10th Social Science Chapter 4 Notes | Karnatakadalli British Alvikege Pratirodhagalu & Mysore Odeyaru | SSLC New Book Notes |

10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ - 4
ಕರ್ನಾಟಕದಲ್ಲಿ ಬ್ರಿಟೀಷ್ ಆಳ್ವಿಕೆಗೆ ಪ್ರತಿರೋಧಗಳು ಮತ್ತು ಮೈಸೂರಿನ ಒಡೆಯರು
10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು 2022-23ನೇ ಸಾಲಿನಿಂದ ಪರಿಷ್ಕರಣೆ ಹೊಂದಿದ್ದು. ಈ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಬರುವ ನಾಲ್ಕನೇಯ ಅಧ್ಯಾಯ ಕರ್ನಾಟಕದಲ್ಲಿ ಬ್ರಿಟೀಷ್ ಆಳ್ವಿಕೆಗೆ ಪ್ರತಿರೋಧಗಳು ಮತ್ತು ಮೈಸೂರಿನ ಒಡೆಯರು ಅಧ್ಯಾಯವಾಗಿದ್ದು. ಈ ಅಧ್ಯಾಯದಲ್ಲಿ ಬರುವ ಪ್ರಮುಖ ಅಂಶಗಳ ನೋಟ್ಸ್ ಗಳನ್ನು ನಾವು ಇಲ್ಲಿ ಅಧ್ಯಯನ ಮಾಡೋಣ. 18ನೇ ಶತಮಾನವನ್ನು  ರಾಜಕೀಯ ಸಮಸ್ಯೆಗಳ ಶತಮಾನ ಎಂದು ಕರೆಯಲಾಗುತ್ತದೆ. 

 
ಪ್ರಮುಖ ಯುದ್ಧಗಳು ಮತ್ತು ಒಪ್ಪಂದಗಳು
1ನೇ ಆಂಗ್ಲೋ ಮೈಸೂರು ಯುದ್ಧ : ಮದ್ರಾಸ್ ಒಪ್ಪಂದ – 1769
2ನೇ ಆಂಗ್ಲೋ ಮೈಸೂರು ಯುದ್ಧ : ಮಂಗಳೂರು ಒಪ್ಪಂದ – 1784
3ನೇ ಆಂಗ್ಲೋ ಮೈಸೂರು ಯುದ್ಧ : ಶ್ರೀರಂಗಪಟ್ಟಣ ಒಪ್ಪಂದ – 1792
4ನೇ ಆಂಗ್ಲೋ ಮೈಸೂರು ಯುದ್ಧ : ಶ್ರೀರಂಗಪಟ್ಟಣ ಒಪ್ಪಂದ – 1799
1. ಮೈಸೂರಿನ ಒಡೆಯರ ಮೂಲ ಪುರುಷರು – ಯದುರಾಯ ಮತ್ತು ಕೃಷ್ಣರಾಯ
2. ಮೈಸೂರಿನ ಕೊನೆಯ ಒಡೆಯರು – 10ನೇ ಜಯಚಾಮರಾಜ ಒಡೆಯರ್
3. ಕಿತ್ತೂರು ಚೆನ್ನಮ್ಮ ಶಿವಲಿಂಗಪ್ಪ ಎಂಬ ಹುಡುಗನನ್ನು ದತ್ತು ಪಡೆದಿದ್ದಳು.
4. ರಾಜ ಒಡೆಯರು ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು.
5. ಅಮರ ಸುಳ್ಯ ಬಂಡಾಯವು ಮೂಲತಃ ರೈತ ಬಂಡಾಯ.
6. ಸುರಪುರವು ಈಗಿನ ಯಾದಗಿರಿ ಜಿಲ್ಲೆಯಲ್ಲಿದೆ.
7. ಈಗಿನ ಬಾಗಲಕೋಟೆ ಜಿಲ್ಲೆಯ ಹಲಗಲಿ ಬೇಡರು ಬ್ರಿಟೀಷರ ವಿರುದ್ಧ ದಂಗೆಯೆದ್ದರು.
8. ರಾಯಣ್ಣನ ಊರು ಸಂಗೊಳ್ಳಿ.
9. ಕರ್ನಾಟಕದ ಚರಿತ್ರೆಯಲ್ಲಿ 1857ರ ಕ್ರಾಂತಿಯ ನಾಯಕ ಎಂದು ಇತಿಹಾಸಕಾರರು ಯಾರನ್ನು ವರ್ಣಿಸಿದ್ದಾರೆ?
ಉ: ವೆಂಕಟಪ್ಪ ನಾಯಕ.
10. ರಾಜ ಒಡೆಯರು ಏಕೆ ಪ್ರಸಿದ್ಧರು ಅಥವಾ ರಾಜ ಒಡೆಯರ ಸಾಧನೆ ತಿಳಿಸಿ?
ಉ: 1. ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು.
2. ರಾಜ್ಯ ವಿಸ್ತರಣೆ.
3. ದೇವಾಲಯಗಳ ಜೀರ್ಣೋದ್ಧಾರ.
4. ನವರಾತ್ರಿ ಉತ್ಸವ ಆರಂಭ.

11. ದಿವಾನ್ ರಂಗಾಚಾರ್ಲು ಅವರ ಸಾಧನೆ ತಿಳಿಸಿ?
ಉ: 1. ಪ್ರಜಾಪ್ರತಿನಿಧಿ ಸಭೆ ಸ್ಥಾಪನೆ.
2. ಕೋಲಾರ ಚಿನ್ನದ ಗಣಿ ಆರಂಭ.
3. ಬೆಂಗಳೂರು – ಮೈಸೂರು ರೈಲ್ವೆ ಪ್ರಾರಂಭ.
12. ಕೆ.ಶೇಷಾದ್ರಿ ಅಯ್ಯರ್ ಅವರ ಕೊಡುಗೆ ತಿಳಿಸಿ?
ಉ: 1. ಹಣಕಾಸಿನ ಸ್ಥಿತಿ ಉತ್ತಮಗೊಳಿಸಿದರು.
2. ಮೈಸೂರು ಸಿವಿಲ್ ಸರ್ವಿಸ್ ಪರೀಕ್ಷೆ ಆರಂಭ.
3. ಮೈಸೂರಿನಲ್ಲಿ ಮಹಾರಾಣಿ ಬಾಲಕಿಯರ ಪ್ರೌಢಶಾಲೆ ಪ್ರಾರಂಭ.
13. ಚಿಕ್ಕದೇವರಾಜ ಒಡೆಯರು ಒಬ್ಬ ಸಮರ್ಥ ಆಡಳಿತಗಾರರು ಹಾಗೂ ಕಲೆ ಮತ್ತು ಸಾಹಿತ್ಯ ಅಭಿಮಾನಿಯಾಗಿದ್ದರು ಈ ಹೇಳಿಕೆಯನ್ನು ಸಮರ್ಥಿಸಿ.
ಉ: 1. ಸಮರ್ಥ ಯೋಧ ಮತ್ತು ದಕ್ಷ ಆಡಳಿತಗಾರ.
2. ಶಿವಾಜಿ ಸೇನೆಯನ್ನು ಸೋಲಿಸಿದರು.
3. ಮಾಗಡಿ, ಮಧುಗಿರಿ, ಕೊರಟಗೆರೆ ವಶ.
4. ಬೆಂಗಳೂರನ್ನು ಮೊಘಲರಿಂದ ಕೊಂಡರು.
5. ಅಠಾರಾ ಕಚೇರಿ ಸ್ಥಾಪನೆ.
6. ಅಂಚೆ ಇಲಾಖೆ ಸ್ಥಾಪನೆ.
7. ಕಾವೇರಿ ನದಿಗೆ 2 ಕಾಲುವೆ ನಿರ್ಮಾಣ.
8. ಕವಿ ಪಂಡಿತರಿಗೆ ಆಶ್ರಯ.
9. ಕವಿಚಕ್ರವರ್ತಿ, ನವಕೋಟಿ ನಾರಾಯಣ ಬಿರುದು ಧರಿಸಿದ್ದರು.

14. ನಾಲ್ವಡಿ ಕೃಷ್ಣರಾಜ ಒಡೆಯರನ್ನು ಮಾದರಿ ಮೈಸೂರು ನಿರ್ಮಾಪಕರೆಂದು ಏಕೆ ಕರೆಯುತ್ತಾರೆ?
ಉ: 1. ಗಾಂಧೀಜಿಯವರಿಂದ ರಾಜರ್ಷಿ ಎಂದು ಕರೆಸಿಕೊಂಡರು.
2. ಮೈಸೂರು ವಿಶ್ವವಿದ್ಯಾಲಯ.
3. ಕನ್ನಡ ಸಾಹಿತ್ಯ ಪರಿಷತ್ತು.
4. ಭಾರತೀಯ ವಿಜ್ಞಾನ ಸಂಸ್ಥೆ-ಬೆಂಗಳೂರು.
5. ಕಾವೇರಿ ನದಿಗೆ ಅಣೆಕಟ್ಟು ನಿರ್ಮಾಣ.
6. ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ.
7. ಮಂಡ್ಯದಲ್ಲಿ ಕಾಗದ ಮತ್ತು ಸಕ್ಕರೆ ಕಾರ್ಖಾನೆ.
8. ಮೈಸೂರು ಗಂಧದ ಎಣ್ಣೆ ಕಾರ್ಖಾನೆ.
9. ಸಾಬೂನು ಮತ್ತು ರಾಸಾಯನಿಕ ಗೊಬ್ಬರ ಕಾರ್ಖಾನೆ ಸ್ಥಾಪನೆ.
15. 18ನೇ ಶತಮಾನವನ್ನು ರಾಜಕೀಯ ಸಮಸ್ಯೆಗಳ ಶತಮಾನ ಎಂದು ಏಕೆ ಕರೆಯುತ್ತಾರೆ?
ಉ: 1. ಔರಂಗಜೇಬನ ಮರಣ.
2. ದ.ಭಾರತದಲ್ಲಿ ಮೊಘಲರ ಹತೋಟಿ ತಪ್ಪಿತ್ತು.
3. ಕರ್ನಾಟಿಕ್ ಪ್ರದೇಶದಲ್ಲಿ ರಾಜಕೀಯ ಕಿತ್ತಾಟ.
4. ಚಿಕ್ಕದೇವರಾಜ ಒಡೆಯರ ಮರಣ.
5. ಒಡೆಯರ ಮರಣದಿಂದ ಮೈಸೂರಿನ ಮೇಲಾದ ದುಷ್ಪರಿಣಾಮ.
6. ಇದರಿಂದ ಹೈದರಾಲಿ ರಾಜಕೀಯ ಪ್ರಾಮುಖ್ಯತೆ ಗಳಿಸಿದನು.

16. ಹೈದರಾಲಿ ಹೇಗೆ ಪ್ರವರ್ಧಮಾನಕ್ಕೆ ಬಂದನು?
ಉ: 1. ರಾಜಕೀಯ ಚಾಣಾಕ್ಷ.
2. ದೇವನಹಳ್ಳಿ ಮುತ್ತಿಗೆಯ ಸೈನಿಕ ಕಾರ್ಯಾಚರಣೆ.
3. ಸೈನಿಕರ ವಿಶ್ವಾಸ ಗಳಿಸಿದನು.
4. ಶಸ್ತ್ರಗಳ ಉಪಯೋಗ & ಪ್ರಯೋಗಗಳಲ್ಲಿ ಖ್ಯಾತಿ
5. ದಳವಾಯಿಗಳ ಬಲ ಕುಂದಿಸಿದನು.
6. ಒಡೆಯರನ್ನು ಮೂಲೆಗುಂಪಾಗಿಸಿ ಅಧಿಕಾರ ಸ್ಥಾಪಿಸಿದನು.
17. 1ನೇ ಆಂಗ್ಲೋ ಮೈಸೂರು ಯುದ್ಧ ಕುರಿತು ವಿವರಿಸಿ?
ಕಾರಣ : 1. ಹೈದರಾಲಿಯ ರಾಜಕೀಯ ಪ್ರಾಬಲ್ಯ.
2. ಆರ್ಕಾಟಿನ ರಾಜಕೀಯ ಸಮಸ್ಯೆ.
3. ಹೈದರಾಲಿಯ ಏಳಿಗೆ ಬ್ರಿಟಿಷ್, ಮರಾಠರು & ನಿಜಾಮನಿಗೆ ಅಸಹನೆ ಮೂಡಿಸಿತ್ತು.
4. ಮುನ್ನಡೆ : ಹೈದರಾಲಿ ವಿರುದ್ಧ ಬ್ರಿಟೀಷ್, ಮರಾಠರು & ನಿಜಾಮನ ಒಪ್ಪಂದ.
5. ಹೈದರಾಲಿ ಮಿತ್ರಕೂಟವನ್ನು ಒಡೆದನು.
6. ಹೈದರಾಲಿ ಆರ್ಕಾಟಿನ ಮೇಲೆ ಮುತ್ತಿಗೆ ಹಾಕಿದನು.
7. ಹೈದರಾಲಿ ಮಿಂಚಿನ ಕಾರ್ಯಾಚರಣೆ ನಡೆಸಿದನು.
8. ಹೈದರಾಲಿ ಮದ್ರಾಸಿನವರೆಗೆ ಮುಂದುವರೆದನು.
9. ಪರಿಣಾಮ : ಬ್ರಿಟೀಷರು ಮದ್ರಾಸ್ ಒಪ್ಪಂದ ಮಾಡಿಕೊಂಡರು.

18. 2ನೇ ಆಂಗ್ಲೋ ಮೈಸೂರು ಯುದ್ಧ ಕುರಿತು ವಿವರಿಸಿ?
ಕಾರಣ : 1. ತಿರುವಾಂಕುರು & ತಂಜಾವೂರು ರಾಜ್ಯಗಳಲ್ಲಿನ ರಾಜಕೀಯ ಸನ್ನಿವೇಶ
2. ಬ್ರಿಟೀಷರಿಂದ ಮದ್ರಾಸ ಒಪ್ಪಂದ ಉಲ್ಲಂಘನೆ.
3. ಬ್ರಿಟೀಷರು ಮಾಹೆ ವಶಪಡಿಸಿಕೊಂಡದ್ದು.
4. ಬ್ರಿಟೀಷರು ಒಪ್ಪಂದಕ್ಕೆ ವಿರುದ್ಧವಾಗಿ ನಡೆದದ್ದು.
ಮುನ್ನಡೆ : 1. 1780 ರಲ್ಲಿ ಯುದ್ಧ ಆರಂಭ.
2. ಹೈದರಾಲಿಯಿಂದ ಅನೇಕ ಕೋಟೆ ವಶ.
3. ಕಾಂಚಿಪುರಂ ವಶ
4. ಕೋರಮಂಡಲ ತೀರದವರೆಗೆ ಮುನ್ನಡೆ
5. ಹೈದರಾಲಿಯಿಂದ ಆರ್ಕಾಟಿನ ವಶ
6. ಬ್ರಿಟೀಷರ ವಿರುದ್ಧ ಹೈದರಾಲಿಗೆ ಫ್ರೆಂಚರ ನೆರವು
7. 1781 ರಲ್ಲಿ ಪೊರ್ಟಿನೋವೊ ಕದನದಲ್ಲಿ ಹೈದರಾಲಿಯ ಸೋಲು
8. ಪುಲಿಕಾಟ್ & ಸೋಲಿಂಗೂರು ಕದನದಲ್ಲಿ ಪರಾಭವ
9. 1782 ರಲ್ಲಿ ಹೈದರಾಲಿಯ ಮರಣ
10. ಟಿಪ್ಪು ಮಂಗಳೂರಿನಲ್ಲಿ ಬ್ರಿಟೀಷರನ್ನು ಸೋಲಿಸಿದನು.
ಪರಿಣಾಮ : 1. ಮಂಗಳೂರು ಒಪ್ಪಂದದಿಂದ ಯುದ್ಧ ಕೊನೆಗೊಂಡಿತು.

19. 3ನೇ ಆಂಗ್ಲೋ ಮೈಸೂರು ಯುದ್ಧ ಕುರಿತು ಬರೆಯಿರಿ?
ಕಾರಣ : 1. ತಿರುವಾಂಕೂರಿನ ಸಮಸ್ಯೆ
2. ಬ್ರಿಟೀಷರಿಂದ ಮಂಗಳೂರು ಒಪ್ಪಂದ ಉಲ್ಲಂಘನೆ
ಮುನ್ನಡೆ : 1. ಬ್ರಿಟೀಷರು ಕಾರವಾರ ಕೊಯಮತ್ತೂರು, ಡಿಂಡಿಗಲ್ ವಶಪಡಿಸಿಕೊಂಡರು,
2. ಟಿಪ್ಪುವಿನಿಂದ ಬಾರಾಮಲ್, ಸತ್ಯಮಂಗಲ ವಶ
3. ಕಾರ್ನ್ವಾಲಿಸ್ ಕೋಲಾರ & ಹೊಸಕೋಟೆ ವಶಪಡಿಸಿಕೊಂಡನು.
4. ಬೆಂಗಳೂರು ವಶ
5. ಬ್ರಿಟೀಷರು, ಮರಾಠರು & ನಿಜಾಮರು ಶ್ರೀರಂಗಪಟ್ಟಣ ಕೋಟೆ ಹಾಳುಗೆಡವಿದರು.
ಪರಿಣಾಮ : 1. ಶ್ರೀರಂಗಪಟ್ಟಣ ಒಪ್ಪಂದದಿಂದ ಯುದ್ಧ ಅಂತ್ಯ.

20. ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳಾವುವು? ಅಥವಾ 3ನೇ ಆಂಗ್ಲೋ ಮೈಸೂರು ಯುದ್ಧದ ಪರಿಣಾಮಗಳಾವುವು?
ಉ: 1. ಟಿಪ್ಪು ಅರ್ಧ ರಾಜ್ಯ ಬಿಟ್ಟುಕೊಟ್ಟನು.
2. ಯುದ್ಧ ನಷ್ಟದ ಪರಿಹಾರ 3 ಕೋಟಿ ರೂ. ಕೊಡುವುದು.
3. ಹಣ ಕೊಡುವವರೆಗೆ ಇಬ್ಬರು ಗಂಡು ಮಕ್ಕಳನ್ನು ಒತ್ತೆ ಇಡುವುದು.
4. ಸೆರೆ ಹಿಡಿದಿದ್ದ ಸೈನಿಕರ ಬಿಡುಗಡೆ.
21. 4ನೇ ಆಂಗ್ಲೋ ಮೈಸೂರು ಯುದ್ಧ ಬ್ರಿಟೀಷರನ್ನು ಮೈಸೂರು ಪ್ರಾಂತ್ಯದಲ್ಲಿ ಭದ್ರಗೊಳಿಸಿತು ವಿಮರ್ಶಿಸಿ?
ಉ: 1. 1799 ರಲ್ಲಿ ಯುದ್ಧ ಆರಂಭ
2. ಬ್ರಿಟೀಷರು ಟಿಪ್ಪು ಕೋಟೆ ಭೇದಿಸಿದರು.
3. ಟಿಪ್ಪು 1799 ರಲ್ಲಿ ಹತನಾದನು.
4. ಟಿಪ್ಪುವಿನ ಪ್ರದೇಶಗಳನ್ನು ಮರಾಠರು & ನಿಜಾಮನೊಂದಿಗೆ ಬ್ರಿಟೀಷರು ಹಂಚಿಕೊಂಡರು.
5. ಸಣ್ಣ ಪ್ರಾಂತ ಒಡೆಯರಿಗೆ ಹಸ್ತಾಂತರ.
22. 4ನೇ ಮೈಸೂರು ಯುದ್ಧಕ್ಕೆ ಕಾರಣಗಳೇನು?
ಉ: 1. ಅವಮಾನಕರ ಒಪ್ಪಂದದ ಷರತ್ತುಗಳು
2. ಟಿಪ್ಪು ದೇಶೀಯ ರಾಜರ ನೆರವು ಪಡೆಯಲು ಪ್ರಯತ್ನಿಸಿದ್ದು
3. ಟಿಪ್ಪು ಫ್ರೆಂಚರೊಂದಿಗೆ ಹೊಂದಿದ್ದ ಸಂಬಂಧ
4. ಟಿಪ್ಪು ಫ್ರೆಂಚರ ನೆರವು ಪ್ರಯತ್ನಿಸಿದ್ದು.
5. ಟಿಪ್ಪು & ಫ್ರೆಂಚರ ನಡುವಿನ ಸ್ನೇಹ.
6. ಟಿಪ್ಪುವಿನ ಮೇಲೆ ಬ್ರಿಟೀಷರು ಹೊಸ ಷರತ್ತು ವಿಧಿಸಿದ್ದು.

23. ದೊಂಡಿಯಾ ವಾಘ ಬ್ರಿಟೀಷರ ವಿರುದ್ಧ ಹೋರಾಟದಲ್ಲಿ ಹೋರಾಡಿದ ಕ್ರಮವನ್ನು ವಿಶ್ಲೇಷಿಸಿ?
ಉ: 1. ಶಿವಮೊಗ್ಗ & ಬಿದನೂರು ಕೋಟೆ ವಶ
2. ಬ್ರಿಟೀಷರು ಶಿವಮೊಗ್ಗ, ಹೊನ್ನಾಳಿ, ಹರಿಹರದ ಮೇಲೆ ಆಕ್ರಮಣ ನಡೆಸಿದರು.
3. ಶಿಕಾರಿಪುರ ಸೋಲಿನ ನಂತರ ಗುತ್ತಿಯ ಕಡೆಗೆ ಪಲಾಯನ
4. ನಿಜಾಮನು ಗುತ್ತಿ ಮುತ್ತಿದಾಗ ಮರಾಠರ ಕಡೆಗೆ ಪಲಾಯನ
5. ಫ್ರೆಂಚರಿಂದ ದೊಂಡಿಯಾನಿಗೆ ಪ್ರೋತ್ಸಾಹ.
6. ಬ್ರಿಟೀಷರು ಅವನನ್ನು ಹಿಂಬಾಲಿಸಿದರು.
7. ಬ್ರಿಟೀಷರಿಂದ ಅನೇಕ ಸೈನಿಕರ ಹತ್ಯೆ.
8. ಸುರಪುರ ಗೆದ್ದ ದೊಂಡಿಯಾ ಬ್ರಿಟೀಷ್ ಸೈನ್ಯವನ್ನು ಚದುರಿಸಿದನು.
9. ಕೊನ್ಗಲ್ ಕಾರ್ಯಾಚರಣೆಯಲ್ಲಿ ದೊಂಡಿಯಾ ಹತ್ಯೆಯಾದನು.

24. ಸಂಗೊಳ್ಳಿರಾಯಣ್ಣನು ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ಕ್ರಮವನ್ನು ವಿವರಿಸಿ?
ಉ: 1. ಗುಪ್ತ ಸಭೆಗಳ ಮೂಲಕ ಯೋಜನೆ ತಯಾರಿ
2. ನಂದಗಡ, ಖಾನಾಪುರ, ಸಂಪಗಾವಿ ಕಾರ್ಯಾಚರಣೆ
3. ರಾಣಿ ಚೆನ್ನಮ್ಮನ ಜೊತೆಯಲ್ಲಿ ಬ್ರಿಟೀಷರ ವಿರುದ್ಧ ಹೋರಾಟ
4. ತಾಲ್ಲೋಕು ಕಛೇರಿ & ಖಜಾನೆ ಲೂಟಿ ಮಾಡಿದನು.
5. ರಾಯಣ್ಣನನ್ನು ಸೆರೆಹಿಡಿಯಲು ಕೃಷ್ಣರಾಯ ಸಂಚಿಗೆ ಕೈ ಜೋಡಿಸಿದನು.
6. ರಾಯಣ್ಣನನ್ನು ಬಂಧಿಸಿ ಧಾರವಾಡಕ್ಕೆ ತರಲಾಯಿತು.
7. 1831ರಲ್ಲಿ ನಂದಗಡದಲ್ಲಿ ಗಲ್ಲಿಗೇರಿಸಲಾಯಿತು.
25. ಸ್ವಾತಂತ್ರ್ಯ ಹೋರಾಟದಲ್ಲಿ ಕೊಡಗಿನ ಪ್ರಾಂತ್ಯದಿಂದ ಪುಟ್ಟಬಸಪ್ಪನ ಪಾತ್ರವನ್ನು ವಿವರಿಸಿ?
ಉ: 1. ಬಸಪ್ಪ ಬಂಡುಕೋರರನ್ನು ಸಂಘಟಿಸಿದನು.
2. ತಂಬಾಕು & ಉಪ್ಪಿನ ಕರವನ್ನು ರದ್ದು ಮಾಡಲಾಗುವುದು ಎಂದು ಘೋಷಿಸಿದನು.
3. ಬಳ್ಳಾರೆಯಲ್ಲಿ ಸರ್ಕಾರಿ ಕಛೇರಿಯನ್ನು ವಶಪಡಿಸಿಕೊಂಡನು.
4. ಬ್ರಿಟೀಷ್ ಅಧಿಕಾರಿಗಳನ್ನು ಬಂಧಿಸಿದನು.
5. ಪುತ್ತೂರಿನಲ್ಲಿ ಬ್ರಿಟೀಷ್ ಸೈನ್ಯವನ್ನು ಎದುರಿಸಿದನು.
6. ಪಾಣಿ, ಮಂಗಳೂರು, ಬಂಟ್ವಾಳದಲ್ಲಿ ಕಾರ್ಯಾಚರಣೆ ನಡೆಸಿದನು.
7. ಜೈಲು, ಖಜಾನೆ ಲೂಟಿ ಮಾಡಿದನು.
8. ಬ್ರಿಟೀಷರು ಸ್ಥಳೀಯರ ಸಹಕಾರದಿಂದ ಅವನು & ಅವನ ಸಹಚರರನ್ನು ಸೆರೆಹಿಡಿದು ಗಲ್ಲಿಗೇರಿಸಿದರು.
26. ಸುರಪುರ ದಂಗೆಯನ್ನು ಸಂಕ್ಷಿಪ್ತವಾಗಿ ವಿವರಿಸಿ?
ಉ: 1. ಬ್ರಿಟೀಷರು ರಾಜನನ್ನು ಅನುಮಾನದಿಂದ ಕಾಣುತ್ತಿದ್ದರು.
2. ರಾಜನು ದುರ್ವ್ಯವಹಾರದಲ್ಲಿ ನಿರತನಾಗಿದ್ದಾನೆಂದು ರೆಸಿಡೆಂಟನಿಗೆ ವರದಿ ಸಲ್ಲಿಸಿದರು.
3. ಬ್ರಿಟೀಷರು ಸುರಪುರವನ್ನು ಆಕ್ರಮಿಸಿದರು.
4. ಯುದ್ಧ ಮುಂದುವರೆಯಿತು.
5. ಕೋಟೆ ಬ್ರಿಟೀಷರ ವಶವಾಯಿತು.
6. ಬ್ರಿಟೀಷರು ವೆಂಕಟಪ್ಪ ನಾಯಕನನ್ನು ಬಂಧಿಸಿದರು.

27. ಹಲಗಲಿಯ ಬೇಡರ ದಂಗೆಯನ್ನು ವಿವರಿಸಿ? ಅಥವಾ ಹಲಗಲಿ ಬೇಡರಿಗೆ ಬ್ರಿಟೀಷರ ವಿರುದ್ಧದ ಹೋರಾಟ ಅನಿವಾರ್ಯವಾಗಿತ್ತು ಎಂದು ಹೇಗೆ ಹೇಳುವಿರಿ?
ಉ: 1. ಬ್ರಿಟೀಷರಿಂದ ಶಸ್ತ್ರಾಸ್ತ್ರ ಕಾಯ್ದೆ ಜಾರಿ.
2. ಅದನ್ನು ಹಲಗಲಿಯ ಬೇಡರಿಗೂ ಅನ್ವಯಿಸಿದರು.
3. ಇದನ್ನು ವಿರೋಧಿಸಿ ಬೇಡರು ಬ್ರಿಟೀಷರ ವಿರುದ್ಧ ಸಿಡಿದೆದ್ದರು.
4. ಇವರ ಜೊತೆಗೆ ಮಂಟರೂ, ಬೇದಾನಿ, ಆಲಗುಂಡಿಯ ಬೇಡರು ಸೇರಿಕೊಂಡರು.
5. ದಂಗೆಯೆದ್ದ ಬೇಡರನ್ನು ಬ್ರಿಟೀಷರು ಹತ್ತಿಕ್ಕಿದರು.
6. ಅನೇಕರನ್ನು ಗಲ್ಲಿಗೇರಿಸಿದರು.
28. ಕೊಪ್ಪಳದ ವೀರಪ್ಪನ ಹೋರಾಟ ವಿವರಿಸಿ?
ಉ: 1. ಕೊಪ್ಪಳ & ಹತ್ತಿರದ ಕೋಟೆ ವಶಪಡಿಸಿಕೊಂಡನು.
2. ರೈತರು & ಜಮೀನ್ದಾರರು ಅವನ ಕೈ ಜೋಡಿಸಿದರು.
3. ಬ್ರಿಟೀಷರು ವೀರಪ್ಪನ ಬಂಡಾಯ ಹತ್ತಿಕ್ಕಲು ಸೈನ್ಯ ನಿಯೋಜಿಸಿದರು.
4. ವೀರಪ್ಪ ಬ್ರಿಟೀಷರ ವಿರುದ್ಧ ಹೋರಾಟ ಮುಂದುವರೆಸಿದನು.
5. ವೀರಪ್ಪ ಸತತ ಹೋರಾಟ ನಡೆಸಿ ಮರಣ ಹೊಂದಿದನು.
6. ಬ್ರಿಟೀಷರಿಂದ ಕೋಟೆ ವಶ.
29. ಕಿತ್ತೂರು ರಾಣಿ ಚೆನ್ನಮ್ಮಳಿಗೆ ಬ್ರಿಟೀಷರ ವಿರುದ್ಧ ಯುದ್ಧ ಅನಿವಾರ್ಯವಾಗಿತ್ತು ಏಕೆ?
ಉ: 1. ಚೆನ್ನಮ್ಮ ದತ್ತು ಮಗನ ಪರವಾಗಿ ಆಡಳಿತ ನಡೆಸುತ್ತಿದ್ದಳು.
2. ಬ್ರಿಟೀಷರು ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ನಿರಾಕರಿಸಿ ಕಿತ್ತೂರು ವಶಪಡಿಸಿಕೊಳ್ಳಲು ಯತ್ನಿಸಿದರು.
3. ಕಿತ್ತೂರಿನ ಖಜಾನೆ, ಕೋಟೆ, ಕೊತ್ತಲ ವಶಕ್ಕೆ ತೆಗೆದುಕೊಂಡರು.
4. ಬ್ರಿಟೀಷರು ತಮ್ಮ ಸೈನ್ಯ ಸಿದ್ಧಮಾಡಲು ಆರಂಭಿಸಿದರು.
5. ಬ್ರಿಟೀಷ್ ಸೈನ್ಯ ಕಿತ್ತೂರಿಗೆ ಮುತ್ತಿಗೆ ಹಾಕಿತ್ತು.
6. ರಾಣಿ ಚೆನ್ನಮ್ಮ ಅವರ ಪ್ರಯತ್ನ ವಿಫಲಗೊಳಿಸಲು ಯುದ್ಧ ಅನಿವಾರ್ಯವೆಂದಳು.
30. ಮೇಡೊಸ್ ಟೇಲರ್ ಸುರಪುರ ಸಂಸ್ಥಾನದಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಾವುವು?
ಉ: 1. ಸುರಪುರದ ಮೇಲೆ ಹತೋಟಿ ಸಾಧಿಸಿದ.
2. ಸುಧಾರಣಾವಾದಿಯಾಗಿದ್ದ.
3. ಸುರಪುರವನ್ನು ಅಭಿವೃದ್ಧಿಪಡಿಸಿದನು.
4.ಪೆದ್ದನಾಯಕನನ್ನು ದಿವಾನನಾಗಿ ನೇಮಿಸಿದನು.
5. ಭೂ ಸಮೀಕ್ಷೆ ಮಾಡಿಸಿದನು.
6. ವೆಂಕಟಪ್ಪ ನಾಯಕನಿಗೆ ಶಿಕ್ಷಣ ವ್ಯವಸ್ಥೆ ಕಲ್ಪಿಸಿದನು.
31. ಬ್ರಿಟೀಷರಲ್ಲಿ ಟಿಪ್ಪುವಿನ ಬಗ್ಗೆ ದ್ವೇಷ ಭಾವನೆ ಮೂಡಲು ಕಾರಣವೇನು?
ಉ: 1. ಬ್ರಿಟೀಷರನ್ನು ತನ್ನ ಪರಮ ವೈರಿ ಎಂದು ತಿಳಿದಿದ್ದ.
2. ಬ್ರಿಟೀಷರನ್ನು ಭಾರತದಿಂದ ಓಡಿಸುವುದು ತನ್ನ ಪರಮ ಕರ್ತವ್ಯ ಎಂದು ತಿಳಿದಿದ್ದ.
3. ನಿರಂತರವಾಗಿ ಬ್ರಿಟೀಷರೊಂದಿಗೆ ಹೋರಾಡಿದನು.
4. ಬ್ರಿಟೀಷರ ಕುತಂತ್ರ & ಚಾಣಾಕ್ಷನೀತಿ ಅರ್ಥಮಾಡಿಕೊಂಡಿದ್ದನು.
5. ಬ್ರಿಟೀಷರನ್ನು ವಿರೋಧಿಸುತ್ತಿದ್ದವರ ನೆರವು ಪಡೆಯಲು ಪ್ರಯತ್ನಿಸಿದನು.
6. ಅವರ ವ್ಯಾಪಾರದ ಏಕಸ್ವಾಮ್ಯ ಮುರಿಯುವ ಪ್ರಯತ್ನ ನಡೆಸಿದನು.
******

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon