2nd PUC Sociology Notes | ಅಧ್ಯಾಯ-3 ಒಳಗೊಳ್ಳುವಿಕೆಯ ತಂತ್ರಗಳು
ಅಧ್ಯಾಯ-3 ಒಳಗೊಳ್ಳುವಿಕೆಯ ತಂತ್ರಗಳು 1.ಅಸ್ಪೃಶ್ಯತೆಯನ್ನು ನಿಷೇದಿಸಿರುವ ಸಂವಿಧಾನದ ವಿಧಿ ಅಥವಾ ಕಲಮು ಯಾವುದು? ಉ: ಕಲಮು-17ರ ಅನ್ವಯ ಅಸ್ಪೃಶ್ಯತೆಯನ್ನು ನಿಷೇದಿಸಿದೆ. 2.ಸೂಕ್ಷ್ಮ ಹಣಕಾಸು ಪರಿಕಲ್ಪನೆಯನ್ನು ಯಾರು ಪರಿಚಯಿಸಿದರು? ಉ: ಬಾಂಗ್ಲಾದೇಶದ ಮಹಮದ್ ಯುನಿಸ್ ರವರು ಪರಿಚಯಿಸಿದ್ದಾರೆ. 3.ಲಿಜ್ಜತ್ ಕೇಂದ್ರ ಕಛೇರಿಯು ಎಲ್ಲಿದೆ? ಉ: ಮುಂಬೈಯಲ್ಲಿದೆ. 4.ಕರ್ನಾಟಕದಲ್ಲಿ ಸೋಲಿಗರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘಟನೆ ಯಾವುದು? ಉ: ವಿವೇಕಾನಂದ ಗಿರಿಜನಕೇಂದ್ರ. 5.”ನಿಶ್ಚಯಾತ್ಮಕಕ್ರಿಯೆ” ಎಂಬ ಪರಿಕಲ್ಪನೆಯನ್ನು ಮೊದಲು ಬಳಸಿದವರು ಯಾರು? ಉ: ಜಾನ್ ಎಫ್.ಕೆನಡಿ. 6.ಗಾಂಧೀಜಿಯವರು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಪ್ರಾರಂಭಿಸಿದ ಪತ್ರಿಕೆ ಯಾವುದು? ಉ: ಹರಿಜನ ಪತ್ರಿಕೆ. 7.ಮೂಕನಾಯಕ ಪತ್ರಿಕೆಯನ್ನು ಪ್ರಾರಂಭಿಸಿದವರು ಯಾರು? ಉ: ಡಾ.ಬಿ.ಆರ್.ಅಂಬೇಡ್ಕರ್ 8.”ಅಭಿನವ ಮನು” ಎಂದು ಯಾರನ್ನು ಕರೆದಿದ್ದಾರೆ? ಉ: ಡಾ.ಬಿ.ಆರ್.ಅಂಬೇಡ್ಕರ್. 9.ಎಸ್.ಹೆಚ್.ಜಿ. ಅನ್ನು ವಿಸ್ತರಿಸಿ ಬರೆಯಿರಿ? ಉ: ಸ್ವ ಸಹಾಯ ಗುಂಪು. 10.ಯಾವ ವರ್ಷವನ್ನು ಅಂತರರಾಷ್ಟ್ರೀಯ ಮಹಿಳಾ ವರ್ಷ ಎಂದು ಘೋಷಿಸಲಾಗಿದೆ? ಉ: 1975ನೇ ವರ್ಷವನ್ನು. 11.”ಬಹಿಷ್ಕೃತ ಹಿತಕಾರಿಣಿಸಭಾ” ಎಂಬ ಸಂಘಟನೆಯನ್ನು ಸ್ಥಾಪಿಸಿದವರು ಯಾರು? ಉ: ಡಾ.ಬಿ.ಆರ್.ಅಂಬೇಡ್ಕರ್ ರವರು ದಲಿತರಿಗೆ ಆತ್ಮಗೌರವವನ್ನೂ ಹೆಚ್ಚಿಸಿಕ...