KSEEB Social Science Chapter 11 Notes | Bhart Rutugalu | Indian weather | KSEEB Solutions |

KSEEB Social Science Chapter 11 Notes In Kannada
Bharatada Rutugalu

10ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪರೀಷ್ಕೃತ ಪಠ್ಯಪುಸ್ತಕದ ಅನುಸಾರವಾಗಿ KSEEB ಪರೀಕ್ಷಾ ಸಿದ್ದತೆಗಾಗಿ ಭಾಗ 1 ಪಠ್ಯಪುಸ್ತಕದಲ್ಲಿ ಬರುವ 11 ನೇ ಅಧ್ಯಾಯ ಭಾರತದ ಋತುಗಳು ಈ ಅಧ್ಯಾಯವು KSEEB Social Science Chapter 11 ವು ಭೂಗೋಳ ವಿಜ್ಞಾನದಲ್ಲಿಯ ಅಧ್ಯಾಯವಾಗಿದ್ದು. ಈ ಅಧ್ಯಾಯದ ಪ್ರಮುಖವಾಗಿರುವ ಅಂಶಗಳು KSEEB ಪರೀಕ್ಷಾ ಸಿದ್ದತೆಗಾಗಿ ಇಲ್ಲಿ ನೋಡಿಕೊಳ್ಳೋಣ.


ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ:
ಅಧ್ಯಾಯ 11. ಭಾರತದ ಋತುಗಳು
1. ಅತಿ ಹೆಚ್ಚು ಉಷ್ಣಾಂಶ : ಗಂಗಾನಗರ
2. ಅತಿ ಹೆಚ್ಚು ಮಳೆ : ಮೌಸಿನ್ರಾಂ
3. ಅತಿ ಕಡಿಮೆ ಮಳೆ : ರೊಯ್ಲಿ (8.3ಸೆಂ.ಮೀ)
4. ಅತಿ ಹೆಚ್ಚು ಮಳೆ ಬೀಳುವ ಋತುಮಾನ : ಮಳೆಗಾಲ
5. ಅತಿ ಕಡಿಮೆ ಮಳೆ ಬೀಳುವ ಋತುಮಾನ : ಚಳಿಗಾಲ
6. ಭಾರತವು ಹೊಂದಿರುವ ವಾಯುಗುಣ : ಉಷ್ಣವಲಯದ ಮಾನ್ಸೂನ್
7. ಅತಿ ಕಡಿಮೆ ಉಷ್ಣಾಂಶ : ಡ್ರಾಸ್
8. ಬೇಸಿಗೆ ಕಾಲದಲ್ಲಿ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತ ಕಡಿಮೆ ಉಷ್ಣಾಂಶ ಹೊಂದಿರಲು ಕಾರಣ?
ಉ: 3ಕಡೆ ಸಾಗರ, ಸಮುದ್ರಗಳಿಂದ ಆವೃತವಾಗಿರುವುದರಿಂದ.
9. ಚಳಿಗಾಲದಲ್ಲಿ ಭಾರತದಲ್ಲಿ ಉಷ್ಣಾಂಶ ಕಡಿಮೆ ಇರುತ್ತದೆ ಏಕೆ?
ಉ: ಸೂರ್ಯನ ಕಿರಣಗಳು ಭಾರತದ ಮೇಲೆ ಓರೆಯಾಗಿ ಬೀಳುತ್ತವೆ.
10. ಚಳಿಗಾಲದಲ್ಲಿ ಭಾರತದ ಉತ್ತರ ಭಾಗವು ತಂಪಾದ ವಾತಾವರಣ ಹೊಂದಿರುತ್ತದೆ ಏಕೆ?
ಉ: ಕಡಿಮೆ ಉಷ್ಣಾಂಶ, ಕಡಿಮೆ ಆರ್ಧ್ರತೆ, ಮೋಡ ರಹಿತ ಆಕಾಶ.

11. ಭಾರತದಲ್ಲಿ ಬೇಸಿಗೆ ಕಾಲವು ಹೆಚ್ಚು ಉಷ್ಣಾಂಶ ಹೊಂದಿರಲು ಕಾರಣವೇನು?
ಉ: ಸೂರ್ಯನ ಲಂಬ ಕಿರಣಗಳು ಉತ್ತರಾರ್ಧಗೋಳದ ಮೇಲೆ ಬೀಳುವುದು.
12. ಕೇರಳದಲ್ಲಿ ಪರಿಸರಣ ಮಳೆಯನ್ನು ಮಾವಿನ ಹೊಯ್ಲು ಎಂದು ಕರೆಯಲು ಕಾರಣವೇನು?
ಉ: ಮಾವಿನ ಬೆಳೆಗೆ ನೆರವಾಗುವುದರಿಂದ.
13. ಕರ್ನಾಟಕದಲ್ಲಿ ಪರಿಸರಣ ಮಳೆಯನ್ನು ಕಾಫಿ ಹೂಮಳೆ ಎಂದು ಕರೆಯಲು ಕಾರಣವೇನು?
ಉ: ಕಾಫಿ ಬೆಳೆಗೆ ನೆರವಾಗುವುದರಿಂದ.
14. ಭಾರತದ ಪಶ್ಚಿಮ ಘಟ್ಟಗಳ ಪೂರ್ವ ಭಾಗವು ಮಳೆ ನೆರಳಿನ ಪ್ರದೇಶವಾಗಿ ಪರಿಣಮಿಸಿದೆ ಏಕೆ?
ಉ: ಪಶ್ಚಿಮ ಘಟ್ಟಗಳ ಪೂರ್ವ ಭಾಗಕ್ಕೆ ಹೋದಂತೆ ಮಳೆ ಕಡಿಮೆಯಾಗುತ್ತದೆ.
15. ಮೇಘಾಲಯ ಮತ್ತು ಅಸ್ಸಾಂಗಳಲ್ಲಿ ಅಧಿಕ ಮಳೆಯಾಗುತ್ತದೆ ಕಾರಣವೇನು?
ಉ: ಬಂಗಾಳಕೊಲ್ಲಿಯ ಶಾಖೆಯು ಅಸ್ಸಾಂ ಮತ್ತು ಮೇಘಾಲಯ ಬೆಟ್ಟಗಳಿಂದ ತಡೆಯಲ್ಪಡುವುದರಿಂದ.
16. ಭಾರತದ ಋತುಗಳನ್ನು ತಿಳಿಸಿ.
ಭಾರತದ ಋತುಮಾನಗಳು: 
1. ಬೇಸಿಗೆ ಕಾಲ : ಮಾರ್ಚ್-ಮೇ
2. ಮಳೆಗಾಲ : ಜೂನ್-ಸೆಪ್ಟೆಂಬರ್
3.ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ : ಅಕ್ಟೋಬರ್-ನವೆಂಬರ್
4. ಚಳಿಗಾಲ : ಡಿಸೆಂಬರ್-ಫೆಬ್ರವರಿ.
17. ಬೇಸಿಗೆ ಕಾಲದಲ್ಲಿ ಉತ್ತರ ಭಾರತವು ಅಧಿಕ ಉಷ್ಣಾಂಶ ಹೊಂದಿರಲು ಕಾರಣವೇನು?
1. ಸಮುದ್ರಕ್ಕೆ ದೂರವಾಗಿರುವುದರಿಂದ
2. ಸೂರ್ಯನ ಲಂಬವಾದ ಕಿರಣಗಳು ಉತ್ತರಾರ್ಧ ಗೋಳದ ಮೇಲೆ ನೇರವಾಗಿ ಬೀಳುತ್ತವೆ.
3. ದೀರ್ಘ ಹಗಲು.
18. ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ ಅಥವಾ ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ ಎಂದರೇನು?
ಉ: ಉಷ್ಣಾಂಶ ಕಡಿಮೆಯಾಗಿ ಅಧಿಕ ಒತ್ತಡದಿಂದಾಗಿ ನೈಋತ್ಯ ಮಾನ್ಸೂನ್ ಮಾರುತಗಳು ಹಿಂತಿರುಗಲು ಪ್ರಾರಂಭಿಸುವ ಕಾಲ.
19. ಬೇಸಿಗೆ ಕಾಲದಲ್ಲಿ ವಿವಿಧ ಕಡೆ ಪರಿಸರಣ ಮಾದರಿಯ ಮಳೆ ಬೀಳುತ್ತದೆ ಕಾರಣಕೊಡಿ?
1. ಸ್ಥಳೀಯ ಉಷ್ಣಾಂಶ
2. ಪ್ರಚಲನ ಪ್ರವಾಹ
ಉದಾ: ಕರ್ನಾಟಕ : ಕಾಫಿ ತುಂತುರು, ಕೇರಳ : ಮಾವಿನ ಹೊಯ್ಲು, ಪ.ಬಂಗಾಳ : ಕಾಲ ಬೈಸಾಕಿ
20. ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳಾವುವು?
1. ಅಕ್ಷಾಂಶ
2. ಸಮುದ್ರ ಮಟ್ಟದಿಂದ ಇರುವ ದೂರ
3. ಸಾಗರಗಳಿಂದ ಇರುವ ದೂರ
4. ಮಾರುತಗಳ ದಿಕ್ಕು
5. ಸಾಗರಗಳ ಪ್ರವಾಹ

21. ಭಾರತದ ವ್ಯವಸಾಯವು ಮಾನ್ಸೂನ್ ಮಾರುತಗಳೊಡನೆ ಆಡುವ ಜೂಜಾಟವಾಗಿದೆ ಚರ್ಚಿಸಿರಿ?
1. ಭಾರತ ಕೃಷಿ ಪ್ರಧಾನ ದೇಶ.
2. ಮಾನ್ಸೂನ್ ಮಾರುತಗಳು ವ್ಯವಸಾಯವನ್ನು ನಿಯಂತ್ರಿಸುತ್ತವೆ.
3. ಮಳೆ ವಿಫಲವಾದರೆ ಬರಗಾಲ.
4. ಮಳೆ ಹೆಚ್ಚಾದರೆ ಪ್ರವಾಹದಿಂದ ಬೆಳೆ, ಆಸ್ತಿ & ಪ್ರಾಣ ಹಾನಿ.
22. ಕೊರಮಂಡಲಕ್ಕೆ ಮಳೆಯನ್ನು ಸುರಿಸುವ ಮಾರುತಗಳು ಯಾವುವು?
ಉ: ಈಶಾನ್ಯ ಮಾನ್ಸೂನ್ ಮಾರುತಗಳು.
23. ಯಾವ ರಾಜ್ಯವನ್ನು ಹೊರತುಪಡಿಸಿ ನೈಋತ್ಯ ಮಾನ್ಸೂನ್ ಮಾರುತಗಳು ಮಳೆಯನ್ನು ಸುರಿಸುತ್ತವೆ? 
ಉ: ತಮಿಳುನಾಡು.
24. ನೈಋತ್ಯ ಮಾನ್ಸೂನ್ ಮಾರುತಗಳು ಹಿಂತಿರುಗಲು ಕಾರಣವೇನು?
ಉ: ಉಷ್ಣಾಂಶ ಕಡಿಮೆಯಾಗಿ ಒತ್ತಡ ಹೆಚ್ಚಾಗುವುದರಿಂದ
25. ಚಳಿಗಾಲದ ಹವಾಗುಣದ ಪರಿಸ್ಥಿತಿ ವಿವರಿಸಿ?
1. ಕಡಿಮೆ ಉಷ್ಣಾಂಶ
2. ಆರ್ದ್ರತೆ & ಮೋಡರಹಿತ ಆಕಾಶ
3. ಉತ್ತರದಲ್ಲಿ ತಂಪಾದ & ದಕ್ಷಿಣದಲ್ಲಿ ಬೆಚ್ಚನೆಯ ಪರಿಸ್ಥಿತಿ
4. ಜನವರಿ ಅತಿ ಶೀತ ಮಾಹೆ
5. ವಾರ್ಷಿಕ ಮಳೆ ಶೇ.2 ಸೆಂ.ಮೀ.

26. ಭಾರತದ ವಾಯುಗುಣ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ ಏಕೆ?
1. ಸ್ಥಾನ
2. ಜಲರಾಶಿ
3. ಮೇಲ್ಮೈಲಕ್ಷಣ
4. ಮಾನ್ಸೂನ್ ಮಾರುತಗಳು
27. ನೈಋತ್ಯ ಮಾನ್ಸೂನ್ ಮಾರುತಗಳ ಎರಡು ಶಾಖೆಗಳ ನಡುವಿನ ವ್ಯತ್ಯಾಸ ತಿಳಿಸಿ?
ಅರಬ್ಬೀಸಮುದ್ರ ಶಾಖೆ :
1. ಪಶ್ಚಿಮ ಘಟ್ಟಗಳಿಗೆ ಎದುರಾಗಿ ಬೀಸುವುವು
2. ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗಕ್ಕೆ ಹೆಚ್ಚು ಮಳೆ
3. ಪೂರ್ವದ ಕಡೆಗೆ ಹೋದಂತೆ ಮಳೆ ಕಡಿಮೆ
ಬಂಗಾಳಕೊಲ್ಲಿ ಶಾಖೆ :
1. ಮೇಘಾಲಯ ಅಸ್ಸಾಂ ಬೆಟ್ಟಗಳಿಗೆ ಎದುರಾಗಿ
2. ಪೂರ್ವಘಟ್ಟಗಳ ಪೂರ್ವ ಭಾಗಕ್ಕೆ ಅಧಿಕ ಮಳೆ
3. ಪಶ್ಚಿಮದ ಕಡೆಗೆ ಹೋದಂತೆ ಮಳೆ ಕಡಿಮೆ.


****

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon