9th Class First Language Kannada FA 3 Question Paper | Kannada FA3 Question paper |

9th Class First Language Kannada FA 3 Question Paper | Kannada FA3 Question paper |

ರೂಪಣಾತ್ಮಕ ಮೌಲ್ಯಮಾಪನ - 3

ತರಗತಿ : 9ನೇ ತರಗತಿ                            ಸಾಧನಾ ಪರೀಕ್ಷೆ - 3                    ವಿಷಯ: ಪ್ರಥಮ ಭಾಷೆ ಕನ್ನಡ
ಅಂಕಗಳು : 20                                         2022-23                                  ಸಮಯ : 45 ನಿಮಿಷ
----------------------------------------------------------------------------------------------------------------------

I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ  2x1=2

1. ಕೂರಿಗೆ ಈ ಪದದ ಅರ್ಥ______

a) ಕೋಲು

b) ಎತ್ತಿನ ಗಾಡಿ

c) ಬೀಜ ಬಿತ್ತುವ ಸಾಧನ

d) ತಂತಿ ವಾದ್ಯ 

2. ಮಕ್ಕಳ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ?

a) ಜೂನ್ 5

b) ಜುಲೈ 1

c) ನವೆಂಬರ್ 14

d) ಅಕ್ಷೋಬರ್ 2

II. ಕೆಳಗಿನವುಗಳಲ್ಲಿ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿ ಹೊಂದುವ ಸಂಬಂಧೀ ಪದವನ್ನು ಬರೆಯಿರಿ.  2x1=2

3. ದಿವಿನಾಗು : ಮೈತುಂಬಿಕೊಳ್ಳು :: ಚಕ್ಕಡಿ :

4. ಕಟುಕನೊಡನೆ ಗಾಂಧೀಜಿ ಮುಖಾಮುಖಿ : ಘಟನೆಗಳಲ್ಲಿ ಗಾಂಧೀಜಿ :: ಕಾಗೆಯ ಸೇಡು :

III. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ :  3x1=3

5. ಸಿಂಹದ ನರಳಾಟಕ್ಕೆ ಕಾರಣವೇನು?

6. ಬಿದಿರಿನ ಉಪಯೋಗವೇನು?

7. ‘ಕನ್ನಡ ಮೌಲ್ವಿ’ ಪಾಠದಲ್ಲಿ ನಿಮಗೆ ಇಷ್ಟವಾದ ಪಾತ್ರ ಅಥವಾ ಸನ್ನಿವೇಶವೊಂದನ್ನು ಬರೆಯಿರಿ

IV. ಈ ಕೆಳಗಿನ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ:  2x2=4

8. ಹುಣಸೆ ಮರವನ್ನು ಕುರಿತು ಟಿಪ್ಪಣಿ ಬರೆಯಿರಿ

ಅಥವಾ ಬಿದಿರು ನೀನಾರಿಗಲ್ಲವಾದೆ? ಲೇಖನದ ಆಶಯವನ್ನು ಟಿಪ್ಪಣಿ ಮಾಡಿ ಬರೆಯಿರಿ.

9. ಕುವೆಂಪು ಅವರ ವಿದ್ಯಾರ್ಥಿ ಜೀವನದ ಸಾಮಾನ್ಯ ದಿನಚರಿ ಹೇಗಿತ್ತು ಎಂಬುದನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.

V. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಐದರಿಂದ ಆರು ವಾಕ್ಯಗಳಲ್ಲಿ ಉತ್ತಿಸಿರಿ:  2x3=6

10. ಕನ್ನಡ ಮೌಲ್ವಿ’ ಪಾಠದಲ್ಲಿ ನಿಮಗೆ ಇಷ್ಟವಾದ ಪಾತ್ರ ಅಥವಾ ಸನ್ನಿವೇಶವೊಂದಕ್ಕೆ ಟಿಪ್ಪಣಿ ಬರೆಯಿರಿ.

11. ನಿಮ್ಮ ಓದಿನ ಹವ್ಯಾಸವನ್ನು ಹೇಗೆ ರೂಢೀಸಿಕೊಂಡಿದ್ದಿರಿ? ಎಂಬುದನ್ನು ಬರೆಯಿರಿ.

ಅಥವಾ : ಬೀಚಿಯವರು ತಾವು ಓದಿದ ಪುಸ್ತಕವನ್ನು ಹೇಗೆ ವಿವರಿಸಿದ್ದಾರೆ? ತಿಳಿಸಿ.

VI. ಈ ಕೆಳಗಿನ ಯಾವುದಾದರೂ ಒಂದನ್ನು ಕುರಿತು ಬರೆಯಿರಿ  1x3=3

12. ನಿಮ್ಮ ಊರಿನ ಗಣೇಶೋತ್ಸವವು ಸುಗಮವಾಗಿ ನೆರವೇರಲು ಗ್ರಾಮ ಪಂಚಾಯ್ತಿಯವರು ಪ್ರಕಟಣೆಯೊಂದನ್ನು ಹೊರಡಿಸಬೇಕೆಂದುಕೊಂಡಿದ್ದಾರೆ, ಅವರಿಗೊಂದು ಪ್ರಕಟಣಾ ಪತ್ರವೊಂದನ್ನು ಸಿದ್ದಪಡಿಸಿ.

ಅಥವಾ

ಕೆಳಗಿನ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ಚಿತ್ರದಲ್ಲಿನ ವ್ಯಕ್ತಿಗಳಿಗೆ ಹೆಸರುಗಳನ್ನು ನೀಡಿ, ಅಲ್ಲಿನ ಪಾತ್ರಗಳ ಸಂಭಾಷಣೆಯನ್ನು ಕಲ್ಪಿಸಿಕೊಂಡು ನಾಟಕವೊಂದನ್ನು ಸಿದ್ದಪಡಿಸಿ. (ಪಾತ್ರಗಳ ಸಂಭಾಷಣೆ ಬರೆಯಿರಿ)


Click Here PDF Download

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon