ಹಣಕಾಸಿನ ನಿರ್ವಹಣೆ ಅಧ್ಯಾಯ - 2 | ವ್ಯವಹಾರ ಅಧ್ಯಯನ | 9ನೇ ತರಗತಿ ಸಮಾಜ ವಿಜ್ಞಾನ | ಒಂಬತ್ತನೇ ತರಗತಿ ಸಮಾಜ ವಿಜ್ಞಾನ |

ಅಧ್ಯಾಯ - 2. ಹಣಕಾಸಿನ ನಿರ್ವಹಣೆ

I ಕೆಳಗಿನ ವಾಕ್ಯಗಳಲ್ಲಿ ಬಿಟ್ಟಿರುವ ಜಾಗಗಳನ್ನು ಸೂಕ್ತವಾದ ಪದಗಳಿಂದ ತುಂಬಿರಿ.

1. ವ್ಯವಹಾರ ಸಂಸ್ಥೆಗಳಿಗೆ ಎರಡು ರೀತಿಯ ಹಣಕಾಸಿನ ಅವಶ್ಯಕತೆ ಇರುತ್ತದೆ. ಅವು ಯಾವುವೆಂದರೆ _____ ಮತ್ತು _____

ಉತ್ತರ: ಅಲ್ಪಾವದಿ ಹಣಕಾಸು ಮತ್ತು ದೀರ್ಘಾವಧಿ ಹಣಕಾಸು

2. ವಸ್ತುಗಳನ್ನು ಪೂರೈಸುವವರು ಕೊಳ್ಳುವವರಿಂದ ಸಾಲಪಡೆಯುತ್ತಾರೆ ಇದನ್ನು _____ ಸಾಲ ಎನ್ನುತ್ತಾರೆ.

ಉತ್ತರ: ವ್ಯಾಪಾರ ಸಾಲ

3. ವ್ಯವಹಾರ ಸಂಸ್ಥೆಗಳು ತಮ್ಮ ದಿನವಹಿ ಕಾರ್ಯಗಳಿಗಾಗಿ _____ ರೀತಿಯ ಸಾಲವನ್ನು ಪಡೆಯುತ್ತಾರೆ.

ಉತ್ತರ: ಬ್ಯಾಂಕು ಸಾಲ

4. ಅತ್ಯಂತ ತ್ವರಿತ ಬೇಡಿಕೆಗಳಿಗಾಗಿ ವ್ಯವಹಾರ ಸಂಸ್ಥೆಗಳು _____ ರಿಂದ ಸಾಲ ಪಡೆಯುತ್ತಾರೆ.

ಉತ್ತರ: ಸ್ಥಳೀಯ ಲೇವಾದೇವಿಗಾರ (ಸಾಹುಕಾರ)

5. ಕೂಡು ಬಂಡವಾಳವನ್ನು ಚಿಕ್ಕ ಚಿಕ್ಕ ಭಾಗಗಳಾಗಿ ವಿಂಗಡಿಸಿರುತ್ತಾರೆ ಇವುಗಳನ್ನು _____ ಎಂದು ಕರೆಯುತ್ತಾರೆ.

ಉತ್ತರ: ಷೇರುಗಳು

6. ವ್ಯವಹಾರ ಸಂಸ್ಥೆಗಳ ಆಯಾತ ಮತ್ತು ನಿರ್ಯಾತಗಳಿಗಾಗಿ ಸಾಲ ನೀಡುವ ಬ್ಯಾಂಕು _____ ಬ್ಯಾಂಕಾಗಿದೆ.

ಉತ್ತರ: ಆಯಾತ ನಿರ್ಯಾತ

7. ಭಾರತೀಯ ಕೈಗಾರಿಕಾ ಹಣಕಾಸು ನಿಗಮವು _____ ಇಸವಿಯಲ್ಲಿ ಸ್ಥಾಪಿತವಾಯಿತು.

ಉತ್ತರ: 1948

8. ಭಾರತದಲ್ಲಿ ಮೊಟ್ಟಮೊದಲ ಷೇರುಮಾರುಕಟ್ಟೆ  _____ ಪಟ್ಟಣದಲ್ಲಿ ಪ್ರಾರಂಭವಾಯಿತು.

ಉತ್ತರ: ಮುಂಬೈ

II ಕೆಳಗಿನ ಪ್ರಶ್ನೆಗಳಿಗೆ ಪ್ರತಿಯೊಂದನ್ನು ಗುಂಪುಗಳಲ್ಲಿ ಚರ್ಚಿಸಿ ಎರಡು, ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

1. ವ್ಯವಹಾರ ಶಾಸ್ತ್ರದಲ್ಲಿ ಹಣಕಾಸು ನಿರ್ವಹಣೆ ಎಂದರೇನು?

ಉತ್ತರ: ವ್ಯವಹಾರ ಶಾಸ್ತ್ರದಲ್ಲಿ ಹಣಕಾಸಿನ ನಿರ್ವಹಣೆ ಎಂದರೆ ನಿಧಿಗಳ ಸಂಗ್ರಹಣೆ, ಹಂಚಿಕೆ ಮತ್ತು ಅದನ್ನು ಸಮರ್ಪಕವಾಗಿ ನಿಭಾಯಿಸುವುದೇ ಆಗಿದೆ.

2. ವ್ಯವಹಾರ ಸಂಸ್ಥೆಗಳಿಗೆ ಬೇಕಾದ ಎರಡು ರೀತಿಯ ಸಾಲಗಳಾವುವು?

ಉತ್ತರ: ವ್ಯವಹಾರ ಸಂಸ್ಥೆಗಳಿಗೆ ಬೇಕಾದ ಎರಡು ರೀತಿಯ ಸಾಲಗಳು

1) ಅಲ್ಪಾವಧಿ ಹಣಕಾಸು

2) ದೀರ್ಘಾವಧಿ ಹಣಕಾಸು

3. ವ್ಯವಹಾರ ಸಂಸ್ಥೆಗಳಿಗೆ ಅಲ್ಪಾವಧಿ ಸಾಲಕ್ಕಾಗಿ ಇರುವ ಯಾವುದಾದರೂ ನಾಲ್ಕು ಮೂಲಗಳನ್ನು ತಿಳಿಸಿ?

ಉತ್ತರ: ಅಲ್ಪಾವಧಿ ಹಣಕಾಸು ಮೂಲಗಳು:

1) ವ್ಯಾಪಾರ ಸಾಲ

2) ಬ್ಯಾಂಕು ಉದ್ದರಿ ಅಥವಾ ಬ್ಯಾಂಕು ಸಾಲ

3) ಗ್ರಾಹಕ ಮುಂಗಡಗಳು

4) ಅಲ್ಪಾವಧಿ ಸಾರ್ವಜನಿಕ ಠೇವಣಿಗಳು ಅಥವಾ ಕಂತುಗಳ ಮೂಲಕ ಸಾಲ

5) ಸ್ಥಳೀಯ ಲೇವಾದೇವಿಗಾರರಿಂದ (ಸಾಹುಕಾರರು) ಸಾಲ

4. ವ್ಯವಹಾರ ಸಂಸ್ಥೆಗಳಿಗೆ ಅಲ್ಪಾವಧಿ ಸಾಲ ಏಕ ಬೇಕಾಗುತ್ತದೆ ತಿಳಿಸಿ?

ಉತ್ತರ: ಕಚ್ಚಾ ಪದಾರ್ಥಗಳನ್ನು ಕೊಳ್ಳಲು,

ವೇತನ ಮತ್ತು ಕೂಲಿಗಳನ್ನು ಕೊಡಲು,

ಮಾರುಕಟ್ಟೆಗೆ ತಗಲುವ ವೆಚ್ಚವನ್ನು ಭರಿಸಲು ಹಾಗೂ

ಆಡಳಿತಾತ್ಮಕ ವೆಚ್ಚಗಳಿಗಾಗಿ ಹಣಕಾಸು ಬೇಕಾಗುತ್ತದೆ.

ಸಂಸ್ಥೆಗಳಿಗೆ ವಸ್ತುಗಳನ್ನು ಮಾರಾಟ ಮಾಡಿದಾಗಿನಿಂದ ಅವುಗಳ ಬೆಲೆ ಬರುವವರೆಗೂ ಕೆಲವು ಸಮಯ ತೆಗೆದುಕೊಳ್ಳುತ್ತದೆ.

ಅವಧಿಯಲ್ಲಿ ತಗಲುವ ವೆಚ್ಚಗಳನ್ನು ಭರಿಸಲು ಅಲ್ಪಾವಧಿ ಹಣಕಾಸಿನ ಅವಶ್ಯಕತೆ ಇರುತ್ತದೆ.

5. ದೀರ್ಘಾವಧಿ ಸಾಲ ಎಂದರೇನು?

ಉತ್ತರ: ಸಾಮಾನ್ಯವಾಗಿ ದೀರ್ಘಾವಧಿ ಸಾಲದ ಮರುಪಾವತಿ ಅವಧಿಯು ಹೆಚ್ಚು ಸಮಯಕ್ಕೆ ಹೊಂದಿರುತ್ತದೆ.

ಅಂದರೆ ಒಂದು ವರ್ಷಕ್ಕೆ ಮೀರಿರುತ್ತದೆ.

6. ಅನ್ಯೋನ್ಯ ನಿಧಿಗಳ ಯಾವುದಾದರು ಮೂರು ಸಂಸ್ಥೆಗಳನ್ನು ತಿಳಿಸಿ?

ಉತ್ತರ: ಯೂನೀಟ್ ಟ್ರಸ್ಟ್ ಆಫ್ ಇಂಡಿಯಾ (UTI) SBI,

ಮಾಗ್ನಮ್ ಈಕ್ವಿಟಿ ಫಂಡ್,

ಜೀವವಿಮಾ ಬೆಳವಣಿಗೆ ಠೇವಣಿ,

ಮಾರುಕಟ್ಟೆ ಯೋಜನ,

ICICI ಪ್ರಡೆನ್ಷಿಯಲ್ ಫಂಡ್ ಆದಾಯ ಠೇವಣಿ,

ಬಜಾಜ್ ಅಲಿಯನ್ಸ್ ಮುಂತಾದವು.

III ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಗುಂಪಿನಲ್ಲಿ ಚರ್ಚಿಸಿ, ಎಂಟರಿಂದ ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

1. ವ್ಯವಹಾರ ಸಂಸ್ಥೆಗಳಿಗೆ ಹಣಕಾಸಿನ ಪ್ರಾಮುಖ್ಯತೆ ಮತ್ತು ಪಾತ್ರವನ್ನು ತಿಳಿಸಿ.

ಉತ್ತರ: ವ್ಯವಹಾರ ಸಂಸ್ಥೆಗಳಲ್ಲಿ ಹಣಕಾಸಿನ ಪಾತ್ರ ಮತ್ತು ಪ್ರಾಮುಖ್ಯತೆ:

1) ಹಣಕಾಸು: ವ್ಯವಹಾರ ಸಂಸ್ಥೆಗಳ ಜೀವರಕ್ತವಾಗಿದೆ. ಹಣಕಾಸು ಇಲ್ಲದೆ ಯಾವುದೇ ವ್ಯವಹಾರ ಚಟುವಟಿಕೆಗಳು ಸಾಧ್ಯವಿಲ್ಲ.

2) ಹಣಕಾಸು: ಉತ್ಪಾದನೆಯ ಕಾರ್ಯದಲ್ಲಿ ಮತ್ತು ವಸ್ತುಗಳನ್ನು ಹಾಗೂ ಸೇವೆಗಳನ್ನು ಒದಗಿಸುವ ಪ್ರಕ್ರಿಯೆಯಲ್ಲಿ ಬೇಕಾಗುವ ಸಾಧನಗಳನ್ನು ಪೂರೈಸುತ್ತದೆ.

3) ಹಣಕಾಸು: ವ್ಯವಹಾರ ಸಂಸ್ಥೆಗಳ ಹಲವಾರು ಅಂಗಗಳು ತಮ್ಮ ಗುರಿಗಳನ್ನು ಸಾಧಿಸುವುದು ಮತ್ತು ವ್ಯವಹಾರ ನಡೆಸಿಕೊಂಡು ಹೋಗುವ ದಿಕ್ಕಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

4) ಹಣಕಾಸು: ಬಂಡವಾಳವನ್ನು ತೊಡಗಿಸುವುದರಲ್ಲಿ ಹಾಗೂ ವಿನಿಯೋಗ ಮಾಡುವ ದಿಕ್ಕಿನಲ್ಲಿ ಒಂದು ನಿಯಂತ್ರಿತ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತದೆ.

5) ಹಣಕಾಸು: ಸಂಸ್ಥೆಯನ್ನು ಆಧುನಿಕತೆಗೊಳಿಸುವುದು, ವೈವಿಧ್ಯತೆಮಾಡುವುದು ವಿಸ್ತರಿಸುವುದು ಹಾಗೂ ವೃದ್ಧಗೊಳಿಸುವುದರಲ್ಲಿ ಸಹಾಯ ಮಾಡುತ್ತದೆ.

6) ಹಣಕಾಸು: ಸಂಸ್ಥೆಯು ಕೈಗೊಳ್ಳುವ ಹೊಸ ಪರಿಶೋದನೆಗಳು, ಮಾರುಕಟ್ಟೆ ಸಮೀಕ್ಷೆ, ಜಾಹಿರಾತು ಹಾಗೂ ಸಂಸ್ಥೆಯ ಬಗ್ಗೆ ಹೆಚ್ಚು ಪ್ರಚಾರ ಪಡಿಸುವಲ್ಲಿ ಅವಶ್ಯಕವಾಗಿದೆ.

7) ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಹಣಕಾಸಿನ ಅವಶ್ಯಕತೆ ಹೆಚ್ಚಾಗಿದೆ.

8) ಹಣಕಾಸಿನ ಸ್ಥಿರತೆ ಒಂದು ಸಂಸ್ಥೆಯ ಯೋಗ್ಯತೆಯನ್ನು ಹೆಚ್ಚಿಸುತ್ತದೆ.

2. ವ್ಯವಹಾರ ಸಂಸ್ಥೆಗಳಿಗೆ ದೀರ್ಘಾವಧಿ ಸಾಲದ ಅವಶ್ಯಕತೆಗಳಾವುವು? ಸ್ಥೂಲವಾಗಿ ವಿವರಿಸಿ.

ಉತ್ತರ: ಸಾಮಾನ್ಯವಾಗಿ ದೀರ್ಘಾವಧಿ ಸಾಲದ ಮರುಪಾವತಿ ಹೆಚ್ಚು ಸಮಯಕ್ಕೆ ಅಂದರೆ ಒಂದು ವರ್ಷಕ್ಕೆ ಮೀರಿರುತ್ತದೆ.

ಸಾಲವು ಅಭಿವೃದ್ಧಿ ಕಾರ್ಯಗಳಾದ ಉತ್ಪಾದನೆಯ ಮಟ್ಟವನ್ನು ಹೆಚ್ಚಿಸುವುದು, ಆಧುನಿಕ ಉತ್ಪಾದನಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದು ಮುಂತಾದವುಗಳಿಗೆ ಅನ್ವಯವಾಗುತ್ತದೆ.

ರೀತಿಯ ಸಾಲವು ಸ್ಥಿರ ಬಂಡವಾಳದ ಕೆಲಸಗಳನ್ನು ಮಾಡುವುದಕ್ಕೆ ಬೇಕಾಗುತ್ತದೆ.

ಉದಾ: ಸ್ಥಿರ ಆಸ್ತಿಗಳನ್ನು ಹೊಂದುವುದು ಮತ್ತು ಪ್ರಸ್ತುತ ಉತ್ಪಾದನಾ ಕಾರ್ಯಗಳನ್ನು ಆಧುನಿಕ ಕಾರ್ಯಗಳಿಗೆ ವಿಸ್ತರಿಸುವುದು ಮುಂತಾದವು.

3. “ಷೇರುಗಳು ಮತ್ತು ಸಾಲ ಪತ್ರಗಳು ದೀರ್ಘಾವಧಿ ಸಾಲದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.” ಅವು ಯಾವುವು? ಅವು ಹೇಗೆ ಸಹಾಯ ಮಾಡುತ್ತವೆ?

ಉತ್ತರ: ಷೇರುಗಳನ್ನು ಕೊಡುವ ಮೂಲಕ ಸಂಗ್ರಹ:

ಕೂಡು ಬಂಡವಾಲ ಸಂಸ್ಥೆಗಳು ಬಂಡವಾಳವನ್ನು ಸಣ್ಣ ಸಣ್ಣ ಕನಿಷ್ಠ ಮೊತ್ತದ ಮೂಲಕ ಸಂಗ್ರಹಿಸುತ್ತವೆ.

ಕೂಡು ಬಂಡವಾಳ ಸಂಸ್ಥೆಗಳನ್ನು ಪ್ರಾರಂಭಿಸುವಾಗ ಪ್ರವರ್ತಕರು ಷೇರುಗಳನ್ನು ಸಾರ್ವಜನಿಕರಿಗೆ ಹಂಚುತ್ತಾರೆ

ಹಾಗೂ ಸಂಸ್ಥೆಗಳು ತಮಗೆ ಬಂಡವಾಳ ಹೆಚ್ಚಿಸಿಕೊಳ್ಳಬೇಕಾದ ಸಂದರ್ಭಗಳು ಬಂದಾಗಲೂ ಷೇರುಗಳನ್ನು ಸಾರ್ವಜನಿಕರಿಗೆ ಹಂಚುತ್ತವೆ.

ಸಾಲಪತ್ರಗಳನ್ನು ನೀಡುವ ಮೂಲಕ ಹಣಕಾಸಿನ ಸಂಗ್ರಹಣೆ :

ಕೂಡು ಬಂಡವಾಳ ಸಂಸ್ಥೆಗಳು ದೀರ್ಘಾವಧಿ ಸಾಲವನ್ನು ಸಂಗ್ರಹಿಸಲು ಸಾಲಪತ್ರಗಳು ಸಾರ್ವಜನಿಕರಿಗೆ ನೀಡುವುದರ ಮೂಲಕ ಹಣವನ್ನು ಸಂಗ್ರಹಿಸಲು ಅವಕಾಶವಿದೆ.

ಸಾಲಪತ್ರಗಳು (Debentures) ಸಂಸ್ಥೆಯ ಸಾಲಪತ್ರಗಳಾಗಿವೆ.

ಒಂದು ಸಂಸ್ಥೆಯು ತನ್ನ ಮೊಹರಿನ ಮೇಲೆ ಸಾರ್ವಜನಿಕರಿಗೆ ಸಾಲಪತ್ರಗಳನ್ನು ನೀಡಿ ಸಾಲವನ್ನು ಒಂದು ಅವಧಿಯ ನಂತರ ಮರುಪಾವತಿ ಮಾಡುವ ಕರಾರನ್ನು ಸಾಲಪತ್ರಗಳು ತಿಳಿಸಿರುತ್ತವೆ.

ಒಂದು ನಿರ್ದೀಷ್ಟ ದರದ ಬಡ್ಡಿ ಹಾಗೂ ಸಾಲಪತ್ರವನ್ನು ಹೊಂದಿರುವವರಿಗೆ ಕೊಡಲು ಒಪ್ಪಿರುತ್ತವೆ.

ಮೂಲಕ ಕೂಡು ವ್ಯವಹಾರ ಸಂಸ್ಥೆಗಳು ದೀರ್ಘಾವಧಿ ಸಾಲವನ್ನು ಸಾರ್ವಜನಿಕರಿಂದ ಸಂಗ್ರಹಿಸುತ್ತವೆ.

4. ಭಾರತ ಹಣಕಾಸು ನಿಗಮ (IFCI) ಮತ್ತು ರಾಜ್ಯ ಹಣಕಾಸು ನಿಗಮಗಳು (SPC) ವಾಣಿಜ್ಯ ಸಂಸ್ಥೆಗಳಿಗೆ ವ್ಯವಹಾರಕ್ಕೆ ಹಣಕಾಸು ಪೂರೈಸಲು ಯಾವ ಪಾತ್ರ ವಹಿಸುತ್ತವೆ?

ಉತ್ತರ: ಭಾರತೀಯ ಕೈಗಾರಿಕಾ ಹಣಕಾಸು ನಿಗಮ (IFCI)

ಸಂಸ್ಥೆಯು ಪಾರ್ಲಿಮೆಂಟಿನ ಕಾಯಿದೆಯ ಪ್ರಕಾರ ಕೈಗಾರಿಕೆಗಳಿಗೆ ದೀರ್ಘಾವಧಿ ಸಾಲಗಳನ್ನು ಕೊಡಲು 1948 ರಲ್ಲಿ ಸ್ಥಾಪಿತವಾಯಿತು.

ನಿಗಮವು ಸಾರ್ವಜನಿಕ ನಿಯಮಿತ ಕಂಪನಿಗಳು, ಸಹಕಾರಿ ಸಂಘಗಳು ಮತ್ತು ರಾಜ್ಯ ಸರ್ಕಾರದ ಒಡೆತನದಲ್ಲಿನ ನಿಯಮಿತ ಕಂಪನಿಗಳಿಗೆ ಸಾಲವನ್ನು ಕೊಡುತ್ತದೆ.

ರಾಜ್ಯ ಹಣಕಾಸು ನಿಗಮಗಳು (SFCs) :

ಭಾರತದ ಪಾರ್ಲಿಮೆಂಟು 1951ರಲ್ಲಿ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ರಾಜ್ಯ ಹಣಕಾಸು ನಿಗಮಗಳನ್ನು ಸ್ಥಾಪಿಸಲು ಕಾಯಿದೆಯನ್ನು ಮಾಡಿತು.

ಕಾಯಿದೆಯು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಹೊರತು ಪಡಿಸಿ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುತ್ತದೆ.

ರಾಜ್ಯ ಹಣಕಾಸು ನಿಗಮಗಳು ತಮ್ಮ ರಾಜ್ಯಗಳಲ್ಲಿನ ಸಣ್ಣ ಪ್ರಮಾಣದ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಹಣಕಾಸನ್ನು ಒದಗಿಸುತ್ತವೆ.

ರೀತಿಯಾಗಿ ಭಾರತ ಹಣಕಾಸು ನಿಗಮ ಮತ್ತು ರಾಜ್ಯ ಹಣಕಾಸು ನಿಗಮಗಳು ವಾಣಿಜ್ಯ ಸಂಸ್ಥೆಗಳಿಗೆ ವ್ಯವಹಾರಕ್ಕೆ ಹಣಕಾಸು ಪೂರೈಸಲು ಪಾತ್ರ ವಹಿಸುತ್ತವೆ.

5. ಸಾರ್ವಜನಿಕ ದೀರ್ಘಾವಧಿ ಠೇವಣಿಗಳೆಂದರೇನು? ಅವುಗಳಿಂದ ಸಾರ್ವಜನಿಕರಿಗಾಗುವ ಅನುಕೂಲತೆಗಳೇನು?

ಉತ್ತರ: ವ್ಯವಹಾರ ಸಂಸ್ಥೆಗಳು ತಮ್ಮ ದೀರ್ಘಾವಧಿ ಹಣದ ಅವಶ್ಯಕತೆಗಳನ್ನು ಸಾರ್ವಜನಿಕರಿಂದ ದೀರ್ಘಕಾಲದ ಠೇವಣಿಗಳ ಮೂಲಕ ಕೂಡ ಸಂಗ್ರಹಿಸುತ್ತವೆ.

ರೀತಿ ಠೇವಣಿಗಳನ್ನು ಪಡೆಯಲು ಹೆಚ್ಚು ನಿಯಮಾಚರಣೆಗಳಿಲ್ಲದೆ ಸುಲಭವಾಗಿ ಪಡೆಯಬಹುದು.

ಸಂಸ್ಥೆಗಳು ರೀತಿಯ ಠೇವಣಿಗಳನ್ನು ಐದು ವರ್ಷಗಳ ಅವಧಿಗೆ ಸಂಗ್ರಹಿಸಬಹುದು.

ಠೇವಣಿಗಳು ಸಾಮಾನ್ಯವಾಗಿ ಭದ್ರತೆ ಇಲ್ಲದೆ ಇರುವುದಾಗಿರುತ್ತವೆ.

ಠೇವಣಿಗಳ ಮೇಲೆ ಶೇ.8 ರಿಂದ 10ರವರೆಗೆ ಬಡ್ಡಿಯನ್ನು ಕೊಡಬಹುದು.

ಆದರೆ ಠೇವಣಿಗಳ ಒಟ್ಟು ಮೊತ್ತ ಸಂದಾಯವಾದ ಬಂಡವಾಳಕ್ಕಿಂತ ಶೇ 25 ರಷ್ಟನ್ನು ಮೀರುವಂತಿಲ್ಲ.

ಸಾಲಗಳಿಂದ ಸಾರ್ವಜನಿಕರೂ ಸಹ ತಮ್ಮ ಹಣವನ್ನು ಠೇವಣಿಗಳಂತೆ ಇಟ್ಟು ಲಾಭ ಪಡೆಯಲು ಸಾಧ್ಯವಾಗುತ್ತದೆ.

6. ಹಣಕಾಸು ಮಾರುಕಟ್ಟೆ ಎಂದರೇನು? ಇದು ಬಂಡವಾಳ ಮಾರುಕಟ್ಟೆಗಿಂತ ಹೇಗೆ ಭಿನ್ನವಾಗಿದೆ?

ಉತ್ತರ:

ಹಣದ ಮಾರುಕಟ್ಟೆ (Money Market)

ಹಣದ ಮಾರುಕಟ್ಟೆಯೆಂದರೆ ಒಂದು ಆರ್ಥಿಕ ವ್ಯವಸ್ಥೆಯಲ್ಲಿ ಅಲ್ಪಾವಧಿ ಸಾಲವನ್ನು ಕೊಡುವ ಮತ್ತು ಕೊಳ್ಳುವ ಹಣಕಾಸಿನ ಸಂಸ್ಥೆಗಳಿಗೆ ಸಂಬಂಧ ಪಟ್ಟಿದ್ದಾಗಿದೆ.

ಇಂತಹ ಮಾರುಕಟ್ಟೆಯು ಕಾರ್ಯಶೀಲ ಬಂಡವಾಳಕ್ಕಾಗಿ ವ್ಯವಹಾರ ಸಂಸ್ಥೆಗಳಿಗೆ ಹಣಕಾಸನ್ನು ಒದಗಿಸುತ್ತದೆ.

ಮಾರುಕಟ್ಟೆಯಲ್ಲಿ ಸಾಲಗಳ ಮೇಲಿನ ಬಂಡವಾಳ, ಬಡ್ಡಿದರ ನಿಗಧಿಪಡಿಸಿರುವ ಬಡ್ಡಿ ದರಕ್ಕಿಂತ ಹೆಚ್ಚಾಗಿರುತ್ತದೆ.

ಮಾರುಕಟ್ಟೆಗಳಿಂದ ಸಾಲಗಳನ್ನು ಒಂದು ದಿನದಿಂದ ಒಂದು ವಾರ, ಒಂದು ತಿಂಗಳು, 3 ರಿಂದ 6 ತಿಂಗಳುಗಳ ಅವಧಿಗೆ ಪಡೆಯಬಹುದು

ಸಾಲಗಳನ್ನು ವ್ಯಾಪಾರಿ ವಿನಿಮಯ ಪತ್ರಗಳು ಅಲ್ಪಾವಧಿ ಸಹಕಾರಿ ಬಾಂಡ್ ಗಳು, ಖಜಾನೆ ವಿನಿಮಯ ಪತ್ರಗಳು ಮುಂತಾದವುಗಳ ಉದ್ದರಿ ಸಾಧನಗಳ ಮೇಲೆ ಪಡೆಯಬಹುದು.

ದಿಸೆಯಲ್ಲಿ ವಾಣಿಜ್ಯ ಬ್ಯಾಂಕುಗಳು ಮತ್ತು ಖಾಸಗಿ ಲೇವಾದೇವಿಗಾರರು ಪ್ರಮುಖ ಪಾತ್ರ ವಹಿಸುತ್ತಾರೆ.

ಬಂಡವಾಳ ಮಾರುಕಟ್ಟೆ (Capital Market)

ಬಂಡವಾಳ ಮಾರುಕಟ್ಟೆಯೆಂದರೆ ದೀರ್ಘಾವಧಿಗೆ ಬಂಡವಾಲ ಸಾಲ ನೀಡುವುದಕ್ಕಾಗಿ ಮತ್ತು ಸಾಲ ಪಡೆಯುವುದಕ್ಕಾಗಿ ಸೌಲಭ್ಯ ಕಲ್ಪಿಸುವ ಸಾಂಸ್ಥಿಕ ವ್ಯವಸ್ಥೆಗಳಾಗಿವೆ.

ಸಾಮಾನ್ಯವಾಗಿ ಇವು ಸಂಸ್ಥೆಗಳ ಸ್ಥಿರ ಬಂಡವಾಳಕ್ಕಾಗಿ ಸಾಲವನ್ನು ನೀಡುತ್ತವೆ.

ಇಲ್ಲಿ ಬಡ್ಡಿದರವು ಹಣದ ಮಾರುಕಟ್ಟೆ ವಿಧಿಸುವುದಕ್ಕಿಂತ ಕಡಿಮೆ ಇರುತ್ತದೆ.

ಇವು 20 ರಿಂದ 30 ವರ್ಷದ ಅವಧಿಗೆ ಸಾಲ ಒದಗಿಸುತ್ತವೆ.

ಬಂಡವಾಳ ಮಾರುಕಟ್ಟೆಯಲ್ಲಿ ಹಣಕಾಸಿನ ಸಂಸ್ಥೆಗಳು, ಬಂಡವಾಳ ಸಂಸ್ಥೆಗಳು (finance corporations)  ಹೂಡಿಕೆ ವಿಶ್ವಸ್ಥಸಮಿತಿಗಳು ಅನ್ಯೋನ್ಯ ನಿಧಿಗಳು ಪ್ರಮುಖವಾದವು.

7. ವ್ಯವಹಾರ ಸಂಸ್ಥೆಗಳಿಗೆ ಷೇರುಮಾರುಕಟ್ಟೆಗಳ ಪಾತ್ರವನ್ನು ಸ್ಥೂಲವಾಗಿ ವಿವರಿಸಿ.

ಉತ್ತರ: ಷೇರುಮಾರುಕಟ್ಟೆಗಳು ಷೆರುಗಳನ್ನು ಮತ್ತು ಭದ್ರತಾ ಪತ್ರಗಳನ್ನು (Securities) ಕೊಳ್ಳುವಿಕೆ ಮತ್ತು ಮಾರುವಿಕೆಯನ್ನು ನಿಯಂತ್ರಿಸುತ್ತವೆ ಮತ್ತು ಹಿಡಿತದಲ್ಲಿಟ್ಟು ಕೊಂಡಿರುತ್ತವೆ.

ಇವು ಸರ್ಕಾರದಿಂದ ನಿಯಂತ್ರಿಸಲ್ಪಡುತ್ತವೆ.

ಇವು ಷೇರುಗಳನ್ನು ಮತ್ತು ಬಾಂಡುಗಳನ್ನು ಮಾರುವುದು ಮತ್ತು ಕೊಳ್ಳುವುದೇ ಅಲ್ಲದೆ ಇವುಗಳನ್ನು ಹೊಂದಿರುವ ಷೇರು ಮಾರುಕಟ್ಟೆಯ ಸದಸ್ಯರಿಗೆ ತಮ್ಮ ವಹಿವಾಟುಗಳನ್ನು ನಿರ್ವಹಿಸಲು ಸ್ಥಳಾವಕಾಸವನ್ನು ಮಾಡಿ ಕೊಡುತ್ತದೆ.

ಸದಸ್ಯರು ತಮ್ಮದೇ ಲೆಕ್ಕದಲ್ಲಿ ನಿಯಮಗಳು, ಕಾಯಿದೆಗಳು ಮತ್ತು ನಿಯಂತ್ರಣಗಳಿಗೆ ಒಳಪಟ್ಟಿರುತ್ತಾರೆ.

8, 9, 10 ಮತ್ತು PUC ಪ್ರಥಮ ಹಾಗೂ ದ್ವಿತೀಯ ನೋಟ್ಸ್ ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ನೋಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon