10ನೇ ತರಗತಿ ಅಧ್ಯಾಯ 9 ದುಡಿಮೆ ಮತ್ತು ಆರ್ಥಿಕ ಜೀವನ | SSLC Social Science Chapter 9 | 10th Sociology Chapter Question Ans |

SSLC Social Science Chapter 9
ದುಡಿಮೆ & ಆರ್ಥಿಕ ಜೀವನ
ಕರ್ನಾಟಕ ರಾಜ್ಯ ಪಠ್ಯಕ್ರಮದಲ್ಲಿ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು 2022-23ನೇ ಸಾಲಿನಿಂದ ಪರಿಷ್ಕರಣೆ ಹೊಂದಿದ್ದು ಈ ಪರಿಷ್ಕೃತ ಪಠ್ಯಪುಸ್ತಕದಲ್ಲಿಯ 9ನೇಯ ಅಧ್ಯಾಯ ದುಡಿಮೆ ಮತ್ತು ಆರ್ಥಿಕ ಜೀವನ ಈ ಅಧ್ಯಾಯದ ಪ್ರಮುಖ ಅಂಶಗಳ ನೋಟ್ಸ್ ಅನ್ನು ಇಲ್ಲಿ ನೋಡಿಕೊಳ್ಳೋಣ.


ಅಧ್ಯಾಯ 9. ದುಡಿಮೆ ಮತ್ತು ಆರ್ಥಿಕ ಜೀವನ
1. ಶ್ರಮ ವಿಭಜನೆ ಎಂದರೇನು ?
ಉ: ಒಂದು ಕೆಲಸವನ್ನು ಜನರು ತಮ್ಮ ಆಸಕ್ತಿ, ಅಭಿರುಚಿ, ಸಾಮರ್ಥ್ಯ, ವಯಸ್ಸು, ವಿಶೇಷ ಪರಿಣತಿ, ಕೌಶಲ್ಯ ಹಾಗೂ ಲಿಂಗ ಭೇದಗಳ ಆಧಾರದ ಮೇಲೆ ಹಂಚಿಕೊಂಡು ಮಾಡುವುದನ್ನು ಶ್ರಮ ವಿಭಜನೆ ಎನ್ನಲಾಗಿದೆ. 
ಪ್ಲೇಟೋ (ರಿಪಬ್ಲಿಕ್) : ಸ್ವಾಭಾವಿಕ ಅಸಮಾನತೆ
ಕಾರ್ಲ್ ಮಾರ್ಕ್ಸ್ : “ಕಡಿಮೆ ಕೌಶಲ್ಯವಿರುವ ಕೆಲಸಗಾರರ ನಿರ್ಮಾಣ”
2. ದುಡಿಮೆ ಎಂದರೇನು ?
ಉ: “ವ್ಯಕ್ತಿಯೋರ್ವನ ಶಕ್ತಿಯ ವ್ಯಯದಿಂದ ಆತನಿಗೆ ಸಿಗುವ ಪ್ರತಿಫಲ”
3. ನಿರುದ್ಯೋಗ ಎಂದರೇನು?
ಉ: ಕೆಲಸ ಮಾಡುವ ಸಾಮರ್ಥ್ಯವಿದ್ದು ಕೆಲಸ ಸಿಗದಿರುವ ಪರಿಸ್ಥಿತಿ.
4. ನಿರುದ್ಯೋಗಕ್ಕೆ ಕಾರಣಗಳನ್ನು ತಿಳಿಸಿ?
1. ಅಧಿಕ ಜನಸಂಖ್ಯೆ
2. ಅತಿಯಾದ ಯಾಂತ್ರೀಕರಣ
3. ಸಂಪನ್ಮೂಲಗಳ ಕೊರತೆ
4. ಶ್ರಮವಿಭಜನೆ
5. ಗೃಹ ಕೈಗಾರಿಕೆಗಳ ನಾಶ
6. ಸಾಮಾಜಿಕ ಅಸಮಾನತೆ
7. ಅನಕ್ಷರತೆ
5. ನಿರುದ್ಯೋಗವು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಹೇಗೆ?
1. ಬಡತನ
2. ಅನಾರೋಗ್ಯ
3. ಭ್ರಷ್ಟಾಚಾರ
4. ಕೌಟುಂಬಿಕ ವಿಘಟನೆ
5. ಮೋಸ
6. ವಂಚನೆ
7. ಕಳ್ಳತನ ಮುಂತಾದವುಗಳಿಗೆ ಆಸ್ಪದ ಮಾಡಿಕೊಡುತ್ತದೆ.

6. ನಿರುದ್ಯೋಗಕ್ಕೆ ಪರಿಹಾರ ಕ್ರಮಗಳು ಯಾವುವು?
1. ಜನಸಂಖ್ಯಾ ನಿಯಂತ್ರಣ
2. ಕೃಷಿ ಕ್ಷೇತ್ರದ ಅಭಿವೃದ್ಧಿ
3. ಉದ್ಯೋಗ ಸೃಷ್ಠಿ ಕಾರ್ಯಕ್ರಮ
4. ಪಂಚವಾರ್ಷಿಕ ಯೋಜನೆಗಳು
5. ಗುಣಮಟ್ಟದ ಶಿಕ್ಷಣ
6. ಉದ್ಯೋಗ ಖಾತರಿ ಯೋಜನೆ
7. ವೃತ್ತಿಪರ ಶಿಕ್ಷಣ
8. ಗುಡಿ ಕೈಗಾರಿಕೆಗಳ ಅಭಿವೃದ್ಧಿ

7. ದುಡಿಮೆಯಲ್ಲಿನ ತಾರತಮ್ಯತೆ ಸ್ವರೂಪವನ್ನು ವಿವರಿಸಿ ಅಥವಾ ಭಾರತದ ಎಲ್ಲಾ ರಂಗಗಳಲ್ಲಿಯೂ ದುಡಿಮೆ ತಾರತಮ್ಯ ಕಂಡು ಬರುತ್ತದೆಂದು ಹೇಗೆ ಹೇಳುವಿರಿ?
1. ವೇತನದಲ್ಲಿ ತಾರತಮ್ಯ
2. ಪುರುಷ – ಮಹಿಳೆ ದುಡಿಮೆದಾರರಲ್ಲಿ ಭೇಧಭಾವ
3. ಶ್ರೇಣಿಕೃತ ಸಮಾನತೆ
4. ಖಾಸಗಿ ವಲಯದ ದುಡಿಮೆದಾರರ ಸಂಭಾವನೆಯಲ್ಲಿ ಭೇಧಭಾವ
5. ಕೃಷಿ ವಲಯದಲ್ಲಿ ಲಿಂಗ, ವಯಸ್ಸು, ಸಾಮರ್ಥ್ಯಗಳ ಆಧಾರದ ಮೇಲೆ ಅಸಮಾನ ಹಂಚಿಕೆ
6. ಓದಿದವರು & ಓದದವರ ನಡುವೆ ಅಸಮಾನತೆ
7. ಸಂಭಾವನೆ ಸಹಿತ & ಸಂಭಾವನೆ ರಹಿತ ದುಡಿಮೆ

8. ಸಂಘಟಿತ & ಅಸಂಘಟಿತ ಕೆಲಸಗಾರರ ನಡುವಿನ ವ್ಯತ್ಯಾಸ ತಿಳಿಸಿ ಅಥವಾ ಸಂಘಟಿತ ದುಡಿಮೆ ವಲಯವು ಅಸಂಘಟಿತ ದುಡಿಮೆ ವಲಯಕ್ಕಿಂತ ಹೇಗೆ ಭಿನ್ನವಾಗಿದೆ?
ಸಂಘಟಿತ ಕೆಲಸಗಾರರು : 
1. ಕಾಯ್ದೆ ಕಾನೂನಿಗೆ ಒಳಪಟ್ಟಿದೆ
2. ನಿಶ್ಚಿತ ನಿಯಮವಿದೆ.
3. ಅಧಿಕಾರ ಶ್ರೇಣಿ ಇದೆ.
4. ವಿಶೇಷ ಸೌಲಭ್ಯ
ಉದಾ: ಬ್ಯಾಂಕು, ವಿಮೆ, ಸೈನ್ಯ, ಕಾರ್ಖಾನೆ
ಅಸಂಘಟಿತ ಕೆಲಸಗಾರರು :
1. ಕಾಯ್ದೆ ಕಾನೂನಿಗೆ ಒಳಪಟ್ಟಿಲ್ಲ
2. ದಿನಗೂಲಿ ಆರ್ಥಿಕ ಪ್ರತಿಫಲ
3. ವಿಶಾಲ ಕಾರ್ಯಕ್ಷೇತ್ರ
4. ವಿಶೇಷ ಸೌಲಭ್ಯ ಇಲ್ಲ
ಉದಾ : ಮನೆಗೆಲಸ, ಗೃಹಕೆಲಸ, ಗಾರೆ ಕೆಲಸ.

9. ಅಸಂಘಟಿತ ಕೆಲಸಗಾರರ ಸಮಸ್ಯೆಗಳನ್ನು ಪಟ್ಟಿ ಮಾಡಿರಿ?
1. ಕಡಿಮೆ ಕೂಲಿ
2. ವಲಸೆ
3. ನಿಗದಿತ ಸಮಯ, ಕಾಯ್ದೆ ಇಲ್ಲದಿರುವುದು
4. ಸಾಮಾಜಿಕ ಅಭದ್ರತೆ
5. ಕೆಲಸಕ್ಕೆ ಭದ್ರತೆ ಇಲ್ಲದಿರುವುದು
6. ಕಾನೂನು ಚೌಕಟ್ಟು
7. ಉಚಿತ ವೈದ್ಯಕೀಯ ಸೌಲಭ್ಯ ಇಲ್ಲದಿರುವುದು.
8. ಬಾಲ ಕಾರ್ಮಿಕರು
9. ನಿಗದಿತ ವೇತನ ಇಲ್ಲದಿರುವುದು
10. ಮಾಲೀಕರಿಂದ ಶೋಷಣೆ
11. ವಿರಾಮ ವೇತನ, ನಿವೃತ್ತಿ ವೇತನ ಇಲ್ಲದಿರುವುದು.

10. ಕೂಲಿ ಸಹಿತ & ಕೂಲಿ ರಹಿತ ದುಡಿಮೆ ಎಂದರೇನು? 
ಕೂಲಿ ಸಹಿತ ದುಡಿಮೆ : 
1. ಭೌತಿಕ ರೂಪದ ಪ್ರತಿಫಲ ನೀಡುವ ದುಡಿಮೆ
2. ಸಂಕೀರ್ಣ ಸಮಾಜದಲ್ಲಿ ಬದುಕಿಗೆ ಅನಿವಾರ್ಯ
ಉದಾ : ಕೈಗಾರಿಕೆ, ಗಾರೆ ಕೆಲಸ, ವಾಹನ ರಿಪೇರಿ.
ಕೂಲಿ ರಹಿತ ದುಡಿಮೆ :
1. ಮನ ಸಂತೋಷದ ದೃಷ್ಟಿಯಿಂದ ಕೈಗೊಳ್ಳುವ ದುಡಿಮೆ
2. ಒತ್ತಾಯ ಪೂರ್ವಕ ದುಡಿಮೆ
3. ಕಲಾಕಾರ, ಹಾಡುಗಾರ, ವರ್ಣಭೇದ ನೀತಿ.
11. ಶ್ರಮ ವಿಭಜನೆ ಎಂದರೇನು?
ಉ: ಒಂದು ಕೆಲಸವನ್ನು ಹಂಚಿಕೊಂಡು ಮಾಡುವುದು.
12. ವಿಶೇಷ ಪರಿಣತಿ ಎಂದರೇನು?
ಉ: ಯಾವುದಾದರೂ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಸಾಕಷ್ಟು ಆಳವಾದ ಪರಿಣತಿ, ತರಬೇತಿ ಅಥವಾ ಕೌಶಲ್ಯ ಪಡೆದಿರುವುದು.
13. ಸಮಾನ ವೇತನ ಕಾಯ್ದೆ ಜಾರಿಗೆ ಬಂದ ವರ್ಷ : 1976
14. ಸಮಾನ ವೇತನ ಕಾಯ್ದೆ ಜಾರಿಗೊಳಿಸಿದರ ಉದ್ದೇಶವೇನು?
ಉ: ಸ್ತ್ರೀ ಪುರಷರ ವೇತನ ತಾರತಮ್ಯ ನಿವಾರಿಸುವುದು.
15. ಸಂಘಟಿತ ವಲಯದಲ್ಲಿ ದುಡಿಮೆ ಪ್ರಾರಂಭಿಸಲು ಅನುಸರಿಸಬೇಕಾದ ನಿಯಮಗಳೇನು?
1. ಕಾನೂನು & ಸರ್ಕಾರದ ಅನುಮತಿ ಕಡ್ಡಾಯ
2. ತೆರಿಗೆ ಪಾವತಿ
3. ಉದ್ಯೋಗ ಭದ್ರತೆ
4. ವಾರ್ಷಿಕ ಭತ್ಯೆ
5. ಹೆಚ್ಚಿನ ಅವಧಿಯ ಕೆಲಸಕ್ಕೆ ಹೆಚ್ಚಿನ ವೇತನ
6. ಕಾರ್ಮಿಕ & ಉಧ್ಯಮಿಗಳ ನಡುವೆ ಕಾನೂನಾತ್ಮಕ ಸಂಬಂಧ
****

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon