How To Write A SSLC Passed Trance-far Certificate Application Request | 10ನೇ ತರಗತಿ ಉರ್ತೀರ್ಣ ವರ್ಗಾವಣೆ ಪ್ರಮಾಣ ಪತ್ರ ಕೋರಿ ಅರ್ಜಿ ಬರೆಯುವ ವಿಧಾನ |

How To Write A SSLC Passed Trance-far Certificate Application Request
10ನೇ ತರಗತಿ ಉರ್ತೀರ್ಣ ವರ್ಗಾವಣೆ ಪ್ರಮಾಣ ಪತ್ರ ಕೋರಿ ಅರ್ಜಿ ಬರೆಯುವ ವಿಧಾನ

10ನೇ ತರಗತಿಯಲ್ಲಿ ಅಧ್ಯಯನ ಮಾಡಿ ಉರ್ತೀರ್ಣತೆ ಹೊಂದಿದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ತಮ್ಮ ವರ್ಗಾವಣೆ ಪ್ರಮಾಣ ಪತ್ರವನ್ನು ಪಡೆಯಬೇಕಾಗುತ್ತದೆ. ಈ ವರ್ಗಾವಣೆ ಪ್ರಮಾಣ ಪತ್ರವನ್ನು ಪಡೆಯಲು ಮುಖ್ಯ ಗುರುಗಳು / ಉಪಪ್ರಾಂಶುಪಾಲು / ಪ್ರಾಂಶುಪಾಲರಿಗೆ ಒಂದು ಅರ್ಜಿಯನ್ನು ಬರೆದು ಅದರಲ್ಲಿ ಎಲ್ಲಾ ಮಾಹಿತಿಗಳನ್ನು ಒದಗಿಸಬೇಕಾಗುತ್ತದೆ. ಈ ಮನವಿ ಪತ್ರ ವಿದ್ಯಾರ್ಥಿಗಳು ಹೇಗೆ ಬರೆಯಬೇಕು ಎಂದು ಇಲ್ಲಿ ತಿಳಿಯೋಣ.


ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದು ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಿದ ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಎಸ್.ಎಸ್.ಎಲ್.ಸಿ. ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ.) ಮತ್ತು ಅಂಕ ಪಟ್ಟಿ (ಮಾರ್ಕ್ಸ್ ಕಾರ್ಡ್) ಅವಶ್ಯಕತೆ ಇರುತ್ತದೆ. ಈ ವರ್ಗಾವಣೆ ಪ್ರಮಾಣ ಪತ್ರ ಬಡೆಯಲು ಮುಖ್ಯಗುರುಗಳಿಗೆ ವರ್ಗಾವಣೆ ಪ್ರಮಾಣ ಪತ್ರಕ್ಕಾಗಿ ಅರ್ಜಿ ಬರೆಯಬೇಕಾಗುತ್ತದೆ. ಈ ಅರ್ಜಿ ಬರೆಯುದನ್ನು ನೋಡೋಣ.

ಅರ್ಜಿ ಬರೆದಾದ ನಂತರ ಅರ್ಜಿಯು ಈ ರೀತಿಯಾಗಿ ಕಾಣಿಸುತ್ತದೆ.




ವರ್ಗಾವಣೆ ಪ್ರಮಾಣ ಪತ್ರ & ಅಂಕಪಟ್ಟಿ ಕೋರಿ ಅರ್ಜಿ

 

ಮುಖ್ಯಗುರುಗಳು

ಸರಕಾರಿ ಪ್ರೌಢ ಶಾಲೆ ……………..

ತಾಲ್ಲೂಕು……………… ಜಿಲ್ಲೆ …………..

 

ಮಾನ್ಯರೇ,

                ವಿಷಯ: SSLC ಉತ್ತೀರ್ಣ ಹೊಂದಿರುವ ವರ್ಗಾವಣೆ ಪ್ರಮಾಣ ಪತ್ರ

  ಮತ್ತು ತಾತ್ಕಾಲಿಕ ಅಂಕಪಟ್ಟಿ ಕೋರಿ ಅರ್ಜಿ

*****

        ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಾನು …………… ತಂದೆ………………… ತಾಯಿ …………….. ಇದ್ದು ನನ್ನ SATS ಸಂಖ್ಯೆ: …………… ಇದ್ದು ನಾನು 2022-23 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಅಧ್ಯಯನ ಮಾಡಿ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಮಾರ್ಚ್/ಏಪ್ರೀಲ್ 2023 ರಲ್ಲಿ ಬರೆದು ಉತ್ತೀರ್ಣನಾಗಿರುತ್ತೇನೆ./ ಉತ್ತೀರ್ಣಳಾಗಿರುತ್ತೇನೆ. ಮುಂದಿನ ಹೆಚ್ಚಿನ ಅಧ್ಯಯನಕ್ಕಾಗಿ ನನ್ನ ವರ್ಗಾವಣೆ ಪ್ರಮಾಣ ಪತ್ರದ ಅವಶ್ಯಕತೆ ಇರುವುದರಿಂದ 10ನೇ ತರಗತಿ ಉತ್ತೀರ್ಣತೆ ಹೊಂದಿರುವ ವರ್ಗಾವಣೆ ಪ್ರಮಾಣ ಪತ್ರ ಮತ್ತು ಅಂಕಪಟ್ಟಿ (ತಾತ್ಕಾಲಿಕ) ಯನ್ನು ಕೊಡಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ.

ವಂದನೆಗಳೊಂದಿಗೆ,

 

ದಿನಾಂಕ : 12.05.2023                                       ಇಂತಿ ತಮ್ಮ ವಿದ್ಯಾರ್ಥಿ/ನಿ

ಸ್ಥಳ :                                                                  (  ಸಹಿ  )

         (ವಿದ್ಯಾರ್ಥಿ/ನಿಯ ಹೆಸರು)

ವೈಯಕ್ತಿಕ ವಿವರಗಳು:

SATS ಸಂಖ್ಯೆ:

SSLC Reg No

Mobile ಸಂಖ್ಯೆ:


ಈ ಮೇಲಿನ ರೀತಿಯಾಗಿ  ಅರ್ಜಿಯಲ್ಲಿ ಬರೆದು ಮುಖ್ಯಗುರುಗಳಿಗೆ ಸಲ್ಲಿಸಿದ ನಂತರ ಅವರು ಮೂರು ದಿನಗಳ ಒಳಗಾಗಿ ಎಲ್ಲವನ್ನು ಪರೀಕ್ಷಿಸಿ ನಂತರ ಆನ್ ಲೈನ್ ಮೂಲಕವಾಗಿರುವ ಈ ರೀತಿಯಾದ ವರ್ಗಾವಣೆ ಪ್ರಮಾಣ ಪತ್ರವನ್ನು ಒದಗಿಸಿ ಕೊಡುತ್ತಾರೆ.
ವರ್ಗಾವಣೆ ಪ್ರಮಾಣ ಪತ್ರದ ಮಾದರಿ ಹೀಗಿದೆ. ಅದರಲ್ಲಿ ಎಲ್ಲಾ ಮಾಹಿತಿಗಳು ಮುದ್ರಿತವಾಗಿರುತ್ತವೆ. ಇದು ಕೇವಲ ಮಾದರಿಯಾಗಿದೆ.


ಈ ರೀತಿಯಾಗಿ ಬಂದಿರುವ ವರ್ಗಾವಣೆ ಪ್ರಮಾಣ ಪತ್ರವನ್ನು ಪಡೆದಾದ ನಿಂತರ ನಿಮ್ಮ ಎಲ್ಲಾ ಮಾಹಿತಿಗಳು ಸರಿಯಾಗಿ ಮುದ್ರಿತವಾಗಿವೆಯೇ ಎಂದು ಒಂದು ಬಾರಿ ಪರೀಕ್ಷಿಸಿ ಮುಂದೆ ನೀವು ಓದಲು ಹೋಗುತ್ತಿರುವ ಕಾಲೇಜಿಗೆ ಕೊಡಬಹುದು. ಒಂದು ವೇಳೆ ಏನಾದರೂ ಬದಲಾವಣೆಗಳು ಇದಲ್ಲಿ ಮುಖ್ಯಗುರುಗಳ ಗಮನಕ್ಕೆ ತಂದು ಪರೀಕ್ಷಿಸಿಕೊಳ್ಳಬಹುದು.











10ನೇ ತರಗತಿ ಪ್ರಥಮ ಭಾಷೆ ಕನ್ನಡ ಹೊಸ ಪಠ್ಯಪುಸ್ತಕಗಳು

10ನೇ ತರಗತಿ ಹೊಸ ಪಠ್ಯಪುಸ್ತಕದ ಎಲ್ಲಾ ಅಧ್ಯಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ

ಇವುಗಳ ಮುಂದೆ ಕ್ಲಿಕ್ ಮಾಡಿದಾಗ ಪಡೆದುಕೊಳ್ಳಬಹುದು. ಒಂದು ವೇಳೆ ಡೌನಲೋಡ್ ಆಗದೇ ಇದ್ದಲ್ಲಿ Allow ಎಂದು ಸೆಲಕ್ಟ ಮಾಡಿ ಆಗ ಪಡೆದುಕೊಳ್ಳಬಹುದು. 

ಇತರ ಎಲ್ಲಾ ಪಠ್ಯಪುಸ್ತಕಗಳನ್ನು ಪಡೆದುಕೊಳ್ಳಲು ಇಲ್ಲಿ ಭೇಟಿ ನೀಡಿ.

Click Here

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon