ಬ್ರಿಟಿಷ ಆಳ್ವಿಕೆಯ ಪರಿಣಾಮಗಳು | ಹತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆ-3 | ಇತಿಹಾಸ ಅಧ್ಯಾಯ-3 ಬ್ರಿಟಿಷ ಆಳ್ವಿಕೆಯ ಪರಿಣಾಮಗಳು |

10ನೇ ತರಗತಿ ಅಭ್ಯಾಸ ಹಾಳೆ 3

ಬ್ರಿಟಿಷ ಆಳ್ವಿಕೆಯ ಪರಿಣಾಮಗಳು


I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
1) ದಿವಾನಿ ಅದಾಲತ್ ಎಂಬ ನಾಗರಿಕ ನ್ಯಾಯಾಲಯವನ್ನು ಸ್ಥಾಪಿಸಿದವರು ____
ಉತ್ತರ : ವಾರನ್ ಹೇಸ್ಟಿಂಗ್ಸ್
2) ಸೂಪರಿಡೆಂಟ್ ಆಫ್ ಪೊಲೀಸ್ ಹುದ್ದೆಯನ್ನು ಸೃಷ್ಟಿಸಿದವನು __
ಉತ್ತರ : ಲಾರ್ಡ್ ಕಾರ್ನ್ವಾಲಿಸ್
3) ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ನೀಡಿದ ಮೊದಲ ಬ್ರಿಟಿಷ್ ಅಧಿಕಾರಿ ____
ಉತ್ತರ : ವಾರ್ನ್ ಹೇಸ್ಟಿಂಗ್ಸ
4) ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಜಾರಿಗೊಳಿಸಿದವರು ___
ಉತ್ತರ : ವಿಲಿಯಂ ಬೆಂಟಿಂಕ್
5) ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಜಾರಿಗೊಳಿಸುವಂತೆ ವರದಿ ನೀಡಿದವನು ___
ಉತ್ತರ : ಮೆಕಾಲೆ
6) ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ರಚಿಸಿ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಲು __ ಆಯೋಗವು ಸಲಹೆ ನೀಡಿತು.
ಉತ್ತರ : ಮೆಕಾಲೆ ಆಯೋಗ
II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
1) ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು?
ಉತ್ತರ : ಲಾರ್ಡ್ ಕಾರ್ನವಾಲಿಸ್
2) ಕಲ್ಕತ್ತಾದಲ್ಲಿ ಪೋರ್ಟ್ ವಿಲಿಯಂ ಕಾಲೇಜನ್ನು ಸ್ಥಾಪಿಸಿದವರು ಯಾರು?
ಉತ್ತರ : ಲಾರ್ಡ್ ಕಾರ್ನ್ವಾಲಿಸ್
3) " ಹಿಂದೂ ಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲನಿವಾಸಿಯು ಭ್ರಷ್ಟ" ಎಂದು ಪ್ರತಿಪಾದಿಸಿದವರು ಯಾರು?
ಉತ್ತರ : ಲಾರ್ಡ್ ಕಾರ್ನವಾಲಿಸ್
4) ದಿವಾನಿ ಅದಾಲತ್ ಮತ್ತು ಫೌಜುದಾರಿ ಅದಾಲತ್ ಗಳನ್ನು ಜಾರಿಗೆ ತಂದವರು ಯಾರು?
ಉತ್ತರ : ವಾರ್ನ್ ಹೇಸ್ಟಿಂಗ್ಸ್
5) ದಿವಾನಿ ಅದಾಲತ್ ಎಂದರೇನು?
ಉತ್ತರ : ನಾಗರಿಕ ನ್ಯಾಯಾಲಯಗಳನ್ನು ದಿವಾನಿ ಅದಾಲತ್ ಎಂದು ಕರೆಯಲಾಗುತ್ತಿತ್ತು.
6) ಫೌಜುದಾರಿ ಅದಾಲತ್  ಎಂದರೇನು?
ಉತ್ತರ : ಅಪರಾಧ ನ್ಯಾಯಾಲಯಗಳನ್ನು ಫೌಜುದಾರಿ ಅದಾಲತ್  ಎಂದು ಕರೆಯಲಾಗುತ್ತಿತ್ತು.
7) ನಾಗರಿಕ ನ್ಯಾಯಾಲಯಗಳು ಯಾರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು.?
ಉತ್ತರ : ಯುರೋಪಿನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು.
8) ಪ್ರಥಮತ: ವ್ಯವಸ್ಥಿತವಾದ ಪೊಲೀಸ್ ವಿಭಾಗವನ್ನು ಅಸ್ತಿತ್ವಕ್ಕೆ ತಂದವರು ಯಾರು?
ಉತ್ತರ : ಲಾರ್ಡ್ ಕಾರ್ನ್ವಾಲಿಸ್
9) ಸುಪ್ರಿಡೆಂಟ್ ಆಫ್ ಪೊಲೀಸ್ ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿದವರು ಯಾರು?
ಉತ್ತರ : ಲಾರ್ಡ್ ಕಾರ್ನ್ವಾಲಿಸ್
10) ಕೊತ್ವಾಲರ ಕಾರ್ಯಗಳೇನು?
ಉತ್ತರ : ಪ್ರತಿ ಜಿಲ್ಲೆಯನ್ನು ಠಾಣೆ ಗಳನ್ನಾಗಿ ವಿಭಾಗಿಸಲಾಗಿತ್ತು, ಠಾಣೆಗಳು ಕೊತ್ವಾಲರ ಅಧೀನದಲ್ಲಿ ಇರುತ್ತಿದ್ದವು.
11) 1902 ಪೊಲೀಸ್ ಕಮಿಷನ್ ಕಾಯ್ದೆಯ ಮಹತ್ವವೇನು?
ಉತ್ತರ : 1902 ಪೊಲೀಸ್ ಕಮಿಷನ್ ಕಾಯ್ದೆಯು ವಿದ್ಯಾರ್ಹತೆ ಪಡೆದವರನ್ನು ಅಧಿಕಾರಿ ಹುದ್ದೆಗಳಿಗೆ ನೇಮಿಸುವ ಅವಕಾಶ ಕಲ್ಪಿಸಿತು.
12) ಬ್ರಿಟಿಷರ ಕಾಲದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ ಯಾವುದು?
ಉತ್ತರ : ಸುಬೇದಾರ ಹುದ್ದೆ
13) ಸೈನಿಕ ವ್ಯವಸ್ಥೆಯು ಮರು ವಿನ್ಯಾಸಗೊಳಿಸಲು ನೇಮಕವಾದ ಸಮಿತಿ ಯಾವುದು?
ಉತ್ತರ : ಪೀಲ್ ಸಮಿತಿ
14) ಕಲ್ಕತ್ತಾ ಮದರಾಸವನ್ನು ಪ್ರಾರಂಭಿಸಿದವರು ಯಾರು?
ಉತ್ತರ : ವಾರನ್ ಹೇಸ್ಟಿಂಗ್ಸ್ (1781)
15) ಬನಾರಸ್ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದವರು ಯಾರು?
ಉತ್ತರ : ಜೊನಾಥನ್ ಡಂಕನ್ (1792)
16) ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿ ದವರು ಯಾರು?
ಉತ್ತರ: ವಾರ್ನ್ ಹೇಸ್ಟಿಂಗ್ಸ್
17) ಗವರ್ನರ್ ಜನರಲ್ ಕಾರ್ಯಾಂಗ ಸಭೆಗೆ ಕಾನೂನು ಸದಸ್ಯನನ್ನಾಗಿ ಯಾರನ್ನು ನೇಮಕ ಮಾಡಲಾಯಿತು?
ಉತ್ತರ : ಮೆಕಾಲೆ
18) ಸಾರ್ವಜನಿಕ ಶಿಕ್ಷಣ ಸಮಿತಿಯ ಅಧ್ಯಕ್ಷರು ಯಾರು?
ಉತ್ತರ : ಮೆಕಾಲೆ
19) ಆಧುನಿಕ ಭಾರತ ಶಿಕ್ಷಣ ವ್ಯವಸ್ಥೆಗೆ ತಳಹದಿ ಯಾವುದು?
ಉತ್ತರ : ಮೆಕಾಲೆ ವರದಿ
20) " ರಕ್ತ ಮಾಂಸಗಳಲ್ಲಿ ಭಾರತೀಯರಾಗಿಯೂ ಅಭಿರುಚಿ, ಅಭಿಪ್ರಾಯ, ನೀತಿ ಮತ್ತು ಬುದ್ಧಿವಂತಿಕೆಯಲ್ಲಿ ಇಂಗ್ಲೀಷರಾಗುವ" ಹೊಸ ಭಾರತೀಯ ವಿದ್ಯಾವಂತ ವರ್ಗದ ಸೃಷ್ಟಿ ಯಾರ ಯೋಜನೆ ಆಗಿತ್ತು.?
ಉತ್ತರ : ಮೆಕಾಲೆ ಯೋಜನೆಯಾಗಿತ್ತು
21) ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸುಗಳಲ್ಲಿ ನೂತನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದವರು ಯಾರು?
ಉತ್ತರ : ಲಾರ್ಡ್ ಡಾಲ್ ಹೌಸಿ
22) ಲಾರ್ಡ ಡಾಲ್ ಹೌಸಿಯು ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸುಗಳಲ್ಲಿ ನೂತನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿದವರು ಯಾರು?
ಉತ್ತರ: ಸರ್ ಚಾರ್ಲ್ಸ್ ವುಡ್ಸನ್ ಆಯೋಗದ ಶಿಫಾರಸ್ಸುಗಳು (1854)
III. ಕೆಳಗಿನ ಪ್ರಶ್ನೆಗಳಿಗೆ ಆರು ವಾಕ್ಯಗಳಲ್ಲಿ ಉತ್ತರಿಸಿರಿ.
1) ಬ್ರಿಟಿಷರು ಪೊಲೀಸ್ ವ್ಯವಸ್ಥೆಯಲ್ಲಿ ತಂದಂತಹ ಸುಧಾರಣೆಗಳು ಯಾವುವು?
ಅಥವಾ
ಬ್ರಿಟಿಷರ ಆಡಳಿತಾವಧಿಯಲ್ಲಿ ಪೊಲೀಸ್ ವ್ಯವಸ್ಥೆಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಯಿತು?
ಉತ್ತರ :
ಲಾರ್ಡ್ ಕಾರ್ನ್ವಾಲಿಸ್ ಅನ್ನು ಪ್ರಥಮತಃ ವ್ಯವಸ್ಥಿತವಾದ ಪೊಲೀಸ್ ವಿಭಾಗವನ್ನು ಅಸ್ತಿತ್ವಕ್ಕೆ ತಂದನು.
ಇವನು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (SP) ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿದನು.
1793 ರಲ್ಲಿ ಪ್ರತಿ ಜಿಲ್ಲೆಯನ್ನು ಠಾಣೆ ಗಳನ್ನಾಗಿ ವಿಭಜಿಸಿ ಪ್ರತಿ ಠಾಣೆಯನ್ನು ಕೊತ್ವಾಲರುಗಳ ಅಧೀನದಲ್ಲೂ  ಹಳ್ಳಿಗಳು ಚೌಕಿದಾರ ಅಧೀನದಲ್ಲೂ ಇರುವಂತೆ ಮಾಡಿದನು.
ಕೊತ್ವಾಲರುಗಳು ಹಳ್ಳಿಗಳ ಮಟ್ಟದಲ್ಲಿ ಕಳ್ಳತನ, ಅಪರಾಧಗಳು, ದರೋಡೆಗಳ ನಿಯಂತ್ರಣದ ಜವಾಬ್ದಾರಿಯನ್ನು ಹೊತ್ತಿದ್ದರು.
1770 ದಶಕದಲ್ಲಿ ಭೀಕರ ಕ್ಷಾಮ ಭೀತಿಯಿಂದ ಕಾನೂನು-ವ್ಯವಸ್ಥೆಯ ಸಮಸ್ಯೆ ವಿಷಮ ಗೊಳ್ಳ ತೊಡಗಿತು.
ಇದರ ಪರಿಣಾಮವಾಗಿ ಇಡೀ ಪೊಲೀಸ್ ವ್ಯವಸ್ಥೆಯನ್ನು ಬ್ರಿಟಿಷ್ ಅಧಿಕಾರಿಗಳ ಅಧೀನಕ್ಕೆ ಒಳಪಡಿಸಲಾಯಿತು.
1781 ರಲ್ಲಿ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಗಳನ್ನು ನೇಮಕ ಮಾಡುವ ಪದ್ಧತಿ ಜಾರಿಗೊಂಡಿತು.
ಪೊಲೀಸ್ ಅಧಿಕಾರಿಗಳು ಮ್ಯಾಜಿಸ್ಟ್ರೇಟ್ ಗಳ ಅಧೀನಕ್ಕೊಳಪಟ್ಟರು.
ಪೊಲೀಸ್ ವ್ಯವಸ್ಥೆಯೂ ನಿರಂತರ ಬದಲಾವಣೆಗೆ ಒಳಗಾಯಿತು.
1861 ರಲ್ಲಿ ಪೋಲಿಸ್ ಕಾಯ್ದೆಯನ್ನು ಜಾರಿಗೊಳಿಸಲಾಯಿತು.
ಕಾಯ್ದೆಯೇ ಕಾನೂನು ಮತ್ತು ಸುವ್ಯವಸ್ಥೆಯ ಆಡಳಿತಕ್ಕೆ ಮುಖ್ಯ ಅಡಿಪಾಯ.
2) ಈಸ್ಟ್ ಇಂಡಿಯಾ ಕಂಪನಿ ರೂಪಿಸಿದ ನ್ಯಾಯಾಂಗ ವ್ಯವಸ್ಥೆಯನ್ನು ವಿಶ್ಲೇಷಿಸಿರಿ.
ಉತ್ತರ : 1772 ರಲ್ಲಿ ಗವರ್ನರ್ ಆಗಿ ಅಧಿಕಾರವಹಿಸಿಕೊಂಡ ವಾರ್ನ್ ಹೇಸ್ಟಿಂಗ್ಸ್ ನು ಜಾರಿಗೆ ತಂದ ಹೊಸ ಯೋಜನೆ ಪ್ರಕಾರ ಪ್ರತಿ ಜಿಲ್ಲೆಯು ಎರಡು ಬಗೆಯ ನ್ಯಾಯಾಲಯಗಳನ್ನು ಹೊಂದಿರಬೇಕಿತ್ತು.
ಅವುಗಳೆಂದರೆ ದಿವಾನಿ ಅದಾಲತ್ ಎಂಬ ನಾಗರಿಕ ನ್ಯಾಯಾಲಯಗಳು ಮತ್ತು ಪೌಜುದಾರಿ ಅದಾಲತ್ ಎಂಬ ಅಪರಾಧ ನ್ಯಾಯಾಲಯಗಳು.
ಇಲ್ಲಿ ನಾಗರಿಕ ನ್ಯಾಯದಾನದ ಸಂದರ್ಭದಲ್ಲಿ ಹಿಂದೂಗಳಿಗೆ ಹಿಂದೂ ಶಾಸ್ತ್ರ ಗ್ರಂಥಗಳ ಪ್ರಕಾರ ಮತ್ತು ಮುಸ್ಲಿಮರಿಗೆ ಶರಿಯತ್ ಕಾನೂನುಗಳ ಪ್ರಕಾರ ನ್ಯಾಯದಾನ ನೀಡಲಾಗುತ್ತಿತ್ತು.
ಅಪರಾಧ ಪ್ರಕರಣಗಳಿಗೆ ಬಂದಾಗ ಎಲ್ಲರಿಗೂ ಇಸ್ಲಾಂ ಕಾನೂನುಗಳನುಸಾರ ವಿಚಾರಣೆ ನಡೆಸಲಾಗುತ್ತಿತ್ತು.
ಕ್ರಮೇಣ ಬ್ರಿಟಿಷ್ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಅಪರಾಧ ಕಾನೂನುಗಳಲ್ಲಿ ಬದಲಾವಣೆ ತರಲಾಯಿತು.
ನಾಗರಿಕ ನ್ಯಾಯಾಲಯಗಳು ಯುರೋಪಿನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು.
ಅಪರಾಧ ನ್ಯಾಯಾಲಯಗಳು ಖಾಜಿಗಳ ಅಧೀನದಲ್ಲಿದ್ದರು ಯುರೋಪಿಯನ್ನರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸ ಬೇಕಾಗಿತ್ತು.
3) ಬ್ರಿಟಿಷ್ ಆಧುನಿಕ ಶಿಕ್ಷಣದಿಂದ ಭಾರತದಲ್ಲಿ ಉಂಟಾದ ಪರಿಣಾಮಗಳ ಪಟ್ಟಿ ಮಾಡಿ.
ಅಥವಾ
ಬ್ರಿಟಿಷ್ ಶಿಕ್ಷಣ ಕ್ರಮದಿಂದ ಸೃಷ್ಟಿಯಾದ ಅಭಿರುಚಿ ಮತ್ತು ಆಲೋಚನೆಗಳು ಭಾರತದಲ್ಲಿ ಹೊಸ ತಲೆಮಾರುಗಳನ್ನು ಸೃಷ್ಟಿಸಿತು. ಸಮರ್ಥಿಸಿ.
ಉತ್ತರ : ಬ್ರಿಟಿಷ್ ಶಿಕ್ಷಣದ ಪರಿಣಾಮಗಳು.
1) ಭಾರತೀಯರು ಆಧುನಿಕತೆ, ಜಾತ್ಯಾತೀತತೆ, ಪ್ರಜಾಪ್ರಭುತ್ವ, ವೈಜ್ಞಾನಿಕ ಆಲೋಚನಾಕ್ರಮದ ಜೊತೆಗೆ ರಾಷ್ಟ್ರೀಯವಾದಿ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು.
2) ಸ್ಥಳೀಯ ಭಾಷೆಗಳು ಮತ್ತು ಸಾಹಿತ್ಯ ರಚನೆಗಳಿಗೆ ಪ್ರೋತ್ಸಾಹ ದೊರೆಯಿತು. ಇದರಿಂದ ವಿದ್ಯಾವಂತ ವರ್ಗದ ಆಲೋಚನಾ ಕ್ರಮದಲ್ಲೂ ಏಕತೆಯ ಸ್ವರೂಪವನ್ನು ಕಾಣುತ್ತೇವೆ.
3) ವೃತ್ತಪತ್ರಿಕೆಗಳು ಹುಟ್ಟಿ ಬೆಳೆಯತೊಡಗಿದವು. ವಿಶೇಷವಾಗಿ 19ನೇ ಶತಮಾನದ ಉತ್ತರಾರ್ಧದಲ್ಲಿ ಪತ್ರಿಕೆಗಳಲ್ಲಿ ಸರ್ಕಾರದ ನೀತಿಗಳನ್ನು ವಿಮರ್ಶಿಸುವ ಮೂಲಕ ಭಾರತೀಯರಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ವಿಮರ್ಶಾತ್ಮಕ ಅಭಿಪ್ರಾಯ ಬೆಳೆಯಲು ಸಾಧ್ಯವಾಯಿತು.
4) ಹೊಸ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು ಹುಟ್ಟಿಕೊಂಡವು.
5) ಜೆಎಸ್ ಮಿಲ್, ರೂಸೋ, ಮಾಂಟೆಸ್ಕೋ ಮುಂತಾದವರ ಚಿಂತನೆಗಳು ಭಾರತೀಯ ವಿದ್ಯಾವಂತರ ಆಲೋಚನಾ ಕ್ರಮದಲ್ಲಿ ನಾವಿನ್ಯತೆಯನ್ನು ತಂದವು.
6) ಜಗತ್ತಿನಾದ್ಯಂತ ನಡೆಯುತ್ತಿದ್ದ ಸ್ವಾತಂತ್ರ್ಯ ಚಳುವಳಿಗಳ ಪ್ರಭಾವ ಭಾರತೀಯರ ಮೇಲೂ ಆಯಿತು.
7) ಭಾರತೀಯರು ತಮ್ಮ ಸಮೃದ್ಧ ಸಾಂಸ್ಕೃತಿಕ ಪರಂಪರೆಗಳನ್ನು ಅರಿತುಕೊಳ್ಳಲು ಸಾಧ್ಯವಾಯಿತು.
ಹೀಗೆ ಭಾರತದಲ್ಲಿ ಜಾರಿಗೊಂಡ ಪಾಶ್ಚಾತ್ಯ ವಿದ್ಯಾಭ್ಯಾಸದ ಕ್ರಮದಿಂದ ಸೃಷ್ಟಿಯಾದ ಅಭಿರುಚಿ ಮತ್ತು ಆಲೋಚನೆಗಳು ಭಾರತದಲ್ಲಿ ಹೊಸ ಹೊಸ ತಲೆಮಾರುಗಳನ್ನು ಸೃಷ್ಟಿಸುತ್ತಾ ಹೋಯಿತು.
4) ಬ್ರಿಟಿಷರು ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡ ಸುಧಾರಣೆಗಳು ಯಾವುವು?
ಉತ್ತರ : ಬ್ರಿಟಿಷರು ಶಿಕ್ಷಣ ಕ್ಷೇತ್ರದಲ್ಲಿ ತಂದಿರುವ ಸುಧಾರಣೆಗಳು ರೀತಿಯಾಗಿವೆ.
ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ ಎಂದರೆ ವಾರನ್ ಹೇಸ್ಟಿಂಗ್ಸ್.
1781 ಅಲ್ಲಿ ಅವನು ಕಲ್ಕತ್ತಾ ಮದರಾಸ ವನ್ನು ಪ್ರಾರಂಭಿಸಿದನು.
ಜೊನಾಥನ್ ಡಂಕನ್ ಎಂಬ ಮತ್ತೊಬ್ಬ ಬ್ರಿಟೀಷ್ ವ್ಯಕ್ತಿಯು 1792 ರಲ್ಲಿ ಬನಾರಸಿ ನಲ್ಲಿ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದನು.
ಆದರೆ ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸುವವರು ಚಾರ್ಲ್ಸ್ ಗ್ರಾಂಟ್.
1828 ರಲ್ಲಿ ವಿಲಿಯಂ ಬೆಂಟಿಂಗ್ ನು ಗವರ್ನರ್  ಜನರಲ್ ಆಗಿ ನೇಮಕಗೊಂಡ ನಂತರ ಬ್ರಿಟಿಷ್ ಶಿಕ್ಷಣದ ವಿಸ್ತರಣೆಗೆ ಮತ್ತಷ್ಟು ವಿಶೇಷ ಪ್ರೋತ್ಸಾಹ ದೊರೆಯಿತು.
ಗವರ್ನರ್ ಜನರಲ್ ಕಾರ್ಯಾಂಗ ಸಭೆಗೆ ಮೆಕಾಲೆಯನ್ನು ಕಾನೂನು ಸದಸ್ಯನನ್ನಾಗಿ ಬೆಂಟಿಂಗ್ ನು ನೇಮಕ ಮಾಡಿದನು.
ಸಾರ್ವಜನಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ನೇಮಕವಾದ ಸಮಿತಿಗೆ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.
1835 ರಲ್ಲಿ ಇಂಗ್ಲಿಷ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೆಕಾಲೆಯು ಕೊಟ್ಟ ವರದಿಯೇ ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾಯಿತು.

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon