9ನೇ ತರಗತಿ ಅರ್ದವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆ 2022-23 | ಸಂಕಲನಾತ್ಮಕ ಪರೀಕ್ಷೆ -1 ಪ್ರಶ್ನೆ ಪತ್ರಿಕೆ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ SA-1

9ನೇ ತರಗತಿ ಅರ್ದವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆ 2022-23 | ಸಂಕಲನಾತ್ಮಕ ಪರೀಕ್ಷೆ -1 ಪ್ರಶ್ನೆ ಪತ್ರಿಕೆ


ಮೊದಲನೇಯ ಸಂಕಲನಾತ್ಮ ಕಪರೀಕ್ಷೆ 2022-23

SA-1ಪ್ರಶ್ನೆಪತ್ರಿಕೆ

ತರಗತಿ: 9ನೇ ತರಗತಿ                                                              ವಿಷಯ: ಸಮಾಜ ವಿಜ್ಞಾನ

ಗರಿಷ್ಠ ಅಂಕಗಳು :80                                                                ಸಮಯ: 3 ಗಂಟೆ+15ನಿಮಿಷ

________________________________________________________________________________________________

I. ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ ಕ್ರಮಾಕ್ಷರದೊಂದಿಗೆ ಬರೆಯಿರಿ  8X1=8

1. ಪೂರ್ವರೋಮನ್‌ ಸಾಮ್ರಾಜ್ಯವನ್ನು ಹೀಗೆಂದು ಕರೆಯುತ್ತಿದ್ದರು.

A) ಪ್ಲೆಬಿಯನ್‌

B) ಬೈಜಾಂಟೈನ್

C)‌ ಉಂಬಳಿರಾಜ್ಯ

D) ಹಿಡುವಳಿಸಾಮ್ರಾಜ್ಯ

2. ನಾವಿಕರು ತಲುಪಬೇಕಾದ ಪ್ರದೇಶದ ದೂರ ಮತ್ತು ಮಾರ್ಗಗಳನ್ನು ತಿಳಿಯಲು ಉಪಯೋಗಿಸುವ ಸಾಧನ

A) ಅಸ್ಟ್ರೋಲೋಬ್

B) ನಕಾಶೆ

C)‌ ದಿಕ್ಸೂಚಿ

D) ಮೇಲಿನಯಾವದು ಅಲ್ಲ 

3. ಅತಿ ಹೆಚ್ಚು ವಸಾಹತುಗಳನ್ನು ಹೊಂದಿದ್ದ ದೇಶ ಯಾವುದು

A) ರಷ್ಯಾ

B) ಪೋರ್ಚುಗಲ್

C)‌ ಸ್ಪೇನ್

D) ಇಂಗ್ಲೇಂಡ್

4.‌ ಇವುಗಳಲ್ಲಿ ಭಾರತ ಮೂಲದ ಕಂಪನಿ

A) ಓಪ್ಪೋ

B) ಸ್ಯಾಮಸಂಗ್

C)‌ ಟಾಟಾಮೋಟರ್ಸ್

D) ಅಮೇಜಾನ್ 

5.‌ ಆರ್‌ ಟಿ.ಐಕಾಯ್ದೆ ಯಾವಾಗ ಜಾರಿಗೆ ಬಂದಿತು

A) 2001

B) 2005

C)‌ 2009

D) 2011 

6. ಭಾರತ ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ

A) 9ನೇ ಡಿಸೆಂಬರ್‌ 1946

B) 11ನೇ ಡಿಸೆಂಬರ್‌ 1946

C)‌ 9ನೇ ಡಿಸೆಂಬರ್‌ 1948

D) 11ನೇ ಡಿಸೆಂಬರ್‌ 1948 

7. ಭಾರತವು ಭೂಮಿಯ ಯಾವ ಗೋಳಾರ್ಧದಲಿದೆ

A) ಉತ್ತರಾರ್ಧ ಗೋಳದ ಪೂರ್ವಭಾಗ

B) ಉತ್ತರಾರ್ಧ ಗೋಳದ ಪಶ್ಚಿಮಭಾಗ

C)‌ ದಕ್ಷಾಣಾರ್ಧ ಗೋಳದ ಪೂರ್ವಭಾಗ

D) ದಕ್ಷಾಣಾರ್ಧ ಗೋಳದ ಪಶ್ಚಿಮಭಾಗ 

8. ಸಂವಿಧಾನ ರಚನಾಸ ಭೆಯಲ್ಲಿದ್ದ ಕನ್ನಡಿಗ ಯಾರು?

A) ಎಸ್.ನಿಜಲಿಂಗಪ್ಪ

B) ಮಹಾತ್ಮಾ ಗಾಂಧಿಜಿ

C)‌ ಸುಚಿತಾ ಕೃಪಲಾನಿ

D) ಬಾಬುರಾಜೇಂದ್ರ ಪ್ರಸಾದ

II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.     8X1=8

9. ಪುರಾತತ್ವ ಆಧಾರಗಳು ಎಂದರೇನು?

10. ಬ್ಲಾಕ್ಡೆತ್‌ ಎಂದರೇನು?

11. ಪುನರುಜ್ಜೀವನ ಮೊದಲು ಎಲ್ಲಿ ಪ್ರಾರಂಭವಾಯಿತು?

12. ಕಾಟನ್‌ ಜಿನ್‌ ಯಂತ್ರವನ್ನು ಯಾರು ಕಂಡುಹಿಡಿದರು?

13. ಫ್ರೇಂಚ್‌ ಕ್ರಾಂತಿಯ ಚಿಂತಕರೊಬ್ಬರನ್ನು ಹೆಸರಿಸಿ

14. ಜರ್ಮನಿಯ ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ?

15. ಭಾರತದ ಸಂಸ್ಥಾನಗಳ ವಿಲೀನಿಕರಣ ಯಾರು ಮಾಡಿದರು

16. ಭಾರತದ ಸಮಯ ನಿರ್ಧಾರಕ ರೇಖಾಂಶ ಯಾವುದು?


III. ಈ ಕೆಳಗಿನ ಪ್ರಶ್ನೆಗಳಿಗೆ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.       8X2=16

17. ಪ್ರಾಥಮಿಕ ವಲಯದ ವೃತ್ತಿಗಳನ್ನು ಹೆಸರಿಸಿ.

18. ಕರ್ನಾಟಕದ ಪ್ರಾಕೃತಿಕ ವಿಭಾಗಗಳನ್ನು ಹೆಸರಿಸಿ.

19. ಭಾರತ ಸ್ವಾತಂತ್ರ್ಯ ಬಂದಾಗ ದೇಶ ಎದುರಿಸಿದ ಸಮಸ್ಯೆ ಗಳಾವುವು?

ಅಥವಾ

ಭಾತದ ರಾಷ್ಟ್ರೀಯ ಹಬ್ಬಗಳನ್ನು ಹೆಸರಿಸಿ.

20. ರೈಲಿನಲ್ಲಿನ ಕ್ರಾಂತಿಕಾರಕ ಬದಲಾವಣೆಯಿಂದಾದ ಅನುಕೂಲಗಳೇನು?

21. ʼಸೂರ್ಯ ಮುಳುಗದ ನಾಡುʼ ಎಂದು ಇಂಗ್ಲೆಂಡನ್ನು ಏಕೆ ಕರೆಯುತ್ತಾರೆ?

22. ವ್ಯಾಪಾರಿ ತಂಡ ಎರಡು ಮತ್ತು ಮೂರನೇ ಬಾರಿಗೆ ಹೇಗೆ ವ್ಯಾಪಾರವನ್ನು ನಡೆಸಿತು?

23. ಸಾಂಬಾರು ಅಥವಾ ಮಸಾಲೆ ಪದಾರ್ಥಗಳು ಯುರೋಪಿನ ದೇಶಗಳಿಗೇಕೆ ಹೆಚ್ಚು ಅವಶ್ಯಕತೆ ಇದೆ?

24. ಟರ್ಕರು ಕಾನ್ಸ್‌ ಟಾಂಟಿ ನೋಪಲ್‌ ನಗರವನ್ನು ಏಕೆ ವಶಪಡಿಸಿಕೊಂಡರು?


IV. ಈ ಕೆಳಗಿನ ಪ್ರಶ್ನೆಗಳಿಗೆ ಆರು ವಾಕ್ಯಗಳಲ್ಲಿ ಉತ್ತರಿಸಿರಿ.     9X3=27

25. ಭಾರತದಲ್ಲಿ ವ್ಯವಹಸರಿಸುವ 5 ಪ್ರಮುಖ ವಿದೇಶಿ ಕಂಪನಿಗಳು ಹಾಗೂ ಅವುಗಳ ಉತ್ಪನ್ನಗಳನ್ನು ಹೆಸರಿಸಿ.

ಅಥವಾ

ಭಾರತ ಮೂಲದ 5 ಬಹುರಾಷ್ಟ್ರೀಯ ಕಂಪನಿಗಳನ್ನು ಹೆಸರಿಸಿ.

26. ಕೈಮಗ್ಗದಿಂದ ಬಟ್ಟೆ ತಾಯಾರಿಕೆ ಮತ್ತು ಯಂತ್ರದಿಂದ ಬಟ್ಟೆ ತಯಾರಿಕೆ ಅನುಕೂಲ ಮತ್ತು ಅನಾನುಕೂಲಗಳನ್ನು ಬರೆಯಿರಿ.

27.ಪುನರುಜ್ಜೀವನದ ಪರಿಣಾಮಗಳನ್ನು ತಿಳಿಸಿ.

28.ನಿಮ್ಮ ಊರಿನ ಸಮೀಪದಲ್ಲಿರುವ ಯಾವುದಾದರೊಂದು ಐತಿಹಾಸಿಕ ಸ್ಥಳದ ಬಗ್ಗೆ ಬರೆಯಿರಿ.

29.ಉದ್ಯೋಗದ ವಲಯಗಳನ್ನು ವಿಭಾಗಿಸಿ ಪಟ್ಟಿ ಮಾಡಿ.

30.ನಿಮ್ಮ ಊರಿನ ಸುತ್ತ ಮುತ್ತಲಿನ ವಿವಿಧ ಮರಗಳು, ಪ್ರಾಣಿ ಮತ್ತು ಪಕ್ಷಿಗಳನ್ನು ಹೆಸರಿಸಿ

31.ನಿಮ್ಮಶಾಲೆಯ ನಕ್ಷೆಯನ್ನು ಬರೆದು ನಿಮ್ಮ ತರಗತಿಯ ಕೋಣೆಯನ್ನು ಗುರುತಿಸಿ

32.ಮೂಲಭೂತ ಹಕ್ಕುಗಳನ್ನು ಪಟ್ಟಿಮಾಡಿರಿ.

33. ನಿಮ್ಮ ಶಾಲಾ ಸಂಸತ್ತಿನ ರಚನೆಯನ್ನು ಕುರಿತು ಬರೆಯಿರಿ.

 V. ಈ ಕೆಳಗಿನ ಪ್ರಶ್ನೆಗಳಿಗೆ ಎಂಟರಿಂದ ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.      4X4=16

34.ಭಾರತ ಸಂವಿಧಾನದಲ್ಲಿ ನೀಡಲಾಗಿರುವ ಮೂಲಭೂತ ಕರ್ತವ್ಯಗಳನ್ನು ಪಟ್ಟಿಮಾಡಿರಿ.

ಅಥವಾ

ಭಾರತ ಸಂವಿಧಾನ ಪೂರ್ವ ಪೀಠಿಕೆಯನ್ನು ಬರೆಯಿರಿ

35. ಇತಿಹಾಸದ ಆಧಾರಗಳನ್ನು ಚಾರ್ಟ್‌ ರೂಪದಲ್ಲಿ ಬರೆಯಿರಿ

36.ನಿಮ್ಮ ಊರಿನನಕ್ಷೆಯನ್ನು ಬರೆದು ಪ್ರಾಕೃತಿಕ ವಿಭಾಗಗಳನ್ನು ಗುರುತಿಸಿ

37.ನಿಮ್ಮ ಊರಿನಲ್ಲಿ ಬೆಳೆಯುವ ಬೆಳೆಗಳನ್ನು ಬರೆಯಿರಿ. ಅವುಗಳು ಬೆಳೆಯುವ ಕಾಲವನ್ನು ತಿಳಿಸಿ. 

VI. ಪ್ರಪಂಚದ ನಕ್ಷೆಯನ್ನು ಬರೆದು ಅದರಲ್ಲಿ ಈ ಕೆಳಗಿನವುಗಳನ್ನು ಗುರುತಿಸಿ.                                    1+4=5

38.

a) ಕಾನ್ಸ್‌ ಟಾಂಟಿನೋಪಲ್

b)‌ ಇಂಗ್ಲೆಂಡ್

c)‌ 0 ಡಿಗ್ರಿಅಕ್ಷಾಂಶ

d) 0 ಡಿಗ್ರಿರೇಖಾಂಶ

*****





Comments

Popular posts from this blog

Karnataka SSLC Board Exam Result 2025 | How to Check Karnataka SSLC Exam-1 Result 2025

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon