ಕೇಂದ್ರ ಸರ್ಕಾರ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ರಾಜ್ಯಶಾಸ್ತ್ರ ಪ್ರಶ್ನೋತ್ತರಗಳು |

ಅಧ್ಯಾಯ -2. ಕೇಂದ್ರ ಸರ್ಕಾರ

I ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

1. ಭಾರತವು _____ ಗಳ ಒಕ್ಕೂಟವಾಗಿದೆ.

ಉತ್ತರ: ರಾಜ್ಯಗಳ

2. ಕೇಂದ್ರ ಶಾಸಕಾಂಗವನ್ನು _____ ಎಂದು ಕರೆಯಲಾಗಿದೆ.

ಉತ್ತರ: ಸಂಸತ್ತು

3. ರಾಜ್ಯಸಭೆಯ ಪದನಿಮಿತ್ತ ಸಭಾಪತಿಗಳು ____ ರವರು ಆಗಿರುತ್ತಾರೆ.

ಉತ್ತರ: ಉಪರಾಷ್ಟ್ರಪತಿ

4. ಲೋಕಸಭೆಯ ಸದಸ್ಯರಾಗಲು  _____ ವರ್ಷ ವಯೋಮಿತಿ ಹೊಂದಿರಬೇಕು.

ಉತ್ತರ: 25

5. ಮೂರು ಸೇನಾಪಡೆಗಳ ಮಹಾ ದಂಡನಾಯಕರು _____

ಉತ್ತರ: ರಾಷ್ಟ್ರಪತಿಗಳು

6. ಸಂವಿಧಾನದ ____ ಮತ್ತು ____ ನೇ ವಿಧಿಯಲ್ಲಿ ರಾಷ್ಟ್ರಪತಿಯವರನ್ನು ಚುನಾಯಿಸುವ ವಿಧಾನವನ್ನು ಅಳವಡಿಸಲಾಗಿದೆ.

ಉತ್ತರ: 54 ಮತ್ತು 55

7. ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರನ್ನು  ____ ಅವರು ನೇಮಿಸುತ್ತಾರೆ.

ಉತ್ತರ: ರಾಷ್ಟ್ರಪತಿ


II ಕೆಳಗಿನ ಪ್ರಶ್ನೆಗಳಿಗೆ ಸಹಪಾಠಿಗಳೊಂದಿಗೆ ಚರ್ಚಿಸಿ ಉತ್ತರಿಸಿ.

1. ಸಂಸತ್ತಿನ ಎರಡು ಸದನಗಳನ್ನು ತಿಳಿಸಿ.

ಉತ್ತರ: ಸಂಸತ್ತಿನ ಎರಡು ಸದನಗಳೆಂದರೆ:-

1.     ಲೋಕ ಸಭೆ

2.     ರಾಜ್ಯ ಸಭೆ

2. ರಾಜ್ಯಸಭೆಯ ರಚನೆಯನ್ನು ವಿವರಸಿ.

ಉತ್ತರ: ರಾಜ್ಯ ಸಭೆಯು 250 ಸದಸ್ಯರನ್ನು ಒಳಗೊಂಡಿದೆ.

*238 ಸದಸ್ಯರು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಯ ಸದಸ್ಯರಿಂದ ಆಯ್ಕೆಯಾಗುವರು.

*ಉಳಿದ 12 ಸದಸ್ಯರು ಸಾಹಿತ್ಯ, ಕಲೆ, ವಿಜ್ಞಾನ, ಮತ್ತು ಸಮಾಜ ಸೇವೆಯಲ್ಲಿ ವಿಶೇಷ ಅನುಭವ ಪಡೆದವರನ್ನು ರಾಷ್ಟ್ರಪಪತಿಗಳು ನಾಮಕರಣ ಮಾಡುತ್ತಾರೆ.

* ಇದನ್ನು ಹಿರಯರ ಸದನವೆಂದು ಕರೆಯುತ್ತಾರೆ.

* ರಾಜ್ಯಸಭೆಯು ಖಾಯಂ ಸದನವಾಗಿದ್ದು. ಲೋಕಸಭೆಯಂತೆ ವಿಸರ್ಜಿಸಲಾಗದು.

* ಆದರೆ ಸದಸ್ಯರ ಅಧಿಕಾರ 6 ವರ್ಷಗಳು

3. ಲೋಕಸಭೆಯ ಸದಸ್ಯರಾಗಲು ಇರಬೇಕಾದ ಅರ್ಹತೆಗಳು ಯಾವುವು?

ಉತ್ತರ: ಲೋಕಸಭೆಯ ಸದಸ್ಯರಾಗಲು ಇರಬೇಕಾದ ಅರ್ಹತೆಗಳು:

1.     ಭಾರತದ ಪ್ರಜೆಯಾಗಿರಬೇಕು

2.     ಕನಿಷ್ಠ 25 ವರ್ಷ ವಯೋಮಿತಿ ಹೊಂದಿರಬೇಕು.

3.     ಸರ್ಕಾರದ ಯಾವುದೇ ಹುದ್ದೆಯಲ್ಲಿರಬಾರದು

4.     ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿರಬಾರದು

5.     ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರಬಾರದು.

6.     ಸಂಸತ್ತು ಕಾಲಕಾಕ್ಕೆ ನಿಗದಿಪಡಿಸಿರುವ ಅರ್ಹತೆ ಪಡೆದಿರಬೇಕು.

4. ರಾಷ್ಟ್ರಪತಿ ಚುನಾವಣಾ ಪದ್ಧತಿಯನ್ನು ವಿವರಿಸಿ.

ಉತ್ತರ: ರಾಷ್ಟ್ರಪತಿಯವರ ಚುನಾವಣಾ ವಿಧಾನ:

*ಸಂವಿಧಾನ 54 ಮತ್ತು 55 ನೇ ವಿಧಿಯಲ್ಲಿ ರಾಷ್ಟ್ರಪತಿಯವರನ್ನು ಚುನಾಯಿಸುವ ವಿಧಾನವನ್ನು ಅಳವಡಿಸಲಾಗಿದೆ.

*ರಾಷ್ಟ್ರಪತಿಯವರನ್ನು ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರು, ಎಲ್ಲಾ ರಾಜ್ಯಗಳ ಮತ್ತು ದೆಹಲಿ, ಪುದುಚೆರಿ ವಿಧಾನಸಭಾ ಚುನಾಯಿತ ಸದಸ್ಯರಿಂದ ಕೂಡಿದ ಮತದಾರ ವರ್ಗ ಚುನಾಯಿಸುತ್ತದೆ.

*ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾದೀಶರು ಇವರಿಗೆ ಪ್ರಮಾಣ ವಚನ ಬೋಧಿಸುತ್ತಾರೆ.

*ಇವರ ಅಧಿಕಾರಾವಧಿ 5 ವರ್ಷವಾಗಿದೆ.

*ಪುನರಾಯ್ಕೆಗೆ ಅರ್ಹರಾಗಿರುತ್ತಾರೆ.

*ಸಂವಿಧಾನವನ್ನು ಉಲ್ಲಂಘಿಸಿದಲ್ಲಿ ರಾಷ್ಟ್ರಪತಿಯವರನ್ನು ಮಹಾಭಿಯೋಗಗೊಳಿಸುವ ಅಧಿಕಾರ ಸಂಸತ್ತಿಗಿರುತ್ತದೆ.

5. ಪ್ರಧಾನಮಂತ್ರಿಯ ಅಧಿಕಾರಗಳನ್ನು ಪಟ್ಟಿ ಮಾಡಿ.

ಉತ್ತರ: ಪ್ರಧಾನ ಮಂತ್ರಿಯ ಅಧಿಕಾರ ಮತ್ತು ಕಾರ್ಯಗಳು:

*ಮಂತ್ರಿಗಳ ನೇಮಕ, ಖಾತೆಗಳ ಹಂಚಿಕೆ ಮತ್ತು ಮಂತ್ರಿಗಳನ್ನು ವಜಾ ಮಾಡುವ ಅಧಿಕಾರ:

ಇವರು ಮಂತ್ರಿಮಂಡಲದ ಮುಖ್ಯಸ್ಥರಾಗಿದ್ಧಾರೆ

ವಿವಿಧ ಇಲಾಖೆಗಳಿಗೆ ಮಂತ್ರಿಗಳನ್ನು ನೇಮಕ ಮಾಡುವಂತೆ ರಾಷ್ಟ್ರಪತಿಯವರಿಗೆ ಶಿಫಾರಸ್ಸು ಮಾಡುತ್ತಾರೆ

ಮಂತ್ರಿಗಳಿಗೆ ವಿವಿಧ ಖಾತೆಗಳನ್ನು ಹಂಚುತ್ತಾರೆ.

ಖಾತೆಗಳನ್ನು ಹಂಚುವಾಗ ಪ್ರಧಾನಿಗೆ ಪೂರ್ಣ ಅಧಿಕಾರವಿದೆ.

*ಸರ್ಕಾರದ ಮುಖ್ಯಸ್ಥರು:

ಸರ್ಕಾರದ ಆಗು-ಹೋಗುಗಳಿಗೆ ಇವರೇ ಜವಾಬ್ದಾರರಾಗಿದ್ದು.

ವಿವಿಧ ಇಲಾಖಾ ಮಂತ್ರಿಗಳ ನಡುವೆ ಸಮನ್ವಯ ಸಾಧಿಸುವ ಕಾರ್ಯನಿರ್ವಹಿಸುತ್ತಾರೆ.

ಯೋಜನೆ, ರಕ್ಷಣೆ, ವಿದೇಶಾಂಗ ನೀತಿ ರೂಪಿಸುವಲ್ಲಿ ವಿಶೇಷ ಕಾಳಜಿ ವಹಿಸುತ್ತಾರೆ.

*ಸಚಿವ ಸಂಪುಟದ ನಾಯಕ:

ಪ್ರಧಾನಿಯವರ ಅಧ್ಯಕ್ಷತೆಯಲ್ಲೇ ಸಚಿವ ಸಂಪುಟದ ಸಭೆ ನಡೆಯುತ್ತದೆ.

ಸಚಿವ ಸಂಪುಟದ ಕಾರ್ಯಕಲಾಪಗಳು, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಷಯಗಳ ಚರ್ಚೆ ಮತ್ತು ನಿರ್ಧಾರ ಇವರ ಅಧ್ಯಕ್ಷತೆಯಲ್ಲಿ ನಡೆಯುತ್ತದೆ.

ಇವರು ರಾಷ್ಟ್ರಪತಿ ಮತ್ತು ಸಚಿವ ಸಂಪಟದ ನಡುವೆ ಸಂಬಂಧ ಕಲ್ಪಿಸುವ ಕೊಂಡಿಯಾಗಿದ್ದಾರೆ.


6. ಕೇಂದ್ರ ಮಂತ್ರಿಮಂಡಲದ ರಚನೆ ಮತ್ತು ಅದರ ಹೊಣೆಗಾರಿಕೆಯನ್ನು ವಿವರಿಸಿ.

ಉತ್ತರ: ಮಂತ್ರಿಮಂಡಲವು ನೈಜ ಕಾರ್ಯಾಂಗವಾಗಿದ್ದು

*ಎರಡು ಬಗೆಯ ಸಚಿವರುಗಳನ್ನು ಹೊಂದಿದೆ.

*ಮೊದಲನೆಯದು ಸಂಪುಟ ದರ್ಜೆ, ಎರಡನೆಯದು ರಾಜ್ಯ ದರ್ಜೆ ಸಚಿವರು.

*ಮಂತ್ರಿಮಂಡಲದ ಗಾತ್ರವು ಲೋಕಸಭೆಯ ಒಟ್ಟು ಸದಸ್ಯರಲ್ಲಿ ಶೇಕಡ 15%ಕ್ಕಿಂತ ಹೆಚ್ಚಿರಬಾರದು.

* ಮಂತ್ರಿಮಂಡಲವು ಎರಡು ಬಗೆಯ ಹೊಣೆಗಾರಿಕೆಯನ್ನು ಹೊಂದಿದೆ.

*ಪ್ರತಿ ಇಲಾಖೆಯ ಮಂತ್ರಿಯು ತಮ್ಮ ಖಾತೆಯ ಆಗು-ಹೋಗುಗಳು, ಸಫಲತೆ-ವಿಫಲತೆಗೆ ರಾಷ್ಟ್ರಪತಿಗೆ ವೈಯಕ್ತಿಕ ಹೋಣೆಗಾರಿಕೆಯನ್ನು ಹೊಂದಿರುತ್ತಾರೆ.

*ಮಂತ್ರಿ ಮಂಡಲ ತನ್ನ ಆಡಳಿತ ನಿರ್ವಹಣೆಗೆ, ನೀತಿ ನಿರ್ಧಾರಗಳು ಹಾಗೂ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಲೋಕಸಭೆಗೆ ಸಾಮೂಹಿಕ ಹೊಣೆಗಾರಿಕಯನ್ನು ಹೊಂದಿರುತ್ತದೆ.

*ಮಂತ್ರಿ ಮಂಡಲವು ಲೋಕಸಭೆಯಲ್ಲಿ ವಿಶ್ವಾಸವಿರುವವರೆಗೂ ಅಧಿಕಾರದಲ್ಲಿ ಮುಂದುವರೆಯುತ್ತದೆ.

*ವಿಶ್ವಾಸ ಕಳೆದುಕೊಂಡರೆ ಅವಿಶ್ವಾಸ ಗೊತ್ತುವಳಿ ಮೂಲಕ ಅಧಿಕಾರದಿಂದ ತೆಗೆದುಹಾಕಬಹುದಾಗಿದೆ.

9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon