KSEEB Social Science Chapter 12 | Indian Soil | Bharatada Mannugalu | KSEEB Solutions |

KSEEB Social Science Chapter 12 Notes Indian Soil
Bharatada Mannugalu

10ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪರೀಷ್ಕೃತ ಪಠ್ಯಪುಸ್ತಕದ ಅನುಸಾರವಾಗಿ KSEEB ಪರೀಕ್ಷಾ ಸಿದ್ದತೆಗಾಗಿ ಭಾಗ 1 ಪಠ್ಯಪುಸ್ತಕದಲ್ಲಿ ಬರುವ 12 ನೇ ಅಧ್ಯಾಯ ಭಾರತದ ಮಣ್ಣುಗಳು ಈ ಅಧ್ಯಾಯವು KSEEB Social Science Chapter 12 ವು ಭೂಗೋಳ ವಿಜ್ಞಾನದಲ್ಲಿಯ ಅಧ್ಯಾಯವಾಗಿದ್ದು. ಈ ಅಧ್ಯಾಯದ ಪ್ರಮುಖವಾಗಿರುವ ಅಂಶಗಳು KSEEB ಪರೀಕ್ಷಾ ಸಿದ್ದತೆಗಾಗಿ ಇಲ್ಲಿ ನೋಡಿಕೊಳ್ಳೋಣ.


ಅಧ್ಯಾಯ 12. ಭಾರತದ ಮಣ್ಣುಗಳು
1. ನದಿಗಳು ಪರ್ವತ ಪ್ರದೇಶಗಳಿಂದ ತಂದು ಸಂಚಯಿಸಿರುವ ಮಣ್ಣು : ಮೆಕ್ಕಲುಮಣ್ಣು
2. ರಾಜಸ್ಥಾನದಲ್ಲಿ ಹೆಚ್ಚಾಗಿ ಕಂಡು ಬರುವ ಮಣ್ಣು  : ಮರುಭೂಮಿ ಮಣ್ಣು
3. ಜೋಳ ಬೆಳೆಯಲು ಉತ್ತಮವಾದ ಮಣ್ಣು : ಕಪ್ಪು ಮಣ್ಣು
4. ರಾಗಿ & ಎಣ್ಣೆ ಕಾಳು ಬೆಳೆಯಲು ಸೂಕ್ತವಾದ ಮಣ್ಣು : ಕೆಂಪು ಮಣ್ಣು
5. ಹಿಮಾಲಯ ಪರ್ವತದಲ್ಲಿ ಕಂಡುಬರುವ ಮಣ್ಣು : ಪರ್ವತ ಮಣ್ಣು
6. ಉತ್ತರ ಮೈದಾನ ಪ್ರದೇಶಗಳಲ್ಲಿ ಕಂಡುಬರುವ ಮಣ್ಣು : ಮೆಕ್ಕಲು ಮಣ್ಣು
7. ಒಣ ಬೇಸಾಯಕ್ಕೆ ಸೂಕ್ತವಾದ ಮಣ್ಣು : ಕಪ್ಪು ಮಣ್ಣು
8. ಕಪ್ಪುಮಣ್ಣು ಒಣ ಬೇಸಾಯಕ್ಕೆ ಯೋಗ್ಯವಾದುದು ಏಕೆ?
ಉ: ತೇವಾಂಶ ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ.
9. ಡೆಕ್ಕನ್ ಟ್ರಾಪ್ ಎಂದರೇನು? 
ಉ: ಕಪ್ಪುಮಣ್ಣಿನ ಪ್ರದೇಶ.
10. ಭಾರತದಲ್ಲಿ ವಿವಿಧ ಪ್ರಕಾರದ ಮಣ್ಣುಗಳು ಕಂಡುಬರಲು ಕಾರಣವೇನು? ಅಥವಾ ಭಾರತದ ಮಣ್ಣಿನಲ್ಲಿ ವೈವಿಧ್ಯತೆ ಇದೆ ಏಕೆ?
ಉ: ಮಣ್ಣಿನ ಉತ್ಪತ್ತಿಯ ಮೂಲ ಶಿಲೆಗಳು, ಮೇಲ್ಮೈಲಕ್ಷಣ, ವಾಯುಗುಣ.
11. ಮೆಕ್ಕಲುಮಣ್ಣು ಹೇಗೆ ಉತ್ಪತ್ತಿಯಾಗುತ್ತದೆ?
ಉ: ನದಿಗಳು ಮೆಕ್ಕಲು ಕಣಗಳನ್ನು ಸಂಚಯಿಸುವುದರಿಂದ.
12. ಸಮುದ್ರ ತೀರಗಳಲ್ಲಿ ಮೆಕ್ಕಲು ಮಣ್ಣು ಹೇಗೆ ನಿರ್ಮಾಣವಾಗುತ್ತದೆ?
ಉ: ಸಮುದ್ರ ಅಲೆಗಳ ಸಂಚಯದಿಂದ.
13. ಕಪ್ಪುಮಣ್ಣನ್ನು ಕಪ್ಪು ಹತ್ತಿ ಮಣ್ಣು ಎಂದು ಕರೆಯಲು ಕಾರಣವೇನು?
ಉ: ಹತ್ತಿ ಬೇಸಾಯಕ್ಕೆ ಸೂಕ್ತವಾಗಿರುವುದರಿಂದ.
14. ಕಪ್ಪುಮಣ್ಣು ಹೇಗೆ ಉತ್ಪತ್ತಿಯಾಗುತ್ತದೆ?
ಉ: ಬಸಾಲ್ಟ್ ಶಿಲಾಕಣಗಳಿಂದ.
15. ಕಪ್ಪುಮಣ್ಣು ದೀರ್ಘಕಾಲ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ ಏಕೆ?
ಉ: ಇದು ಒತ್ತೊತ್ತಾದ ಕಣಗಳಿಂದ ರಚನೆಯಾಗಿದ್ದರಿಂದ.

16. ಕೆಂಪುಮಣ್ಣು ಹೇಗೆ ಉತ್ಪತ್ತಿಯಾಗಿದೆ?
ಉ: ಗ್ರಾನೈಟ್, ನೀಸ್ ಮತ್ತು ಸ್ಪಟಿಕ ಶಿಲೆಗಳ ಶಿಥಿಲೀಕರಣದಿಂದ.
17. ಕೆಂಪುಮಣ್ಣಿಗೆ ತೇವಾಂಶ ಸಂಗ್ರಹಣಾ ಸಾಮರ್ಥ್ಯ ಕಡಿಮೆ ಇದೆ ಏಕೆ?
ಉ: ಇದರಲ್ಲಿ ಮರಳಿನಾಂಶ ಹೆಚ್ಚು ಮತ್ತು ಜೇಡಿಯ ಪ್ರಮಾಣ ಕಡಿಮೆ.
18. ಭಾರತದ ಪಶ್ಚಿಮ ಮತ್ತು ಪೂರ್ವಘಟ್ಟಗಳಲ್ಲಿ ಲ್ಯಾಟರೈಟ್ ಮಣ್ಣು ಹೆಚ್ಚಾಗಿ ಕಂಡುಬರುತ್ತದೆ ಏಕೆ?
ಉ: ಇಲ್ಲಿ ಅಧಿಕ ಮಳೆ ಮತ್ತು ಹೆಚ್ಚು ಉಷ್ಣಾಂಶ ಇರುವುದರಿಂದ.
19. ಲ್ಯಾಟರೈಟ್ ಮಣ್ಣು ಫಲವತ್ತಾದುದಲ್ಲ ಏಕೆ?
ಉ: ಇದು ಜಲವಿಲೀಕರಣಕ್ಕೊಳಪಡುವುದರಿಂದ.
20. ಮರುಭೂಮಿ ಮಣ್ಣು ವಿವಿಧ ಬೆಳೆ ಬೆಳೆಯಲು ಉಪಯುಕ್ತವಲ್ಲ ಏಕೆ?
ಉ: ಮರಳಿನ ಪ್ರಮಾಣ ಹೆಚ್ಚು, ತೇವಾಂಶ ಮತ್ತು ಸಸ್ಯಾಂಶಗಳು ಕಡಿಮೆ.
21. ಪರ್ವತ ಮಣ್ಣು ನೆಡುತೋಟದ ಬೆಳೆಗೆ ಸೂಕ್ತವಾದುದು ಏಕೆ?
ಉ: ಈ ಮಣ್ಣಿನಲ್ಲಿ ಸಸ್ಯಾಂಶ ಅಧಿಕವಾದುದರಿಂದ.
22. ಮಣ್ಣಿನ ಸವೆತವು ಕೃಷಿ ಉತ್ಪಾದನಾ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತದೆ ಹೇಗೆ?
ಉ: ಮಣ್ಣಿನ ಸಾರ ಕಡಿಮೆಯಾಗಿ ಕೃಷಿ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗುತ್ತದೆ.
23. ಇಂದು ಜಲಾಶಯಗಳಲ್ಲಿ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗುತ್ತಿದೆ ಏಕೆ?
ಉ: ಜಲಾಶಯಗಳಲ್ಲಿ ಹೂಳು ತುಂಬಿಕೊಳ್ಳುವುದರಿಂದ.
24. ಮಣ್ಣಿನ ಸವೆತ ಎಂದರೇನು? ಮಣ್ಣಿನ ಸವೆತಕ್ಕೆ ಕಾರಣಗಳೇನು?
1. ಭೂಮಿಯ ಮೇಲ್ಪದರವು ವಿವಿಧ ಪ್ರಾಕೃತಿಕ ಕಾರಣಗಳಿಂದ ಸ್ಥಳಾಂತರ ಹೊಂದುವ ಕ್ರಿಯೆ.
ಕಾರಣ : ಅರಣ್ಯನಾಶ.
2. ಅಧಿಕ ನೀರಾವರಿ.
3. ಅವೈಜ್ಞಾನಿಕ ಬೇಸಾಯ.
4. ಸಾಕು ಪ್ರಾಣಿಗಳನ್ನು ಅತಿಯಾಗಿ ಮೇಯಿಸುವಿಕೆ.
25. ಮಣ್ಣಿನ ಸವೆತದಿಂದ ಉಂಟಾಗುವ ಪರಿಣಾಮಗಳನ್ನು ತಿಳಿಸಿ?
1. ಪ್ರವಾಹಗಳ ಸೃಷ್ಟಿ
2. ನದಿಗಳ ಹರಿಯುವ ಪಾತ್ರ ಬದಲಾಗುತ್ತದೆ.
3. ಕೃಷಿ ಸಾಮರ್ಥ್ಯ ಕಡಿಮೆ.
4. ಅಂತರ್ಜಲದ ಮಟ್ಟ ಕಡಿಮೆ.
5. ಜಲಾಶಯಗಳಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆ.
6. ಬರ ಪರಿಸ್ಥಿತಿ.
7. ಆರ್ಥಿಕ ವ್ಯವಸ್ಥೆಗೆ ಹಿನ್ನಡೆ.

26. ಮಣ್ಣಿನ ಸಂರಕ್ಷಣೆ ಎಂದರೇನು? ಅದರ ವಿಧಾನಗಳನ್ನು ಪಟ್ಟಿ ಮಾಡಿ?
1. “ಮಣ್ಣಿನ ಸವೆತವನ್ನು ತಡೆಗಟ್ಟಿ ಅದರ ಫಲವತ್ತತೆಯನ್ನು ಕಾಪಾಡುವುದು”. ವಿಧಾನ : ಅರಣ್ಯ ಸಂರಕ್ಷಣೆ.
2. ಮರು ಅರಣ್ಯೀಕರಣ
3. ಚೆಕ್ಡ್ಯಾಮ್ಗಳ ನಿರ್ಮಾಣ
4. ಸಮೊನ್ನತಿ ಬೇಸಾಯ
5. ಬದುಗಳ ನಿರ್ಮಾಣ
6. ಪ್ರಾಣಿಗಳನ್ನು ಅತಿಯಾಗಿ ಮೇಯಿಸುವುದನ್ನು ನಿಯಂತ್ರಿಸುವುದು.
7. ಮೆಟ್ಟಲು ಪಂಕ್ತಿ ಬೇಸಾಯ.
8. ಕೊರಕಲು ನಿಯಂತ್ರಣ.
27. ಕೆಂಪುಮಣ್ಣು & ಜಂಬಿಟ್ಟಿಗೆ ಮಣ್ಣಿಗಿರುವ ವ್ಯತ್ಯಾಸ ತಿಳಿಸಿ?
ಕೆಂಪುಮಣ್ಣು : 
1. ರಚನೆ : ಗ್ರಾನೈಟ್, ನೀಸ್ & ಸ್ಫಟಿಕ ಶಿಲೆಗಳ ಶಿಥಲೀಕರಣ
2. ಕ್ಷೇತ್ರ : 5.2 ಲಕ್ಷ ಕಿ.ಮೀ.
3. ಬೆಳೆಗಳು : ರಾಗಿ, ಶೇಂಗಾ, ಆಲೂಗಡ್ಡೆ, ತಂಬಾಕು.
ಜಂಬಿಟ್ಟಿಗೆ ಮಣ್ಣು : 
1. ಅಧಿಕ ಮಳೆ & ಅಧಿಕ ಉಷ್ಣಾಂಶ
2. ಕ್ಷೇತ್ರ : 2.48 ಲಕ್ಷ ಕಿ.ಮೀ.
3. ಗೋಡಂಬಿ, ರಬ್ಬರ್, ಚಹ, ಕಾಫಿ.
28. ಮಣ್ಣಿನ ಪ್ರಕಾರಗಳನ್ನು ತಿಳಿಸಿ?
1. ಮೆಕ್ಕಲು ಮಣ್ಣು
2. ಕಪ್ಪು ಮಣ್ಣು
3. ಕೆಂಪು ಮಣ್ಣು
4. ಜಂಬಿಟ್ಟಿಗೆ ಮಣ್ಣು
5. ಮರುಭೂಮಿ ಮಣ್ಣು
6. ಪರ್ವತ ಮಣ್ಣು.
*****

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon