9ನೇ ತರಗತಿ ಅರ್ದವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆ 2022-23 | ಸಂಕಲನಾತ್ಮಕ ಪರೀಕ್ಷೆ -1 ಪ್ರಶ್ನೆ ಪತ್ರಿಕೆ | 9ನೇ ತರಗತಿ ಪ್ರಥಮ ಭಾಷೆ ಕನ್ನಡ ಪ್ರಶ್ನೆ ಪತ್ರಿಕೆ SA-1

First Language Kannada 9th SA-1 Question Paper-2022

PDF Download Link is end of the page


ಪ್ರಥಮ ಭಾಷೆ ಕನ್ನಡ

ಸಂಕಲನಾತ್ಮಕ ಮೌಲ್ಯಮಾಪನ-1 ಪ್ರಶ್ನೆ ಪತ್ರಿಕೆ

ವಿಷಯ: ಪ್ರಥಮ ಭಾಷೆ ಕನ್ನಡ               ಗರಿಷ್ಠ ಅಂಕಗಳು : 100

ತರಗತಿ: 9ನೇ ತರಗತಿ ಸಮಯ :                 3 ಗಂಟೆ 15 ನಿಮಿಷ

ಸಾಮಾನ್ಯ ಸೂಚನೆಗಳು :

  • ಈ ಪ್ರಶ್ನೆ ಪತ್ರಿಕೆಯು ವಸ್ತುನಿಷ್ಠ ಮತ್ತು ವಿಷಯನಿಷ್ಠ ಮಾದರಿಯ ಒಟ್ಟು 45 ಪ್ರಶ್ನೆಗಳನ್ನು ಹೊಂದಿದೆ.

  • ಬಲ ಭಾಗದಲ್ಲಿ ಕೊಟ್ಟಿರುವ ಅಂಕಿಗಳು ಪ್ರಶ್ನೆಗಳಿಗಿರುವ ಪೂರ್ಣ ಅಂಕಗಳನ್ನು ತೋರಿಸುತ್ತವೆ.

  • ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷಗಳ ಕಾಲಾವಕಾಶವು ಸೇರಿದಂತೆ, ಉತ್ತರಿಸಲು ನಿಗದಿಪಡಿಸಲಾದ ಸಮಯವನ್ನು ಪ್ರಶ್ನೆ ಪತ್ರಿಕೆಯ ಮೇಲ್ಭಾಗದಲ್ಲಿ ನೀಡಲಾಗಿದೆ.

I. ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ: 6X1=6

1. ಮಾತು ಬಲ್ಲವನಿಗೆ ……………..

() ರೋಗವಿಲ್ಲ

(ಬಿ) ಆರೋಗ್ಯವಿಲ್ಲ

(ಸಿ) ರೋಗವಿಲ್ಲ

(ಡಿ) ಜಗಳವಿಲ್ಲ

2. ನಿನ್ನ ಶಾಲೆಯ ನಲ್ಲಿಯಲ್ಲಿ ನೀರು ಹರಿದು ಹೋಗುತ್ತಿದೆ. ಆಗ ನಾನು ……

() ಸುಮ್ಮನೇ ಮನೆಗೆ ಹೋಗುತ್ತೇನೆ.

(ಬಿ) ನನ್ನ ಸ್ನೇಹಿತರಿಗೆ ಹೇಳುತ್ತೇನೆ.

(ಸಿ) ಮುಖ್ಯಗುರುಗಳಿಗೆ ತಿಳಿಸುತ್ತೇನೆ

(ಡಿ) ನಲ್ಲಿಯನ್ನು ನಿಲ್ಲಿಸುತ್ತೇನೆ

3. ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ಯಾವಾಗ ಜನಿಸಿದರು.

() ಜನೆವರಿ 1. 1888

(ಬಿ) ಸಪ್ಟೆಂಬರ್ 5 1888.

(ಸಿ) ಜೂನ್ 5, 1890

(ಡಿ) ಡಿಸೆಂಬರ್ 5, 1898

Jothreddy” YouTube

4. ದಿನಾಲು, ನೋಡಿ, ನಾಣ್ಯ, ರೈತ, ಬಿಡಿಸಿದ, ಹದ್ದಿನ ಈ ಪದಗಳನ್ನು ಅಕಾರಾದಿಯಾಗಿ ಜೋಡಿಸಿ.

() ಬಿಡಿಸಿದ, ದಿನಾಲು, ನಾಣ್ಯ, ನೋಡಿ, ರೈತ, ಹದ್ದಿನ.

(ಬಿ) ದಿನಾಲು, ನೋಡಿ, ನಾಣ್ಯ, ಬಿಡಿಸಿದ, ರೈತ, ಹದ್ದಿನ.

(ಸಿ) ದಿನಾಲು, ನಾಣ್ಯ, ನೋಡಿ, ರೈತ, ಬಿಡಿಸಿದ, ಹದ್ದಿನ.

(ಡಿ) ದಿನಾಲು, ನಾಣ್ಯ, ನೋಡಿ, ಬಿಡಿಸಿದ, ರೈತ, ಹದ್ದಿನ.

5. ಹಣ ನೀಡಿದವರಿಗೆ ಪ್ರತಿಯಾಗಿ ಭಿಕ್ಷುಕ ಏನನ್ನು ನೀಡುತ್ತಿದ್ದ?

() ಬೈಗುಳ

(ಬಿ) ಕಲ್ಲು

(ಸಿ) ಹೂವು

(ಡಿ) ಕಡ್ಲೇಕಾಯಿ

6. ಮನೆ ಕಟ್ಟಿ ನೋಡು…………..

() ಬಣ್ಣ ಹಚ್ಚಿ ನೋಡಿ

(ಬಿ) ಕುಲಾವಿ ಹೊಲಿಸಿ ನೋಡು

(ಸಿ) ದೀಪವಿಟ್ಟು ನೋಡು

(ಡಿ) ಮದುವೆ ಮಾಡಿ ನೋಡು.


II. ಕೆಳಗಿನವುಗಳಲ್ಲಿ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿ ಹೊಂದುವ ಸಂಬಂಧೀ ಪದವನ್ನು ಬರೆಯಿರಿ. 4x1=4

7. ...: ಸ್ವರಾಕ್ಷರಗಳು :: ...:

8. ಕೈ ಕೆಸರಾದರೆ : ಬಾಯಿ ಮೊಸರು :: ಅತಿ ಆಸೆ :

9. ಫಸಲು : ಬೆಳೆ :: ಸೊಂಪಾಗಿ :

10. ಸೂರ್ಯ : ನೇಸರ :: ಭೂಮಿ :

III. ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ: 7X1=7

11. ಓಣಂ ಎಲ್ಲಿ ಆಚರಿಸುತ್ತಾರೆ?

12. ಟಾರ್ನೆಡೋ ಎಂದರೇನು?

13. ತಂಬಾಕು ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮವನ್ನು ಬರೆಯಿರಿ.

14. ಪ್ಲಾಸ್ಟಿಕ್ ಬಳಕೆ ಮಾಡಬಾರದು ಏಕೆ?

15. “ಶೌಚಾಲಯ ಬಳಸಿ, ಆರೋಗ್ಯದಿಂದಿರ” ಈ ಘೋಷಣಾ ವಾಕ್ಯದ ಉದ್ದೇಶವೇನು?

16. ಅರಣ್ಯ ನಾಶವನ್ನು ತಡೆಗಟ್ಟಲು ಏನು ಮಾಡಬೇಕು?

17. ನಿವು ಓದಿರುವ ಒಂದು ಪುಸ್ತಕದ ಹೆಸರನ್ನು ಬರೆದು ಅದರಲ್ಲಿ ಇಷ್ಟವಾಗಿರುವ ಒಂದು ಅಂಶವನ್ನು ಬರೆಯಿರಿ.

IV. ಕೆಳಗಿನ ಪ್ರಶ್ನೆಗಳಿಗೆ ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ: 10X2=20

18. ವೀರಗಾಸೆಯ ವೇಷಭೂಷಣಗಳಾವುವು ?

19. ಮೂಲಭೂತ ಹಕ್ಕುಗಳನ್ನು ಪಟ್ಟಿ ಮಾಡಿರಿ.

20. ಪ್ರವಾಹದಿಂದ ಉಂಟಾಗುವ ಸಮಸ್ಯೆಗಳಾವುವು?

21. ಜಲಸಂರಕ್ಷಣೆಯ ವಿಧಾನಗಳಾವುವು ?

22. ಭಿಕ್ಷೆ ಬೇಡುವುದು ತಪ್ಪೋ? ಸರಿಯೋ ? ಯೋಚಿಸಿ ಬರೆಯಿರಿ.

23. ಸೈಬರ್ ಅಪರಾಧವೆಂದರೇನು ? ಉದಾಹರಣೆ ಕೊಡಿ.

24. ಸಖಿ ಯೋಜನೆಯನ್ನು ಜಾರಿಗೆ ತಂದ ಉದ್ದೇಶವೇನು?

25. ಪ್ರವಾಸಿ ಸ್ಥಳವಾದ ಜಯಪುರದ ಬಗ್ಗೆ ತಿಳಿಸಿ.

26. ನಿಮ್ಮ ಒಂದು ದಿನದ ದಿನಚರಿಯನ್ನು ಬರೆಯಿರಿ.

27. ಸತ್ಯಾನಂದ ಪಾತ್ರೋಟರ ‘ಗಿಡಮರ’ ಪದ್ಯದಲ್ಲಿನ ಮರದ ಒಳ್ಳೆಯ ಗುಣಗಳನ್ನು ಪಟ್ಟಿ ಮಾಡಿರಿ.


V. ಈ ಸಾಹಿತಿ/ಕವಿಗಳ ಸ್ಥಳ, ಕಾಲ, ಕೃತಿ, ಪ್ರಶಸ್ತಿ/ಬಿರುದುಗಳನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ 2X3=6

28. ಬಸವಣ

29. ರಾಘವಾಂಕ


VI. ಕೆಳಗಿನ ಚಿತ್ರಗಳ ಸರಣಿಯನ್ನು ಗಮನಿಸಿ ಕಥೆ ರಚಿಸಿ 1X3=3

30.


VII. 31.
ನಿಮ್ಮ ಒಂದು ವಾರದ ದಿನಚರಿಯನ್ನು ಬರೆಯಿರಿ               1X3=3


VIII. ಕೆಳಗಿನ ಗಾದೆಗಳಲ್ಲಿ ಒಂದನ್ನು ಬರೆಯಿರಿ:               1X3=3

32. ಉಪ್ಪು ತಿಂದವನು ನೀರು ಕುಡಿಯಲೇ ಬೇಕು

ಅಥವಾ

ಕೋಟಿ ವಿದ್ಯೆಗಿಂತ, ಮೇಟಿ ವಿದ್ಯೆ ಮೇಲು

IX. ಈ ಕೆಳಗಿನ ಹೇಳಿಕೆಗಳನ್ನು ಸ್ವಾರಸ್ಯದೊಂದಿಗೆ ಅರ್ಥೈಸಿ ಬರೆಯಿರಿ 6X3=18

33. ಗೆಳೆತನದಲ್ಲಿ ನಂಬಿಕೆ ದ್ರೋಹ ಮಾಡುವುದು ತಪ್ಪು’

34. ನೀರು ಉಳಿಸಿ; ಭವಿಷ್ಯ ರಕ್ಷಿಸಿ’

35. ‘ಹಾವಿನ ಬಾಯಿಗೆ ತುತ್ತಾದರೂ ಸಮಾಜದ ಬಾಯಿಗೆ ತುತ್ತಾಗಬೇಡ’

36. ‘ಹಸಿರು ನಮ್ಮೆಲ್ಲರ ಉಸಿರು’

37. ‘‘ಶೌಚಾಲಯ ಇಲ್ಲದ ಮನೆಗೆ ಹೆಣ್ಣು ಕೊಡಬೇಡಿ’

38. ‘‘ದುಡಿಯುವವನ ಕಂಡರೆ ಬಡತನ ಓಡುತ್ತದೆ’


X. ಈ ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿರಿ 1X4=4

39. ಒಂದು ಮುಂಜಾವಿನಲಿ __________________

__________________________________

__________________________________

_____________________ನಡುವೆ ನುಸುಳುತಿತ್ತು

ಅಥವಾ

ಇಳೆವೆಣ್ಣು ___________________________

___________________________________

___________________________________

__________________________ಹೊಳೆಯುತ್ತಿತ್ತು


XI. ಈ ಕೆಳಗಿನ ಪದ್ಯಭಾಗವನ್ನು ಓದಿ ಅರ್ಥಮಾಡಿಕೊಂಡು, ಅಡಕವಾಗಿರುವ ಮೌಲ್ಯವನ್ನಾಧರಿಸಿ ಸಾರಾಂಶ ಬರೆಯಿರಿ 1X4=4

40. ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೋ

ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜತುಂಬಿ.

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೋ,

ತನುವಿನೊಳಗೆ ಹುಸಿತುಂಬಿ, ಮನದೊಳಗೆ ವಿಷಯ ತುಂಬಿ.

ಮನೆಯೊಳಗೆ ಮನೆಯೊಡೆಯನಿಲ್ಲ ಕೂಡಲ ಸಂಗಮದೇವ


XII. ಈ ಕೆಳಗಿನ ಪ್ರಶ್ನೆಗಳಿಗೆ ಎಂಟು ಅಥವಾ ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ. 2X4=8

41. ಪ್ಲಾಸ್ಟಿಕ್ ಬಳಕೆಯಿಂದಾಗುವ ಮಾರಕಗಳೇನು? ಮತ್ತು ಅದರೆ ಬಳಕೆ ತಪ್ಪಿಸಲು ಪರ್ಯಾಯ ವ್ಯವಸ್ಥೆಗಳಾವುವು?

ಅಥವಾ

ತಂಬಾಕಿನ ಉತ್ಪನ್ನಗಳಾವುವು? ಮತ್ತು ಅವುಗಳ ಸೇವನೆಯಿಂದ ಮನುಷ್ಯರ ಆರೋಗ್ಯದ ಮೇಲೆ

ಉಂಟಾಗುತ್ತಿರುವ ದುಷ್ಪರಿಣಾಮಗಳಾವುವು?

42. 9ನೇ ತರಗತಿಯ ‘ಪಾರಿವಾಳ’ ಪದ್ಯದ ಸಾರಾಂಶವನ್ನು ಕಥೆಯ ರೂಪದಲ್ಲಿ ಬರೆಯಿರಿ.

ಅಥವಾ

ಯೋಧ ಮತ್ತು ಹೆಂಗಸು ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.


XIII.ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು, ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. 2+2=4

ಮಳೆರಾಜನು ಸುರಿಸುವ ಮಳೆ ನೀರಿನಿಂದಲೇ ರೈತ ಆಹಾರಧಾನ್ಯಗಳನ್ನು ಬೆಳೆಯುತ್ತಾನೆ. ಲತೆಗಳು ಹೂವುಗಳನ್ನು ಕೊಡುತ್ತವೆ. ಗಿಡಮರಗಳು ಹಣ್ಣುಹಂಪಲುಗಳನ್ನು ಕೊಡುವವು. ಹೊಳೆ ಕೆರೆಗಳು ನೀರು ಕೊಡುವುದು ಮಳೆರಾಜನ ಕೃಪೆಯಿಂದಲೇ. ಸಕಲ ಜೀವಿಗಳನ್ನು ರಕ್ಷಿಸುವ ರಾಜನೆಂದರೆ ಅದು ಮಳೆರಾಯನೇ ಆಗಿರುತ್ತಾನೆ. ಹೀಗೆ ಅನ್ನ ನೀರು ನೀಡುವ ಮಳೆರಾಯ ನಮ್ಮ ಪ್ರಕೃತಿಗೆ ವರವಾಗಿದ್ದಾನೆ. ನಮ್ಮ ಶಾರೀರಿಕ ಆರೋಗ್ಯ ಚೆನ್ನಾಗಿರಲು ಒಳ್ಳೆಯ ಶುಚಿಯಾದ ಆಹಾರ ಹಾಗೂ ಸ್ವಚ್ಛ ನೀರು ಬೇಕು. ಅನುಭವಿಗಳು ಇದನ್ನೆ “ಕೂಳು ಕುತ್ತು; ನೀರು ಪಿತ್ತು” ಅಂದಿದ್ದಾರೆ. ಅಂದರೆ ಅಶುದ್ಧವಾದ ಆಹಾರ ಹಾಗೂ ಹೊಲಸು ನೀರು ನಮ್ಮ ಶರೀರವನ್ನು ರೋಗಮಯ ಮಾಡುತ್ತವೆ. ಸತ್ತ÷್ವಯುತ ಬಿಸಿಬಿಸಿಯಾದ, ಹಿತಮಿತವಾದ ಆಹಾರ ಹಾಗೂ ಪರಿಶುದ್ಧವಾದ ನೀರು ಆರೋಗ್ಯಪೂರ್ಣ ಬೆಳವಣಿಗೆಯ ಮುಖ್ಯವಸ್ತುಗಳಾಗಿವೆ.

ಪ್ರಶ್ನೆಗಳು :

43. ) ಮಾನವನ ಶರೀರವನ್ನು ಆರೋಗ್ಯಪೂರ್ಣವಾಗಿಸಲು ಅವಶ್ಯವಾದ ವಸ್ತುಗಳಾವುವು?

) ‘ಮಳೆರಾಯ ನಮ್ಮ ಪ್ರಕೃತಿಗೆ ವರವಾಗಿದ್ದಾನೆ’ ಹೇಗೆ ?


XIV. ಈ ಕೆಳಗಿನ ಯಾವುದಾದರೂ ಒಂದಕ್ಕೆ ಕೊಟ್ಟಿರುವ ಮಾಹಿತಿಯನ್ನಾಧರಿಸಿ ಪತ್ರ ಬರೆಯಿರಿ. 1*5=5

44. ನಿಮ್ಮನ್ನು ಕೊಡಗು ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಸಾಕ್ಷಿತಾ/ಸುರೇಶ ಎಂದು ಭಾವಿಸಿಕೊಂಡು ನಿಮ್ಮ ಶಾಲೆಯಲ್ಲಿ ನಡೆದ ಚಿತ್ರಕಲೆ ಸ್ಪರ್ಧೆಯನ್ನು ಕುರಿತು ಮೈಸೂರಿನಲ್ಲಿರುವ ನಿಮ್ಮ ಸ್ನೇಹಿತ/ಸ್ನೇಹಿತೆಗೊಂದು ಪತ್ರ ಬರೆಯಿರಿ.

ಅಥವಾ

ನಿಮ್ಮನ್ನು ಬೀದರ ನ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಕಿರಣ/ಕವಿತಾ ಎಂದು ಭಾವಿಸಿಕೊಂಡು ನಿಮ್ಮ ಶಾಲೆಯಲ್ಲಿ ನಡೆಯುವ ಗಿಡನೆಡುವ ಕಾರ್ಯಕ್ರಮಕ್ಕೆ ಆಹ್ವಾನಿಸಿ ನಿಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೊಂದು ಪತ್ರ ಬರೆಯಿರಿ.


XV. ಈ ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಕುರಿತು ಹದಿನೈದು ವಾಕ್ಯಗಳಿಗೆ ಕಡಿಮೆಯಿಲ್ಲದಂತೆ ಪ್ರಬಂಧ ಬರೆಯಿರಿ. 1X5=5

45. ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು

ಅಥವಾ

ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ

*****





Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon