9ನೇ ತರಗತಿ ಅರ್ದವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆಯ ಉತ್ತರಗಳು 2022-23 | ಸಂಕಲನಾತ್ಮಕ ಪರೀಕ್ಷೆ -1 ಪ್ರಶ್ನೆ ಪತ್ರಿಕೆ ಮಾದರಿ ಉತ್ತರಗಳು | 9ನೇ ತರಗತಿ ಪ್ರಥಮ ಭಾಷೆ ಕನ್ನಡ ಪ್ರಶ್ನೆ ಪತ್ರಿಕೆ SA-1 ಮಾದರಿ ಉತ್ತರಗಳು

9th Class First Language Kannada SA-1 Question Paper with Key Ans


ಪ್ರಥಮ ಭಾಷೆ ಕನ್ನಡ-2022 
ಸಂಕಲನಾತ್ಮಕ ಮೌಲ್ಯಮಾಪನ-1 ಪ್ರಶ್ನೆ ಪತ್ರಿಕೆ
ವಿಷಯ: ಪ್ರಥಮ ಭಾಷೆ ಕನ್ನಡ                                                   ಗರಿಷ್ಠ ಅಂಕಗಳು : 100
ತರಗತಿ: 9ನೇ ತರಗತಿ                                                             ಸಮಯ : 3 ಗಂ 15 ನಿ

ಸಾಮಾನ್ಯ ಸೂಚನೆಗಳು:

* ಈ ಪ್ರಶ್ನೆ ಪತ್ರಿಕೆಯು ವಸ್ತುನಿಷ್ಠ ಮತ್ತು ವಿಷಯನಿಷ್ಠ ಮಾದರಿಯ ಒಟ್ಟು 45 ಪ್ರಶ್ನೆಗಳನ್ನು ಹೊಂದಿದೆ.
* ಬಲ ಭಾಗದಲ್ಲಿ ಕೊಟ್ಟಿರುವ ಅಂಕಿಗಳು ಪ್ರಶ್ನೆಗಳಿಗಿರುವ ಪೂರ್ಣ ಅಂಕಗಳನ್ನು ತೋರಿಸುತ್ತವೆ.
* ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷಗಳ ಕಾಲಾವಕಾಶವು ಸೇರಿದಂತೆ, ಉತ್ತರಿಸಲು ನಿಗದಿಪಡಿಸಲಾದ ಸಮಯವನ್ನು ಪ್ರಶ್ನೆ ಪತ್ರಿಕೆಯ ಮೇಲ್ಭಾಗದಲ್ಲಿ ನೀಡಲಾಗಿದೆ.

I. ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ:  6X1=6

1. ಮಾತು ಬಲ್ಲವನಿಗೆ ……………..
(ಎ) ರೋಗವಿದೆ
(ಬಿ) ಆರೋಗ್ಯವಿಲ್ಲ
(ಸಿ) ರೋಗವಿಲ್ಲ
(ಡಿ) ಜಗಳವಿಲ್ಲ

 ಉ: (ಡಿ) ಜಗಳವಿಲ್ಲ

2. ನಿನ್ನ ಶಾಲೆಯ ನಲ್ಲಿಯಲ್ಲಿ ನೀರು ಹರಿದು ಹೋಗುತ್ತಿದೆ. ಆಗ ನಾನು ……

(ಎ) ಸುಮ್ಮನೇ ಮನೆಗೆ ಹೋಗುತ್ತೇನೆ.
(ಬಿ) ನನ್ನ ಸ್ನೇಹಿತರಿಗೆ ಹೇಳುತ್ತೇನೆ.
(ಸಿ) ಮುಖ್ಯಗುರುಗಳಿಗೆ ತಿಳಿಸುತ್ತೇನೆ
(ಡಿ) ನಲ್ಲಿಯನ್ನು ನಿಲ್ಲಿಸುತ್ತೇನೆ

 ಉ: (ಡಿ) ನಲ್ಲಿಯನ್ನು ನಿಲ್ಲಿಸುತ್ತೇನೆ

3. ರ‍್ವೇಪಲ್ಲಿ ರಾಧಾಕೃಷ್ಣನ್ ಅವರು ಯಾವಾಗ ಜನಿಸಿದರು.

(ಎ) ಜನೆವರಿ 1. 1888
(ಬಿ) ಸಪ್ಟೆಂಬರ್ 5 1888.
(ಸಿ) ಜೂನ್ 5, 1890
(ಡಿ) ಡಿಸೆಂಬರ್ 5, 1898

ಉ:   ಬಿ) ಸಪ್ಟೆಂಬರ್ 5 1888.

4. ದಿನಾಲು, ನೋಡಿ, ನಾಣ್ಯ, ರೈತ, ಬಿಡಿಸಿದ, ಹದ್ದಿನ ಈ ಪದಗಳನ್ನು ಅಕಾರಾದಿಯಾಗಿ ಜೋಡಿಸಿ.

(ಎ) ಬಿಡಿಸಿದ, ದಿನಾಲು, ನಾಣ್ಯ, ನೋಡಿ, ರೈತ, ಹದ್ದಿನ.
(ಬಿ) ದಿನಾಲು, ನೋಡಿ, ನಾಣ್ಯ, ಬಿಡಿಸಿದ, ರೈತ, ಹದ್ದಿನ.
(ಸಿ) ದಿನಾಲು, ನಾಣ್ಯ, ನೋಡಿ, ರೈತ, ಬಿಡಿಸಿದ, ಹದ್ದಿನ.
(ಡಿ) ದಿನಾಲು, ನಾಣ್ಯ, ನೋಡಿ, ಬಿಡಿಸಿದ, ರೈತ, ಹದ್ದಿನ.

ಉ:  (ಎ) ಬಿಡಿಸಿದ, ದಿನಾಲು, ನಾಣ್ಯ, ನೋಡಿ, ರೈತ, ಹದ್ದಿನ.

5. ಹಣ ನೀಡಿದವರಿಗೆ ಪ್ರತಿಯಾಗಿ ಭಿಕ್ಷುಕ ಏನನ್ನು ನೀಡುತ್ತಿದ್ದ?

(ಎ) ಬೈಗುಳ
(ಬಿ) ಕಲ್ಲು
(ಸಿ) ಹೂವು
(ಡಿ) ಕಡ್ಲೇಕಾಯಿ

 ಉ: (ಸಿ) ಹೂವು

6. ಮನೆ ಕಟ್ಟಿ ನೋಡು…………..

(ಎ) ಬಣ್ಣ ಹಚ್ಚಿ ನೋಡಿ
(ಬಿ) ಕುಲಾವಿ ಹೊಲಿಸಿ ನೋಡು
(ಸಿ) ದೀಪವಿಟ್ಟು ನೋಡು
(ಡಿ) ಮದುವೆ ಮಾಡಿ ನೋಡು.

 ಉ : (ಡಿ) ಮದುವೆ ಮಾಡಿ ನೋಡು.

II. ಕೆಳಗಿನವುಗಳಲ್ಲಿ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿ ಹೊಂದುವ ಸಂಬಂಧದ ಪದವನ್ನು ಬರೆಯಿರಿ. 4x1=4

7. ಎ.ಅ.ಉ.ಈ : ಸ್ವರಾಕ್ಷರಗಳು :: ಕ.ಗ.ಟ.ಯ :
ಉ: ವ್ಯಂಜನಾಕ್ಷರಗಳು
8. ಕೈ ಕೆಸರಾದರೆ : ಬಾಯಿ ಮೊಸರು :: ಅತಿ ಆಸೆ :
ಉ : ಗತಿಗೇಡು
9. ಫಸಲು : ಬೆಳೆ :: ಸೊಂಪಾಗಿ :
ಉ : ಹುಲುಸಾಗಿ
10. ಸೂರ್ಯ : ನೇಸರ :: ಭೂಮಿ :
 ಉ: ಇಳೆ

III. ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ:     7X1=7

11. ಓಣಂ ಎಲ್ಲಿ ಆಚರಿಸುತ್ತಾರೆ?
ಉ : ಓಣಂ ಕೇರಳ ರಾಜ್ಯದಲ್ಲಿ ಆಚರಿಸಲಾಗುತ್ತದೆ.
12. ಟರ‍್ನೆಡೋ ಎಂದರೇನು?
ಉ: ಟರ‍್ನೆಡೋ ಎಂದರೆ ಒಂದು ಬಗೆಯ ಸುಂಟರ ಗಾಳಿ
13. ತಂಬಾಕು ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮವನ್ನು ಬರೆಯಿರಿ.
ಉ: ತಂಬಾಕು ಸೇವನೆಯಿಂದ ಕ್ಯಾನ್ಸರ್ ನಂತಹ ರೋಗಗಳು ಬರುತ್ತಿವೆ.
14. ಪ್ಲಾಸ್ಟಿಕ್ ಬಳಕೆ ಮಾಡಬಾರದು ಏಕೆ?
ಉ: ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದೆ ಆದ್ದರಿಂದ ಬಳಕೆ ಮಾಡಬಾರದು.
15. “ಶೌಚಾಲಯ ಬಳಸಿ, ಆರೋಗ್ಯದಿಂದಿರಈ ಘೋಷಣಾ ವಾಕ್ಯದ ಉದ್ದೇಶವೇನು?
ಉ: ಪರಿಸರ ಸ್ವಚ್ಚತೆಯನ್ನು ಕಾಪಾಡುವುದು. ಬಯಲು ಶೌಚಲಯಕ್ಕೆ ಹೋಗದೆ ಇರುವುದು. ರೋಗಗಳಿಂದ ಮುಕ್ತವಾದ ಪರಿಸರ ನರ‍್ಮಾಣ ಮಾಡುವುದು
16. ಅರಣ್ಯ ನಾಶವನ್ನು ತಡೆಗಟ್ಟಲು ಏನು ಮಾಡಬೇಕು?
ಉ: ಮರಗಿಡಗಳನ್ನು ಕಡಿಯುವುದನ್ನು ನಿಯಂತ್ರಿಸಬೇಕು.
17. ನಿವು ಓದಿರುವ ಒಂದು ಪುಸ್ತಕದ ಹೆಸರನ್ನು ಬರೆದು ಅದರಲ್ಲಿ ಇಷ್ಟವಾಗಿರುವ ಒಂದು ಅಂಶವನ್ನು ಬರೆಯಿರಿ.
ಉ: ನಾನು ಓದಿರುವ ಒಂದು ಪುಸ್ತಕ ಚಾಣಕ್ಯನ ‘ರ‍್ಥಶಾಸ್ತ್ರ. ಇದರಲ್ಲಿ ಚಾಣಕ್ಯ ಹೇಳುವ ನೀತಿ ನನಗೆ ಇಷ್ಟವಾಯಿತು.

IV. ಕೆಳಗಿನ ಪ್ರಶ್ನೆಗಳಿಗೆ ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ: 10X2=20

18. ವೀರಗಾಸೆಯ ವೇಷಭೂಷಣಗಳಾವುವು ?
ಉ: ಕನಿಷ್ಠ ಎಂಟು ಅಥವಾ ಅದಕ್ಕೂ ಹೆಚ್ಚು ಸಮ ಸಂಖ್ಯೆಯ ಕಲಾವಿದರು ತಲೆಗೆ ಪೇಟ, ಕಿವಿಗೆ ಕಡಕು, ಹಣೆಗೆ ವಿಭೂತಿ, ಕೊರಳಿಗೆ ರುದ್ರಾಕ್ಷಿ ಹಾಗೂ ನಾಗಾಭರಣ, ಎದೆಗೆ ವೀರಭದ್ರ ಸ್ವಾಮಿಯ ಹಲಗೆ, ಸೊಂಟಕ್ಕೆ ದಕ್ಷಬ್ರಹ್ಮನ ಶಿರ ಕಟ್ಟಿಕೊಳ್ಳುತ್ತಾರೆ.
ಕೈಯಲ್ಲಿ ಕತ್ತಿ, ಕಾಲಿಗೆ ಕಡಗ ಮತ್ತು ಗೆಜ್ಜೆ ಮೈಗೆ ಕಾವಿ ಜುಬ್ಬ ಮತ್ತು ಕಾವಿಯ ಕಸೆಗಳಿರುತ್ತವೆ.

19. ಮೂಲಭೂತ ಹಕ್ಕುಗಳನ್ನು ಪಟ್ಟಿ ಮಾಡಿರಿ.

ಉ: ಭಾರತ ಸಂವಿಧಾನದಲ್ಲಿ 6 ಮೂಲಭೂತ ಹಕ್ಕುಗಳಿವೆ.
1. ಸಮಾನತೆಯ ಹಕ್ಕು (14 ರಿಂದ 18 ನೇ ವಿಧಿ)
2. ಸ್ವಾತಂತ್ರ‍್ಯದ ಹಕ್ಕು ( 19 ರಿಂದ 22 ನೇ ವಿಧಿ)
3.ಶೋಷಣೆಯ ವಿರುದ್ಧದ ಹಕ್ಕು ( 23 & 24 ನೇ ವಿಧಿ)
4. ಧರ‍್ಮಿಕ ಸ್ವಾತಂತ್ರ‍್ಯದ ಹಕ್ಕು ( 25 ರಿಂದ 28 ನೇ ವಿಧಿ)
5.  ಸಾಂಸ್ಕೃತಿಕ ಮತ್ತು ವಿದ್ಯಾಭ್ಯಾಸದ ಹಕ್ಕು ( 29 & 30ನೇ ವಿಧಿ)
6. ಸಂವಿಧಾನಾತ್ಮಕ ಪರಿಹಾರದ ಹಕ್ಕು ( 32 ನೇ ವಿಧಿ)

20. ಪ್ರವಾಹದಿಂದ ಉಂಟಾಗುವ ಸಮಸ್ಯೆಗಳಾವುವು?

ಉ: ಪ್ರವಾಹದಿಂದ ಆಸ್ತಿ ಪಾಸ್ತಿಗಳು ವಿನಾಶ ಹೊಂದುತ್ತವೆ.
ಅನೇಕ ಜೀವಿಗಳು ಪ್ರಾಣಿಗಳು ಸಹ ಮರಣ ಹೊಂದುತ್ತವೆ.
ಅನೇಕ ರೋಗ ರುಜಿನಗಳು ಹರಡುತ್ತವೆ.
ಸಾಂಕ್ರಾಮಿಕ ರೋಗಗಳು ಕಂಡುಬರುತ್ತವೆ.
ಮನೆ ಮಠಗಳು ವಿನಾಶ ಹೊಂದಿ ವಸತಿ ಸಮಸ್ಯೆ ಉಂಟಾಗುತ್ತದೆ. 
ವಿವಿಧ ಬೆಳೆಗಳು ನಾಶ ಹೊಂದುತ್ತವೆ. ಮುಂತಾದವುಗಳು

21. ಜಲಸಂರಕ್ಷಣೆಯ ವಿಧಾನಗಳಾವುವು ?

ಉ: ಜಲ ಒಂದು ಪ್ರಮುಖ ಸಂಪನ್ಮೂಲವಾಗಿದೆ ಇದನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೋಣೆ.
ಅನಗತ್ಯವಾಗಿ ನೀರು ಹರಿದು ಹೊಗದಂತೆ ತಡೆಯಬೇಕು.
ನಲ್ಲಿ ನೀರು ಬಳಸಿದ ನಂತರ ನಿಲ್ಲಿಸಬೇಕು.
ಮಳೆ ನೀರು ಕೊಯ್ಲು ಮಾಡಬೇಕು.
ಮರಗಿಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಬೇಕು. ಮುಂತಾದವುಗಳು.

22. ಭಿಕ್ಷೆ ಬೇಡುವುದು ತಪ್ಪೋ? ಸರಿಯೋ ? ಯೋಚಿಸಿ ಬರೆಯಿರಿ.
ಉ: ಭಿಕ್ಷೆ ಬೇಡುವುದು ತಪ್ಪು. ದುಡಿಯದೆ ತಿನ್ನುವ ಹಕ್ಕು ಯಾರಿಗೂ ಇಲ್ಲ. ಹೊಟೆ ಪಾಡಿಗಾಗಿ ಮಾಡುವ ಯಾವುದೇ ವೃತ್ತಿ ಮೇಲೂ ಅಲ್ಲ ಕೀಳು ಅಲ್ಲ. ಆದರೆ ತಾವು ತಿನ್ನುವ ಅನ್ನ ಅವರ ದುಡಿಮೆಯ ಪ್ರತಿರೂಪವಾಗಿರಬೇಕು.
ತಾವು ಎಲ್ಲಾ ರೀತಿಯಲ್ಲಿಯೂ ದಷ್ಟಪುಷ್ಟವಾಗಿದ್ದು ಸೋಮಾರಿತನದ ಕಾರಣದಿಂದಾಗಿ ಭಿಕ್ಷೆ ಬೇಡುವ ಪ್ರವೃತ್ತಿಯನ್ನು ತಮ್ಮದಾಗಿಸಿಕೊಳ್ಳುವುದು ಸರಿಯಲ್ಲ.
ಬಸ್ಸು, ರೈಲು ನಿಲ್ದಾಣ, ದೇವಸ್ಥಾನಗಳ ಹತ್ತಿರದಲ್ಲಿ ಜನರಿಗೆ ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಭೀಕ್ಷೆ ಬೇಡುವುದನ್ನು ನೋಡಿರುತ್ತೇವೆ. ಹೀಗೆ ಮಾಡುವುದು ತಪ್ಪು.

23. ಸೈಬರ್ ಅಪರಾಧವೆಂದರೇನು ? ಉದಾಹರಣೆ ಕೊಡಿ.

ಉ: ಯಾವುದೋ ಒಂದು ಮೂಲೆಯಲ್ಲಿ ಕುಳಿತುಕೊಂಡು ಲ್ಯಾಪ್ ಟಾಪ್ ಅಥವಾ ಮೊಬೈಲ್ ಮೂಲಕ ಇಂಟರ್ ನೆಟ್ ಬಳಸಿ ಮಾಡುವ ಅಪರಾದವೆ ಸೈಬರ್ ಅಪರಾಧವಾಗಿದೆ.
  ಬ್ಯಾಂಕ್ ಖಾತೆಗೆ ಹಣ ಹಾಕುತ್ತೇವೆ ಎಂದು ನಂಬಿಸಿ, ಎ.ಟಿ.ಎಂ. ಕರ‍್ಡ್ ಮತ್ತು ಓಟಿಪಿ ಪಡೆದು ಖಾತೆಯಿಂದ ಹಣ ದೋಚುವುದು.
  ಫಾರಿನ್ ಮನಿ ಎಕ್ಸಚೇಂಜ್ ಹೆಸರಿನಲ್ಲಿ ಗ್ರಾಹಕರಿಂದ ಹಣ ರ‍್ಗಾವಣೆ ಮಾಡಿಸಿಕೊಂಡು ವಂಚನೆ ಮಾಡುವುದು.
 ಗೂಗಲ್ ಪೇ, ಫೋನ್ ಪೇ, ಅಮೇಜಾನ್ ಪೇ, ತೇಜ್ ಆಪ್ ಗಳ ನಕಲಿ ಕಸ್ಟಮರ್ ಕೇರ್ ಮೂಲಕ ಮೋಸ್ ಮಾಡಿ ಹಣ ರ‍್ಗಾವಣೆ ಮಾಡಿಸಿಕೊಳ್ಳುವುದು.

24. ಸಖಿ ಯೋಜನೆಯನ್ನು ಜಾರಿಗೆ ತಂದ ಉದ್ದೇಶವೇನು?
ಉ: ಮಹಿಳೆಯರು ಮತ್ತು ಮಕ್ಕಳ ಮೇಲಿನ ದರ‍್ಜನ್ಯ ಅತ್ಯಾಚಾರ, ಬಾಲ್ಯ ವಿವಾಹ, ಮಾನವ ಕಳ್ಳಸಾಗಾಣಿಕೆ ಹೀಗೆ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ನಡೆಸುವುದಕ್ಕಾಗಿ.
ಸ್ವಾವಲಂಬಿ ಜೀವನ ಕಂಡುಕೊಳ್ಳುವ ನಿಟ್ಟಿನಲ್ಲಿ ‘ಸಖಿಕಿಶೋರಿಯರ ಸಬಲೀಕರಣ ಯೋಜನೆಯನ್ನು  ಜಾರಿಗೆ ತರಲಾಗಿದೆ.

25. ಪ್ರವಾಸಿ ಸ್ಥಳವಾದ ಜಯಪುರದ ಬಗ್ಗೆ ತಿಳಿಸಿ.

ಉ: ಜೈಪುರ ಅಥವಾ ಜಯಪುರ ರಾಜಸ್ಥಾನ ರಾಜ್ಯದ ರಾಜಧಾನಿ.
ಜೈಪುರವು ಭಾರತದ ಪಿಂಕ್ ಸಿಟಿ ಎಂದೇ ಪ್ರಸಿದ್ಧವಾಗಿದೆ. ಜೈಪುರವು ಒಂದು ಪುಟ್ಟ ಮರುಭೂಮಿಯಾಗಿದೆ. ಈ ಸುಂದರವಾದ ನಗರವನ್ನು ಕಟ್ಟಿದ್ದು ಅಂಬಾರದ ಮಹಾರಾಜ ಎರಡನೇ ಸವಾಯಿ ಜೈ ಸಿಂಗ್‌.
ಜೈಪುರವು ಕೋಟೆಗಳು, ಅರಮನೆಗಳು ಮತ್ತು ಹವೇಲಿಗಳಿಂದ ಆರ‍್ಷಣೆಯನ್ನು ಕಂಡುಕೊಂಡಿದೆ. ಜಗತ್ತಿನ ಎಲ್ಲಾ ಮೂಲೆಯಿಂದಲೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ದೂರದ ಪ್ರದೇಶಗಳಿಂದ ಜನರು ಇಲ್ಲಿನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ.
ಅಂಬರ್ ಕೋಟೆ, ನಹಾರಗಢ ಕೋಟೆ ಹವಾ ಮಹಲ್‌, ಶೀಶ ಮಹಲ್‌, ಗಣೇಶ್ ಪೋಲ್‌ ಮತ್ತು ಜಲ ಮಹಲ್‌ ಇಲ್ಲಿನ ಕೆಲವು ಪ್ರಮುಖ ಆರ‍್ಷಕ ಪ್ರವಾಸಿ ತಾಣಗಳು.

26. ನಿಮ್ಮ ಒಂದು ದಿನದ ದಿನಚರಿಯನ್ನು ಬರೆಯಿರಿ.

ಉ: ನಾನು ಬೆಳಿಗ್ಗೆ 5 ಗಂಟೆಗೆ ಎದ್ದು ಕನ್ನಡ ವಿಷಯದ ಅಧ್ಯಯನ ಮಾಡಿದೆ. ನಂತರ ಇಂಗ್ಲೀಷ ವಿಷಯವನ್ನು ಅಧ್ಯಯನ ಮಾಡುವಷ್ಟರಲ್ಲಿ 7 ಗಂಟೆ ಸಮಯವಾಗುತ್ತಿತ್ತು. ಸ್ನಾನ ಮಾಡಿ ದೇವರಿಗೆ ನಮಸ್ಕರಿಸಿ ಗಣಿತ ವಿಷಯದ ಲೆಕ್ಕಗಳನ್ನು ಬಿಡಿಸುತ್ತಾ ಕುಳಿತೆ ನಂತರ ತಿಂಡಿ ತಿನ್ನುವುದಕ್ಕೆ ಹೋಗಿ ಮತ್ತೆ ಬಂದು ಸಮಾಜ ವಿಜ್ಞಾನ ವಿಷಯವನ್ನು ಅಧ್ಯಯನ ಮಾಡುತ್ತಾ ಕುಳಿತೆ.

ಶಾಲೆಗೆ ಹೋಗುವ ಸಮಯವಾಗಿತ್ತು, ಶುಭ್ರವಾಗಿರುವ ಸಮವಸ್ತ್ರಗಳನ್ನು ಧರಿಸಿ ನನ್ನ ಸ್ನೇಹಿತನ ಜೋತೆಗೆ ಹಿಂದಿನ ದಿನ ಶಾಲೆಯಲ್ಲಿ ಕೊಟ್ಟಿರುವ ಗೃಹಪಾಠಗಳನ್ನು ರ‍್ಚಿಸುತ್ತಾ ಹೋರಟೆ. ಶಾಲೆಯಲ್ಲಿ ಎಲ್ಲಾ ತರಗತಿಗಳಿಗೆ ಹಾಜರಾಗಿ ಸಾಯಂಕಾಲ ಮನೆಗೆ ಬರುವಷ್ಟರಲ್ಲಿ 5 ಗಂಟೆಯಾಗಿತ್ತು.

ಇಂದು ಕೊಟ್ಟಿರುವ ಎಲ್ಲಾ ಹೊಂ ರ‍್ಕಗಳನ್ನು ಮುಗಿಸುವಷ್ಟರಲ್ಲಿ ಸಾಯಂಕಾಲ 8 ಗಂಟೆಯಾಗುತ್ತಿತ್ತು. ಊಟ ಮಾಡಿ ಉಳಿದ ವಿಷಯಗಳನ್ನು ಅಧ್ಯಯನ ಮಾಡುವಷ್ಟರಲ್ಲಿ ರಾತ್ರಿ 10 ಗಂಟೆಯಾಗುತ್ತಿತ್ತು. ನಂತರ ಮಲಗಿಕೊಂಡೆ. ಈ ರೀತಿಯಾಗಿ ನನ್ನ ಒಂದು ದಿನದ ದಿನಚರಿಯಾಗಿದೆ.

27. ಸತ್ಯಾನಂದ ಪಾತ್ರೋಟರ ‘ಗಿಡಮರಪದ್ಯದಲ್ಲಿನ ಮರದ ಒಳ್ಳೆಯ ಗುಣಗಳನ್ನು ಪಟ್ಟಿ ಮಾಡಿರಿ.

ಉ: ಮರದ ಬೊಡ್ಡೆಯು ಕರಿದಾಗಿದ್ದರು ಅದರ ಎಲೆಗಳು ಹಚ್ಚ ಹಸಿರಾಗಿವೆ. ಮತ್ತು ಅದರಲ್ಲಿ ವಿವಿದ ರೀತಿಯ ಹೂವುಗಳು ಬೆಳೆದು ಸೊಗಸ್ಸನ್ನು ಕಂಪನ್ನು ಹರಡುತ್ತಾ ಇದೆ.
ಮರದ ಹತ್ತಿರ ಯಾರೇ ಬಂದು ಏನೆ ಮಾಡಿದರು ಮೌನವಾಗಿರುವುದು ಅದರ ಒಳ್ಳೆಯ ಗುಣ.
ಅದರ ರೆಂಬೆ ಕೊಂಬೆಗಳು ಚಿಗುರವ ಸಂರ‍್ಭದಲ್ಲಿ ಕಡಲಿನಷ್ಟು ಚೇತನದಿಂದ ಬೆಳೆಯುತ್ತವೆ. ಅಂದರೆ ಬೆಳೆಯುತ್ತಿರುವಾಗ ಅದರಲ್ಲಿ ಚೇತನದ ಗುಣವಿದೆ.
ಯಾರೆ ಅದಕ್ಕೆ ನೋವು ಕೊಟ್ಟರು ಸಹ ಸಹನೆಯಿಂದ ತಡೆದುಕೊಳ್ಳುತ್ತದೆ. ಯಾರಿಗೂ ತಾನು ನೋವು ಕೊಡುವುದಿಲ್ಲ. ತಾನು ಮಾತ್ರ ಉತ್ಸಾಹದಿಂದ ಬೆಳೆಯುತ್ತದೆ.
ಇವುಗಳು ಮರದ ಒಳ್ಳೆಯ ಗುಣಗಳಾಗಿವೆ.

V. ಈ ಸಾಹಿತಿ/ಕವಿಗಳ ಸ್ಥಳ, ಕಾಲ, ಕೃತಿ, ಪ್ರಶಸ್ತಿ/ಬಿರುದುಗಳನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ  2X3=6

28. ಬಸವಣ

ಉ: ಬಸವಣ್ಣನವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಜನಿಸಿದರು.
ಇವರ ತಂದೆ ಮಾದರಸ ಮತ್ತು ತಾಯಿ ಮಾದಲಾಂಬಿಕೆ.
ಸಂಸ್ಕೃತ ಮತ್ತು ಕನ್ನಡಗಳನ್ನು ಕಲಿತು ತಮ್ಮ ಉಪನಯನವಾದ ನಂತರ ಕೂಡಲ ಸಂಗಮಕ್ಕೆ ನಡೆದರು. ಅಲ್ಲಿ ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದು ಧ್ಯಾನ ಸಾಧನೆಯನ್ನು ಮಾಡಿದರು.
ಇವರು ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು. ಬಿಜ್ಜಳನ ಬಂಢಾರದ ಅಧಿಕಾರಿಯಗಿದ್ದರು. ಕಾಯಕ ತತ್ವವನ್ನು ಪ್ರತಿಪಾದಿಸಿದರು.
ಇವರು ಶಕ್ತಿವಿಶಿಷ್ಟಾದ್ವೈತ ತತ್ವವನ್ನು ಬೋಧಿಸಿದರು.
ಇವರು ಬೀದರ ಜಿಲ್ಲೆ ಬಸವ ಕಲ್ಯಾಣದಲ್ಲಿ “ಅನುಭವ ಮಂಟಪಎಂಬ ಹೆಸರಿನ ಶರಣ ಆಧ್ಯಾತ್ಮ ಸಂಸ್ಥೆಯನ್ನು ಪ್ರಾರಂಭಿಸಿದರು.

29. ರಾಘವಾಂಕ

ಉ:  ರಾಘವಾಂಕ ನಡುಗನ್ನಡದ ಅಗ್ರಮಾನ್ಯ ಕವಿಗಳಲ್ಲಿ ಒಬ್ಬ ( ಸಾ.ಶ. ಸುಮಾರು 1225).
ಹಂಪಿ ಕ್ಷೇತ್ರದವನು ಪಂಪಾಪತಿ ವಿರೂಪಾಕ್ಷನ ಪರಮಭಕ್ತ.
ರಗಳೆ ಕವಿಯೆಂದೆನಿಸಿದ ಹರಿಹರನ ಸೋದರಳಿಯ ಮತ್ತು ಶಿಷ್ಯ.
ವಿರೂಪಾಕ್ಷನ ಪರಮಭಕ್ತ.
ಹರಿಶ್ಚಂದ್ರಕಾವ್ಯ, ಸಿದ್ಧರಾಮಚಾರಿತ್ರ, ವೀರೇಶ್ವರಚರಿತೆ, ಸೋಮಾನಥಚರಿತೆ, ಶರಭ ಚಾರಿತ್ರ, ಹರಿಹರ ಮಹತ್ವ ಮುಂತಾದ ಕಾವ್ಯಗಳನ್ನು ಷಟ್ಪದಿ ಛಂದಸ್ಸುಗಳಲ್ಲಿ ರಚಿಸಿದ್ದಾನೆ.
ಉಭಯಕವಿ ಕಮಲ ರವಿ, ಕವಿ ಶರಭ ಭೇರುಂಡ, ಷಟ್ಪದಿ ಬ್ರಹ್ಮ ಅಭಿದಾನಗಳನ್ನು ಹೊಂದಿದ್ದು ಷಟ್ಪದಿ ಕಾವ್ಯದ ನರ‍್ಮಾಪಕನೆಂಬ ಅಗ್ಗಳಿಕೆಗೆ ಪಾತ್ರನಾದ ಕವಿ.

VI. ಕೆಳಗಿನ ಚಿತ್ರಗಳ ಸರಣಿಯನ್ನು ಗಮನಿಸಿ ಕಥೆ ರಚಿಸಿ      1X3=3

30.


ಉತ್ತರ : ಶ್ರವಣ ಕುಮಾರನು ತನ್ನ ತಂದೆ ತಾಯಿಯರನ್ನು ಹೊತ್ತುಕೊಂಡು ಕಾಶಿಯ ರ‍್ಶನಕ್ಕೆ ಹೋಗುತ್ತಾ ಇದ್ದನು. ದಾರಿಯ ಮಧ್ಯದಲ್ಲಿ ತನ್ನ ತಂದೆ ತಾಯಿಯರು ನೀರಡಿಕೆಯಾಗಿದೆ ಎಂದು ಕೇಳಿದಾಗ, ಶ್ರವಣನು ಸಮೀಪದಲ್ಲಿ ತೊರೆಯೊಂದು ಹರಿಯುತ್ತಿರುವುದನ್ನು ನೋಡಿ, ಅಲ್ಲಿಯೇ ಪಕ್ಕದಲ್ಲಿ ಅವರನ್ನು ಕುಳ್ಳಿರಿಸಿ ನೀರು ತರಲು ಹೋಗುವನು.

ಆಗ ಬೇಟೆಯಾಡಲು ಬಂದ ರಾಜನೊಬ್ಬನು ಯಾವುದೋ ಪ್ರಾಣಿ ನೀರು ಕುಡಿಯಲು ಬಂದಿದೆ ಎಂದು ತಿಳಿದು ತನ್ನ ಬಾಣದಿಂದ ಹೋಡೆದನು ಬಾಣವು ನೇರವಾಗಿ ಶ್ರವಣನ ಎದೆಗೆ ನಾಟಿ ಸ್ಥಳದಲ್ಲಿಯೇ ಸತ್ತುಹೋದನು.
ಸಮೀಪ ಬಂದು ನೋಡಿದ ರಾಜನು ಎಂಥಹ ತಪ್ಪು ಮಾಡಿದೇನಲ್ಲ ಎಂದು ಪಶ್ಚಾತ್ತಾಪ ಪಟ್ಟು ನೀರನ್ನು ತೆಗೆದುಕೊಂಡು ಹೋಗಿ ಆ ತಂದೆ ತಾಯಿಯರಿಗೆ ಕೊಟ್ಟು ತನ್ನಿಂದ ಆದ ತಪ್ಪನ್ನು ತಿಳಿಸಿ ಅವರ ಕ್ಷಮಾಪಣೆ ಕೋರಿ. ಅವರನ್ನು ತಾನೆ ಹೊತ್ತುಕೊಂಡು ಹೋಗುವುದಾಗಿ ತಿಳಿಸಿದನು.

VII. 31. ನಿಮ್ಮ ಒಂದು ವಾರದ ದಿನಚರಿಯನ್ನು ಬರೆಯಿರಿ  1X3=3

ಉ:  ಇಂದು ಭಾನುವಾರವಾಗಿದ್ದರಿಂದ ನಾನು ಬೆಳಿಗ್ಗೆ ಬೇಗನೆ ಎದ್ದು ಸ್ವಲ್ಪ ಪ್ರಮಾಣದಲ್ಲಿ ವಾಕಿಂಗ್ ಹೋಗಿ ಬಂದೆ ನಂತರ ಹಿಂದಿನ ವಾರ ತರಗತಿಯಲ್ಲಿ ಹೇಳಿರುವ ಎಲ್ಲಾ ಪಾಠಗಳನ್ನು ಅಧ್ಯಯನ ಮಾಡಿ ರಾತ್ರಿ ಬೇಗ ಮಲಗಿಕೊಂಡೆ. ಸೋಮುವಾರ ಪ್ರತಿದಿನದಂತೆ ಬೇಗ ಎದ್ದು ವಾಕಿಂಗ್ ಮಾಡಿ ಪ್ರತಿದಿನದ ಚಟುವಟಿಕೆಗಳನ್ನು ಮುಗಿಸಿ ಶಾಲೆಗೆ ಹೋಗಿ ಮನೆಗೆ ಬಂದು ಎಲ್ಲಾ ಹೋಂ ರ‍್ಕಗ ಗಳನ್ನು ಮುಗಿಸಿದೆ. ಮಂಗಳವಾರ ಪ್ರತಿ ದಿನದ ಚಟುವಟಿಕೆಗಳ ಜೋತೆಗೆ ಹೂ ತೋಟದ ಸಸ್ಯಗಳಿಗೆ ನೀರುಣಿಸಿದೆ. ಬುಧುವಾರ ಅಪ್ಪನ ಜೋತೆಗೆ ಮಾರುಕಟ್ಟೆಗೆ ಹೋಗಿ ಮನೆಗೆ ಬೇಕಾಗುವ ಸಾಮಾಗ್ರಿಗಳನ್ನು ತಂದೆ. ಗುರುವಾರ ಅಮ್ಮನಿಗೆ ಮನೆಗೆಲಸದಲ್ಲಿ ಸಹಾಯ ಮಾಡಿದೆ. ಶುಕ್ರವಾರ ಮತ್ತು ಶನಿವಾರ ತರಕಾರಿ ಸಸ್ಯಗಳಿಗೆ ನೀರುಣಿಸಿದೆ. ಜೋತೆಗೆ ಇತರ ಎಲ್ಲಾ ಚಟುವಟಿಕೆಗಳನ್ನು ಮಾಡಿ ಈ ವಾರದ ದಿನಚರಿಯನ್ನು ಮುಕ್ತಾಯಗೊಳಿಸಿದೆ.

9ನೇ ತರಗತಿ ಅರ್ಧವಾರ್ಷಿಕ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ-2022

VIII. ಕೆಳಗಿನ ಗಾದೆಗಳಲ್ಲಿ ಒಂದನ್ನು ಬರೆಯಿರಿ:  1X3=3

32. ಉಪ್ಪು ತಿಂದವನು ನೀರು ಕುಡಿಯಲೇ ಬೇಕು

ಅಥವಾ
ಕೋಟಿ ವಿದ್ಯೆಗಿಂತ, ಮೇಟಿ ವಿದ್ಯೆ ಮೇಲು
ಉ:  ಕೋಟಿ ವಿದ್ಯೆಗಿಂತಲೂ ಮೇಟಿ ವಿದ್ಯೆ ಮೇಲು, ಮೇಟಿಯಂ ರಾಟಿ ನಡೆದುದಲ್ಲದೆ, ದೇಶದಾಟವೇ ಕೆಡಕು ರ‍್ವಜ್ಞ. ಎನ್ನುವಂತೆ ದೇಶದ ಜನರ ಆಹಾರ ದೊರೆಯುವುದು ಕೇವಲ ಕೃಷಿಯಿಂದ ಮಾತ್ರ ಸಾಧ್ಯ. ವಿವಿಧ ರೀತಿಯ ಧವಸ ಧಾನ್ಯಗಳು ಬರುವುದು ಬೇಸಾಯದಿಂದ ಮಾತ್ರ ಸಾಧ್ಯ.
ಮನುಷ್ಯ ನಡೆಸುವ ಎಲ್ಲವ ವಿಧದ ಕಸುಬುಗಳಲ್ಲಿ ದೊಡ್ಡ ಕಸುಬು ಎಂದರೆ ಕೃಷಿಯಾಗಿದೆ. ಮನುಷ್ಯ ಮತ್ತು ವಿವಿಧ ಪ್ರಾಣಿಗಳು ಜೀವಿಸುವುದಕ್ಕೆ ಬೇಕಾಗಿರುವ ಆಹಾರ ಒದಗಿಸುವುದು ಕೃಷಿ ಚಟುವಟಿಕೆಯಾಗಿದೆ. ಈ ವಿದ್ಯೆ ಕಲಿತ ನಂತರವೇ ಇತರ ಎಲ್ಲಾ ವಿದ್ಯೆಗಳು ಬೆಳೆದು ಬಂದಿರುವುದು. ದೇಶದ ಪ್ರಗತಿಗೆ ಇದುವೆ ಮುಖ್ಯ.
ಎಲ್ಲಾ ವಿದ್ಯೆಗಳಿಗಿಂತ ಅತಿ ಶ್ರೇಷ್ಟವಾದ ವಿದ್ಯೆಯಾಗಿರುವುದು ಕೃಷಿಯಾಗಿದೆ. ನಂತರ ಇತರ ಎಲ್ಲಾ ವಿದ್ಯೆಗಳು ಬಂದಿರುವುದು. ಆಹಾರ ಇದ್ದರೆ ಮಾತ್ರ ನಾವು ಬದುಕಿರುವುದಕ್ಕೆ ಸಾಧ್ಯ, ನಂತರ ಉಳಿದ ಎಲ್ಲಾ ಕಸುಬುಗಳನ್ನು ಮಾಡುವುದಕ್ಕೆ ಸಾಧ್ಯ ಎನ್ನುವ ಅಂಶವನ್ನು ತಿಳಿಸುವುದಕ್ಕಾಗಿ ಕೋಟಿ ವಿದ್ಯೆಗಿಂತ, ಮೇಟಿ ವಿದ್ಯೆ ಮೇಲು ಎನ್ನುವ ಗಾದೆ ಮಾತನ್ನು ಹೇಳಲಾಗುತ್ತದೆ.

IX. ಈ ಕೆಳಗಿನ ಹೇಳಿಕೆಗಳನ್ನು ಸ್ವಾರಸ್ಯದೊಂದಿಗೆ ರ‍್ಥೈಸಿ ಬರೆಯಿರಿ   6X3=18

33. ಗೆಳೆತನದಲ್ಲಿ ನಂಬಿಕೆ ದ್ರೋಹ ಮಾಡುವುದು ತಪ್ಪು

ಉ: ನಂಬಿಕೆಗೆ ಇನ್ನೊಂದು ಹೆಸರೆ ಗೆಳೆತನವಾಗಿದೆ. ನಂಬಿದ ಗೆಳೆಯರನ್ನು ಮೋಸ ಮಾಡುವುದು ತಪ್ಪು, ಇಲ್ಲಿ ರಾಮ ಮತ್ತು ಶ್ಯಾಮ ಇಬ್ಬರು ಸ್ನೇಹಿತರಾಗಿದ್ದರು.
ರಾಮನು ಓದಿ ಬರೆದು ವಿದ್ಯಾವಂತನಾಗಿದ್ದನು, ಆದರೆ ಶ್ಯಾಮನು ಶಾಲೆ ಬಿಟ್ಟು ಅನಕ್ಷರಸ್ಥನಾಗಿದ್ದನು. ರಾಮನು ಹಣವನ್ನು ಎಣಿಸಿಕೊಡುವುದಕ್ಕಾಗಿ ಶ್ಯಾಮನಿಗೆ ಸಹಾಯ ಮಾಡುತ್ತಿದ್ದನು.
ಶ್ಯಾಮನು ರಾಮನ ಗೆಳೆಯನಾಗಿರುವ ಕಾರಣ ರಾಮನ ಮೇಲೆ ವಿಶ್ವಾಸವಿಟ್ಟು ಹಣದ ಗಲ್ಲವನ್ನು ನೋಡಿಕೊಳ್ಳಲು ಕೊಡುತ್ತಿದ್ದನು.
ಆದರೆ ರಾಮನು ತನ್ನ ದುರಾಸೆಯ ಕಾರಣದಿಂದಾಗಿ ಶ್ಯಾಮನಿಗೆ ಮೊಸ ಮಾಡಿ ಹಣವನ್ನು ಕದ್ದುಕೊಂಡು ಹೋಗಿರುವುದು ಕಾಣುತ್ತದೆ.
ಇಲ್ಲಿ ರಾಮನಿಗೆ ಹಣದ ಮೇಲಿರುವ ಆಸೆಯಿಂದಾಗಿ ತನ್ನ ಸ್ನೇಹಿತನಿಗೆ ದ್ರೋಹ ಮಾಡಿರುವುದು ಕಾಣುತ್ತದೆ.
ಈ ರೀತಿಯಾಗಿ ಗೆಳೆತನದಲ್ಲಿ ಮೋಸ ಮಾಡುವುದು ತಪ್ಪಾಗಿದೆ.

34. ನೀರು ಉಳಿಸಿ; ಭವಿಷ್ಯ ರಕ್ಷಿಸಿ

ಉ:  ನೀರು ಮನುಷ್ಯನಿಗೆ ಮತ್ತು ಎಲ್ಲಾ ಪ್ರಾಣಿ ಪಕ್ಷಿಗಳಿಗೆ ಅಗತ್ಯವಿರುವ ಒಂದು ಮೂಲಭೂತ ಸಂಪನ್ಮೂಲವಾಗಿದೆ.
ನೀರು ಕುಡಿಯುವುದಕ್ಕೆ ಮಾತ್ರವಲ್ಲದೆ, ಸ್ನಾನಕ್ಕೆ, ಪಾತ್ರೆಗಳು, ಬಟ್ಟೆ ತೋಳೆಯುವುದಕ್ಕೆ ಮತ್ತು ವಿವಿಧ ಕರ‍್ಖಾನೆಗಳಿಗೂ ಸಹ ಬೇಕಾಗಿರುವ ಸಂಪನ್ಮೂಲವಾಗಿದೆ.
ನೀರಿಲ್ಲದೆ ಬದುಕುವುದಕ್ಕೆ ಸಾಧ್ಯವಿಲ್ಲ. ಆದರೆ ಭೂಮಿಯ ಮೇಲೆ ಶುದ್ಧವಾಗಿರುವ ಕುಡಿಯುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಮನುಷ್ಯನ ಅತಿಯಾದ ಚಟುವಟಿಕೆಯಾಗಿದೆ. ಇದರಿಂದಾಗಿ ನೀರು ಕಲುಶೀತವಾಗಿ ಹೋಗುತ್ತಿದೆ. ಮತ್ತು ಉಳಿದ ನೀರು ಸಮುದ್ರವನ್ನು ಸೇರಿಕೊಳ್ಳುತ್ತಿದೆ.
ಹೀಗೆ ಮುಂದುವರಿದರೆ. ಮುಂದೆ ಒಂದು ದಿನ ಅಂರ‍್ಜಲ ಪ್ರಮಾಣ ಕಡಿಮೆ ಆಗಿ ಮಳೆ ಬಂದರು ಸಹ ನೀರು ಇರದೆ ಇರುವ ಪರಿಸ್ಥಿತಿ ನರ‍್ಮಾಣವಾಗುತ್ತದೆ.
ಆದ್ದರಿಂದ ನೀರನ್ನು ರಕ್ಷಿಸಬೇಕಾಗಿರುವುದು ಬಹಳ ಅಗತ್ಯವಾಗಿದೆ. ನೀರು ಉಳಿಸಿದಲ್ಲಿ ಮಾತ್ರ ಮುಂದಿನ ಪಿಳಿಗೆ ಉಳಿಯುವುದಕ್ಕೆ ಸಾಧ್ಯವಿದೆ. ಎಂದು ಇಲ್ಲಿ ನಾವು ತಿಳಿದುಕೊಳ್ಳುತ್ತೇವೆ.

35. ‘ಹಾವಿನ ಬಾಯಿಗೆ ತುತ್ತಾದರೂ ಸಮಾಜದ ಬಾಯಿಗೆ ತುತ್ತಾಗಬೇಡ

ಉ: ‘ಅಡಕೆಗೆ ಹೋದ ಮಾನ ಆನೆ ಕೊಟ್ಟರು ಬಾರದುಎನ್ನುವ ಗಾದೆ ಮಾತಿನಂತೆ ಸಮಾಜದ ಬಾಯಿಗೆ ಯಾವುದೋ ಒಂದು ತಪ್ಪಿನಿಂದ ಸಿಕ್ಕರೆ, ಅದು ನಮಗೆ ಬದುಕುವುದಕ್ಕೂ ಬಿಡುವುದಿಲ್ಲ ಸಾಯಿವುದಕ್ಕೂ ಬಿಡುವುದಿಲ್ಲ ಆ ರೀತಿಯಾಗಿ ಮಾಡುತ್ತದೆ. ಪ್ರತಿ ಬಾರಿ ನಮ್ಮನ್ನು ಚುಚ್ಚು ಮಾತುಗಳನ್ನು ಆಡಿ ನೋಯಿಸುತ್ತಿರುತ್ತದೆ. ಅದನ್ನೆ ಹಾವಿನ ವಿಷಕ್ಕಿಂತ ಹೆಚ್ಚು ಎಂದು ಇಲ್ಲಿ ಹೇಳಿರುವುದು. ಹಾವು ಕಚ್ಚಿದ್ದಾಗ ಒಂದು ಬಾರಿ ಸಾಯಿತ್ತಾನೆ. ಅಥವಾ ಪ್ರಥಮ ಚಿಕಿತ್ಸೆ ಪಡೆದು ಬದುಕುತ್ತಾನೆ. ಆದರೆ ಸಮಾಜದ ಬಾಯಿ ಹಾವಿನ ವಿಷಕ್ಕಿಂತ ಹೆಚ್ಚು ಎನ್ನುವುದು ಈ ಸೂಚನಾ ಫಲಕದ ಅಭಿಪ್ರಾಯವಾಗಿದೆ.

36. ‘ಹಸಿರು ನಮ್ಮೆಲ್ಲರ ಉಸಿರು

ಉ: “ ಹಸಿರು ನಮ್ಮೆಲ್ಲರ ಉಸಿರುಎಂಬ ಮಾತು ನಿಜಕ್ಕೂ ಅದ್ಭುತವಾದ ರ‍್ಥ ಕಲ್ಪಿಸುತ್ತದೆ.
ಗಿಡ, ಮರ, ಹೂ, ಪ್ರಾಣಿ, ಪಕ್ಷಿಗಳು ಎಲ್ಲಾ ಜೀವಿಗಳ ಸಂಕುಲವನ್ನು ಪರಿಸರದಲ್ಲಿ ನೋಡುವ ಸೊಬಗು ಕಣ್ಣಿಗೆ ಆರ‍್ಷಣೀಯವಾದುದು. ಪ್ರತಿಯೊಬ್ಬರೂ ಒಂದೊಂದು ಮರ ನೆಡುತ್ತಾ ಪರಿಸರ ಬೆಳೆಸುವಲ್ಲಿ ಕೈ ಜೋಡಿಸಬೇಕು. ನಿರ‍್ಗ ಒಂದು ಕೊಡುಗೆ, ಅದನ್ನು ರ‍್ಣಿಸಲು ಪದಗಳೇ ಸಾಲದು.
ನಿರ‍್ಗದ ಒಡಲು ಮತ್ತು ತಾಯಿಯ ಮಡಿಲು ಯಾವುದಕ್ಕೂ ಸರಿಸಾಟಿಯಾಗದು. ಜೀವಸಂಕುಲಕ್ಕೆ ಮಗುವಾಗಿ ಪಾಲನೆ ಮಾಡುವ ತಾಯಿ, ಪ್ರಕೃತಿಯನ್ನು ತನ್ನ ಜೋಗುಳವಾಡುವ ಭೂತಾಯಿಯನ್ನು ಕಾಪಾಡುವ ಮನೋಭಾವ ಎಲ್ಲರಲ್ಲಿರಬೇಕು.
ಪ್ರಕೃತಿಯಲ್ಲಿ ಪ್ರಾಣಿ ಪಕ್ಷಿಗಳನ್ನು ಜೀವಿಸಲು ಬಿಡಬೇಕು. ಹಸಿರೇ ಉಸಿರಾಗಬೇಕು. ಇದನ್ನು ಪ್ರತಿಯೊಬ್ಬರಿಗೂ ತಿಳಿಸುವುದರ ಜೊತೆಗೆ ಜೂನ್ ಐದರಂದು ಸಸಿ ನೆಡವುದರ ಮೂಲಕ ಪ್ರಕೃತಿಯ ಮಹತ್ತ್ವ ತಿಳಿಸುವುದು ನಮ್ಮ ಕರ್ತವ್ಯ

37. ‘‘ಶೌಚಾಲಯ ಇಲ್ಲದ ಮನೆಗೆ ಹೆಣ್ಣು ಕೊಡಬೇಡಿ

ಉ: ಈ ಹೇಳಿಕೆಯು ಪ್ರತಿಯೊಂದು ಮನೆಗೂ ಶೌಚಾಲಯದ ಅವಶ್ಯಕತೆಯನ್ನು ತಿಳಿಯಪಡಿಸುತ್ತದೆ.
ಬಯಲು ಶೌಚಾಲಯಕ್ಕೆ ಹೋಗುವುದರಿಂದ ಅನೇಕ ರೋಗಗಳು ಹರಡುತ್ತವೆ.
ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ, ಇದನ್ನು ಎಲ್ಲರೂ ಅರಿತು ಪಾಲಿಸಬೇಕು.
ಇದಕ್ಕಾಗಿ ಪ್ರತಿಯೊಂದು ಮನೆಗಳಲ್ಲಿ ಶೌಚಾಲಯ ಇರಬೇಕು ಎಂದು ಹೇಳುತ್ತದೆ.

38. ‘‘ದುಡಿಯುವವನ ಕಂಡರೆ ಬಡತನ ಓಡುತ್ತದೆ

ಉ:  ದುಡಿಯುವವನ ಕಂಡರೆ ಬಡತನ ಓಡುತ್ತದೆ ಎನ್ನುವ ಹೇಳಿಕೆಯು ವಾಸ್ತವದಲ್ಲಿ ಕಾಯಕದ ಮಹತ್ವವನ್ನು ಹೇಳುವ ಹೇಳಿಕೆಯಾಗಿದೆ. ‘ಕೈ ಕೆಸರಾದರೆ ಬಾಯಿ ಮೊಸರುಎನ್ನುವ ಗಾದೆ ಮಾತಿನಂತೆ ನಾವು ಕಷ್ಟಪಟ್ಟು ಕೆಲಸ ಮಾಡಿದರೆ ಅದರಿಂದ ನಮಗೆ ಸುಖ ಸಿಗುತ್ತದೆ. ಸೋಮಾರಿಗೆ ಏನು ಸಹ ದೊರೆಯುವುದಿಲ್ಲ. ನಾವು ತಿನ್ನುವ ಅನ್ನ ನಮ್ಮ ಪರಿಶ್ರಮದ ಪ್ರತಿಫಲವಾಗಿರಬೇಕು. ದುಡಿಯುವವನಿಗೆ ಯಾವುದು ಸಹ ಕಡಿಮೆಯಾಗುವುದಿಲ್ಲ ಎಂದು ತಿಳಿಸುತ್ತದೆ.

X. ಈ ಕೆಳಗಿನ ಪದ್ಯಭಾಗವನ್ನು ಪರ‍್ಣಗೊಳಿಸಿರಿ  1X4=4

39.

ಒಂದು ಮುಂಜಾವಿನಲಿ _________________
_________________________________
_________________________________
_____________________ನಡುವೆ ನುಸುಳುತಿತ್ತು

ಅಥವಾ

ಇಳೆವೆಣ್ಣು __________________________

_________________________________
_________________________________
__________________________ಹೊಳೆಯುತ್ತಿತ್ತು

ಉತ್ತರ:

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು.
ಅದಕೆ ಹಿಮ್ಮೇಳವೆನೆ ಸೋಸಿ ಬಹ ಸುಳಿಗಾಗಿ
ತೆಂಗು ಗರಿಗಳ ನಡುವೆ ನುಸುಳುತಿತ್ತು.

XI. ಈ ಕೆಳಗಿನ ಪದ್ಯಭಾಗವನ್ನು ಓದಿ ರ‍್ಥಮಾಡಿಕೊಂಡು, ಅಡಕವಾಗಿರುವ ಮೌಲ್ಯವನ್ನಾಧರಿಸಿ ಸಾರಾಂಶ ಬರೆಯಿರಿ 1X4=4

40. ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೋ
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜತುಂಬಿ.
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೋ,
ತನುವಿನೊಳಗೆ ಹುಸಿತುಂಬಿ, ಮನದೊಳಗೆ ವಿಷಯ ತುಂಬಿ.
ಮನೆಯೊಳಗೆ ಮನೆಯೊಡೆಯನಿಲ್ಲ ಕೂಡಲ ಸಂಗಮದೇವ

ಉ:  ಮನೆಯ ಮುಂದೆ ಹೊಸ್ತಿಲಲ್ಲಿಯೇ ಹುಲ್ಲು ಬೆಳೆದು ಕಸ ಕಡ್ಡಿಗಳಿಂದ ತುಂಬಿದಲ್ಲಿ ಆ ಮನೆಯ ವಡೆಯ ವಾಸಿಸುತಿಲ್ಲ ಎಂದು ತಿಳಿಯುತ್ತದೆ. ಮನೆಯ ಹೊರಗಡೆ ಕಸ ಕಡ್ಡಿಗಳನ್ನು ಗುಡಿಸಿ ಶುಚಿಯಾಗಿ ಇಟ್ಟಿದ್ದಲ್ಲಿ ಮನೆಯ ವಡೆಯ ಇದ್ದಾನೆ ಎನ್ನುತ್ತೇವೆ. ಮನೆಯ ಮುಂದಿನ ಸ್ವಚ್ಚತೆಯೇ ಮನೆಯಲ್ಲಿನ ಯಜಮಾನನ ಬಗೆಗೆ ತಿಳಿಸಿಕೊಡುತ್ತದೆ.

ನಮ್ಮ ಮನೆಯ ರೀತಿಯಲ್ಲಿ ನಮ್ಮ ದೇಹ ಸಹ ಇರುವುದು ಇದರ ವಡೆಯ ದೇವರು.
ನಮ್ಮ ಮನಸಿನಲ್ಲಿ ಸುಳ್ಳು, ಕಪಟ, ಮೋಸಗಳು ತುಂಬಿದ್ದಲ್ಲಿ ಅದು ಸಹ ಮನೆಯ ಹೊರಗಡೆಯ ಕಸದ ಹಾಗೆ ಇರುತ್ತದೆ ಅಲ್ಲಿ ದೇವರು ವಾಸಿಸುವುದಿಲ್ಲ.
ಪರಿಶುದ್ಧ ಮನಸ್ಸಿರುವ ಮನಸ್ಸೆಂಬ ಮನೆಯಲ್ಲಿ ಮಾತ್ರ ದೇವರು ವಾಸಿಸುವುದಕ್ಕೆ ಸಾಧ್ಯ. ಇಲ್ಲವಾದಲ್ಲಿ ದೇವರು ಸಾಸಿಸುವುದಿಲ್ಲ. ಮನೆಯನ್ನು ಹೇಗೆ ಸ್ವಚ್ಚತೆಯನ್ನು ಕಾಪಾಡಿಕೊಂಡು ಯಜಮಾನ ವಾಸಿಸುತ್ತಾನೋ ಹಾಗೆಯೇ ಮನಸ್ಸಿನ ಸ್ವಚ್ಚತೆಯನ್ನು ಕಾಪಾಡಿಕೊಂಡಲ್ಲಿ ದೇವರು ಅಲ್ಲಿ ವಾಸಿಸುತ್ತಾನೆ. ಎಂಬುವುದು ಈ ವಚನದಲ್ಲಿರುವ ಸ್ವಾರಸ್ಯವಾಗಿದೆ.

XII. ಈ ಕೆಳಗಿನ ಪ್ರಶ್ನೆಗಳಿಗೆ ಎಂಟು ಅಥವಾ ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.  2X4=8

41. ಪ್ಲಾಸ್ಟಿಕ್ ಬಳಕೆಯಿಂದಾಗುವ ಮಾರಕಗಳೇನು? ಮತ್ತು ಅದರೆ ಬಳಕೆ ತಪ್ಪಿಸಲು ರ‍್ಯಾಯ ವ್ಯವಸ್ಥೆಗಳಾವುವು?

ಅಥವಾ
ತಂಬಾಕಿನ ಉತ್ಪನ್ನಗಳಾವುವು? ಮತ್ತು ಅವುಗಳ ಸೇವನೆಯಿಂದ ಮನುಷ್ಯರ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳಾವುವು?
ಉ: ಪ್ಲಾಸ್ಟಿಕ್ ಬಳೆಕೆಯು ಮಾನ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.
ಅಲ್ಲಲ್ಲಿ ಎಸೆದ ಪ್ಲಾಸ್ಟಿಕ್ ವಸ್ತುಗಳು, ದನಕರುಗಳು ಮುಂತಾದ ಪಶುಗಳ ಹೊಟ್ಟೆ ಸೇರಿ ಜರ‍್ಣವಾಗದೆ, ಪಶುಗಳ ಜೀವಕ್ಕೆ ಮಾರಕವಾಗುತ್ತದೆ.
ಪೆಪ್ಸಿಯಂತಹ ಪಾನೀಯಗಳು ಪ್ಲಾಸ್ಟಿಕ್ ಬಾಟಲಿನಲ್ಲಿ ಬರುವುದರಿಂದ ಹಾಗೂ ಬಿಸಿಯಾದ ಆಹಾರ ಪದರ‍್ಥಗಳನ್ನು ಪ್ಲಾಸ್ಟಿಕ್ ಹಾಳೆಯಲ್ಲಿ ಕಟ್ಟುವುದರಿಂದ, ಪ್ಲಾಸ್ಟಿಕ್ ನ ವಿಷಕಾರಿ ಅಂಶ ಆಹಾರದ ಮೂಲಕ ದೇಹವನ್ನು ಸೇರಿ, ಮಾರಕವೆನಿಸುತ್ತದೆ.
ಅತಿಯಾದ ಪ್ಲಾಸ್ಟಿಕ್ ಪರಿಸರಕ್ಕೆ ಮಾರಕ ಹೇಗೆಂದರೆ:
ಒಮ್ಮೆ ಬಳಸಿದ ಚಾಕಲೇಟ್ ಕವರ್ ಮತ್ತು ಇನ್ನಿತರ ಕವರ್ ಗಳು ಅಲ್ಲಲ್ಲಿ ಎಸೆದಾಗ, ಅದು ಬಿಸಿಲಿಗೆ ಕರಗಿ ಸುಡಲ್ಪಟ್ಟು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ.
ಒಮ್ಮೆ ಬಳಸಿದ ಪ್ಲಾಸ್ಟಿಕ್ ವಸ್ತುಗಳ ತ್ಯಾಜ್ಯವನ್ನು ಅಲ್ಲಲ್ಲಿ ಎಸೆಯುವುದರಿಂದ ಊರಿನಲ್ಲಿ ಕಸವು ಹೆಚ್ಚಾಗಿ ನೀರಿನ ಅಂದ ಕೆಡುತ್ತದೆ.

ಪ್ಲಾಸ್ಟಿಕ್ ಬಳಕೆಯನ್ನು ಮಿತಗೊಳಿಸಲು ನಾವು ಕೈಗೊಳ್ಳುಬಹುದಾದ ರ‍್ಯಾಯ ವ್ಯವಸ್ಥೆಗಳು ಈ ರೀತಿಯಗಿವೆ.

1. ತರಕಾರಿ ಅಥವಾ ಅಗತ್ಯ ವಸ್ತುಗಳನ್ನು ತರಲು ಪೇಟೆಗೆ ಹೋಗುವಾಗ, ಬಟ್ಟೆಯ ಚೀಲ ಅಥವಾ ಕೈಚೀಲವನ್ನು ತೆಗೆದುಕೊಂಡು ಹೋಗುವುದು.
2. ಆಹಾರ ವಸ್ತುಗಳನ್ನು ಸಾಕಷ್ಟು ಸ್ಟೀಲ್ ಅಥವಾ ಗಾಜಿನ ಡಬ್ಬಗಳಲ್ಲಿ ಇಡುವುದು.
3. ಕುಡಿಯುವ ನೀರಿಗೆ ಸ್ಟೀಲ್ ಪಾತ್ರೆ ಅಥವಾ ಮರುಬಳಕೆಗೆ ರ‍್ಹವಾದ ದಪ್ಪನೆಯ ಪ್ಲಾಸ್ಟಿಕ್ ಬಾಟಲುಗಳನ್ನು ಬಳಸುವುದು.
4. ತಂಪು ಪಾನೀಯ ಅಥವಾ ಎಳನೀರನ್ನು ಕುಟಿಯುವಾಗ ಪ್ಲಾಸ್ಟಿಕ್ ಸ್ಟ್ರಾಗಳನ್ನು ಬಳಸದೆ ಇರುವುದು.
ಹೀಗೆ ನಾವು ಪ್ಲಾಸ್ಟಿಕ್ ಬಳಕೆಯನ್ನು ಮಿತಗೊಳಸಿಬಹುದು.

42. 9ನೇ ತರಗತಿಯ ‘ಪಾರಿವಾಳಪದ್ಯದ ಸಾರಾಂಶವನ್ನು ಕಥೆಯ ರೂಪದಲ್ಲಿ ಬರೆಯಿರಿ.

ಅಥವಾ
ಯೋಧ ಮತ್ತು ಹೆಂಗಸು ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
ಉ: ಯೋಧ ಮತ್ತು ಹೆಂಗಸು ಪದ್ಯವನ್ನು ನಾನು ನಾಟಕ ರೂಪದಲ್ಲಿ ರಚಿಸಿದ್ದೇನೆ.
ಯೋಧ: ತುಸು ನೀರು ಹಣಿಸುವಿರಾ?
ಹೆಂಗಸು : ಒಳಗೆ ಬಂದು ವಿಶ್ರಮಿಸಿಕೊಳ್ಳಿ.
ಯೋಧ : ಇರಲಿ ಬಿಡಿ, ಮರದ ನೆರಳಿನಲ್ಲಿ ಕುಳಿತುಕೊಳ್ಳುವೆ.
ಹೆಂಗಸು : ಬಟ್ಟಲಿನ ತುಂಬ ಜೇನಿದೆ, ಚೊಂಬಿನಲ್ಲಿ ನೀರಿದೆ, ತೆಗೆದುಕೊಂಡು ವಿಶ್ರಮಿಸಿ. ತುಂಬ ಸೆಕೆ ಇದೆ. ಈ ಬೀಸಣಿಕೆ ತೆಗೆದುಕೊಂಡು ಗಾಳಿ ಬೀಸಿಕೊಳ್ಳಿ.
(ಅಷ್ಟರಲ್ಲಿಯೇ ತಂಗಾಳಿ ಬೀಸುತ್ತಿತ್ತು, ದೂರದಲ್ಲಿ ಹಾಡು ಕೇಳುತ್ತಿತ್ತು)
ಯೋಧ: ಇದಕೆ ಜೋಳದ ಪಾಳಿಯಿಲ್ಲ ನೋಡು
(ಜೇನನ್ನು ಸವಿದು, ನೀರನ್ನು ಕುಡಿದನು, ನೆರಳಿನಲ್ಲಿ ಸ್ವಲ್ಪಕಾಲ ವಿಶ್ರಮಿಸಿದನು)
ಯೋಧ : ಹೋಗಿ ಬರುವೇನು ತಾಯಿ.
ಹೆಂಗಸು : ಆಯ್ತು ಹೋಗಿ ಬನ್ನಿ, ಮತ್ತೆ ಬಂದಾಗ ಖಂಡಿತ ಇಲ್ಲಿಗೆ ಬರಬೇಕು. ನಿಮಗೆ ದಾರಿಯಲ್ಲಿ ಶುಭವಾಗಲಿ. ಬಿರಿದು ಮಲ್ಲಿಗೆ ದಾರಿಯಲ್ಲಿ ಚೆಲ್ಲಿ ಸಂತಸ ನೀಡಲಿ, ಕೋಗಿಲೆಯ ಧ್ವನಿ ಕೇಳಿ ಆನಂದ ಉಂಟಾಗಲಿ. ನಿಮ್ಮ ಹೆಸರನ್ನು ಕೇಳಲು ಮರೆತು ಬಿಟ್ಟೆ.
ಯೋಧ: ತಾಯಿ, ನಿನ್ನ ಉಪಚಾರ ಕಂಡು ನನ್ನ ಊರು ಬನವಾಸಿ ಮತ್ತೆ ನೆನಪಿಗೆ ಬಂದಿತು. ಯೋಧ ನಡೆದ ದಾರಿಯೇ ಕವಿ ನಡೆದ ದಾರಿಯೂ ಇರುತ್ತದೆ. ನನ್ನನ್ನು ‘ಪಂಪಎಂದು ಕರೆಯುತ್ತಾರೆ.

XIII.ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು, ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.  4=(2+2)

ಮಳೆ ರಾಜನು ಸುರಿಸುವ ಮಳೆ ನೀರಿನಿಂದಲೇ ರೈತ ಆಹಾರಧಾನ್ಯಗಳನ್ನು ಬೆಳೆಯುತ್ತಾನೆ. ಲತೆಗಳು ಹೂವುಗಳನ್ನು ಕೊಡುತ್ತವೆ. ಗಿಡಮರಗಳು ಹಣ್ಣುಹಂಪಲುಗಳನ್ನು ಕೊಡುವವು. ಹೊಳೆ ಕೆರೆಗಳು ನೀರು ಕೊಡುವುದು ಮಳೆರಾಜನ ಕೃಪೆಯಿಂದಲೇ. ಸಕಲ ಜೀವಿಗಳನ್ನು ರಕ್ಷಿಸುವ ರಾಜನೆಂದರೆ ಅದು ಮಳೆರಾಯನೇ ಆಗಿರುತ್ತಾನೆ. ಹೀಗೆ ಅನ್ನ ನೀರು ನೀಡುವ ಮಳೆರಾಯ ನಮ್ಮ ಪ್ರಕೃತಿಗೆ ವರವಾಗಿದ್ದಾನೆ. ನಮ್ಮ ಶಾರೀರಿಕ ಆರೋಗ್ಯ ಚೆನ್ನಾಗಿರಲು ಒಳ್ಳೆಯ ಶುಚಿಯಾದ ಆಹಾರ ಹಾಗೂ ಸ್ವಚ್ಛ ನೀರು ಬೇಕು. ಅನುಭವಿಗಳು ಇದನ್ನೆ “ಕೂಳು ಕುತ್ತು; ನೀರು ಪಿತ್ತುಅಂದಿದ್ದಾರೆ. ಅಂದರೆ ಅಶುದ್ಧವಾದ ಆಹಾರ ಹಾಗೂ ಹೊಲಸು ನೀರು ನಮ್ಮ ಶರೀರವನ್ನು ರೋಗಮಯ ಮಾಡುತ್ತವೆ. ಸತ್ವಯುತ ಬಿಸಿಬಿಸಿಯಾದ, ಹಿತಮಿತವಾದ ಆಹಾರ ಹಾಗೂ ಪರಿಶುದ್ಧವಾದ ನೀರು ಆರೋಗ್ಯಪರ‍್ಣ ಬೆಳವಣಿಗೆಯ ಮುಖ್ಯವಸ್ತುಗಳಾಗಿವೆ.

ಪ್ರಶ್ನೆಗಳು :

43. ಅ) ಮಾನವನ ಶರೀರವನ್ನು ಆರೋಗ್ಯಪರ‍್ಣವಾಗಿಸಲು ಅವಶ್ಯವಾದ ವಸ್ತುಗಳಾವುವು?
ಉ: ಮಾನವನ ಶಾರೀರಿಕ ಆರೋಗ್ಯ ಚೆನ್ನಾಗಿರಲು ಒಳ್ಳೆಯ ಶುಚಿಯಾದ ಆಹಾರ ಹಾಗೂ ಸ್ವಚ್ಛ ನೀರು ಬೇಕು. ಅನುಭವಿಗಳು ಇದನ್ನೆ “ಕೂಳು ಕುತ್ತು; ನೀರು ಪಿತ್ತುಅಂದಿದ್ದಾರೆ. ಅಂದರೆ ಅಶುದ್ಧವಾದ ಆಹಾರ ಹಾಗೂ ಹೊಲಸು ನೀರು ನಮ್ಮ ಶರೀರವನ್ನು ರೋಗಮಯ ಮಾಡುತ್ತವೆ. ಸತ್ವಯುತ ಬಿಸಿಬಿಸಿಯಾದ, ಹಿತಮಿತವಾದ ಆಹಾರ ಹಾಗೂ ಪರಿಶುದ್ಧವಾದ ನೀರು ಆರೋಗ್ಯಪರ‍್ಣ ಬೆಳವಣಿಗೆಯ ಮುಖ್ಯವಸ್ತುಗಳಾಗಿವೆ.

ಆ) ‘ಮಳೆರಾಯ ನಮ್ಮ ಪ್ರಕೃತಿಗೆ ವರವಾಗಿದ್ದಾನೆಹೇಗೆ ?

ಉ: ಮಳೆ ರಾಜನು ಸುರಿಸುವ ಮಳೆ ನೀರಿನಿಂದಲೇ ರೈತ ಆಹಾರಧಾನ್ಯಗಳನ್ನು ಬೆಳೆಯುತ್ತಾನೆ. ಲತೆಗಳು ಹೂವುಗಳನ್ನು ಕೊಡುತ್ತವೆ. ಗಿಡಮರಗಳು ಹಣ್ಣುಹಂಪಲುಗಳನ್ನು ಕೊಡುವವು. ಹೊಳೆ ಕೆರೆಗಳು ನೀರು ಕೊಡುವುದು ಮಳೆರಾಜನ ಕೃಪೆಯಿಂದಲೇ. ಸಕಲ ಜೀವಿಗಳನ್ನು ರಕ್ಷಿಸುವ ರಾಜನೆಂದರೆ ಅದು ಮಳೆರಾಯನೇ ಆಗಿರುತ್ತಾನೆ. ಹೀಗೆ ಅನ್ನ ನೀರು ನೀಡುವ ಮಳೆರಾಯ ನಮ್ಮ ಪ್ರಕೃತಿಗೆ ವರವಾಗಿದ್ದಾನೆ.

XIV. ಈ ಕೆಳಗಿನ ಯಾವುದಾದರೂ ಒಂದಕ್ಕೆ ಕೊಟ್ಟಿರುವ ಮಾಹಿತಿಯನ್ನಾಧರಿಸಿ ಪತ್ರ ಬರೆಯಿರಿ. 1X5=5

44. ನಿಮ್ಮನ್ನು ಕೊಡಗು ರ‍್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಸಾಕ್ಷಿತಾ/ಸುರೇಶ ಎಂದು ಭಾವಿಸಿಕೊಂಡು ನಿಮ್ಮ ಶಾಲೆಯಲ್ಲಿ ನಡೆಯುವ ಚಿತ್ರಕಲೆ ಸ್ರ‍್ಧೆಯನ್ನು ಕುರಿತು ಮೈಸೂರಿನಲ್ಲಿರುವ ನಿಮ್ಮ ಸ್ನೇಹಿತ/ಸ್ನೇಹಿತೆಗೊಂದು ಪತ್ರ ಬರೆಯಿರಿ.

ಅಥವಾ
ನಿಮ್ಮನ್ನು ಬೀದರ ನ ರ‍್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಕಿರಣ/ಕವಿತಾ ಎಂದು ಭಾವಿಸಿಕೊಂಡು ನಿಮ್ಮ ಶಾಲೆಯಲ್ಲಿ ನಡೆಯುವ ಗಿಡನೆಡುವ ಕರ‍್ಯಕ್ರಮಕ್ಕೆ ಆಹ್ವಾನಿಸಿ ನಿಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೊಂದು ಪತ್ರ ಬರೆಯಿರಿ.
ನಿಮ್ಮನ್ನು ಕೊಡಗು ರ‍್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಸಾಕ್ಷಿತಾ/ಸುರೇಶ ಎಂದು ಭಾವಿಸಿಕೊಂಡು ನಿಮ್ಮ ಶಾಲೆಯಲ್ಲಿ ನಡೆಯುವ ಚಿತ್ರಕಲೆ ಸ್ರ‍್ಧೆಯನ್ನು ಕುರಿತು ಮೈಸೂರಿನಲ್ಲಿರುವ ನಿಮ್ಮ ಸ್ನೇಹಿತ/ಸ್ನೇಹಿತೆಗೊಂದು ಪತ್ರ ಬರೆಯಿರಿ. 
ಇಂದ,
ಸುರೇಶ 9ನೇ ತರಗತಿ
ಸರ್ಕಾರಿ ಪ್ರೌಢ ಶಾಲೆ ಕೊಡಗು

ಕ್ರೇಮ                                        ಶ್ರೀ                                             ದಿನಾಂಕ : 07-10-2022

                                                                                                      ಸ್ಥಳ : ಕೊಡಗು

             ಆತ್ನಿಯ ಸ್ನೇಹಿತನಾದ ರಮೇಶನಿಗ,

            ನಿನ್ನ ಪ್ರೀತಿಯ ಸ್ನೇಹಿತನಾದ ಸುರೇಶನ ನಮಸ್ಕಾರಗಳು. ನಾವು ಮನೆಯಲ್ಲಿ ಇಲ್ಲಿ ಎಲ್ಲರೂ ಕ್ಷೇಮವಾಗಿದ್ದೇವೆ. ನಿಮ್ಮ ಕ್ಷೇಮ ಸಮಾಚರಕ್ಕಾಗಿ ಒಂದು ಪತ್ರ ಬರೆಯುವುದು. ನಮ್ಮ ಶಾಲೆಯಲ್ಲಿ ಚಿತ್ರಕಲಾ ಸ್ರ‍್ದೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ರ‍್ದೆಯಲ್ಲಿ ಸುತ್ತ ಮುತ್ತಲಿನ ವಿವಿಧ ತಾಲ್ಲುಕಿನ ಎಲ್ಲಾ ಶಾಲೆಗಳ ವಿದ್ಯರ‍್ಥಿಗಳು ಸಹ ಭಾಗವಹಿಸುತ್ತಿದ್ದಾರೆ. ಮತ್ತು ಈ ಕರ‍್ಯಕ್ರಮವನ್ನು ಉದ್ಘಾಟಿಸಲು ನಮ್ಮ ಜಿಲ್ಲೆಯ ಖ್ಯಾತ ಚಿತ್ರಕಲಾವಿದರಾಜ ಗುರುರಾಜ ಅವರು ಬರುತ್ತಿದ್ದಾರೆ. ನಾನು ಸಹ ಈ ಚಿತ್ರಕಲಾ ಸ್ರ‍್ದೆಯಲ್ಲಿ ಭಾಗವಹಿಸುತ್ತಾ ಇದ್ದೇನೆ.
            ಈ ಕರ‍್ಯಕ್ರಮ ನಮ್ಮ ಜಿಲ್ಲೆಗೆ ಒಂದು ಹೆಮ್ಮೆಯ ಕರ‍್ಯಕ್ರಮವಾಗಿ ಪರಿಣಮಿಸಲಿದೆ. ಹಾಗಾಗಿ ನೀನು ಸಹ ಈ ಕರ‍್ಯಕ್ರಮದಲ್ಲಿ ಭಾಗಿಯಾಗಬೇಕು ಎನ್ನುವುದು ನನ್ನ ಆಸೆಯಾಗಿದೆ. ಆದ್ದರಿಂದ ನೀನು ಸಹ ಈ ಕರ‍್ಯಕ್ರಮಕ್ಕೆ ಬರಲು ಕೋರುತ್ತೇನೆ. ಕರ‍್ಯಕ್ರಮದ ದಿನಾಂಕ ಮತ್ತು ಆಹ್ವಾನ ಪತ್ರಿಕೆಯನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳುಹಿಸುತ್ತಿದ್ದೇನೆ. ಆದ್ದರಿಂದ ತಪ್ಪದೆ ಆಗಮಿಸಲು ಮತ್ತೋಮ್ಮೆ ಕೋರುತ್ತೇನೆ.

                ವಂದನೆಗಳೊಂದಿಗೆ

ಹೊರ ವಿಳಾಸ:                                                                                       ನಿಮ್ಮ ನಿನ್ನ ಸ್ನೇಹಿತ
ಇವರಿಗೆ,                                                                                                           ಸುರೇಶ
ರಮೇಶ, ಮನೆ ನಂ.123
ಅರಮನೆ ರಸ್ತೆ ಮೈಸೂರು.

XV. ಈ ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಕುರಿತು ಹದಿನೈದು ವಾಕ್ಯಗಳಿಗೆ ಕಡಿಮೆಯಿಲ್ಲದಂತೆ ಪ್ರಬಂಧ ಬರೆಯಿರಿ. 1X5=5

45. ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು
ಅಥವಾ
ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ
ಉ: ಸಮಾಜದಲ್ಲಿ ಸ್ತ್ರೀ ಮತ್ತು ಪುರಷರು ಸಮಾನರು, ಇಬ್ಬರಿಗೂ ಸಹ ಸಮಾನವಾದ ಹಕ್ಕುಗಳು ಇವೆ. ಆದರೆ ಪುರುಷ ಮಾತ್ರ ಹೆಚ್ಚು ಸ್ತ್ರೀ ಕಡಿಮೆ ಎನ್ನುವ ಮನೊಭಾವದ ಜೋತೆಗೆ ಸ್ತ್ರೀಯ ಮೇಲೆ ಅನೇಕ ರೀತಿಯ ಶೋಷಣೆಗಳು ಆಗುತ್ತಿರುವುದು ಕಂಡು ಬರುತ್ತದೆ.
ಸಮಾನ ವೇತನ ಕೊಡದೆ ಇರುವುದು, ಒತ್ತಾಯದ ದುಡಿಮೆ, ಕೂಲಿ ರಹಿತ ದುಡಿಮೆ ಮುಂತಾದ ಶೋಷಣೆಗಳ ಜೋತೆಗೆ ಮಹಿಳೆಗೆ ಮನೆಯಲ್ಲಿಯೂ ಸಹ ವರದಕ್ಷಿಣೆಯಂತಹ ಶೋಷಣೆಗಳು ನಡೆಯುತ್ತಿವೆ.
ವರದಕ್ಷಿಣೆಯು ಒಂದು ಸಾಮಾಜಿಕ ಪಿಡುಗಾಗಿದ್ದು, ಇದು ಮಹಿಳೆಯ ಮೇಲೆ ಮಾನಸಿಕ ಮತ್ತು ದೈಹಿಕ ಹಲ್ಲೆಗೆ ಕಾರಣಿಭೂತವಾಗಿದೆ.
ಮದುವೆಯ ಸಂರ‍್ಭದಲ್ಲಿ ಅಥವಾ ಮದುವೆಯ ನಂತರ ಮದುಮಗ ಅಥವಾ ಆತನ ಮನೆಯವರು ಹಣ, ಬೆಳ್ಳಿ, ಬಂಗಾರ, ಇನ್ನಿತರ ರೂಪಗಳಲ್ಲಿ ಬೇಡಿಕಯನ್ನಿಟ್ಟು ಪಡೆಯುವುದು ವರದಕ್ಷಿಣೆಯಾಗಿದೆ.
ವರದಕ್ಷಿಣೆ ಪಡೆಯುವುದು ಕಾನೂನು ಪ್ರಕಾರ ಅಪರಾಧವಾಗಿದೆ ಆದ್ದಾಗ್ಯೂ ಸಹ ಇದು ಸಂಪರ‍್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ.
ಇದು ಸ್ತ್ರೀಯರ ಶೋಷಣೆಗೆ ಕಾರಣಿಕೃತವಾಗುವುದರಿಂದ ಇದು ಒಂದು ಸಾಮಾಜಿಕ ಪಿಡುಗಾಗಿದೆ. ಇದನ್ನು ಎಲ್ಲರೂ ಸೇರಿ ನಿಯಂತ್ರಿಸಬೇಕು.
*****

Comments

Post a Comment

If any doubt Comment me

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon