ಮೊಘಲರು ಮತ್ತು ಮರಾಠರು | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಇತಿಹಾಸ ಪ್ರಶ್ನೋತ್ತರಗಳು |

ಅಧ್ಯಾಯ 5 ಮೊಘಲರು ಮತ್ತು ಮರಾಠರು

I. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1. ಮೊಘಲ್ ಸಾಮ್ರಾಜ್ಯ ಸ್ಥಾಪಕ ___

ಉತ್ತರ : ಬಾಬರ್

2. ಮೊಘಲರಲ್ಲಿ ಪ್ರಸಿದ್ಧ ಸುಲ್ತಾನ ___

ಉತ್ತರ : ಅಕ್ಬರ್

3. ಆಗ್ರಾದಲ್ಲಿ ತಾಜ್ ಮಹಲ್ ಕಟ್ಟಿಸಿದವನು ____

ಉತ್ತರ : ಷಾಜಹಾನ್

4. ದಿನ್--ಇಲಾಹಿ ಹೊಸ ಪಂಥ ಸ್ಥಾಪಿಸಿದ ಮೊಘಲ್ ಸುಲ್ತಾನ ___

ಉತ್ತರ : ಅಕ್ಬರ್

5. ಶಿವಾಜಿಯ ತಾಯಿ ಹೆಸರು __

ಉತ್ತರ : ಜೀಜಾಬಾಯಿ


II. ಕೆಳಗಿನ ಪ್ರಶ್ನೆಗಳಿಗೆ ಗುಂಪಿನಲ್ಲಿ ಚರ್ಚಿಸಿ ಉತ್ತರ ಬರೆಯಿರಿ.

1. ಬಾಬರನ ಸೈನಿಕ ಸಾಧನೆ ವಿವರಿಸಿರಿ.

ಉತ್ತರ : ಬಾಬರನ ಸೈನಿಕ ಸಾಧನೆಗಳು ರೀತಿಯಾಗಿವೆ.

ಬಾಬರನು ಭಾರತದ ಮೇಲೆ ಐದು ಬಾರಿ ದಾಳಿ ಮಾಡಿದನು.

ಸಾ. . 1526ರಲ್ಲಿ ನಡೆದ ಮೊದಲ ಪಾಣಿಪತ್ ಯುದ್ಧದಲ್ಲಿ ದೆಹಲಿ ಸುಲ್ತಾನ ನಾಗಿದ್ದ ಇಬ್ರಾಹಿಂ ಲೋದಿ ಹಾಗೂ ಆತನ ಆಫ್ಘನ್ ಬೆಂಬಲಿಗರನ್ನು ಸೋಲಿಸಿ ಮೊಗಲರ ಆಳ್ವಿಕೆಗೆ ಅಡಿಪಾಯ ಹಾಕಿದನು.

ದೆಹಲಿ ಈತನ ರಾಜಧಾನಿಯಾಯಿತು.

ಇವನು ತನ್ನ ನಾಲ್ಕು ವರ್ಷದ ಅವಧಿಯಲ್ಲಿ ಮೇವಾರದ ರಾಣಾ ಸಂಗ್ರಾಮ್ ಸಿಂಗ್, ರಜಪೂತ ದೊರೆ ಚಾಂದೇರಿ ಮೇದಿನ ರಾಯ ಹಾಗೂ ಇಬ್ರಾಹಿಂ ಲೋಧಿಯ ಸೋದರನಾದ ಮಹಮ್ಮದ್ ಲುದಿಯನ್ ಸೋಲಿಸಿದ.

ಬಾಬರನು ಪಾಣಿಪತ್ ಕಣ್ವ ಮತ್ತು ಗೋಗ್ರಾ ಎಂಬ ಮೂರು ಯುದ್ಧಗಳನ್ನು ಗೆಲ್ಲುವ ಮೂಲಕ ಉತ್ತರ ಭಾರತದ ವಿಶಾಲವಾದ ಪ್ರದೇಶದಲ್ಲಿ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದನು.


2. ಶೇರ್ ಷಾನ ಆಡಳಿತ ಪದ್ಧತಿಯ ಮುಖ್ಯ ಗುಣಲಕ್ಷಣಗಳನ್ನು ವಿವರಿಸಿ.

ಉತ್ತರ : ಶೇರ್ ಷಾ ಆಡಳಿತ ವ್ಯವಸ್ಥೆ.

ಶೇರ್ ಷಾ ನು ಒಟ್ಟು ಆಡಳಿತದ ಮುಖ್ಯಸ್ಥ ನಾಗಿದ್ದನು.

ಮಂತ್ರಿಮಂಡಲದ ಸಹಾಯದಿಂದ ದಕ್ಷ ಆಡಳಿತವನ್ನು ನಡೆಸುತ್ತಿದ್ದನು.

ಇಡೀ ಸಾಮ್ರಾಜ್ಯವನ್ನು ಸರ್ಕಾರ (ಪ್ರಾಂತ್ಯ), ಪರಗಣಗಳನ್ನಾಗಿ ವಿಂಗಡಿಸಿದ್ದನು.

ಇವನ ಸೈನ್ಯದಲ್ಲಿ ಕಾಲ್ದಳ, ಅಶ್ವದಳ, ಫಿರಂಗಿದಳ ಹಾಗೂ ಗಜದಳಗಳಿದ್ದವು.

ಇವುಗಳಲ್ಲಿ ಅಶ್ವದಳ ಹೆಚ್ಚು ಪ್ರಬಲವಾಗಿತ್ತು.

ಸೈನ್ಯದಲ್ಲಿ ಶಿಸ್ತು ಮೂಡಿಸುವ ಸಲುವಾಗಿ ಸೈನಿಕರ ಹಾಜರಾತಿ ಪುಸ್ತಕ, ಕುದುರೆಗಳಿಗೆ ಮುದ್ರೆ (ದಾಗ್) ಹಾಕುವ ಪದ್ಧತಿಯನ್ನು ಜಾರಿಗೆ ತಂದನು.

ಸೈನ್ಯವನ್ನು ಅನೇಕ ಪೌಜ ಗಳನ್ನಾಗಿ ವಿಂಗಡಿಸಿ ಅವುಗಳ ಮೇಲ್ವಿಚಾರಣೆಗೆ ಪೌಜುದಾರ (ದಳಪತಿ)ಯನ್ನು ನೇಮಿಸಿದನು.

ಸೈನ್ಯ ಸಂಘಟನೆ ಯುದ್ಧ ಸಾಮಗ್ರಿಗಳು ಮತ್ತು ಸೈನಿಕರ ಶಿಸ್ತಿನ ವಿಷಯದಲ್ಲಿ ಶೇರ್ ಷಾ  ಸ್ವತಹಃ ಆಸಕ್ತಿ ವಹಿಸಿದ್ದನು.

ಸಾಮ್ರಾಜ್ಯದಲ್ಲಿ ಬೇಸಾಯಕ್ಕೆ ಯೋಗ್ಯವಾದ ಭೂಮಿಯನ್ನು ಅಳತೆ ಮಾಡಿಸಿ ಕಂದಾಯ ನಿಗದಿ ಮಾಡುತ್ತಿದ್ದನು.

ಭೂಮಿಯನ್ನು ಅದರ ಫಲವತ್ತತೆಗೆ ಅನುಗುಣವಾಗಿ ಉತ್ತಮ, ಮಧ್ಯಮ ಹಾಗೂ ಕನಿಷ್ಠ ಎಂದು ಮೂರು ಭಾಗಗಳನ್ನಾಗಿ ವಿಂಗಡಿಸಿದನು.

ರೈತರು ತಮ್ಮ ಬೆಳೆಯ ಉತ್ಪಾದನೆಯ 1/3 ಭಾಗವನ್ನು ಭೂಕಂದಾಯ ಎಂದು ಸರ್ಕಾರಕ್ಕೆ ನೀಡುತ್ತಿದ್ದರು.

ಶೇರ್ ಷಾ ನು ನಿಷ್ಪಕ್ಷಪಾತ ನ್ಯಾಯದಾನಕ್ಕೆ ಹೆಸರಾಗಿದ್ದಾನೆ.

ಸುಲ್ತಾನನೇ ಸಾಮ್ರಾಜ್ಯದ ಮುಖ್ಯ ನ್ಯಾಯಾಧೀಶನಾಗಿ ಅಂತಿಮ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದನು.

ಪ್ರತಿ ಬುಧವಾರ ಸಾಯಂಕಾಲ ನ್ಯಾಯಾದಾನ ನೀಡಲು ದರ್ಬಾರು ನಡೆಸುತ್ತಿದ್ದರು.

ಶೇರ್ ಷಾ 'ದಾಮ್' ಎಂಬ ಹೊಸ ಬೆಳ್ಳಿಯ ರೂಪಾಯಿ ನಾಣ್ಯವನ್ನು ಜಾರಿಗೆ ತಂದನು.

ಬೆಳ್ಳಿ ನಾಣ್ಯದ ತೂಕ 180 ಗುಲಗಂಜಿ.

ಇದನ್ನು ನಂತರದ ಎಲ್ಲ ಮೊಗಲ ದೊರೆಗಳು ಮುಂದುವರಿಸಿಕೊಂಡು ಬಂದರು.

ರಾಜಮಾರ್ಗದ ಎರಡು ಬದಿಗೆ ನೆರಳು ನೀಡುವ ಮರಗಳು ಹಾಗೂ 1700 ವಿಶ್ರಾಂತಿ ಗೃಹ (ಸರಾಯಿ) ಪ್ರವಾಸಿಗರಿಗೆ ನೆರವಾಗಲು ನಿರ್ಮಿಸಿದರು.


3. ಅಕ್ಬರನು ಗೆದ್ದ ರಾಜ್ಯಗಳು ಯಾವುವು ?

ಉತ್ತರ : ಅಕ್ಬರ್ ಸ್ವತಂತ್ರವಾಗಿ ಮಾಳ್ವ, ಚುನಾರ್, ಜೈಪುರ್, ಗೊಂಡವಾನ, ಚಿತ್ತೋರ್, ರಣತಂಬೂರ್, ಕಾಲಿಂಜರ್, ಗುಜರಾತ್ ಗಳನ್ನು ವಶಪಡಿಸಿಕೊಂಡನು.

ಯುದ್ಧಗಳಲ್ಲಿ ಹಳದಿಘಾಟ್ ಕದನ ಮಹತ್ವದ್ದು.

ಬಿಹಾರ್, ಬಂಗಾಳ, ಕಾಬುಲ್, ಕಾಶ್ಮೀರ್, ಸಿಂದ, ಒರಿಸ್ಸಾ, ಬಲೂಚಿಸ್ತಾನ್, ಕಂದಹಾರ್ ಹಾಗೂ ಅಹಮದನಗರ ಗಳನ್ನು ಅಕ್ಬರನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದ.


4. ಷಾಜಹಾನ್ ನು ಕಲೆ ಮತ್ತು ವಾಸ್ತುಶಿಲ್ಪಕ್ಕೆ ನೀಡಿದ ಕೊಡುಗೆ ವಿವರಿಸಿರಿ.

ಉತ್ತರ : ಷಾಜಹಾನ್ ಕಾಲದಲ್ಲಿ ದೆಹಲಿಯಲ್ಲಿ ಕೆಂಪುಕೋಟೆ, ಮೋತಿ ಮಸೀದಿ, ದಿವಾನ್--ಆಮ್, ದಿವಾನ್--ಖಾಸ್, ರಂಗಮಹಲ್, ಖಾಸ್ ಮಹಲ್, ಮಾಮತಾಜ್ ಮಹಲ್ ಮುಂತಾದ ಕಟ್ಟಡಗಳನ್ನು ನಿರ್ಮಿಸಲಾಯಿತು.

ಮಯೂರ ಸಿಂಹಾಸನ ತಯಾರಿಕೆ (ಏಳು ವರ್ಷಗಳ ಅವಧಿಯಲ್ಲಿ ಅಂದಿನ ಒಂದು ಕೋಟಿ ವೆಚ್ಚ), ದೇಶದ ಅತ್ಯಂತ ದೊಡ್ಡದಾದ ಜಾಮಿಯಾ ಮಸೀದಿ ಇವನ ಕಾಲದ ಕೊಡುಗೆಗಳು.

ಲಾಹೋರ್, ಕಾಬುಲ್, ಕಾಶ್ಮೀರ್, ಕಂದಹಾರ್, ಅಜ್ಮೀರ್, ಅಮದಾಬಾದ್ ಮುಂತಾದ ಕಡೆಗೆ ಷಾಜಹಾನ್ ಕಾಲದ ವಾಸ್ತುಶಿಲ್ಪಗಳು ಕಂಡುಬರುತ್ತವೆ.


5. ಶಿವಾಜಿಯ ಆಡಳಿತ ವ್ಯವಸ್ಥೆ ವಿವರಿಸಿ.

ಉತ್ತರ : ಶಿವಾಜಿಯ ಆಡಳಿತ

ಶಿವಾಜಿ ತನ್ನ ವಿಶಾಲ ರಾಜ್ಯದಲ್ಲಿ ಉತ್ತಮ ಆಡಳಿತ ಸಂಘಟಿಸಿದ್ದ.

ತನ್ನ ರಾಜ್ಯವನ್ನು ಅನೇಕ ಪ್ರಾಂತಗಳಾಗಿ ವಿಂಗಡಿಸಿದ್ದನು.

ಅವುಗಳನ್ನು ಸ್ವರಾಜ್ಯ ಮತ್ತು ಮೊಘಲರ ರಾಜ್ಯಗಳೆಂದು ಕರೆಯುತ್ತಿದ್ದರು.

ಮರಾಠಿ ಆಡಳಿತ ಭಾಷೆಯಾಗಿತ್ತು.

ಸರ್ಕಾರದ ಮುಖ್ಯಸ್ಥನಾಗಿದ್ದ ದೊರೆಗೆ ಆಡಳಿತದಲ್ಲಿ ನೆರವು ನೀಡಲು ಅಷ್ಟಪ್ರಧಾನರು ಮಂತ್ರಿಗಳಿದ್ದರು.

ಜೊತೆಗೆ ಸಹಾಯಕ್ಕಾಗಿ ಇತರೆ ಅಧಿಕಾರಿಗಳಿದ್ದರು.

ಪ್ರಾಂತ, ಜಿಲ್ಲೆ, ಗ್ರಾಮ ಆಡಳಿತದ ಘಟಕಗಳಾಗಿದ್ದವು.


6. ಒಂದನೇ ಬಾಜಿರಾಯನ ಸಾಧನೆಗಳನ್ನು ವಿವರಿಸಿ.

ಉತ್ತರ : ಬಾಲಾಜಿ ವಿಶ್ವನಾಥನ ಮರಣದ ನಂತರ ಆತನ ಹಿರಿಯ ಪುತ್ರನಾದ ಒಂದನೆಯ ಬಾಜಿರಾವ್ ಪೇಶ್ವೆ ಆಗಿ ನೇಮಕಗೊಂಡರು.

ಕೇವಲ 19 ವರ್ಷದವನಾಗಿದ್ದರೂ ಇವನು ಅಪ್ರತಿಮವೀರ ನಾಗಿದ್ದನು.

ಮರಾಠ ರಾಜ್ಯವನ್ನು ಉತ್ತರಭಾರತದಲ್ಲಿ ವಿಸ್ತರಿಸಬೇಕೆಂಬ ಉದ್ದೇಶದಿಂದ ಗುಜರಾತ್, ಮಾಳ್ವಗಳನ್ನು ವಶಪಡಿಸಿಕೊಂಡು ಚೌತ್ ಮತ್ತು ಸರದೇಶಮುಖಿಗಳನ್ನು ಸಂಗ್ರಹಿಸುವ ಅಧಿಕಾರ ಪಡೆದನು.

ಕರ್ನಾಟಕದ ಚಿತ್ರದುರ್ಗ, ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿದನು.

ಬಾಜಿರಾವ್ ಮೊಘಲ್ ದೊರೆ ವಿರುದ್ಧ ಯುದ್ಧ ಸಾರಿದಾಗ ನಿಜಾಂ ಉಲ್ ಮುಲ್ಕ್ ಮೊಘಲರಿಗೆ ನೆರವು ನೀಡುವ ಉದ್ದೇಶದಿಂದ ತನ್ನ ಸೈನ್ಯದೊಂದಿಗೆ ದೆಹಲಿಗೆ ತೆರಳುವ ಸಂದರ್ಭದಲ್ಲಿ ಭೂಪಾಲ ಬಳಿ ನಡೆದ ಯುದ್ಧದಲ್ಲಿ ಮರಾಠರಿಂದ ಪರಾಭವಗೊಂಡನು.

ಇದರಿಂದ ನರ್ಮದಾ ಚಂಬಲ್ ನದಿಗಳ ನಡುವಿನ ವಿಶಾಲ ಪ್ರದೇಶ ಹಾಗೂ 50 ಲಕ್ಷ ರೂಪಾಯಿಗಳು ಯುದ್ಧ ಪರಿಹಾರವಾಗಿ ಬಾಜಿರಾವನಿಗೆ ದೊರಕಿತ್ತು.

ಪೋರ್ಚುಗೀಸರಿಂದ ಸಾಲ್ಸೆಟ್, ಬೇಸಿನ್ ಮತ್ತು ಸಿದ್ದಿ ಗಳಿಂದ ಜಂಜೀರಾ ವಶಪಡಿಸಿಕೊಂಡನು.

ಪುಣೆ ಇವನ ಆಡಳಿತದ ಕೇಂದ್ರವಾಯಿತು.

ಒಂದನೇ ಬಾಜಿರಾವ್ ದಕ್ಷತೆಯಿಂದ ಆಡಳಿತ ನಡೆಸಿದ ನಲ್ಲದೇ ಮರಾಠ ರಾಜ್ಯದ ಕೀರ್ತಿಯನ್ನು ಪುನಃ ಸ್ಥಾಪಿಸುವಲ್ಲಿ ಯಶಸ್ವಿಯಾದನು.

ಇದರಿಂದಾಗಿ ಇವನಿಗೆ ಎರಡನೆಯ ಶಿವಾಜಿ ಎಂದು ಹೆಸರು ಬಂದಿತು.


 9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon