9th Kannada SA 2 Question Paper 2023 | 9th Kannada Kalika Chetarike SA 2 Paper

9th Kannada SA 2 Question Paper 2023 | 9th Kannada Kalika Chetarike SA 2 Paper
ಪ್ರಥಮ ಭಾಷೆ ಕನ್ನಡ
ಸಂಕಲನಾತ್ಮಕ ಮೌಲ್ಯಮಾಪನ-2 ಪ್ರಶ್ನೆ ಪತ್ರಿಕೆ
ವಿಷಯ: ಪ್ರಥಮ ಭಾಷೆ ಕನ್ನಡ                                                                               ಗರಿಷ್ಠ ಅಂಕಗಳು : 100
ತರಗತಿ: 9ನೇ ತರಗತಿ                                                                              ಸಮಯ : 3 ಗಂಟೆ 15 ನಿಮಿಷ

ಸಾಮಾನ್ಯ ಸೂಚನೆಗಳು :

·   ಈ ಪ್ರಶ್ನೆ ಪತ್ರಿಕೆಯು ವಸ್ತುನಿಷ್ಠ ಮತ್ತು ವಿಷಯನಿಷ್ಠ ಮಾದರಿಯ ಒಟ್ಟು 45 ಪ್ರಶ್ನೆಗಳನ್ನು ಹೊಂದಿದೆ.
·   ಬಲ ಭಾಗದಲ್ಲಿ ಕೊಟ್ಟಿರುವ ಅಂಕಿಗಳು ಪ್ರಶ್ನೆಗಳಿಗಿರುವ ಪೂರ್ಣ ಅಂಕಗಳನ್ನು ತೋರಿಸುತ್ತವೆ.
·   ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷಗಳ ಕಾಲಾವಕಾಶವು ಸೇರಿದಂತೆ, ಉತ್ತರಿಸಲು ನಿಗದಿಪಡಿಸಲಾದ ಸಮಯವನ್ನು ಪ್ರಶ್ನೆ ಪತ್ರಿಕೆಯ ಮೇಲ್ಭಾಗದಲ್ಲಿ ನೀಡಲಾಗಿದೆ.

I. ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ:                                                                                            6X1=6

1. ಅಂಬಿಗ ಪದದ ಅರ್ಥ ……………..
(ಎ) ದೋಣಿಯನ್ನು ಸಿದ್ದಪಡಿಸುವವ                    (ಬಿ) ದೋಣಿಯಲ್ಲಿ ಸವಾರಿ ಮಾಡುವವ
(ಸಿ) ದೋಣಿ ನಡೆಸುವವ                                (ಡಿ) ಎತ್ತಿನ ಗಾಡಿ

2. ಯಾರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ.

(ಎ) ಸರ್ದಾರ್ ವಲಭಾಯಿ ಪಟೇಲ್.                   (ಬಿ) ಡಾ.ಬಾಬು ರಾಜೇಂದ್ರ ಪ್ರಸಾದ
(ಸಿ) ಡಾ.ಬಿ.ಆರ್.ಅಂಬೇಡ್ಕರ್                          (ಡಿ) ಪಂಡಿತ್ ಜವಾಹರಲಾಲ್ ನೆಹರು

3. “ನೆನಪಿನ ದೋಣಿಯಲ್ಲಿ”.ಇದು ಯಾರ ಆತ್ಮಚರಿತ್ರೆ

(ಎ) ದ.ರಾ.ಬೇಂದ್ರೆ                                     (ಬಿ) ಮಾಸ್ತಿವೆಂಕಟೇಷ್ ಅಯ್ಯಂಗಾರ್.
(ಸಿ) ಕುವೆಂಪು                                           (ಡಿ) ಡಿ.ವಿ.ಜಿ.

4. “ಕೆಲವು ಕೆಟ್ಟ ಹುಡುಗರು ಕಲ್ಲು ಹೊಡೆದು ನಮಗೆ ತೊಂದರೆ ಕೊಡುತ್ತಾರೆ ಅದೇ ಹೆದರಿಕೆ ನನಗೆ” ಎಂದು ಯಾರು ಹೇಳಿದರು?

(ಎ) ನಾಯಿ.                                             (ಬಿ) ಬೆಕ್ಕು.
(ಸಿ) ಕಪ್ಪೆ.                                               (ಡಿ) ಕಿಟ್ಟ

5. ಒಬ್ಬ ವ್ಯಾಪಾರಿಯ ಹತ್ತಿರ ಒಂದು ದೊಡ್ಡ ಆನೆಯಿತ್ತು ಅದರ ಹೆಸರು______

(ಎ) ಐರಾವತ                                           (ಬಿ) ಅಂಬಾರಿ
(ಸಿ) ಗಿರಿ                                                 (ಡಿ) ಮಹಾಗಿರಿ

6. ‘ಮಾನ್ಯರೆ,’ ಎನ್ನುವುದು ಯಾವ ಪತ್ರದಲ್ಲಿ ಬರೆಯಲಾಗುತ್ತದೆ.

(ಎ) ವೈಯಕ್ತಿಕ ಪತ್ರ                                    (ಬಿ) ವ್ಯವಹಾರಿಕ ಪತ್ರ
(ಸಿ) ಖಾಸಗಿ ಪತ್ರ                                       (ಡಿ) ಸಾಮಾನ್ಯವಾಗಿ ಎಲ್ಲಾ ಪತ್ರಗಳಲ್ಲಿ.

II. ಕೆಳಗಿನವುಗಳಲ್ಲಿ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿ ಹೊಂದುವ ಸಂಬಂಧೀ ಪದವನ್ನು ಬರೆಯಿರಿ.                                                                                                          4x1=4

7. ಏಕದಂಡಿಗೆ : ತಂತೀ ವಾದ್ಯ :: ಚಕ್ಕಡಿ :
8. ಚಿಲುಮೆ : ನೀರಿನ ಬುಗ್ಗೆ :: ಒಲಮೆ :
9. ಭೋರ್ಗರೆ : ಅಬ್ಬರಿಸು :: ಇಳೆ :
10. ಬಾಲ ಹಾಕಿ : ತಿರುವಿತು :: ತಾನು ಅಳುತ :

III. ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ:                                            7X1=7

11. ಬಿದಿರಿನ ಎರಡು ಉಪಯೋಗಗಳನ್ನು ತಿಳಿಸಿ
12. ನಿಮ್ಮ ಊರಿನಲ್ಲಿ ನಡೆದ ಜಾತ್ರೆಯ ವೈವವವನ್ನು ದಿನ ಪತ್ರಿಕೆಯಲ್ಲಿ ಪ್ರಕಟಿಸುವುದಕ್ಕಾಗಿ ವರದಿಯನ್ನು ಕಳುಹಿಸಬೇಕಾಗಿದೆ. ‘ಗೆ’ ವಿಳಾಸದಲ್ಲಿ ಯಾವ ರೀತಿಯಲ್ಲಿ ಬರೆಯಬೇಕು?
13. ಮಾಹಾತ್ಮ ಗಾಂಧೀಜಿಯವರ ಆತ್ಮ ಕಥೆಯ ಹೆಸರೇನು?.
14. “ರೈತರು ದೇಶದ ಬೆನ್ನೆಲುಬು” ಎನ್ನುತ್ತಾರೆ ಕಾರಣವೇನು?
15. ಕಪ್ಪೆಗಳಿಂದ ಏನು ಉಪಯೋಗವಿದೆ?
16. ಅಜ್ಜನ/ಹೋಗುತ್ತೇನೆ/ಜೊತೆಗೆ/ನಾವು – ಇದನ್ನು ಅರ್ಥಪೂರ್ಣ ವಾಕ್ಯವನ್ನಾಗಿ ಬರೆಯಿರಿ
17. ನಿಮ್ಮ ಅಥವಾ ನಿಮ್ಮ ಸ್ನೇಹಿತನ ಅಥವಾ ನಿಮ್ಮ ತಂದೆಯವರ ‘ಇ-ಮೇಲ್’ ವಿಳಾಸ ಬರೆಯಿರಿ.

IV. ಕೆಳಗಿನ ಪ್ರಶ್ನೆಗಳಿಗೆ ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ:                      10X2=20

18. ನಿಮ್ಮ ಊರಿನಲ್ಲಿ ಅಥವಾ ನಿಮ್ಮ ಮನೆಯಲ್ಲಿ ಬಿದಿರನ್ನು ಯಾವ ಯಾವ ಕೆಲಸಗಳಿಗೆ ಬಳಸುತ್ತಾರೆ?
19. ಸಿಂಹದ ನರಳಾಟಕ್ಕೆ ಕಾರಣವೇನು? ಹಾಗೂ ಆ ನರಳಾಟ ಪರಿಹಾರವಾದದ್ದು ಹೇಗೆ?.
20. ನಿಮ್ಮ ಓದಿನ ಹವ್ಯಾಸವನ್ನು ಹೇಗೆ ರೂಢಿಸಿಕೊಂಡಿದ್ದೀರಿ? ಎಂಬುದನ್ನು ಬರೆಯಿರಿ.
21. ಕುವೆಂಪು ಅವರ ವಿದ್ಯಾರ್ಥಿ ಜೀವನದ ಸಾಮಾನ್ಯ ದಿನಚರಿ ಹೇಗಿತ್ತು ಎಂಬುದನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
22. ಜಲಕ್ಷಾಮಕ್ಕೆ ಹೊಣೆಗಾರರು ಯಾರು? ಏಕೆ? ಎಂಬುದನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
23. ಕಪ್ಪೆಗಳ ಸಂತತಿಯ ಮೇಲೆ ಪರಿಣಾಮ ಬೀರುವ ಮನುಷ್ಯನ ವರ್ತನೆಗಳು ಯಾವುವು?
24. ಮಾನವನಲ್ಲಿನ ಯಾವ ಗುಣಗಳು ಬದಲಾಗಬೇಕೆಂದು ಕವಿ ತನ್ನ “ದೇವರು ಹಚ್ಚಿದ ದೀಪ” ಕವನದಲ್ಲಿ ವ್ಯಕ್ತಪಡಿಸಿದ್ದಾರೆ?
25. ರೈತನನ್ನು ‘ಅನ್ನದಾತ’ ಎಂದು ಕವಿ ಹೇಳಿದ್ದಾರೆ, ಇದನ್ನು ನೀವು ಹೇಗೆ ಸಮರ್ಥಿಸಿಕೊಳ್ಳುವಿರಿ.
26. ನಿಮ್ಮ ಶಾಲೆಯ ಬಗ್ಗೆ ಒಂದು ಚಿಕ್ಕ ಪದ್ಯವನ್ನು ರಚಿಸಿ
27. ಬಯಲು ಸೀಮೆಯ ವರ್ಣನೆಯನ್ನು ಬರೆಯಿರಿ.

V. ಈ ಸಾಹಿತಿ/ಕವಿಗಳ ಸ್ಥಳ, ಕಾಲ, ಕೃತಿ, ಪ್ರಶಸ್ತಿ/ಬಿರುದುಗಳನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ                                                                                                                                                      2X3=6

28. ಡಿ.ವಿ.ಜಿ.
29. ಕುವೆಂಪು

VI. ಕೊಟ್ಟಿರುವ ಎರಡು ಚಿತ್ರಗಳನ್ನು ಹೋಲಿಸಿ ವ್ಯತ್ಯಾಸವನ್ನು ಪಟ್ಟಿ ಮಾಡಿ ಮತ್ತು ಈ ರೀತಿ ವ್ಯತ್ಯಾಸವಾಗಲು ಕಾರಣಗಳೇನು? ಎಂಬುದನ್ನು ಬರೆಯಿರಿ.                                                                  1X3=3

30.


VII. 31. ನೀವು ನೋಡಿದ ಜಾತ್ರೆಯ ಸೊಬಗನ್ನು ಕುರಿತು ನಿಮ್ಮ ಸಹೋದರ/ಸಹೋದರಿಗೆ ಒಂದು ವೈಯಕ್ತಿಕ ಪತ್ರ ಬರೆಯಿರಿ                                                                                                                        1X3=3

VIII. ಕೆಳಗಿನ ಗಾದೆಗಳಲ್ಲಿ ಒಂದನ್ನು ಬರೆಯಿರಿ:                                                                       1X3=3
32. ಕೈ ಕೆಸರಾದರೆ ಬಾಯಿ ಮೊಸರು
ಅಥವಾ
ಆಳಾಗಿ ದುಡಿ ಅರಸನಾಗಿ ಉಣ್ಣು

IX. ಈ ಕೆಳಗಿನ ಹೇಳಿಕೆಗಳನ್ನು ಸ್ವಾರಸ್ಯದೊಂದಿಗೆ ಅರ್ಥೈಸಿ ಬರೆಯಿರಿ                                        6X3=18

33. ‘ಅಧಿಕಾರ ಮತ್ತು ಶಕ್ತಿ ಇದ್ದಾಗ ಅಹಂಕಾರದಿಂದ ವರ್ತಿಸಬಾರದು
34. ತಿರುವು ರಸ್ತೆ ಇದೆ ಎಚ್ಚರಿಕೆಯಿಂದ ಚಲಿಸಿ
35. ‘ರೈತರೆ ದೇಶದ ಬೆನ್ನೆಲುಬು’
36. ಎಲ್ಲರೂ ಪ್ರಾಮಾಣಿಕರಾಗಿರಬೇಕು
37. ‘‘ಹಸಿರೆ ಉಸಿರು”
38. ಸ್ವಚ್ಚತೆ ಕಾಪಾಡಿ

X. ಈ ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿರಿ                                                                   1X4=4

39. ಮಾನವನೆದೆಯಲಿ __________________
__________________________________
__________________________________
_____________________ಮಧುರಾಲಾಪ

ಅಥವಾ

ನವಿಲೊಂದು ___________________________
___________________________________
___________________________________
__________________________ಕುಣಿವೆನು.

XI. ಈ ಕೆಳಗಿನ ಪ್ರಶ್ನೆಗೆ ಉತ್ತರಿಸಿ                                                                                        1X4=4

40. ನಿಮ್ಮ ಶಾಲೆಯಲ್ಲಿ ನಡೆದ ‘ಸ್ವಾತಂತ್ರ್ಯ ದಿನಾಚರಣೆ’ಯ ಬಗ್ಗೆ ದಿನಪತ್ರಿಕೆಗೆ ಕಳುಹಿಸಲು ವರದಿಯೊಂದನ್ನು ಸಿದ್ದಪಡಿಸಿ.

XII. ಈ ಕೆಳಗಿನ ಪ್ರಶ್ನೆಗಳಿಗೆ ಎಂಟು ಅಥವಾ ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.                                     2X4=8

41. ನಿಮ್ಮ ಪ್ರಕಾರ ‘ಪ್ರಾಮಾಣಿಕತೆ’ ಎಂಬುದನ್ನು ಒಂದು ಪ್ರಸಂಗದ ಮೂಲಕ ನಿರೂಪಿಸಿ
ಅಥವಾ
‘ಕಪ್ಪೆಯ ವ್ಯಥೆ’ ಎಂಬ ಕಥೆಯ ವಿಷಯ ವಸ್ತುವನ್ನು ನಿಮ್ಮದೆ ಮಾತುಗಳಲ್ಲಿ ಬರೆಯಿರಿ
42. ‘ಮಳೆ’ ಕವನದ ಆಶಯವನ್ನು ‘ದೇವರು ಹಚ್ಚಿನ ದೀಪ’ ಕವನದ ಆಶಯದೊಂದಿಗೆ ಹೋಲಿಸಿ ಬರೆಯಿರಿ.
ಅಥವಾ
ಬಡ ಜನರ ನೋವಿನ ಬಗೆಗೆ ನಿಮ್ಮದೆ ಮಾತುಗಳಲ್ಲಿ ಬರೆಯಿರಿ

XIII.ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು, ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. 4=(2+2)

ಅಯ್ಯೂ ಇನ್ನೇನು ಮಾವಿನ ಹಣ್ಣಿಗೆ ಕ್ಯಾಟರ್ ಬಿಲ್ಲಿನಿಂದ ಹೋಡೆದ ಹೋಡೆತಕ್ಕೆ ಕೆಳಗಡೆ ಬೀಳಬೇಕಾಗಿತ್ತು ಆದರೆ ಅಲ್ಲಾಡಿ ಅಲ್ಲೆ ಕುಳಿತಿದೆ ಬಿಳಲಿಲ್ಲ ಎಂದು ನೋಡುತ್ತಾ ಆಲೋಚಿಸುತಿತ್ತು ಕಾಗೆ.
ತಾನು ಏನಾದರು ಸಹಾಯ ಮಾಡಬೇಕು ಎಂದು ಬಯಸಿತು. ತಾನು ಆ ಮಾವಿನ ಹಣ್ಣಿನ ಹತ್ತಿರ ಹೋಯಿತು. ತನ್ನ ಚುಂಚಿನಿಂದ ಅದರ ಮೇಲ್ಗಡೆ ಚುಚ್ಚಿ ಚುಚ್ಚಿ ಸ್ವಲ್ಪ ಸಮಯದ ಪ್ರಯತ್ನದ ನಂತರ ಕೆಳಗಡೆ ಬೀಳಿಸಿತು. ಸೂಜು ಆ ಹಣ್ಣನ್ನು ಸಂತೋಷ ಪಟ್ಟು ತೆಗೆದುಕೊಂಡಳು.
ಅಪ್ಪು ಮತ್ತು ಸೂಜು ಕಾಗೆಗೆ ಧನ್ಯವಾದ ಹೇಳಿ ಸಂತೋಷವಾಗಿ ಮನೆಗೆ ಹೋರಟು ಹೋದರು. 

ಪ್ರಶ್ನೆಗಳು :

43. ಅ) ಕಾಗೆ ಏನನ್ನು ನೋಡಿತು?
ಆ) ಕಾಗೆ ಯಾವ ರೀತಿಯಾಗಿ ಸಹಾಯ ಮಾಡಿತು?
XIV. ಈ ಕೆಳಗಿನ ಯಾವುದಾದರೂ ಒಂದಕ್ಕೆ ಕೊಟ್ಟಿರುವ ಮಾಹಿತಿಯನ್ನಾಧರಿಸಿ ಪತ್ರ ಬರೆಯಿರಿ. 1*5=5
44. ನಿಮ್ಮನ್ನು ಮಂಡ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ನಯನಾ/ನವಿನ ಎಂದು ಭಾವಿಸಿಕೊಂಡು ನಿಮ್ಮ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಕುರಿತು ಮೈಸೂರಿನಲ್ಲಿರುವ ನಿಮ್ಮ ಸ್ನೇಹಿತ/ ಸ್ನೇಹಿತೆಗೊಂದು ಪತ್ರ ಬರೆಯಿರಿ.
ಅಥವಾ
ನಿಮ್ಮನ್ನು ಬೆಳಗಾವಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಅನಿಲ/ಅನಿತಾ ಎಂದು ಭಾವಿಸಿಕೊಂಡು ನಿಮ್ಮ ಶಾಲೆಯ ಮುಂಭಾಗದ ರಸ್ತೆಯನ್ನು ಸರಿಪಡಿಸಿಕೊಡಲು ಜಿಲ್ಲಾದಿಕಾರಿಯವರಿಗೆ ಒಂದು ಪತ್ರ ಬರೆಯಿರಿ.
XV. ಈ ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಕುರಿತು ಹದಿನೈದು ವಾಕ್ಯಗಳಿಗೆ ಕಡಿಮೆಯಿಲ್ಲದಂತೆ ಪ್ರಬಂಧ ಬರೆಯಿರಿ.                                                                                                         1X5=5
45. ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು
ಅಥವಾ
ಮೋಬೈಲ್ ಬಳಕೆಯ ಸಾಧಕ ಮತ್ತು ಬಾಧಕಗಳು

*****

 PDF Download 

9ನೇ ತರಗತಿ ಕನ್ನಡ ಕಲಿಕಾ ಹಾಳೆಗಳ ಮಾದರಿ ಉತ್ತರಗಳು

Kalika Fala 7

ಅಭ್ಯಾಸ-1.1 to 1.3 ರ ಉತ್ತರಗಳು

https://youtu.be/1O_mYTZ7ITM

ಅಭ್ಯಾಸ-2.1 to 4 ರ ಉತ್ತರಗಳು

https://youtu.be/2T0LdqdMw98

Kalika Fala 8

ಅಭ್ಯಾಸ-1.1 ರ ಉತ್ತರಗಳು

https://youtu.be/LnHIQ4MDaeE

ಅಭ್ಯಾಸ-1.2 ರ ಉತ್ತರಗಳು

https://youtu.be/T3-P_CX-XR0

ಅಭ್ಯಾಸ-2.1 ರ ಉತ್ತರಗಳು

https://youtu.be/sHK527pJnz0

ಅಭ್ಯಾಸ-2.2 ರ ಉತ್ತರಗಳು

https://youtu.be/UchkVzBiumg

ಅಭ್ಯಾಸ-3.1 to 5 ರ ಉತ್ತರಗಳು

https://youtu.be/3ffr6vggP84

Kalika Fala 9

ಅಭ್ಯಾಸ-1.1 & 1.2 ರ ಉತ್ತರಗಳು

https://youtu.be/tbqanemvjxo

ಅಭ್ಯಾಸ-2.1 ರ ಉತ್ತರಗಳು

https://youtu.be/HnixM0kkxXA

ಅಭ್ಯಾಸ-3.2 and 4 ರ ಉತ್ತರಗಳು

https://youtu.be/2OVVAkisGOk

Kalika Fala 10

ಅಭ್ಯಾಸ-1.1 ರ ಉತ್ತರಗಳು

https://youtu.be/ZcwToOiVr3w

ಅಭ್ಯಾಸ-2.1 ರ ಉತ್ತರಗಳು

https://youtu.be/0dIAm47ac4g

ಅಭ್ಯಾಸ-3.1 ರ ಉತ್ತರಗಳು

https://youtu.be/CHpUQMALgBI

ಅಭ್ಯಾಸ-4.1 & 5 ರ ಉತ್ತರಗಳು

https://youtu.be/0BtEigivFQs

Kalika Fala 11

ಅಭ್ಯಾಸ-1.1 to 5 ರ ಉತ್ತರಗಳು

https://youtu.be/T-g3WJ3rxq8

Kalika Fala 12

ಅಭ್ಯಾಸ-1.1 to 5 ರ ಉತ್ತರಗಳು

https://youtu.be/qY6QqhLoo68

Kalika Fala 13

ಅಭ್ಯಾಸ-1.1 to 5 ರ ಉತ್ತರಗಳು

https://youtu.be/GWqKuqreu9E

9ನೇ All Ans

https://karnatakaeducations.blogspot.com/2022/08/4-9.html

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon