಳಿ ಇರುವ ನೌಕಾ ನೆಲೆಯನ್ನು ಏನೆಂದು ಕರೆಯಲಾಗುತ್ತದೆ ?

ಉತ್ತರ: ಕಾರವಾರದ ಬಳಿ ಇರುವ ನೌಕಾ ನೆಲೆಯನ್ನುಸೀಬರ್ಡ್ನೌಕಾ ನೆಲೆಯೆಂದು ಕರೆಯಲಾಗುತ್ತದೆ.

2. ನಮ್ಮ ರಕ್ಷಣಾ ಸಚಿವಾಲಯದ ನಾಲ್ಕು ಇಲಾಖೆಗಳಾವುವು ?

ಉತ್ತರ: ನಮ್ಮ ರಕ್ಷಣಾ ಸಚಿವಾಲಯವು 4 ಇಲಾಖೆಗಳನ್ನು (ವಿಭಾಗಗಳು) ಒಳಗೊಂಡಿದೆ.

1) ರಕ್ಷಣಾ ವಿಭಾಗ

2) ರಕ್ಷಣಾ ಉತ್ಪಾದನಾ ವಿಭಾಗ

3) ರಕ್ಷಣಾ ಸಂಶೋಧನಾ & ಅಭಿವೃದ್ಧಿ ವಿಭಾಗ

4) ನಿವೃತ್ತಿ ಸೇನಾ ಕಲ್ಯಾಣ ವಿಭಾಗ

3. ಭಾರತದ ಭೂಸೇನಾ ರಚನೆಯನ್ನು ವಿವರಿಸಿ.

ಉತ್ತರ: ಭೂಸೇನೆಯ ಪ್ರಧಾನ ಕಛೇರಿ ದೆಹಲಿಯಲ್ಲಿದೆ.

ಇದರ ಮುಖ್ಯಸ್ಥರನ್ನು ಮಹಾ ದಂಡನಾಯಕರು ಎಂದು ಕರೆಯುತ್ತಾರೆ.

ಇವರಿಗೆ ಉಪ ಮಹಾದಂಡನಾಯಕರು, ಸೇನಾಪತಿ, ಸೇನಾ ಪ್ರಧಾನ ಅಧಿಕಾರಿ, ಮಾಸ್ಟರ್ ಜನರಲ್, ಮಿಲಿಟರಿ ಕಾರ್ಯದರ್ಶಿ, ಮಿಲಿಟರಿ ಇಂಜಿನಿಯರ್ ಮುಂತಾದವರು ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ.

ಭೂಸೇನೆಯು ಪದಾತಿದಳ (ಸೈನಿಕ), ಅಶ್ವದಳ (ಕ್ಯಾವಲ್ರಿ), ಟ್ಯಾಂಕುಗಳ ದಳ, ಫಿರಂಗಿ ದಳಗಳನ್ನು ಒಳಗೊಂಡಿದೆ.

ಅಲ್ಲದೆ ಸರಬರಾಜು ಮತ್ತು ಇಂಜಿನಿಯರಿಂಗ್ ಘಟಕವೂ ಇದರಲ್ಲಿದೆ.

ಆಡಳಿತದ ದೃಷ್ಟಿಯಿಂದ ಭಾರತೀಯ ಭೂಸೇನೆಯನ್ನು ಏಳು ಕಮಾಂಡುಗಳಾಗಿ ರೂಪಿಸಿದೆ.

4. ಭಾರತೀಯ ಭೂಸೇನೆ ಕಮಾಂಡ್ ಗಳಾವುವು ?

ಉತ್ತರ: ಭಾರತೀಯ ಭೂ ಸೇನೆಯು 7 ಕಮಾಂಡುಗಳನ್ನು ಹೊಂದಿದೆ. ಅವುಗಳೆಂದರೆ:

1) ಪಶ್ಚಿಮ ಕಮಾಂಡ್ಚಾಂದಿಮಂದಿರ್ (ಚಂಡೀಗಡ)

2) ಪೂರ್ವ ಕಮಾಂಡ್ಕೋಲ್ಕತ್ತಾ (ಪಶ್ಚಿಮಬಂಗಾಳ)

3) ಉತ್ತರ ಕಮಾಂಡ್ಉದಂಪುರ್ (ಕಾಶ್ಮೀರ)

4) ದಕ್ಷಿಣ ಕಮಾಂಡ್ಪುಣೆ (ಮಹಾರಾಷ್ಟ್ರ)

5) ಕೇಂದ್ರ ಕಮಾಂಡ್ಲಕ್ನೋ (ಉತ್ತರಪ್ರದೇಶ)

6) ತರಬೇತಿ ಕಮಾಂಡ್ಮಾವ್ (ಮಧ್ಯಪ್ರದೇಶ)

7) ವಾಯುವ್ಯ ಕಮಾಂಡ್ಜೈಪುರ (ರಾಜಸ್ತಾನ)

5. ಭಾರತೀಯ ವಾಯುದಳದ ಕಾರ್ಯಗಳನ್ನು ವಿವಿರಿಸಿ.

ಉತ್ತರ: ಭಾರತೀಯ ವಾಯುದಳವು ಯುದ್ಧ ಮತ್ತು ಶಾಂತಿ ಕಾಲದಲ್ಲಿ ದೇಶಕ್ಕೆ ಧೈರ್ಯದಿಂದ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಸಮಗ್ರ ರಾಷ್ಟ್ರೀಯ ರಕ್ಷಣೆ, ಭದ್ರತೆ ಹಾಗೂ ಸ್ಥಿರತೆಯನ್ನು ಕಾಪಾಡುವಲ್ಲಿ ಯಶಸ್ಸು ಸಾಧಿಸಿದೆ.

6. ಸೇನಾ ನೇಮಕಾತಿಗೆ ಇರಬೇಕಾದ ಅರ್ಯತೆಗಳಾವುವು ?

ಉತ್ತರ: ಭಾರತದ ಪ್ರತಿಯೊಬ್ಬ ಪ್ರಜೆಯೂ ಸ್ವ ಇಚ್ಚೆಯಿಂದ ಅವನ/ಅವಳ ಯಾವುದೇ ಜಾತಿ, ಧರ್ಮ, ವರ್ಗ ಮತ್ತು ಸಮುದಾಯಕ್ಕೆ ಸೇರಿದವರು ಎಂಬ ತಾರತಮ್ಯವಿಲ್ಲದೆ ಸೇರಬಹುದು.

ಆದರೆ ಸರ್ಕಾರ ನಿಗದಿಪಡಿಸಿದ ಕೆಲವು ದೈಹಿಕ, ಮಾನಸಿಕ ಆರೋಗ್ಯ, ಶೈಕ್ಷಣಿಕವಾದ ಸಾಮಾನ್ಯ ಅರ್ಹತೆ ಮತ್ತು ಹುದ್ದೆಗೆ ಬೇಕಾದ ತಾಂತ್ರಿಕ ಅರ್ಹತೆಯಂತಹ ವಿಶೇಷ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.

7. ಎನ್.ಸಿ.ಸಿ. ಗುರಿಗಳೇನು ? ಅದರ ಸೌಲಭ್ಯಗಳಾವುವು ?

ಉತ್ತರ: ಇದರ ಮುಖ್ಯ ಗುರಿ ವೈಯಕ್ತಿಕ ಗುಣಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು, ನಾಯಕತ್ವ ಗುಣ ಬೆಳೆಸಿಕೊಳ್ಳುವುದು, ಗೆಳೆತನ ಬೆಳೆಸಿಕೊಳ್ಳುವುದು ಹಾಗೂ ಆದರ್ಶ ಸೇವಾ ಮನೋಭಾವನೆಯನ್ನು ಬೆಳಸಿಕೊಳ್ಳುವುದಾಗಿದೆ.

ಇದು ಶಿಸ್ತುಬದ್ಧವಾದ ತರಬೇತಿ ಪಡೆದ ಮಾನವ ಪಡೆಯನ್ನು ಹೊಂದಿದ್ದು, ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾಷ್ಟ್ರಕ್ಕೆ ಸಹಾಯ ಮಾಡುತ್ತದೆ.

ಎನ್.ಸಿ.ಸಿ.ಯಲ್ಲಿ ಎರಡು ಘಟಕಗಳಿವೆ ಅವುಗಳೆಂದರೆ:

1) ಸೀನಿಯರ್ಕಾಲೇಜು ವಿದ್ಯಾರ್ಥಿಗಳಿಗೆ

2) ಜೂನಿಯರ್ಶಾಲಾ ವಿದ್ಯಾರ್ಥಿಗಳಿಗೆ

ಕೆಡೆಟ್ ಗಳಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಅವುಗಳೆಂದರೆ :-

      ಎನ್.ಸಿ.ಸಿ. ತರಬೇತಿ ಪಡೆದವರಿಗೆ ರಕ್ಷಣಾ ಸೇನೆಗಳಿಗೆ ಸೇರಲು ವಿಶೇಷ ಅವಕಾಶ.

      ತರಬೇತಿಯಲ್ಲಿ ವಿಶಿಷ್ಠ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ವೃತ್ತಿಪರ ಕಾಲೇಜುಗಳಲ್ಲಿ ಮೀಸಲಾತಿ ಸೌಲಭ್ಯ.

      ತರಬೇತಿಯಲ್ಲಿ ಆಯುಧ ಶಿಕ್ಷಣ ನೀಡುವುದು.

      ದೂರ ನಡಿಗೆ (ಹೈಕಿಂಗ್)

      ಸಾಹಸ ಪ್ರಯಾಣ (ಟ್ರೆಕಿಂಗ್)

      ಜಾರಾಟ (ಗ್ಲೈಡಿಂಗ್)

      ಪರ್ವತಾರೋಹಣ (ಸ್ಕೇಲಿಂಗ್)

ಇವುಗಳು ಎನ್.ಸಿ.ಸಿ. ಗುರಿ ಮತ್ತು ಸೌಲಭ್ಯಗಳಾಗಿವೆ.

8. ಭಾರತದ ರೆಡ್ ಕ್ರಾಸ್ ಸಂಸ್ಥೆಯ ಸಂಘಟನೆಯನ್ನು ವಿವರಿಸಿ.

ಉತ್ತರ: ರೆಡ್ ಕ್ರಾಸ್ ಸಂಸ್ಥೆಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದೆ.

1920ರಲ್ಲಿ ಭಾರತದ ಸಂಸತ್ತು ಕಾಯಿದೆಯೊಂದನ್ನು ಪಾಸು ಮಾಡುವುದರ ಮೂಲಕ ಅಸ್ತಿತ್ವಕ್ಕೆ ತಂದಿತು.

ಇದರ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ.

ಭಾರತದ ರೆಡ್ ಕ್ರಾಸ್ ಸಂಸ್ಥೆಯು ಮಾನವೀಯ ಸ್ವಯಂ ಸಂಘಟನೆಯಾಗಿದ್ದು, ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 700 ಶಾಖೆಗಳನ್ನು ಒಳಗೊಂಡಿದೆ.

ಭಾರತದ ರಾಷ್ಟ್ರಪತಿಗಳು ಇದರ ಅಧ್ಯಕ್ಷರಾಗಿದ್ದಾರೆ.

ರಾಜ್ಯಶಾಖೆಗೆ ರಾಜ್ಯಪಾಲರು ಅಧ್ಯಕ್ಷರಾಗಿರುತ್ತಾರೆ.

ಅಲ್ಲದೆ ಒಬ್ಬರು ಸೆಕ್ರಟರಿ ಜನರಲ್ ಮುಖ್ಯ ಕಾರ್ಯನಿರ್ವಾಹಕರಾಗಿರುತ್ತಾರೆ.

ಸಂಸ್ಥೆಯು 19 ಸದಸ್ಯರನ್ನು ಒಳಗೊಂಡ ಆಡಳಿತ ಮಂಡಳಿಯನ್ನು ಹೊಂದಿದ್ದು, ಕಾರ್ಯಾಧ್ಯಕ್ಷ ಮತ್ತು 6 ಮಂದಿ ಸದಸ್ಯರನ್ನು ರಾಷ್ಟ್ರಪತಿಗಳು ನಾಮಕರಣ ಮಾಡಿದರೆ ಉಳಿದ 12 ಸದಸ್ಯರನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಶಾಖೆಗಳು ಮತದಾನದ ಮೂಲಕ ಚುನಾಯಿಸುತ್ತಾರೆ.

ಸಂಘಟನೆಯು ರಾಷ್ಟ್ರದಲ್ಲಿನ ಆಪತ್ತು ಮತ್ತು ತುರ್ತು ಪರಿಸ್ಥಿತಿಯಂತಹ ಸಂದರ್ಭದಲ್ಲಿ ಜನರಿಗೆ ನೆರವು ನೀಡುತ್ತದೆ.

ಇದು ಯಾವುದೇ ಭೇದಭಾವವಿಲ್ಲದೆ ಯುದ್ಧಭೂಮಿಯಲ್ಲಿನ ಗಾಯಾಳುಗಳಿಗೆ, ಅನಾರೋಗ್ಯಪೀಡಿತರಿಗೆ ಸೇವೆ ಸಲ್ಲಿಸುತ್ತದೆ.

ಸಂಸ್ಥೆಯು 7 ಮೂಲಭೂತ ತತ್ವಗಳನ್ನು ಹೊಂದಿದೆ.

ಅವುಗಳೆಂದರೆ :-

1) ಮಾನವೀಯತೆ

2) ನಿಷ್ಪಕ್ಷಪಾತ

3) ತಾಟಸ್ಥ್ಯ

4) ಸ್ವಾತಂತ್ರ್ಯ

5) ಸ್ವಯಂಸೇವೆ

6) ಏಕತೆ ಮತ್ತು

7) ವಿಶ್ವವ್ಯಾಪಕತೆ.

 9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon