SSLC Political Science Chapter 6 | ಭಾರತಕ್ಕಿರುವ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು | 10th Social Science New text book notes |

SSLC Political Science Chapter 6
ಭಾರತಕ್ಕಿರುವ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು
10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು 2022 ರಲ್ಲಿ ಪರಿಷ್ಕರಣೆ ಹೊಂದಿದ್ದು ಈ ಪರಿಷ್ಕತ ಪಠ್ಯಪುಸ್ತಕದಲ್ಲಿ ಬರುವ 6ನೇಯ ಅಧ್ಯಾಯ ಭಾರತಕ್ಕಿರುವ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು ಈ ಅಧ್ಯಾಯವು ರಾಜ್ಯಸ್ತ್ರದಲ್ಲಿಯ ಮೊದಲನೇಯ ಅಧ್ಯಾಯವಾಗಿದ್ದು. ಈ ಅಧ್ಯಾಯದ ಅಧ್ಯಯನಕ್ಕಾಗಿ ಪ್ರಶ್ನೋತ್ತರಗಳ ರೂಪದಲ್ಲಿಯ ನೋಟ್ಸ್ ಅನ್ನು ಇಲ್ಲಿ ನೋಡಿಕೊಳ್ಳೋಣ.


ರಾಜ್ಯಶಾಸ್ತ್ರ 6. ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು
1. ಭಾಷಾವಾರು ಪ್ರಾಂತ್ಯ ರಚನೆ : 1956
2. ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಇರುವ ಸಂಸ್ಥೆ : ಲೋಕಾಯುಕ್ತ
3. 2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ : 121 ಕೋಟಿ
4. ಪ್ರಾದೇಶಿಕವಾದ ಎಂದರೇನು?
ಉ: “ತಾವು ವಾಸಿಸುವ ಪ್ರದೇಶದ ಬಗ್ಗೆ ಅತ್ಯಂತ ಗಾಢವಾದ ಅಭಿಮಾನ ಬೆಳೆಸಿಕೊಳ್ಳುವುದು”
5. ಕೋಮುವಾದ ಎಂದರೇನು?
ಎ) “ಧರ್ಮದ ಆಧಾರದಲ್ಲಿ ಸಮಗ್ರ ಸಮಾಜದ ವಿಭಜನೆ”
ಬಿ) “ಅನ್ಯ ಧರ್ಮಗಳ ಬಗ್ಗೆ ಸೈರಣೆ ಇಲ್ಲದಿರುವುದು”
6. ಭ್ರಷ್ಟಾಚಾರ ಎಂದರೇನು?
ಎ) “ಲಂಚ ಅಥವಾ ಇನ್ನಾವುದೇ ಕ್ರಮದಿಂದ ಕಾನೂನು ಬಾಹಿರ ಕ್ರಮಕ್ಕೆ ಪ್ರಚೋದನೆ”
ಬಿ) “ಸ್ವಾರ್ಥದ ದೃಷ್ಟಿಯಿಂದ ಸ್ವಂತ ಲಾಭಕ್ಕಾಗಿ ಅಧಿಕಾರದ ದುರುಪಯೋಗ”
7. ನಿರುದ್ಯೋಗ ಎಂದರೇನು?
ಉ: ಕೆಲಸ ಮಾಡುವ ಸಾಮರ್ಥ್ಯವಿದ್ದು ಕೆಲಸ ಸಿಗದಿರುವ ಪರಿಸ್ಥಿತಿ.
8. ಕಳ್ಳಸಾಗಾಣಿಕೆ ಎಂದರೇನು?
ಉ: ಆಮದು ಸುಂಕವನ್ನು ನೀಡದೆ ವಿದೇಶದಿಂದ ವಸ್ತುಗಳನ್ನು ತರಿಸಿಕೊಳ್ಳುವುದು.
9. ಲಾಭಕೋರತನ ಎಂದರೇನು?
ಉ: ಬಳಕೆದಾರರಿಂದ ಅತ್ಯಂತ ಹೆಚ್ಚಿನ ಲಾಭಗಳಿಸುವ ಧೋರಣೆ.
10. ಬಡತನ ಎಂದರೇನು?
ಉ: ಜನರು ಮೂಲಭೂತ ಸೌಕರ್ಯವನ್ನು ಹೊಂದದೆ ಪಡುವ ಕಷ್ಟ.

11. ಬಡತನ ನಿರ್ಮೂಲನೆಗೆ ಸರ್ಕಾರ ಜಾರಿಗೊಳಿಸಿರುವ ಕಾರ್ಯಕ್ರಮಗಳನ್ನು ತಿಳಿಸಿ?
1. ಬಿಪಿಎಲ್ ಕಾರ್ಡ್
2. ಪಂಚವಾರ್ಷಿಕ ಯೋಜನೆ
3. ಜವಾಹರ್ ರೋಜ್ಗಾರ್ ಯೋಜನೆ
4. ಉದ್ಯೋಗ ಖಾತ್ರಿ ಯೋಜನೆ
5. ಪ್ರಧಾನಮಂತ್ರಿ ಗ್ರಾಮೋದಯ ಯೋಜನೆ
12. ಕಳ್ಳಸಾಗಾಣಿಕೆಯನ್ನು ನಿಯಂತ್ರಿಸುವ ಕ್ರಮಗಳಾವುವು?
1. ಆಂತರಿಕ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣ.
2. ಆರ್ಥಿಕ ಅಪರಾಧಕ್ಕೆ ಕಠಿಣ ಶಿಕ್ಷೆ.
3. ಒಳ್ಳೆಯ ಆಮದು ಮತ್ತು ರಫ್ತು ಧೋರಣೆ.
4. ಕರಾವಳಿ ಪಡೆ.
13. ಲಾಭಕೋರತನವನ್ನು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳೇನು?
1. ಕಟ್ಟುನಿಟ್ಟಾದ ಸರ್ಕಾರಿ ನಿಯಂತ್ರಣ.
2. ಬೆಲೆ ಸೂಚ್ಯಂಕಗಳ ಪರಿಶೀಲನೆ.
3. ಸಹಕಾರಿ ಮಾರುಕಟ್ಟೆಗಳ ವಿಸ್ತರಣೆ.
4. ಸರಿಯಾದ ತೆರಿಗೆ ಧೋರಣೆ.
14. ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳಾವುವು?
1. ನಿರುದ್ಯೋಗ
2. ಬಡತನ
3. ಆರೋಗ್ಯ ಸಮಸ್ಯೆ
4. ಅನಕ್ಷರತೆ
5. ವಸತಿ ಸಮಸ್ಯೆ
6. ಕಡಿಮೆ ತಲಾದಾಯ
7. ನೀರಿನ ಸಮಸ್ಯೆ
8. ರಾಜಕೀಯ ಕ್ಷೋಭೆ
15. ಅನಕ್ಷರತೆಯನ್ನು ನಿವಾರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು?
1. ಸರ್ವಶಿಕ್ಷಣ ಅಭಿಯಾನ
2. ರಾಷ್ಟ್ರೀಯ ಸಾಕ್ಷರತಾ ಮಿಷನ್
3. ಶಿಕ್ಷಣ ಮೂಲಭೂತ ಹಕ್ಕು
4. ಶಿಕ್ಷಣ ಹಕ್ಕು ಕಾಯ್ದೆ
16. ಭ್ರಷ್ಟಾಚಾರಕ್ಕೆ ಕಾರಣಗಳೇನು?
1. ಸ್ವಾರ್ಥ
2. ಆಪತ್ತು ನಿವಾರಣೆಯ ಲೆಕ್ಕಾಚಾರ
3. ವೈಯಕ್ತಿಕ ಲಾಭ
4. ದುರ್ಬಲ ಕಾನೂನು ವ್ಯವಸ್ಥೆ
5. ಕಟ್ಟುನಿಟ್ಟಾದ ಮೇಲ್ವಿಚಾರಣೆ ಇಲ್ಲದಿರುವುದು.
17. ಭ್ರಷ್ಟಾಚಾರದ ವಿವಿಧ ರೂಪಗಳು : (ಭ್ರಷ್ಟಾಚಾರ ಜಾಲದಲ್ಲಿ ಸೇರಿಕೊಂಡಿರುವ ಅಂಶಗಳು)
1. ತೆರಿಗೆ ಕಳ್ಳತನ
2. ಅಕ್ರಮ ದಾಸ್ತಾನು
3. ಕಳ್ಳಸಾಗಾಣಿಕೆ
4. ಆರ್ಥಿಕ ವಂಚನೆ
5. ಮೊಸಗಾರಿಕೆ
6. ವಿದೇಶಿ ವಿನಿಮಯದ ಕಾನೂನು ಉಲ್ಲಂಘನೆ
7. ಔದ್ಯೋಗಿಕ ವಂಚನೆ
18. ಭ್ರಷ್ಟಾಚಾರ ನಿಯಂತ್ರಣದ ಕ್ರಮಗಳನ್ನು ತಿಳಿಸಿ?
1. ಪ್ರಬಲ ರಾಜಕೀಯ ಇಚ್ಛಾಶಕ್ತಿ
2. ಸಾರ್ವಜನಿಕರ ಸಹಕಾರ
3. ಒಳ್ಳೆಯ ನಾಯಕತ್ವ
4. ಉತ್ತಮ ಅಧಿಕಾರಿ ವರ್ಗ
5. ಲೋಕಪಾಲ & ಲೋಕಾಯುಕ್ತ ಸಂಸ್ಥೆ
6. ಕಠಿಣ ಶಿಕ್ಷೆ
7. ಶೀಘ್ರ ನ್ಯಾಯದಾನ
8. ಸರ್ಕಾರಿ ಕಚೇರಿಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಕೆ
19. ಕೋಮುವಾದ ದೇಶದ ಐಕ್ಯತೆಗೆ ಮಾರಕ ಹೇಗೆ? ಅಥವಾ ಕೋಮುವಾದದ ದುಷ್ಪರಿಣಾಮ ತಿಳಿಸಿ?
1. ಸಮಾಜದಲ್ಲಿ ಭಿನ್ನತೆ & ಗುಂಪುಗಾರಿಕೆಗೆ ಪೈಪೋಟಿ
2. ಆರ್ಥಿಕ ವೈಷಮ್ಯ & ರಾಜಕೀಯ ಪೈಪೋಟಿ
3. ಭಯದ ವಾತಾವರಣ ಸೃಷ್ಠಿ
4. ರಾಷ್ಟ್ರೀಯ ಏಕತೆ & ಸಮಗ್ರತೆಗೆ ಅಡ್ಡಿ
5. ಸಮಾಜದ ನೆಮ್ಮದಿ ಕೆಡಿಸುತ್ತದೆ.
6. ಜೀವ & ಆಸ್ತಿ ಹಾನಿ
7. ಗುಂಪು ಘರ್ಷಣೆ
20. ಕೋಮುವಾದ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳೇನು?
1. ಏಕರೂಪದ ನಾಗರೀಕ ಸಂಹಿತೆ
2. ಜಾತ್ಯಾತೀತ ಮನೋಭಾವ
3. ರಾಷ್ಟ್ರೀಯ ಚಿಂತನೆಗೆ ಅಧಿಕ ಮಹತ್ವ
4. ಸಾರ್ವಜನಿಕರ ಎಚ್ಚರ
5. ರಾಜಕೀಯ ಅಚಲ ನಿರ್ಧಾರ
6. ಕ್ರಮಬದ್ಧ ಕಾನೂನು ವ್ಯವಸ್ಥೆ
7. ಆರೋಗ್ಯಕರ ಸುದ್ಧಿ ಮಾಧ್ಯಮ

21. ಪ್ರಾದೇಶಿಕವಾದವು ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ ಹೇಗೆ?
1. ದೇಶದ ಏಕತೆಗೆ ಧಕ್ಕೆ
2. ರಾಷ್ಟ್ರೀಯ ಹಿತಾಸಕ್ತಿಗೆ ಹಾನಿ
3. ರಾಷ್ಟ್ರೀಯವಾದದ ವಿರುದ್ಧ ಸಂಕುಚಿತ ಭಾವನೆ.
22. ಪ್ರಾದೇಶಿಕವಾದ ದೂರಿಕರಿಸಲು ನಮ್ಮ ಸಂವಿಧಾನ ಸೂಚಿಸಿದ ಮಾರ್ಗೋಪಾಯಗಳಾವುವು?
1. ಒಂದೇ ಸಂವಿಧಾನ
2. ಏಕ ಪೌರತ್ವ
3. ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ
4. ಸಂಯುಕ್ತ ರಾಜ್ಯ ಪದ್ಧತಿ
23. ಕರ್ನಾಟಕ ಸರ್ಕಾರ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಕೈಗೊಂಡಿರುವ ಕ್ರಮಗಳಾವುವು?
1. ಡಾ.ಡಿ.ಎಂ.ನಂಜುಂಡಪ್ಪ ಸಮಿತಿ
2. ಮಲೆನಾಡು ಅಭಿವೃದ್ಧಿ ಸಮಿತಿ
3. ಹೈದರಾಬಾದ್ ಕರ್ನಾಟಕ ಸಮಿತಿ
24. ಮಹಿಳೆಯರ ಸ್ಥಾನಮಾನ ಉತ್ತಮ ಪಡಿಸಲು ನಿಮ್ಮ ಸಲಹೆಗಳೇನು?
1. ಮಹಿಳಾ ಶಿಕ್ಷಣ
2. ವರದಕ್ಷಿಣೆ ನಿಷೇಧ
3. ಬಾಲ್ಯವಿವಾಹ ನಿಷೇಧ
4. ಸ್ತ್ರೀಶಕ್ತಿ ಕಾರ್ಯಕ್ರಮ
5. ಸ್ವಸಹಾಯ ಸಂಘಗಳು
6. ಮಹಿಳಾ ಆಯೋಗ
7. ಮಹಿಳಾಮಂಡಲ
8. ಮಹಿಳಾ ಮೀಸಲಾತಿ
25. ಸ್ವಾತಂತ್ರ್ಯ ನಂತರ ಭಾರತ ಎದುರಿಸುತ್ತಿರುವ ಸಮಸ್ಯೆಗಳಾವುವು?
1. ನಿರುದ್ಯೋಗ
2. ಬಡತನ
3. ಭ್ರಷ್ಟಾಚಾರ
4. ಕೋಮುವಾದ
5. ಭಯೋತ್ಪಾದಕತೆ
6. ತಾರತಮ್ಯ
7. ಕಳ್ಳಸಾಗಾಣಿಕೆ
8. ಆರ್ಥಿಕ ಅಸಮಾನತೆ

26. ಆರ್ಥಿಕ ಅಸಮಾನತೆ ಹೋಗಲಾಡಿಸಲು ಇರುವ ಮಾರ್ಗೋಪಾಯಗಳನ್ನು ತಿಳಿಸಿ?
1. ಉತ್ತಮ ಆರ್ಥಿಕ ಸುಧಾರಣೆ
2. ಯೋಜನಾಬದ್ಧ ಹಣಕಾಸು ನಿರ್ವಹಣೆ
3. ಒಳ್ಳೆಯ ತೆರಿಗೆ ನೀತಿ
4. ಗುಡಿ ಕೈಗಾರಿಕೆಗಳ ಅಭಿವೃದ್ಧಿ
5. ಭೂ ಸುಧಾರಣೆ
6. ಕಾರ್ಮಿಕರ ಪರ ಧೋರಣೆ
7. ಸಾಮಾಜಿಕ ಭದ್ರತೆ
27. ಜನಸಂಖ್ಯಾ ಹೆಚ್ಚಳಕ್ಕೆ ಕಾರಣಗಳೇನು?
1. ಜನನ ಪ್ರಮಾಣ ಏರಿಕೆ
2. ಮರಣ ಪ್ರಮಾಣ ಇಳಿಕೆ
3. ಜೀವಿತಾವಧಿಯ ಪ್ರಮಾಣ ಏರಿಕೆ
4. ಶಿಶು ಮರಣ ಕಡಿತ
5. ವಿವಾಹ ಒಂದು ಕಟ್ಟುಪಾಡು
6. ಗಂಡು ಮಕ್ಕಳನ್ನು ಪಡೆಯಬೇಕೆಂಬ ಆಸೆ
7. ಮೂಢ ನಂಬಿಕೆ
8. ಅವಿಭಕ್ತ ಕುಟುಂಬ
28. ಜನಸಂಖ್ಯಾ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು?
1. ಕುಟುಂಬ ಯೋಜನೆ
2. ಅಕ್ಷರ ಪ್ರಸರಣ
3. ತಾಂತ್ರಿಕ ಶಿಕ್ಷಣ
4. ಕೈಗಾರಿಕಾ ಪ್ರಗತಿ
5. ಕೃಷಿ ಅಭಿವೃದ್ಧಿ
6. ಪ್ರಚಾರ ಜಾಹಿರಾತು
29. “ಲಾಭ ಬುಡುಕತನದಿಂದ ಉತ್ಪಾದಕ ಮತ್ತು ಗ್ರಾಹಕರಿಗೆ ನಷ್ಟವಾಗುತ್ತದೆ” ಈ ಹೇಳಿಕೆಯನ್ನು ಸಮರ್ಥಿಸಿ?
1. ಆರ್ಥಿಕ ಅಸಮಾನತೆ
2. ಬಡತನ ಇನ್ನಷ್ಟು ಅಧಿಕವಾಗುತ್ತದೆ.
3. ಹಣದುಬ್ಬರಕ್ಕೆ ಕಾರಣ
4. ಅನೈತಿಕ ವ್ಯಾಪಾರಕ್ಕೆ ಪ್ರಚೋದನೆ
5. ಜನರ ಆದಾಯ ಶ್ರೀಮಂತ ವ್ಯಾಪಾರಿಗಳ ಕೈ ಸೇರುವುದು.
30. ದೇಶದ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವೆಂದು ಪರಿಗಣಿಸಬಹುದಾಗಿದೆ. ಇದನ್ನು ವಿವರಿಸಿ?
1. ಜನಸಂಖ್ಯೆ ಒಂದು ದೇಶದ ಆಸ್ತಿ
2. ಇವರು ರಾಷ್ಟ್ರದ ಆದಾಯದ ಹೆಚ್ಚಳಕ್ಕೆ ಕಾರಣರು.
3. ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲರು
4. ಜನರು ದುಡಿಮೆಗೆ ಅಗತ್ಯವಾದ ಶ್ರಮಶಕ್ತಿಯನ್ನು ಒದಗಿಸುವರು.
5. ಉತ್ಪಾದನೆಗೆ ಬೇಕಾದ ಜ್ಞಾನ ಒದಗಿಸುವರು.
6. ಮಾನವ ಸಂಪನ್ಮೂಲವು ಜನಸಮೂದಾಯಕ್ಕೆ ಹೆಚ್ಚಿನ ಸೌಲಭ್ಯ ಒದಗಿಸುವರು.
*****

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon