SSLC Social Science Chapter 5 | Samajika Dharmika Sudharana Chaluvaligelu | ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿಗಳು |

SSLC Social Science Chapter 5
ಸಾಮಾಜಿಕ & ಧಾರ್ಮಿಕ ಸುಧಾರಣಾ ಚಳುವಳಿ
10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು 2022-23ನೇ ಸಾಲಿನಿಂದ ಪರಿಷ್ಕರಣೆ ಹೊಂದಿದ್ದು. ಈ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಬರುವ 5ನೇಯ ಅಧ್ಯಾಯ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿ ಆಧ್ಯಾಯವಾಗಿದ್ದು. ಇದು ಭಾಗ ಒಂದು ಪಠ್ಯಪುಸ್ತಕಗದಲ್ಲಿ ಇತಿಹಾಸ ವಿಭಾಗದಲ್ಲಿಯ ಕೊನೆಯ ಅಧ್ಯಾಯವಾಗಿದ್ದು. ಇಲ್ಲಿ ಈ ಅಧ್ಯಾಯದ ನೋಟ್ಸ್ ಗಳನ್ನು ನೋಡಿಕೊಳ್ಳೋಣ.


1. 19ನೇ ಶತಮಾನದಲ್ಲಿ ಭಾರತೀಯ ವಿದ್ಯಾವಂತ ವರ್ಗ ಸೃಷ್ಟಿಯಾಗಲು ಕಾರಣವೇನು?
ಉ: ಇಂಗ್ಲೀಷ್ ಶಿಕ್ಷಣ ಜಾರಿ.
2. ಬ್ರಿಟೀಷರು ಭಾರತದ ಸಮಾಜದ ಸುಧಾರಣೆಯಲ್ಲಿ ಆಸಕ್ತಿ ತಾಳಿದರು ಏಕೆ?
ಉ: ತಮ್ಮ ಆರ್ಥಿಕ ಮತ್ತು ರಾಜಕೀಯ ಹಿತಾಶಕ್ತಿ ಕಾಪಾಡಲು.
3. ಬ್ರಿಟೀಷರು ಬಿಳಿಯರ ಮೇಲಿನ ಹೊರೆ ಸಿದ್ಧಾಂತವನ್ನು ಪ್ರಚುರಪಡಿಸಲು ಕಾರಣವೇನು?
ಉ: ತಮ್ಮ ಆರ್ಥಿಕ ಮತ್ತು ರಾಜಕೀಯ ಹಿತಾಶಕ್ತಿ ಕಾಪಾಡಲು.
4. ಬ್ರಿಟೀಷ್ ವಸಾಹತು ಕಾಲಘಟ್ಟದ ಸಮಾಜ ಸುಧಾರಣೆಯ ಪ್ರಮುಖ ಲಕ್ಷಣ ಏನಾಗಿತ್ತು?
ಉ: ಸಮಾಜಕ್ಕೆ ಹಾನಿಕಾರಕವಾದ ಪದ್ಧತಿಗಳನ್ನು ಕಾನೂನಿನ ಮೂಲಕ ನಿಷೇಧಿಸುವುದು.
5. ರಾಜಾರಾಮ್ ಮೋಹನರಾಯರ ಜ್ಞಾನ ಮತ್ತು ಸುಧಾರಣಾ ದಾಹ ಉಚ್ಚಮಟ್ಟದಲ್ಲಿತ್ತು ಸಮರ್ಥಿಸಿ?
ಉ: ವಿವಿಧ ಧರ್ಮಗಳ ತಾತ್ವಿಕ ಜಿಜ್ಞಾಸೆಗಳ ಅಧ್ಯಯನ.
6. ರಾಜಾರಾಮ್ ಮೋಹನರಾಯರು ಆತ್ಮೀಯ ಸಭಾವನ್ನು ಪ್ರಾರಂಭಿಸಲು ಕಾರಣವೇನು?
ಉ: ಧಾರ್ಮಿಕ & ಸಾಮಾಜಿಕ ಪಿಡುಗುಗಳನ್ನು ಬಂಗಾಳದ ಸಮಾಜದಿಂದ ಕೊನೆಗೊಳಿಸುವುದು.
7. ಬ್ರಹ್ಮ ಸಮಾಜದ ಪ್ರಮುಖ ಕಾಳಜಿ ಏನಾಗಿತ್ತು?
ಉ: ಜಾತಿ ಮತ್ತು ಮೂಢನಂಬಿಕೆಯಿಂದ ಹಿಂದೂ ಧರ್ಮ ಶುದ್ಧಗೊಳಿಸುವುದು.
8. ರಾಜಾರಾಮ್ ಮೋಹನರಾಯರು ಸಂವದಿ ಕೌಮುದಿ ಪತ್ರಿಕೆ ಪ್ರಾರಂಭಿಸಲು ಕಾರಣವೇನು?
ಉ: ಪತ್ರಿಕೋದ್ಯಮದ ಮೂಲಕ ಜನರಲ್ಲಿ ವೈಚಾರಿಕತೆ ಬೆಳೆಸಲು.
9. ಬ್ರಹ್ಮ ಸಮಾಜವು ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಪಾಲು ಇರಬೇಕೆಂದು ಪ್ರತಿಪಾದಿಸಲು ಕಾರಣವೇನು?
ಉ: ವಿಧವೆಯರ ದುಸ್ಥಿತಿ ದೂರಮಾಡಲು.
10. ದಯಾನಂದ ಸರಸ್ವತಿಯವರು ವೇದಗಳಿಗೆ ಮರಳಿ ಎಂದು ಘೋಷಿಸಲು ಕಾರಣವೇನು?
ಉ: ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರ ಇರುವುದು ವೇದಗಳಲ್ಲಿ.
11. ದಯಾನಂದ ಸರಸ್ವತಿಯವರು ಶುದ್ಧಿ ಚಳುವಳಿಯನ್ನು ಏಕೆ ಪ್ರಾರಂಭಿಸಿದರು?
ಉ: ಹಿಂದೂ ಧರ್ಮದಿಂದ ಮತಾಂತರಗೊಂಡವರನ್ನು ಮತ್ತೆ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಲು.
12. ಜ್ಯೋತಿಬಾಪುಲೆಯವರು ಗುಲಾಮಗಿರಿ ಗ್ರಂಥ ರಚಿಸಲು ಕಾರಣವೇನು?
ಉ: ಸೈದ್ಧಾಂತಿಕ ಹೋರಾಟವನ್ನು ಕಟ್ಟಲು.
13. ಬ್ರಿಟೀಷ್ ವಿರೋಧಿ ಮನೋಧರ್ಮವು 1857ರ ಘಟನೆಯ ನಂತರ ಮುಸ್ಲಿಂ ಸಮಾಜದಲ್ಲಿ ವ್ಯಾಪಕವಾಗಿ ಬೆಳೆಯಲು ಪ್ರಾರಂಭವಾಯಿತು ಏಕೆ?
ಉ: ಮುಸ್ಲಿಂ ಸಮಾಜದಲ್ಲಿ ಹೊಸ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣಾ ಅಲೆ ಪ್ರಾರಂಭವಾಯಿತು.
14. ಸರ್ಸಯ್ಯದ್ಅಹಮ್ಮದ್ಖಾನ್ರ ಪ್ರಕಾರ ಧರ್ಮವು ಯಾವಾಗ ಜಡವಾಗುತ್ತದೆ?
ಉ: ಕಾಲ ಬದಲಾದಂತೆ ಧರ್ಮವನ್ನು ಅರ್ಥೈಸಿಕೊಳ್ಳುವ ಮತ್ತು ಪರಿಭಾವಿಸುವ ರೀತಿ ಬದಲಾಗದಿದ್ದಾಗ.
15. ಸರ್ಸಯ್ಯದ್ಅಹಮ್ಮದ್ಖಾನ್ರು ಆಂಗ್ಲೋ ಓರಿಯಂಟಲ್ ಕಾಲೇಜ್ ಸ್ಥಾಪಿಸಿದರ ಉದ್ದೇಶವೇನು?
ಉ: ತಮ್ಮ ಆಲೋಚನೆ ಕಾರ್ಯರೂಪಕ್ಕೆ ತರಲು.
16. ಸ್ವಾಮಿ ವಿವೇಕಾನಂದರು ರಾಮಕೃಷ್ಣ ಮಠ ಸ್ಥಾಪಿಸಿದರ ಉದ್ದೇಶವೇನು?
ಉ: ರಾಮಕೃಷ್ಣ ಪರಮಹಂಸರ ಚಿಂತನೆ ಮತ್ತು ಆಶಯ ಜನರಿಗೆ ತಲುಪಿಸಲು.
17. ಸಮಾಜ ಸುಧಾರಣೆಗೆ ಸಂಬಂಧಿಸಿದಂತೆ ವಿವೇಕಾನಂದರ ಆಶಯ ಏನಾಗಿತ್ತು?
ಉ: ಮೊದಲು ಜನರನ್ನು ವಿದ್ಯಾವಂತರನ್ನಾಗಿ ಮಾಡಬೇಕು & ಆ ಮೂಲಕ ಅವರೆ ಸುಧಾರಣೆಯನ್ನು ಬಯಸುತ್ತಾರೆ.
18. ಸ್ವಾಮಿ ವಿವೇಕಾನಂದರ ಪ್ರಕಾರ ಧರ್ಮದ ಕರ್ತವ್ಯವೇನು?
ಉ: ಕತ್ತಲಲ್ಲಿರುವವರಿಗೆ ಬೆಳಕನ್ನು ನೀಡುವುದು.
19. ಸ್ವಾಮಿ ವಿವೇಕಾನಂದರ ಪ್ರಕಾರ ಮಹಾತ್ಮ ಎಂದರೆ ಯಾರು?
ಉ: ಬಡವರಿಗಾಗಿ ದುಡಿಯುವ ಆತ್ಮ.
20. 10ನೇ ಚಾಮರಾಜ ಒಡೆಯರ ಅಸ್ಪೃಶ್ಯ ಮಕ್ಕಳಿಗಾಗಿ ಶಾಲೆ ತೆರೆಯಲು ಪ್ರೇರಣೆ ಏನು?
ಉ: ಸ್ವಾಮಿ ವಿವೇಕಾನಂದರ ಸಲಹೆ.
21. ಥಿಯೋಸಾಫಿಕಲ್ ಸೊಸೈಟಿಯ ಪ್ರಮುಖ ಉದ್ದೇಶವೇನಾಗಿತ್ತು?
ಉ: ವಿವಿಧ ಧರ್ಮ, ದರ್ಶನಗಳ ಮತ್ತು ವಿಜ್ಞಾನಗಳ ತುಲನಾತ್ಮಕ ಅಧ್ಯಯನ.
22. ಆನಿಬೆಸೆಂಟರನ್ನು ಶ್ವೇತ ಸರಸ್ವತಿ ಎನ್ನಲು ಕಾರಣವೇನು?
ಉ: ಭಗವತ್ ಗೀತೆಯನ್ನು ಇಂಗ್ಲೀಷಿಗೆ ಅನುವಾದ ಮಾಡಿದ್ದರಿಂದ.
23. ಆನಿಬೆಸೆಂಟರು ನ್ಯೂ ಇಂಡಿಯಾ ಮತ್ತು ಕಾಮನ್ ವ್ಹೀಲ್ ಪತ್ರಿಕೆಯನ್ನು ಪ್ರಾರಂಭಿಸಲು ಕಾರಣವೇನು?
ಉ: ಸಮಕಾಲಿನ ಸಮಸ್ಯೆಗಳನ್ನು ಚರ್ಚೆ ಮತ್ತು ಸಂವಾದಕ್ಕೆ ಈಡುಮಾಡಲು.


24. ರಾಜಾರಾಮ್ ಮೋಹನರಾಯ್:
ಬ್ರಹ್ಮ ಸಮಾಜ : 1828
ಬಿರುದು : ಆಧುನಿಕ ಭಾರತದ ಹರಿಕಾರ, ಪುನರುಜ್ಜೀವನದ ಜನಕ, ರಾಷ್ಟ್ರೀಯತೆಯ ಪ್ರವಾದಿ.
ಸಂಘಟನೆ :  ಆತ್ಮೀಯ ಸಭಾ : 1815
ಸತಿ ಪದ್ಧತಿ ನಿಷೇಧ : 1829 : ವಿಲಿಯಂ ಬೆಂಟಿಂಕ್
ಪತ್ರಿಕೆ : ಸಂವಾದ ಕೌಮುದಿ (ಬಂಗಾಳಿ)
ಶಾಲೆ : ವೇದಾಂತ ಕಾಲೇಜ್ (ಕಲ್ಕತ್ತ)
25. ಬ್ರಹ್ಮ ಸಮಾಜ ಸ್ತ್ರೀಯರ ಸ್ಥಾನಮಾನ ಉತ್ತಮ ಪಡಿಸಲು ಪ್ರಯತ್ನಿಸಿತ್ತೇಂದು ಹೇಗೆ ಹೇಳುವಿರಿ?
ಉ: 1. ಏಕ ದೇವತಾ ಆರಾಧನೆ
2. ಅರ್ಥಹೀನ ಆಚರಣೆಗೆ ವಿರೋಧ
3. ಬಹುಪತ್ನಿತ್ವ ವಿರೋಧ
4. ಪ್ರತಿಯೊಬ್ಬ ವ್ಯಕ್ತಿ ಘನತೆಯಿಂದ ಬಾಳಬೇಕು
5. ಇಂಗ್ಲೀಷ್ ಶಿಕ್ಷಣಕ್ಕೆ ಒತ್ತು
6. ಸ್ತ್ರೀ ಸಮಾನತೆ
7. ಬಾಲ್ಯ ವಿವಾಹಕ್ಕೆ ವಿರೋಧ
8. ವಿಧವೆಯರಿಗೆ ಆಸ್ತಿಯಲ್ಲಿ ಪಾಲು
9. ಒಳ್ಳೆಯದು ಎಲ್ಲಿದ್ದರೂ ಸ್ವೀಕರಿಸುವುದು.


26. ಆರ್ಯ ಸಮಾಜ :
1. ಸ್ಥಾಪಕ : ಸ್ವಾಮಿ ದಯಾನಂದ ಸರಸ್ವತಿ
2. ವರ್ಷ : 1875
3. ಕೇಂದ್ರ ಕಚೇರಿ : ಲಾಹೋರ್
4. ಗ್ರಂಥ : ಸತ್ಯಾರ್ಥ ಪ್ರಕಾಶ
5. ಘೋಷವಾಕ್ಯ : “ವೇದಗಳಿಗೆ ಹಿಂತಿರುಗಿ”
27. ಆರ್ಯ ಸಮಾಜದ ಉದ್ದೇಶ ಅಥವಾ ಸ್ವಾಮಿ ದಯಾನಂದ ಸರಸ್ವತಿಯವರ ಬೋಧನೆಗಳಾವುವು?
ಉ: 1. ಜಾತಿ ಪದ್ಧತಿಗೆ ವಿರೋಧ
2. ವಿಗ್ರಹಾರಾಧನೆ ಖಂಡಿಸಿದರು.
3. ವಿಧವಾ ವಿವಾಹ ಪ್ರೋತ್ಸಾಹಿಸಿದರು.
4. ಪುರೋಹಿತಶಾಹಿಯ ಅಧಿಕಾರ ತಿರಸ್ಕರಿಸಿದರು.
5. ವೇದಗಳು ಮಾತ್ರ ಸತ್ಯ.
6. ಸ್ವದೇಶಿ ಬಳಕೆಗೆ ಕರೆ ನೀಡಿದರು.
7. ಭಾರತ ಭಾರತೀಯರಿಗೆ ಎಂಬ ಘೋಷಣೆಯನ್ನು ನೀಡಿದರು.
8. ಶುದ್ಧಿ ಚಳುವಳಿ : ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರಗೊಂಡವರನ್ನು ಪುನಃ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳುವುದು.
9. ಗೋಸಂರಕ್ಷಣಾ ಚಳುವಳಿ
10. ಶಾಲೆ : ದಯಾನಂದ ಆಂಗ್ಲೋ ವೈದಿಕ ಶಾಲೆ (1886)
11. ಅನುಯಾಯಿ : ಲಾಲಾ ಲಜಪತರಾಯ್

28. ಪ್ರಾರ್ಥನಾ ಸಮಾಜ :
ಉ: 1. ಸ್ಥಾಪಕ : ಡಾ.ಆತ್ಮಾರಾಂ ಪಾಂಡುರಂಗ
2. ಸ್ಥಾಪನೆ : 1863 (ಮುಂಬೈ)
3. ಅನುಯಾಯಿ : ಎಂ.ಜಿ.ರಾನಡೆ, ಆರ್.ಜಿ.ಭಂಡಾರ್ಕರ್, ಎನ್.ಜಿ.ಚಂದಾವರ್ಕರ್.
4. ತತ್ವಗಳು : ಸ್ತ್ರೀ ಶಿಕ್ಷಣ
5. ಬಾಲ್ಯ ವಿವಾಹ ನಿಷೇಧ
6. ಪರದಾ ಪದ್ಧತಿಯನ್ನು ವಿರೋಧಿಸಿದರು.
7. ಸರ್ವ ಧರ್ಮಗಳು ಸತ್ಯದ ಪ್ರತೀಕ
8. ನಿರ್ಗತಿಕರಿಗೆ ಆಸರೆ
9. ಬಾಲ್ಯ ವಿವಾಹ ನಿಷೇಧ
10. ವಿಧವಾ ಪುನರ್ ವಿವಾಹ
11. ಅಂತರ್ಜಾತಿ ವಿವಾಹ


29. ಸತ್ಯ ಶೋಧಕ ಸಮಾಜ :
1. ಸ್ಥಾಪಕ : ಜ್ಯೋತಿಬಾ ಪುಲೆ
2. ಸ್ಥಾಪನೆ : 1873 (ಪುಣೆ)
3. ಕೃತಿ : ಗುಲಾಮಗಿರಿ, ಶೇಟ್ಕಾರ್ಯ ಚಾ ಆಸೂದ್
4. ಅನುಯಾಯಿ : ಡಾ.ಅಂಬೇಡ್ಕರ್
30. ಜ್ಯೋತಿಬಾ ಪುಲೆಯವರ ಕೊಡುಗೆ ಅಥವಾ ಸುಧಾರಣೆಗಳಾವುವು?
1. ಸ್ವಾತಂತ್ರ್ಯ ಪ್ರತಿಯೊಬ್ಬ ಮನುಷ್ಯನ ಪ್ರಥಮ ಅವಶ್ಯಕತೆ.
2. ಸಾಮಾಜಿಕ ನ್ಯಾಯಕ್ಕಾಗಿ ಚಳುವಳಿ ನಡೆಸಿದರು.
3. ಉಚಿತ ಮತ್ತು ಕಡ್ಡಾಯ ಶಿಕ್ಷಣ ಪ್ರತಿಪಾದಿಸಿದರು.
4. ಸ್ತ್ರೀಪುರುಷರ ಅಸಮಾನತೆಯನ್ನು ವಿರೋಧಿಸಿದರು.
5. ಪಾನನಿಷೇಧವನ್ನು ಒತ್ತಾಯಿಸಿದರು.
6. ಗುಲಾಮಗಿರಿಯನ್ನು ಉಗ್ರವಾಗಿ ಖಂಡಿಸಿದರು.
7. ವಿದ್ಯಾರ್ಥಿನಿಯರಿಗೆ ಶಾಲೆ ತೆರೆದರು.


31. ಅಲಿಘರ್ ಚಳುವಳಿ :
1. ನಾಯಕ : ಸರ್ ಸಯ್ಯದ್ ಅಹಮ್ಮದ್ ಖಾನ್
2. ಶಾಲೆ : ಮಹಮ್ಮದನ್ ಆಂಗ್ಲೋ ಒರಿಯಂಟಲ್ ಕಾಲೇಜು (ಅಲಿಘರ್ 1875)
32. ಅಲಿಘರ್ ಚಳುವಳಿಯ ಉದ್ದೇಶಗಳಾವುವು?
1. ಧಾರ್ಮಿಕ ಸಹಿಷ್ಣುತೆ
2. ಪರದಾ ಪದ್ಧತಿಗೆ ವಿರೋಧ
3. ಕುರಾನ್ ಮಾತ್ರ ಪ್ರಮಾಣಿಕೃತ ಗ್ರಂಥ
4. ಸ್ತ್ರೀ ಶಿಕ್ಷಣ
5. ಸಂಪ್ರದಾಯ, ಮೌಢ್ಯಗಳು, ಅಜ್ಞಾನ & ಅವೈಜ್ಞಾನಿಕ ಆಚರಣೆಗಳ ಖಂಡನೆ.

33. ರಾಮಕೃಷ್ಣ ಮಿಷನ್ :
1. ಸ್ಥಾಪನೆ : 1897
2. ಸ್ಥಾಪಕ : ಸ್ವಾಮಿ ವಿವೇಕಾನಂದ
3. ಸ್ಥಳ : ಬೇಲೂರು ಮತ್ತು ಆಲ್ಮೋರಾ
4. ಉದ್ದೇಶ : ರಾಮಕೃಷ್ಣ ಪರಮಹಂಸರ ಚಿಂತನೆ & ಆಶಯಗಳನ್ನು ಜನರಿಗೆ ತಲುಪಿಸುವುದು.
5. ವಿಶ್ವ ಧರ್ಮ ಸಮ್ಮೇಳನ : 1893 (ಚಿಕಾಗೋ)
34. ರಾಮಕೃಷ್ಣ ಮಿಷನ್ನ ದೃಷ್ಠಿಕೋನ ವಿವರಿಸಿ :
1. ಆಧುನಿಕ ಭಾರತದ ಆಧ್ಯಾತ್ಮದ ಏಳಿಗೆ
2. ರಾಷ್ಟ್ರೀಯತೆಯ ಎಚ್ಚರ
3. ಸಾಂಸ್ಕೃತಿಕ ಬೆಳವಣಿಗೆ
4. ಮೂರ್ತಿಪೂಜೆ
5. ಜಾತಿ ವ್ಯವಸ್ಥೆಯ ನಿರ್ಮೂಲನೆ
35. ಸ್ವಾಮಿ ವಿವೇಕಾನಂದರು ಯುವ ಶಕ್ತಿಯ ಪ್ರೇರಕರಾಗಿದ್ದರು ಹೇಗೆ ಎಂಬುದನ್ನು ವಿವರಿಸಿ?
1. ಪ್ರೀತಿಯಲ್ಲಿರುವ ಮಹತ್ವವನ್ನು ತಿಳಿಸಿದರು.
2. ವ್ಯಕ್ತಿ & ಸಾಮರ್ಥ್ಯಕ್ಕೆ ಮಹತ್ವ ನೀಡಿದರು.
3. ಮೋಕ್ಷಕ್ಕಾಗಿ ಪ್ರಾರ್ಥನೆ ಯೋಗ ಸಮಾಜ ಸೇವೆ ಮುಖ್ಯ.
4. ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದರು.
5. ಶಿಕ್ಷಣ & ಸಂಸ್ಕೃತಿಗೆ ಪ್ರೋತ್ಸಾಹ.
6. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಕರೆ ನೀಡಿದರು.


36. ಥಿಯೋಸಾಫಿಕಲ್ ಸೊಸೈಟಿ :
1. ಸ್ಥಾಪಕರು : ಮೆಡಂ ಬ್ಲಾವಟ್ಸ್ಕ್ಸಿ & ಕರ್ನಲ್ ಹೆಚ್.ಎಸ್.ಆಲ್ಕಾಟ್
2. ಕೇಂದ್ರ ಕಚೇರಿ : ಅಡ್ಯಾರ್ : 1886
ಉದ್ದೇಶಗಳು :
3. ವಿವಿಧ ಧರ್ಮಗಳು, ದರ್ಶನಗಳು & ವಿಜ್ಞಾನಗಳ ತುಲನಾತ್ಮಕ ಅಧ್ಯಯನ
4. ಮನುಷ್ಯನ ಆಂತರ್ಯದಲ್ಲಿರುವ ಅದಮ್ಯ ಚೇತನ ಶಕ್ತಿಯನ್ನು ಕಂಡುಕೊಳ್ಳಲು ಪ್ರಯತ್ನಿಸುವುದು.
5. ವಿಶ್ವ ಭಾತೃತ್ವ
6. ಸಮಕಾಲಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವುದು.
7. ಸನಾತನ ಸಂಸ್ಕೃತಿಯ ಪ್ರಚಾರ.
37. ಅನಿಬೆಸೆಂಟ್ರ ಕೊಡುಗೆಗಳನ್ನು ತಿಳಿಸಿ?
1. ಭಗವದ್ಗೀತೆಯನ್ನು ಇಂಗ್ಲೀಷಿಗೆ ಅನುವಾದ
2. ಎಲ್ಲ ವರ್ಗಗಳಿಗೂ ಶಿಕ್ಷಣ
3. ಸೆಂಟ್ರಲ್ ಹಿಂದೂ ಕಾಲೇಜು ಸ್ಥಾಪನೆ
4. ನ್ಯೂ ಇಂಡಿಯಾ & ಕಾಮನ್ ವ್ಹೀಲ್ ಪತ್ರಿಕೆ
5. 1916 : ಹೋಂರೂಲ್ ಲೀಗ್ ಚಳುವಳಿ
6. ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನದ ಅಧ್ಯಕ್ಷತೆ
7. ಬಿರುದು : “ಶ್ವೇತ ಸರಸ್ವತಿ”
38. ಭಾರತದಲ್ಲಿ ಥಿಯೋಸಾಫಿಕಲ್ ಸೊಸೈಟಿಯ ಸುಧಾರಣೆಗಳನ್ನು ಒಂದು ಧರ್ಮದ ಪುನರುತ್ಥಾನ ಚಳುವಳಿ ಎಂದು ಕರೆಯಲಾಗಿದೆ ಈ ಹೇಳಿಕೆಯನ್ನು ಸಮರ್ಥಿಸಿ?
1. ಹಿಂದೂ ಧರ್ಮ ಗ್ರಂಥಗಳಿಂದ ತನ್ನ ಮೂಲ ತತ್ವ ಪಡೆದುಕೊಂಡು ಪ್ರಚುರಪಡಿಸಿತು.
2. ಭಾರತದ ಧಾರ್ಮಿಕ & ತಾತ್ವಿಕ ಅಥವಾ ದಾರ್ಶನಿಕ ಪರಂಪರೆಗಳ ಅಧ್ಯಯನ.
3. ವಿವಿಧ ಧರ್ಮಗಳ ತುಲನಾತ್ಮಕ ಅಧ್ಯಯನ
4. ಸಮಕಾಲಿನ ಸಮಸ್ಯೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿತು.
39. ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ವಿವರಿಸಿ?
1. ಮೊದಲು ಜನರನ್ನು ವಿದ್ಯಾವಂತರನ್ನಾಗಿ ಮಾಡಬೇಕು.
2. ಶಾಸನ ರೂಪಿಸುವ ಸಂಸ್ಥೆಗಳು ರೂಪುಗೊಳ್ಳಬೇಕು.
3. ಧರ್ಮದ ಕರ್ತವ್ಯವೆಂದರೆ ಕತ್ತಲಲ್ಲಿರುವವರಿಗೆ ಬೆಳಕನ್ನು ನೀಡುವುದು.
4. ಯಾರ ಆತ್ಮ ಬಡವರಿಗಾಗಿ ಮಿಡಿಯುವುದೋ ಅವನೇ ಮಹಾತ್ಮ.

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon