9th Class SA 2 Question Paper 2023 | 9th Social Science SA 2 Question Paper | Class 9 SA 2 Question Paper 2023

9th Class SA 2 Question Paper 2023 | 9th Social Science SA 2 Question Paper | Class 9 SA 2 Question Paper 2023

ಎರಡನೇಯ ಸಂಕಲನಾತ್ಮಕ ಪರೀಕ್ಷೆ 2022-23
SA-2ಪ್ರಶ್ನೆಪತ್ರಿಕೆ
ತರಗತಿ: 9ನೇ ತರಗತಿ                                                                                            ವಿಷಯ: ಸಮಾಜವಿಜ್ಞಾನ
ಗರಿಷ್ಠಅಂಕಗಳು :80                                                                                            ಸಮಯ: 3 ಗಂಟೆ 15ನಿಮಿಷ
__________________________________________________________________________________________
I. ನಾಲ್ಕುಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ ಕ್ರಮಾಕ್ಷರದೊಂದಿಗೆ ಬರೆಯಿರಿ                          8X1=8
1. ವಸಾಹತುಕರಣದ ಉದ್ದೇಶಗಳೇನು?
A) ಲಾಭ ಗಳಿಸುವುದು                        B) ತೆರಿಗೆ ಸಂಗ್ರಹಿಸುವ ಹಕ್ಕು
C)‌ ರಾಜಕೀಯ ಅಧಿಕಾರ                      D) ಮೇಲಿನ ಎಲ್ಲವೂ 

2. ಸ್ಟೀಮ್ ಎಂಜಿನ್ ಕಂಡುಹಿಡಿದವರು
A) ಜೇಮ್ಸ್ ಹಾರ್ ಗ್ರೀವ್ಸ್                     B) ಜೇಮ್ಸ್ ವ್ಯಾಟ್
C)‌ ಎಲಿ ವಿಟ್ನಿ                                  D) ಎಡ್ಮಂಡ್ ರೈಟ್

3. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಯಾವಾಗ ಜಾರಿಗೆ ಬಂದಿತು

A) 1949                                       B) 2019
C)‌ 1955                                       D) 2005

4.‌ ಜರ್ಮನಿಯ ಏಕೀಕರಣ ಮಾಡಿದವರು ಯಾರು?

A) ಮ್ಯಾಜಿನಿ                                   B) ಭಿಸ್ಮಾರ್ಕ
C)‌ ರೂಸೊ                                    D) ಮಾಂಟೇಸ್ಕೋ

5.‌ ಜಿಲ್ಲಾ ನ್ಯಾಯಾಲದ ತೀರ್ಪಿನ ವಿರುದ್ದ ಅರ್ಜಿ ಸಲ್ಲಿಸಬೇಕಾದಲ್ಲಿ ಎಲ್ಲಿ ಅರ್ಜಿ ಸಲ್ಲಿಸಬೇಕು?

A) ತಾಲ್ಲೂಕು ನ್ಯಾಯಾಲಯ                 B) ಜಿಲ್ಲಾ ನ್ಯಾಯಾಲಯ
C)‌ ಉಚ್ಚ ನ್ಯಾಯಾಲಯ                      D) ಮೇಲಿನ ಯಾವುದು ಅಲ್ಲ

6. ಉಮೇಶನು ಬೆಂಗಳೂರಿನಲ್ಲಿ ಜನಿಸಿದ್ದಾನೆ ಅವನ ತಂದೆ ತಾಯಿ ಮೈಸೂರಿನವರಾಗಿದ್ದಾರೆ ಅವನಿಗೆ ಯಾವ ರೀತಿಯ ಪೌರತ್ವ ದೊರೆಯುತ್ತದೆ.

A) ನೊಂದಣಿ ಮೂಲಕ                        B) ಜನನ ಮೂಲಕ
C)‌ ಪರಿತ್ಯಾಗದ ಮೂಲಕ                     D) ಅಂತ್ಯಗೊಳಿಸುವಿಕೆ ಮೂಲಕ

7. ಭೂಸೇನೆಯ ಮುಖ್ಯಸ್ಥರನ್ನು ಏನೆಂದು ಕರೆಯುತ್ತಾರೆ?

A) ಜನರಲ್                                   B) ಆಡ್ಮಿರಲ್
C)‌ ಏರ್ ಚೀಫ್ ಮಾರ್ಷಲ್                   D) ಮೇಲಿನ ಎಲ್ಲಾ ಹೆಸರಿನಿಂದಲೂ ಕರೆಯುತ್ತಾರೆ

8. ತಂದೆ-ತಾಯಿ ಮತ್ತು ಅವರ ಅವಿವಾಹಿತ ಮಕ್ಕಳು ಮಾತ್ರ ಸದಸ್ಯರಾಗಿರುವ ಕುಟುಂಬ ಯಾವುದು?

A) ಅವಿಭಕ್ತ ಕುಟುಂಬ                         B) ವಿಭಕ್ತ ಕುಟುಂಬ
C)‌ ಪಿತೃಪ್ರಧಾನ ಕುಟುಂಬ                    D) ಮಾತೃಪ್ರಧಾನ ಕುಟುಂಬ

II. ಈ ಕೆಳಗಿನಪ್ರಶ್ನೆಗಳಿಗೆ  ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.                                                             8X1=8
9. ಕರ್ನಾಟಕದಲ್ಲಿ ಪೂರ್ವಾಭಿಮುಖವಾಗಿ ಹರಿಯುವ ಎರಡು ನದಿಗಳನ್ನು ಹೆಸರಿಸಿ
10. ಮೆಕ್ಕಲು ಮಣ್ಣು ಹೇಗೆ ನಿರ್ಮಿತವಾಗಿದೆ?
11. ಕಾಫಿಯ ನಾಡು ಎಂದು ಯಾವುದು ಪ್ರಸಿದ್ಧವಾಗಿದೆ?
12. ನಮ್ಮ ರಾಜ್ಯದಲ್ಲಿ ದೊರೆಯುವ ಖನಿಜಗಳನ್ನು ಹೆಸರಿಸಿ?
13. ಪ್ರಾಥಮಿಕ ವಲಯದ ವೃತ್ತಿಗಳು ಯಾವುವು?
14. ಬೇಟೆಯಾಡುವುದು ಯಾವ ವಲಯದ ವೃತ್ತಿಯಾಗಿದೆ?
15. ಆಮದು ಮತ್ತು ರಫ್ತಿನ ವ್ಯತ್ಯಾಸವೇನು?
16. ನಿಮ್ಮ ಊರಿನಲ್ಲಿ ಕಂಡುಬರುವ ಎರಡು ಗೃಹ ಕೈಗಾರಿಕೆಗಳನ್ನು ಗುರುತಿಸಿ.

III. ಈ ಕೆಳಗಿನ ಪ್ರಶ್ನೆಗಳಿಗೆ ಎರಡ ರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.                                               8X2=16

17. ಪೋರ್ಚುಗಲ್ ಮತ್ತು ಸ್ಪೇನ್ ದೇಶಗಳು ಸಮುದ್ರಯಾನದಲ್ಲಿ ಮುಂಚೂಣಿಯಲ್ಲಿದ್ದವು ಎನ್ನುತ್ತಾರೆ. ಇದಕ್ಕೆ ಕಾರಣಗಳೇನು?
18. ಕೈಗಾರಿಕಾ ಕ್ರಾಂತಿಯ ಪರಿಣಾಮಗಳೇನು?
19. ಅಮೇರಿಕಾ ಕ್ರಾಂತಿಯು ಹೇಗೆ ಫ್ರಾನ್ಸ್ ಕ್ರಾಂತಿಯ ಮೇಲೆ ಪ್ರಭಾವ ಬೀರಿತು?
ಅಥವಾ
ಹೈಕೋರ್ಟ್ ನ್ಯಾಯಾಧೀಶರ ಅರ್ಹತೆಗಳೇನು?
20. ಪೌರತ್ವ ಪಡೆಯುವ ವಿಧಾನಗಳನ್ನು ಪಟ್ಟಿ ಮಾಡಿ
21. ಭಾರತ ಶಾಂತಿ ಪ್ರಿಯ ರಾಷ್ಟ್ರ ಆದರೂ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯ ಮೂರು ಪಡೆಗಳ ಅವಶ್ಯಕತೆ ಏಕಿದೆ?
22. ನದಿಗಳಿಗೆ ಏಕೆ ಡ್ಯಾಮ್ (ಅಣೆಕಟ್ಟು) ಕಟ್ಟುತ್ತಾರೆ?
23. ರಾಬಿ ಮತ್ತು ಖಾರೀಫ್ ಕಾಲದಲ್ಲಿ ವ್ಯತ್ಯಾಸ ಬರೆಯಿರಿ
24. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಕೇಂದ್ರಿಕರಣವಾಗಿರಲು ಕಾರಣವೇನು? ವಿವರಿಸಿ.

IV. ಈ ಕೆಳಗಿನ ಪ್ರಶ್ನೆಗಳಿಗೆ ಆರು ವಾಕ್ಯಗಳಲ್ಲಿ ಉತ್ತರಿಸಿರಿ.                                                                  9X3=27

25. ಗೃಹ ಕೈಗಾರಿಕೆಯ ಅನುಕೂಲ ಮತ್ತು ಅನಾನುಕೂಲಗಳನ್ನು ತಿಳಿಸಿ
ಅಥವಾ
ಕೈಗಾರಿಕಾ ಕ್ರಾಂತಿಯ ಪರಿಣಾಮಗಳನ್ನು ಬರೆಯಿರಿ..
26. ನಮ್ಮ ದೇಶದಲ್ಲಿ ವ್ಯವಹಾರಿಸುವ ವಿದೇಶಿ ಕಂಪನಿಗಳು ಮತ್ತು ದೇಶಿಯ ಕಂಪನಿಗಳನ್ನು ಹೋಲಿಸಿ ಬರೆಯಿರಿ.
27.ಫ್ರಾನ್ಸ್ ಕ್ರಾಂತಿಯು ಪ್ರಪಂಚದ ಜನರಿಗೆ ಯಾವ ಅಂಶಗಳನ್ನು ತಿಳಿಸಿತು?
28. ಇಟಲಿಯ ಏಕೀಕರಣದ ಬಗೆಗೆ ನೀವು ಏನು ತಿಳಿದುಕೊಂಡಿದ್ದಿರಿ?
29. ಜನತಾ ನ್ಯಾಯಲಯ (ಲೋಕ ಅದಾಲತ್) ಕುರಿತು ಟಿಪ್ಪಣಿ ಬರೆಯಿರಿ.
30.ಪೌರತ್ವ ಕಳೆದುಕೊಳ್ಳುವ ವಿಧಾನಗಳನ್ನು ತಿಳಿಸಿ?
31.ನಮ್ಮ ರಕ್ಷಣಾ ಪಡೆಗಳ ಬಗೆಗೆ ಬರೆಯಿರಿ.
32.ನಿಮ್ಮ ಊರಿನಲ್ಲಿ ಶಾಲೆ ಇರದೆ ಇದ್ದಲ್ಲಿ ಏನಾಗುತ್ತಿತ್ತು ಯೋಚಿಸಿ ಬರೆಯಿರಿ.
33. ಪ್ರವಾಹಗಳು ಏಕೆ ಉಂಟಾಗುತ್ತವೆ? ಚರ್ಚಿಸಿರಿ.

V. ಈ ಕೆಳಗಿನಪ್ರಶ್ನೆಗಳಿಗೆ ಎಂಟ ರಿಂದ ಹತ್ತುವಾಕ್ಯಗಳಲ್ಲಿ ಉತ್ತರಿಸಿರಿ.                                                     4X4=16

34.ನಿಮ್ಮ ಊರಿನಲ್ಲಿರುವ ವಿವಿಧ ಕೈಗಾರಿಕೆಗಳನ್ನು ಹೆಸರಿಸಿ? ಇದರಲ್ಲಿ ಯಾವುದಾದರೂ ಒಂದು ಕೈಗಾರಿಕೆಯ ವಸ್ತುಗಳು ವಿದೇಶಕ್ಕೆ ರಫ್ತಾಗುತ್ತಿದ್ದಲ್ಲಿ ನಿಮ್ಮ ಊರು ಹೇಗೆ ಬೆಳವಣಿಗೆ ಹೊಂದುತ್ತಿತ್ತು ಎಂದು ಯೋಚಿಸಿ ಬರೆಯಿರಿ.
ಅಥವಾ
ನಮ್ಮ ರಾಷ್ಟ್ರದ ಬೆಳವಣಿಗೆಗೆ ಕೈಗಾರಿಕೆಗಳು ಅವಶ್ಯಕವೇ? ಹೇಗೆ ಎಂದು ಬರೆಯಿರಿ.
35. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನಡುವಿನ ಸಾಮ್ಯತೆಯನ್ನು ಬರೆಯಿರಿ
36.ಅಂತರ್ಜಲ ಹೆಚ್ಚಿಸಲು ಏನು ಮಾಡಬೇಕು ಎಂದು ವಿವರವಾಗಿ ಬರೆಯಿರಿ?
37. ಒಂದು ರಾಷ್ಟ್ರದ ಬೇಳವಣಿಗೆಗೆ ವಿದೇಶಿ ವ್ಯಾಪಾರ ಅವಶ್ಯಕ ಏಕೆ? ಚರ್ಚಿಸಿ.

VI. ಕರ್ನಾಟಕದ ನಕಾಶೆಯನ್ನು ಬರೆದು ಅದರಲ್ಲಿ ಈ ಕೆಳಗಿನವುಗಳನ್ನು ಗುರುತಿಸಿ.                                                  1+4=5

38.
a) ಕಾವೇರಿ ನದಿ
b)‌ ಕೃಷ್ಣಾ ನದಿ
c)‌ ಕರಾವಳಿ ಪ್ರದೇಶ
d) ಬ್ಯಾಡಗಿ

*****

9th SA 2 Social Science 2023 Question Paper PDF

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon