ಭಾರತಕ್ಕೆ ಯೂರೋಪಿಯನ್ನರ ಆಗಮನ ನೋಟ್ಸ್ | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ನೋಟ್ಸ್ | SSLC Social Science New Text Book Notes |

10ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್
ಹೊಸ ಪಠ್ಯಪುಸ್ತಕದ ನೋಟ್ಸ್
ಅಧ್ಯಾಯ-1
ಬಾರತಕ್ಕೆ ಯೂರೋಪಿಯನ್ನರ ಆಗಮನ

ಪ್ರಮುಖ ವರ್ಷಗಳು :

1. ಕಾನ್ಸ್ ಟಾಂಟಿನೋಪಲ್‌ ನ ಪಥನ : 1453
2. ಭಾರತಕ್ಕೆ ಜಲಮಾರ್ಗದ ಶೋಧ : 1498
3. ಇಂಗ್ಲೀಷ್‌ ಈಸ್ಟ್‌ ಇಂಡಿಯಾ ಕಂಪನಿ : 1600
4. ಡಚ್‌ ಈಸ್ಟ್‌ ಇಂಡಿಯಾ ಕಂಪನಿ : 1602
5. ಫ್ರೆಂಚ್‌ ಈಸ್ಟ್‌ ಇಂಡಿಯಾ ಕಂಪನಿ : 1664
6. ಪ್ಲಾಸಿ ಕದನ : 1757
7. ಬಕ್ಸಾರ್‌ ಕದನ : 1764

1. 1453ರ ನಂತರ ಕಾನ್‌ ಸ್ಟಾಂಟಿನೋಪಲ್‌ ನಗರ ಮಾರ್ಗದ ವ್ಯಾಪಾರವು ವರ್ತಕರಿಗೆ ಲಾಭದಾಯಕವಾಗಿ ಪರಿಣಮಿಸಲಿಲ್ಲ ಏಕೆ?
ಉ: ಟರ್ಕರಿಂದ ಅಧಿಕ ತೆರಿಗೆ ವಸೂಲಿ
2. ಇಟಲಿಯ ವ್ಯಾಪಾರದ ಏಕಸ್ವಾಮ್ಯವನ್ನು ಮುರಿಯಲು ಸ್ಪೇನ್‌, ಪೋರ್ಚುಗಲ್‌, ದೇಶಗಳು ಕೈಗೊಂಡ ಕ್ರಮಗಳೇನು?
ಉ: ಹೊಸ ಸಮುದ್ರ ಮಾರ್ಗ ಹುಡುಕಲು ನಾವಿಕರಿಗೆ ಪ್ರೋತ್ಸಾಹ.
3. ಯುರೋಪಿನ ದೇಶಗಳ ರಾಜರು ಹೊಸ ಜಲಮಾರ್ಗ ಕಂಡುಹಿಡಿಯಲು ನಾವಿಕರಿಗೆ ಏಕೆ ಪ್ರೋತ್ಸಾಹ ನೀಡಿದರು?
ಉ: ಇಟಲಿಯ ವರ್ತಕರ ಏಕಸ್ವಾಮ್ಯ ಮುರಿಯಲು.
4. ಏಷ್ಯ ಮತ್ತು ಯುರೋಪ್‌ ನಡುವಿನ ವ್ಯಾಪಾರ ಮಾರ್ಗಗಳು ಹೇಗೆ ಟರ್ಕರ ನಿಯಂತ್ರಣಕ್ಕೆ ಬಂದವು?
ಉ: ಕಾನ್ಸ್‌ ಟಾಂಟಿನೋಪಲ್‌ ಪತನ.
5. ನೀಲಿ ನೀರಿನ ನೀತಿ ಎಂದರೇನು?
ಉ: ಸಮುದ್ರ ಮಾರ್ಗದ ಮೇಲೆ ವ್ಯಾಪಾರದ ಏಕಸ್ವಾಮ್ಯ ಸ್ಥಾಪಿಸಲು ನೌಕಾ ಶಕ್ತಿಯನ್ನು ಬಲಪಡಿಸುವುದು.


6. ಆಲ್ಫಾನ್ಸೋ ಡಿ ಅಲ್ಬುಕರ್ಕ ಭಾರತದಲ್ಲಿ ಪೋರ್ಚುಗೀಸ್‌ ಸಾಮ್ರಾಜ್ಯದ ಸ್ಥಾಪಕನೆಂದು ಹೇಗೆ ಪ್ರಸಿದ್ಧಿ ಪಡೆದನು?
ಉ: ಗೋವಾ ಗೆದ್ದು ರಾಜಧಾನಿಯನ್ನಾಗಿ ಮಾಡಿಕೊಂಡನು.
7. ಡಚ್ಚರು ಯುನೈಟೆಡ್‌ ಈಸ್ಟ್‌ ಇಂಡಿಯಾ ಕಂಪನಿ ಸ್ಥಾಪಿಸಲು ಕಾರಣವೇನು?
ಉ: ಪೂರ್ವ ದೇಶಗಳೊಂದಿಗೆ ವ್ಯಾಪಾರ ಮಾಡಲು.
8. ಡಚ್ಚರು ಸಾಂಬಾರ ದ್ವೀಪಗಳಿಗೆ ಮಾತ್ರ ಸೀಮಿತಗೊಂಡರು ಏಕೆ?
ಉ: ಇಂಗ್ಲೀಷರು ಮತ್ತು ಫ್ರೆಂಚರ ಪೈಪೋಟಿ ಎದುರಿಸಲಾಗದೆ.
9. ಫ್ರೆಂಚ್‌ ಗೌರ್ನರ್‌ ಡೂಪ್ಲೆಯ ಮಹಾತ್ವಾಕಾಂಕ್ಷೆ ಏನಾಗಿತ್ತು?
ಉ: ದಕ್ಷಿಣ ಭಾರತದಲ್ಲಿ ಫ್ರೆಂಚರ ಆಧಿಪತ್ಯ ಸ್ಥಾಪಿಸುವುದು.
10. ಡಚ್‌, ಇಂಗ್ಲೀಷ್‌ ಮತ್ತು ಫ್ರೆಂಚ್‌ ವ್ಯಾಪಾರಿ ಕಂಪನಿಗಳು ಭಾರತಕ್ಕೆ ಬರಲು ಪ್ರೇರಣೆಯಾದ ಅಂಶ ಯಾವುದು?
ಉ: ಪೋರ್ಚುಗೀಸರ ಯಶಸ್ವಿ ಪ್ರಯತ್ನ.


11. ಭಾರತದಲ್ಲಿ ಇಂಗ್ಲೀಷರು ಮತ್ತು ಫ್ರೆಂಚರು ಸ್ಪರ್ಧೆಗಿಳಿಯಲು ಕಾರಣವೇನು?
ಉ: ದಕ್ಷಿಣ ಭಾರತದಲ್ಲಿ ತಮ್ಮ ರಾಜಕೀಯ ಪ್ರಭಾವ ಉಳಿಸಿಕೊಳ್ಳಲು.
12. ಬಂಗಾಳದಲ್ಲಿ ಬ್ರಿಟೀಷರ ವ್ಯಾಪಾರ ಹೆಚ್ಚು ಲಾಭದಾಯಕವಾಗಲು ಕಾರಣವೇನು?
ಉ: ದಸ್ತಕ್‌ ಗಳ ಉಪಯೋಗ (ಮುಕ್ತ ವ್ಯಾಪಾರ)
13. ಬಂಗಾಳದ ನವಾಬರು ದಸ್ತಕ್‌ಗಳನ್ನು ವಿರೋಧಿಸಲು ಕಾರಣವೇನು?
ಉ: ದಸ್ತಕ್‌ ಗಳ ದುರುಪಯೋಗದಿಂದ ನವಾಬನಿಗೆ ಆರ್ಥಿಕ ನಷ್ಟ.
14. ಡುಪ್ಲೆ ಲಾಬೋರ್ಡೆನಾ ಮೇಲೆ ಕೋಪಗೊಳ್ಳಲು ಕಾರಣವೇನು?
ಉ: ಬ್ರಿಟೀಷರಿಂದ ಹಣ ಪಡೆದು ಮದ್ರಾಸ್‌ ಮರಳಿಸಿದ್ದರಿಂದ.
15. ಫ್ರೆಂಚರು ಡೂಪ್ಲೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಕಾರಣವೇನು?
ಉ: 2ನೇ ಕರ್ನಾಟಿಕ್‌ ಯುದ್ಧದಲ್ಲಿ ಬ್ರಟೀಷರಿಂದ ಸೋಲು.


16. ಪ್ಲಾಸಿ ಕದನದಲ್ಲಿ ಮೀರ್ಜಾಫರ್‌ ತಟಸ್ಥವಾಗಿ ಉಳಿಯಲು ಕಾರಣವೇನು?
ಉ: ಅವನಿಗೆ ಬ್ರಿಟೀಷರು ನವಾಬ ಮಾಡುವ ಆಮಿಷ ಒಡ್ಡಿದ್ದರಿಂದ.
17. ಬ್ರಿಟೀಷರು ಮೀರ್‌ ಜಾಫರ್‌ ಅನ್ನು ನವಾಬ ಸ್ಥಾನದಿಂದ ಕೆಳಗಿಳಿಸಲು ಕಾರಣವೇನು?
ಉ: ಅಸಮರ್ಥನೆಂಬ ಕಾರಣ.
18. ಬ್ರಿಟೀಷರು 18ನೇ ಶತಮಾನದ ದ್ವಿತೀಯಾರ್ಧದಲ್ಲಿ ಬಂಗಾಳದ ಮೇಲೆ ನಿಯಂತ್ರಣ ಸಾಧಿಸಲು ಮುಂದಾದರು ಏಕೆ?
ಉ: ಬಂಗಾಳ ಸಂಪತ್ಭರಿತ ಪ್ರಾಂತ್ಯವಾಗಿತ್ತು.
19. ಬಂಗಾಳದಲ್ಲಿ ಭಾರತೀಯ ವ್ಯಾಪಾರಿಗಳು ಬ್ರಿಟೀಷ್‌ ವಿರುದ್ಧ ನೇರ ಸ್ಪರ್ಧೆಗಿಳಿಯಲು ಪ್ರೇರೇಪಿಸಿದ ಅಂಶ ಯಾವುದು?
ಉ: ಬಂಗಾಳದ ಎಲ್ಲ ವ್ಯಾಪಾರ ಸುಂಕಮುಕ್ತ ಎಂದು ಘೋಷಿಸಿದ್ದು.
20. ಮೀರ್‌ ಜಾಫರನು ಕಂಪನಿಗೆ 17 ಕೋಟಿ 70 ಲಕ್ಷ ಕಾಣಿಕೆ ಕೊಡಲು ಕಾರಣವೇನು?
ಉ: ಸಿರಾಜನು ಕಲ್ಕತ್ತದ ಮೇಲೆ ನಡೆಸಿದ ಆಕ್ರಮಣಕ್ಕೆ ಪರಿಹಾರ.


21. ಫ್ರೆಂಚರು ಹೈದರಾಬಾದ್‌ ನಿಜಾಮನ ಆಸ್ಥಾನದಲ್ಲಿ ಬುಸ್ಸಿ ಎಂಬ ಅಧಿಕಾರಿಯನ್ನು ನೇಮಿಸಲು ಕಾರಣವೇನು?
ಉ: ನಿಜಾಮನ ರಕ್ಷಣೆಗೆ.
22. ಮೀರ್‌ ಖಾಸೀಮನು ಬ್ರಿಟೀಷರ ವಿರುದ್ಧ ಹೇಗೆ ಸಂಘಟನಾತ್ಮಕ ಹೋರಾಟಕ್ಕೆ ಮುಂದಾದನು?
ಉ: ಎರಡನೆಯ ಷಾ ಆಲಂ, ಷೂಜಾ ಉದ್ದೌಲ್‌ ರೊಂದಿಗೆ ಒಪ್ಪಂದ ಮಾಡಿಕೊಂಡನು.
23. ಯೂರೋಪಿನ ವ್ಯಾಪಾರದ ಹೆಬ್ಬಾಗಿಲು : 
ಕಾನ್ಸ್‌ಟಾಂಟಿನೋಪಲ್‌ ನಗರ.
24. ಕಾನ್ಸ್‌ಟಾಂಟಿನೋಪಲ್‌ ವಶಪಡಿಸಿಕೊಂಡವರು : 
ಟರ್ಕರು
25. ಭಾರತಕ್ಕೆ ಜಲಮಾರ್ಗ ಕಂಡುಹಿಡಿದವನು : 
ವಾಸ್ಕೋಡಿಗಾಮ


26. ವಾಸ್ಕೋಡಿಗಾಮ ಭಾರತಕ್ಕೆ ಬಂದು ತಲುಪಿದ ಸ್ಥಳ : 
ಕಾಪ್ಪಡ್‌
27. ಭಾರತದೊಂದಿಗೆ ಮರು ವ್ಯಾಪಾರ ಸಂಬಂಧ ಸ್ಥಾಪಿಸಿದ ಮೊದಲ ಯೂರೋಪಿಯನ್‌ : ಪೋರ್ಚುಗೀಸರು.
28. ಭಾರತದಲ್ಲಿ ಪೋರ್ಚುಗೀಸರ ಮೊದಲ ವೈಸ್‌ ರಾಯ್‌ : 
ಫ್ರಾನ್ಸಿಸ್ಕೋ ಡಿ ಆಲ್ಮೇಡಾ
29. ಸಮುದ್ರದ ಮೇಲಿನ ಆಧಿಪತ್ಯಕ್ಕಾಗಿ ಆಲ್ಮೇಡಾ ಅನುಸರಿಸಿದ ನೀತಿ : 
ನೀಲಿ ನೀರಿನ ನೀತಿ.
30. ಭಾರತದಲ್ಲಿ ಪೋರ್ಚುಗೀಸರ ಸಾಮ್ರಾಜ್ಯದ ನಿಜವಾದ ಸ್ಥಾಪಕ : 
ಅಲ್ಬುಕರ್ಕ್‌


31. ಇಂಗ್ಲೀಷರಿಗೆ ವ್ಯಾಪಾರಕ್ಕಾಗಿ ಫರ್ಮಾನ (ಅನುಮತಿ) ನೀಡಿದ ಮೊಘಲ್‌ ದೊರೆ : 
ಜಹಾಂಗೀರ್‌
32. ಭಾರತದಲ್ಲಿ ಇಂಗ್ಲೀಷರ ಮೊದಲ ವ್ಯಾಪಾರ ಕೇಂದ್ರ : 
ಸೂರತ್‌
33. ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿದ ಇಂಗ್ಲೀಷರ ರಾಯಭಾರಿ : 
ಸರ್‌ ಥಾಮಸ್‌ ರೋ
34. ಭಾರತದಲ್ಲಿ ಇಂಗ್ಲೀಷರ ಪ್ರಧಾನ ಕೇಂದ್ರ ಕಚೇರಿ : 
ಕಲ್ಕತ್ತ
35. 1ನೇ ಕರ್ನಾಟಿಕ್‌ ಯುದ್ಧ ಮುಕ್ತಾಯಗೊಳಿಸಿದ ಒಪ್ಪಂದ : 
ಏಕ್ಸ್‌ ಲಾ ಚಾಪೆಲ್‌


36. 2ನೇ ಕರ್ನಾಟಿಕ್‌ ಯುದ್ಧ ಮುಕ್ತಾಯಗೊಳಿಸಿದ ಒಪ್ಪಂದ : 
ಪಾಂಡಿಚೇರಿ
37. 3ನೇ ಕರ್ನಾಟಿಕ್‌ ಯುದ್ಧ ಮುಕ್ತಾಯಗೊಳಿಸಿದ ಒಪ್ಪಂದ : 
ಪ್ಯಾರಿಸ್‌
38. ಬ್ರಿಟೀಷರಿಗೆ ಬಂಗಾಳದಲ್ಲಿ ವ್ಯಾಪಾರಕ್ಕಾಗಿ ಪರವಾನಿಗೆ ನೀಡಿದ ದೊರೆ : 
ಫರೂಕ್‌ ಸಿಯಾರ್.‌

39. ಬಕ್ಸಾರ್‌ ಕದನದಲ್ಲಿ ಇಂಗ್ಲೀಷ್‌ ಸೇನೆಯ ನೇತೃತ್ವ ವಹಿಸಿದವನು :

ಹೆಕ್ಟರ್‌ ಮನ್ರೋ

40. ಏಷ್ಯಾ ದೇಶಗಳ ಮೇಲೆ ವ್ಯಾಪಾರದ ಏಕಸ್ವಾಮ್ಯ ಸಾಧಿಸಿದವರು : 

ಅರಬ್‌ ವರ್ತಕರು.



41. ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರು :  
ಉ: ಪೋರ್ಚುಗೀಸರು,ಡಚ್ಚರು, ಇಂಗ್ಲೀಷರು, ಫ್ರೆಂಚರು.
42. ಪೋರ್ಚುಗೀಸರ ವ್ಯಾಪಾರ ಕೇಂದ್ರಗಳು : 
ಗೋವಾ, ಡಿಯು, ಡಾಮನ್‌, ಸಾಲ್ಸೆಟ್‌, ಬೆಸ್ಸಿನ್.‌
43. ಡಚ್ಚರ ವ್ಯಾಪಾರ ಕೇಂದ್ರಗಳು : 
ಸೂರತ್‌, ಬ್ರೋಚ್‌, ಕ್ಯಾಂಬೆ, ಮಚಲಿಪಟ್ಟಣ, ಚಿನ್ಸೂರ್‌, ನಾಗಪಟ್ಟಣ.

44. ಫ್ರೆಂಚರ ವ್ಯಾಪಾರ ಕೇಂದ್ರಗಳು : ಮಚಲಿಪಟ್ಟಣ, 

ಚಂದ್ರನಗರ, ಮಾಹೆ, ಕಾರೈಕಲ್ಲು, ಕಾಸಿಂಬಜಾರ್‌, ಬಾಲ್‌ ಸೋರ್.‌

45. ಕೇರಳದ ರಾಜಕೀಯದಲ್ಲಿ ಅತ್ಯಂತ ಮಹತ್ವದ ಸಂಸ್ಥಾನವೆಂದರೆ :  
ವೈನಾಡ್‌ ಸಂಸ್ಥಾನ.


46. ಮಾರ್ತಾಂಡ ವರ್ಮ ಯಾರು?
ಉ: ವೈನಾಡಿನ ರಾಜ.

47. “ನಾವೆಂದು ಮೆಣಸಿನ ವ್ಯಾಪಾರದ ಹಕ್ಕನ್ನು ಪರಕೀಯರಿಗೆ ಬಿಟ್ಟುಕೊಡೆವು” ಎಂದವರು : 

ರಾಜಾ ಮಾರ್ತಾಂಡ ವರ್ಮ.

48. 1741 ರಲ್ಲಿ ಡಚ್ಚರು ಮಾರ್ತಾಂಡ ವರ್ಮನ ಮೇಲೆ ಯುದ್ಧ ಸಾರಿದರು.



49. ಮಧ್ಯಕಾಲದಲ್ಲಿ ಭಾರತ & ಯುರೋಪ್‌ ನಡುವೆ ವ್ಯಾಪಾರ ಹೇಗೆ ನಡೆಯುತ್ತಿತ್ತು? 
ಅಥವಾ 
ಕಾನ್ಸ್‌ಟಾಂಟಿನೋಪಲ್‌ ನಗರವು ಯೂರೋಪಿನ ವ್ಯಾಪಾರದ ಹೆಬ್ಬಾಗಿಲೆಂದೆ ಪರಿಗಣಿಸಲ್ಪಟ್ಟಿತ್ತು. ಸಮರ್ಥಿಸಿ?

ಉ: 1. ಸಾಂಬಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಇತ್ತು.

2. ಅರಬ್ಬ ವರ್ತಕರಿಂದ ಕಾನ್ಸ್‌ಟಾಂಟಿನೋಪಲ್‌ ಗೆ ವಸ್ತುಗಳ ಪೂರೈಕೆ.

3. ಇಟಲಿಯ ವರ್ತಕರು ಅವನ್ನು ಯೂರೋಪಿನ ದೇಶಗಳಿಗೆ ಮಾರುತ್ತಿದ್ದರು.

4. ಅದು ಅಂತರರಾಷ್ಟ್ರೀಯ ಸರಕು ವಿನಿಮಯ ಕೇಂದ್ರವಾಗಿತ್ತು.



50. ಭಾರತಕ್ಕೆ ಜಲಮಾರ್ಗ ಕಂಡುಹಿಡಿಯಲು ಅಂಶಗಳನ್ನು ತಿಳಿಸಿರಿ. 
ಅಥವಾ 
ಕಾನ್ಸ್‌ಟಾಂಟಿನೋಪಲ್‌ ಪತನದ ಪರಿಣಾಮಗಳನ್ನು ತಿಳಿಸಿ 
ಅಥವಾ 
ಕಾನ್ಸ್‌ಟಾಂಟಿನೋಪಲ್‌ ಪತನ ಭಾರತಕ್ಕೆ ಹೊಸ ಜಲಮಾರ್ಗದ ಅನ್ವೇಷಣೆಗೆ ದಾರಿ ಮಾಡಿತು ಹೇಗೆ? ವಿವರಿಸಿ.

ಉ: 1. ಕಾನ್ಸ್‌ಟಾಂಟಿನೋಪಲ್‌ ಪತನ

2. ವ್ಯಾಪಾರ ಮಾರ್ಗ ಟರ್ಕರ ನಿಯಂತ್ರಣಕ್ಕೆ ಬಂದವು.

3. ಟರ್ಕರಿಂದ ವ್ಯಾಪಾರದ ಮೇಲೆ ಅಧಿಕ ತೆರಿಗೆ.

4. ಯುರೋಪಿನ ರಾಜರು ನಾವಿಕರನ್ನು ಪ್ರೋತ್ಸಾಹಿಸಿದರು.

5. ಹೊಸ ವೈಜ್ಞಾನಿಕ ಉಪಕರಣಗಳು ನೆರವಿಗೆ ಬಂದವು.



51. ಮಾರ್ತಾಂಡ ವರ್ಮನು ಡಚ್ಚರನ್ನು ಹೇಗೆ ನಿಯಂತ್ರಿಸಿದನು?

ಉ: 1. 50 ಸಾವಿರ ಸೈನಿಕರ ಸೈನ್ಯ ಕಟ್ಟಿದನು.

2. 24ನೇ ವಯಸ್ಸಿನಲ್ಲಿ ಅಧಿಕಾರ ಪ್ರಾಪ್ತಿ.

3. ಮೆಣಸು ಬೆಳೆಯುವ ಪ್ರದೇಶ ವಶಪಡಿಸಿಕೊಂಡನು.

4. ಡಚ್ಚರ ವಿರುದ್ಧ ರಣತಂತ್ರ ರಚಿಸಿದನು.

5. ಸ್ಥಳೀಯ ಸಂಸ್ಥಾನಿಕರನ್ನು ಡಚ್ಚರ ವಿರುದ್ಧ ನಿಲ್ಲಿಸಿದನು.

6. ನೆಡುಮಂಗಡ & ಕೊಟ್ಟಾರಕರ ವಶಪಡಿಸಿಕೊಂಡನು.

7. ಡಚ್ಚರನ್ನು ತಿರುವಾಂಕೂರಿನಲ್ಲಿ ಸೋಲಿಸಿದನು.

8. ಡಚ್ಚರಿಂದ ಬಂದರುಗಳನ್ನು ಮರಳಿ ಪಡೆದನು.



52. ಭಾರತದಲ್ಲಿ ಇಂಗ್ಲೀಷ್‌ ಈಸ್ಟ್‌ ಇಂಡಿಯಾ ಕಂಪನಿ ಹೇಗೆ ಸ್ಥಾಪನೆಯಾಯಿತು?

ಉ: 1. ರಾಣಿ ಎಲಿಜಬೆತ್‌ ನಿಂದ ಪರವಾನಿಗೆ.

2. ಜಹಾಂಗೀರನಿಂದ ಫರ್ಮಾನು ನೀಡಿಕೆ.

3. ಸರ್‌ ಥಾಮಸ್‌ ರೋನಿಗೆ ಜಹಾಂಗೀರನಿಂದ ಕಂಪನಿ ಸ್ಥಾಪಿಸಲು ಅನುಮತಿ.

4. ಆಗ್ರಾ, ಅಹಮ್ಮದಾಬಾದ್‌ & ಬ್ರೋಚ್ ಗಳಲ್ಲಿ ಕಂಪನಿ ಸ್ಥಾಪನೆ.

5. ಮದ್ರಾಸ್‌ ನಲ್ಲಿ ಕೋಟೆ ನಿರ್ಮಾಣ.

6. 2ನೇ ಚಾರ್ಲ್ಸ್‌ ನಿಂದ ಬಾಂಬೆ ಸ್ವೀಕಾರ.

7. ಬಂಗಾಳದ ರಾಜ್ಯಪಾಲನಿಂದ ಸುತನುತಿ, ಕಲ್ಕತ್ತ, ಗೋವಿಂದಪುರ ಖರೀದಿ.



53. 1ನೇ ಕರ್ನಾಟಿಕ್‌ ಯುದ್ಧ ವಿವರಿಸಿ?

ಉ: 1. ಲಾಬೇರ್ಡೆನಾ ಮದ್ರಾಸ ವಶಪಡಿಸಿಕೊಂಡನು.

2. ಬ್ರಿಟೀಷರು ಅನ್ವರುದ್ದೀನನ ಸಹಾಯ ಕೇಳಿದರು.

3. ಲಾಬೋರ್ಡೆ ನಾ ಬ್ರಿಟೀಷರಿಗೆ ಮದ್ರಾಸ ಮರಳಿಸಿದನು.

4. ಡುಪ್ಲೆ ಮದ್ರಾಸ ಪಡೆಯಲು ಪ್ರಯತ್ನಿಸಿ ವಿಫಲನಾದನು.

5. ಏಕ್ಸ್‌ ಲಾ ಚಾಪೆಲ್‌ ಒಪ್ಪಂದದಿಂದ ಯುದ್ಧ ಅಂತ್ಯ.



54. 2ನೇ ಕಾರ್ನಾಟಿಕ್‌ ಯುದ್ಧವನ್ನು ವಿವರಿಸಿ?

ಉ: 1. ಸಲಾಬತ್‌ ಜಂಗ್‌ ಹೈದರಾಬಾದಿನ ನಿಜಾಮನಾಗಿ ನೇಮಕ.

2. ಅವನ ರಕ್ಷಣೆಗೆ ಬುಸ್ಸಿ ಅಧಿಕಾರಿಯ ನೇಮಕ.

3. ಚಂದಾಸಾಹೇಬ್‌ ಕರ್ನಾಟಿಕ್‌ನ ನವಾಬನಾದನು.

4. ರಾಬರ್ಟ್‌ ಕ್ಲೈವ್‌ ನಿಂದ ಆರ್ಕಾಟಿನ ಮೇಲೆ ಆಕ್ರಮಣ.

5. ಫ್ರೆಂಚರು & ಚಂದಾಸಾಹೇಬನ ಸೋಲು.

6. ಮಹಮ್ಮದ್‌ ಅಲಿ ಕರ್ನಾಟಿಕ್‌ನ ನವಾಬನಾಗಿ ನೇಮಕ.

7. ಪಾಂಡಿಚೇರಿ ಒಪ್ಪಂದದಿಂದ ಯುದ್ಧದ ಮುಕ್ತಾಯ.


55. 2ನೇ ಕರ್ನಾಟಿಕ್‌ ಯುದ್ಧದ ಪರಿಣಾಮ ತಿಳಿಸಿ?

ಉ: 1. ಡುಪ್ಲೆಯನ್ನು ಫ್ರೆಂಚರು ಹಿಂದಕ್ಕೆ ಕರೆಸಿಕೊಂಡರು.

2. ಫ್ರೆಂಚರಿಗೆ ರಾಜಕೀಯ ಹಿನ್ನಡೆಯಾಯಿತು.

3. ಬ್ರಿಟೀಷರ ಪ್ರತಿಷ್ಠೆ ಹೆಚ್ಚಾಯಿತು.



56. 3ನೇ ಕರ್ನಾಟಿಕ್‌ ಯುದ್ಧಕ್ಕೆ ಕಾರಣ & ಅದರ ಪರಿಣಾಮ ತಿಳಿಸಿ?

ಕಾರಣ : 1. ಕೌಂಟ್‌ ಡಿ ಲ್ಯಾಲಿ ವಾಂಡಿವಷ್‌ ಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು.

2. ವಾಂಡಿವಾಷ್‌ ಕದನದಲ್ಲಿ ಸರ್‌ ಐಯರ್‌ ಕೂಟ್‌ ಫ್ರೆಂಚರನ್ನು ಸೋಲಿಸಿದನು.

3. ಬುಸ್ಸಿಯನ್ನು ಸೆರೆಹಿಡಿಯಲಾಯಿತು.

4. ಲ್ಯಾಲೆಯು ಶರಣಾದನು.

ಪರಿಣಾಮ : 1. ಫೆಂಚರು ತಮ್ಮ ನೆಲೆ ಕಳೆದುಕೊಂಡರು.

2. ಪ್ಯಾರಿಸ್‌ ಒಪ್ಪಂದದಿಂದ ಯುದ್ಧ ಅಂತ್ಯ.

3. ಪಾಂಡಿಚೇರಿ ಫ್ರೆಂಚರಿಗೆ ಮರಳಿಸಲಾಯಿತು.

4. ಫ್ರೆಂಚರು ದಕ್ಷಿಣ ಭಾರತದಲ್ಲಿ ಮೂಲೆಗುಂಪಾದರು.



57. ಪ್ಲಾಸಿ ಕದನಕ್ಕೆ ಕಾರಣ & ಪರಿಣಾಮ ತಿಳಿಸಿ?

ಕಾರಣ : 1. ದಸ್ತಕ್‌ ಗಳ ದುರುಪಯೋಗ.

2. ಅನುಮತಿ ಇಲ್ಲದೆ ಕೋಟೆಯ ದುರಸ್ಥಿ

3. ಕಪ್ಪು ಕೋಣೆ ದುರಂತ.

ಪರಿಣಾಮ : 1. ಭಾರತೀಯರ ದೌರ್ಬಲ್ಯದ ಪ್ರದರ್ಶನ.

2. ಮಿರ್‌ ಜಾಫರ್‌ ಬಂಗಾಳದ ನವಾಬನಾದನು.

3. ಕಂಪನಿಗೆ ವ್ಯಾಪಾರ ನಡೆಸುವ ಹಕ್ಕು ಲಭಿಸಿತು.

4. ಮಿರ್‌ ಜಾಫರ್‌ ಕಂಪನಿಗೆ 17 ಕೋಟಿ 70 ಲಕ್ಷ ನೀಡಿದನು.



58. ಬಕ್ಸಾರ್‌ ಕದನದ ಪರಿಣಾಮ ತಿಳಿಸಿ?

ಉ: 1. ಕಂಪನಿಗೆ ದಿವಾನಿ ಹಕ್ಕು ದೊರೆಯಿತು.

2. ಷಾ ಆಲಂ ಕಂಪನಿಗೆ 26 ಲಕ್ಷ & ಬಂಗಾಳದ ಮೇಲಿನ ಹಕ್ಕು ಬಿಟ್ಟುಕೊಟ್ಟನು.

3. ಷೂಜಾ ಉದ್ದೌಲ್‌ ನಿಂದ ಕಂಪನಿಗೆ 30 ಲಕ್ಷ ಯುದ್ಧ ಪರಿಹಾರ ದೊರಕಿತು.

4. ಮಿರ್‌ ಜಾಫರ್‌ ನ ಮರಣದ ನಂತರ ಬಂಗಾಳ ಕಂಪನಿಯ ಆಡಳಿತಕ್ಕೆ ಬಂದಿತು.


59. ಬಕ್ಸಾರ್‌ ಕದನಕ್ಕೆ ಕಾರಣಗಳೇನು? ಅಥವಾ ಬ್ರಿಟೀಷರು ಮಿರ್ ಖಾಸಿಮನ್ನು ಬಂಗಾಳದ ಹುದ್ದೆಯಿಂದ ಪದಚ್ಯುತಿಗೊಳಿಸಿದರು ಏಕೆ?

ಉ: 1. ಮಿರ್‌ ಖಾಸಿಮನಿಂದ ಸ್ವಾತಂತ್ರ್ಯ ಘೋಷಣೆ.

2. ಸುಂಕ ಮುಕ್ತ ವ್ಯಾಪಾರ ಘೋಷಣೆ.

3. ಇದರಿಂದ ಬ್ರಿಟೀಷರ ವ್ಯಾಪಾರಕ್ಕೆ ಧಕ್ಕೆ.

4. ಮಿರ್‌ ಜಾಫರ್‌ ನನ್ನು ಬಂಗಾಳದ ನವಾಬನಾಗಿ ನೇಮಿಸಿದ್ದು.



60. ರಾಬರ್ಟ್‌ ಕ್ಲೈವ್‌ ಬಂಗಾಳದ ನವಾಬನ ವಿರುದ್ಧ ಹೇಗೆ ಜಯಗಳಿಸಿದನು?

ಉ: 1. ನವಾಬನ ಶತ್ರುಗಳನ್ನು ತನ್ನತ್ತ ಸೆಳೆದನು.

2. ಮಿರ್‌ ಜಾಫರ್‌ ಅನ್ನು ಆಮಿಷವೊಡ್ಡಿ ತಟಸ್ಥನಾಗಿಸಿದನು.

3. ಬಂಗಾಳದ ಶ್ರೀಮಂತರನ್ನು ತನ್ನತ್ತ ಸೆಳೆದನು.

4. 1757ರಲ್ಲಿ ಪ್ಲಾಸಿ ಕದನದಲ್ಲಿ ಸಿರಾಜ್‌ ನನ್ನು ಸೋಲಿಸಿದನು.


61. ಬ್ರಿಟೀಷರು ಬಾಂಬೆ, ಮದ್ರಾಸ್‌ & ಕಲ್ಕತ್ತಗಳನ್ನು ಹೇಗೆ ತಮ್ಮ ಆಡಳಿತ ಕೇಂದ್ರಗಳನ್ನಾಗಿಸಿಕೊಂಡರು?

ಉ: 1. ಚಂದ್ರಗಿರಿಯ ರಾಜನಿಂದ ಮದ್ರಾಸ್‌ ಪಡೆದುಕೊಂಡರು.

2. 2ನೇ ಚಾರ್ಲ್ಸ್‌ ನಿಂದ ಬಾಂಬೆಯನ್ನು ಪಡೆದರು.

3. ಬಂಗಾಳದ ರಾಜ್ಯಪಾಲನಿಂದ ಕಲ್ಕತ್ತವನ್ನು ಪಡೆದರು.

4. 17ನೇ ಶತಮಾನದ ಅಂತ್ಯದ ವೇಳೆಗೆ ಅವುಗಳನ್ನು ತಮ್ಮ ಪ್ರೆಸಿಡೆನ್ಸಿಗಳಾಗಿಸಿದರು.

62. ದ್ವಿ ಸರ್ಕಾರ ಪದ್ಧತಿ ಎಂದರೇನು? ಯಾರು ಜಾರಿಗೆ ತಂದರು?

ಉ: 1. ಭೂಕಂದಾಯ ವಸೂಲಿ ಮಾಡುವ ಹಕ್ಕು ಬ್ರಿಟಿಷರು ಪಡೆದರು.

2. ದೈನಂದಿನ ಆಡಳಿತ ನಿರ್ವಹಣೆಯ ಕಾರ್ಯ ನವಾಬನು ಪಡೆದನು.

3. ರಾಬರ್ಟ್‌ ಕ್ಲೈವ್‌ ಜಾರಿಗೆ ತಂದನು.

*****

ಹೊಸ ಪಠ್ಯಪುಸ್ತಕದ ಎಲ್ಲಾ 33 ಅಧ್ಯಾಯಗಳು



Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon