ನೈಸರ್ಗಿಕ ಸಂಪನ್ಮೂಲಗಳು | 9ನೇ ತರಗತಿ ಅರ್ಥಶಾಸ್ತ್ರ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |

ಅಧ್ಯಾಯ 1 ನೈಸರ್ಗಿಕ ಸಂಪನ್ಮೂಲಗಳು

I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.

1. ನೈಸರ್ಗಿಕ ಸಂಪನ್ಮೂಲಗಳು ನಿಸರ್ಗದ __ ಆಗಿವೆ.

ಉತ್ತರ : ಕೊಡುಗೆ

2. ನಿರ್ದಿಷ್ಟ ಅವಧಿಯಲ್ಲಿ __ ಸಂಪನ್ಮೂಲಗಳು ಪುನರುತ್ಪಾದನೆ ಹೊಂದುತ್ತವೆ.

ಉತ್ತರ : ನವೀಕರಣಗೊಳ್ಳುವ

3. ಕಬ್ಬಿಣದ ಅದಿರು __ ಸಂಪನ್ಮೂಲವಾಗಿದೆ.

ಉತ್ತರ : ಮುಗಿದುಹೋಗುವ

4. ಸಂಪನ್ಮೂಲದ ಅವಶ್ಯಕತೆ ಅದರ ಲಭ್ಯತೆ ಗಿಂತ ಅಧಿಕವಾದಾಗ ___ ಉಂಟಾಗುತ್ತದೆ.

ಉತ್ತರ : ಕೊರತೆ

5. ಮುಂದಿನ ಪೀಳಿಗೆಯವರ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುವಂತ ಅಭಿವೃದ್ಧಿ ತಂತ್ರವನ್ನು __ ಅಭಿವೃದ್ಧಿ ಎಂದು ಕರೆಯುತ್ತೇವೆ.

ಉತ್ತರ : ಸುಸ್ಥಿರ

6. 2010 ರಲ್ಲಿ ಮಾನವರು ತಮ್ಮ ತಮ್ಮ ಇಷ್ಟಗಳನ್ನು ಪೂರೈಸಿಕೊಳ್ಳಲು __ ಪ್ರತಿಗಳಷ್ಟು ಪ್ರದೇಶದ ಬಳಕೆ ಮಾಡುತ್ತಿದ್ದರು.

ಉತ್ತರ : ಒಂದುವರೆ

II. ಕೆಳಗಿನ ಪ್ರಶ್ನೆಗಳನ್ನು ಒಂದು ವಾಕ್ಯದಲ್ಲಿ ಉತ್ತರಿಸಿ:

1. ನೈಸರ್ಗಿಕ ಸಂಪನ್ಮೂಲಗಳು ಎಂದರೇನು ?

ಉತ್ತರ : ನೈಸರ್ಗಿಕವಾಗಿ ಲಭ್ಯವಿದ್ದು, ತಾವಿದ್ದ ಸ್ವರೂಪದಲ್ಲಿಯೇ ಮೌಲ್ಯಯುತ ಎಂದು ಪರಿಗಣಿತವಾಗಿರುವ ವಸ್ತುಗಳನ್ನು ನೈಸರ್ಗಿಕ ಸಂಪನ್ಮೂಲಗಳು ಎಂದು ಕರೆಯಬಹುದು.

2. ನವೀಕರಣ ಹೊಂದುವ ಎರಡು ಸಂಪನ್ಮೂಲಗಳನ್ನು ಉದಾಹರಿಸಿ.

ಉತ್ತರ : ನವೀಕರಣ ಹೊಂದುವ ಸಂಪನ್ಮೂಲಗಳು ಎಂದರೆ :

ನೀರು

ಭೂಮಿ

ಅರಣ್ಯ

ಗಾಳಿ

ಸೂರ್ಯನ ಶಾಖ ಮುಂತಾದವು.

3. ಜೈವಿಕ ಸಂಪನ್ಮೂಲಗಳ ಎರಡು ಉದಾಹರಣೆಗಳನ್ನು ನೀಡಿರಿ.

ಉತ್ತರ : ಜೈವಿಕ ಸಂಪನ್ಮೂಲಗಳ ಉದಾಹರಣೆಗಳು

ಸಸ್ಯಗಳು ಮತ್ತು ಪ್ರಾಣಿಗಳು.

4. ಸಂರಕ್ಷಣೆ ಎಂದರೇನು ?

ಉತ್ತರ : ಸಂಪನ್ಮೂಲಗಳ ಸಂರಕ್ಷಣೆ ಎಂದರೆ ಅವುಗಳ ಬಳಕೆಯನ್ನು ಕಡಿಮೆ ಮಾಡಿ ಅವುಗಳ ನ್ಯಾಯೋಚಿತ ಬಳಕೆಯನ್ನು ಪ್ರೋತ್ಸಾಹಿಸಿ ಪರಿಸರ ಮತ್ತು ಸಂಪನ್ಮೂಲ ಬಳಕೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಆಗಿದೆ.

5. ಜೀವಪರಿಸರದ ಹೆಜ್ಜೆ ಗುರುತನ್ನು ವ್ಯಾಖ್ಯಾನಿಸಿ.

ಉತ್ತರ : ವರ್ಲ್ಡ್ ವೈಲ್ಡ್ ಲೈಫ್ ಫಂಡ್ (WWF) ಸಂಸ್ಥೆಯು ' ಜೀವ ಪರಿಸರದ ಹೆಜ್ಜೆ ಗುರುತು' ಎಂಬ ಸಾಧನವನ್ನು ಸಿದ್ಧಪಡಿಸಿ ಅದರ ಮೂಲಕ ಒಂದು ರಾಷ್ಟ್ರ ಅಥವಾ ಯಾವುದೇ ರಾಷ್ಟ್ರದ ಒಬ್ಬ ವ್ಯಕ್ತಿಯ ಸಂಪನ್ಮೂಲಗಳ ಬಳಕೆ ಮತ್ತು ತ್ಯಾಜ್ಯ ಉತ್ಪನ್ನದ ಪ್ರಮಾಣಗಳ ಮೂಲಕ ಪರಿಸರದ ಮೇಲೆ ಬೀಳುವ ಒತ್ತಡವನ್ನು ಅಳೆಯುತ್ತಿದ್ದೆ.

6. ಪುನರ್ ಬಳಕೆ ಎಂದರೇನು ?

ಉತ್ತರ : ಪ್ರತಿಯೊಂದು ಸಂಪನ್ಮೂಲಗಳನ್ನು ಪೂರ್ಣಪ್ರಮಾಣದಲ್ಲಿ ಬಳಸಿ ತೇಜಿ ಸದೆ ಅದನ್ನೇ ಮತ್ತೆ ಮತ್ತೆ ಬೇರೆ ಬೇರೆ ಕೆಲಸಗಳಿಗೆ ಉಪಯೋಗಿಸಬಹುದಾದ ಪ್ರಕ್ರಿಯೆಯನ್ನು ಪುನರ್ಬಳಕೆ ಎನ್ನುವರು.

III. ಕೆಳಗಿನ ಪ್ರಶ್ನೆಗಳನ್ನು ಐದರಿಂದ ಆರು ವಾಕ್ಯಗಳಲ್ಲಿ ಉತ್ತರಿಸಿ.

1. ನವೀಕರಣ ಹೊಂದುವ ಮತ್ತು ಬರಿದಾಗುವ ಸಂಪನ್ಮೂಲಗಳ ನಡುವಿನ ವ್ಯತ್ಯಾಸ ತಿಳಿಸಿ.

ಉತ್ತರ : ನವೀಕರಣಗೊಳ್ಳುವ ಅಥವಾ ಪುನರುತ್ಪತ್ತಿ ಹೊಂದುವ ಸಂಪನ್ಮೂಲಗಳು :

ಕೆಲವು ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಬಳಸಿಕೊಳ್ಳುತ್ತಾ ಹೋದಂತೆ ಪುನಹ ತಮ್ಮ ಮೂಲ ಸ್ವರೂಪವನ್ನು ಪಡೆದುಕೊಂಡು ನಿರಂತರವಾಗಿ ನಮ್ಮ ಬಳಕೆಗೆ ದೊರಕುತ್ತವೆ.

ಇಂತಹ ಸಂಪನ್ಮೂಲಗಳನ್ನು ನವೀಕರಣಗೊಳ್ಳುವ ಅಥವಾ ಪುನರುತ್ಪತ್ತಿ ಹೊಂದುವ ಅಥವಾ ಬರಿದಾಗದ ಸಂಪನ್ಮೂಲಗಳು ಎಂದು ಕರೆಯುತ್ತೇವೆ.

ಇವುಗಳನ್ನು ನಾವು ಬಳಸಿದಂತೆ ಪ್ರಕೃತಿಯು ತನ್ನ ನೈಸರ್ಗಿಕ ಪ್ರಕ್ರಿಯೆಗಳ ಮೂಲಕ ಅವುಗಳನ್ನು ಮತ್ತೆ ಮತ್ತೆ ತುಂಬಿಕೊಡುತ್ತದೆ.

ಉದಾಹರಣೆ : ನೀರು ಭೂಮಿ ಅರಣ್ಯ ಗಾಳಿ ಸೂರ್ಯನ ಶಾಖ ಮೀನುಗಳು ಮುಂತಾದವು.

ಮುಗಿದು ಹೋಗುವ ಸಂಪನ್ಮೂಲಗಳು : ಕೆಲವು ನೈಸರ್ಗಿಕ ಸಂಪನ್ಮೂಲಗಳು ನಾವು ಬಳಸಿದಂತೆ ಕ್ರಮೇಣ ಕಡಿಮೆಯಾಗಿ ಅಂತಿಮವಾಗಿ ಖಾಲಿಯಾಗುವ ಅಥವಾ ಬರಿದಾಗುವ ಲಕ್ಷಣ ಹೊಂದಿದೆ.

ಅವುಗಳ ಸೃಷ್ಟಿ ಮತ್ತೆ ಸಾಧ್ಯವಿಲ್ಲ.

ಇಂತಹ ಸಂಪನ್ಮೂಲಗಳನ್ನು ಮುಗಿದು ಹೋಗುವ ಸಂಪನ್ಮೂಲಗಳು ಎನ್ನುತ್ತೇವೆ.

ಕಬ್ಬಿಣದ ಅದಿರು ತಾಮ್ರ ಚಿನ್ನ ಮ್ಯಾಂಗನೀಸ್ ಬಾಕ್ಸೈಟ್ ಮುಂತಾದ ಖನಿಜಗಳು.

ಕಲ್ಲಿದ್ದಲು ಪೆಟ್ರೋಲಿಯಂ ನೈಸರ್ಗಿಕ ಅನಿಲ ಯುರೇನಿಯಮ್ ಥೋರಿಯಮ್ ಮುಂತಾದ ಇಂದನಗಳು.

ಇವುಗಳನ್ನು ನಿಸರ್ಗವು ತನ್ನ ಪ್ರಕ್ರಿಯೆ ಮೂಲಕ ಮತ್ತೆ ತುಂಬಿಕೊಡಲು ಸಾಧ್ಯವಿರುವುದಿಲ್ಲ ಆದ್ದರಿಂದ ಇವುಗಳನ್ನು ನವೀಕರಿಸಲಾಗದ ಸಂಪನ್ಮೂಲಗಳು ಎನ್ನುತ್ತೇವೆ.

2. ಸಂಪನ್ಮೂಲಗಳ ಕೊರತೆಯು ಅಧಿಕವಾಗುತ್ತಿರುವುದಕ್ಕೆ ಕಾರಣಗಳನ್ನು ನೀಡಿ.

ಉತ್ತರ : ಸಂಪನ್ಮೂಲಗಳ ಕೊರತೆಯು ಅಧಿಕವಾಗುತ್ತಿರುವದಕ್ಕೆ ಕಾರಣಗಳು ರೀತಿಯಾಗಿವೆ.

1. ಮಿತಿಮೀರಿದ ಜನಸಂಖ್ಯೆ

2. ಹೆಚ್ಚುತ್ತಿರುವ ಔದ್ಯೋಗೀಕರಣ

3. ವಿಸ್ತರಣೆ ಆಗುತ್ತಿರುವ ನಗರ ಪ್ರದೇಶಗಳು

4. ವಾಯುಮಾಲಿನ್ಯ

5. ಜಲ ಮಾಲಿನ್ಯ

6. ಭೂಸವಕಳಿ.

3. 4R ಗಳೆಂದರೇನು ಸಂಕ್ಷಿಪ್ತವಾಗಿ ಬರೆಯಿರಿ.

ಉತ್ತರ : ಸಂಪನ್ಮೂಲಗಳ ಸಂರಕ್ಷಣೆಯ ನಮ್ಮೆಲ್ಲರ ಹೊಣೆಯಾಗಿದೆ.

ಅದನ್ನು ಹೇಗೆ ಸಾಕಾರಗೊಳಿಸುವುದು ಎಂದರೆ 4 R ತಂತ್ರದ ಮೂಲಕ.

4R ಗಳು ಯಾವುವೆಂದರೆ.

1R Reduce ಸಂಪನ್ಮೂಲಗಳ ಬಳಕೆಯನ್ನು ಕಡಿಮೆ ಮಾಡುವುದು.

2R Reuse ಸಂಪನ್ಮೂಲಗಳ ಮರುಬಳಕೆ ಮಾಡುವುದು.

3R Recharge ಸಂಪನ್ಮೂಲಗಳ ಪುನಹ ಭರ್ತಿ ಮಾಡುವುದು ಮತ್ತು ಪುನರುಜ್ಜೀವನಗೊಳಿಸುವುದು.

4R Research ನವೀಕರಣಗೊಳಿಸ ಬಹುದಾದ ವಸ್ತುಗಳ ಸಂಶೋಧನೆ ಮಾಡುವುದು.

4. ನಿಮ್ಮ ಮನೆ ಮತ್ತು ಶಾಲೆಗಳಲ್ಲಿ ಇಂಧನ ಉಳಿತಾಯಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳುವಿರಿ.

ಉತ್ತರ : ಮನೆ ಮತ್ತು ಶಾಲೆಗಳಲ್ಲಿ ಇಂಧನ ಉಳಿತಾಯಕ್ಕೆ ಕೈಗೊಳ್ಳಬಹುದಾದ ಕ್ರಮಗಳು.

ಬಳಕೆ ಮುಗಿದ ಮೇಲೆ ಎಲ್ಲಾ ವಿದ್ಯುದ್ದೀಪಗಳನ್ನು ಆರಿಸುವುದು.

ರಾತ್ರಿ ಹೊತ್ತಿನಲ್ಲಿ ಏರ್ ಕಂಡೀಷನರ್ ಮತ್ತು ಹೀಟರ್ ಗಳನ್ನು ಆರಿಸುವುದು.

ಕಿಟಕಿ ಮತ್ತು ಬಾಗಿಲುಗಳು ಸಾಕಷ್ಟು ಗಾಳಿ ಬೆಳಕು ಆಡುವಂತೆ ಮಾಡುವುದು.

ಅಗತ್ಯವಿರುವಷ್ಟು ಮಾತ್ರ ಇಂಧನದ ವಸ್ತುಗಳನ್ನು ಬಳಸುವುದು.

ಶಾಲೆಗೆ ನಡೆದು ಹೋಗುವುದು ಮತ್ತು ಸೈಕಲ್ ಅನ್ನು ಬಳಸುವುದು.

ಸಾರ್ವಜನಿಕ ಸಾರಿಗೆಯನ್ನು ಬಳಸುವುದು.

ಹೊರಗೆ ಹೋಗುವಾಗ ಅಥವಾ ನಡೆಯುವ ದಾರಿ ದೂರ ಇದ್ದಾಗ ಕಾರ್ ಫುಲ್ ಬಳಸುವುದು.

5. ಜೀವಪರಿಸರದ ಹೆಜ್ಜೆ ಗುರುತನ್ನು ಕಡಿಮೆ ಮಾಡಲು ಯಾವ ಕ್ರಮಗಳನ್ನು ಕೈಗೊಳ್ಳುವಿರಿ.

ಉತ್ತರ : ನಮ್ಮ ಪ್ರತಿಯೊಬ್ಬರದ್ದು ಜೀವಪರಿಸರದ ಹೆಜ್ಜೆ ಗುರುತು ಇದ್ದು.

ಒಟ್ಟಾರೆ ಹೆಜ್ಜೆಗುರುತಿನ ಹೆಚ್ಚಳಕ್ಕೆ ಕೊಡುಗೆ ನೀಡುತ್ತಿದ್ದೇವೆ.

ಆದ್ದರಿಂದ ಜೀವಪರಿಸರದ ಹೆಜ್ಜೆ ಗುರುತನ್ನು ಕಡಿಮೆ ಮಾಡಬೇಕಾದರೆ ನಾವೇ ಮೊದಲು ಅದನ್ನು ಪ್ರಾರಂಭಿಸುವುದು ಸೂಕ್ತ.

ಇಲ್ಲಿ ಬಹು ಮುಖ್ಯವಾದ ಸಂಗತಿಯೆಂದರೆ ಕುರಿತು ನಾವು ಅರಿತುಕೊಂಡು ನಮ್ಮ ಸಮೀಪದವರೆಗೆ ಮನದಟ್ಟು ಮಾಡಿಸಿ ಜನರ ಒಟ್ಟಾರೆ ತಿಳುವಳಿಕೆ ಹೆಚ್ಚಿಸುವುದು.

ಮೂಲಕ ನಮ್ಮ ಪ್ರಭಾವ ಅರ್ಥಪೂರ್ಣವಾಗುತ್ತದೆ.

ಉದಾಹರಣೆಗೆ ತ್ಯಾಜ್ಯ ವಸ್ತುಗಳ ಮರುಬಳಕೆ ಯನ್ನು ನಾವು ಪ್ರಾರಂಭಿಸಿ ನಮ್ಮ ಮನೆಯವರಿಗೆ ಅದರ ಕುರಿತು ಜಾಗೃತಿ ಮೂಡಿಸಿದಾಗ ಅವರು ಅದನ್ನು ಅಳವಡಿಸಿಕೊಳ್ಳುತ್ತಾರೆ.

ಅಲ್ಲದೆ ವಿಷಯವು ನೆರೆಹೊರೆಯ ವರೆಗೂ ಹಬ್ಬುತ್ತದೆ.

ಇದು ಒಂದು ಸಣ್ಣ ಪ್ರಯತ್ನವಾದರೂ ವಿಶಾಲ ಪರಿಣಾಮ ಬೀರುವಂತಾಗಿದೆ.

9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon