KSEEB Social Science Chapter 13 | Indian Forest | Bharatada Aranyagalu | KSEEB Solutions |

KSEEB Social Science Chapter 13 Notes Indian Forest
Bharatada Aranyagalu

10ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪರೀಷ್ಕೃತ ಪಠ್ಯಪುಸ್ತಕದ ಅನುಸಾರವಾಗಿ KSEEB ಪರೀಕ್ಷಾ ಸಿದ್ದತೆಗಾಗಿ ಭಾಗ 1 ಪಠ್ಯಪುಸ್ತಕದಲ್ಲಿ ಬರುವ 13 ನೇ ಅಧ್ಯಾಯ ಭಾರತದ ಅರಣ್ಯಗಳು ಈ ಅಧ್ಯಾಯವು KSEEB Social Science Chapter 13 ವು ಭೂಗೋಳ ವಿಜ್ಞಾನದಲ್ಲಿಯ ಅಧ್ಯಾಯವಾಗಿದ್ದು. ಈ ಅಧ್ಯಾಯದ ಪ್ರಮುಖವಾಗಿರುವ ಅಂಶಗಳು KSEEB ಪರೀಕ್ಷಾ ಸಿದ್ದತೆಗಾಗಿ ಇಲ್ಲಿ ನೋಡಿಕೊಳ್ಳೋಣ.


ಅಧ್ಯಾಯ 13. ಭಾರತದ ಅರಣ್ಯಗಳು
1. ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ : ಮಧ್ಯಪ್ರದೇಶ
2. ಭಾರತದಲ್ಲಿ ಅತಿ ಕಡಿಮೆ ಅರಣ್ಯ ಹೊಂದಿರುವ ರಾಜ್ಯ : ಗೋವಾ
3. ಅಸ್ಸಾಂ ಮೇಘಾಲಯಗಳಲ್ಲಿ ಕಂಡುಬರುವ ಅರಣ್ಯ ಪ್ರಕಾರ : ನಿತ್ಯ ಹರಿದ್ವರ್ಣ
4. ಹಿಮಾಲಯದಲ್ಲಿ ಕಂಡು ಬರುವ ಅರಣ್ಯ : ಅಲ್ಪೈನ್
5. ಗಂಗಾ ನದಿಯ ಮುಖಜ ಭೂಮಿಯಲ್ಲಿ ಕಂಡು ಬರುವ ಅರಣ್ಯ : ಸುಂದರ್ ಬನ್
6. ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ : ಜಿಮ್ ಕಾರ್ಬೆಟ್
7. ಕಾಜಿ಼ರಂಗ್ ನ್ಯಾಷನಲ್ ಪಾರ್ಕ್ ಇರುವುದು : ಅಸ್ಸಾಂ
8. ಸ್ವಾಭಾವಿಕ ಸಸ್ಯವರ್ಗ ಎಂದರೇನು?
ಉ: ಪ್ರಕೃತಿದತ್ತವಾಗಿ ಬೆಳೆದಿರುವ ಎಲ್ಲಾ ಬಗೆಯ ಸಸ್ಯ ಸಮೂಹ.
9. ಮಾನ್ಸೂನ್ ಅರಣ್ಯಗಳನ್ನು ಎಲೆಯುದುರಿಸುವ ಅರಣ್ಯಗಳೆಂದು ಕರೆಯುತ್ತಾರೆ ಏಕೆ?
ಉ: ವರ್ಷದ ನಿರ್ದಿಷ್ಟ ಋತುವಿನಲ್ಲಿ ಎಲೆಯುದುರುವುದರಿಂದ.
10. ಜೈವಿಕ ವೈವಿಧ್ಯತೆ ಎಂದರೇನು?
ಉ: ಸಸ್ಯ ಸಮೃದ್ಧತೆಯ ಜೊತೆಗೆ ಪ್ರಾಣಿ ಸಂಪತ್ತಿನ ವೈವಿಧ್ಯತೆ.

11. ಗಂಗಾ ನದಿಯ ಮುಖಜ ಭೂಮಿಯಲ್ಲಿ ಬೆಳೆಯುವ ಅರಣ್ಯಗಳನ್ನು ಸುಂದರ್ ಬನ್ ಎನ್ನುತ್ತಾರೆ ಏಕೆ?
ಉ: ಸುಂದರಿ ಮರಗಳು ಬೆಳೆಯುವುದರಿಂದ.
12. ಅರಣ್ಯಗಳು ಪ್ರವಾಹಗಳನ್ನು ಹೇಗೆ ನಿಯಂತ್ರಿಸುತ್ತವೆ? ಅಥವಾ ಅರಣ್ಯಗಳು ಮಣ್ಣಿನ ಸವೆತವನ್ನು ಹೇಗೆ ನಿಯಂತ್ರಿಸುತ್ತವೆ?
ಉ: ಹರಿಯುವ ನೀರಿನ ರಭಸವನ್ನು ಮಿತಗೊಳಿಸಿ.
13. ನಿತ್ಯಹರಿದ್ವರ್ಣದ ಕಾಡುಗಳು ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತವೆ ಏಕೆ?
ಉ: 250 ಸೆಂ.ಮೀ.ಗಳಿಗಿಂತ ಹೆಚ್ಚು ವಾರ್ಷಿಕ ಮಳೆಯಾಗುವುದರಿಂದ.
14. ನಿತ್ಯಹರಿದ್ವರ್ಣದ ಕಾಡುಗಳು ಸದಾ ಹಸಿರಾಗಿರಲು ಕಾರಣವೇನು?
ಉ: ಯಾವುದೇ ಒಂದು ಅವಧಿಯಲ್ಲಿ ಎಲೆಗಳನ್ನು ಉದುರಿಸುವುದಿಲ್ಲ.
15. ಉಷ್ಣವಲಯದ ಎಲೆ ಉದುರಿಸುವ ಕಾಡುಗಳು ದೇಶದ ವಿಶಾಲ ಪ್ರದೇಶಗಳಲ್ಲಿ ಹಂಚಿಕೆಯಾಗಿವೆ ಏಕೆ?
ಉ: 100 - 200 ಸೆಂ.ಮೀ. ಮಳೆ ದೇಶದ ಹೆಚ್ಚು ಪ್ರದೇಶಗಳಲ್ಲಿ ಬೀಳುವುದರಿಂದ.
16. ಉಷ್ಣವಲಯದ ಎಲೆ ಉದುರಿಸುವ ಕಾಡುಗಳನ್ನು ಮನ್ಸೂನ್ ಕಾಡುಗಳು ಎಂದು ಕರೆಯಲು ಕಾರಣವೇನು?
ಉ: ಈ ಮರಗಳು ವಸಂತಋತು ಮತ್ತು ಬೇಸಿಗೆಯ ಆರಂಭದಲ್ಲಿ ತಮ್ಮ ಎಲೆಗಳನ್ನು ಉದುರಿಸುತ್ತವೆ.
17. ಥಾರ್ ಮರುಭೂಮಿಯಲ್ಲಿ ಹೆಚ್ಚಾಗಿ ಮುಳ್ಳಿನ ಗಿಡಗಂಟಿಗಳು ಬೆಳೆಯುತ್ತವೆ ಏಕೆ?
ಉ: ಮಳೆಯ ಕೊರತೆ.
18. ಮ್ಯಾಂಗ್ರೋವ್ ಕಾಡುಗಳಿಗೆ ಬಿಳಿಲುಗಳ ಅಗತ್ಯತೆ ಏನು?
ಉ: ಮರಗಳಿಗೆ ಆಧಾರವಾಗಿರುತ್ತವೆ.
19. ಪ್ರಾಣಿಗಳ ಸಂರಕ್ಷಣೆಯಲ್ಲಿ ವನ್ಯ ಜೀವಿಧಾಮಗಳು ಪ್ರಮುಖ ಪಾತ್ರ ವಹಿಸುತ್ತಿವೆ ಹೇಗೆ?
ಉ: ಈ ಸ್ಥಳಗಳಲ್ಲಿ ಯಾವುದೇ ಪ್ರಾಣಿಗಳನ್ನು ಕೊಲ್ಲುವ ಮತ್ತು ಸೆರೆ ಹಿಡಿಯುವುದನ್ನು ನಿಷೇಧಿಸಲಾಗಿರುತ್ತದೆ.
20. ಸಸ್ಯ ಮತ್ತು ಪ್ರಾಣಿ ಸಂಕುಲಗಳ ಸಂರಕ್ಷಣೆಯಲ್ಲಿ ರಾಷ್ಟ್ರೀಯ ಉದ್ಯಾನವನಗಳು ಪ್ರಮುಖ ಪಾತ್ರ ವಹಿಸುತ್ತಿವೆ ಹೇಗೆ?
ಉ: ಮರಗಿಡಗಳನ್ನು ಕಡಿಯುವ ಅಥವಾ ಮೇಯಿಸುವುದು ಅಥವಾ ಕೃಷಿ ಚಟುವಟಿಕೆಗಳನ್ನು ಇಲ್ಲಿ ನಿಷೇದಿಸಲಾಗಿದೆ.

21. ಭಾರತದಲ್ಲಿ ಕಂಡುಬರುವ ವಿವಿಧ ಪ್ರಕಾರದ ಅರಣ್ಯಗಳನ್ನು ಹೆಸರಿಸಿ?
1. ನಿತ್ಯ ಹರಿದ್ವರ್ಣ ಅರಣ್ಯ
2. ಎಲೆ ಉದುರಿಸುವ ಅರಣ್ಯ
3. ಉಷ್ಣವಲಯದ ಹುಲ್ಲುಗಾವಲು
4. ಮ್ಯಾಂಗ್ರೋವ್ ಅರಣ್ಯ
5. ಮರುಭೂಮಿ ಅರಣ್ಯ
6. ಅಲ್ಪೈನ್ ಅರಣ್ಯ
22. ಕರ್ನಾಟಕದಲ್ಲಿರುವ ರಾಷ್ಟ್ರೀಯ ಉದ್ಯಾನ ವನಗಳನ್ನು ಹೆಸರಿಸಿ?
1. ಬನ್ನೇರುಘಟ್ಟ
2. ಬಂಡೀಪುರ
3. ನಾಗರಹೊಳೆ
4. ಕುದುರೆಮುಖ
5. ಅಂಶಿ
23. ಅರಣ್ಯ ನಾಶಕ್ಕೆ ಕಾರಣಗಳೇನು?
1. ವ್ಯವಸಾಯ
2. ಹೈನುಗಾರಿಕೆ
3. ರಸ್ತೆ
4. ರೈಲುಮಾರ್ಗ
5. ನೀರಾವರಿ
6. ಗಣಿಗಾರಿಕೆ
7. ಕಾಡ್ಗಿಚ್ಚು.

24. ಅರಣ್ಯ ಸಂರಕ್ಷಣೆ ಎಂದರೇನು? ಅದರ ವಿಧಾನಗಳನ್ನು ತಿಳಿಸಿ?
ಉ: “ಅರಣ್ಯಗಳನ್ನು ಮಾನವ, ಪ್ರಾಣಿ & ನೈಸರ್ಗಿಕ ವಿಪತ್ತುಗಳಿಂದ ಕಾಪಾಡುವುದು”
1. ರೋಗಗಳನ್ನು ನಿಯಂತ್ರಿಸುವುದು.
2. ಸಸಿಗಳನ್ನು ನೆಡುವುದು.
3. ಅರಣ್ಯ ನಾಶ ನಿಯಂತ್ರಣ.
4. ಕಾಡ್ಗಿಚ್ಚು ನಿಯಂತ್ರಣ.
5. ಅರಣ್ಯ ಅತಿಕ್ರಮಣದ ತಡೆ.
6. ಜನರಲ್ಲಿ ಅರಿವು ಉಂಟುಮಾಡುವುದು.
7. ಮರಗಳ ಕಳ್ಳ ಸಾಗಾಣಿಕೆ ತಡೆ.
8. ಅರಣ್ಯ ಬೆಳೆಸಲು ಪ್ರೋತ್ಸಾಹ.
25. ಭಾರತದ ಯಾವುದಾದರೂ 4 ಜೈವಿಕ ವಿಷಯಗಳನ್ನು ಹೆಸರಿಸಿ?
1. ನೀಲಗಿರಿ
2. ನೋಕ್ರೇಕ್
3. ಗ್ರೇಟ್ ನಿಕೋಬಾರ್
4. ಮನ್ನಾರ್
5. ಕಾಂಚನಗಂಗಾ

26. ಸ್ವಾಭಾವಿಕ ಸಸ್ಯವರ್ಗದ ಮೇಲೆ ಪ್ರಭಾವ ಬೀರುವ ಅಂಶಗಳಾವುವು? ಭಾರತದಲ್ಲಿ ವೈವಿಧ್ಯಮಯ ಸಸ್ಯವರ್ಗ ಕಂಡುಬರಲು ಕಾರಣವೇನು?
1. ಭೂ ಸ್ವರೂಪ
2. ಉಷ್ಣಾಂಶ
3. ಮಳೆ
4. ಮಣ್ಣು
27. ನಿತ್ಯಹರಿದ್ವರ್ಣ ಕಾಡುಗಳ ಲಕ್ಷಣ & ಹಂಚಿಕೆಯನ್ನು ತಿಳಿಸಿ?
1. ಲಕ್ಷಣ : ಮಳೆ – 250 ಸೆಂ.ಮೀ. ಗಿಂತ ಹೆಚ್ಚು
2. ಉಷ್ಣಾಂಶ : 25-27 ಸೆ.
3.ಮರಗಳು : ಮಹಾಗನಿ, ಎಬೊನಿ, ಬಿದಿರು, ರಬ್ಬರ್, ತಾಳೆ.
4. ಹಂಚಿಕೆ : ಅಸ್ಸಾಂ, ಮೇಘಾಲಯ, ತ್ರಿಪುರಾ, ನಾಗಾಲ್ಯಾಂಡ್, ಅಂಡಮಾನ್ & ನಿಕೋಬಾರ್, ಲಕ್ಷದ್ವೀಪ & ಪಶ್ಚಿಮ ಘಟ್ಟಗಳು.
28. ಎಲೆಯುದುರಿಸುವ (ಮಾನ್ಸೂನ್) ಕಾಡುಗಳ ಲಕ್ಷಣ & ಹಂಚಿಕೆಯನ್ನು ತಿಳಿಸಿ?
1. ಲಕ್ಷಣ : ಮಳೆ – 75-250 ಸೆಂ.ಮೀ.
2. ವಾಯುಗುಣ : ಮಾನ್ಸೂನ್
3. ವಿಸ್ತಾರ : 65.5, ಹಂಚಿಕೆ : ಭಾರತದ ಬಹುತೇಕ ರಾಜ್ಯಗಳು
4. ಮರಗಳು : ತೇಗ, ಸಾಲ, ಶ್ರೀಗಂಧ.
29. ಮ್ಯಾಂಗ್ರೋವ್ ಕಾಡುಗಳ ಲಕ್ಷಣ & ಹಂಚಿಕೆಯನ್ನು ತಿಳಿಸಿ?
1. ಉಬ್ಬರವಿಳಿತಗಳಿಂದಾದ ಕಾಡುಗಳು
2. ಮುಖಜಭೂಮಿ, ನದಿ ಅಳಿವೆ, ತಗ್ಗು ಪ್ರದೇಶಗಳಲ್ಲಿ ಕಂಡುಬರುತ್ತವೆ.
3. ಬಿಳಿಲುಗಳು.
4. ಗಂಗಾ, ಕಾವೇರಿ, ಕೃಷ್ಣ, ಗೋದಾವರಿ, ಮಹಾನದಿ.
5. ಮರಗಳು : ಸುಂದರಿ, ಆಲ, ಕೆಂದಾಕೆ.

30. ಮರುಭೂಮಿ ಸಸ್ಯವರ್ಗದ ಲಕ್ಷಣಗಳೇನು?
1. 50 ಸೆಂ.ಮೀ. ಗಿಂತ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಕಂಡುಬರುತ್ತವೆ.
2. ಆಳವಾಗಿ ಬೇರುಗಳನ್ನು ಹೊಂದಿರುತ್ತವೆ.
3. ಕುರುಚಲು ಜಾತಿಯ ಸಸ್ಯಗಳು.
4. ಮುಳ್ಳುಕಂಟಿಯಿಂದ ಕೂಡಿವೆ.
31. ಪರ್ವತ ಕಾಡುಗಳು :
1. ಪರ್ವತಗಳ ಇಳಿಜಾರುಗಳಲ್ಲಿ ಬೆಳೆಯುವ ಸಸ್ಯವರ್ಗ.
2. ಹಿಮಾಲಯ ಪರ್ವತ & ನೀಲಗಿರಿ ಬೆಟ್ಟಗಳಲ್ಲಿ ಕಂಡುಬರುತ್ತವೆ.
3. ಮರಗಳು : ಓಕ್, ಆಶ್, ಬೀಚ್, ಪೈನ್, ಸಿಡಾರ್, ಫರ್, ವಾಲ್ನಟ್.
****

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon