KSEEB Social Science Chapter 10 Notes | Bhart Bhougolika Stana Hagu Prakrutika Lakshanagalu |

KSEEB Social Science Chapter 10 Notes in Kannada
Bhart Bhougolika Stana Hagu Prakrutika Lakshanagalu

10ನೇ ತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿ ಹೊಸ ಪಠ್ಯ ಆಧಾರಿತವಾಗಿರುವ ಅಧ್ಯಾಯಗಳಲ್ಲಿ 10ನೇ ಅಧ್ಯಾಯ ಭಾರತ: ಭೌಗೋಳಿಕ ಸ್ಥಾನ ಹಾಗೂ ಪ್ರಕೃತಿಕ ಲಕ್ಷಣಗಳು ಅಧ್ಯಾಯವಾಗಿದ್ದು. ಇದು ಭೂಗೋಳ ವಿಜ್ಞಾನದಲ್ಲಿಯ ಮೊದಲನೇಯ ಅಧ್ಯಾಯವಾಗಿದೆ. ಈ ಅಧ್ಯಾಯದ ಪ್ರಮುಖ ಅಂಶಗಳನ್ನು ಇಲ್ಲಿ ನೋಡೋಣ.


ಭೂಗೋಳ ಶಾಸ್ತ್ರ
ಅಧ್ಯಾಯ-10. ಭಾರತ : ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು
1. ಭಾರತ ಒಂದು : ಉಪಖಂಡ
2. ಭಾರತ ಒಂದು : ಪರ್ಯಾಯ ದ್ವೀಪ
3. ಇಂಡಿಯಾ ಎಂದು ಕರೆದವರು : ಗ್ರೀಕರು
4. ಸಿಂಧೂ ನದಿಯಿಂದ ಇಂಡಿಯಾ ಎಂದು ಹೆಸರು ಬಂದಿದೆ.
5. ಭರತ ಚಕ್ರವರ್ತಿಯಿಂದ ಭಾರತ ಎಂಬ ಹೆಸರು ಬಂದಿದೆ.

6. ಒಟ್ಟು ಭೂ ವಿಸ್ತೀರ್ಣ : 32,87,263 ಚ.ಕಿ.ಮೀ.
ಭೂಗಡಿ : 15200 ಕಿ.ಮೀ.
ಜಲಗಡಿ : 6100 ಕಿ.ಮೀ.
ಭಾರತವು ಸಂಪೂರ್ಣವಾಗಿ ಉತ್ತರಾರ್ಧಗೋಳದಲ್ಲಿದೆ.
ಪ್ರಧಾನ ಅಕ್ಷಾಂಶ : 23 ½ ಡಿಗ್ರಿ ಕರ್ಕಾಟಕ ಸಂಕ್ರಾಂತಿ ವೃತ್ತ
ಪ್ರಧಾನ ರೇಖಾಂಶ : 82 ½  ಡಿಗ್ರಿ ಪೂರ್ವ ರೇಖಾಂಶ
ಭಾರತದ ಕಾಲಮಾನ ಜಿಎಂಟಿ ಗಿಂತ 5.30ಗಂಟೆ ಮುಂದಿದೆ.
7. ಭಾರತ 7 ರಾಷ್ಟ್ರಗಳೊಂದಿಗೆ ಭೂಗಡಿ ಹೊಂದಿದೆ.
8. ಭಾರತದ ದಕ್ಷಿಣ ಭಾಗದ ಭೂಶಿರ : ಕನ್ಯಾಕುಮಾರಿ
9. ಭಾರತದ ದಕ್ಷಿಣದ ತುತ್ತತುದಿ : ಇಂದಿರಾಪಾಯಿಂಟ್(ಪಿಗ್ಮೇಲಿಯನ್ ಪಾಯಿಂಟ್) ಗ್ರೇಟ್ ನಿಕೋಬಾರ್ ಹತ್ತಿರ.
10. ಭಾರತವನ್ನು ಶ್ರೀಲಂಕಾದಿಂದ ಬೇರ್ಪಡಿಸುವುದು : ಪಾಕ್ ಜಲಸಂಧಿ & ಮನ್ನಾರ ಖಾರಿ

11. ಭಾರತದ ಉತ್ತರದ ತುತ್ತ ತುದಿ : ಇಂದಿರಾಕೋಲ್
12. ಭಾರತವನ್ನು ಒಂದು ಉಪಖಂಡ ಎಂದು ಏಕೆ ಕರೆಯುತ್ತಾರೆ?
1. ವಿವಿಧ ರೀತಿಯ ಮೇಲ್ಮೈ ಲಕ್ಷಣ.
2. ವಾಯುಗುಣ
3. ಸ್ವಾಭಾವಿಕ ಸಸ್ಯವರ್ಗ
4. ಜನಾಂಗೀಯ ವೈವಿಧ್ಯ.
13. ಹಿಮಾಲಯ ಶ್ರೇಣಿಗಳಲ್ಲಿ ಇತ್ತೀಚೆಗೆ ನಿರ್ಮಿತವಾದುದು : ಶಿವಾಲಿಕ್
14. ಮಧ್ಯ ಹಿಮಾಲಯವನ್ನು ಹಿಮಾಚಲ ಎಂದು ಕರೆಯುವರು.
15. ಮಹಾ ಹಿಮಾಲಯವನ್ನು ಹಿಮಾದ್ರಿ ಎಂದು ಕರೆಯುವರು.

16. ಪಾದ ಬೆಟ್ಟಗಳೆಂದು ಕರೆಯುವರು : ಶಿವಾಲಿಕ್
17. ಪ್ರಪಂಚದ ಅತ್ಯುನ್ನತ ಶಿಖರ : ಮೌಂಟ್ ಎವರೆಸ್ಟ್
18. ಭಾರತದ ಅತ್ಯುನ್ನತ ಶಿಖರ : ಗಾಡ್ವಿನ್ ಆಸ್ಟಿನ್
19. ಉತ್ತರ ಭಾರತದ ಮೈದಾನವನ್ನು ಗಂಗಾ-ಸಟ್ಲೆಜ್ (ಭಾರತದ ಹೃದಯ ಭಾಗ) ಎಂದು ಕರೆಯುವರು.
20. ದಕ್ಷಿಣ ಭಾರತದ ಅತಿ ಎತ್ತರದ ಶಿಖರ  : ಆನೈಮುಡಿ

21. ಡೂನ್ ಎಂದರೇನು? ಇವು ಎಲ್ಲಿ ಕಂಡುಬರುತ್ತವೆ? ಉದಾಹರಣೆ ನೀಡಿ?
1. ಸಮತಟ್ಟಾದ ಕಿರಿದಾದ ಮೈದಾನ
2. ಶಿವಾಲಿಕ್
3. ಡೆಹರಾಡೂನ್, ಚೌಕಾಂಬಾ, ಪಾಟ್ಲಿ, ಕೋಟಾ
22. ಲಗೂನ್ ಎಂದರೇನು? ಉದಾಹರಣೆ ನೀಡಿ.
1. ಸಮುದ್ರದ ಉಪ್ಪು ನೀರಿನಂದಾದ ಸರೋವರ.
2. ತಮಿಳುನಾಡಿನ ಪುಲಿಕಾಟ್ & ಒರಿಸ್ಸಾದ ಚಿಲ್ಕಾ
23. ಮಧ್ಯ ಹಿಮಾಲಯ(ಹಿಮಾಚಲ)ದಲ್ಲಿ ಕಂಡು ಬರುವ ಪ್ರಸಿದ್ಧ ಕಣಿವೆ, ಗಿರಿಧಾಮಗಳು ಮತ್ತು ಪರ್ವತಗಳನ್ನು ಹೆಸರಿಸಿ?
  ಕಣಿವೆ ಗಿರಿಧಾಮ ಪರ್ವತ ಶ್ರೇಣಿ
1. ಕಂಗ್ರಾ ಶಿಮ್ಲಾ ಪೀರ್ ಪಂಜಾಲ್
2. ಕುಲು ನೈನಿತಾಲ್ ನಾಗತಿಬ್ಬ
3. ಮಸ್ಸೂರಿ ಮಹಾಭಾರತ
4. ಡಾರ್ಜಿಲಿಂಗ್

24. ಪರ್ಯಾಯ ಪ್ರಸ್ಥಭೂಮಿಯು ಆರ್ಥಿಕವಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ ಹೇಗೆ?
1. ಅಪಾರ ಖನಿಜ ಸಂಪನ್ಮೂಲ
2. ಜಲ ವಿದ್ಯುತ್ ಶಕ್ತಿ
3. ಮೀನುಗಾರಿಕೆ
4. ಉಪ್ಪುತಾಯಾರಿಕೆ
5. ಕೃಷಿಗೆ ಪೂರಕ
25. ಪಶ್ಚಿಮ ಘಟ್ಟ & ಪೂರ್ವ ಘಟ್ಟಗಳ ನಡುವಿನ ವ್ಯತ್ಯಾಸ ತಿಳಿಸಿ?
ಪಶ್ಚಿಮ ಘಟ್ಟ ಪೂರ್ವ ಘಟ್ಟ
1.ಎತ್ತರವಾಗಿವೆ ಎತ್ತರವಾಗಿಲ್ಲ
2.ನಿರಂತರವಾಗಿವೆ ನಿರಂತರವಾಗಿಲ್ಲ
3.ಸಮುದ್ರಕ್ಕೆ ಹತ್ತಿರ ನದಿ ಕಣಿವೆಗಳಿಂದ ಪ್ರತ್ಯೇಕ

26. ಪಶ್ಚಿಮ ಕರಾವಳಿ & ಪೂರ್ವ ಕರಾವಳಿಗಳ ನಡುವಿನ ವ್ಯತ್ಯಾಸ ತಿಳಿಸಿ?
ಪಶ್ಚಿಮ ಕರಾವಳಿ :
1. ಅರಬ್ಬಿ ಸಮುದ್ರ & ಪ.ಘಟ್ಟಗಳ ನಡುವೆ
2. ಹೆಚ್ಚು ಉದ್ದವಾಗಿವೆ
3. ಲಗೂನ್ಗಳಿಲ್ಲ
ಪೂರ್ವ ಕರಾವಳಿ :
1. ಬಂಗಾಳಕೊಲ್ಲಿ & ಪೂ.ಘಟ್ಟಗಳ ನಡುವೆ ಹೆಚ್ಚು ಅಗಲವಾಗಿವೆ
2. ಲಗೂನ್ ಗಳಿವೆ
27. ಭಾರತದ 4 ಪ್ರಮುಖ ಭೂ ಸ್ವರೂಪಗಳನ್ನು ತಿಳಿಸಿ? ಭಾರತದ ನಾಲ್ಕು ಪ್ರಾಕೃತಿಕ ವಿಭಾಗಗಳಾವುವು?
1. ಉತ್ತರದ ಪರ್ವತಗಳು
2. ಉತ್ತರದ ಮಹಾ ಮೈದಾನ
3. ಪರ್ಯಾಯ ಪ್ರಸ್ಥಭೂಮಿ
4. ಕರಾವಳಿ ಮೈದಾನಗಳು

28. ಹಿಮಾಲಯದಲ್ಲಿರುವ ಕಣಿವೆ ಮಾರ್ಗಗಳ ಪ್ರಾಮುಖ್ಯತೆ ತಿಳಿಸಿ?
1. ಉತ್ತಮ ಸಂಚಾರ ಸೌಲಭ್ಯ
2. ಪ್ರವಾಸಿ ತಾಣ
29. ಉತ್ತರದ ಮಹಾ ಮೈದಾನವನ್ನು ಸಂಚಯನ ಮೈದಾನ ಎನ್ನಲು ಕಾರಣಗಳೇನು?
1. ಮೆಕ್ಕಲು ಮಣ್ಣಿನಿಂದ ನಿರ್ಮಿತವಾಗಿವೆ.
2. ನದಿಗಳು ಹೊತ್ತು ತಂದು ಸಂಚಯಿಸಿದ ಮಣ್ಣಿನಿಂದ ರಚನೆಯಾಗಿದೆ.
3. ಸಂಪೂರ್ಣ ಸಮತಟ್ಟಾಗಿದೆ.
30. ಹಿಮಾಲಯ ಪರ್ವತದಿಂದಾಗುವ ಪ್ರಯೋಜನಗಳಾವುವು?(ಶಿವಾಲಿಕ್ ಬೆಟ್ಟಗಳ ಪ್ರಾಮುಖ್ಯತೆ)
1. ರಕ್ಷಣೆ
2. ನದಿಗಳ ಉಗಮ ಸ್ಥಾನ
3. ಜಲ ವಿದ್ಯುತ್ ಶಕ್ತಿ
4. ಅಪಾರ ಸಂಪನ್ಮೂಲ
5. ಪ್ರವಾಸಿ ತಾಣ
6. ಪ್ರಾಣಿ ಸಂಕುಲಗಳಿಗೆ ಆಶ್ರಯ ತಾಣ
7. ವೈವಿಧ್ಯಮಯ ಸಸ್ಯ ಸಂಕುಲ

31. ಶಿವಾಲಿಕ್ ಶ್ರೇಣಿಯನ್ನು ಕುರಿತು ಬರೆಯಿರಿ?
1. ಇತ್ತೀಚೆಗೆ ನಿರ್ಮಿತವಾದುದು
2. ಅತ್ಯಂತ ದಕ್ಷಿಣದಲ್ಲಿರುವ ಸರಣಿ
3. ಕಡಿಮೆ ಎತ್ತರವನ್ನು ಹೊಂದಿದೆ
4. ಇಲ್ಲಿ ಸಮತಟ್ಟಾದ ಕಿರಿದಾದ ಮೈದಾನಗಳಿವೆ
32. ಮಹಾ ಹಿಮಾಲಯ (ಹಿಮಾದ್ರಿ)ದ ಪ್ರಯೋಜನಗಳಾವುವು?
1. ಅನೇಕ ಗಿರಿಧಾಮಗಳನ್ನು ಹೊಂದಿದೆ.
2. ಅನೇಕ ಕಣಿವೆ ಮಾರ್ಗಗಳನ್ನು ಹೊಂದಿದೆ.
3. ಉತ್ತಮ ಸಂಚಾರ ಸೌಲಭ್ಯಗಳನ್ನು ಹೊಂದಿದೆ.
4. ಪ್ರವಾಸಿಗರಿಗೆ ಆಕರ್ಷಣಿಯ ತಾಣಗಳಾಗಿವೆ.

33. ಉತ್ತರದ ಮೈದಾನದ ಪ್ರಾಮುಖ್ಯತೆ ವಿವರಿಸಿ?
1. ಫಲವತ್ತಾದ ಮೈದಾನ
2. ಸರ್ವಕಾಲಿಕ ನದಿಗಳ ಹರಿವು
3. ಕೃಷಿಗೆ ಯೋಗ್ಯ
4. ರಸ್ತೆ & ರೈಲು ಮಾರ್ಗ
5. ಸಂಪರ್ಕ ಮಾಧ್ಯಮ
6. ಕೈಗಾರಿಕರಣ
7. ನಗರೀಕರಣ
8. ವ್ಯಾಪಾರ
9. ಯಾತ್ರಾಸ್ಥಳ

34. ಕರಾವಳಿ ಮೈದಾನದ ಪ್ರಾಮುಖ್ಯತೆ ವಿವರಿಸಿ?
1. ನೈಸರ್ಗಿಕ ಬಂದರೂಗಳಿಗೆ ಪೂರಕ
2. ವಿದೇಶಿ ವ್ಯಾಪಾರಾಭಿವೃದ್ಧಿ
3. ಮೀನುಗಾರಿಕೆ
4. ಹಡಗು ನಿರ್ಮಾಣ
5. ಕೃಷಿ
6. ಉಪ್ಪು ತಯಾರಿಕೆ
7. ನೌಕಾಯಾನ
8. ಪ್ರವಾಸ
35. ಪೂರ್ವ & ಪಶ್ಚಿಮ ಘಟ್ಟಗಳು ಸಂಧಿಸುವ ಸ್ಥಳ : ಉದಕಮಂಡಲ
******

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon