ನಮ್ಮ ಸಂವಿಧಾನ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ರಾಜ್ಯಶಾಸ್ತ್ರ ಪ್ರಶ್ನೋತ್ತರಗಳು |

ಅಧ್ಯಾಯ 1. ನಮ್ಮ ಸಂವಿಧಾನ

I ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

1. ರಾಜ್ಯವನ್ನಾಳುವ ಮೂಲ ಕಾನೂನೇ _____

ಉತ್ತರ: ಸಂವಿಧಾನ

2. ನೂತನ ಸಂವಿಧಾನ ರಚನಾ ಸಭೆ _____ ರಂದು ನಡೆಯಿತು.

ಉತ್ತರ: ಡಿಸೆಂಬರ್‌ 9, 1946

3. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷತೆ ವಹಿಸಿದ್ದವರು ____

ಉತ್ತರ: ಡಾ.ಬಿ.ಆರ್.ಅಂಬೇಡ್ಕರ್

4. ನಮ್ಮ ಸಂವಿಧಾನವು _____ ಸರ್ಕಾರ ಪದ್ಧತಿಯನ್ನು ಹೊಂದಿದೆ.

ಉತ್ತರ: ಸಂಸದೀಯ

5. ಜನರಿಗೆ ಪರಮಾಧಿಕಾರ ಇರುವ ರಾಜ್ಯವನ್ನು _____ ಎಂದು ಕರೆಯಲಾಗಿದೆ.

ಉತ್ತರ: ಪ್ರಜಾಪ್ರಭುತ್ವ

6. ನಮ್ಮ ಸಂವಿಧಾನವು ಪ್ರಜೆಗಳಿಗೆ ____ ಪೌರತ್ವಕ್ಕೆ ಅವಕಾಶ ಮಾಡಿಕೊಟ್ಟಿದೆ.

ಉತ್ತರ: ಏಕಪೌರತ್ವ

7. ಸಂವಿಧಾನದ ಪರಿಹಾರದ ಹಕ್ಕನ್ನು _____ ನೇ ವಿಧಿಯಲ್ಲಿ ಅಳವಡಿಸಲಾಗಿದೆ.

ಉತ್ತರ: 32ನೇ ವಿಧಿ

8. ರಾಜ್ಯ ನಿರ್ದೇಶಕ ತತ್ವಗಳನ್ನು _____ ಸಂವಿಧಾನದಿಂದ ಪಡೆಯಲಾಗಿದೆ.

ಉತ್ತರ: ಐರಿಷ್ಸಂವಿಧಾನ


II ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರ ಬರೆಯಿರಿ.

1. ನೂತನ ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ಯಾರು?

ಉತ್ತರ: ಡಾ|| ರಾಜೇಂದ್ರ ಪ್ರಸಾದ

2. ಸಂವಿಧಾನ ಜಾರಿಗೆ ಬಂದದ್ದು ಯಾವಾಗ?

ಉತ್ತರ: 1950 ಜನೆವರಿ 26 ರಂದು

3. ಭಾರತ ಸಂವಿಧಾನದ ಪ್ರಸ್ತಾವನೆ ಏನನ್ನು ಒಳಗೊಂಡಿದೆ?

ಉತ್ತರ: ಭಾರತ ಸಂವಿಧಾನ ತನ್ನದೆ ಆದ ಪ್ರಸ್ತಾವನೆಯನ್ನು ಹೊಂದಿದ್ದು.

* ಪ್ರಸ್ತಾವನೆಯು ಸಂವಿಧಾನದ ರಚನಾಕಾರರ ವಿಚಾರಧಾರೆಗಳನ್ನು ಒಳಗೊಂಡಿದೆ.

*ಸಂವಿಧಾನದ ರೂಪುರೇಷೆ, ಮೌಲ್ಯ, ಸಿದ್ದಾಂತ ಮತ್ತು ಉದ್ದೇಶಗಳನ್ನು ಒಳಗೊಂಡಿದೆ.

*ಇದು ಜನತೆಯ ಧ್ಯೇಯಗಳನ್ನು ನಿರ್ಧರಿಸಿ ಘೋಷಿಸಿಕೊಂಡ ಆದರ್ಶ ತತ್ವವಾಗಿದೆ.

4. ಮತ ನಿರಪೇಕ್ಷತೆ ಎಂದರೇನು?

ಉತ್ತರ: ಮತ ನೀರಪೇಕ್ಷತೆ (ಜಾತ್ಯತೀತತೆ) ಎಂದರೇ ಪ್ರಜೆಗಳು ತಮಗೆ ಬೇಕಾದ ಮತ ಆಚರಿಸುವ, ಅನುಸರಿಸುವ ಸ್ವಾತಂತ್ರ್ಯವನ್ನು ಪಡೆದಿದ್ದಾರೆ.

ಸರ್ವ ಧರ್ಮಕ್ಕೂ ಸಮಾನವಾಧ ಪ್ರಾತಿನಿಧ್ಯವನ್ನು ನೀಡಲಾಗಿದೆ.

5. ನಮ್ಮ ಸಂವಿಧಾನದ ಪ್ರಮುಖ ಲಕ್ಷಣಗಳನ್ನು ವಿವರಿಸಿ.

ಉತ್ತರ: ನಮ್ಮ ಸಂವಿಧಾನದ ಪ್ರಮುಖ ಲಕ್ಷಣಗಳು:-

*ಲಿಖಿತ ಮತ್ತು ಬೃಹತ್ಸಂವಿಧಾನ

*ಭಾಗಶ: ನಮ್ಯ ಮತ್ತು ಭಾಗಶ: ಅನಮ್ಯ ಸಂವಿಧಾನ

*ಸಂಸದೀಯ ಸರ್ಕಾರ ಪದ್ದತಿ

*ಗಣತಂತ್ರ್ಯ ವ್ಯವಸ್ಥೆ

*ಸಂಯುಕ್ತ ಪದ್ದತಿ

*ಮೂಲಭೂತ ಹಕ್ಕುಗಳು

*ಮೂಲಭೂತ ಕರ್ತವ್ಯವಗಳು

*ಸ್ವತಂತ್ರ ಮತ್ತು ಏಕೀಕೃತ ನ್ಯಾಯಾಂಗ ವ್ಯವಸ್ಥೆ

*ಏಕ ಪೌರತ್ವ

*ವಯಸ್ಕ ಮತದಾನ ಪದ್ಧತಿ

*ದ್ವಿಸದನ ಶಾಸಕಾಂಗ

*ರಾಜ್ಯ ನಿರ್ದೇಶಕ ತತ್ವಗಳು


6. ಸಂವಿಧಾನದಲ್ಲಿ ಅಳವಡಿಸಿರುವ ಮೂಲಭೂತ ಹಕ್ಕುಗಳಾವುವು?

ಉತ್ತರ: ಭಾರತ ಸಂವಿಧಾನದ 3ನೇ ಭಾಗದಲ್ಲಿ ಪ್ರಸ್ತುತ 6 ಮೂಲಭೂತ ಹಕ್ಕುಗಳನ್ನು ಅಳವಡಿಸಲಾಗಿದೆ.

1.     ಸಮಾನತೆಯ ಹಕ್ಕು

2.     ಸ್ವಾತಂತ್ರ್ಯದ ಹಕ್ಕು

3.     ಶೋಷಣೆಯ ವಿರುದ್ಧದ ಹಕ್ಕು

4.     ಧಾರ್ಮಿಕ ಸ್ವಾತಂತ್ರ್ಯದ ಹಕ್ಕು

5.     ಸಾಂಸ್ಕೃತಿಕ ಮತ್ತು ವಿದ್ಯಾಭ್ಯಾಸದ ಹಕ್ಕು

6.     ಸಂವಿಧಾನದ ಪರಿಹಾರದ ಹಕ್ಕು

7. ಮೂಲಭೂತ ಕರ್ತವ್ಯಗಳನ್ನು ಬರೆಯಿರಿ.

ಉತ್ತರ: ಭಾರತ ಸಂವಿಧಾನದ 51 ʻʼ ವಿಧಿಯಲ್ಲಿ 11 ಮೂಲಭೂತ ಕರ್ತವ್ಯಗಳನ್ನು ಒಳಗೊಂಡಿದೆ.

1.ನಮ್ಮ ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು.

2.ಸ್ವಾತಂತ್ರ್ಯ ಚಳವಳಿಯ ಸ್ಪೂರ್ತಿದಾಯಕ ಆದರ್ಶ ತತ್ವಗಳನ್ನು ಪಾಲಿಸುವುದು.

3.ಭಾರತದ ಸಾರ್ವಭೌಮತೆ, ಏಕತೆ, ಸಮಗ್ರತೆಯನ್ನು ಕಾಪಾಡುವುದು ಮತ್ತು ರಕ್ಷಿಸುವುದು.

4.ಅಗತ್ಯ ಬಂದಾಗ ರಾಷ್ಟ್ರವನ್ನು ರಕ್ಷಿಸಿ ದೇಶದ ಸೇವೆ ಮಾಡಬೇಕು.

5.ಭಾರತೀಯರಲ್ಲಿ ಸಾಮರಸ್ಯ ಮತ್ತು ಸಹೋದರತ್ವ ಭಾವನೆಯನ್ನು ಬೆಳೆಸಬೇಕು ಮತ್ತು ಮಹಿಳೆಯರ ಗೌರವಕ್ಕೆ ಭಂಗ ತರುವ ಆಚರಣೆಗಳನ್ನು ತ್ಯಜಿಸಬೇಕು.

6.ನಮ್ಮ ಸಂಘಟಿತ ಸಂಸ್ಕೃತಿಯ ಪರಂಪರೆಯನ್ನು ಗೌರವಿಸಿ ರಕ್ಷಿಸಬೇಕು.

7.ಅರಣ್ಯಗಳು, ಸರೋವರಗಳು, ನದಿಗಳು ಮತ್ತು ವನ್ಯ ಮೃಗಗಳು ಸೇರಿದಂತೆ ಪ್ರಕೃತಿ, ಪರಿಸರವನ್ನು ರಕ್ಷಿಸಿ ಅಭಿವೃದ್ಧಪಡಿಸಬೇಕು ಹಾಗೂ ಜೀವಂತ ಪ್ರಾಣಿಗಳಿಗೆ ಅನುಕಂಪ ತೋರಿಸಬೇಕು.

8.ವೈಜ್ಞಾನಿಕ ಹಾಗೂ ಮಾನವೀಯತೆಯ ಗುಣಗಳ ವಿಚಾರಣಾ ಹಾಗೂ ಸುಧಾರಣಾ ಭಾವನೆಯನ್ನು ಬೆಳೆಸಿಕೊಳ್ಳಬೇಕು.

9.ಸಾರ್ವಜನಿಕ ಆಸ್ತಿಯನ್ನು ರಕ್ಷಿಸಬೇಕು ಮತ್ತು ಹಿಂಸಾಮಾರ್ಗವನ್ನು ತ್ಯಜಿಸಬೇಕು.

10.ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಯಲ್ಲಿ ಪ್ರಾವೀಣ್ಯತೆಯನ್ನು ಪ್ರದರ್ಶಿಸಿ ರಾಷ್ಟ್ರದ ಪ್ರಗತಿಗೆ ಶ್ರಮಿಸಬೇಕು.

11.ತಂದೆ/ತಾಯಿ ಅಥವಾ ಪೋಷಕರು 6 ವರ್ಷದಿಂದ 14 ವರ್ಷದವರೆಗೆ ತಮ್ಮ ಮಗುವಿಗೆ ಶಿಕ್ಷಣಕ್ಕೆ ಅವಕಾಶವನ್ನು ಕಲ್ಪಿಸಿಕೊಡಬೇಕು.


8. ರಾಜ್ಯ ನಿರ್ದೇಶಕ ತತ್ವಗಳಾವುವು?

ಉತ್ತರ: ಸಂವಿಧಾನದ 4ನೇ ಭಾಗದಲ್ಲಿ 36 ರಿಂದ 51ನೇ ವಿಧಿಗಳಲ್ಲಿ ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಲಾಗಿದೆ.

1.ಎಲ್ಲಾ ಪೌರರಿಗೂ ತಮ್ಮ ಜೀವನೋಪಾಯಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದು.

2.ಸಮುದಾಯದಲ್ಲಿನ ಸಂಪತ್ತು ಮತ್ತು ಉತ್ಪಾದನಾ ಸಾಧನಗಳು ಕೆಲವೇ ಜನರ ಸ್ವತ್ತಾಗದಂತೆ ತಡೆಗಟ್ಟುವುದು.

3.ಸ್ತ್ರೀ ಮತ್ತು ಪುರುಷರೆಲ್ಲರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು, ಕಾರ್ಮಿಕರ ಯೋಗಕ್ಷೇಮವನ್ನು ರಕ್ಷಿಸುವುದು.

4.ವೃದ್ಧರು, ರೋಗಿಗಳು, ದುರ್ಬಲ ವರ್ಗದವರು ಮತ್ತು ಅಸಮರ್ಥರಿಗೆ ಸಹಾಯಧನ ನೀಡುವುದು.

5.ದೇಶದಾದ್ಯಂತ ಏಕರೂಪದ ನಾಗರಿಕ ಕಾನೂನನ್ನು ಜಾರಿಗೆ ತರುವುದು.

6. 6 ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ಬಾಲ್ಯ ಪೋಷಣೆ ಮತ್ತು ಶಾಲಾ ಪೂರ್ವ ಶಿಕ್ಷಣವನ್ನು ಕೊಡಲು ರಾಜ್ಯ ಪ್ರಯತ್ನಿಸಬೇಕು.

7. ಐತಿಹಾಸಿಕ ಸ್ಮಾರಕಗಳು ಮತ್ತು ಸ್ಥಳಗಳನ್ನು ರಕ್ಷಸುವುದು.

8.ನ್ಯಾಯಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸುವುದು.

9.ಅಂತರರಾಷ್ಟ್ರೀಯ ಶಾಂತಿಯುತ ವಿದೇಶಿ ನೀತಿಯನ್ನು ಪಾಲಿಸುವುದು. ಭದ್ರತೆ ಕಾಪಾಡಿ ವಿಶ್ವ ಕಾನೂನನ್ನು ಗೌರವಿಸುವುದು.

10.ಗ್ರಾಮ ಪಂಚಾಯತಿಗಳನ್ನು ಸ್ಥಾಪಿಸುವುದು.

11.ಗ್ರಾಮೀಣ ಹಾಗೂ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದು.

12.ಕೃಷಿ ಹಾಗೂ ಪಶುಸಂಗೋಪನೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವುದು.

13.ಪಾನ ನಿಷೇಧವನ್ನು ಜಾರಿಗೆ ತರುವುದು.

14. ವೈಜ್ಞಾನಿಕ ಆಧಾರದ ಮೇಲೆ ಬೇಸಾಯವನ್ನು ಅಭಿವೃದ್ಧಿಗೊಳಿಸುವುದು.

ಎಲ್ಲಾ ರಾಜ್ಯ ನಿರ್ದೇಶಕ ತತ್ವಗಳ ಗುರಿ ಎಲ್ಲರ ಸುಖವನ್ನು ಸಾಧಿಸುವುದೇ ಆಗಿದೆ.


 9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon