2nd PUC Sociology Notes | ಅಧ್ಯಾಯ-7 ಸಾಮಾಜಿಕ ಚಳುವಳಿಗಳು

ಅಧ್ಯಾಯ-7
ಸಾಮಾಜಿಕ ಚಳುವಳಿಗಳು

ಒಂದು ಅಂಕದ ಪ್ರಶ್ನೆಗಳು:-

1.1873ರಲ್ಲಿ ಸ್ಥಾಪನೆಯಾದ ಸಾಮಾಜಿಕ ಸಂಘಟನೆ ಯಾವುದು?

: ಸತ್ಯ ಶೋದಕ ಸಮಾಜ

2.”ಭೀಮಸೇನೆಯನ್ನು ಆರಂಭಿಸಿದವರು ಯಾರು?

:ಬಿ.ಶ್ಯಾಮಸುಂದರ್.

3.” ಸತ್ಯ ಶೋದಕ ಸಮಾಜವನ್ನು ಸ್ಥಾಪಿಸಿದವರು ಯಾರು?

: ಜ್ಯೋತಿರಾವ್ ಪುಲೆ

4.SNDP ಅನ್ನು ವಿಸ್ತರಿಸಿ?

: ಶ್ರೀ ನಾರಾಯಣಗುರು  ಧರ್ಮ ಪರಿಪಾಲನಾ ಯೋಗಂ.

5.KRRS ಅನ್ನು ವಿಸ್ತರಿಸಿ?

: ಕರ್ನಾಟಕ ರಾಜ್ಯ ರೈತ ಸಂಘ

6.”ಭಾರತದಲ್ಲಿ ಸಾಮಾಜಿಕ ಚಳುವಳಿಎಂಬ ಗ್ರಂಥ ಬರೆದವರು ಯಾರು?

: M.S.A.ರಾವ್

7.ಸ್ವಗೌರವ ಚಳುವಳಿಯನ್ನು ಆರಂಭಿಸಿದವರು ಯಾರು?

: E.V.ರಾಮಸ್ವಾಮಿ ನಾಯ್ಕರ್

8.DSS ಯಾವ ವರ್ಷ ಸ್ಥಾಪನೆಯಾಯಿತು?

: 1977

9.ಸಾಮಾಜಿಕ ಚಳುವಳಿಯ ಒಂದು ಮೂಲಾಂಶವನ್ನು ತಿಳಿಸಿ?

: ಸಿದ್ಧಾಂತ

10.DSS ಅನ್ನು ವಿಸ್ತರಿಸಿ?

: ದಲಿತ ಸಂಘರ್ಷ ಸಮಿತಿ?

11.ಕಾಗೋಡು ಸತ್ಯಾಗ್ರಹದ ಘೋಷಣೆ ಏನು?

: ಉಳುವವನೆ ಭೂಮಿಯ ಒಡೆಯ

12.ಜಾತಿ ವ್ಯವಸ್ಥೆ ವಿರುದ್ಧ ಹೋರಾಡಲು ಜ್ಯೋತಿ ರಾವ್ ಪುಲೆ ಸ್ಥಾಪಿಸಿದ ಸಂಘಟನೆ ಯಾವುದು?

: ಸತ್ಯ ಶೋದಕ ಸಮಾಜ

13.ಕರ್ನಾಟಕ ರಾಜ್ಯ ರೈತ ಸಂಘ ಹೋರಾಟದ ಪ್ರಮುಖವಾದ ಒಂದು ವಿಷಯ ತಿಳಿಸಿ?

:      1)ಪರಿಸರ ವಿಷಯ

            2)ನೀರಾ ಚಳುವಳಿ

14.ಭಾರತದ ರೈತ ಚಳುವಳಿಗೆ ಕಾರಣವಾದ ಒಂದು ಪ್ರಮುಖವಾದ ಅಂಶವನ್ನು ತಿಳಿಸಿ?

: ಅಧಿಕ ಕಂದಾಯ ವಸೂಲಿ.

15.ಬಸವೇಶ್ವರರು ಸ್ಥಾಪಿಸಿದ ಸಂಘಟನೆ ಯಾವುದು?

: ಅನುಭವ ಮಂಟಪ

2 ಅಂಕದ ಪ್ರಶ್ನೋತ್ತರಗಳು:

1.ಮಲಪ್ರಭಾ ರೈತ ಹೋರಾಟಕ್ಕೆ 2 ಕಾರಣ ತಿಳಿಸಿ?

:      )ಸ್ಥಿರ ಬೆಲೆಯ ಪ್ರಶ್ನೆ

            )ಹೆಚ್ಚಿನ ತೆರಿಗೆ

2.ದಲಿತ ಚಳುವಳಿಯ ಸ್ವಾತಂತ್ರ್ಯ ಪೂರ್ವದ 3 ಹಂತಗಳನ್ನು ಹೆಸರಿಸಿ?

:      )ಬಸವೇಶ್ವರ ಮತ್ತು ದಲಿತ ಚಳುವಳಿ

            )ಹಳೆ ಮೈಸೂರು ಭಾಗದ ದಲಿತ ಚಳುವಳಿ

            )ಮುಂಬೈ ಕರ್ನಾಟಕದಲ್ಲಿ ದಲಿತ ಚಳುವಳಿ

3.ಸ್ವಾತಂತ್ರ್ಯ ಪೂರ್ವದ 2 ಮಹಿಳಾ ಸಂಘಟನೆಗಳನ್ನು ತಿಳಿಸಿ?

:      )ಬ್ರಾಹ್ಮಣ ಮಹಿಳಾ ನಿಲಯಮದ್ರಾಸ್

            )ಮಹಿಳಾ ಸೇವಾ ಸಮಾಜಮೈಸೂರು

4.ಸಾಮಾಜಿಕ ಚಳುವಳಿಯನ್ನು  ವ್ಯಾಖ್ಯಾನಿಸಿ?

: ಎಂ.ಎಸ್..ರಾವ್ ಪ್ರಕಾರಸಿದ್ಧಾಂತ ಮತ್ತು ಸಾಮೂಹಿಕ ಕ್ರೋಡೀಕರಣದ ಮೂಲಕ ಸಮಾಜದಲ್ಲಿ ಬಾಗಶಃ ಅಥವಾ ಪೂರ್ಣ ಪರಿವರ್ತನೆ ತರುವ ಪ್ರಯತ್ನಎಂದಿದ್ದಾರೆ.

5.ಕ್ಯಾಥಲೀನ್ ಗೌವ್ ಪ್ರಕಾರ ರೈತ ಚಳುವಳಿಯ ಯಾವುದಾದರು 2 ವಿಧಗಳನ್ನು ತಿಳಿಸಿ?

:      )ಸಮಾಜ ನಿಷ್ಠ ದರೋಡೆಗಳು

            )ಧಾರ್ಮಿಕ ಚಳುವಳಿ

6.ಸಾಮಾಜಿಕ ಸುಧಾರಣಾ ಚಳುವಳಿಯ 2 ಪ್ರಕಾರಗಳನ್ನು ತಿಳಿಸಿ?

:      )ಮಹಿಳಾ ಚಳುವಳಿ

            )ಹಿಂದುಳಿದ ವರ್ಗಗಳ ಚಳುವಳಿ

7.ಸಾಮಾಜಿಕ ಚಳುವಳಿಯ 2 ಪ್ರಮುಖ ಮೂಲಾಂಶಗಳನ್ನು ಹೆಸರಿಸಿ?

:      )ಸಿದ್ಧಾಂತ

            )ನಾಯಕತ್ವ

8.ಕರ್ನಾಟಕದಲ್ಲಿ ನಡೆದ ಎರಡು ರೈತ ಚಳುವಳಿಗಳನ್ನು ಹೆಸರಿಸಿ?

:      )ಕಾಗೋಡು ಸತ್ಯಾಗ್ರಹ

            )ಮಲಪ್ರಭಾ ಹೋರಾಟ

9.ಭಾರತದ ಯಾವುದಾದರು 2 ಮಹಿಳಾ ಸಂಘಟನೆಗಳನ್ನು ಹೆಸರಿಸಿ?

:      )ಬ್ರಾಹ್ಮಣ ಮಹಿಳಾ ನಿಲಯ

            )ಮಹಿಳಾ ಸೇವಾ ಸಮಾಜ

            )ಭಗಿನಿ ಸಮಾಜ

10.ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟದ ಯಾವುದಾದರು 2 ವಿಷಯಗಳನ್ನು ಹೆಸರಿಸಿ?

:      )ಗಣಿಗಾರಿಕೆ ವಿಷಯ

            )ಪರಿಸರ ವಿಷಯ

            )ಸಾಲ ವಸೂಲಿ ವಿಷಯ

5 ಅಂಕದ ಪ್ರಶ್ನೋತ್ತರಗಳು:

1.ಸಾಮಾಜಿಕ ಚಳುವಳಿಯ ಮೂಲಾಂಶಗಳನ್ನು ವಿವರಿಸಿ?

: ಎಂ.ಎಸ್..ರಾವ್ ರವರ ತಮ್ಮಭಾರತದಲ್ಲಿ ಸಾಮಾಜಿಕ ಚಳುವಳಿಎಂಬ ಕೃತಿಯಲ್ಲಿ ಮೂರು ಪ್ರಮುಖ ಮೂಲಾಂಶಗಳನ್ನು ವಿವರಿಸಿದ್ದಾರೆ.

            )ಸಿದ್ಧಾಂತ

            )ಸಾಮೂಹಿಕ ಕ್ರೋಢೀಕರಣ

            )ನಾಯಕತ್ವ ಮತ್ತು ಸಂಘಟನೆ

2.ಕ್ಯಾಥಲೀನ್ ಗೌವ್ ಪ್ರಕಾರ ರೈತರ ಹೋರಾಟಕ್ಕೆ ಕಾರಣವಾದ ಅಂಶಗಳನ್ನು ವಿವರಿಸಿ?

: ರೈತ ಹೋರಾಟಕ್ಕೆ ಕಾರಣವಾದ ಅಂಶಗಳನ್ನು ಕ್ಯಾಥಲೀನ್ ಗೌವ್ ರವರು ಕೆಳಕಂಡಂತೆ ಪಟ್ಟಿ ಮಾಡಿದ್ದಾರೆ.

            )ಅಧಿಕ ಕಂದಾಯ ಸಂಗ್ರಹಣೆ

            )ವ್ಯವಸಾಯ ಭೂಮಿಯನ್ನು ಖಾಸಗಿ ಭೂಮಿಯನ್ನಾಗಿಸಿದ್ದು

            )ಬುಡಕಟ್ಟುಗಳ ಭೂಮಿಯ ಅತಿಕ್ರಮಣ

            )ಗೈರುಹಾಜರಿ ಭೂ ಮಾಲಿಕತ್ವ ಬದಲಾವಣೆ

)ಭಾರತದ ಸಂಪತ್ತು ಬ್ರಿಟನ್ಗೆ ವರ್ಗಾಯಿಸಿದ್ದು

3.ಹಿಂದುಳಿದ ವರ್ಗಗಳ ಚಳುವಳಿಯನ್ನು ಸಂಕ್ಷಿಪ್ತವಾಗಿ ವಿವರಿಸಿ?

: ಹಿಂದುಳಿದ ವರ್ಗಗಳ ಚಳುವಳಿಯು ಜಾತಿಯ ಅಸಮಾನತೆ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಬೇದಭಾವ ವಿರುದ್ಧ ಬ್ರಾಹ್ಮಣೇತರ ಜಾತಿಗಳು ನಡೆಸಿದ ಚಳುವಳಿಯಾಗಿದೆ. ಜ್ಯೋತಿರಾವ್ ಪುಲೆ ರವರು ಮೇಲ್ಜಾತಿಯ ದೌರ್ಜನ್ಯದ ವಿರುದ್ಧ ಮೊದಲು ಧ್ವನಿ ಎತ್ತಿದರು 1873ರಲ್ಲಿ ಸತ್ಯ ಶೋಧಕ ಸಮಾಜವನ್ನು ಸ್ಥಾಪಿಸುವ ಮೂಲಕ ಸಮಾಜ ಸುಧಾರಣಾ ಚಳುವಳಿ ಆರಂಭಿಸಿದರು.

            .ವಿ.ರಾಮಸ್ವಾಮಿ ನಾಯ್ಕರ್ ರವರು ಸ್ವಗೌರವ ಚಳುವಳಿ ಮೂಲಕ ಜಾತಿ ಆಧಾರದ ಮೇಲೆ ವ್ಯಕ್ತಿಯ ಸ್ಥಾನ ನಿರ್ಧರಿಸುವುದನ್ನು ವಿರೋಧಿಸಿದರು.

            ಮೈಸೂರು ಸಂಸ್ಥಾನದಲ್ಲಿಯೂ ಒಕ್ಕಲಿಗರು, ಲಿಂಗಾಯಿತರು, ಮುಸಲ್ಮಾನರು, ಬ್ರಾಹ್ಮಣರಿಗಿಂತ ಅವಕಾಶ ವಂಚಿತರಾಗಿದ್ದನ್ನು ಮನಗಂಡು ಸಂಘಟಿತರಾದರು.

            ಕೇರಳದಲ್ಲಿ (ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ) ಸಂಘಟನೆಯು ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದರು.

4.ಕ್ಯಾಥಲೀನ್ ಗೌವ್ ಪ್ರಕಾರ ರೈತ ಚಳುವಳಿಯ ಪ್ರಕಾರಗಳನ್ನು ವಿವರಿಸಿ?

: ಬ್ರಿಟಿಷರ ಕಾಲದ ರೈತ ಹೋರಾಟಗಳನ್ನು ಕ್ಯಾಥಲೀನ್ ಗೌವ್ ರವರು ಸ್ಥೂಲವಾಗಿ 5 ರೀತಿ ವರ್ಗೀಕರಿಸಿದ್ದಾರೆ.

            )ಪುನರ್ ಸ್ಥಾಪನಾ ದಂಗೆಗಳು

            )ಧಾರ್ಮಿಕ ಚಳುವಳಿಗಳು

            )ಸಮಾಜನಿಷ್ಠ ದರೋಡೆಗಳು

            )ಭಯೋತ್ಪಾದಕ ಪ್ರತೀಕಾರಗಳು

            )ಜನತಾ ವಿಪ್ಲವಗಳು

10 ಅಂಕದ ಪ್ರಶ್ನೋತ್ತರಗಳು:

1.ರೈತ ಸಂಘದ ಪ್ರಮುಖ ಬೇಡಿಕೆಗಳನ್ನು ಪಟ್ಟಿಮಾಡಿ?

: ಕರ್ನಾಟಕ ರಾಜ್ಯ ರೈತ ಸಂಘವು ಪ್ರಮುಖ ಬೇಡಿಕೆಗಳನ್ನು ಪಟ್ಟಿಮಾಡಿ 1980ರಲ್ಲಿ ಮುಖ್ಯಮಂತ್ರಿ ಶ್ರೀ ಗುಂಡುರಾವ್ ರವರಿಗೆ ಸಲ್ಲಿಸಿತು.

            1)ಬಂಧನಕ್ಕೊಳಗಾಗಿರುವ ರೈತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು.

            2)ರೈತರ ಸಾಲಮನ್ನಾ ಮಾಡಬೇಕು ಮತ್ತು ಸರ್ಕಾರವೇ ರೈತರಿಗೆ ಸಾಲ ವಿತರಿಸಬೇಕು.

            3)ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು.

            4)ಮುಟ್ಟುಗೋಲು ಹಾಕಿಕೊಂಡಿರುವ ರೈತರ ಆಸ್ತಿಯನ್ನು ಹಿಂತಿರುಗಿಸಬೇಕು.

            5)ಅವೈಜ್ಞಾನಿಕ ಭೂಕಂದಾಯವನ್ನು ರದ್ದುಪಡಿಸಿ ಉತ್ಪಾದನೆ ಆಧಾರಿತ ತೆರಿಗೆ ವಿಧಿಸಬೇಕು.

            6)ವಿದ್ಯುತ್ ದರವನ್ನು ಕಡಿತಗೊಳಿಸಬೇಕು.

            7)ಕೃಷಿ ಮೇಲಿನ ಆದಾಯ ತೆರಿಗೆಯನ್ನು ರದ್ದು ಮಾಡಬೇಕು.

2.ಭಾರತದ ಮಹಿಳಾ ಚಳುವಳಿಯನ್ನು ವಿವರಿಸಿ?

: ಭಾರತದ ಮಹಿಳಾ ಚಳುವಳಿಯನ್ನು 2 ಹಂತಗಳಲ್ಲಿ ವಿವರಿಸಲಾಗಿದೆ.

            1)ಸ್ವಾತಂತ್ರ್ಯ ಪೂರ್ವ ಮಹಿಳಾ ಚಳುವಳಿ.

            2) ಸ್ವಾತಂತ್ರ್ಯ ನಂತರ ಮಹಿಳಾ ಚಳುವಳಿ.

            ಸ್ವಾತಂತ್ರ್ಯ ಪೂರ್ವದ ಮಹಿಳಾ ಚಳುವಳಿಯು ಸಮಾಜ ಸುಧಾರಣೆಯ ಒಂದು ಭಾಗವಾಗಿದೆ.   ಸಾಮಾಜಿಕ ನಿಂದನೆ, ವ್ಯಂಗ್ಯ, ಶೋಷಣೆ, ವೇಶ್ಯಾವಾಟಿಕೆ ಮುಂತಾದವುಗಳ ವಿರುದ್ಧ ಸಮಾಜ ಸುಧಾರಕರು ಹೋರಾಟ ಮಾಡಿದರು.

            ಸ್ತ್ರೀಯರು ಪರದಾ ಪದ್ದತಿ, ಕೌಟುಂಬಿಕ ಹೊಣೆಗಾರಿಕೆ, ಪುರುಷ ಪ್ರಾಧಾನ್ಯತೆಗೆ ಸಿಲುಕಿದ್ದರು. ಬ್ರಹ್ಮ ಸಮಾಜ, ಆರ್ಯ ಸಮಾಜಗಳ ಪ್ರಯತ್ನದಿಂದ ಸ್ತ್ರೀಯರಿಗೆ ಶಿಕ್ಷಣ ದೊರೆಯಿತು. 1900 ರಲ್ಲಿ ಭಾರತದ ಸ್ತ್ರೀ ಸಂಘಟನೆಗಳು ಸ್ಥಾಪನೆಯಾದವು.

            1)ಮಹಿಳಾ ಸೇವಾ ಸಮಾಜಮೈಸೂರು

            2)ಬ್ರಾಹ್ಮಣ ಮಹಿಳಾ ನಿಲಯಮದ್ರಾಸ್

            3)ಭಗಿನಿ ಸಮಾಜ

            ಕಾಲಕ್ರಮೇಣ ಸ್ತ್ರೀಯರಿಗೆ ಸಮಾನ ಹಕ್ಕುಗಳು ವಿಚ್ಛೇದನ, ಆಸ್ತಿಯ ಹಕ್ಕುಗಳು, ವಿಧವಾ ವಿವಾಹ ಮುಂತಾದ ಶಾಸನಗಳು ಜಾರಿಯಾದವು.

            ಸ್ವಾತಂತ್ರ್ಯ ನಂತರ ಸ್ತ್ರೀಯರ ಬೇಡಿಕೆಗಳಿಗಾಗಿ ಹಲವು ಸಂಘ ಸಂಸ್ಥೆಗಳು ಹುಟ್ಟಿಕೊಂಡವು ಮಹಿಳೆಯರು ಬೆಲೆ ಏರಿಕೆ ಭೂಸುಧಾರಣೆ ಹೋರಾಟಗಳಲ್ಲಿ ಭಾಗವಹಿಸಿದರು.  ಅನೇಕ ಸ್ತ್ರೀಯರು ಶಿಕ್ಷಣ ಸರಕಾರಿ ಸೇವೆ ಮತ್ತು ವೃತ್ತಿಪರ ಉದ್ಯೋಗಗಳಲ್ಲಿ ತೊಡಗಿಕೊಂಡರು. ಚಿಪ್ಕೋ ಚಳುವಳಿ, ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟ ಮಾಡಿದರು.

*******

2nd P U C Sociology Notes

ದ್ವಿತೀಯ ಪಿ.ಯು.ಸಿ. ಸಮಾಜ ಶಾಸ್ತ್ರ ನೋಟ್ಸ


ಅಧ್ಯಾಯ-1 : ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

ನೋಟ್ಸಗಾಗಿ ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-2 : ಸಾಮಾಜಿಕ ಅಸಮಾನತೆ ಮತ್ತು ಹೊರಗುಳಿಯುವಿಕೆ

ನೋಟ್ಸಗಾಗಿ ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-3 : ಒಳಗೊಳ್ಳುವಿಕೆಯ ತಂತ್ರಗಳು

ನೋಟ್ಸಗಾಗಿ ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-4 : ಭಾರತದ ಕುಟುಂಬ ವ್ಯವಸ್ಥೆ

ನೋಟ್ಸಗಾಗಿ ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-5 : ಭಾರತೀಯ ಗ್ರಾಮಗಳ ಬದಲಾವಣೆ – ಅಭಿವೃದ್ಧಿ ಮತ್ತು ನಗರೀಕರಣ

ನೋಟ್ಸಗಾಗಿ ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-7 : ಸಾಮಾಜಿಕ ಚಳುವಳಿಗಳು

ನೋಟ್ಸಗಾಗಿ ಇಲ್ಲಿ ಕ್ಲಿಕ್ ಮಾಡಿ



ದ್ವಿತೀಯ ಪಿ.ಯು.ಸಿ. ಸಮಾಜ ಶಾಸ್ತ್ರ  ವಿಡಿಯೋ ಪಾಠಗಳು: 


ಅಧ್ಯಾಯ-1 : ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-2 : ಸಾಮಾಜಿಕ ಅಸಮಾನತೆ ಮತ್ತು ಹೊರಗುಳಿಯುವಿಕೆ

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-3 : ಒಳಗೊಳ್ಳುವಿಕೆಯ ತಂತ್ರಗಳು

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-4 : ಭಾರತದ ಕುಟುಂಬ ವ್ಯವಸ್ಥೆ

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-5 : ಭಾರತೀಯ ಗ್ರಾಮಗಳ ಬದಲಾವಣೆ – ಅಭಿವೃದ್ಧಿ ಮತ್ತು ನಗರೀಕರಣ

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-7 : ಸಾಮಾಜಿಕ ಚಳುವಳಿಗಳು

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


ಸಮಾಜ ಶಾಸ್ತ್ರ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು :

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


ದ್ವಿತೀಯ ಪಿ.ಯು.ಸಿ. ಸಮಾಜಶಾಸ್ತ್ರದ ಎಲ್ಲಾ ಅಧ್ಯಾಯಗಳ ನೋಟ್ಸ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon