ಬ್ರಿಟೀಷ್ ಆಳ್ವಿಕೆಯ ವಿಸ್ತರಣೆ ನೋಟ್ಸ್ | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ನೋಟ್ಸ್ | SSLC Social Science New Text Book Notes |

10ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್

ಹೊಸ ಪಠ್ಯಪುಸ್ತಕದ ನೋಟ್ಸ್
ಅಧ್ಯಾಯ-2

ಬ್ರಿಟೀಷ್ ಆಳ್ವಿಕೆಯ ವಿಸ್ತರಣೆ




1. ಸಿಖ್ಖರನ್ನು ಸಂಘಟಿಸಿದವನು : 
ರಣಜಿತ್‌ ಸಿಂಗ್‌
2. ಬ್ರಿಟೀಷರು ರಾಜ್ಯ ವಿಸ್ತರಣೆಗೆ ಕೈಗೊಂಡ ಉಪಾಯಗಳು
ಸಹಾಯಕ ಸೈನ್ಯ ಪದ್ಧತಿ & ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ.
3. ಮೊದಲ ಆಂಗ್ಲೋ ಮರಾಠಾ ಯುದ್ಧ ಕೊನೆಗೊಳಿಸಿದ ಒಪ್ಪಂದ
ಸಾಲ್‌ ಬಾಯ್‌
4. ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತಂದವನು
ಲಾರ್ಡ್‌ ವೆಲ್ಲೆಸ್ಲಿ
5. ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ಮೊದಲ ದೇಶೀಯ ದೊರೆ
ಹೈದರಾಬಾದಿನ ನಿಜಾಮ.

6. ಮೊದಲ ಸಿಖ್ಖ್‌ ಯುದ್ಧ ಕೊನೆಗೊಳಿಸಿದ ಒಪ್ಪಂದ
ಲಾಹೋರ್‌
7. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ಜಾರಿಗೆ ತಂದವನು
ಲಾರ್ಡ್‌ ಡಾಲ್‌ ಹೌಸಿ.
8. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ಜಾರಿಗೆ ಬಂದದ್ದು
1848
9. 1765ರ ಹೊತ್ತಿಗೆ ಬಹುತೇಕ ಪೂರ್ವಭಾಗದ ಭಾರತದ ಮೇಲೆ ಪ್ರಭುತ್ವ ಸಾಧಿಸಿದ ಬ್ರಿಟೀಷರಿಗೆ ಭಾರತದ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ಪ್ರಭುತ್ವ ಸ್ಥಾಪಿಸಲು ಸಾಧ್ಯವಾಗಲಿಲ್ಲ ಏಕೆ?
ಉ: ಮೈಸೂರು ಮತ್ತು ಮರಾಠಾ ರಾಜ್ಯಗಳು ಪ್ರಬಲವಾಗಿದ್ದವು.
10. ಮೊಘಲ ಚಕ್ರವರ್ತಿ 2ನೇ ಷಾ ಆಲಂ ಕೋರ ಮತ್ತು ಅಲಹಾಬಾದ್‌ ಗಳನ್ನು ಮರಾಠರಿಗೆ ಏಕೆ ಕೊಟ್ಟನು?
ಉ: ಮರಾಠರು ಅವನನ್ನು ದೆಹಲಿ ಸಿಂಹಾಸನದ ಮೇಲೆ ಕೂಡಿಸಿದರು.

11. ರಘೋಬನು ಪೇಶ್ವೆ ನಾರಾಯಣರಾವ್‌ ನನ್ನು ಕೊಲೆ ಮಾಡಲು ಕಾರಣವೇನು?

ಉ: ಪೇಶ್ವೆ ಹುದ್ದೆಯ ಆಸೆಯಿಂದ.
12. ರಘೋಬನು ಬ್ರಿಟೀಷರ ಬೆಂಬಲ ಕೋರಲು ಕಾರಣವೇನು?
ಉ: ಮರಾಠಾ ಮನೆತನಗಳಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ.
13. ಸಾಲ್ಬಾಯ್‌ ಒಪ್ಪಂದಕ್ಕೆ ಕಾರಣವೇನು?
ಉ: ಮರಾಠರು ಬ್ರಿಟೀಷರೊಂದಿಗೆ ಯುದ್ಧ ಮುಂದುವರಿಸಲಾಗದೆ.
14. ಲಾರ್ಡ್‌ ವೆಲ್ಲೆಸ್ಲಿ ಕಾಲದಲ್ಲಿ ಬ್ರಿಟೀಷ್‌ ಆಡಳಿತದ ವಿಸ್ತರಣೆ ಸುಲಭ ಸಾಧ್ಯವಾಯಿತು ಹೇಗೆ?
ಉ: ಮರಾಠಾ ಮತ್ತು ಮೈಸೂರು ರಾಜ್ಯಗಳು ದುರ್ಬಲಗೊಂಡಿದ್ದವು.
15. ಲಾರ್ಡ್‌ ವೆಲ್ಲೆಸ್ಲಿಯು ಸಹಾಯಕ ಸೈನ್ಯ ಪದ್ಧತಿಯನ್ನು ಏಕೆ ಜಾರಿಗೆ ತಂದನು?
ಉ: ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ತರಲು.

16. ಸಹಾಯಕ ಸೈನ್ಯ ಪದ್ಧತಿಯಿಂದ ಬ್ರಿಟೀಷರಿಗೆ ಸೈನಿಕ ನಿರ್ವಹಣೆ ಸುಲಭವಾಯಿತು ಹೇಗೆ?
ಉ: ಸೇನೆಯ ವೇತನ ಮತ್ತು ನಿರ್ವಹಣೆಯ ವೆಚ್ಚ ಸಂಬಂಧಪಟ್ಟ ರಾಜ್ಯವೇ ಭರಿಸಬೇಕಿತ್ತು.
17. ಎರಡನೇ ಆಂಗ್ಲೋ ಮರಾಠಾ ಯುದ್ಧಕ್ಕೆ ಕಾರಣವೇನು?
ಉ: ಮರಾಠಾ ಮನೆತನಗಳ ನಡುವಿನ ಅಂತಕಲಹ.
18. ಎರಡನೇ ಬಾಜಿರಾವ್‌ ಸಹಾಯಕ ಸೈನ್ಯ ಪದ್ದತಿಗೆ ಸಹಿಹಾಕಲು ಕಾರಣವೇನು?
ಉ: ಹೋಳ್ಕರನ ಸೈನ್ಯ ಪೇಶ್ವೆಯನ್ನು ಸೋಲಿಸಿತು.
19. ಮರಾಠರ ಆಂತರಿಕ ವಿಚಾರದಲ್ಲಿ ಲಾರ್ಡ್‌ ವೆಲ್ಲೆಸ್ಲಿ ಮಧ್ಯ ಪ್ರವೇಶಿಸಲು ಕಾರಣವೇನು?
ಉ: ಪೇಶ್ವೆ ಬ್ರಿಟೀಷರ ಸಹಾಯ ಯಾಚಿಸಿದ್ದು.
20. ಲಾರ್ಡ್‌ ವೆಲ್ಲೆಸ್ಲಿ ಬ್ರಿಟೀಷರಿಂದಲೇ ತೀವ್ರ ಟೀಕೆಗೆ ಒಳಗಾದನು ಏಕೆ? ಅಥವಾ ಲಾರ್ಡ್‌ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಲು ಕಾರಣವೇನು?
ಉ: ಯುದ್ಧಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಿತ್ತು.

21. 1848ರಲ್ಲಿ ಪಂಜಾಬಿಗಳು ಬ್ರಿಟೀಷರ ವಿರುದ್ಧ ಪ್ರತಿಭಟನೆಗಿಳಿದರು ಏಕೆ?
ಉ: ಬ್ರಿಟೀಷರು ಪಂಜಾಬಿನ ಮೇಲೆ ನೇರ ಆಳ್ವಿಕೆ ಹೇರಲು ಹೊರಟಿದ್ದರಿಂದ.
22. ಸಹಾಯಕ ಸೈನ್ಯ ಪದ್ಧತಿ ಎಂದರೇನು?
ಉ: “ಕಂಪನಿ & ಭಾರತೀಯ ರಾಜ್ಯಗಳ ನಡುವಿನ ಸೈನಿಕ ಒಪ್ಪಂದ”
23. ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ರಾಜ್ಯಗಳು ಯಾವುವು?
ಉ: ಮೈಸೂರು, ಔಧ, ತಂಜಾವೂರು, ಮರಾಠರು, ಆರ್ಕಾಟ, ಬಿರಾರ್‌, ಗ್ವಾಲಿಯರ್.‌
24. ರದ್ಧತಿ ಸೂತ್ರಕ್ಕೆ ಒಳಪಟ್ಟ ದೇಶೀಯ ರಾಜ್ಯಗಳು ಯಾವುವು?
ಉ: ಸತಾರಾ, ಝಾನ್ಸಿ, ಜೈಪುರ, ಸಂಬಲಪುರ, ಉದಯಪುರ, ನಾಗಪುರ.
25. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ಎಂದರೇನು?
ಉ: “ದೇಶೀಯ ರಾಜರಿಗೆ ಮಕ್ಕಳಿಲ್ಲದೆ ಮೃತನಾದರೆ ಅವನು ದತ್ತು ತೆಗೆದುಕೊಂಡ ಪುತ್ರನಿಗೆ ಉತ್ತರಾಧಿಕಾರದ ಹಕ್ಕಿಲ್ಲ”.

26. 1ನೇ ಆಂಗ್ಲೋ ಮರಾಠಾ ಯುದ್ಧಕ್ಕೆ ಕಾರಣ & ಪರಿಣಾಮ ತಿಳಿಸಿ?
ಕಾರಣ : 1. ಷಾ ಆಲಂನನ್ನು ದೆಹಲಿ ಸಿಂಹಾಸನಕ್ಕೇರಿಸಿದ್ದು.
2. ಷಾ ಆಲಂ ಕರಾ & ಅಲಹಾಬಾದ್‌ ಮರಾಠರಿಗೆ ಕೊಟ್ಟಿದ್ದು.
3. ಪೇಶ್ವೆಯ ಸ್ಥಾನಕ್ಕೆ ಅಂತಕಲಹ.
4. ರಘೋಬನಿಗೆ ಬ್ರಿಟೀಷರು ಬೆಂಬಲ ನೀಡಿದ್ದು.
ಪರಿಣಾಮ : 1. ಯುದ್ಧ ದೀರ್ಘಕಾಲ ನಡೆಯಿತು.
2. ಮರಾಠರು ಅಹಮದಾಬಾದ್‌ ಕಳೆದುಕೊಂಡರು.
3. ಸಾಲ್‌ ಬಾಯ್‌ ಒಪ್ಪಂದ ಏರ್ಪಟ್ಟಿತ್ತು.
4. 2ನೇ ಮಾಧವರಾವ್‌ ಪೇಶ್ವೆಯಾದನು.
27. ಸಹಾಯಕ ಸೈನ್ಯ ಪದ್ಧತಿಯ ನಿಬಂಧನೆಗಳಾವುವು?
ಉ: 1. ದೇಶೀಯ ರಾಜರು ಬ್ರಿಟೀಷರ ಸೈನ್ಯ ಇರಿಸಿಕೊಳ್ಳುವುದು.
2. ಅದರ ವೆಚ್ಚ ಅವರೇ ಭರಿಸುವುದು.
3. ರೆಸಿಡೆಂಟ್‌ ಅಧಿಕಾರಿಯ ನೇಮಕ.
4. ಅನುಮತಿ ಇಲ್ಲದೆ ಯಾವ ಯೂರೋಪಿಯನ್ನರನ್ನು ನೇಮಿಸುವಂತಿಲ್ಲ.
5. ಯುದ್ಧ & ಸಂಧಾನಕ್ಕೆ ಗವರ್ನರ್‌ ಜನರಲ್‌ನ ಸಮ್ಮತಿ ಅಗತ್ಯ.
6. ಅಂತಹ ರಾಜರ ರಕ್ಷಣೆ ಕಂಪನಿಯದಾಗಿತ್ತು.
28. 2ನೇ ಆಂಗ್ಲೋ ಮರಾಠಾ ಯುದ್ಧ ವಿವರಿಸಿ?
ಉ: 1. ಮರಾಠರಲ್ಲಿ ಅಂತಃಕಲಹ
2. ಹೋಳ್ಕರ್‌ ನಿಂದ ಸಿಂಧೆ ಮತ್ತು ಪೇಶ್ವೆಯ ಸೋಲು.
3. ಪೇಶ್ವೆ ಬ್ರಿಟೀಷರೊಂದಿಗೆ ಬೆಸ್ಸಿನ್‌ ಒಪ್ಪಂದ ಮಾಡಿಕೊಂಡನು.
4. ಪೇ‍ಶ್ವೆ ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟನು.
5. ಪೇಶ್ವೆ ವಿರುದ್ಧ ಮರಾಠರು ಒಗ್ಗೂಡಿದರು.
6. ಲಾರ್ಡ್‌ ವೆಲ್ಲೆಸ್ಲಿ ಮರಾಠರನ್ನು ಸೋಲಿಸಿದನು.
ಪರಿಣಾಮ : 1. ತಾತ್ಕಾಲಿಕ ಶಾಂತಿ ನೆಲೆಸಿತು.
2. ಕಂಪನಿಗೆ ಸಾಲದ ಹೊರೆ ಹೆಚ್ಚಿತ್ತು.
3. ಲಾರ್ಡ್‌ ವೆಲ್ಲೆಸ್ಲಿ ರಾಜೀನಾಮೆ ನೀಡಿದನು.
29. 3ನೇ ಆಂಗ್ಲೋ ಮರಾಠಾ ಯುದ್ಧವನ್ನು ವಿವರಿಸಿ?
ಕಾರಣ : 1. ಮರಾಠರು ತಮ್ಮ ಘನತೆ ಉಳಿಸಲು ಪ್ರಯತ್ನಿಸಿದ್ದು.
2. ಪೇಶ್ವೆ ಬ್ರಿಟೀಷರ ನಿಯಂತ್ರಣದಿಂದ ಹೊರಬರಲು ಪ್ರಯತ್ನಿಸಿದ್ದು.
3. ಪೇಶ್ವೆ ಪೂನಾ ರೆಸಿಡೆನ್ಸಿ ಮೇಲೆ ಧಾಳಿ ಮಾಡಿದ್ದು.
4. ಅಪ್ಪಾಸಾಹೇಬ್‌ & ಹೋಳ್ಕರ್‌ ಸೋಲು.
5. 2ನೇ ಬಾಜಿರಾವ್‌ ಕೊರೆಗಾಂವ್‌ ಯುದ್ಧದಲ್ಲಿ ಸೋತನು.
ಪರಿಣಾಮ : 1. ಪೇಶ್ವೆ ಹುದ್ದೆಯ ರದ್ದು.
2. 2ನೇ ಬಾಜಿರಾಯನಿಗೆ ವಿಶ್ರಾಂತಿ ವೇತನ.
3. ಮರಾಠಾ ಮುಖಂಡರ ಪ್ರತಿರೋಧ ನಿಗ್ರಹ.
30. ಬ್ರಿಟೀಷರ ಅಧಿಕಾರ ವಿಸ್ತರಣೆಗೆ ದತ್ತುಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಹೇಗೆ ಸಹಕಾರಿಯಾಯಿತು?
ಉ: 1. ರಾಜಕೀಯ ಅಸ್ತ್ರವಾಗಿ ಜಾರಿಗೊಳಿಸಿದರು.
2. ದೇಶೀಯ ರಾಜರಿಗೆ ಮಕ್ಕಳಿಲ್ಲದಿದ್ದರೆ ಅವರ ರಾಜ್ಯವನ್ನು ದತ್ತು ಮಕ್ಕಳಿಗೆ ನೀಡದೆ ಬ್ರಿಟೀಷ್‌ ಸಾಮ್ರಾಜ್ಯಕ್ಕೆ ಸೇರಿಸಿದರು.
3. ಸಾತಾರಾ, ಝಾನ್ಸಿ, ಜೈಪುರ, ಉದಯಪುರ, ಆಕ್ರಮಿಸಿದರು.

31. ಪಂಜಾಬನ್ನು ಆಕ್ರಮಿಸಿದ ಬ್ರಿಟೀಷ್‌ ಗವರ್ನರ್‌ ಜನರಲ್‌ ಯಾರು?
ಉ: ಲಾರ್ಡ್‌ ಡಾಲ್‌ ಹೌಸಿ.

*****

ಹೊಸ ಪಠ್ಯಪುಸ್ತಕದ ಎಲ್ಲಾ 33 ಅಧ್ಯಾಯಗಳು




Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon