ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ನೋಟ್ಸ್ | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ನೋಟ್ಸ್ | SSLC Social Science New Text Book Notes Chapter 3

SSLC Social Science Notes | New |
Scoring Package | Passing Package |
ಅಧ್ಯಾಯ -3
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು



1. ಬ್ರಿಟೀಷರು ದೇಶೀಯ ರಾಜರನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳಲು ಅನುಸರಿಸಿದ ನೀತಿ ಯಾವುದು ?

ಒಡೆದು ಆಳುವ ನೀತಿ.

2. ನಾಗರಿಕ ಸೇವೆಯನ್ನು ಜಾರಿಗೊಳಿಸಿದ ಬ್ರಿಟೀಷ್‌ ಅಧಿಕಾರಿ ಯಾರು ?

ಲಾರ್ಡ್‌ ಕಾರ್ನ್‌ ವಾಲಿಸ್‌

3. ಕಲ್ಕತ್ತದಲ್ಲಿ ಪೊರ್ಟ್‌ ವಿಲಿಯಂ ಕಾಲೇಜು ಸ್ಥಾಪಿಸಿದವನು ಯಾರು ?

ಲಾರ್ಡ್‌ ಕಾರ್ನ್‌ ವಾಲಿಸ್‌

4. ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ ಎಂದವನು ಯಾರು ?

ಲಾರ್ಡ್‌ ಕಾರ್ನ್‌ ವಾಲಿಸ್‌.

5. ಪೋಲೀಸ್‌ ವಿಭಾಗ ಸ್ಥಾಪಿಸಿದವನು ಯಾರು ?

ಲಾರ್ಡ್‌ ಕಾರ್ನ್‌ ವಾಲಿಸ್‌ (1861)

ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ:

1)ಖಾಯಂ ಜಮೀನ್ದಾರಿ ಪದ್ಧತಿ : ಲಾರ್ಡ್‌ ಕಾರ್ನ್‌ ವಾಲಿಸ್‌

2)ರೈತವಾರಿ ಪದ್ಧತಿ : ಅಲೆಗ್ಸಾಂಡರ್‌ ರೀಡ್‌ (1792)

3)ಮಹಲ್ವಾರಿ ಪದ್ಧತಿ : ಆರ್.ಎಂ.ಬರ್ಡ್‌ & ಜೇಮ್ಸ್‌ ಥಾಮ್ಸನ್‌

7. ಮಹಲ್‌ ಎಂದರೆ ____

ತಾಲ್ಲೋಕು

8. ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು ಎಂದವರು ಯಾರು ?

ಚಾರ್ಲ್ಸ್ ಮೆಟ್‌ ಕಾಫ್‌

9. ರೈತವಾರಿ ಪದ್ಧತಿ ಮದ್ರಾಸ್‌ & ಮೈಸೂರಿನಲ್ಲಿ ಜಾರಿಗೊಳಿಸಿದವನು ಯಾರು ?

ಥಾಮಸ್‌ ಮನ್ರೋ

10. ಬ್ರಿಟೀಷ್‌ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಒತ್ತಾಯಿಸಿದವನು ಯಾರು ?

ಚಾರ್ಲ್ಸ್‌ ಗ್ರಾಂಟ್‌

ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ:

11. ದಿವಾನಿ ಅದಾಲತ್‌ ಎಂಬ ನಾಗರಿಕ ನ್ಯಾಯಾಲಯ ಸ್ಥಾಪಿಸಿದವನು ಯಾರು ?

ವಾರನ್‌ ಹೇಸ್ಟಿಂಗ್ಸ್‌

12. ಎಸ್.ಪಿ. ಹುದ್ದೆಯನ್ನು ಸೃಷ್ಠಿಸಿದವನು ಯಾರು ?

ಕಾರ್ನ್‌ ವಾಲಿಸ್‌

13. ಖಾಯಂ ಜಮಿನ್ದಾರಿ  ಪದ್ಧತಿ ಬಂಗಾಳ & ಬಿಹಾರ ಪ್ರಾಂತ್ಯಗಳಲ್ಲಿ ಜಾರಿಗೆ ಬಂದದ್ದು ಯಾವಾಗ ?

1793

14. ಈಸ್ಟ್‌ ಇಂಡಿಯಾ ಕಂಪನಿಯ ಮೂಲಕ ದೇಶದಲ್ಲಿ ಬ್ರಿಟೀಷರು ರೂಪಿಸಿದ ನ್ಯಾಯಾಂಗ ವ್ಯವಸ್ಥೆ ವಿಶ್ಲೇಷಿಸಿ 

ಉ: 1. ಪ್ರತಿ ಜಿಲ್ಲೆಯಲ್ಲಿ 2 ಬಗೆಯ ನ್ಯಾಯಾಲಯ.

2. ದಿವಾನಿ ಅದಾಲತ್‌ : ನಾಗರಿಕ ನ್ಯಾಯಾಲಯ

3. ಫೌಜದಾರಿ ಅದಾಲತ್‌ : ಅಪರಾಧ ನ್ಯಾಯಾಲಯ

4. ಹಿಂದೂಗಳಿಗೆ ಶಾಸ್ತ್ರ, ಗ್ರಂಥಗಳ ಪ್ರಕಾರ ನ್ಯಾಯದಾನ

5. ಮುಸ್ಲಿಮರಿಗೆ ಷ಼ರಿಯತ್‌ ಕಾನೂನು

6. ಅಪರಾಧ ಪ್ರಕರಣಗಳಲ್ಲಿ ಎಲ್ಲರಿಗೂ ಇಸ್ಲಾಂ ಕಾನೂನು ಅನ್ವಯ ವಿಚಾರಣೆ.

7. ಅಪರಾಧ ನ್ಯಾಯಾಲಯಗಳ ಮೇಲ್ವಿಚಾರಣೆ ಖಾಜಿಗಳದಾಗಿತ್ತು.


15. ಬ್ರಿಟೀಷರ ಕಾಲದಲ್ಲಿ ಪೋಲೀಸ್‌ ವ್ಯವಸ್ಥೆಯಲ್ಲಿ ತಂದಂತಹ ಸುಧಾರಣೆಗಳಾವುವು?

ಉ: 1. ಪೋಲೀಸ್‌ ವಿಭಾಗ ಅಸ್ತಿತ್ವಕ್ಕೆ

2. ಎಸ್.ಪಿ. ಹುದ್ದೆಯ ಸೃಷ್ಠಿ

3. ಪ್ರತಿ ಜಿಲ್ಲೆ ಠಾಣೆಗಳಾಗಿ ವಿಭಜನೆ

4. ಹಳ್ಳಿಯ ಮೇಲ್ವಿಚಾರಣೆಗೆ ಚೌಕಿದಾರ್‌

5. 1861 : ಪೋಲೀಸ್‌ ಕಾಯ್ದೆಯ ಜಾರಿ

6. ಪೋಲೀಸ್‌ ಅಧಿಕಾರಿಗಳು ಮ್ಯಾಜಿಸ್ಟ್ರೇಟ್‌ ಅಧೀನಕ್ಕೆ ಒಳಪಟ್ಟರು.


16. ಖಾಯಂ ಜಮಿನ್ದಾರಿ ಪದ್ಧತಿ ರೈತರನ್ನು “ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ ಸಾಲದಲ್ಲೇ ಸಾಯುವಂತೆ ಮಾಡಿತು” ಹೇಗೆ?

ಉ: 1. ಜಮಿನ್ದಾರ ಭೂಮಿಯ ಮಾಲಿಕನಾದ.

2. ಈ ಪದ್ಧತಿಯಿಂದ ಭೂಮಾಲಿಕನಿಗೆ ಲಾಭ.

3. ಜಮಿನ್ದಾರ ನಿಗದಿತ ಮೊತ್ತಕ್ಕಿಂತ ಅಧಿಕ ವಸೂಲಿ ಮಾಡುತ್ತಿದ್ದ.

4. ಕಂದಾಯ ಸಲ್ಲಿಸದ ರೈತ ಭೂಮಿಯ ಒಡೆತನ ಕಳೆದುಕೊಳ್ಳುತ್ತಿದ್ದ.

5. ರೈತರು ಶೋಷಣೆಗೆ ಒಳಗಾದರು.

6. ಬ್ರಿಟೀಷರು ತಮ್ಮ ಹಿತಕ್ಕಾಗಿ ಜಮಿನ್ದಾರಿ ವರ್ಗ ಸೃಷ್ಠಿಸಿದರು.

7. ಅತಿವೃಷ್ಠಿ, ಅನಾವೃಷ್ಠಿ ಸಮಯದಲ್ಲೂ ಕಂದಾಯ ಸಲ್ಲಿಸದ ರೈತ ಒಡೆತನ ಕಳೆದುಕೊಳ್ಳುತ್ತಿದ್ದ.


17. ರೈತವಾರಿ ಪದ್ಧತಿಯು ಒಳಗೊಂಡ ಪ್ರಮುಖ ಅಂಶಗಳಾವುವು?

ಉ: 1. ರೈತ & ಸರ್ಕಾರದ ನಡುವೆ ನೇರ ಸಂಪರ್ಕ.

2. ಉಳುವವನೇ ಭೂಮಿಯ ಒಡೆಯ.

3. ಒಟ್ಟು ಉತ್ಪನ್ನದಲ್ಲಿ ಶೇ.50 ರಷ್ಟು ಪಾವತಿ.

4. ಕಂದಾಯ ಮಿತಿ 30 ವರ್ಷ.

5. ಭೂಕಂದಾಯ ಅಧಿಕಾರಿಗಳಿಂದ ರೈತರ ಶೋಷಣೆ.

6. ಅಧಿಕ ಸಾಲದಿಂದ ರೈತರು ಮರುಪಾವತಿ ಮಾಡಲಾಗದೆ ಭೂಮಿ ಮಾರುವಂತಾಯಿತು.


18. ಬ್ರಿಟೀಷ್‌ ಕಂದಾಯ ಪದ್ಧತಿಯ ಪರಿಣಾಮಗಳಾವುವು? 

ಅಥವಾ ಬ್ರಿಟೀಷ್‌ ಕಂದಾಯ ನೀತಿಯಿಂದ ಭಾರತೀಯರ ಮೇಲಾದ ಪರಿಣಾಮ ತಿಳಿಸಿ?

ಉ: 1. ಜಮಿನ್ದಾರಿ ವರ್ಗದ ಸೃಷ್ಠಿ

2. ಜಮಿನ್ದಾರರಿಂದ ರೈತರ ಶೋಷಣೆ

3. ಭೂಮಿ ಮಾರಾಟದ ವಸ್ತುವಾಯಿತು.

4. ಕೃಷಿಕ್ಷೇತ್ರ ವಾಣಿಜ್ಯೀಕರಣಗೊಂಡಿತು.

5. ಹಣದ ಲೇವಾದೇವಿಗಾರರು ಬಲಿಷ್ಠರಾದರು.

6. ಅನೇಕರು ಕಂದಾಯ ಸಲ್ಲಿಸುವ ಸಲುವಾಗಿ ಭೂಮಿಯ ಪರಭಾರೆ ಮಾಡಿದರು.


19. ಬ್ರಿಟೀಷ್‌ ಶಿಕ್ಷಣ ಪದ್ಧತಿಯಿಂದ ಉಂಟಾದ ಪರಿಣಾಮಗಳನ್ನು ಪಟ್ಟಿ ಮಾಡಿ? 

ಅಥವಾ ಭಾರತೀಯರ ಮೇಲೆ ಬ್ರಿಟೀಷ್‌ ಶಿಕ್ಷಣ ಪದ್ಧತಿಯು ಬೀರಿದ ಪರಿಣಾಮ ತಿಳಿಸಿ? 

ಅಥವಾ ಬ್ರಿಟೀಷ್‌  ಶಿಕ್ಷಣವು ಭಾರತದಲ್ಲಿ ಹೊಸ ತಲೆಮಾರನ್ನು ಸೃಷ್ಠಿಸಿತು ಹೇಗೆ?

ಉ: 1. ಭಾರತೀಯರಲ್ಲಿ ರಾಷ್ಟ್ರೀಯವಾದಿ ದೃಷ್ಟಿಕೋನದ ಬೆಳವಣಿಗೆ

2. ಸ್ಥಳೀಯ ಭಾಷೆ & ಸಾಹಿತ್ಯ ರಚನೆ

3. ವೃತ್ತ ಪತ್ರಿಕೆಗಳ ಬೆಳವಣಿಗೆ

4. ಸಾಮಾಜಿಕ & ಧಾರ್ಮಿಕ ಸುಧಾರಣಾ ಚಳುವಳಿ

5. ಆಲೋಚನಾ ಕ್ರಮದಲ್ಲಿ ನಾವಿನ್ಯತೆ

6. ಸ್ವಾತಂತ್ರ್ಯ ಚಳುವಳಿಗೆ ನಾಂದಿ

7. ಸಾಂಸ್ಕೃತಿಕ ಪರಂಪರೆಯ ಅರಿವು


20. ರೆಗ್ಯುಲೇಟಿಂಗ್‌ ಕಾಯ್ದೆ ಹೊಂದಿದ ನಿಬಂಧನೆಗಳಾವುವು?

ಉ: 1. ಬಂಗಾಳದ ಪ್ರೆಸಿಡೆನ್ಸಿಯ ಅಧಿಕಾರ ವಿಸ್ತರಣೆ

2. ಬಂಗಾಳದ ಗವರ್ನರ್‌ ಎಲ್ಲ ಪ್ರೆಸಿಡೆನ್ಸಿಗಳ ಗವರ್ನರ್‌ ಜನರಲ್‌

3. ಗವರ್ನರ್‌ ಜನರಲ್‌ ಗೆ ಪ್ರೆಸಿಡೆನ್ಸಿಗಳಿಗೆ ನಿರ್ದೇಶಿಸುವ ನಿಯಂತ್ರಿಸುವ ಅಧಿಕಾರ

4. ಕಲ್ಕತ್ತದಲ್ಲಿ ಸುಪ್ರೀಂಕೋರ್ಟ್‌ ಸ್ಥಾಪನೆ

5. ಅನುಮತಿ ಇಲ್ಲದೆ ಶಾಂತಿ & ಯುದ್ಧ ಘೋಷಿಸುವಂತಿಲ್ಲ


21. 1858ರ ಭಾರತ ಸರ್ಕಾರದ ಕಾಯ್ದೆಯ ಪ್ರಮುಖ ಅಂಶಗಳು ಯಾವುವು?

ಉ: 1. ಕಂಪನಿ ಆಳ್ವಿಕೆ ಅಂತ್ಯ

2. ಭಾರತ ರಾಣಿಯ ಆಳ್ವಿಕೆಗೆ ಒಳಪಟ್ಟಿತ್ತು.

3. ಗವರ್ನರ್‌ ಜನರಲ್‌ ವೈಸ್ ರಾಯ್‌ ಪದನಾಮ ಹೊಂದಿದ್ದನು.

4. ಸೆಕ್ರೇಟರಿ ಆಫ್‌ ಸ್ಟೇಟ್‌ ಫಾರ್‌ ಇಂಡಿಯಾ ಸ್ಥಾನವನ್ನು ಸರ್ಕಾರ ಸೃಷ್ಠಿಸಿತು.

5. ವೈಸ್‌ರಾಯ್‌ಗೆ ನೆರವು ನೀಡಲು ಮಂಡಲಿ ಸ್ಥಾಪನೆ.


22. 1935ರ ಭಾರತ ಸರ್ಕಾರದ ಕಾಯ್ದೆ “ಭಾರತ ಸಂವಿಧಾನದ ಬುನಾದಿ” ಸಮರ್ಥಿಸಿ? 

ಅಥವಾ 1935ರ ಭಾರತ ಸರ್ಕಾರ ಕಾಯ್ದೆಯು ಭಾರತದ ಆಡಳಿತದಲ್ಲಿ ಹಲವಾರು ಬದಲಾವಣೆಗಳನ್ನು ತಂದಿತು ಹೇಗೆ?

ಉ: 1. ಅಖಿಲ ಭಾರತ ಒಕ್ಕೂಟ ರಚನೆ

2. ಕೇಂದ್ರದಲ್ಲಿ ದ್ವಿಸರ್ಕಾರ ಸ್ಥಾಪನೆ

3. ರಿಸರ್ವ್‌ ಬ್ಯಾಂಕಿನ ಸ್ಥಾಪನೆ

4. ಫೆಡರಲ್‌ ಕೋರ್ಟ್‌ ಸ್ಥಾಪನೆ

5. ಪ್ರಾಂತ್ಯಗಳಿಗೆ ಸ್ವಾಯತ್ತತೆ

6. ಪ್ರಾಂತ್ಯಗಳಲ್ಲಿ ದ್ವಿಸರ್ಕಾರ ಪದ್ಧತಿ ಜಾರಿ

ಹೊಸ ಪಠ್ಯಪುಸ್ತಕದ ಎಲ್ಲಾ 33 ಅಧ್ಯಾಯಗಳು

23. 1919ರ ಕಾಯ್ದೆಯ ಪ್ರಮುಖ ಅಂಶಗಳಾವುವು? ಅಥವಾ 1919ರ ಭಾರತ ಸರ್ಕಾರ ಕಾಯ್ದೆಯು ಭಾರತದ ಆಡಳಿತ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗೆ ಕಾರಣವಾಯಿತು ಹೇಗೆ?

ಉ: 1. ಕೇಂದ್ರದಲ್ಲಿ ದ್ವಿಸದನ ಶಾಸಕಾಂಗ

2. ಪ್ರಾಂತ್ಯಗಳಲ್ಲಿ ದ್ವಿಸರ್ಕಾರ ಪದ್ಧತಿ ಜಾರಿ

3. ಭಾರತಕ್ಕೆ ಹೈಕಮಿಷನರ್‌ ನೇಮಕ

4. ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ

5. ಕೇಂದ್ರ ಬಜೆಟ್ ನಿಂದ ಪ್ರಾಂತ್ಯಗಳ ಬಜೆಟ್‌ ಬೇರ್ಪಡೆ.

6. ಪ್ರತ್ಯೇಕ ಚುನಾವಣಾ ಮತಗಟ್ಟೆಗಳ ವಿಸ್ತರಣೆ.


24. ಬ್ರಿಟೀಷರ ಆಡಳಿತ ಕಾಲದಲ್ಲಿ ಆಧುನಿಕ ಶಿಕ್ಷಣ ಪದ್ಧತಿಯ ಬೆಳವಣಿಗೆಯನ್ನು ವಿವರಿಸಿ?

ಉ: 1. ವಾರನ್‌ ಹೇಸ್ಟಿಂಗ್ಸ್‌ ಕಲ್ಕತ್ತದಲ್ಲಿ ಮದರಸಾ ತೆರೆದನು.

2. ಬನಾರಸ್ಸಿನಲ್ಲಿ ಸಂಸ್ಕೃತ ಕಾಲೇಜು ಆರಂಭ.

3. ವಿಲಿಯಂ ಬೆಂಟಿಂಕ್‌ ಇಂಗ್ಲೀಷ್‌ ಶಿಕ್ಷಣ ಪದ್ಧತಿ ಆರಂಭಿಸಿದನು.

4. ಕಲ್ಕತ್ತ, ಬಾಂಬೆ, ಮದ್ರಾಸ್‌ ಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ.

5. ಇಂಗೀಷ್‌ ಶಿಕ್ಷಣದ ಸಾರ್ವತ್ರಿಕರಣ

6. ಹೊಸ ಶಾಲೆಗಳ ಪ್ರಾರಂಭ.

*****

ಹೊಸ ಪಠ್ಯಪುಸ್ತಕದ ಎಲ್ಲಾ 33 ಅಧ್ಯಾಯಗಳು



Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon