SSLC Evaluator Registration JC DC AE | SSLC Evaluation Register Process 2023

SSLC Evaluator Registration JC DC AE | SSLC Evaluation Register Process 2023  

SSLC 2023ರ ಮೌಲ್ಯಮಾಪನ ಚಟುವಟಿಕೆಗಳು ಪ್ರಾರಂಭವಾಗುತ್ತಿದ್ದು ಮೌಲ್ಯಮಾಪನಕ್ಕಾಗಿ JC DC ಮತ್ತು AE ಯವರು ನೊಂದಣಿ ಮಾಡಿಕೊಳ್ಳಬೇಕಾಗುತ್ತದೆ. ಈ ನೊಂದಣಿ ಮಾಡಿಕೊಳ್ಳುವ ಪ್ರಕ್ರಿಯೇ ಹೇಗಿದೆ. ಮತ್ತು ಯಾವ ರೀತಿಯಾಗಿ ನೊಂದಣಿ ಮಾಡಿಕೊಳ್ಳುವುದು ಎನ್ನುವುದನ್ನು ನೋಡೋಣ....


Karnataka School Examination And Assessment Board Bangalore (KSEAB) 
SSLC ಮೌಲ್ಯಮಾಪನ ಚಟುವಟಿಕೆಯನ್ನು ಪ್ರಾರಂಭಿಸಿದ್ದು ಈ ಕಾರ್ಯದಲ್ಲಿ ಭಾಗವಹಿಸಲು ಮೌಲ್ಯಮಾಪನ ಕಾರ್ಯಕ್ಕಾಗಿ JC, DC ಮತ್ತು AE ಯವರು ತಮ್ಮ ನೊಂದಣಿಯನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ನೊಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಹೇಗಿದೆ ಎನ್ನುವುದನ್ನು ಇಲ್ಲಿ ನೋಡಿ.
1. ಮೌಲ್ಯಮಾಪನ ಕಾರ್ಯಕ್ಕಾಗಿ ಮೊದಲು ನೊಂದಣಿ ಮಾಡಿಕೊಳ್ಳಬೇಕಾಗುತ್ತದೆ.
2. ನೊಂದಣಿಯ ನಂತರ ಮೌಲ್ಯಮಾಪನ ಚಟುವಟಿಕೆ ಮಾಡಬೇಕಾಗುತ್ತೆ.
3. ಅಂಕಗಳ ನಮೂದು ಮಾಡಬೇಕಾಗುತ್ತದೆ. (ಸೂಚನೆ: ಅಂಕಗಳ ನಮೂದು ಕೇವಲ ಮೌಲ್ಯಮಾಪನ ಕೇಂದ್ರದಲ್ಲಿ ಅವರು ಪೂರೈಕೆ ಮಾಡಿರುವ ಕಂಪ್ಯೂಟರ್ ಅಥವಾ ಲ್ಯಾಪಟಾಪ ಮೂಲಕ ಮಾಡುವುದಕ್ಕೆ ಮಾತ್ರ ಅವಕಾಶವಿರುತ್ತದೆ. ಅಂಕ ನಮೂದು ಮೊಬೈಲ ಮೂಲಕ ಮಾಡಲು ಅವಕಾಶ ಕೊಡುವುದಿಲ್ಲ)
ನೊಂದಣಿ ಮಾಡಿಕೊಳ್ಳವುದು ಮಾತ್ರ ಮಾಡಿಕೊಳ್ಳಬಹುದು ಹೇಗೆ ಮಾಡಿಕೊಳ್ಳುವ ಪ್ರಕ್ರಿಯೆ ಇದೆ ಎಂದು ನೋಡೋಣ.
ಹೇಗೆ ಮಾಡಿಕೊಳ್ಳುವುದು ಎಂದು ನೋಡೊಣ:
1) ಇಲ್ಲಿ ಕ್ಲಿಕ್ ಮಾಡಿ ವೆಬ್ ಸೈಟ್ ಗೆ ಭೇಟಿ ನೀಡಿ:   ವೆಬ್ ಸೈಟ್ ಗೆ ಭೇಟಿ ನೀಡಲು ಯಾವುದದರೂ ಬ್ರೌಸರ್ ಬಳಕೆ ಮಾಡಿಕೊಳ್ಳಬಹುದು. ಅದನ್ನು ತೆರೆದ ನಂತರ ಈ ರೀತಿಯಾಗಿ ಕಾಣಿಸಿಕೊಳ್ಳುತ್ತದೆ.

2) New Registration ಅನ್ನುವುದರ ಮೇಲೆ ಕ್ಲಿಕ್ ಮಾಡಿಕೊಳ್ಳಿ ಈ ರೀತಿಯಾಗಿ ತೆರೆದುಕೊಳ್ಳುತ್ತದೆ.



3) Enter Evaluator Number : ಎನ್ನುವುದರ ಮುಂದೆ ಕೊಟ್ಟಿರುವ ಖಾಲಿ ಸ್ಥಳದಲ್ಲಿ Evaluator Number ಅನ್ನು ನಮೂದಿಸಬೇಕು ನಂತರ View ಎಂದು ಕ್ಲಿಕ್ ಮಾಡಿಕೊಳ್ಳಬೇಕು.
4) ಆಗ ಈ ರೀತಿಯಾಗಿ ಕಾಣಿಸಿಕೊಳ್ಳುತ್ತದೆ. ಎಲ್ಲಾ ಮಾಹಿತಿಗಳು ತನ್ನಿಂದ ತಾನೆ ಬಂದಿರುತ್ತವೆ ಯಾವುದೇ ಬದಲಾವಣೆ ಮಾಡಿಕೊಳ್ಳುವುದಕ್ಕೆ ಅವಕಾಶವಿರುವುದಿಲ್ಲ.

5) ಇದರಲ್ಲಿ ಕೇವಲ ಮೋಬೈಲ್ ಸಂಖ್ಯೆಯನ್ನು ಮಾತ್ರ ಬದಲಾವಣೆ ಮಾಡಿಕೊಳ್ಳಬಹುದು ಉಳಿದ ಎಲ್ಲಾ ಮಾಹಿತಿಗಳು ಹಾಗೆ ಇರುತ್ತವೆ.
6) ಎಲ್ಲಾ ಮಾಹಿತಿಗಳು ಸರಿಯಾಗಿವೆಯೇ ಎಂದು ಪರೀಕ್ಷಿಸಿ ನಿಮಗೆ ಬೇಕಾಗಿರುವ ಪಾಸ್ ವರ್ಡ್ ಸೆಟ್ ಮಾಡಿಕೊಂಡು ಪುನಃ ಪಾಸ್ ವರ್ಡ್ ಅನ್ನು ಕನಫರ್ಮ ಮಾಡಿಕೊಳ್ಳಿ. (Password must be: Required 8 Characters with combination of alphanumeric and special characters )
7) ನಿಮ್ಮ ಮೋಬೈಲ್ ಸಂಖ್ಯೆ ಸರಿಯಾಗಿದೆ ಎಂದು ಖಾತರಿ ಪಡಿಸಿಕೊಂಡು ನಂತರ ಗೆಟ್ OTP ಕ್ಲಿಕ್ ಮಾಡಿ
8) ನಿಮ್ಮ ಮೋಬೈಲ್ ಗೆ OTP ಬರುತ್ತದೆ ಅದನ್ನು ನಮೂದಿಸಿ Submit ಮಾಡಿ ಆಗ ನಿಮ್ಮ ನೊಂದಣಿ ಪ್ರಕ್ರಿಯೆ ಮುಕ್ತಾಯವಾಗುತ್ತದೆ.
8) ನಿಮ್ಮ ಮೋಬೈಲ್ ಗೆ ನೊಂದಣಿ ಯಶಸ್ವಿಯಾಗಿರುವ ಸಂದೇಶ ಮತ್ತು ನಿವು ಆಯ್ಕೆ ಮಾಡಿಕೊಂಡಿರುವ ಪಾಸ್ ವರ್ಡ್ ಬರುತ್ತದೆ. ಅದನ್ನು ನೆನಪಿಟ್ಟುಕೊಂಡು ಮೌಲ್ಯಮಾಪನ ಕಾರ್ಯ ಮುಗಿಯುವವರೆಗೂ ಬಳಕೆ ಮಾಡಿಕೊಳ್ಳಿ.

ಈ ರೀತಿಯಾಗಿ ನೊಂದಣಿ ಪ್ರಕ್ರಿಯೆ ಇರುವುದು ನಿಮ್ಮ ಸ್ನೇಹಿತರಿಗೂ ಸಹ ಇದನ್ನು ಶೇರ್ ಮಾಡಿ.

*****


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon