ಜುಲೈ 2021 ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ

ಜುಲೈ 2021 ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಆತ್ಮಿಯರೆ, ಕೋವಿಡ್ -19 ಕಾರಣದಿಂದಾಗಿ 2021ರಲ್ಲಿ ನಡೆಯಬೇಕಾಗಿದ್ದ SSLC ಪರೀಕ್ಷೆಯ ವೇಳಾಪಟ್ಟಿಯನ್ನು ಮುಂದೊಡಲಾಗಿತ್ತು. ಈಗ ಪರೀಕ್ಷೆಯು ಹೊಸ ಮಾದರಿಯಲ್ಲಿ ನಡೆಯುತ್ತಿದ್ದು ಜುಲೈ 2021 ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 6ನೇ ಅಡ್ಡರಸ್ತೆ ಮಲ್ಲೇಶ್ವರಂ ಬೆಂಗಳೂರು 560 003 ಯ ನಿರ್ದೇಶಕರು ದಿನಾಂಕ 28.06.2021 ರಂದು ಜುಲೈ 2021 ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಯನ್ನು ಪ್ರಕಟಿಸಿದ್ದಾರೆ, ಇದು ಕರ್ನಾಟಕ ಪ್ರೌಢ ಸಿಕ್ಷಣಾ ಪರೀಕ್ಷಾ ಮಂಡಳಿಯ ಅಂತರ ಜಾಲದಲ್ಲಿ ಇದ್ದು ಇದರ ಪ್ರಕಾರವಾಗಿ 2021ರ ಜುಲೈ ನಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಪರೀಕ್ಷಾ ಸಿದ್ದತೆಯನ್ನು ಮಾಡಿಕೊಂಡು ಆ ದಿನದ ಪರೀಕ್ಷೆಯನ್ನು ಬರೆಯಬಹುದಾಗಿದೆ. ಪರೀಕ್ಷೆಯ ವೇಳಾ ಪತ್ರಿಕೆಯು ಈ ರೀತಿಯಾಗಿದೆ: ಕೋರ್ ಸಬ್ಜೇಕ್ಟ್ ಪೇಪರ್ -1 ದಿನಾಂಕ 19.07.2021 ರಂದು ಸೋಮುವಾರ ಬೆಳಿಗ್ಗೆ 10.30 ರಿಂದ 1.30 ರ ವರೆಗೆ ಕೋರ್ ಸಬ್ಜೇಕ್ಟ್ ಪೇಪರ್ -1 (ಗಣಿತ-40 ಅಂಕಗಳಿಗೆ, ವಿಜ್ಞಾನ 40 ಅಂಕಗಳಿಗೆ ಮತ್ತು ಸಮಾಜ ವಿಜ್ಞಾನ 40 ಅಂಕಗಳಿಗೆ ಒಟ್ಟು 120 ಪ್ರಶ್ನೆಗಳು ಮತ್ತು 120 ಅಂಕಗಳು) ಭಾಷಾ ವಿಷಯ ಪೇಪರ್ -2 ದಿನಾಂಕ 22.07.2021 ರಂದು ಗುರುವಾರ ...