ಮತ ಪ್ರವರ್ತಕರು ಮತ್ತು ಸಮಾಜ ಸುಧಾರಕರು | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಇತಿಹಾಸ ಅಧ್ಯಾಯಗಳು |

ಅಧ್ಯಾಯ - 3. ಮತ ಪ್ರವರ್ತಕರು ಮತ್ತು ಸಮಾಜ ಸುಧಾರಕರು

I ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ.

1. ಶಂಕರಾಚಾರ್ಯರು ಕೇರಳದ _____ ಲ್ಲಿ ಜನಿಸಿದರು

ಉತ್ತರ: ಕಾಲಡಿ

2. ಜಗತ್ತು ಮಾಯೆ, ಬ್ರಹ್ಮ ಮಾತ್ರ ಸತ್ಯ ಎಂದು ಪ್ರತಿಪಾದಿಸಿದವರು _____

ಉತ್ತರ: ಶಂಕರಾಚಾರ್ಯರು

3. ದ್ವೈತ ಸಿದ್ದಾಂತದ ಪ್ರತಿಪಾದಕರು ____

ಉತ್ತರ: ಮಧ್ವಾಚಾರ್ಯರು


II ಕೆಳಕಂಡ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿರಿ.

1. ಅದ್ವೈತ ಸಿದ್ದಾಂತವನ್ನು ಕುರಿತು ವಿವರಿಸಿ

ಉತ್ತರ:

* ಶಂಕರರು ಅದ್ವೈತ ಸಿದ್ದಾಂತವನ್ನುಪ್ರತಿಪಾದಿಸಿದರು.

* ʻಅದ್ವೈತʼ ಎಂದರೆ ಏಕ ಅಥವಾ ಒಂದೆ ಎಂದರ್ಥ.

* ಇದರ ಪ್ರಕಾರ ಜೀವಾತ್ಮ ಮತ್ತು ಪರಮಾತ್ಮ ಬೇರೆ ಬೇರೆಯಲ್ಲ. ಎರಡೂ ಒಂದೇ.

* ಬ್ರಹ್ಮನೊಬ್ಬನೇ ಸತ್ಯ ಉಳಿದ ಜಗತ್ತು ಮಿಥ್ಯ.

* ಜಗತ್ತು ಒಂದು ಮಾಯೆ, ಬ್ರಹ್ಮ ಮಾತ್ರ ಸತ್ಯ.

*‌ ಜ್ಞಾನ ಮಾರ್ಗದಿಂದ ನಾವು ಪ್ರಪಂಚದ ಮಾಯೆಯನ್ನು ತಿಳಿದು ಪರಮ ಸತ್ಯವಾದ ಬ್ರಹ್ಮನೊಡನೆ ನಮ್ಮ ಜೀವಾತ್ಮವನ್ನು ವಿಲೀನಗೊಳಿಸಬೇಕು.

* ಆಗ ಮಾತ್ರ ಎಲ್ಲರಿಗೂ ಮೋಕ್ಷ ಪ್ರಾಪ್ತಿ ಸಾಧ್ಯ.


2. ರಾಮಾನುಜಾಚಾರ್ಯರು ಪ್ರತಿಪಾದಿಸಿದ ಸಿದ್ದಾಂತ ಯಾವುದು? ಅವರ ಮತವನ್ನು ಏನೆಂದು ಕರೆಯಲಾಗಿದೆ?

ಉತ್ತರ:

* ರಾಮಾನುಜಾರ್ಚಾರು ಪ್ರತಿಪಾದಿಸಿದ ಸಿದ್ದಾಂತ ವಿಶಿಷ್ಟಾದ್ವೈತ.

* ಇವರ ಮತವನ್ನು ಶ್ರೀವೈಷ್ಣವ ಮತ ಎಂದು ಕರೆಯಲಾಗಿದೆ.

3. ರಾಮಾನುಜಾಚಾರ್ಯರ ಸಿದ್ಧಾಂತದ ಸಾರವನ್ನು ವಿವರಿಸಿ.

ಉತ್ತರ:

* ರಾಮಾನುಚಾರ್ಯರು ಪ್ರತಿಪಾದಿಸಿದ ಸಿದ್ದಾಂತವನ್ನು ʻವಿಶಿಷ್ಟಾದ್ವೈತʼ ಎಂದರು ಕರೆಯಲಾಗಿದೆ.

* ಇದರ ಪ್ರಕಾರ ಜೀವ ಮತ್ತು ಪ್ರಕೃತಿ ಬ್ರಹ್ಮನ ಅಧೀನ.

* ಆತ್ಮ ಮತ್ತು ಪರಮಾತ್ಮ ಏಕಕಾಲದಲ್ಲಿ ಒಂದಾಗಲು ಸಾಧ್ಯವಿಲ್ಲವೇಂದು ತಿಳಿಸಿದರು.

* ಜಗತ್ತು ಬ್ರಹ್ಮನ ವ್ಯಕ್ತಗೊಂಡ ರೂಪವೆಂದು ಮತ್ತು ಜಗತ್ತು ಇಹಸತ್ಯವೆಂದು ಪ್ರತಿಪಾದಿಸಿದರು.

* ಮುಕ್ತಿ ಸಾಧನಗೆ ಭಕ್ತಿ ಮತ್ತು ಪ್ರಪತ್ತಿ (ಅತೀವ ಶರಣಾಗತ ಭಕ್ತಿ) ಬಹಳ ಮುಖ್ಯವೆಂದು ತಿಳಿಸಿದರು.

* ಜಾತಿವಾದವನ್ನು ಖಂಡಿಸಿದ ರಾಮಾನುಜರು ಭಕ್ತಿ ತತ್ವವನ್ನು ಎಲ್ಲಾ ಜಾತಿಯ ಜನರಿಗೂ ಉಪದೇಶಿಸಿದರು.

* ಆಸೆಗಳಿಂದ ದೂರಾಗಿ ಆತ್ಮ ಪರಿಶುದ್ಧತೆಯಿಂದ ಭಗವಂತನಿಗೆ ಶರಣಾಗಬೇಕೆಂದು ತಿಳಿಸಿದರು.

* ಹೀಗೆ ಮೋಕ್ಷ ಸಾಧನೆಗಾಗಿ ಭಕ್ತಿ ಮಾರ್ಗವನ್ನು ಪ್ರತಿಪಾದಿಸಿದರು.


4. ಮಧ್ವಾಚಾರ್ಯರು ಪ್ರತಿಪಾದಿಸಿದ ತತ್ವಗಳಾವುವು?

ಉತ್ತರ:

*ಮಧ್ವಾಚಾರ್ಯರ ಪ್ರಕಾರ ಜಗತ್ತು ಮಾಯೆಯಲ್ಲ. ಅದು ಪರಮಾತ್ಮನಷ್ಟೇ ಸತ್ಯವಾಗಿದೆ.

* ಇವುಗಳಲ್ಲಿ ಈಶ್ವರ ಮಾತ್ರ ಸ್ವತಂತ್ರ. ಉಳಿದ ಜಗತ್ತು ಮಿಥ್ಯೆ (ಭ್ರಮೆ) ರೂಪವಾದದ್ದು.

* ಪರಮಾತ್ಮನಿಗೂ, ಜೀವಿಗಳಿಗೂ ಸ್ವಾಮಿ-ಸೇವಕ ಸಂಬಂಧವಿದೆ.

* ವಿಷ್ಣು ಅಥವಾ ನಾರಾಯಣ ಒಬ್ಬನೇ ಸರ್ವೋತ್ತಮ.

* ವಿಷ್ಣುವನ್ನು ಭಕ್ತಿಯಿಂದ ಪೂಜಿಸುವುದರಿಂದ ಆತ್ಮೋದ್ಧಾರ ಅಥವಾ ಮುಕ್ತಿ ಸಾಧ್ಯವೆಂದು ತಿಳಿಸಿದರು.


5. ಬಸವೇಶ್ವರರ ಕಾಯಕ ತತ್ವದ ಬಗ್ಗೆ ಬರೆಯಿರಿ

ಉತ್ತರ:

* ಬಸವೇಶ್ವರರು ಕಾಯಕ ತತ್ವವನ್ನು ಪ್ರತಿಪಾದಿಸಿದರು.

* ಪ್ರತಿಯೊಬ್ಬರೂ ದುಡಿದು ತಿನ್ನಬೇಕು ಎನ್ನುವ ಸ್ವಾವಲಂಬನೆ ತತ್ವವನ್ನು ಪ್ರತಿಪಾದಿಸಿದರು.

* ಬಸವೇಶ್ವರರು ವೃತ್ತಿಯಲ್ಲಿ ಹಿರಿದು ಕಿರಿದು ಎಂಬುವುದಿಲ್ಲ ಎಂದು ಸಾರಿದರು.

*ತಮ್ಮ ಕಾಯಕ ತತ್ವದ ಮುಖಾಂತರ ಜನರಲ್ಲಿ ದುಡಿಮೆ ಸಂಸ್ಕೃತಿಯನ್ನು ಬೆಳೆಸಿದರು.

* ʻದೇಹವೇ ದೇಗುಲʼ ಎಂದು ಸಾರಿದ ಬಸವಣ್ಣನವರು ತತ್ವವನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದರು.


6. ಅನುಭವ ಮಂಟಪವನ್ನು ಯಾರು ಪ್ರಾರಂಭಿಸಿದರು? ಅದರ ಉದ್ದೇಶಗಳಾವುವು?

ಉತ್ತರ: ಅನುಭವ ಮಂಟಪವನ್ನು ಬಸವೇಶವರರು ಪ್ರಾರಂಭಿಸಿದರು.

ಉದ್ದೇಶಗಳು:

* ಬಸವಾದಿಯಾಗಿ ಎಲ್ಲ ಶಿವಶರಣರು ಸಾಮಾಜಿಕ ಸಮಸ್ಯೆಗಳಾದ ಜಾತಿ ಮತ್ತು ಲಿಂಗ ತಾರತಮ್ಯ ಸಮಸ್ಯೆಗಳನ್ನು ಚರ್ಚಿಸುವುದು.

* ಧಾರ್ಮಿಕ ಅಂಕುಡೊಂಕುಗಳನ್ನು ಚರ್ಚಿಸುವುದು.

* ಚಿಕಿತ್ಸಕ ಸಂದೇಶಗಳ ಮೂಲಕ ಪರಿಹಾರವನ್ನು ಸೂಚಿಸುವುದು

* ಆಧ್ಯಾತ್ಮಕ ವಿಚಾರಗಳನ್ನು ಚರ್ಚಿಸುವುದು.


7. ಶಂಕರಾಚಾರ್ಯರು ರಚಿಸಿದ ಗ್ರಂಥಗಳನ್ನು ಹೆಸರಿಸಿ.

ಉತ್ತರ: ಶಂಕರಾಚಾರ್ಯರು ರಚಿಸಿದ ಗ್ರಂಥಗಳು

*ಶಂಕರಭಾಷ್ಯ

*ಆನಂದಲಹರಿ

*ಸೌಂದರ್ಯ ಲಹರಿ

*ಶಿವಾನಂದ ಲಹರಿ

*ವಿವೇಕ ಚೂಡಾಮಣಿ

*ಪ್ರಬುದ್ಧ ಸುಧಾಕರ

*ಧಕ್ಷಿಣಾಮೂರ್ತಿ ಸ್ತೋತ್ರ


 9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon