ಸಾಮಾಜಿಕ ಸ್ತರವಿನ್ಯಾಸ | 10th Social Science Chapter 8 | 10th Sociology Chapter Questions | SSLC Social Science Notes |

SSLC Sociology Notes
10th Social Science Chapter 8 ಸಾಮಾಜಿಕ ಸ್ತರವಿನ್ಯಾಸ
ಕರ್ನಾಟಕ ರಾಜ್ಯದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು 2022 ನೇ ಸಾಲಿನಿಂದ ಪರಿಷ್ಕರಣೆ ಹೊಂದಿದ್ದು. ಈ ಪರಿಷ್ಕೃತ ಪಠ್ಯಪುಸ್ತಕದಲ್ಲಿ 8ನೇ ಅಧ್ಯಾಯವು ಸಾಮಾಜಿಕ ಸ್ತರವಿನ್ಯಾಸ ಅಧ್ಯಾಯವಾಗಿದೆ. ಇದು ಸಮಾಜಶಾಸ್ತ್ರದಲ್ಲಿ ಭಾಗ 1 ಪಠ್ಯಪುಸ್ತಕದಲ್ಲಿ ಮೊದಲನೇ ಅಧ್ಯಾಯವಾಗಿದೆ. ಈ ಅಧ್ಯಾಯ ಪ್ರಮುಖ ಅಂಶಗಳನ್ನು ಪ್ರಶ್ನೋತ್ತರಗಳ ರೂಪದಲ್ಲಿ ಇಲ್ಲಿ ನೋಡಿಕೊಳ್ಳೋಣ. SSLC ಪರೀಕ್ಷೆ ಮತ್ತು ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳ ಅಧ್ಯಯನಕ್ಕೆ ಉಪಯೋಗವಾಗುವ ರೀತಿಯಲ್ಲಿ ಈ ನೋಟ್ಸ್ ಅನ್ನು ಸಿದ್ದಪಡಿಸಲಾಗಿದೆ.


ಅಧ್ಯಾಯ 8. ಸಾಮಾಜಿಕ ಸ್ತರ ವಿನ್ಯಾಸ
1. ಸಾಮಾಜಿಕ ಸ್ತರ ವಿನ್ಯಾಸ : “ಜನರನ್ನು ವಿಭಿನ್ನ ಸ್ತರಗಳಾಗಿ ವರ್ಗೀಕರಿಸುವ ವ್ಯವಸ್ಥೆ”
2. ಪೂರ್ವಾಗ್ರಹ ಎಂದರೇನು?
ಉ: ಒರ್ವ ವ್ಯಕ್ತಿ ಅಥವಾ ಸಮೂಹದವರ ಬಗ್ಗೆ ಹೊಂದಿರಬಹುದಾದ ಪೂರ್ವ ನಿರ್ಧರಿತ ಮನೋಭಾವ.
3. ಮಾನವ ಕುಲಂ ತಾನೊಂದೆ ವಲಂ ಎಂದವರು ಯಾರು?
ಉ: ಆದಿಕವಿ ಪಂಪ
4. ಅಸ್ಪೃಶ್ಯತೆ ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ ಎಂದವರು ಯಾರು?
ಉ: ಮಹಾತ್ಮಾ ಗಾಂಧಿ
5. ಪೂರ್ವಾಗ್ರಹಕ್ಕೆ ಕಾರಣಗಳೇನು?
ಉ: 1. ಜಾತಿ
2. ಲಿಂಗ
3. ಪ್ರದೇಶ
4. ಬಡವ – ಶ್ರೀಮಂತ

6. ಪೂರ್ವಾಗ್ರಹದಿಂದ ಉಂಟಾಗುವ ಪರಿಣಾಮಗಳಾವುವು?
ಉ: 1. ಅಸಹನೆ
2. ತಿರಸ್ಕಾರ
3. ಅಗೌರವ
4. ಸಾಮಾಜಿಕ ಅಂತರ
5. ಸಾಮಾಜಿಕ ಸಂಘರ್ಷ
6. ದ್ವೇಷ
7. ಅಸ್ಪೃಶ್ಯತೆ ಒಂದು ಸಾಮಾಜಿಕ ಪಿಡುಗು ಹೇಗೆ? ಅಥವಾ ಅಸ್ಪೃಶ್ಯತೆ ಅತ್ಯಂತ ಅಮಾನವೀಯ ವ್ಯವಸ್ಥೆಯಾಗಿದೆ ವಿಮರ್ಶಿಸಿ?
1. ಇದೊಂದು ಅತ್ಯಂತ ತಿರಸ್ಕಾರಾರ್ಹವಾದ ಅಭಿವ್ಯಕ್ತಿ
2. ಹಿಂದೂ ಸಮಾಜದ ಶರೀರವನ್ನು ಕುಷ್ಟರೋಗದಂತೆ ಪೀಡಿಸುತ್ತದೆ.
3. ಅಸ್ಪೃಶ್ಯತೆ ಎಂಬುದು ಮುಟ್ಟಬಾರದ, ಮುಟ್ಟಲಾಗದ ಎಂಬ ಅರ್ಥ ನೀಡುತ್ತದೆ.
4. ಇದು ವರ್ಣ ವ್ಯವಸ್ಥೆಯ ಹುಟ್ಟಿನೊಂದಿಗೆ ಅಸ್ತಿತ್ವಪಡೆದುಕೊಂಡಿದೆ.
5. ಸಮಾಜದಲ್ಲಿ ಅತ್ಯಂತ ಕೆಳಸ್ಥಾನ.
6. ಆಸ್ತಿ ಹಕ್ಕಿನ ನಿರಾಕರಣೆ
7. ಸಾಮಾಜಿಕ ಚಲನೆಯ ನಿಯಂತ್ರಣ
8. ಅಸ್ಪೃಶ್ಯತೆಯ ಸಮಸ್ಯೆಗಳು ಯಾವುವು ?
1. ಕೆಳಮಟ್ಟದ ಸ್ಥಾನ
2. ಶೈಕ್ಷಣಿಕ ಅವಕಾಶಗಳಿಂದ ದೂರ
3. ಆಸ್ತಿಯ ಒಡೆತನದ ಹಕ್ಕಿನ ನಿರಾಕರಣೆ
4. ರಾಜಕೀಯ ಭಾಗವಹಿಸುವಿಕೆ ನಿರಾಕರಣೆ
9. ಅಸ್ಪೃಶ್ಯತಾ ನಿವಾರಣಾ ಕ್ರಮಗಳು ಅಥವಾ ಅಸ್ಪೃಶ್ಯತೆಯ ನಿವಾರಣೆಯ ಸಂವಿಧಾನಾತ್ಮಕ & ಶಾಸನಾತ್ಮಕ ಕ್ರಮಗಳಾವುವು?
1. 17ನೇ ವಿಧಿ : ಅಸ್ಪೃಶ್ಯತೆ ನಿಷೇಧ
2. 1955 : ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ
3. 1976 : ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ
4. ಸಾರ್ವತ್ರಿಕ ಮತದಾನದ ಹಕ್ಕು
5. ಶಿಕ್ಷಣ & ಉದ್ಯೋಗದಲ್ಲಿ ಮೀಸಲಾತಿ
6. ಸಮಾನತೆಯ ಹಕ್ಕು.

****

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon