KSEEB Social Science Chapter 14 | Indian Water Resources | Bharatada Jala Sampanmulagalu | KSEEB Solutions |

KSEEB Social Science Chapter 14 Notes Indian Water Resources
Bharatada Jalasampanmulagalu

10ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪರೀಷ್ಕೃತ ಪಠ್ಯಪುಸ್ತಕದ ಅನುಸಾರವಾಗಿ KSEEB ಪರೀಕ್ಷಾ ಸಿದ್ದತೆಗಾಗಿ ಭಾಗ 1 ಪಠ್ಯಪುಸ್ತಕದಲ್ಲಿ ಬರುವ 14 ನೇ ಅಧ್ಯಾಯ ಭಾರತದ ಜಲ ಸಂಪನ್ಮೂಲಗಳು ಈ ಅಧ್ಯಾಯವು KSEEB Social Science Chapter 14 ವು ಭೂಗೋಳ ವಿಜ್ಞಾನದಲ್ಲಿಯ ಅಧ್ಯಾಯವಾಗಿದ್ದು. ಈ ಅಧ್ಯಾಯದ ಪ್ರಮುಖವಾಗಿರುವ ಅಂಶಗಳು KSEEB ಪರೀಕ್ಷಾ ಸಿದ್ದತೆಗಾಗಿ ಇಲ್ಲಿ ನೋಡಿಕೊಳ್ಳೋಣ.


ಅಧ್ಯಾಯ 14. ಭಾರತದ ಜಲ ಸಂಪನ್ಮೂಲಗಳು

1. ಜಲಸಂಪನ್ಮೂಲಗಳ ಪ್ರಾಮುಖ್ಯತೆ :
1. ಕುಡಿಯಲು
2. ವ್ಯವಸಾಯ
3. ವಿದ್ಯುತ್
4. ಕೈಗಾರಿಕೆ
5. ಮೀನುಗಾರಿಕೆ
6. ನೌಕಾಯಾನ
7. ಅಡುಗೆ ಮಾಡಲು

2. ಉತ್ತರ ಭಾರತದ ನದಿಗಳು :
1. ಸಿಂಧೂ
2. ಗಂಗಾ
3. ಬ್ರಹ್ಮಪುತ್ರ

3. ಸಿಂಧೂನದಿ :
1. ಉಗಮ : ಕೈಲಾಸ ಪರ್ವತ
2. ಸಂಗಮ : ಕರಾಚಿಯ ಅರಬ್ಬೀಸಮುದ್ರ
3. ಉದ್ದ : 2897 ಕಿ.ಮೀ.
4. ಉಪನದಿಗಳು : ಝೀಲಂ, ರಾವಿ, ಚಿನಾಬ್, ಬಿಯಾಸ್, ಸಟ್ಲೇಜ್.

4. ಗಂಗಾನದಿ : 
1. ಉಗಮ : ಗಂಗೋತ್ರಿ
2. ಸಂಗಮ : ಬಂಗಾಳಕೊಲ್ಲಿ
3. ಉದ್ದ : 2525 ಕಿ.ಮೀ.
4. ಉಪನದಿಗಳು : ಯಮುನ, ಘಾಗ್ರಾ, ಗಂಡಕ್, ರಾಮಗಂಗಾ, ಗೋಮತಿ, ಕೋಸಿ, ಸೋನೆ.

5. ಬ್ರಹ್ಮಪುತ್ರ :
1. ಉಗಮ : ಚೆಮ್ ಯಂಗ್ ಡಂಗ್
2. ಉದ್ದ : 2589 ಕಿ.ಮೀ.

ದಕ್ಷಿಣ ಭಾರತದ ನದಿಗಳು :
6. ಮಹಾನದಿ : 
1. ಉಗಮ : ಸಿವಾಹ ಶ್ರೇಣಿ.
2. ಸಂಗಮ : ಬಂಗಾಳಕೊಲ್ಲಿ.
7. ಗೋದಾವರಿ ನದಿ : 
1. ಉಗಮ : ತ್ರಯಂಬಕ್
2. ಸಂಗಮ : ಬಂಗಾಳಕೊಲ್ಲಿ
3. ವಿಶೇಷತೆ : ದಕ್ಷಿಣ ಭಾರತದ ಅತಿ ಉದ್ದವಾದ ನದಿ
8. ಕೃಷ್ಣನದಿ : 
1. ಉಗಮ : ಮಹಾಬಳೇಶ್ವರ
2. ಉಪನದಿಗಳು : ಭೀಮಾ, ತುಂಗಭದ್ರ, ಕೋಯ್ನಾ, ಮಲಪ್ರಭ, ಘಟಪ್ರಭ.
9. ಕಾವೇರಿ ನದಿ : 
1. ಉಗಮ : ತಲಕಾವೇರಿ
2. ಉಪನದಿಗಳು : ಹೇಮಾವತಿ, ಹಾರಂಗಿ, ಶಿಂಷಾ, ಕಬಿನಿ, ಅರ್ಕಾವತಿ, ಲಕ್ಷ್ಮಣತೀರ್ಥ, ಸುವರ್ಣಾವತಿ.

ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು : 
ನರ್ಮದಾ : ಅಮರಕಂಟಕ ಪ್ರಸ್ಥಭೂಮಿ
ಉಗಮ : ಅಮೃತ ಶಿಲಾ ಕಂದರ
ತಾಪಿನದಿ :
ಉಗಮ : ಮೂಲ್ತಾಯಿ.
10. ದಾಮೋದರ ನದಿ ಕಣಿವೆ ಯೋಜನೆ :
1. ಪ್ರಥಮ ಯೋಜನೆ
2. ಬಂಗಾಳದ ಕಣ್ಣೀರು
3. ಕೋನಾರ್, ಪಂಚೆತ್ ಹಿಲ್ ಗಳಲ್ಲಿ ಅಣೆಕಟ್ಟು.
4. ಬೊಕಾರೋ, ಚಂದ್ರಪುರ, ದುರ್ಗಾಪುರಗಳಲ್ಲಿ ವಿದ್ಯುದಾಗಾರ.
11. ಭಾಕ್ರಾನಾಂಗಲ್ :
1. ಸಟ್ಲೆಜ್ ನದಿ
2. ಅತಿ ಎತ್ತರದ ಅಣೆಕಟ್ಟು : ಭಾಕ್ರಾ
3. ಜಲಾಶಯ : ಗೋವಿಂದ ಸಾಗರ.
12. ಕೋಸಿ ಯೋಜನೆ :
1. ನದಿ : ಕೋಸಿ
2. ಬಿಹಾರದ ಕಣ್ಣೀರು
3. ಭಾರತ & ನೇಪಾಳದ ಸಂಯುಕ್ತ ಯೋಜನೆ.
4. ಅಣೆಕಟ್ಟು : ಹನುಮಾನ್ ನಗರ.
13. ಹಿರಾಕುಡ್ ಯೋಜನೆ :
1. ನದಿ : ಮಹಾನದಿ
2. ಒರಿಸ್ಸಾದ ಕಣ್ಣೀರು
3. ಅತಿ ಉದ್ದವಾದ ಅಣೆಕಟ್ಟು.
14. ತುಂಗಭದ್ರಾ ಯೋಜನೆ : 
1. ಬಳ್ಳಾರಿ ಜಿಲ್ಲೆಯ ಹೊಸಪೇಟೆ ಹತ್ತಿರ ಮಲ್ಲಾಪುರ
2. ಕರ್ನಾಟಕ & ಆಂದ್ರದ ಸಂಯುಕ್ತ ಯೋಜನೆ.
3. ಜಲಾಶಯ : ಪಂಪಸಾಗರ.
15. ನಾಗಾರ್ಜುನ ಸಾಗರ ಯೋಜನೆ :
1. ನದಿ : ಕೃಷ್ಣ
2. ಆಂಧ್ರದ ನಂದಿಕೊಂಡ ಗ್ರಾಮದ ಹತ್ತಿರ.
3. ಅತಿ ದೊಡ್ಡ ನದಿ ಕಣಿವೆ ಯೋಜನೆ.
16. ಕೃಷ್ಣ ಮೇಲ್ದಂಡೆ ಯೋಜನೆ :
1. ವಿಜಯಪುರ ಜಿಲ್ಲೆಯ ಹತ್ತಿರ ಆಲಮಟ್ಟಿ.
2. ಕರ್ನಾಟಕದ ಅತಿ ದೊಡ್ಡ ಯೋಜನೆ.
3. ಜಲಾಶಯ : ಲಾಲ್ ಬಹದ್ದೂರ್ ಶಾಸ್ತ್ರಿ.
4. ನಾರಾಯಣಪುರ ಹತ್ತಿರ ಬಸವ ಸಾಗರ.

17. ನರ್ಮದಾ ನದಿ ಕಣಿವೆ ಯೋಜನೆ :
1. ಒಟ್ಟು 23 ಅಣೆಕಟ್ಟು.
2. ಸರ್ದಾರ್ ಸರೋವರ, ನರ್ಮದಾ ಸಾಗರ.
18. ನೀರಾವರಿ ಎಂದರೇನು? ಅದರ ವಿಧಗಳಾವುವು?
1. “ವ್ಯವಸಾಯದ ಭೂಮಿಗೆ ಕೃತಕವಾಗಿ ನೀರು ಸರಬರಾಜು ಮಾಡುವುದು”
2. ಬಾವಿ
3. ಕೆರೆ
4. ಕಾಲುವೆ
5. ಹನಿ ನೀರಾವರಿ
6. ತುಂತುರು ನೀರಾವರಿ.
19. ಬಾವಿ ನೀರಾವರಿ :
1. ಅತಿ ಜನಪ್ರಿಯ & ಅತಿ ವ್ಯಾಪಕ
2. ಅತಿ ಹೆಚ್ಚು : ಉತ್ತರಪ್ರದೇಶ
3. ವಿಧಗಳು : ತೆರೆದ ಬಾವಿ & ಕೊಳವೆ ಬಾವಿ

20. ಬಾವಿ ನೀರಾವರಿ ಅತಿ ಜನಪ್ರಿಯ ನೀರಾವರಿ ವಿಧವಾಗಿದೆ ಏಕೆ?
1. ಕಡಿಮೆ ಮಳೆ ಬೀಳುವ ಭಾಗದಲ್ಲಿ ಹೆಚ್ಚು ಉಪಯುಕ್ತ.
2. ಸುಲಭ ನಿರ್ಮಾಣ & ನಿರ್ವಹಣೆ
3. ಕೆರೆ & ಕಾಲುವೆ ಸೌಲಭ್ಯವಿಲ್ಲದ ಭಾಗಗಳಲ್ಲಿ ಅವಶ್ಯಕ.
4. ಸಣ್ಣ ರೈತರಿಗೆ ಹೆಚ್ಚು ಅನುಕೂಲ.
21. ಸಾರ್ವಕಾಲಿಕ & ಪ್ರವಾಹ ಕಾಲುವೆಗಳಿಗಿರುವ ವ್ಯತ್ಯಾಸಗಳೇನು?
1. ಸಾರ್ವಕಾಲಿಕ ಕಾಲುವೆ : ನದಿಗಳಿಗೆ ಅಣೆಕಟ್ಟು ಕಟ್ಟಿ ಜಲಾಶಯಗಳಲ್ಲಿ ನೀರು ಸಂಗ್ರಹಿಸಿ ಕೃಷಿ ಭೂಮಿಗೆ ನೀರು ಒದಗಿಸುವುದು.
2. ಪ್ರವಾಹ ಕಾಲುವೆ : ಯಾವುದೇ ಅಣೆಕಟ್ಟು ನಿರ್ಮಿಸದೆ ಕಾಲುವೆ ತೋಡಿ ಕೃಷಿ ಮಾಡುವುದು.
22. ಕೆರೆ ನೀರಾವರಿ :
1. “ಝರಿ, ತೊರೆ, ಹಳ್ಳ ಹರಿಯುವ ಇಳಿಜಾರಿಗೆ ಅಡ್ಡಲಾಗಿ ಒಡ್ಡುಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸುವುದು”
2. ಅತಿ ಪುರಾತನ ನೀರಾವರಿ ವಿಧಾನ.
3. ಅತಿ ಹೆಚ್ಚು ಆಂಧ್ರ ಪ್ರದೇಶ.

23. ವಿವಿಧೋದ್ದೇಶ ನದಿ ಕಣಿವೆ ಯೋಜನೆ ಎಂದರೇನು? ಅವುಗಳ ಉದ್ದೇಶಗಳೇನು?
1. “ನದಿಯ ನೀರನ್ನು ಕೃಷಿಯ ಜೊತೆಗೆ ಹಲವಾರು ಉದ್ದೇಶಕ್ಕೆ ಬಳಸುವುದು”
2. ಉದ್ದೇಶಗಳು : 
1. ನೀರಾವರಿ
2. ಜಲವಿದ್ಯುತ್
3. ಪ್ರವಾಹ ನಿಯಂತ್ರಣ
4. ನೌಕಾಯಾನ
5. ಗೃಹಬಳಕೆ
6. ಕೈಗಾರಿಕೆಗಳಿಗೆ
7. ಮೀನುಗಾರಿಕೆ
8. ಅರಣ್ಯೀಕರಣ

24. ರಾಷ್ಟ್ರೀಯ ವಿದ್ಯುತ್ ಜಾಲ ಎಂದರೇನು? ಅಥವಾ ರಾಷ್ಟ್ರೀಯ ವಿದ್ಯುತ್ ಜಾಲವನ್ನು ಏಕೆ ನಿರ್ಮಿಸಲಾಯಿತು?
1. ಹೆಚ್ಚುವರಿ ವಿದ್ಯುತ್ ಅನ್ನು ಕೊರತೆ ಇರುವ ಪ್ರದೇಶಗಳಿಗೆ ಸಾಗಿಸಲು.
2. ವಿದ್ಯುತ್ ಅನ್ನು ಸಮರ್ಪಕವಾಗಿ ಪ್ರಸರಣ ಮಾಡಲು.
25. ಮಳೆ ಕೊಯ್ಲು ಅಥವಾ ಮಳೆ ನೀರಿನ ಸಂಗ್ರಹದ ಎರಡು ವಿಧಗಳಾವುವು?
1. ಮಳೆ ಬಿದ್ದ ಸ್ಥಳದಲ್ಲಿಯೇ ನೀರನ್ನು ಸಂಗ್ರಹಿಸುವುದು.
2. ಮಳೆ ಬಿದ್ದ ನಂತರ ಹರಿಯುವ ನೀರನ್ನು ಸಂಗ್ರಹಿಸುವುದು.
26. ಮಳೆಕೊಯ್ಲು ಅಥವಾ ಮಳೆ ನೀರಿನ ಸಂಗ್ರಹಣೆ ಇಂದು ಕಡ್ಡಾಯವಾಗಿದೆ ಏಕೆ?
1. ಮಳೆಗಾಲದ ಅವಧಿ ಕಡಿಮೆಯಾಗಿದೆ.
2. ಹೆಚ್ಚು ಮಳೆ ಬೀಳುವ ಪ್ರದೇಶಗಳು ದೀರ್ಘವಾದ ಮಳೆ ರಹಿತ ಪ್ರದೇಶವಾಗಿದ್ದು.
3. ಬೇಸಿಗೆಯಲ್ಲಿ ನೀರಿನ ಕೊರತೆ ಕಂಡು ಬರುತ್ತದೆ.
4. ಜಲಕ್ಷಾಮದ ಪರಿಹಾರಕ್ಕೆ ಸರಳ ಮಾರ್ಗ ಮಳೆ ಕೊಯ್ಲು.
*****

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon