ರಾಷ್ಟ್ರೀಯ ಭಾವೈಕ್ಯತೆ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ರಾಜ್ಯಶಾಸ್ತ್ರ ಪ್ರಶ್ನೋತ್ತರಗಳು |

ಅಧ್ಯಾಯ 7. ರಾಷ್ಟ್ರೀಯ ಭಾವೈಕ್ಯತೆ

I ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

1. ಭಾರತ ಒಂದು ಜಾತ್ಯಾತೀತ ರಾಷ್ಟ್ರವಾಗಿದ್ದು  _____ ವಿರೋಧಿ ರಾಷ್ಟ್ರವಲ್ಲ.

ಉತ್ತರ: ಯಾವುದೇ ಧರ್ಮ

2. ಕೋಮುವಾದವು ನಮ್ಮ  _____ ಗೆ ಒಂದು ದೊಡ್ಡ ಅಪಾಯವಾಗಿದೆ.

ಉತ್ತರ: ರಾಷ್ಟ್ರೀಯ ಸಮಗ್ರತೆ

3. ಗಣರಾಜ್ಯೋತ್ಸವವು _____ ಹಬ್ಬಗಳಲ್ಲಿ ಒಂದಾಗಿದೆ.

ಉತ್ತರ: ರಾಷ್ಟ್ರೀಯ

4. ಭಾರತವು ರಾಷ್ಟ್ರೀಯ ಭಾಷೆಗಳನ್ನಾಗಿ ಅಂಗೀಕರಿಸಿರುವ ಭಾಷೆಗಳ ಸಂಖ್ಯೆ  _____

ಉತ್ತರ: 22

5. ನಮ್ಮ ರಾಷ್ಟ್ರೀಯ ಪ್ರಾಣಿ _____

ಉತ್ತರ: ಹುಲಿ

II ಕೆಳಗಿನ ಪ್ರಶ್ನೆಗಳಿಗೆ ಸಹಪಾಠಿಗಳ ಜೊತೆ ಚರ್ಚಿಸಿ ಉತ್ತರಿಸಿ.

1. ರಾಷ್ಟ್ರೀಯತೆ ಎಂದರೇನು ?

ಉತ್ತರ: ತಾವು ವಾಸಿಸುವ ನೆಲವನ್ನು ಮಾತೃಭೂಮಿ ಎಂದು ತಿಳಿಯುವ ಜನಸಮೂಹ, ಜನ ಸಮೂಹದಲ್ಲಿ ಪರಸ್ಪರ ಸೋದರತೆಯ ಭಾವನೆ ಮತ್ತು ರಾಷ್ಟ್ರದ ಸುಖ-ದುಃಖಗಳಲ್ಲಿ ಸಮಾನ ಭಾಗಿತ್ವ, ಇಂತಹ ಜನರನ್ನು ರಾಷ್ಟ್ರೀಯರು ಮತ್ತು ಭಾವನೆಯನ್ನು ರಾಷ್ಟ್ರೀಯತೆ ಎನ್ನುತ್ತಾರೆ.

2. ರಾಷ್ಟ್ರೀಯ ಐಕ್ಯತೆ ಎಂದರೇನು ?

ಉತ್ತರ: ಒಂದು ರಾಷ್ಟ್ರದ ಜನರು ನಾವೆಲ್ಲಾ ಒಂದೇ ಎನ್ನುವ ಭಾವನೆಯೇ ರಾಷ್ಟ್ರೀಯ ಭಾವೈಕ್ಯತೆ.

ಇದರ ಅರ್ಥ ವಿವಿಧ ಜಾತಿ, ಧರ್ಮ, ಪ್ರಾದೇಶಿಕತೆ ಮತ್ತು ವಿವಿಧ ಭಾಷೆಗಳನ್ನು ಮಾತನಾಡುವ ಜನರು ನಾವೆಲ್ಲಾ ಒಂದೇ ಎಂದು ಗುರುತಿಸಿಕೊಳ್ಳುವುದು.

ರೀತಿಯ ಐಕ್ಯತೆಯು ಶಕ್ತಿಯುತವಾದ ರಾಷ್ಟ್ರವನ್ನು ನಿರ್ಮಿಸಲು ಬಹಳ ಮುಖ್ಯವಾಗಿದೆ.

3. ವೈವಿಧ್ಯತೆಯಲ್ಲಿ ಏಕತೆಯನ್ನು ಮೂಡಿಸುವ ಅಂಶಗಳಾವುವು ?

ಉತ್ತರ: ವೈವಿಧ್ಯತೆಯಲ್ಲಿ ಏಕತೆಯನ್ನು ಮೂಡಿಸುವ ಅಂಶಗಳು ರೀತಿಯಾಗಿವೆ.

ಭೌಗೋಳಿಕ ಐಕ್ಯತೆ

ರಾಜಕೀಯ ಐಕ್ಯತೆ

ಧಾರ್ಮಿಕ ಐಕ್ಯತೆ

ಭಾಷಾ ಐಕ್ಯತೆ

ಸಾಂಸ್ಕೃತಿಕ ಐಕ್ಯತೆ

4. ರಾಷ್ಟ್ರೀಯ ಐಕ್ಯತೆಯನ್ನು ಪ್ರೋತ್ಸಾಹಿಸುವ ಅಂಶಗಳಾವುವು?

ಉತ್ತರ: ರಾಷ್ಟ್ರೀಯ ಐಕ್ಯತೆಯನ್ನು ವೃದ್ಧಿಸುವ (ಪ್ರೋತ್ಸಾಹಿಸುವ) ಅಂಶಗಳು ರೀತಿಯಾಗಿವೆ:

ಜಾತ್ಯತೀತತೆ (ಮತನಿರಪೇಕ್ಷೆ)

ಪ್ರಜಾಪ್ರಭುತ್ವ

ರಾಷ್ಟ್ರೀಯ ಹಬ್ಬಗಳು

ನಮ್ಮ ರಾಷ್ಟ್ರೀಯ ಲಾಂಛನಗಳು

ಪರಸ್ಪರ ಅನ್ಯೋನ್ಯತೆ

5. ರಾಷ್ಟ್ರೀಯ ಐಕ್ಯತೆಗೆ ಇರುವ ಅಡೆತಡೆಗಳನ್ನು ನಿವಾರಿಸಲು ನಿಮ್ಮ ಸಲಹೆಗಳೇನು ?

ಉತ್ತರ: ನಮ್ಮ ದೇಶದಲ್ಲಿ ವಿವಿಧ ಮತ ವರ್ಗಗಳು, ಜನಾಂಗದವರಿದ್ದು

ಪ್ರತಿಯೊಂದು ವರ್ಗವು ಇನ್ನೊಂದು ವರ್ಗವನ್ನು, ಮತ ಬೋಧಕರನ್ನು ಗೌರವಿಸಬೇಕು, ಪ್ರೀತಿಸಬೇಕು.

ಪ್ರತಿಯೊಂದು ಧರ್ಮದ ಪವಿತ್ರ ದಿನಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಪರಸ್ಪರ ಸಹಕಾರ, ಸಹಾಯ ಮತ್ತು ಅಭಿನಂದನೆಗಳಿರಬೇಕು.

ಯಾವುದೇ ಒಂದು ಮತೀಯ ಗುಂಪು ಇತರೆ ಮತದ ಗುಂಪಿನ ಬಗ್ಗೆ ಉದಾಸೀನತೆ ಹೊಂದಿರಬಾರದು.

ವೃತ್ತಿ ಶಿಕ್ಷಣವನ್ನು ಹೆಚ್ಚು ಹೆಚ್ಚು ನೀಡಬೇಕು.

ಶಾಲೆ ಬಿಡುವ ಮಕ್ಕಳನ್ನು ನಿಯಂತ್ರಿಸಬೇಕು.

ಹೀಗೆ ಜವಾಬ್ದಾರಿಯುತ ಪ್ರಜೆಗಳಾದ ನಾವು ಇತರೆ ಭಾಷೆಗಳಿಗೆ, ಸಂಸ್ಕೃತಿಗೆ, ಮತಗಳಿಗೆ ಸೂಕ್ತ ಗೌರವ ಕೊಡಬೇಕು.

ಆಗಲೇ ರಾಷ್ಟ್ರದಲ್ಲಿ ನೈಜ ಸಮಗ್ರತೆ ಮೂಡುವುದು.

 9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon