ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು | ಹತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆ-4 | ರಾಜ್ಯಶಾಸ್ತ್ರ ಅಧ್ಯಾಯ- ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು |

ಅಭ್ಯಾಸ ಹಾಳೆ 4

ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು

ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು



I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
1) ತಾವು ವಾಸಿಸುವ ಪ್ರದೇಶದ ಬಗ್ಗೆ ಅತ್ಯಂತ ಗಾಢವಾದ ಅಭಿಮಾನ ಬೆಳೆಸಿಕೊಂಡಿರುವುದು __ ಎನ್ನುತ್ತೇವೆ.
ಉತ್ತರ : ಪ್ರಾದೇಶಿಕವಾದ
2) ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ವಿಭಜನೆಯು _ ಇಸವಿಯಲ್ಲಿ ಆಯಿತು.
ಉತ್ತರ : 1956
3) ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು _ ಸಂಸ್ಥೆ ಅಸ್ತಿತ್ವದಲ್ಲಿದೆ.
ಉತ್ತರ : ಲೋಕಾಯುಕ್ತ
4) 2011 ಜನಗಣತಿ ಪ್ರಕಾರ ಭಾರತದ ಜನಸಂಖ್ಯೆಯು _ ಕೋಟಿ ದಾಟಿದೆ.
ಉತ್ತರ : 121 ಕೋಟಿ
5) ಭಾರತದ ಸಾರ್ವಜನಿಕ ಜೀವನದಲ್ಲಿ __ ಒಂದು ಮುಖ್ಯ ಪಿಡುಗು ಎನಿಸಿದೆ.
ಉತ್ತರ : ಭ್ರಷ್ಟಾಚಾರ
6) ನಮ್ಮ ಭಾರತೀಯ ಸಮಾಜದ ಒಂದು ಅತ್ಯಂತ ದೊಡ್ಡ ಅನಿಷ್ಠ ಸಂಗತಿ ___
ಉತ್ತರ : ಕೋಮುವಾದ
7) ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ __
ಉತ್ತರ : ಪ್ರತಿಭಾ ಸಿಂಗ್ ಪಾಟೀಲ್
8) ಭಾರತದ ವಿದೇಶಾಂಗ ನೀತಿಯನ್ನು ವಿಶೇಷವಾಗಿ ನಿರೂಪಿಸಿದವರು __
ಉತ್ತರ : ಪಂಡಿತ್ ಜವಾಹರ್ ಲಾಲ್ ನೆಹರು

II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1) ಮಹಿಳಾ ಸಬಲೀಕರಣದ ಅರ್ಥ ತಿಳಿಸಿ.
ಉತ್ತರ : ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳಾ ಶಿಕ್ಷಣ, ಬಾಲ್ಯವಿವಾಹ ನಿಷೇಧ ಕಾಯ್ದೆ ಮುಂತಾದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಇವುಗಳ ಮೂಲಕ ಮಹಿಳಾ ಸಬಲೀಕರಣವನ್ನು ಉಂಟುಮಾಡಲು ಪ್ರಯತ್ನಿಸಲಾಗುತ್ತಿದೆ.
2) ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಸ್ತ್ರೀಯರಿಗೆ ಶೇಕಡಾ 33 ಮೀಸಲಾತಿ ನೀಡುವ ಮೂಲಕ ಕಾರಣವೇನು?
ಉತ್ತರ : ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ.
3) ಮಹಿಳಾ ಸ್ವಸಹಾಯ ಸಮಾಜ ಎಂದರೇನು?
ಉತ್ತರ : ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮಲ್ಲಿ ತಾವೇ ಸಹಾಯವನ್ನು ಮಾಡಿಕೊಳ್ಳುವುದು.
4) ನಿರುದ್ಯೋಗ ಎಂದರೇನು?
ಉತ್ತರ : ಕೆಲಸ ಮಾಡುವ ಸಾಮರ್ಥ್ಯ ಇರುವ ವ್ಯಕ್ತಿಗೆ ಉದ್ಯೋಗ ಲಭ್ಯತೆ ಇಲ್ಲದೆ ಇರುವ ಪರಿಸ್ಥಿತಿಯನ್ನು ನಿರುದ್ಯೋಗ ಎನ್ನಲಾಗುತ್ತದೆ.
5) ಕರ್ನಾಟಕ ಸರ್ಕಾರವು ಗ್ರಾಮಾಂತರ ಮಹಿಳೆಯರ ವಿಕಾಸಕ್ಕಾಗಿ ಜಾರಿಗೆ ತಂದಿರುವ ಕಾರ್ಯಕ್ರಮ ಯಾವುದು?
ಉತ್ತರ : ಸ್ತ್ರೀಶಕ್ತಿ
6) ಭ್ರಷ್ಟಾಚಾರ ಎಂದರೇನು?
ಉತ್ತರ : ಭ್ರಷ್ಟಾಚಾರ ಎಂದರೆ ಲಂಚ ಅಥವಾ ಇನ್ನಾವುದೇ ಕ್ರಮದಿಂದ ಕಾನೂನುಬಾಹಿರ ಕ್ರಮಕ್ಕೆ ಪ್ರಚೋದನೆ ನೀಡುವಿಕೆ ಎಂದರ್ಥ.
7) ಕೋಮುವಾದ (ಮತೀಯವಾದ) ಎಂದರೇನು?
ಉತ್ತರ : ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಹಾಗೂ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿಗಳನ್ನು ಬೆಳೆಸಿಕೊಳ್ಳುವುದನ್ನು ಕೋಮುವಾದ ಅಥವಾ ಮತಿಯವಾದ ಎಂದು ಕರೆಯುತ್ತೇವೆ.
8) ಕೋಮುವಾದವು  ಪ್ರಕಟಗೊಳ್ಳು ವಂತ ಸನ್ನಿವೇಶಗಳನ್ನು ತಿಳಿಸಿ.
ಉತ್ತರ : ಕೋಮುವಾದವು ಸಮಾಜದಲ್ಲಿ ಗುಂಪುಗಾರಿಕೆ, ಆರ್ಥಿಕ ವೈಷಮ್ಯ ಮತ್ತು ರಾಜಕೀಯ ಪೈಪೋಟಿಯಲ್ಲಿ ಪ್ರಕಟವಾಗುತ್ತದೆ.

III. ಕೆಳಗಿನ ಪ್ರಶ್ನೆಗಳಿಗೆ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1) ಭಾರತದಲ್ಲಿರುವ ಸಮಸ್ಯೆಗಳು ಯಾವುವು?
ಉತ್ತರ : ಭಾರತದಲ್ಲಿ ಪ್ರಮುಖವಾಗಿರುವ ಸಮಸ್ಯೆಗಳು ರೀತಿಯಾಗಿವೆ.
1) ನಿರುದ್ಯೋಗ
2) ಭ್ರಷ್ಟಾಚಾರ
3) ತಾರತಮ್ಯ (ಲಿಂಗ ಜಾತಿ ಪ್ರಾಂತೀಯ ಅಸಮಾನತೆಗಳ ಆಧಾರದಲ್ಲಿ ತಾರತಮ್ಯ)
4) ಕೋಮುವಾದ
5) ಭಯೋತ್ಪಾದಕತೆ
6) ಕಾರ್ಪೊರೇಟ್ ತಂತ್ರಗಾರಿಕೆ
2) ಕೋಮುವಾದ ದೇಶದ ಐಕ್ಯತೆಗೆ ಮಾರಕ. ಹೇಗೆ?
ಉತ್ತರಭಾರತವು ವೈವಿಧ್ಯಮಯ ರಾಷ್ಟ್ರವಾಗಿದೆ.
ಕೋಮುವಾದವು ಸಾಮಾಜಿಕ ಭಿನ್ನತೆ, ಪರಸ್ಪರ ಅಪನಂಬಿಕೆ ಹಾಗೂ ಭಯದ ವಾತಾವರಣವನ್ನು ಸೃಷ್ಟಿಸುತ್ತದೆ.
ಇದು ಸಮಾಜದಲ್ಲಿ ಗುಂಪುಗಾರಿಕೆ ಆರ್ಥಿಕ ವೈಷಮ್ಯ ಮತ್ತು ರಾಜಕೀಯ ಪೈಪೋಟಿಯಲ್ಲಿ ಪ್ರಕಟವಾಗುತ್ತದೆ.
ಭಾರತದ ಮಟ್ಟಿಗೆ ಕೋಮುವಾದ ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಯನ್ನು ಭಂಗ ಪಡಿಸುವ ಅಪಾಯ ತಂದೊಡ್ಡುವ ಶಕ್ತಿಯಾಗಿದೆ.
ಅದು ಸಮಾಜದ ನೆಮ್ಮದಿಯನ್ನು ಕೆಡಿಸುವ ದಲ್ಲದೆ ವ್ಯಕ್ತಿಗಳ ಜೀವ ಹಾಗೂ ಸ್ವತ್ತುಗಳ ನಾಶಕ್ಕೂ ಕಾರಣವಾಗುತ್ತದೆ.
ಮತಿಯವಾದ ಗುಂಪುಗಳ ಮಧ್ಯೆ ಪರಸ್ಪರ ದೋಷಾರೋಪಣೆ ದೈಹಿಕ ಹಲ್ಲೆ ಮುಂತಾದ ಅನಗತ್ಯ ತೊಂದರೆಗಳಿಗೆ ಕಾರಣವಾಗುತ್ತದೆ.
3) ಕೋಮುವಾದವನ್ನು ತಡೆಗಟ್ಟುವ ಕ್ರಮಗಳು ಯಾವುವು?
ಉತ್ತರ : ಕೋಮುವಾದವನ್ನು ನಿಯಂತ್ರಿಸಲು ಸಾಕಷ್ಟು ಮುನ್ನೆಚ್ಚರಿಕೆ ಅಗತ್ಯ.
ಏಕರೂಪ ನಾಗರಿಕ ಸಂಹಿತೆ.
ಎಲ್ಲಾ ನಾಗರಿಕರನ್ನು ಸಮಾನ ದೃಷ್ಟಿಯಿಂದ ಕಾಣುವಿಕೆ.
ಜಾತ್ಯಾತೀತ ಮನೋಭಾವಕ್ಕೆ ಸಾಮಾಜಿಕ ಎಲ್ಲ ರಂಗಗಳಲ್ಲೂ ಪ್ರಾಶಸ್ತ್ಯ.
ಸಂಕುಚಿತ ವಿಭಾಗಿಯ ಚಿಂತನೆಗಳಿಂದ ಮೇಲುಸ್ಥರದ ರಾಷ್ಟ್ರೀಯ ಚಿಂತನೆಗೆ ಹೆಚ್ಚು ಒತ್ತು.
ಇವುಗಳೆಲ್ಲವೂ ಕೋಮುವಾದವನ್ನು ತಡೆಗಟ್ಟುವ ಕ್ರಮಗಳು.
4) ಭಯೋತ್ಪಾದಕತೆಯ ಪರಿಣಾಮಗಳು ಯಾವುವು?
ಉತ್ತರ : ಒಂದು ರಾಷ್ಟ್ರವೇ ಇನ್ನೊಂದು ದೇಶದೊಳಗಿನ ಭಯೋತ್ಪಾದಕತೆ ಗೆ ಆರ್ಥಿಕ ಹಾಗೂ ಇನ್ನಿತರ ಸಹಕಾರ ನೀಡುವುದು ಇದೆ.
ಉಗ್ರಗಾಮಿತ್ವ ಒಂದು ರಾಷ್ಟ್ರದ ನಾಗರಿಕರ ಮೇಲೆ, ಮಿಲಿಟರಿ ಪಡೆಗಳ ಮೇಲೆ, ಅಂತೆಯೇ ನಿರ್ದಿಷ್ಟ ಭಾಷಾವಾರು, ಧಾರ್ಮಿಕ, ಜನಾಂಗೀಯ, ಅಥವಾ ವರ್ಣದವರ ಮೇಲೆ ಎರಗಿ ಸಾವು ನೋವು ಉಂಟು ಮಾಡುವುದಾಗಿದೆ.
ಉಗ್ರಗಾಮಿತ್ವ ಭಯವನ್ನು ಹೆಚ್ಚಿಸುವ ಹಾಗೂ ಪ್ರಚಾರವನ್ನು ಪಡೆಯುವ ಉದ್ದೇಶದಿಂದ ನಡೆಯುತ್ತದೆ.
ಭಯೋತ್ಪಾದಕತೆ ಯಿಂದ ಸಮಾಜವು ಭಯದ ವಾತಾವರಣದಲ್ಲಿ ಉಳಿಯುವಂತೆ ಆಗುತ್ತದೆ.
 
5) ಭಯೋತ್ಪಾದಕತೆ ನಿಗ್ರಹಕ್ಕೆ ಭಾರತವು ಕೈಗೊಂಡಿರುವ ಕ್ರಮಗಳಾವುವು?
ಉತ್ತರನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭಯೋತ್ಪಾದಕತೆಯನ್ನು ಗ್ರಹಕ್ಕೆ ತೀವ್ರ ಪ್ರಯತ್ನ ನಡೆಸುತ್ತಿವೆ.
ಜನತೆಯ ಪ್ರಾಣ ಮತ್ತು ಆಸ್ತಿಪಾಸ್ತಿಯನ್ನು ಉಳಿಸಲು ಯತ್ನಿಸುತ್ತಿವೆ.
ಭೀತಿವಾದಿಗಳನ್ನು ನಿಗ್ರಹಿಸಲು ವಿಶೇಷ ಪರಿಣತಿ ಪಡೆದ ಪಡೆಗಳನ್ನು ರಚಿಸಲಾಗುತ್ತಿದೆ.
ರಕ್ಷಣಾ ಪಡೆಗಳನ್ನು ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆಗೆ ಬಳಸಲಾಗುತ್ತದೆ.
ಶಾಂತಿಪ್ರಿಯ ರಾಷ್ಟ್ರ ವೆನಿಸಿದ ನಾವು ಭಯೋತ್ಪಾದಕತೆಯನ್ನು ವಿರೋಧಿಸುತ್ತೇವೆ.
ಹೀಗೆ ಭಾರತವು ಭಯೋತ್ಪಾದಕತೆ ನಿಗ್ರಹಕ್ಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ.
6) ಮಹಿಳೆಯರ ಸ್ಥಾನಮಾನ ಉತ್ತಮಪಡಿಸಲು ಕೈಗೊಂಡಿರುವ ಕ್ರಮಗಳು?
ಉತ್ತರ : ಮಹಿಳೆಯರ ಸ್ಥಾನಮಾನವನ್ನು ಉತ್ತಮ ಪಡಿಸಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದೆ.
ಮಹಿಳೆಯರ ಶಿಕ್ಷಣ ಮತ್ತು ಅಭಿವೃದ್ಧಿಯನ್ನು ಉತ್ತಮಪಡಿಸಲು ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ಪ್ರಾರಂಭಿಸಿದೆ.
ಕರ್ನಾಟಕ ಸರ್ಕಾರವು ಸ್ತ್ರೀಶಕ್ತಿ ಎಂಬ ಕಾರ್ಯಕ್ರಮವನ್ನು ರೂಪಿಸಿದೆ.
ಮಹಿಳೆಯರ ಸ್ವಉದ್ಯೋಗಕ್ಕೆ ಸಾಲ ಸೌಲಭ್ಯ ಮತ್ತು ಸಬ್ಸಿಡಿಗಳನ್ನು ನೀಡುತ್ತಿದೆ.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಹಿಳಾ ಆಯೋಗವನ್ನು ರಚಿಸಲಾಗಿದೆ.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ.
 7) ಭಯೋತ್ಪಾದಕತೆಯ ಕಾರಣಗಳೇನು?
ಉತ್ತರ : ಭಯೋತ್ಪಾದಕತೆಯನ್ನು ಭೀತಿವಾದ ಅಥವಾ ಉಗ್ರಗಾಮಿತ್ವ ಎಂದು ಕರೆಯಲಾಗುತ್ತದೆ.
ಇದು ಒಂದು ಬಲಪ್ರಯೋಗದ ಒತ್ತಡದ ತಂತ್ರಗಾರಿಕೆ.
ರಾಜಕೀಯ, ಧಾರ್ಮಿಕ, ಅಥವಾ ಸೈದಾಂತಿಕ ನೆಲೆಗಟ್ಟಿನಲ್ಲಿ ಗುರಿ ಹೊಂದಿದ ಭಯೋತ್ಪಾದಕತೆಯು ವ್ಯಕ್ತಿಗಳಿಗೆ ಮತ್ತು ಸ್ವತ್ತುಗಳಿಗೆ ಅಪಾಯ ಹಾನಿಯನ್ನುಂಟುಮಾಡುತ್ತದೆ.
ಉಗ್ರಗಾಮಿತ್ವ ಮಾನಸಿಕ ವೇದನೆಯನ್ನು ನೀಡುತ್ತದೆ.
ಸಾಮಾಜಿಕ, ಸಂಸ್ಕೃತಿಗೆ ಅದೇ ರೀತಿ ಸರ್ಕಾರಕ್ಕೆ ನಕಾರಾತ್ಮಕ ಪ್ರಭಾವ ಬೀರುತ್ತದೆ.
ಉಗ್ರಗಾಮಿ ಸಂಘಟನೆಗಳು ಭಯದ ವಾತಾವರಣ ನಿರ್ಮಿಸುವ ಸೃಷ್ಟಿಸುವ ಉದ್ದೇಶ ಹೊಂದಿರುತ್ತದೆ.
ಇವುಗಳೆಲ್ಲವೂ ಭಯೋತ್ಪಾದನೆಗೆ ಕಾರಣಗಳು.
8) ನಿರುದ್ಯೋಗವು ಭಾರತದ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ ಏಕೆ?
ಉತ್ತರ : ನಿರುದ್ಯೋಗ ಭಾರತದ ಒಂದು ದೊಡ್ಡ ಸಮಸ್ಯೆಯಾಗಿದೆ ಏಕೆಂದರೆ.
ಭಾರತ ಒಂದು ದೊಡ್ಡ ಪ್ರಮಾಣದ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ.
ಎಲ್ಲ ಜನರಿಗೆ ಉದ್ಯೋಗ ಒದಗಿಸುವುದು ಸವಾಲಾಗಿದೆ.
ಮಿತಿಮೀರಿದ ಜನಸಂಖ್ಯೆ ಮತ್ತು ಹೆಚ್ಚಾದ ತಂತ್ರಜ್ಞಾನಗಳು ನಿರುದ್ಯೋಗಕ್ಕೆ ಕಾರಣಗಳಾಗಿವೆ.
ನೈಸರ್ಗಿಕ ಸಂಪನ್ಮೂಲಗಳ ಕೊರತೆ.
ಕೃಷಿಯ ಮೇಲಿನ ಅಧಿಕ ಅವಲಂಬನೆ.
ಗೃಹ ಕೈಗಾರಿಕೆಗಳ ನಾಶ.
ಕೌಶಲ್ಯ ಆಧಾರಿತ ಶಿಕ್ಷಣದ ಕೊರತೆ ಇವುಗಳೆಲ್ಲವೂ ನಿರುದ್ಯೋಗದ ಸಮಸ್ಯೆಗಳಾಗಿವೆ.
9) ನಿರುದ್ಯೋಗ ನಿವಾರಣೆಗೆ ಕೈಗೊಂಡ ಕ್ರಮಗಳು ಯಾವುವು?
ಉತ್ತರ : ನಿರುದ್ಯೋಗ ನಿವಾರಣೆಗೆ ಕೈಗೊಂಡ ಕ್ರಮಗಳು ರೀತಿಯಾಗಿವೆ.
ಭಾರತ ಸರ್ಕಾರ ಮತ್ತು ರಾಷ್ಟ್ರದಲ್ಲಿನ ಎಲ್ಲ ರಾಜ್ಯ ಸರ್ಕಾರಗಳು ಹಲವಾರು ರೀತಿಯ ಉದ್ಯೋಗ ಸೃಷ್ಟಿಸುವ ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ.
ಜನತೆಗೆ ಉದ್ಯೋಗ ಮಾಡಲು ಅಗತ್ಯವಿರುವ ಕೌಶಲ್ಯಾಧಾರಿತ ಗುಣಮಟ್ಟದ ಶಿಕ್ಷಣ ನೀಡಿಕೆ.
ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯವಿರುವ ಮೂಲ ಬಂಡವಾಳವನ್ನು ಸಾಲದ ರೂಪದಲ್ಲಿ ನೀಡುವುದು.
ಸಾಧ್ಯವಾದಷ್ಟು ಸಹಾಯಧನಗಳನ್ನು ನೀಡುವ ಮೂಲಕ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹಿಸುವುದು.
ಇವೇ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
10) ಭ್ರಷ್ಟಾಚಾರವನ್ನು ಹೇಗೆ ನಿಗ್ರಹಿಸಬಹುದು?
ಉತ್ತರ : ಭ್ರಷ್ಟಾಚಾರ ಭಾರತ ಒಂದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಇದನ್ನು ನಿಯಂತ್ರಿಸುವುದಕ್ಕಾಗಿ ಲೋಕಪಾಲ್ ಮತ್ತು ಲೋಕಾಯುಕ್ತ ನಂತಹ ಸಂಸ್ಥೆಗಳು ಸ್ಥಾಪಿಸಲಾಗಿದೆ.
ಶಿಕ್ಷಣ ಸಂಸ್ಥೆಗಳು ಹಾಗೂ ಸಾಮಾಜಿಕ ನಾಯಕರುಗಳು ಕೂಡ ದಿಸೆಯಲ್ಲಿ ಕಾರ್ಯ ನಿರ್ವಹಿಸಬಹುದು.
ಸರ್ಕಾರಿ ಕಚೇರಿಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದು ಮತ್ತು ಕಚೇರಿಯ ಕಾರ್ಯನಿರ್ವಹಣೆಯ ವೇಗವನ್ನು ಹೆಚ್ಚಿಸುವುದು.
ಭ್ರಷ್ಟಾಚಾರದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ವಿಧಿಸುವುದು.
ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವುದರ ಮೂಲಕ ಸಾಧ್ಯವಾದಷ್ಟು ಬೇಗನೆ ನ್ಯಾಯನಿರ್ಣಯ ನೀಡುವುದು.
ಭ್ರಷ್ಟಾಚಾರವನ್ನು ನಿವಾರಿಸಲು ಎಲ್ಲಾ ಸ್ತರಗಳಲ್ಲಿ ಅತ್ಯಗತ್ಯ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿರುತ್ತದೆ
.

*****

10th Social Science History Chapter- Bharatada Samassegalu Hagu avugala Pariharopayagalu


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon