2nd PUC Political Science Notes | Chapter 6 | ಭಾರತದ ರಾಜಕೀಯದ ನೂತನ ಪ್ರವೃತ್ತಿಗಳು

ಅಧ್ಯಾಯ-6
ಭಾರತದ ರಾಜಕೀಯದ ನೂತನ ಪ್ರವೃತ್ತಿಗಳು

ಒಂದು ಅಂಕದ ಪ್ರಶ್ನೆಗಳು:

1.ಕೊಯಲಿಷನ್‌ ಮೂಲ ಪದ ಯಾವುದು?

ಉ: ಲ್ಯಾಟೀನ್‌ ಪದವಾದ ಕೊಯಲಿಷಿಯೇ

2.CMP ವಿಸ್ತರಿಸಿ?

ಉ: ಸಾಮಾನ್ಯ ಕನಿಷ್ಠ ಕಾರ್ಯ ಯೋಜನೆ

3.ಸಮಿಶ್ರ ಸರ್ಕಾರದ ಅರ್ಥವೇನು?

ಉ: ಸಾರ್ವತ್ರಿಕ ಚುನಾವಣೆಗಳ ನಂತರ ಯಾವುದೇ ರಾಜಕೀಯ ಪಕ್ಷ ಸ್ಪಷ್ಟ ಬಹುಮತ ಪಡೆಯದಿದ್ದಾಗ ಎರಡು ಅಥವಾ ಹೆಚ್ಚು ರಾಜಕೀಯ ಪಕ್ಷಗಳು ಒಗ್ಗೂಡಿ ಸರ್ಕಾರ ರಚಿಸುವುದೇ ಸಮ್ಮಿಶ್ರ ಸರ್ಕಾರ.

4.ಚುನಾವಣಾ ಪೂರ್ವ ಮೈತ್ರಿ ಎಂದರೇನು?

ಉ: ಚುನಾವಣಾ ಪೂರ್ವದಲ್ಲಿ ನಿರ್ಧಿಷ್ಟ ರಾಜಕೀಯ ಪಕ್ಷಗಳ ಇತರ ಸ್ವತಂತ್ರ ಹಾಗೂ ಸಣ್ಣ ಪುಟ್ಟ ರಾಜಕೀಯ ಪಕ್ಷಗಳ ಜೊತೆ ಮೈತ್ರಿಗೆ ಮುಂದಾಗುತ್ತವೆ. ಅದೇ ಚುನಾವಣಾ ಪೂರ್ವ ಮೈತ್ರಿ.

5.ಚುನಾವಣೋತ್ತರ ಮೈತ್ರಿ ಎಂದರೇನು?

ಉ: ಯಾವ ನಿರ್ಧಿಷ್ಟ ರಾಜಕೀಯ ಪಕ್ಷವು ಚುನಾವಣೆಯಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆಯದಿದ್ದಾಗ ಇತರ ರಾಜಕೀಯ ಪಕ್ಷಗಳು ಒಂದಾಗಿ ಸೇರಿ ಸರ್ಕಾರ ರಚನೆ ಮಾಡುತ್ತವೆ, ಇದನ್ನು ಚುನಾವಣಾ ಮೈತ್ರಿ ಎನ್ನುತ್ತಾರೆ.

6.ಯಾವ ದಿನವನ್ನು ಮತದಾರರ ದಿನವೆಂದು ಆಚರಿಸಲಾಗುತ್ತದೆ?

ಉ: ಜನವರಿ 25

7.ಭಾರತದಲ್ಲಿ ಎಷ್ಟು ಬಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ?

ಉ: 3 ಬಾರಿ

8.ಸಮವರ್ತಿ ಪಟ್ಟಿಯಲ್ಲಿನ ಒಂದು ವಿಷಯವನ್ನು ತಿಳಿಸಿ?

ಉ: ಶಿಕ್ಷಣ, ಧರ್ಮದರ್ಶಿ ಮಂಡಲಿ, ವಿವಾಹ ಮತ್ತು ವಿವಾಹ ವಿಚ್ಛೇದನ.

9.ಸಮ್ಮಿಶ್ರ ರಾಜಕಾರಣ ಎಂದರೇನು?

ಉ: ಸಾರ್ವತ್ರಿಕ ಚುನಾವಣೆಗಳ ನಂತರ ಯಾವುದೇ ರಾಜಕೀಯ ಪಕ್ಷ ಸ್ಪಷ್ಟ ಬಹುಮತ ಪಡೆಯದಿದ್ದಾಗ ಎರಡು ಅಥವಾ ಹೆಚ್ಚು ರಾಜಕೀಯ ಪಕ್ಷಗಳು ಒಗ್ಗೂಡಿ ಸರ್ಕಾರ ರಚಿಸುವುದೇ ಸಮ್ಮಿಶ್ರ ಸರ್ಕಾರ.

10.ಸಮ್ಮಿಶ್ರ ಸರ್ಕಾರಗಳನ್ನು ಹೊಂದಿರುವ ಎರಡು ರಾಷ್ಟ್ರಗಳ ಉದಾಹರಣೆ ಕೊಡಿ?

ಉ: ಭಾರತ, ಜರ್ಮನಿ, ಇಟಲಿ, ಫ್ರಾನ್ಸ್.‌

11.ಸಾಮೂಹಿಕ ನಾಯಕತ್ವ ಎಂದರೇನು?

ಉ: ಸಮಿಶ್ರ ಸರ್ಕಾರದಲ್ಲಿ ದೇಶದ ಆಡಳಿತಕ್ಕೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಪಾಲ್ಗೊಂಡಿರುವ ಎಲ್ಲಾ ರಾಜಕೀಯ ಪಕ್ಷಗಳ ನಾಯಕರೊಂದಿಗೆ ವಿಚಾರ ವಿನಿಮಯ ಮಾಡಿ ನಿರ್ದಾರಗಳನ್ನು ಕೈಗೊಳ್ಳುವ ಪ್ರಕ್ರಿಯೆಯೇ “ಸಾಮೂಹಿಕ ನಾಯಕತ್ವ”.

12.ಸಮಿಶ್ರ ಸರ್ಕಾರ ರಚನೆಯಾಗುವ ಎರಡು ಸಂದರ್ಭಗಳಾವುವು?

ಉ:    1) ವಿದೇಶಿ ದಾಳಿ, ರಾಜಕೀಯ ಅಸ್ತಿರತೆ.

        2) ಪ್ರಾದೇಶಿಕ ಪಕ್ಷ ಪ್ರಾಬಲ್ಯ

        3) ಆರ್ಥಿಕ ದುಸ್ಥಿತಿ.

13.ಸಮಿಶ್ರ ಸರ್ಕಾರವನ್ನು ವ್ಯಾಖ್ಯಾನಿಸಿ?

ಉ: ಎಫ್.ಎ.ಹಗ್‌ ರವರ ಅಭಿಪ್ರಾಯದಲ್ಲಿ “ವಿವಿಧ ರಾಜಕೀಯ ಪಕ್ಷಗಳ ಸದಸ್ಯರು ಒಂದುಗೂಡಿ ಸರ್ಕಾರವನ್ನು ರಚಿಸುವ ಒಂದು ವ್ಯವಸ್ಥೆಯೇ ಸಮಿಶ್ರ ಸರ್ಕಾರ.

14.ಸಾಮಾನ್ಯ ಕನಿಷ್ಟ ಕಾರ್ಯಕ್ರಮ ಎಂದರೇನು?

ಉ: ಮೈತ್ರಿ ಕೂಟದ ಪಕ್ಷಗಳು ತಮ್ಮ ಸಿದ್ಧಾಂತಕ್ಕೆ ಬದ್ಧವಾದ ವಿಚಾರಗಳನ್ನು ಬದಿಗೊತ್ತಿ ಸಮಿಶ್ರ ಸರ್ಕಾರವನ್ನು ನಡೆಸಿಕೊಂಡು ಹೋಗಲು ಕೆಲವು ಸಾಮಾನ್ಯ ಕನಿಷ್ಟ ಯೋಜನೆಯನ್ನು ಹಮ್ಮಿಕೊಂಡಿರುತ್ತದೆ, ಇದೇ ಸಾಮಾನ್ಯ ಕನಿಷ್ಟ ಕಾರ್ಯಕ್ರಮ.

15.ಎನ್.ಡಿ.ಎ. ಯ ಎರಡು ಪಕ್ಷಗಳನ್ನು ಹೆಸರಿಸಿ?

ಉ: ಶಿವಸೇನೆ, ಅಕಾಲಿದಳ, ತೆಲಗು ದೇಶಂ.

16.ಯು.ಪಿ.ಎ. ಯ ಎರಡು ಮಿತ್ರ ಪಕ್ಷಗಳನ್ನು ಹೆಸರಿಸಿ?

ಉ: ರಾಷ್ಟ್ರೀಯ ಜನತಾದಳ, ದ್ರಾವಿಡ ಮುನ್ನೇತ್ರ ಖಳಗಂ, ಬಹುಜನ ಸಮಾಜವಾದಿ ಪಾರ್ಟಿ.

******

ಪಿ.ಯು.ಸಿ. ದ್ವಿತೀಯ ರಾಜ್ಯಶಾಸ್ತ್ರ ನೋಟ್ಸ್


ಅಧ್ಯಾಯ 1 ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ


ಅಧ್ಯಾಯ 2 ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ದತಿ


ಅಧ್ಯಾಯ 3 ಭಾರತದಲ್ಲಿ ಆಡಳಿತ ಯಂತ್ರ


PUC II Year Political Science

ಪಿ.ಯು.ಸಿ. ದ್ವಿತೀಯ ರಾಜ್ಯಶಾಸ್ತ್ರ 

ವಿಡಿಯೋ ಪಾಠಗಳು


ಅಧ್ಯಾಯ 1 ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ


ಅಧ್ಯಾಯ 2 ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ದತಿ


ಅಧ್ಯಾಯ 3 ಭಾರತದಲ್ಲಿ ಆಡಳಿತ ಯಂತ್ರ


ಅಧ್ಯಾಯ 4 ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು


ಅಧ್ಯಾಯ 5 ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು


ಅಧ್ಯಾಯ 6 ಭಾರತ ರಾಜಕೀಯದ ನೂತನ ಪ್ರವೃತ್ತಿಗಳು


ಅಧ್ಯಾಯ 7 ಸಮಕಾಲೀನ ರಾಜಕೀಯ ವಿದ್ಯಮಾನಗಳು


ಅಧ್ಯಾಯ 9 ಭಾರತದ ವಿದೇಶಾಂಗ ನೀತಿ


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon