9th FA3 Social Science Answer Paper 2023-24 | Class 9 FA 3 Answer Paper Social Science 2024

9th FA3 Social Science Answer Paper 2023-24 | Class 9 FA 3 Answer Paper Social Science 2024
9ನೇ ತರಗತಿ ಸಮಾಜ ವಿಜ್ಞಾನ  FA-3 ಮಾದರಿ ಉತ್ತರ ಪತ್ರಿಕೆ



I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ  2x1=2

1. ಅಹೋಮ್ ರಾಜಮನೆತನದ ಸ್ಥಾಪಕ ಯಾರು

a) ಜಯಧ್ವಜ ಸಿಂಘ

b) ಚಕ್ರಧ್ವಜ ಸಿಂಘ

c) ಸುಕಪಾ

d) ಲಚಿತ್

ಉ: c) ಸುಕಪಾ

2. ನಮ್ಮ ರಕ್ಷಣಾ ನೀತಿಯ ಮುಖ್ಯ ಗುರಿ

a) ಬೇರೆ ದೇಶಗಳೊಂದಿಗೆ ಯುದ್ಧ ಮಾಡುವುದು

b) ಪರಕೀಯರ ಆಕ್ರಮಣದಿಂದ ದೇಶವನ್ನು ರಕ್ಷಿಸುವುದು

c) ದೇಶದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವುದು

d) ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜನರನ್ನು ರಕ್ಷಿಸುವುದು

ಉ: b) ಪರಕೀಯರ ಆಕ್ರಮಣದಿಂದ ದೇಶವನ್ನು ರಕ್ಷಿಸುವುದು

II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ :                                             2x1=2

3. ಭಕ್ತಿ ಪಂಥದ ಮೂಲ ತತ್ವ ಯಾವುದು?

ಉ: ಪರಿಶುದ್ಧ ಮನಸ್ಸು ಮತ್ತು ದೇವರಿಗೆ ಪೂರ್ಣ ಶರಣಾಗತಿಯೇ ಭಕ್ತಿ ಪಂಥದ ಮೂಲ ತತ್ವಾಗಿದೆ.

4. ಕರ್ನಾಟಕವನ್ನು ‘ಚಿನ್ನದ ನಾಡು’ ಎಂದು ಏಕೆ ಕರೆಯುತ್ತಾರೆ?

ಉ: ಕರ್ನಾಟಕದ ಗಣಿಗಳಿಂದ ಅತಿ ಹೆಚ್ಚು ಚಿನ್ನವನ್ನು ಪಡೆಯಲಾಗುತ್ತಿದೆ. ಆದ್ದರಿಂದ ‘ಚಿನ್ನದ ನಾಡು’ ಎಂದು ಕರೆಯುತ್ತಾರೆ.

III. ಈ ಕೆಳಗಿನ ಪ್ರಶ್ನೆಗಳಿಗೆ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ:                                       2x2=4

5. ಸಾಮಾಜೀಕರಣದಲ್ಲಿ ಸಮವಯಸ್ಕರ ಪಾತ್ರವನ್ನು ವಿವರಿಸಿ

ಉ: ಸಾಮಾಜೀಕರಣದ ಬಹುಮುಖ್ಯ ನಿಯೋಗಿಗಳು ಸಮವಯಸ್ಕರು, ಜೊತೆಯ ಆಟಗಾರರು ಮತ್ತು ಸ್ನೇಹಿತರು ಆಗಿರುತ್ತಾರೆ.

ಈ ಸಂಬಂಧವು ಸಹಕಾರ ಹಾಗೂ ಪರಸ್ಪರ ಹೊಂದಾಣಿಕೆಯನ್ನು ಆಧರಿಸಿರುತ್ತದೆ.

ಅವರು ಬಹುಮಟ್ಟಿಗೆ ಒಂದೇ ವಯಸ್ಸಿನವರಾಗಿದ್ದು, ತನ್ನ ಪೋಷಕರಿಂದ ಮತ್ತು ಶಿಕ್ಷಕರಿಂದ ತಿಳಿಯಲಾಗದ ವಿಷಯಗಳನ್ನು ಸ್ನೇಹಿತರಿಂದ ಮಗುವು ತಿಳಿಯುತ್ತದೆ.

ಸಮಾಜದ ದೃಷ್ಟಿಯಿಂದ ಈ ಅರಿವು ಅಗತ್ಯವಾಗಿರುತ್ತದೆ.

6. ಕರ್ನಾಟಕದ ಪ್ರಮುಖ ಚಿನ್ನದ ಗಣಿಗಳನ್ನು ಹೆಸರಿಸಿ

ಉ: ಕೋಲಾರದ ಚಿನ್ನದ ಗಣಿ- ನಂದಿದುರ್ಗ, ಉರಿಗಾಂ, ಚಾಂಪಿಯನ್ ರೀಫ್ ಮತ್ತು ಮೈಸೂರು ಗಣಿ,

ರಾಯಚೂರು ಜಿಲ್ಲೆಯ ಹಟ್ಟಿ

ತುಮಕೂರು ಜಿಲ್ಲೆಯ ಬೆಳ್ಳಾರ್, ಶಿರಾ ಸಮೀಪದ ಅಜ್ಜನಹಳ್ಳಿ,

ಗದಗ ಜಿಲ್ಲೆಯ ಮುಳಗುಂದ, ಕಪ್ಪತ್ತಗುಡ್ಡ,

ಹಾಸನ ಜಿಲ್ಲೆಯ ಕೆಂಪಿನಕೋಟೆ ಮೊದಲಾದವುಗಳು.

6. (ಅಥವಾ) ಕರ್ನಾಟಕದ ರಸ್ತೆಗಳ ವಿಧಗಳನ್ನು ಬರೆಯಿರಿ.

ಉ: ರಾಷ್ಟೀಯ ಹೆದ್ದಾರಿಗಳು

ರಾಜ್ಯ ಹೆದ್ದಾರಿಗಳು

ಜಿಲ್ಲಾ ರಸ್ತೆಗಳು

ಗ್ರಾಮೀಣ ರಸ್ತೆಗಳು.

IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಆರು ವಾಕ್ಯಗಳಲ್ಲಿ ಉತ್ತರಿಸಿರಿ:                                             2x3=6

7. ಮತದಾರರ ಪಟ್ಟಿಯ ಕುರಿತು ಟಿಪ್ಪಣಿ ಬರೆಯಿರಿ

ಉ: ಮತದಾನ ಮಾಡುವವರ ಹೆಸರು ಹಾಗೂ ಕೆಲವು ವಿವರಗಳನ್ನು ಒಳಗೊಂಡಿರುವ ಪಟ್ಟಿಯನ್ನು ಮತದಾರರ ಪಟ್ಟಿ ಎಂದು ಕರೆಯುತ್ತಾರೆ.

ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗವು ಚುನಾವಣೆಗಿಂತ ಮುಂಚಿತವಾಗಿಯೇ ಸಿದ್ಧಪಡಿಸಿಕೊಳ್ಳುತ್ತದೆ. ಮತದಾರರ ಪಟ್ಟಿಯು ಪ್ರತಿ ವರ್ಷ ಪರಿಷ್ಕೃತಗೊಳ್ಳುತ್ತದೆ.

ಹೀಗೆ ಪರಿಷ್ಕೃತಗೊಳ್ಳುವ ಸಂದರ್ಭದಲ್ಲಿ ಯಾರಿಗೆ 18 ವರ್ಷಗಳು ತುಂಬಿರುತ್ತವೋ ಅವರ ಹೆಸರುಗಳನ್ನು ಪಟ್ಟಿಗೆ ಹೊಸದಾಗಿ ಸೇರ್ಪಡೆ ಮಾಡಿಕೊಂಡು, ಯಾರು ಮರಣ ಹೊಂದಿರುತ್ತಾರೋ ಅಂತಹವರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ.

ಮತದಾರರ ಪಟ್ಟಿಯನ್ನು ಚುನಾವಣಾ ಅಧಿಕಾರಿಗಳು ಮತದಾರರನ್ನು ಮತದಾನದ ವೇಳೆ ಗುರುತಿಸಲು ಸಹಾಯಕವಾಗುತ್ತದೆ.

7. (ಅಥವಾ) ಭಾರತದ ಭೂಸೇನಾ ರಚನೆಯನ್ನು ವಿವರಿಸಿ

ಉ: ಭೂಸೇನಯ ಮುಖ್ಯಸ್ಥರನ್ನು ಮಹದಂಡನಾಯಕರು ಎಂದು ಕರೆಯುತ್ತಾರೆ.

ಇವರಿಗೆ ಉಪ ಮಹಾದಂಡನಾಯಕರು, ಸೇನಾಪತಿ, ಸೇನಾ ಪ್ರಧಾನ ಅಧಿಕಾರಿ, ಮಾಸ್ಟರ್ ಜನರಲ್, ಮಿಲಿಟರಿ ಕಾರ್ಯದರ್ಶಿ, ಮಿಲಿಟರಿ ಇಂಜಿನಿಯರ್ ಮುಂತಾದವರು ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ.

ಭೂಸೇನೆಯು ಪದಾತಿದಳ (ಸೈನಿಕ), ಅಶ್ವದಳ (ಕ್ಯಾವಲ್ರಿ), ಟ್ಯಾಂಕುಗಳ ದಳ, ಫಿರಂಗಿ ದಳಗಳನ್ನು ಒಳಗೊಂಡಿದೆ.

ಆಡಳಿದ ದೃಷ್ಟಿಯಂದ ಭಾರತೀಯ ಭೂಸೇನೆಯನ್ನು ಏಳು ಕಮಾಂಡುಗಳಾಗಿ ರೂಪಿಸಿದೆ.

ಈ ಕಮಾಂಡ್ ಗಳನ್ನು ಮತ್ತೆ ಏರಿಯಾ (ವಲಯ) ಮತ್ತು ಸಬ್ ಏರಿಯಾ (ಉಪವಲಯ) ಗಳಾಗಿ ವಿಂಗಡಿಸಿದೆ. ಲೆಫ್ಟಿನೆಂಟ್ ಜನರಲ್ ಎಂಬ ಪದಾಧಿಕಾರಿ ಕಮಾಂಡಿನ ಮುಖ್ಯಸ್ಥರಾಗಿರುತ್ತಾರೆ.

ಪ್ರತಿ ವಲಯದಲ್ಲಿ ಮೇಜರ್ ಜನರಲ್ ಮುಖ್ಯಸ್ಥರಾಗಿರುತ್ತಾರೆ.

ಉಪವಲಯದ ಮುಖ್ಯಸ್ಥರನ್ನು ಬ್ರಿಗೇಡಿಯರ್ ಎಂದು ಕರೆಯುತ್ತಾರೆ.

8. ಭಾರತೀಯ ರಿಸರ್ವ್ ಬ್ಯಾಂಕಿನ ಕಾರ್ಯಗಳನ್ನು ವಿವರಿಸಿ

ಉ: ಪ್ರಾಥಮಿಕ ಅಥವಾ ಮುಖ್ಯ ಕಾರ್ಯಗಳು:

1. ವಿನಿಮಯ ಮಾಧಯಮ ಅಥವಾ ಸಂದಾಯದ ಸಾಧನ

2. ಮೌಲ್ಯಮಾಪನ

ಪೂರಕ ಕಾರ್ಯಗಳು :

1. ವಿಳಂಬಿತ ಸಂದಾಯದ ಪ್ರಮಾಣ

2. ಮೌಲ್ಯ ಸಂಗ್ರಹ ಅಥವಾ ಕೊಳ್ಳುವ ಶಕ್ತಿಯ ಸಂಗ್ರಹ

3. ಮೌಲ್ಯ ವರ್ಗಾವಣೆ ಅಥವಾ ಕೊಳ್ಳುವ ಶಕ್ತಿಯ ವರ್ಗಾವಣೆ

ಇತರೆ ಕಾರ್ಯಗಳು :

1. ಸಾಲದ ತಳಹದಿ

2. ಬಂಡವಾಳದ ಉತ್ಪಾದಕತೆ ಹೆಚ್ಚಳ.

V. ಈ ಕೆಳಗಿನ ಒಂದು ಪ್ರಶ್ನೆಗೆ ಎಂಟರಿಂದ ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ:                                                 1x4=4

9. ಶಿವಾಜಿಯು ಉತ್ತಮ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದನು. ವಿಶ್ಲೇಷಿಸಿ.

ಉ: ಶಿವಾಜಿ ತನ್ನ ವಿಶಾಲ ರಾಜ್ಯದಲ್ಲಿ ಉತ್ತಮ ಆಡಳಿತ ಸಂಘಟಿಸಿದ್ದನು.

ಸಾಮ್ರಾಜ್ಯವನ್ನು ಅನೇಕ ಪ್ರಾಂತಗಳಾಗಿ ವಿಂಗಡಿಸಿದ್ದನು.

ಅವುಗಳನ್ನು ಸ್ವರಾಜ್ಯ ಮತ್ತು ಮೊಘಲರ ರಾಜ್ಯಗಳೆಂದು ಕರಯುತ್ತಿದ್ದರು.

ಮರಾಠಿ ಆಡಳಿತ ಭಾಷೆಯಾಗಿತ್ತು. ಕೇಂದ್ರ ಸರ್ಕಾರದ ಮುಖ್ಯಸ್ಥನಾಗಿದ್ದ ದೊರೆಗೆ ಆಡಳಿತದಲ್ಲಿ ನೆರವು ನೀಡಲು ಅಷ್ಟ ಪ್ರಧಾನರೆಂಬ ಮಂತ್ರಿಗಳಿದ್ದರು.

ಜೊತೆಗೆ ಸಹಾಯಕ್ಕಾಗಿ ಇತರೆ ಅಧಿಕಾರಿಗಳಿದ್ದರು.

ಪ್ರಾಂತ, ಜಿಲ್ಲೆ, ಗ್ರಾಮ ಆಡಳಿತದ ಘಟಕಗಳಾಗಿದ್ದವು.

ಶಿವಾಜಿಯ ಕಂದಾಯ ಪದ್ಧತಿ ರೈತರಿಗೆ ಅನುಕೂಲಕರವಾಗಿದ್ದ ರೈತವಾರಿ ಪದ್ಧತಿಯಾಗಿತ್ತು.

ಶಿವಾಜಿ ಆಡಳಿತದಲ್ಲಿ ಪರಂಪರಾನುಗತ ನ್ಯಾಯಾಂಗ ವ್ಯವಸ್ಥೆ ಜಾರಿಯಲ್ಲಿತ್ತು.

9. (ಅಥವಾ) ಅಸ್ಸಾಮಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಇತಿಹಾಸದಲ್ಲಿ ಶ್ರೀಮಂತ ಶಂಕರ ದೇವರ ಪಾತ್ರ ಪ್ರಮುಖವಾದುದು. ಸಮರ್ಥಿಸಿ.

ಉ: ಶಂಕರ ದೇವರು ಹಿಂದಿನ ಸಂಸ್ಕೃತಿ ಹಾಗೂ ಸಂಗೀತ ಪರಂಪರೆಯಲ್ಲಿ ಹೊಸತನವನ್ನು ತಂದ ಪ್ರಖ್ಯಾತಿಯನ್ನು ಹೊಂದಿದ್ದಾರೆ.

ಶಂಕರದೇವನ ಭಾಗವತವು ಸಂಸ್ಕೃತ, ಅಸ್ಸಾಂ ಭಾಷೆ ಹಾಗೂ ಬೃಜಾವಲಿ ಭಾಷೆಗಳಲ್ಲಿದೆ.

ಅಸ್ಸಾಂನಲ್ಲಿ ಶಂಕರದೇವನು ಪ್ರಾರಂಭಿಸಿದ ಭಕ್ತಿ ಚಳವಳಿಯು ಭಾರತದ ಇತರೆ ಭಾಗಗಳಲ್ಲಿ ತನ್ನ ಪ್ರಭಾವ ಬೀರಿತು.

ಆತನು ಪ್ರಾರಂಭ ಮಾಡಿದ ಭಕ್ತಿಚಳವಳಿಯನ್ನು ಏಕಾಸರಣ ಧರ್ಮ-ವೈಷ್ಣವ ಚಳವಳಿ ಎಂದು ಕರೆಯುತ್ತಾರೆ.

ಕೃಷ್ಣನಲ್ಲಿ ನಾವು ನಿರ್ಮಲವಾದ ಭಕ್ತಿ ತೋರಬೇಕು.

ಉತ್ತಮವಾದ ಕೀರ್ತನೆ ಹಾಡುವುದು ಹಾಗೂ ಕೇಳುವುದರಿಂದ ನಾವು ಭಕ್ತಿ ಹೊಂದಬಹುದು.

ದೇವರ ಸೇವಕ ಎಂಬ ಸದ್ಭಾವನೆಯಿಂದ ದಾಸ್ಯ ಪ್ರವೃತ್ತಿಯನ್ನು ಹೊಂದಬೇಕು.

ಇತರೆ ವೈಷ್ಣವರಂತೆ, ಕೃಷ್ಣನ ಒಡಗೂಡಿ ರಾಧೆಯನ್ನು ಈ ಪಂಥವು ಪೂಜಿಸುವುದಿಲ್ಲ.

ಶ್ರೀಮಂತ ಶಂಕರ ದೇವರು ತಮ್ಮ ಪಂಥದಲ್ಲಿ ಸರನಿಯ ಎಂಬ ಪದ್ಧತಿಯನ್ನು ಪ್ರಾರಂಭಿಸಿದರು.

VI. 10. ಕರ್ನಾಟಕದ ನಕ್ಷೆಯನ್ನು ಬರೆದು ಇವುಗಳನ್ನು ಗುರುತಿಸಿ:                                              1+1=2

a) ನವಮಂಗಳೂರು        

b) ಭಾರತದ ಅತಿ ದೊಡ್ಡ ಚಿನ್ನದ ಗಣಿ

(ರಾಯಚೂರು ಜಿಲ್ಲೆಯ ಹಟ್ಟಿ)


*****

9th Class FA-3 2023-24 Social Science Question Paper For PDF Click here
9th Class FA-3 2023-24 Social Science Model Answer Paper For PDF Click here

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon