How To Link Pan Card To Aadhar Card | ಪ್ಯಾನ ಕಾರ್ಡ್ ಮತ್ತು ಆಧಾರ ಕಾರ್ಡ ಜೋಡಣೆ ಮಾಡುವುದು ಹೇಗೆ ? |

How To Link Pan Card To Aadhar Card | ಪ್ಯಾನ ಕಾರ್ಡ್ ಮತ್ತು ಆಧಾರ ಕಾರ್ಡ ಜೋಡಣೆ ಮಾಡುವುದು ಹೇಗೆ ? |

ಈ ಮುಂಚೆ ಮಾಡಿಸಿರುವ ಪಾನ್ ಸಂಖ್ಯೆಗೆ ಆಧಾರ ಕಾರ್ಡ ನೊಂದಿಗೆ ಜೋಡಣೆ ಆಗಿರುವುದಿಲ್ಲ. ಜೋಡಣೆ ಆಗದೆ ಇರುವ ಸಂಖ್ಯೆಗಳನ್ನು ದಿನಾಂಕ 31.03.2022 ರ ನಂತರ ನಿಷ್ಕ್ರೀಯಗೋಳಿಸಲಾಗುವುದು ಎಂದು ಆದೇಶಿಸಲಾಗಿದೆ. ಆದ್ದರಿಂದ ಪಾನ್ ಕಾರ್ಡನೊಂದಿಗೆ ಆಧಾರ ಸಂಖ್ಯೆಯನ್ನು ಜೋಡಣೆ ಮಾಡುವುದು ಕಡ್ಡಾಯವಾಗಿರುವುದರಿಂದ ಅದನ್ನು ಲಿಂಕ ಮಾಡಿಕೊಳ್ಳಬೇಕಾಗಿದೆ.

ನಮ್ಮ ಪಾನ ಸಂಖ್ಯೆಯು ಆಧಾರನೊಂದಿಗೆ ಜೋಡಣೆಯಾಗಿದೆಯಾ ಇಲ್ಲವಾ ಎಂದು ಸಹ ಒಂದು ಬಾರಿ ಪರೀಕ್ಷಿಸಿಕೊಳ್ಳಬೇಕಾಗಿರುವುದು ಸಹ ಅವಶ್ಯಕವಾಗಿರುತ್ತದೆ. ಆದ್ದರಿಂದ ಯಾವ ರೀತಿಯಾಗಿ ಪರೀಕ್ಷಿಸಿಕೊಳ್ಳವುದು ಎನ್ನುವುದು ಸಹ ನೋಡೋಣ.
ನಮ್ಮ ಸಂಖ್ಯೆ ಲಿಂಕ್ ಆಗಿದೇಯಾ ಇಲ್ಲವಾ ಪರೀಕ್ಷಿಸಿಕೊಳ್ಳುವುದು ಹೇಗೆ? ಮತ್ತು ನಮ್ಮ ಸಂಖ್ಯೆಗಳನ್ನು ಒಂದಕ್ಕೊಂದು ಹೊಸದಾಗಿದ ಜೋಡಣೆ ಮಾಡುವುದು ಹೇಗೆ? ಎನ್ನುವ ಎರಡು ಅಂಶಗಳನ್ನು ನೋಡಿಕೊಳ್ಳೋಣ.

ಪ್ಯಾನ್ ಸಂಖ್ಯೆ ಆಧಾರ ಸಂಖ್ಯೆಯೊಂದಿಗೆ ಜೋಡಣೆಯಾಗಿದೆಯಾ ಇಲ್ಲವಾ ಎಂದು ಪರೀಕ್ಷಿಸುವುದು ಹೇಗೆ?
ಇದನ್ನು ಪರೀಕ್ಷಿಸುವುದುಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಈ ವೆಬಸೈಟ್ ಗೆ ಭೇಟಿ ನೀಡಿ ಅದು ಈ ರೀತಿಯಾಗಿ ತೆರೆದುಕೊಳ್ಳುತ್ತದೆ.


ಇದರಲ್ಲಿ ಲಿಂಕ್ ಆಧಾರ ಎನ್ನುವ ಎರಡನೇ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ
ಆಗ ಈ ರೀತಿಯಾಗಿ ತೆರೆದುಕೊಳ್ಳುತ್ತದೆ.

ಇದರಲ್ಲಿ ನಿಮ್ಮ ಪ್ಯಾನ್ ಸಂಖ್ಯೆಯನ್ನು ನಮೂದಿಸಿ 
ಆನಂತರ ಆಧಾರ ಸಂಖ್ಯೆಯನ್ನು ನಮೂದಿಸಿ
ನಂತರ ಆಧರ ಕಾರ್ಡ ನಲ್ಲಿ ಇರುವ ರೀತಿಯಲ್ಲಿ ಹೆಸರನ್ನು ನಮೂದಿಸಿ
ನಿಮ್ಮ ಮೋಬೈಲ್ ಸಂಖ್ಯೆಯನ್ನು ನಮೂದಿಸಿ.
I agree to validate my Aadhaar details ಎನ್ನುವ ಆಯ್ಕೆಯನ್ನು ಸೆಲೆಕ್ಟ ಮಾಡಿ 

ಎಲ್ಲವನ್ನು ಸರಿಯಾದ ರೀತಿಯಲ್ಲಿ ತುಂಬಿದ ನಂತರ ಈ ರೀತಿಯಾಗಿ Link Aadhar ಎನ್ನುವ ಆಯ್ಕೆಯು ಕಾಣಿಸುತ್ತದೆ. ಆಗ ಅದರ ಮೇಲೆ ಕ್ಲಿಕ್ ಮಾಡಿ. 

ಆಗ ಈ ರೀತಿಯಾಗಿ "Your PAN is already linked to given Aadhaar" ಬಂದಿದಲ್ಲಿ ನಿಮ್ಮ ಪಾನ ಸಂಖ್ಯೆಯು ಆಧಾರ ಸಂಖ್ಯೆಯೊಂದಿಗೆ ಲಿಂಕ್ ಆಗಿದೆ ಎಂದು ತಿಳಿದುಕೊಳ್ಳಿ.

ಹೊಸದಾಗಿ ಲಿಂಕ್ ಮಾಡುವುದು ಹೇಗೆ ?
ಒಂದು ವೇಳೆ ಮೇಲೆ ಕಾಣಿಸಿದ ರೀತಿಯಲ್ಲಿ ಬರದೆ ನಿಮ್ಮ ಮೋಬೈಲ್ ಸಂಖ್ಯೆಗೆ OTP ಬಂದಿದ್ದೆ ಆದಲ್ಲಿ ನಿಮ್ಮ ಪಾನ ಸಂಖ್ಯೆಯು ಆಧಾರ ಸಂಖ್ಯೆಗೆ ಲಿಂಕ್ ಆಗಿಲ್ಲ ಎಂದು ಅರ್ಥ.
ನಂತರ ನಿಮ್ಮ ಮೋಬೈಲ್ ಗೆ ಬಂದಿರುವ OTP ಯನ್ನು ಅಲ್ಲಿ ನಮೂದಿಸಿ ಸಬ್ ಮಿಟ್ ಎನ್ನು ಆಯ್ಕೆಯನ್ನು ಸಬಮಿಟ್ ಮಾಡಿ ಆನಂತರ ಅದು ಒಂದು ಬಾರಿ ಪರೀಕ್ಷಿಸಿ ನಿಮ್ಮ ಪಾನ ಸಂಖ್ಯನ್ನು ಆಧಾರನಂದೊಗೆ ಲಿಂಕ್ ಮಾಡುತ್ತದೆ.

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon