ವ್ಯವಹಾರ ನಿರ್ವಹಣೆ | 9ನೇ ತರಗತಿ ಸಮಾಜ ವಿಜ್ಞಾನ ವ್ಯವಹಾರ ಅಧ್ಯಯನ ಅಧ್ಯಾಯ 1 | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |

9ನೇ ತರಗತಿ ಸಮಾಜ ವಿಜ್ಞಾನ ವ್ಯವಹಾರ ಅಧ್ಯಯನ ಅಧ್ಯಾಯ 1 ವ್ಯವಹಾರ ನಿರ್ವಹಣೆ

I. ಕೆಳಗಿನ ಪ್ರಶ್ನೆಗಳಿಗೆ ಒಂದೆರಡು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

1. ನಿರ್ವಹಣೆ ಎಂದರೇನು?

ಉತ್ತರ : ನಿರ್ವಹಣೆ ಎಂಬುದು ಸಂಸ್ಥೆಯ ಪೂರ್ವನಿರ್ಧಾರಿತ ಗುರಿಗಳ ಈಡೇರಿಕೆಗಾಗಿ ಜನರ ಪ್ರಯತ್ನಗಳನ್ನು ಸಮನ್ವಯಗೊಳಿಸುವ ಮತ್ತು ಸಂಯೋಜಿಸುವ ರೀತಿಯಲ್ಲಿ ನಿರ್ದೇಶಿಸುವುದರ ಮೂಲಕ ಬೇರೆಯವರಿಂದ ಕೆಲಸ ಮಾಡಿಸುವ ಪ್ರಕ್ರಿಯೆ ಆಗಿರುತ್ತದೆ.

ನಿರ್ವಹಣೆ ಎಂದರೆ ಯೋಜನೆ, ಸಂಘಟನೆ, ಸಿಬ್ಬಂದಿ ಪೂರೈಕೆ, ನಿರ್ದೇಶನ, ಸಂಯೋಜನೆ ಮತ್ತು ನಿಯಂತ್ರಣದಂತಹ ಪ್ರಮುಖ ಕಾರ್ಯಗಳ ಒಟ್ಟು ಮೊತ್ತವಾಗಿರುತ್ತದೆ.

2. ನಿರ್ಧಾರ ಕೈಗೊಳ್ಳುವುದು ಎಂದರೇನು?

ಉತ್ತರ : ಸಂಸ್ಥೆಯ ಗುರಿ ಮತ್ತು ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸಂದರ್ಭ, ಅನುಭವ, ವಿವೇಚನೆ, ದೃಢತೆ, ಧೈರ್ಯ ಮತ್ತು ಸ್ಪಷ್ಟತೆಯಿಂದ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳನ್ನು ನಿರ್ಧಾರ ಕೈಗೊಳ್ಳುವುದು ಎನ್ನುವರು.

3. ವೈಯಕ್ತಿಕ ನಿರ್ಧಾರ ಹಾಗೂ ಗುಂಪು ನಿರ್ಧಾರ ಗಳೆಂದರೇನು?

ಉತ್ತರ : 1) ವೈಯಕ್ತಿಕ ನಿರ್ಧಾರ

ಏಕ ಒಡೆತನ ರೂಪವಾದ ಸಣ್ಣ ಪ್ರಮಾಣದ ವ್ಯವಹಾರ ಸಂಘಟನೆಗಳಲ್ಲಿ, ಒಬ್ಬ ವ್ಯಕ್ತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಇವುಗಳನ್ನು ವಯಕ್ತಿಕ ನಿರ್ಧಾರಗಳು ಎನ್ನುತ್ತಾರೆ. ನಿರ್ಣಯಗಳು ವ್ಯಕ್ತಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಇರುತ್ತವೆ.

2) ಗುಂಪು ನಿರ್ಧಾರಗಳು

ಒಂದು ತಂಡ ತೆಗೆದುಕೊಳ್ಳುವ ನಿರ್ಧಾರಗಳನ್ನು ಗುಂಪು ನಿರ್ಧಾರ ಎನ್ನುತ್ತೇವೆ. ಇವು ಪಾಲುದಾರಿಕೆ ಸಂಸ್ಥೆಗಳು  ಕೂಡು ಬಂಡವಾಳ ಸಂಸ್ಥೆಗಳು, ಸಹಕಾರ ಸಂಘಗಳು ತೆಗೆದುಕೊಳ್ಳುವ ನಿರ್ಧಾರಗಳು ಆಗಿರುತ್ತವೆ.

4. ನಿರ್ವಹಣೆಯ ತತ್ವಗಳಲ್ಲಿ ಅಧಿಕಾರ ಮತ್ತು ಜವಾಬ್ದಾರಿಯ ತತ್ವ ವೇನು?

ಉತ್ತರ : ಅಧಿಕಾರ ಮತ್ತು ಜವಾಬ್ದಾರಿಯ ತತ್ವಗಳು :

ತತ್ವವು ಅಧಿಕಾರ ಮತ್ತು ಜವಾಬ್ದಾರಿಗೆ ಸಂಬಂಧಪಟ್ಟಿದ್ದು ಆಗಿದೆ.

ಎರಡು ಅಂಶಗಳು ಆಡಳಿತಗಾರನ ಅಧಿಕಾರ ಮತ್ತು ನೌಕರರೊಂದಿಗೆ ಜವಾಬ್ದಾರಿಯನ್ನು ತೋರಿಸುತ್ತದೆ.

ಅಂಶಗಳು ಆಡಳಿತಗಾರರ ಬುದ್ಧಿವಂತಿಕೆ, ಈಗಿನ ಅನುಭವ, ಹಿಂದಿನ ಅನುಭವ, ನೈತಿಕ ಗುಣ ಮುಂತಾದವುಗಳ ಸಮ್ಮಿಲನವಾಗಿರುತ್ತದೆ.


II. ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಅಥವಾ ಐದು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

1. ಹೆನ್ರಿ ಫಯೋಲ್ ಅವರ ಪ್ರಕಾರ ನಿರ್ವಹಣೆ ತತ್ವಗಳು ಯಾವುವು ?

ಉತ್ತರ : ಒಂದು ವ್ಯವಹಾರ ಸಂಸ್ಥೆಯು ಸುಗಮವಾಗಿ ಹಾಗೂ ದಕ್ಷ ರೀತಿಯಲ್ಲಿ ನಿರ್ವಹಿಸಬೇಕಾದರೆ ಕೆಲವು ತತ್ವಗಳನ್ನು ಅಳವಡಿಸಿಕೊಳ್ಳುವುದು ಅತಿ ಮುಖ್ಯ.

ಹೆನ್ರಿ ಫಯೋಲ್ ರವರು ಕೆಳಗಿನ ತತ್ವಗಳನ್ನು ಸೂಚಿಸಿದ್ದಾರೆ.

1) ಕಾರ್ಯ ವಿಭಜನೆ

2) ಅಧಿಕಾರ ಮತ್ತು ಜವಾಬ್ದಾರಿ

3) ಶಿಸ್ತು

4) ಏಕರೂಪದ ಆಜ್ಞೆ

5) ಏಕರೂಪದ ಆದೇಶ

6) ಏಕವ್ಯಕ್ತಿ ಹಿತಾಸಕ್ತಿ ಮತ್ತು ಸಾಮಾನ್ಯ ಹಿತಾಸಕ್ತಿಯ ಅಧೀನತೆ

7) ಉದ್ಯೋಗಿಗಳ ವೇತನ

8) ಕೇಂದ್ರೀಕೃತ ನಿರ್ವಹಣೆ

9) ಹಂತ ಸರಪಳಿ

10) ಸಮಾನತೆ

11) ಉದ್ಯೋಗಿಗಳ ಅಧಿಕಾರವಧಿಯ ಸ್ಥಿರತೆ

12) ನೇತೃತ್ವ

13) ಒಗ್ಗಟ್ಟಿನಲ್ಲಿ ಬಲ.

2. ನಿರ್ವಹಣೆ ಕಾರ್ಯಗಳಾವುವು? ಹೆಸರಿಸಿ.

ಉತ್ತರ : ನಿರ್ವಹಣೆ ಕೆಲಸ ಕಾರ್ಯಗಳನ್ನು ವಿವಿಧ ಕ್ಷೇತ್ರಗಳ ಮೂಲಕ ನಿರ್ವಹಿಸಬೇಕಾಗುತ್ತದೆ.

ಇವುಗಳಲ್ಲಿ ಪ್ರಮುಖವಾದವು.

1) ಯೋಜನೆ (Planning)

2) ಸಂಘಟನೆ (Organising)

3) ಸಿಬ್ಬಂದಿ ಪೂರೈಕೆ (Staffing)

4) ನಿರ್ದೇಶನ (Directing)

5) ಸಂಯೋಜನೆ (Co-ordinating)

6) ನಿಯಂತ್ರಣ (Controlling)

3. ಅಧಿಕಾರ ಮತ್ತು ಜವಾಬ್ದಾರಿ, ಹಂತ ಸರಪಳಿ ಮತ್ತು ಕೇಂದ್ರೀಕೃತ ತತ್ವಗಳನ್ನು ವ್ಯವಹಾರ ಸಂಸ್ಥೆಯ ನಿರೂಪಣೆಗೆ ಹೊಂದುವಂತೆ ಬರೆಯಿರಿ.

ಉತ್ತರ : ಅಧಿಕಾರ ಮತ್ತು ಜವಾಬ್ದಾರಿ :

ತತ್ವವು ಅಧಿಕಾರ ಮತ್ತು ಜವಾಬ್ದಾರಿ ಗೆ ಸಂಬಂಧ ಪಟ್ಟಿದಾಗಿದೆ.

ಎರಡು ಅಂಶಗಳು ಆಡಳಿತಗಾರನ ಅಧಿಕಾರ ಮತ್ತು ನೌಕರರೊಂದಿಗಿನ ಜವಾಬ್ದಾರಿಯನ್ನು ತೋರಿಸುತ್ತದೆ.

ಅಂಶಗಳು ಆಡಳಿತಗಾರರ ಬುದ್ಧಿವಂತಿಕೆ, ಈಗಿನ ಅನುಭವ, ಹಿಂದಿನ ಅನುಭವ, ನೈತಿಕ ಗುಣ ಮುಂತಾದವುಗಳ ಸಮ್ಮಿಲನವಾಗಿರುತ್ತದೆ.

ಹಂತ ಸರಪಳಿ :

ತತ್ವದ ಪ್ರಕಾರ ಪ್ರತಿ ಸಂಘಟನೆಯಲ್ಲೂ ಅಧಿಕಾರವರ್ಗದ ಹಂತಗಳು ಇರಬೇಕು.

ಅಧಿಕಾರದ ಶ್ರೇಣಿ, ಅಧಿಕಾರ ವರ್ಗದವರ ಮತ್ತು ಕೆಳ ಉದ್ಯೋಗಿಗಳ ಮಧ್ಯ ಸ್ಪಷ್ಟವಾಗಿ ನಿರ್ಧಾರವಾಗಬೇಕು.

ಕೇಂದ್ರೀಕೃತ ತತ್ವಗಳು :

ತತ್ವದ ಪ್ರಕಾರ ಅಧಿಕಾರವು ಕೇಂದ್ರೀಕೃತವಾಗಿದ್ದು ವ್ಯಾಪಾರ ಸಂಘಟನೆ ಉತ್ತಮ ಫಲ ದೊರಕುವಂತಿರಬೇಕು.

4. ವ್ಯವಹಾರ ನಿರ್ವಹಣೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದರ ಪ್ರಾಮುಖ್ಯತೆ ಏನು?

ಉತ್ತರ : ವ್ಯವಹಾರ ನಿರ್ವಹಣೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದರ ಪ್ರಮುಖ್ಯತೆ :

ನಿರ್ಧಾರಗಳನ್ನು ನಿರ್ಣಯಗಳೂ ಎನ್ನುತ್ತಾರೆ.

ಪ್ರತಿಯೊಂದು ವ್ಯವಹಾರ ಸಂಘಟನೆಯೂ ತನ್ನದೇ ಆದ ಗುರಿ ಮತ್ತು ಉದ್ದೇಶಗಳನ್ನು ಹೊಂದಿರುತ್ತದೆ.

ಗುರಿ ಮತ್ತು ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಒಂದು ನಿರ್ಣಯವನ್ನು ತೆಗೆದುಕೊಳ್ಳಬೇಕಾಗುತ್ತದೆ.

ಸಣ್ಣ ನಿರ್ಣಯಗಳಲ್ಲೂ ಕೂಡ ಅನೇಕ ರೀತಿ ಆಯ್ಕೆಗಳಿರುತ್ತವೆ.

ಉದಾಹರಣೆಗೆ ಒಬ್ಬ ವ್ಯಾಪಾರಿಯು ವಸ್ತುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಬೇಕಾಗುತ್ತದೆ.

ಅವನಿಗೆ ವಸ್ತುಗಳನ್ನು ಸಾಗಾಟ ಮಾಡಲು ಲಾರಿ ಟೆಂಪೊ, ರೈಲು ಅಥವಾ ವಿಮಾನಗಳ ಮೂಲಕ ಅವಕಾಶಗಳಿವೆ.

ಅವನು ಅವುಗಳಲ್ಲಿ ಯಾವುದು ಅತ್ಯಂತ ಸೂಕ್ತ ಹಾಗೂ ಕಡಿಮೆ ವೆಚ್ಚದಿಂದ ಕೂಡಿ ಸುರಕ್ಷಿತವಾಗಿ ಸಾಗಿಸಲು ಸಾಧ್ಯವೋ ಅದನ್ನು ಆರಿಸಿಕೊಳ್ಳಬೇಕಾಗುತ್ತದೆ.

ಆಯ್ಕೆಯನ್ನು ನಿರ್ಧಾರ ಅಥವಾ ನಿರ್ಣಯ ಎನ್ನುತ್ತೇವೆ.

ನಿರ್ಧಾರಗಳು ವ್ಯವಹಾರದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ.

ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದು ವ್ಯಾಪಾರ ದೃಷ್ಟಿಯಿಂದ ಅತ್ಯಂತ ಸಮಂಜಸವಾದ ಪ್ರಕ್ರಿಯೆ ಆಗಿದೆ.

5. ನಿರ್ಧಾರ ಪ್ರಕ್ರಿಯೆಯಲ್ಲಿ ಅಡಕವಾಗಿವೆ ಮುಖ್ಯ ಮೂಲಭೂತ ತತ್ವಗಳು ಯಾವುವು?

ಉತ್ತರ : ನಿರ್ಧಾರ ತೆಗೆದುಕೊಳ್ಳಲು ಪಾಲಿಸಬೇಕಾದ ಮೂಲತತ್ವಗಳು :

1) ಗುರಿಗಳನ್ನು ಸ್ಥಿರ ಪಡಿಸುವುದು.

2) ಗುರಿಗಳ ನಿರ್ದಿಷ್ಟತೆ.

3) ಪರ್ಯಾಯ ನಿರ್ಧಾರಗಳನ್ನು ಹುಡುಕುವುದು.

4) ಯೋಜನೆಗಳನ್ನು ಪಕ್ವಗೊಳಿಸುವುದು.

5) ವಿವೇಚನಾಯುಕ್ತ ತರ್ಕಬದ್ಧ ಯೋಜನೆಗಳು.

6) ವಸ್ತುಸ್ಥಿತಿ ಅರಿಯುವುದು.

7) ಮೌಲೀಕರಿಸುವುದು.

 

6. ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಸಂದರ್ಭಗಳಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳಾವುವು?

ಉತ್ತರ : ಯಾವುದಾದರು ಒಂದು ಸಮಸ್ಯೆಯನ್ನು ಪರಿಹರಿಸಬೇಕಾದರೆ ಉತ್ತಮ ನಿರ್ಧಾರ ತೆಗೆದುಕೊಳ್ಳುವುದರ ಮೂಲಕ ಮಾತ್ರ ಸಾಧ್ಯವಾಗುತ್ತದೆ.

ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ಕೆಳಗಿನ ಅಂಶಗಳನ್ನು ಪಾಲಿಸಬೇಕು.

1) ಸಮಸ್ಯೆಯನ್ನು ವಿಶ್ಲೇಷಿಸುವುದು

2) ಕಾರ್ಯಗತ ಮಾಡಲು ಯೋಜನೆ ರೂಪಿಸುವುದು

3) ಧೈರ್ಯ ಮತ್ತು ತಾಳ್ಮೆ ಗಳನ್ನು ಪಾಲಿಸುವುದು

4) ಮುಂದಾಲೋಚನೆಯನ್ನು ಗಮನದಲ್ಲಿ ಇಡುವುದು

5) ವಿವೇಕಯುಕ್ತ ನಿರ್ಧಾರಗಳನ್ನು ಶೀಘ್ರದಲ್ಲಿ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದು.

7. ಯೋಜನೆ ಮತ್ತು ಸಂಘಟನೆಗಳು ನಿರ್ವಹಣೆಯ ಮುಖ್ಯ ಕಾರ್ಯಕ್ಷೇತ್ರದಲ್ಲಿ ವಹಿಸುವ ಪಾತ್ರವೇನು?

ಉತ್ತರ : ಯೋಜನೆ : ಇದು ನಿರ್ವಹಣೆ ಕಾರ್ಯಕ್ಷೇತ್ರದಲ್ಲಿ ಒಂದು ಮುಖ್ಯವಾದ ಕ್ಷೇತ್ರವಾಗಿದೆ.

ಯೋಜನೆಯೆಂದರೆ ಒಂದು ನಿರ್ದಿಷ್ಟ ಅವಧಿಗೆ ಭವಿಷ್ಯದ ಕಾರ್ಯಾಚರಣೆಗಳನ್ನು ಮುಂದಾಗಿ ನಿರ್ಧರಿಸುವುದೇ ಆಗಿದೆ.

ಯೋಜನೆಯ ಪ್ರಕ್ರಿಯೆಯು ಸಂಸ್ಥೆಯ ಗುರಿಗಳ ಸಾಧನೆಗಾಗಿ ಉದ್ದೇಶಗಳ ನಿರ್ಣಯ, ನೀತಿ, ಕಾರ್ಯತಂತ್ರಗಳು, ಕಾರ್ಯಕ್ರಮಗಳು, ಕಾರ್ಯಾನುಗತಿಗಳ ಮತ್ತು ಪರಿಶಿಷ್ಟ ಗಳ ನಿರೂಪಣೆಯನ್ನು ಒಳಗೊಂಡಿರುತ್ತದೆ.

ಸಂಘಟನೆ : ಸಂಘಟನೆ ಎಂದರೆ ಮಾನವ ಶಕ್ತಿ ಮತ್ತು ಭೌತಿಕ ಸಂಪನ್ಮೂಲಗಳನ್ನು ಒಂದೆಡೆ ಸೇರಿಸುವುದೇ ಆಗಿದೆ.

ಕೆಲವು ತಂತ್ರಗಳು ಮತ್ತು ಯಂತ್ರೋಪಕರಣಗಳ ಸಂಪನ್ಮೂಲಗಳನ್ನು ಮಾನವ ಸಂಪನ್ಮೂಲದ ಜೊತೆ ಸೇರಿಸಿ, ಕಾರ್ಯಕ್ಕೆ ತೊಡಗಿಸಿ ಸಂಸ್ಥೆ ಉದ್ದೇಶಗಳನ್ನು ಈಡೇರಿಸಿಕೊಳ್ಳುವುದು ಸಂಘಟನೆಯ ಮುಖ್ಯ ಧ್ಯೇಯವಾಗಿರುತ್ತದೆ.

ಅಂಶವು ಪ್ರತಿನಿಧಿಯನ್ನು ನೇಮಿಸಿ ಇಲಾಖೆ ಪ್ರತಿನಿಧಿಗಳಿಗೆ ಅಗತ್ಯವಾದ ಬಹುತೇಕ ಸೌಲಭ್ಯಗಳನ್ನು ಒದಗಿಸಿ ಬೇರೆಬೇರೆ ಹಂತಗಳ ಕೆಲಸಗಾರರಿಗೆ ಸಮನ್ವಯ ರೀತಿಯಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡುವ ಉದ್ದೇಶವನ್ನು ಹೊಂದಿರುತ್ತದೆ.

8. " ನಿಯಂತ್ರಣವು ನಿರ್ವಹಣಾ ಕಾರ್ಯದಲ್ಲಿ ಬಹುಮುಖ್ಯವಾದುದು" ಹೇಗೆ?

ಉತ್ತರ : ನಿರ್ವಹಣೆ ಕೆಲಸಕಾರ್ಯಗಳು ವಿವಿಧ ಕ್ಷೇತ್ರಗಳ ಮೂಲಕ ನಿರ್ವಹಿಸಬೇಕಾಗುತ್ತದೆ ಇವುಗಳಲ್ಲಿ ಮುಖ್ಯವಾದದ್ದು ನಿಯಂತ್ರಣ.

ಅಂಶವು ಸಂಘಟನೆಯ ಮುಖ್ಯವಾದ ಕಾರ್ಯಗಳಿಗೆ ಸಂಬಂಧಪಟ್ಟ ಅಂಶವಾಗಿದೆ.

ಇದು ವ್ಯವಹಾರ ನಿರ್ವಹಣೆಯ ಎಲ್ಲ ಚಟುವಟಿಕೆಗಳಲ್ಲೂ ವ್ಯಾಪಿಸಿರುತ್ತದೆ.

ಸಂಸ್ಥೆಯ ಪ್ರತಿಯೊಬ್ಬ ಪ್ರಬಂಧಕರು ಅಥವಾ ಪ್ರತಿನಿಧಿಗಳು ಇಲ್ಲಿ ಕಾರ್ಯ ಮಗ್ನರಾಗಿರಬೇಕಾಗುತ್ತದೆ.

9. ನಿಯಂತ್ರಣದ ಪ್ರಮುಖ ಧ್ಯೇಯಗಳೇನು?

ಉತ್ತರ : ನಿಯಂತ್ರಣದ ಪ್ರಮುಖ ಧ್ಯೇಯಗಳು ರೀತಿಯಾಗಿವೆ.

1) ಸಂಸ್ಥೆಯಲ್ಲಿ ಶಿಸ್ತಿನ ಒಂದು ವಾತಾವರಣವನ್ನು ಕಲ್ಪಿಸಿ, ಚಟುವಟಿಕೆಗಳು ಸಮರ್ಪಕವಾಗಿ ಹೊಂದಾಣಿಕೆಯಿಂದ ನಡೆಯುವಂತೆ ನೋಡಿಕೊಳ್ಳುವುದು.

2) ಪೂರ್ವಭಾವಿ ಯೋಜನೆಗಳಿಗೆ ಅನುಸಾರವಾಗಿ ಮತ್ತು ನಿರಂತರವಾಗಿ ಚಟುವಟಿಕೆಗಳು ಮುಂದುವರಿಯುವಂತೆ ಮಾಡುವುದು.

3) ಸಂಸ್ಥೆಯ ದಕ್ಷತೆಯನ್ನು ಹೆಚ್ಚಿಸುವುದು.

10. ನಿರ್ದೇಶನ ಮತ್ತು ಹೊಂದಾಣಿಕೆ, ವ್ಯವಹಾರ ನಿರ್ವಹಣೆಯಲ್ಲಿ ಹೇಗೆ ಪ್ರಮುಖ ಪಾತ್ರಗಳನ್ನು ವಹಿಸುತ್ತವೆ?

ಉತ್ತರ : ನಿರ್ದೇಶನ ಮತ್ತು ಹೊಂದಾಣಿಕೆ ವ್ಯವಹಾರ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ನಿರ್ದೇಶನ : ಅಂಶವು ಸಂಸ್ಥೆಯ ಗುರಿಗಳ ಸಾಧನೆಗಾಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಜನರಿಗೆ ಸೂಚನೆಗಳನ್ನು ಕೊಡುವ, ಮಾರ್ಗದರ್ಶನ ನೀಡುವ, ವಿಚಾರಣೆ ನಡೆಸುವ ಮತ್ತು ಮುಂದಾಳತ್ವವನ್ನು ಒದಗಿಸುವ ಕಾರ್ಯವಾಗಿರುತ್ತದೆ.

ಕೆಳಗಿನ ಹಂತದಲ್ಲಿ ಕೆಲಸ ಮಾಡುವವರಿಗೆ ಸೂಚನೆ ಮತ್ತು ಆದೇಶಗಳನ್ನು ನೀಡುವ ಮತ್ತು ಆದೇಶಗಳು ಕಾರ್ಯಾಚರಣೆಗೊಂಡಿವೆಯೇ ಎಂಬ ಕೆಲಸಗಳನ್ನು ಪ್ರಕ್ರಿಯೆ ಗೊಳಿಸುತ್ತದೆ.

ಹೊಂದಾಣಿಕೆ : ಅಂಶವು ಅಪೇಕ್ಷಿತ ಗುರಿಗಳ ಸಾಧನೆಗಾಗಿ ವಿವಿಧ ಇಲಾಖೆಗಳ ತಜ್ಞರ ಸುಲಲಿತವಾದ ಮಿಶ್ರಣ ಅಥವಾ ಒಟ್ಟುಗೂಡಿಸುವಿಕೆ ಆಗಿರುತ್ತದೆ.

ಕಾರ್ಯಾಚರಣೆಗಳ ಐಕ್ಯತೆಯನ್ನು ಕ್ರಮಬದ್ಧವಾಗಿ ವ್ಯವಸ್ಥೆಗೊಳಿಸುವ ಕಾರ್ಯವನ್ನು ಹೊಂದಿರುತ್ತದೆ.

9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon